Thursday, August 27, 2009

ಬಹುರಾಷ್ಟ್ರೀಯ ಎಂಡೊಸಲ್ಫಾನ್ ತಯಾರಕರನ್ನು ಸೋಲಿಸಿದ ಹಳೆಯ ಕಾಚ ಚಳುವಳಿ

ಇಂದಿನ ಉದಯವಾಣಿಯಲ್ಲಿ ಡಾ| ಸಿ ನಿತ್ಯಾನಂದ ಪೈ ಅವರು ಎಂಡೊಸಲ್ಫಾನ್ ನಿಷೇದಕ್ಕೆ ಬಾರತದ ಪ್ರತಿರೋಧವೇಕೆ ? ಎನ್ನುವ ವಿವರವಾದ ಬರಹ ಬರೆದಿದ್ದಾರೆ.

ಈ ಕೀಟನಾಶಕದ    ನಿಷೇದಕ್ಕೆ ಅಂತರಾಷ್ಟ್ರೀಯ ಪ್ರಯತ್ನಗಳಾಗುತ್ತಿದ್ದು ಬಾರತದಲ್ಲಿ ಖಾಸಗಿ ವಲಯ ಮಾತ್ರವಲ್ಲ ಸರಕಾರಿ ಕಾರ್ಖಾನೆಯಲ್ಲೂ ತಯಾರಾಗುವ ಎಂಡೊಸಲ್ಫಾನ್ ಅಳಿವಿಗೆ ನಮ್ಮ ಸರಕಾರ ಪ್ರಬಲ ವಿರೋಧ ವ್ಯಕ್ತ ಪಡಿಸುತ್ತದೆ. ಇಲ್ಲಿ ಪ್ರಜೆಗಳ ಆರೋಗ್ಯದ ಬದಲು ಸರಕಾರದ ನಿಲುವಿನಲ್ಲಿ ವ್ಯಾಪಾರಿ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತದೆ. ಬಾರತ  ಸರಕಾರದ  ನಿಲುವಿನ    ಬಗೆಗೆ ನ್ಯುಜೀಲಾಂಡಿನ ಚಳುವಳಿಗಾರ್ತಿ Dr. Meriel Watts ಸ್ಪಷ್ಟವಾಗಿ   ಹೇಳುತ್ತಾರೆ. This is a clear conflict of interest, a manufacturer is using its power to veto international agreements on a chemical."

ಡಾ ನಿತ್ಯಾನಂದ ಪೈ ಅವರು ಕೊನೆಯಲ್ಲಿ ಈ ಲೇಖನ ಅಚ್ಚಿಗೆ ಹೋಗುವ ಮುನ್ನ ತಿಳಿದು ಬಂದಂತೆ ವಿಶ್ವದಲ್ಲಿಯೇ ಅತ್ಯದಿಕ ಪ್ರಮಾಣದ ಎಂಡೊಸಲ್ಫಾನ್  ತಯಾರಿಸುತ್ತಿರುವ ಬಾಯರ್ ಸಂಸ್ಥೆ ೨೦೧೦ ರಿಂದ ಇದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಬರೆದಿದ್ದಾರೆ. ತೀರ್ಮಾನದ ಹಿಂದಿನ ಗುಟ್ಟು ಕುತೂಹಲದಾಯಕವಾಗಿರುವ ಕಾರಣ ನಾನು ಇದನ್ನು ಹಂಚಿಕೊಳ್ಳಲು ತೀರ್ಮಾನಿಸಿದೆ.

ಹತ್ತಿ ಬೆಳೆಯುವಾಗ ವ್ಯಾಪಕವಾಗಿ ಎಂಡೊಸಲ್ಫಾನ್ ಉಪಯೋಗಿಸುತ್ತಾರೆ. ಇದನ್ನು ವಿರೋಧಿಸುವ ಸಂಸ್ಥೆಗಳು ನವೀನ ಪ್ರತಿಭಟನೆ ರೂಪಿಸಿದವು. ಅದರ ಅಂಗವಾಗಿ ೧೬ ದೇಶಗಳಲ್ಲಿ ಹಳೆಯ ಉಪಯೋಗಿಸಿದ ಮಾಮೂಲಿ ಕಾಚ ಹಿಂತಿರುಗಿಸಿದ ಜನರಿಗೆ ಸಾವಯುವ ಹತ್ತಿಯಿಂದ ತಯಾರಿಸಿದ ಕಾಚವನ್ನು ಉಚಿತವಾಗಿ ಹಂಚಲಾಯಿತು. ಹೀಗೆ ರಾಶಿ ಬಿದ್ದ ಹಳೆಯ ಕಾಚಗಳನ್ನು ಜರ್ಮನಿಯಲ್ಲಿರುವ ಪ್ರಪಂಚದ ಅತಿ ದೊಡ್ಡ ಎಂಡೊಸಲ್ಫಾನ್ ತಯಾರಕ ಬಾಯರ್ ಕಂಪೇನಿಗೆ ರವಾನಿಸಲಾಯಿತು. ಇಲ್ಲಿ ಅಣಕವೆಂದರೆ ಭಾರತದಲ್ಲಿ   ಬೆಳೆದ   ಸಾವಯುವ ಹತ್ತಿ ಈ ಆಂದೋಲನದಲ್ಲಿ ಗಮನಾರ್ಹ ಪಾತ್ರ ವಹಿಸಿದೆ. ಬದಲಿ ಕೊಟ್ಟ ಕಾಚಗಳು  ತಯಾರಾದುದು ಬಾರತದಲ್ಲಿ ಬೆಳೆದ ಸಾವಯುವ ಹತ್ತಿಯಿಂದ. ಆದರೆ ಬಾರತ ಸರಕಾರ ಮಾತ್ರ ಈ ಆಂದೋಲನದ ವಿರುದ್ದ ಕೆಲಸ ಮಾಡುತ್ತಿದೆ.

ಹಳೆಯ ಕಾಚಗಳ ಪರ್ವತ ಕಂಡು ಬೆದರಿದ ಬಯಾರ್ ಸಂಸ್ಥೆ ಬರುವ ವರ್ಷ ಈ ಕೀಟನಾಶಕ  ತಯಾರಿಕೆ  ಸಂಪೂರ್ಣ ನಿಲ್ಲಿಸಿಲು ಒಪ್ಪಿಕೊಂಡಿತು.

ನಮ್ಮಲ್ಲಿ  ಇಂತಹ    ಎಂಡೊಸಲ್ಫಾನ್  ನಿಷೇದಕ್ಕೆ ಆಂದೋಲನ  ನಡೆಯುವುದಾದರೆ   ಹಳೆಯ ಚಡ್ಡಿ ಕಾಚ ಕಳುಹಿಸಲು ಯೋಗ್ಯ ವಿಳಾಸ,


ಬಾರತ  ಸರಕಾರದ  ಸರ್ವ ತೀರ್ಮಾನಗಳೂ ಕೈಗೊಳ್ಳುವಂತಹ
ದೆಹಲಿ ಸಿಂಹಾಸನದ ಹಿಂದಿನ ಶಕ್ತಿ -
೧೦ ಜನಪತ್ .

Monday, August 24, 2009

ಹಿಂದು ಕವಿಯಲ್ಲಿ ರಾಷ್ಟ್ರ ಗೀತೆ ಬರೆಸಿದ ಪಾಕಿಸ್ಥಾನದ ಜಿನ್ನಾ

 ಪಾಕಿಸ್ಥಾನ ಜಾತ್ಯಾತೀತ ರಾಷ್ಟ್ರವಾಗಬೇಕೆಂದು ಬಯಸಿದ ಜಿನ್ನಾ ರಾಷ್ಟ್ರ ಗೀತೆ ಬರೆಸಲು ಉರ್ದು ಅರಿತ ಹಿಂದು ಕವಿಯ ಹುಡುಕಾಟದಲ್ಲಿದ್ದರು. ಆಗ ಅವರಿಗೆ ದೊರಕಿದ ವ್ಯಕ್ತಿ ಜಗನಾಥ ಅಜಾದ್. ಜಿನ್ನಾ ಅವರಿಂದಲೇ ಅದೇಶ ದೊರೆತ ಅಜಾದ್ ಅವರಿಗೆ ಇಲ್ಲವೆನ್ನಲಾಗಲಿಲ್ಲ. ೧೯೪೭ರ ಆಗಸ್ತ್ ೯ ರಂದು ಸಂದೇಶ ಸಿಕ್ಕ ನಂತರ ಗೀತೆ ರಚಿಸಲು ದೊರೆತ ಸಮಯವಕಾಶ ಕೇವಲ ಐದು ದಿನಗಳು ಮಾತ್ರ.

ಜಗನಾಥ ಅಜಾದ್ ರಚಿಸಿದ ಗೀತೆ ಜಿನ್ನಾ ಅವರಿಗೆ ಒಪ್ಪಿಗೆಯಾಯಿತು. Aey sarzameen-i-pak Zarrey terey hein aaj sitaron sey tabnak Roshan heh kehkashan sey kahin aaj teri khak. ( Oh land of Pakistan, each particle of yours is being illuminated by stars. Even your dust has been brightened like a rainbow ) ಎನ್ನುವ ವಾಕ್ಯಗಳಿರುವ ರಾಷ್ಟ್ರ ಗೀತೆ ಅಂದಿನ ರಾಜದಾನಿ ಕರಾಚಿಯಲ್ಲಿದ್ದ ಪಾಕಿಸ್ಥಾನ ರೇಡಿಯೊದಲ್ಲಿ ಪ್ರಥಮ ಬಾರಿಗೆ ಬಿತ್ತರಿಸಲಾಯಿತು. ಒಂದೂವರೆ ವರ್ಷ ಇದು ಪಾಕಿಸ್ಥಾನದ ರಾಷ್ಟ್ರಗೀತೆಯಾಗಿತ್ತು. ಜಿನ್ನಾರ ಮರಣದ ನಂತರ ಎಲ್ಲವೂ ಇಸ್ಲಾಂಮಯವಾಗಿ ಹಫೀಜ್ ಜಲಂದರಿ ಬರೆದ ಗೀತೆ ರಾಷ್ಟ್ರ ಗೀತೆಯಾಯಿತು.

ಮೇಜರ್ ಜಸ್ವಂತ್ ಸಿಂಗ್ ಅವರನ್ನು ಕಮಲ ಪಕ್ಷ ಹೊರದಬ್ಬುವಾಗ (ಅಲ್ಲಲ್ಲ, ದೂರವಾಣಿಯಲ್ಲಿ ತಲಾಖ್-ಸಿದ್ದು) ಜಿನ್ನಾ ಅವರ ಜಾತ್ಯಾತಿತವಾದದ ಚಿಂತನೆ ಪ್ರಸ್ತುತವೆನಿಸುತ್ತದೆ. ಜಾತ್ಯಾತಿತವಾದ ಸಂದೇಶವಿರುವ ಅವರ ಪ್ರಥಮ ಬಾಷಣ ಸಾಕಷ್ಟು ಪ್ರಚಾರ ಕಂಡ ಕಾರಣ ಇಲ್ಲಿ ಉಲ್ಲೇಖಿಸುವುದಿಲ್ಲ. ಹಿಂದುಗಳಿಗೆ ಒಳಿತಾಗುವುದು ಜಿನ್ನಾ ಅವರ ಚಿಂತನೆ ಖಂಡಿಸುವುದರಲ್ಲಿ ಅಲ್ಲ.

Saturday, August 22, 2009

ಕೋಟ್ಯಾದೀಶರೇ ಎಚ್ಚರದಿಂದ ವಾಹನ ಓಡಿಸಿ ಎನ್ನುವ ಕಾನೂನು ಬರಲಿ

ಇಂದು ಸಂಜೀವ್ ನಂದ ಎಂಬ ಒಳ್ಳೆಯ ಹುಡುಗ ಜೈಲಿನಿಂದ ಬಿಡುಗಡೆಯಾದ.     ಹತ್ತು  ವರ್ಷ  ಹಿಂದೆ   ಮೂವರು ಪೋಲಿಸರೂ ಸೇರಿದಂತೆ ಆರು ಜನರ ಕಾರಿನ ಅಡಿಗೆ ಹಾಕಿ ಕೊಂದ ಸಂಜೀವ ನಂದನಿಗೆ ಕೆಳಗಿನ ನ್ಯಾಯಾಲಯ ವಿಧಿಸಿದ್ದ ಐದು ವರ್ಷ ಸಜೆಯಲ್ಲಿ ಎರಡು ವರ್ಷ ಜೈಲಿನಲ್ಲಿದ್ದರೆ ಸಾಕು ಎಂದು ದೆಹಲಿ ಉಚ್ಚ ನ್ಯಾಯಾಲಯ ಇತ್ತೀಚೆಗೆ ತೀರ್ಪು ಕೊಟ್ಟಿದೆ. ಅವನ ಒಳ್ಳೆಯ ನಡತೆ ನೋಡಿ ಅ ಎರಡು ವರ್ಷ ಕಾರಾಗೃಹ ಶಿಕ್ಷೆಯಲ್ಲೂ   ಮೂರು ತಿಂಗಳು ಮಾಫಿ.

ನಮ್ಮಲ್ಲಿ ರಸ್ತೆಯಲ್ಲಿ ವೇಗದ ಮಿತಿ ತಪ್ಪಿ ಗಾಡಿ ಓಡಿಸಿದರೆ ದಾರಿ ಹೋಕರನ್ನು ಯಮಪುರಿಗೆ ಅಟ್ಟಿದರೆ ಚಿಲ್ಲರೆ ದಂಡ ಕಟ್ಟಿ ಬಚಾವಾಗಬಹುದು. ಕೋಟಿಗಟ್ಟಲೆ ರೂಪಾಯಿಯ ಕಾರನ್ನು ವಾಯುವೇಗದಲ್ಲಿ ಓಡಿಸಿ ರಸ್ತೆಯಲ್ಲಿರುವವರನ್ನು ಕೊಲ್ಲುವ ಸಂಜೀವ ನಂದ ಸಲ್ಮನ್ ಖಾನ್ ಅವರಂತವರಿಗೆ ಆದಾಯ ಅಂತಸ್ತಿಗೆ ತಕ್ಕಂತೆ ದಂಡವಾಗ ಬೇಕು.  ಫಿನ್ ಲಾಂಡ್ ದೇಶದಲ್ಲಿ ಮಿತಿ ತಪ್ಪಿ ಓಡಿಸಿದರೆ ಅವರವರ ಸಾಮರ್ಥ್ಯ ಅನುಗುಣವಾಗಿ ದಂಡಕಟ್ಟಲೇ ಬೇಕು.

ಇತ್ತೀಚೆಗೆ ಫಿನ್ ಲಾಂಡಿನ ಹಣವಂತ ಜರಿ ಬಾರ್ ಎಂಬಾತ ಕಾರು ವೇಗವಾಗಿ ಓಡಿಸಿದ್ದಕ್ಕೆ ಕಟ್ಟಿದ ದಂಡ ಕೇವಲ ಒಂದು ಲಕ್ಷ ನಲುವತ್ತೊಂದು ಸಾವಿರ ಡಾಲರ್ ಅಂದರೆ ಸುಮಾರು ಅರುವತ್ತೈದು ಲಕ್ಷ ರೂಪಾಯಿ ದಂಡ. ಅವನು ಮಾಡಿದ ತಪ್ಪು ವೇಗದ ಮಿತಿ ಅರುವತ್ತು ಕಿಮಿ ಇದ್ದಲ್ಲಿ ಎಂಬತ್ತ ಎರಡು ಕಿಮಿ ಯಲ್ಲಿ ಕಾರು ಓಡಿಸಿದ್ದು.

ವೇಗ ಇಪ್ಪತ್ತು ಕಿಮಿ ಹೆಚ್ಚಾದರೆ ನಿಗದಿತ ಫೈನ್. ಅವನ ವೇಗ ಎಂಬತ್ತು ಕಿಮಿ ಒಳಗಿದ್ದರೆ ಆರು ಸಾವಿರ ರೂಪಾಯಿ ಕಟ್ಟಿದರೆ ಸಾಕಿತ್ತು. ಆದರೆ ಮುತ್ತೂ ಹೆಚ್ಚಿನ ಎರಡು ಕಿಮಿ ಅಂದರೆ ಆತನ ಹನ್ನೆರಡು ದಿನದ ಆದಾಯವನ್ನು ಡಂಡ ಕಟ್ಟಬೇಕಾಯಿತು. ಮುಂಚಿನ ವರ್ಷ ತನ್ನ ಕಂಪೇನಿಯ ಒಂದಂಶ ಮಾರಿದ ಕಾರಣ ಅವನ ದಿನದ ಆದಾಯ ಐದೂವರೆ ಲಕ್ಷವಾಗಿತ್ತು. ಅಲ್ಲಿನ ತೇರಿಗೆ ಲೆಕ್ಕಾಚಾರ ಪಾರದರ್ಶಕ ಮತ್ತು ಸಾರ್ವಜನಿಕರಿಗೆ ಲಭ್ಯ. ನಮ್ಮಲ್ಲಿರುವಂತೆ ಅಧಿಕಾರಿಗಳ ತೆರೆಮರೆಯ ಆಟ ಅಲ್ಲಿಲ್ಲವಂತೆ.

ಎಂಟು ವರ್ಷ ಹಿಂದೆ ನೋಕಿಯ ದೂರವಾಣಿ ಕಂಪೇನಿಯ ಯಜಮಾನ ಪೆಕ್ಕ ಆಲ ಪೀಟಿಲ ವೇಗದ ಮಿತಿ ಮೀರಿ ಸಿಕ್ಕಿಬಿದ್ದು ಸುಮಾರು ಹದಿನೈದು ಲಕ್ಷ ದಂಡ ಕಟ್ಟಬೇಕಾಗಿ ಬಂದಿತ್ತು. ೧೯೯೯ರ ಅವನ ಆದಾಯ ನಾಲ್ಕು ಮಿಲಿಯ ಡಾಲರ್ ಎನ್ನುವ ನೆಲೆಯಲ್ಲಿ ದಂಡ ಲೆಕ್ಕ ಹಾಕಲಾಗಿತ್ತು. ನಮ್ಮಲ್ಲೂ ಇಂತಹ ಕಾನೂನು ಬಂದರೆ ಚೆನ್ನಾಗಿರುತ್ತದೆ.

Thursday, August 20, 2009

ಹರಿಯುವ ನೀರಿನ ಉಪಯೋಗದಲ್ಲಿ ಅಮೇರಿಕದವರಿಂದ ನಾವೇ ಮೇಲು.

ಸುಲಬವಾಗಿ ಲಬ್ಯವಿರುವ ಸಂಪನ್ಮೂಲಗಳನ್ನು ಉದಾಹರಣೆಗೆ ಜಲವಿದ್ಯುತ್ ಅವಕಾಶಗಳನ್ನು ಆರ್ಥಿಕವಾಗಿ ಬಲೀಷ್ಟವಾಗಿರುವ ರಾಷ್ಟ್ರಗಳು ಸಮರ್ಪಕವಾಗಿ ಬಳಸಿಕೊಂಡಿವೆ ಎನ್ನುವುದು ತಪ್ಪು ಕಲ್ಪನೆ. ಅಮೇರಿಕದಲ್ಲಿರುವ ಎಂಬತ್ತು ಸಾವಿರ ಅಣೆಕಟ್ಟುಗಳಲ್ಲಿ ಕೇವಲ ಎರಡು ಸಾವಿರದ ನಾಲ್ಕು ನೂರರಲ್ಲಿ ವಿದ್ಯುತ್ ತಯಾರಾಗುತ್ತದೆ. ಅಂದರೆ ಶೇಕಡ 97 ರಲ್ಲಿ ನೀರು ಅದರಷ್ಟಕೆ ಹರಿದು ಹೋಗುತ್ತದೆ. ಅದರರ್ಥ ಎಲ್ಲದರಲ್ಲೂ ವಿದ್ಯುತ್ ತಯಾರಿ ಸಾದ್ಯವೆಂದಲ್ಲ. ಹಲವರಲ್ಲಿ ಶಕ್ಯತೆ ಇದ್ದು ಇತ್ತೀಚೆಗೆ ಗುರುತಿಸಿದ್ದಾರೆ.  

ಹೆಚ್ಚಿನ ಅಣೆಕಟ್ಟುಗಳು ನೆರೆ ನಿಯಂತ್ರಣ, ನೀರಾವರಿ ಮತ್ತಿತರ ಉಪಯೋಗಗಳಿಗಾಗಿ ನಿರ್ಮಿಸಲ್ಪಟ್ಟಿದೆ. ಹಲವರ ಆಕಾರ ವಿದ್ಯುತ್ ತಯಾರಿಗೆ ಅನುಗುಣವಾಗಿಲ್ಲ. ಅಮೇರಿಕನರ ಜೀವನ ಶೈಲಿಯೇ ಅಗ್ಗದ ಇಂದನ ಅವಲಂಬಿಸಿದೆ. ಆಗ ಜಲವಿದ್ಯುತ್ ಬಗೆಗೆ ಒತ್ತಡವೂ ಇರಲಿಲ್ಲ. ಈಗ ಪರಿಸರವಾದಿಗಳ ವಿರೋಧ ಕಾರಣ ಕಲ್ಲಿದ್ದಲಿಗೆ ಪರ್ಯಾಯ ಹುಡುಕುತ್ತಿದ್ದಾರೆ. ಹಲವು ಅಣೆಕಟ್ಟುಗಳ ವಿದ್ಯುತ್ ಉತ್ಪಾದನೆಗೋಸ್ಕರ ಪರಿವರ್ತನೆಗೊಳಿಸುತ್ತಿದ್ದಾರೆ.

ಅಮೇರಿಕದಲ್ಲಿ ನಲ್ವತ್ತರ ದಶಕದಲ್ಲಿ ಶೇಕಡ ೪೨ರಷ್ಟು ಜಲ ವಿದ್ಯುತ್ ಪೊರೈಕೆಯಾದರೆ ಅನಂತರ ಹೊಸ ಜಲವಿದ್ಯುತ್ ಕೇಂದ್ರಗಳು ಸ್ಥಾಪಿಸಲ್ಪಡಲಿಲ್ಲ. ಅನಂತರ ಅಣು ವಿದ್ಯುತ್ ಮತ್ತು ಕಲ್ಲಿದ್ದಲು ದಹಿಸಲು ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಅದುದರಿಂದ ಇಂದು ಪ್ರಪಂಚದಲ್ಲಿ ಸುಮಾರು ಶೇಕಡಾ ೨೦ರಷ್ಟು ವಿದ್ಯುತ್ ಜಲ ವಿದ್ಯುತ್ ಕೇಂದ್ರಗಳಲ್ಲಿ ತಯಾರಾದರೆ ಅಮೇರಿಕದಲ್ಲಿ ಅದು ಶೇಕಡ ಹತ್ತಕ್ಕೆ ಇಳಿಯುತ್ತದೆ.

ಅವಕಾಶ ಮತ್ತು ಸಾಧನೆಯನ್ನು ಅವಲೋಕಿಸುವಾಗ ನಾವು ಈ ವಿಚಾರದಲ್ಲಿ ಮುಂದಿದ್ದೇವೆ. ನದಿ ಮತ್ತು ಕಾಲುವೆಗಳಲ್ಲಿ ಹರಿಯುವ ನೀರಿನ ತಡೆಗಟ್ಟಿ ವಿದ್ಯು ತ್ ಉತ್ಪಾದನೆ ನಡೆಸಲಾಗುತ್ತಿದೆ. ಈ ವರ್ಷ ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಎರಡು ಕಿರು ವಿದ್ಯುತ್ ಘಟಕಗಳು ಕಾರ್ಯವೆಸಗಲು ಪ್ರಾರಂಬಿಸಿವೆ.

ಪ್ರಿಯ ಜಿ ಯನ್ ಅಶೋಕವರ್ದನರು ಬರೆದು ಕಳಿಸಿದ್ದು ಪ್ರತಿಕ್ರಿಯೆ ಎನಿಸುವ ಬದಲು ತಿದ್ದಿಪಡಿಯಾದುದರಿಂದ ಇಲ್ಲಿಯೇ ಸೇರಿಸುತ್ತಿದ್ದೇನೆ.

ನೀನು ಹೇಳುವ ಅರ್ಥದಲ್ಲಿ ‘ಸದುಪಯೋಗಗೊಳಿಸುವಲ್ಲಿ’ ನಾವು ಮೇಲು. ಆದರೆ ಇಂದಿನ ಉದಾಹರಣೆಯ ಮಟ್ಟಕ್ಕೆ ಇಳಿಯುವಾಗ ವಾಸ್ತವ ಹಾಗಿಲ್ಲ ಎಂದು ವಿಷಾದ ಮೂಡುತ್ತದೆ. ಇಂದಿನ ಮಿನಿ ಜಲವಿದ್ಯುತ್ ಯೋಜನೆಗಳೆಲ್ಲಾ ಸಬ್ಸಿಡಿ, ಟರ್ನ್ ಆಫ್ ಗಳನ್ನು ಮಾತ್ರ ಲಕ್ಷಿಸಿ ಮುಖ್ಯವಾಗಿ ಜನೋಪಯೋಗಿ ಮತ್ತೆ ಪರಿಸರವೆಲ್ಲವನ್ನೂ ಕೆಡಿಸುವ ಯೋಜನೆಗಳಾಗಿಯೇ ಬರುತ್ತಿವೆ ಎನ್ನುವುದನ್ನು ಗಮನಿಸಲೇಬೇಕು. ಜಲಾನಯನ ಪ್ರದೇಶಗಳನ್ನೆಲ್ಲಾ ಕಲಕುತ್ತಿರುವ ಈ ಯೋಜನೆಗಳಿಂದ ನಾವೆಷ್ಟು ‘ಮೇಲಾಗುತ್ತೇವೋ’ ಎಂದು ಹೆದರಿಕೆಯಾಗುತ್ತದೆ.


ಬಿದ್ದರೂ ಮೂಗು ಮೇಲೆ ಎಂಬಂತೆ ಅಮೇರಿಕದವರು ನಮ್ಮಿಂದಲೂ ಬುರ್ನಾಸ್ ಎಂದು ಬರೆಯಲುಹೊರಟೆ. ನಮ್ಮಲ್ಲಿ ಈ ಕಿರು ಜಲಾಶಯಗಳು ಮುಳಗಿಸುವುದರ ಅಲೋಚಿಸುವಾಗ ಹೆದರಿಕೆಯಾಗುತ್ತದೆ. ಹತಾಷೆ ಬಾವನೆ ಉಂಟಾಗುತ್ತದೆ. ಅಸಂಬದ್ದ ಸಬ್ಸಿಡಿ ನೀತಿಯಿಂದಾಗಿಯೇ ಐಶ್ವರ್ಯ ಎಂಬ ನಕ್ಷತ್ರ ಗಿರಿಗಿಟಿ ಒಡತಿಯಾದದ್ದು.  

Monday, August 17, 2009

ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೊರಟಿದ್ದ ಶಾರುಖ್

ಶಾರುಖ್ ಖಾನ್ ಹೆಸರಿನ ಹಿಂದಿ ಚಿತ್ರನಟ ಇನ್ನೆಂದೂ ಅಮೇರಿಕಕ್ಕೆ ಕಾಲು ಇಡಬಾರದು ಅನ್ನಿಸುತ್ತೆ ಎಂದು ನಿನ್ನೆ ಹೇಳಿದ. ಈಗ ಅವನ ಹಿಂದಿನ ವರ್ತನೆ ನೆನಪಿಸಿಕೊಳ್ಳುವ ಕಾಲ. ಬರೇ ಮೂರು ವರ್ಷ ಹಿಂದೆ If Pepsi is banned in India, I would go to the US and drink it ಎಂದು ಈ ನಟ ಟಿವಿ ಎದುರುಗಡೆ ಹೇಳಿ ಕೊಂಡಿದ್ದ.

ಮೂರು ವರ್ಷ ಹಿಂದೆ ನೀರನ್ನು ಸರಿಯಾಗಿ ಶುದ್ದಿಕರಿಸದೆ ತಂಪು ಪಾನಿಯ ತಯಾರಿಸಲಾಗುತ್ತಿದೆ ಎಂದು ಸಾಕ್ಷಿ ಸಮೇತ ಪರಿಸರವಾದಿ ಪತ್ರಕರ್ತೆ ಸುನಿತಾ ನಾರಾಯಣ ಮುಂದಾಳತ್ವದಲ್ಲಿ ಜನಜಾಗೃತಿ ಆಂದೋಲನ ನಡೆಯುತಿತ್ತು. ಈ ಆಂದೋಲನದ ವಿರುದ್ದ ಮಾತನಾಡಿದ ಶಾರುಖ್ ಎಂದೂ ಸಾರ್ವಜನಿಕ ಹಿತಾಸಕ್ತಿ ಕಾರ್ಯದಲ್ಲಿ ತೊಡಗಿಸಿಕೊಂಡವನಲ್ಲ.

ಸತ್ಯಕ್ಕೆ ಸಾಕ್ಷಿ ಬೇಕು, ಸುಳ್ಳು ಹಾಗೆ ಚಲಾವಣೆ ಸಾದ್ಯ ಎನ್ನುವಂತೆ ಕೋಟಿಗಟ್ಟಲೆ ರೂಪಾಯಿ ಪೆಪ್ಸಿ ಕಂಪೇನಿಯಿಂದ ಪಡೆಯುತಿದ್ದ ಈ ನಟನ ಮೂರ್ಖತನದ ಮಾತು ಬಾರತದ ಜನತೆಗೆ ದ್ರೋಹ. ಸಿನೆಮಾ ನಟರು ಕುಡಿಯುತ್ತಾರೆ ಮತ್ತು ಭಾರತದಲ್ಲಿ ಇತರ ಅಹಾರ ಪದಾರ್ಥಗಳು ಮಲೀನಗೊಂಡಿವೆ ಎನ್ನುವ ದಿಕ್ಕು ತಪ್ಪಿಸುವ ಬಣ್ಣದ ನೀರಿನ ಸಂಸ್ಥೆಗಳ ಪ್ರಚಾರದ ಮುಂಚೂಣಿಯಲ್ಲಿ ಇವನಿದ್ದ. ಸದಾ ಹೊಗೆ ಬಿಡುವ ಮತ್ತು ಸಿನೆಮದಲ್ಲಿ ದೂಮಪಾನ ಅವಕಾಶ ಇರಬೇಕು ಎನ್ನುವ ಈ ನಟ ಯುವಜನರಿಗೆ ಕೆಟ್ಟ ಮಾದರಿ.

ನಮ್ಮ ಮೆಚ್ಚಿನ ಮಾಜಿ ಅದ್ಯಕ್ಷ ಡಾ|  ಅಬ್ದುಲ್ ಕಲಾಂ ಅವರಂತೆ ಪ್ರಶ್ನಾತೀತ ವ್ಯಕ್ತಿ ಆಗಿದ್ದರೆ ಬೇರೆ ಮಾತು.   ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೋಗಲು ತಯಾರು ಇರುವಂತಹ ವ್ಯಕ್ತಿ ಅಲ್ಲಿನ ಸರಕಾರ ಕೈಗೊಳ್ಳುವ ಚಿಲ್ಲರೆ ತಪಾಸಣೆಯನ್ನು ಆಕ್ಷೇಪಿಸುವಂತಿಲ್ಲ. ಸರಿಯಾಗಿ ಕಾಸು ಕೊಟ್ಟರೆ ಇಂತವರು ಬಾಂಬು ಕೊಂಡೊಯ್ಯಲೂ ತಯಾರು. ಅತಿ ಹೆಚ್ಚು ಹಣಕ್ಕೆ ನಿಷ್ಟೆಯನ್ನು ಮಾರಲು ಸಿದ್ದನಿರುವ ಇವರ ಬಗೆಗೆ ನಾವು ಅನುಕಂಪ ಸೂಚಿಸುವುದೂ ತಪ್ಪಾಗುತ್ತದೆ.

Sunday, August 16, 2009

ರಾಜೀವ ಗಾಂಧಿ ಶೌಚಾಲಯ ಉದ್ಘಾಟನೆಗೆ ಅಹ್ವಾನ

ಇನ್ನು ಎಲ್ಲ ಸಾರ್ವಜನಿಕ ಶೌಚಾಲಯಗಳನ್ನು ರಾಜೀವ ಗಾಂಧಿ ಶೌಚಾಲಯ ಎಂದು ಕರೆಯಲಾಗುವುದು ಎನ್ನುವ ಸುಗ್ರಿವಾಜ್ನೆ ಸದ್ಯದಲ್ಲಿ ಹೊರಬರುವುದಂತೆ. ಅನಂತರ ಅಂದರೆ ಸದ್ಯದಲ್ಲಿಯೇ ರಾಜೀವ ಗಾಂಧಿ ಸ್ಮಶಾನ, ಇಂದಿರಾ ಗಾಂಧಿ ಕಸಾಯಿಖಾನೆ ಸೊನಿಯಾ ಗಾಂಧಿ ಚರಂಡಿ ರಾಹುಲ ಗಾಂಧಿ ಮೋರಿ ನೆಹರು ಕೊಳಗೇರಿ ಎಲ್ಲವೂ ನಮ್ಮ ಗ್ರಾಮದಲ್ಲಿ ಉದ್ಘಾಟನೆಗೊಳ್ಳಲಿದೆ.

ಭಾರತ ಜೀವಿಸುವುದೇ ಹಳ್ಳಿಯಲ್ಲಿ ಅನ್ನುತ್ತಾರೆ. ಇಂದಿಗೂ ಬಹು ಪಾಲು ಪ್ರಜೆಗಳು ಹಳ್ಳಿಯಲ್ಲಿದ್ದು ಕೃಷಿಯನ್ನು ಆಶ್ರಯಿಸಿಕೊಂಡಿದ್ದಾರೆ. ಅದುದರಿಂದ ಎಲ್ಲ ನೆಹರು ಕುಟುಂಬದ ಸಂಕೇತಗಳು ಪಟ್ಟಣಗಳ ಪಾಲಾಗುವುದು ಶುದ್ದ ತಪ್ಪು. ನ್ಯಾಯವಾದ ಪಾಲು ನಮಗೆ ಹಳ್ಳಿಗರಿಗೂ ಬೇಕು.

ವಿಷಯ ಏನು ಅಂದರೆ  ಕುಮಾರಿ ಮಾಯಾವತಿ ಉತ್ತರ ಪ್ರದೇಶ ರಾಜ್ಯದಾದ್ಯಂತ ಅವರ, ಪಕ್ಷದ ಸ್ಥಾಪಕ ಕಾಂಶಿರಾಮರ ಹಾಗೂ ಪಕ್ಷದ ಚಿಹ್ನೆಯಾದ ಅನೆಯ ಬೃಹತ್ ವಿಗ್ರಹಗಳನ್ನು ಸ್ಥಾಪಿಸಲು ಪ್ರಾರಂಬಿಸಿದ್ದರು. ಈಗಾಗಲೇ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿಸಿದ ಈ ಯೋಜನೆ ತಡೆಗಟ್ಟಲು ಉಚ್ಚ ನ್ಯಾಯಾಲಯವೂ ಒಪ್ಪಲಿಲ್ಲ. ಅನಂತರ ಇದಕ್ಕೆ ಆಕ್ಷೇಪಿಸಿ ಇಬ್ಬರು ವಕೀಲರು ಚುನಾವಣೆ ಆಯೋಗಕ್ಕೆ ದೂರು ಕೊಟ್ಟು ಆನೆ ಪಕ್ಷಕ್ಕೆ ನೊಟೀಸು ಕೊಡಿಸಿದರು.


ಕಾಂಗ್ರೇಸಿನವರಿಗೆ ಎಲ್ಲಕ್ಕೂ ನೆಹರು ಇಂದಿರಾ ರಾಜೀವ ಹೆಸರಿಡುವ ಸೀಕು. ಈ ಬಗೆಗೆ ನಮ್ಮ ಅರಕಲಗೂಡು ಸೂರ್ಯಪ್ರಕಾಶರು ತಿಂಗಳುಗಳ ಹಿಂದೆ ಚುನಾವಣೆ ಅಯೋಗಕ್ಕೊಂದು ಪಟ್ಟಿ ಸಲ್ಲಿಸಿದ್ದರು.    ಅದರಲ್ಲಿ ನೆಹರು ಇಂದಿರಾ ರಾಜೀವ ತ್ರಿವಳಿಗಳ ಹೆಸರಿನಲ್ಲಿರುವ ನಾಲ್ಕು ನೂರ ಐವತ್ತು ಸರಕಾರಿ ಚಟುವಟಿಕೆಗಳ ಪಟ್ಟಿಯಿತ್ತು. ಇದನ್ನೆ ಆದಾರವಾಗಿಟ್ಟುಕೊಂಡು ಆನೆ ಪಕ್ಷದವರು ನಮ್ಮದು ತಪ್ಪಾದರೆ ಅವರದ್ದು ಸರಿಯೇ ಎಂದು ವಾದಿಸಿದರು. ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡ ಆನೆ ಪಕ್ಷವು ಕಾಂಗ್ರೆಸ್ ಪಕ್ಷ ಹಾಗೂ ಅವರಿಂದ ನೇಮಿಸಲ್ಪಟ್ಟ ಚುನಾವಣಾ ಅಯೋಗಕ್ಕೂ ಮುಜುಗರ ಎನಿಸುವಷ್ಟು ಉಗಿದಿದೆ. ಅವರೇ ಅರೆಸಿದ ಔಷದ ಈಗ ಕಾಂಗ್ರೇಸಿಗೆ ಕಹಿಯಾಗಿದೆ.

ಈಗ ಇಡೀ ದೇಶವೆಲ್ಲ ನೆಹರು ಇಂದಿರಾ ರಾಜೀವಮಯ ಎನ್ನುವ ಪಟ್ಟಿಯನ್ನು  ಇಂದಿನ       ಕನ್ನಡ ಪ್ರಭದಲ್ಲಿ ಓದಬಹುದು.       ಅದಕ್ಕೆ ಪೂರಕ ಲೇಖನವನ್ನು ಟಿ ಜೆ ಎಸ್ ಜೋರ್ಜ್ ಅವರ ನೇರ ಮಾತು ಅಂಕಣದಲ್ಲಿ ಕಾಣುತ್ತೇವೆ.     ಮುಂದುವರಿದ ಬಾಗದ ಕೊಂಡಿ ಇಲ್ಲಿದೆ.

ಕ್ಷಮಿಸಿ. ಇದು ಅಹ್ವಾನವಲ್ಲ. ಮುಂದಾಗಿ ಸೂಚನೆ ಅಷ್ಟೇ. ಉದ್ಘಾಟನೆ ದಿನವನ್ನು    ದೆಹಲಿಯಿಂದ ಒಪ್ಪಿಗೆ ಬಂದಾಗ ತಿಳಿಸುತ್ತೇವೆ.

Saturday, August 15, 2009

ಆರ್ಥಿಕ ಕಾರಣಗಳಿಗೆ ಬ್ರಿಟೀಷರು ನಮ್ಮಲ್ಲಿಂದ ತೊಲಗಿದರೋ ?

ಎರಡನೆಯ ಮಹಾಯುದ್ದದ ಕೊನೆಗೆ ಬ್ರಿಟೀಷರ ಆರ್ಥಿಕತೆ ಬಹಳ ಕೆಟ್ಟ ಸ್ಥಿತಿಯಲ್ಲಿತ್ತು. ಸಿಪಾಯಿ ದಂಗೆಯ ನಂತರ ಇಲ್ಲಿ ತೇರಿಗೆ ಗಮನಾರ್ಹವಾಗಿ ಏರಿಸಲು ಸಾದ್ಯವಾಗಿರಲಿಲ್ಲ. ಸ್ವಾತಂತ್ರ ಚಳುವಳಿ ಒತ್ತಡದಿಂದಾಗಿ ಅಧೀನ ರಾಷ್ಟ್ರವೆಂದು ಹೆಚ್ಚು ಭಾರದ ತೇರಿಗೆ ವಿದಿಸುವಂತಿರಲಿಲ್ಲ. ಇಲ್ಲಿಂದ ದೋಚಲು ಸಾದ್ಯವಿಲ್ಲ ಎನ್ನುವಾಗ ವಸಾವತುಗಳ ಬಗೆಗೆ ಆಕ್ರಮಿಸಿದ ದೇಶಕ್ಕೆ ಸ್ವಾಬಾವಿಕವಾಗಿ ಆಸಕ್ತಿ ಕಡಿಮೆಯಾಗುತ್ತದೆ. ನಷ್ಟ ಎಂದರೆ ಹೊರಡುವ ಆಲೋಚನೆ ಸಮಂಜಸ ಎನಿಸುತ್ತದೆ.

ಉಳಿದ ಬಿಳಿ ತೊಗಲಿನ ದೇಶಗಳ ಸೈನಿಕರು ಖರ್ಚು ಆಯಾಯ ರಾಷ್ಟ್ರಗಳೇ ವಹಿಸಿಕೊಂಡರೆ ಬಾರತ ಮಾತ್ರ ಇಂಗ್ಲೇಂಡು ಕೊಡಬೇಕೆಂದು ಹೇಳಿತು. ಅದುದರಿಂದ ಬಾರತಕ್ಕೆ ಸ್ವಾತಂತ್ರ ಬಂದಾಗ ಒಂದು ಬಿಲಿಯ ಪೌಂಡ್ ನಮಗೆ ಇಂಗ್ಲೇಂಡಿನಿಂದ ಬರಬೇಕಾಗಿತ್ತು. ಮುಖ್ಯವಾಗಿ ಕಾಂಗ್ರೇಸ್ ದುರಾಡಳಿತದಿಂದಾಗಿ ಅದೆಲ್ಲ ಮುಗಿದು ಇಂದು ಪ್ರತಿಯೊಬ್ಬರಿಗೂ ನಲುವತ್ತು ಸಾವಿರ ರೂಪಾಯಿ ಮಿಕ್ಕಿ ಸಾಲದ ಹೊರೆ ಇರುತ್ತದೆ.

ನಮ್ಮ ಶಾಲಾ ಪುಸ್ತಕಗಳಲ್ಲಿ ಮಾತ್ರ ನೆಹರು ಮತ್ತು ಗಾಂಧಿ ಶ್ರಮಪಟ್ಟು ಸ್ವಾತಂತ್ರ ಗಳಿಸಿಕೊಟ್ಟರು ಎನ್ನುತ್ತಾ ಈ ವಿಚಾರವನ್ನು ಸಂಪೂರ್ಣ ನಿರ್ಲಕ್ಷಿಸಿದರು. ಸ್ವಾತಂತ್ರ ದೊರಕಲು ಹಲವು ಕಾರಣಗಳಲ್ಲಿ ಹೋರಾಟವೂ ಒಂದು. ಬಾರತ ಇಟ್ಟುಕೊಳ್ಳುವುದು ಲಾಸ್ ಎಂದು ಬ್ರಿಟೀಷರು ತೊಲಗಿದ್ದು ಎನ್ನುವ ವಿಚಾರವನ್ನು ಆರು ವರ್ಷ ಹಿಂದೆ ಪ್ರಸಿದ್ದ ಅರ್ಥಶಾಸ್ತ್ರಿ ಹಾಗೂ ಅಂಕಣಕಾರ ಸ್ವಾಮಿನಾಥನ್ ಅಯ್ಯರ್ ಅವರ ಅಂಕಣ ಬರಹದಲ್ಲಿ ಚೆನ್ನಾಗಿ ವಿವರಿಸಿದ್ದಾರೆ.  

Wednesday, August 12, 2009

ಹಂದಿ ಜ್ವರದ ಸುಳಿವು ದಶಕಗಳ ಹಿಂದೆ ಕಸ್ತೂರಿಯಲ್ಲಿಈಗ ಎಲ್ಲಾ ಕಡೆಗಳಲ್ಲೂ ಹಂದಿ ಜ್ವರದ್ದೇ ಸುದ್ದಿ. ಇದು ತನ್ನಷ್ಟಕೆ ತಾನೆ ಮೆಕ್ಷಿಕೊದಲ್ಲಿರುವ ಹಂದಿ ಕಾರ್ಖಾನೆಯಿಂದ ಸುರುವಾಯಿತೊ ಅಲ್ಲ ಲಾಬಕೋರ ಮದ್ದು ಕಂಪೇನಿ   ಕಿತಾಪತಿ   ಇದರ ಹಿಂದೆ ಇದೆಯೋ ಎನ್ನುವ ಸಂಶಯವೂ ಚಲಾವಣೆಯಲ್ಲಿದೆ. ನಾನು ಈ ವಿಚಾರದಲ್ಲಿ ತಜ್ನನಲ್ಲವಾದರೂ ಮದ್ದು ಕಂಪೇನಿಗಳ ಕೊಳಕು ವ್ಯವಹಾರ ಬಗ್ಗೆ ಸ್ವಲ್ಪ ಅರಿತಿದ್ದೇನೆ. ಸುಮಾರು ನಲುವತ್ತು ವರ್ಷ ಹಿಂದೆ ಕಸ್ತೂರಿಯಲ್ಲಿ ಪ್ರಕಟವಾದ ಅಲೋಪತಿ ವೈದ್ಯರಾದ ಡಾ. ಮರಕಿಣಿ ಅವರ ಪುಟ್ಟ   ಕಥೆಯೊಂದು ನೆನಪಾಯಿತು.


ಅಡ್ಯನಡ್ಕದಲ್ಲಿರುವ ಹಳ್ಳಿ ವೈದ್ಯರಿಗೆ ಕೇಸಿಲ್ಲ. ನೊಣ ಹೊಡೆಯುತ್ತಾ ಕೂತಿದ್ದರು. ಕಂಪೌಂಡರ್ ಮಣಿ ಇದ್ದಕ್ಕಿದ್ದಂತೆ ನಾಪತ್ತೆ. ನಾಲ್ಕು ದಿನ ಕಳೆದು ಬಸ್ಸಿನಿಂದಿಳಿಯುವಾಗ ಮಣಿರಾಯನಿಗೆ ಸಕತ್ ಜ್ವರ ಕೆಮ್ಮು ಇತ್ಯಾದಿ. ಡಾಕ್ಟರ್ ಕೊಟ್ಟ ಔಷದಿಯಲ್ಲಿ ಗುಣ. ಅಷ್ಟರಲ್ಲಿ ಊರಿನವರಿಗೆ ಜ್ವರ ಹಬ್ಬಿತು. ನಮ್ಮ ಡಾಕ್ಟ್ರ ಮದ್ದು ರಾಮಬಾಣವೆಂದು ಮಣಿ ಪ್ರಚಾರ ಮಾಡಿದ. ಅಂತೂ ಬೇಕಾದಷ್ಟು ಕೇಸುಗಳು ದವಾಖಾನೆಗೆ. ಗುಟ್ಟಾಗಿ ವಿಚಾರಿಸಲು ಮಣಿಪಾಲ ಆಸ್ಪತ್ರೆಗೆ ವಿದೇಶಿ ವಿಜ್ನಾನಿಗಳು ಬಂದು ಫ್ಲೂ ಬಗೆಗೆ ಸಂಶೋದನೆ ನಡೆಸುತ್ತಿದ್ದರು. ಇದು ಗೊತ್ತಾದ ಮಣಿ ಹೋಗಿ ತಾನು ಬಲಿಪಶುವಾಗಲು ರೆಡಿ ಎಂದು ಹೇಳಿ ಸೀಕು ಚುಚ್ಚಿಸಿಕೊಂಡ. ಜ್ವರ ಜೋರಾದಾಗ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದು ಊರಲ್ಲಿ ಜ್ವರ ಹಬ್ಬಿಸಿದ.

ಕಳೆದ   ವಾರ   ಗೆಳೆಯ ವ್ಯಂಗ ಚಿತ್ರಕಾರ ಸತೀಶ  ಆಚಾರ್ಯರು ಬಾರತ ಇನ್ನೂ ಹಂದಿ ಜ್ವರಕ್ಕೆ ತಯಾರಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು.     ಇದ್ದಕ್ಕಿದ್ದಂತೆ ದಾರಾಳ ಹಣ ಖರ್ಚು ಮಾಡುತ್ತಿರುವವನು ಅಲ್ಲಿ ದರೋಡೆ ಮಾಡಿರಬಹುದೆಂಬ ಅನುಮಾನ ಪಡುವಂತೆ ಈ ಸೀಕು ಬಂದ ಸಮಯವನ್ನು ನೋಡುವಾಗ ಕಂಪೇನಿಯ ಕೈವಾಡ ಅಲ್ಲಗಳೆಯುವಂತಿಲ್ಲ.     ಜನ ತರಗಗೆಲೆಯಂತೆ ಉದುರಿದರೆ ಮಾತ್ರ ಸರಕಾರದ ಮೇಲೆ ಒತ್ತಡ ಬಿದ್ದು ಕಾಸು ಪೀಕಿಸಲು ಸಾದ್ಯ. ಈ ವಿಚಾರದಲ್ಲಿ ಮದ್ದಿನ ಕಂಪೇನಿಗಳ ನಿಪುಣತೆ ಪ್ರತ್ನಾತೀತ.

ಈ ಬಗೆಗೆ ಮಂಗಳೂರಿನ ವೈದ್ಯರಾದ ಶ್ರೀನಿವಾಸ ಕಕ್ಕಿಲ್ಲಾಯರು ಮೂರು ತಿಂಗಳು ಮೊದಲು ಅಂದರೆ ಮೆ ಎರಡನೇಯ ವಾರದಲ್ಲಿಯೇ ತಮ್ಮ ಆರೋಗ್ಯ ಸಂಪದ ಬ್ಲೋಗಿನಲ್ಲಿ ಬರೆದಿದ್ದಾರೆ. ಅಲ್ಲಿಂದ ಕದ್ದ ಕೆಲವು ವಾಕ್ಯಗಳು ಇಲ್ಲಿವೆ.


ಈಗ ಅಮೆರಿಕಾ ಮಾರುಕಟ್ಟೆಯಿಂದ ಭಾರತವೂ ಸೇರಿ ಜಗತ್ತಿನ ಮಾರುಕಟ್ಟೆಗೆ ಲಗ್ಗೆ ಇಡಲು ಈ ವ್ಯಾಕ್ಸಿನೇಷನ್ ಕಂಪನಿಗಳು ಸಿದ್ಧತೆ ನಡೆಸುತ್ತಿವೆ. ಈ ಪ್ರಚಾರದ ಪ್ರಕ್ರಿಯೆಯ ಅಂಗವೇ “ಹಂದಿ ಜ್ವರ”. ಜನರಲ್ಲಿ ಭಯವನ್ನು ಉತ್ಪಾದನೆ ಮಾಡಿ ವ್ಯಾಕ್ಸಿನೇಷನ್ ವ್ಯಾಪಾರ ವೃದ್ಧಿಸುವುದೇ ಇದರ ಉದ್ದೇಶ. ಅಮೆರಿಕಾದಂಥ ವಿದ್ಯಾವಂತ ಜನರಿಗೇ ಮೋಸ ಮಾಡಬಹುದಾದರೆ, ಭಾರತದ ಜನರಿಗೆ ಮೋಸ ಮಾಡುವುದು ಸುಲಭವೆಂದು ಹೇಳಬಹುದು. ಅಮೆರಿಕಾ ಅಧ್ಯಕ್ಷ ಓಬಾಮಾರವರೇ ಇದಕ್ಕೆ ಸ್ವರ ಸೇರಿಸಿರಬೇಕಾದರೆ, ನಮ್ಮ ದೇಶದ ರಾಜಕಾರಣಿಗಳಿಗೆ ದಾರಿ ಇನ್ನೂ ಸುಲಭವೆಂದು ಹೇಳಬಹುದು. ಆದ್ದರಿಂದ ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಸಿದ್ದರಾಗಿ !!


ಇಂದು ನನಗೆ ಡಾ|   ಕಕ್ಕಿಲ್ಲಾಯರ ಬರಹದ ಸುಳಿವು ಕೊಟ್ಟ ಗೆಳೆಯ ಅಭಯರ ಬ್ಲೋಗಿನಲ್ಲಿರುವ ಟಿಪ್ಪಣಿ ಅರ್ಥಪೂರ್ಣ.

ಅವರ ಲೇಖನಕ್ಕೆ ತಮ್ಮನ್ನು ದಾಟಿಸುವ ಮುನ್ನ ಅದಕ್ಕೇ ಪೂರಕವಾಗಿ ಎರಡು ಮಾತು. ಸಾಮಾಜಿಕ ಅಭಿಪ್ರಾಯವನ್ನು ರೂಪಿಸುವಲ್ಲಿ ನಮ್ಮ ಮಾಧ್ಯಮಗಳದ್ದು ಭಾರೀ ದೊಡ್ಡ ಪಾತ್ರವಿದೆ. ಭಾರತದಲ್ಲಿ ಪ್ರತಿ ಕ್ಷಣ ಎಷ್ಟು ಮಕ್ಕಳು ಸಾಯುತ್ತಿದ್ದಾರೆ ಎಂದು ನಿಮಗೆ ಗೊತ್ತೇ? ಅವುಗಳಿಗೆ ಕಾರಣ ನಿಮಗೆ ಗೊತ್ತೇ? ಆದರೆ ಹಂದಿ ಜ್ವರದಿಂದ ಸತ್ತ ಅಷ್ಟೂ ಮಕ್ಕಳ ಸಂಖ್ಯೆ ನಿಮಗೆ ಗೊತ್ತು. ಏಕೆಂದರೆ, ಅದನ್ನು ಮಾಧ್ಯಮ ನಿಮಗೆ ತಿಳಿಸಿದೆ. ಆ ಮಕ್ಕಳು ಹಂದಿ ಜ್ವರಕ್ಕೆ ಮದ್ದು ಇದ್ದರೂ ಏಕೆ ಸತ್ತರು? ಇದರ ಬಗ್ಗೆ ಯೋಚಿಸಿದ್ದೀರಾ? ಒಮ್ಮೆ ಯೋಚಿಸಿದರೆ ನಿಮಗೆ ಮಾಧ್ಯಮಗಳ ಹಾಗೂ ವೈದ್ಯಕೀಯ ರಂಗದ ಖಳನಾಯಕರ ಕುತಂತ್ರ ನಿಮಗೆ ಥಟ್ಟನೆ ಅರ್ಥವಾಗದೇ ಹೋಗದು. ಎಲ್ಲಾ ಮನಸ್ಸುಗಳನ್ನು ನಿಯಂತ್ರಿಸುವ, ಪರ-ವಿರೋದ ಅಭಿಪ್ರಾಯ ಮೂಡಿಸುವಲ್ಲಿ ಮಹತ್ತರ ಪಾತ್ರವಹಿಸುವ ಒಂದು ಏರ್ಪಾಡಿನ ನಿಯಂತ್ರಣ ಓರ್ವ ವ್ಯಕ್ತಿಯ ಕೈಯಲ್ಲಿ ಇರುವುದು ಎಂಥಾ ಅಪಾಯ ಎಂದು ಒಮ್ಮೆ ಯೋಚಿಸಿ ನೋಡಿ.

ಎರಡು ದಿನ ನಂತರ ಸೇರಿಸಿದ ಪೂರಕ ಮಾಹಿತಿ


ಹಿರಿಯ ವೈಜ್ನಾನಿಕ ಬರಹಗಾರ ಹಾಗೂ ಪ್ರಜಾವಾಣಿಯ ಅಂಕಣಕಾರರಾದ ಶ್ರೀ ನಾಗೇಶ ಹೆಗಡೆ ಗುರುವಾರ ಈ ವಿಚಾರವನ್ನು ಜ್ವರ ಮತ್ತು ಬರದ ನಡುವೆ ಬಯೋತ್ಪಾತದ ಅಬ್ಬರ ಎಂದು ತಲೆಬರಹ ಕೊಟ್ಟು ಸರಳವಾಗಿ ವಿವರಿಸಿದ್ದಾರೆ. ನಾನು ಬರೆದಂತೆ ಇದು ಮದ್ದಿನ ಕಂಪೇನಿಗಳ ಕಿತಾಪತಿ ಆಗಿರುವ ಸಾದ್ಯತೆಯನ್ನು ಅನುಮೋದಿಸಿದ್ದಾರೆ.        ಡಾ ಶ್ರೀನಿವಾಸ ಕಕ್ಕಿಲ್ಲಾಯರಂತೆ ಶ್ರೀ ನಾಗೇಶ ಹೆಗಡೆಯವರೂ ಮೂರು ತಿಂಗಳ ಹಿಂದೆ ಇದರ ಸುಳಿವು ದೊರೆತು ಎಚ್ಚರಿಕೆ ಕೊಟ್ಟಿದ್ದಾರೆ. ಅವರ ಮೆ ತಿಂಗಳ ಬರಹದ ಕೊಂಡಿ ಇಲ್ಲಿದೆ.

                            

ಪತ್ರಕರ್ತ ಸ್ಕೋಟ್ ಬಾರತದಿಂದ ನಿರ್ಗಮನ

ಚೆನೈಯಲ್ಲಿ ಇದ್ದುಕೊಂಡು ಅಮೇರಿಕದ ಪತ್ರಿಕೆಗಳಿಗೆ ಶೋಧನಾ ಬರಹ ಬರೆಯುತಿದ್ದ ಸ್ಕೋಟ್ ಬಾರತಕ್ಕೆ ವಿದಾಯ ಹೇಳಿದ್ದಾರೆ. ಅಮೇರಿಕದ ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಸ್ಕೋಟ್ ಉತ್ತಮ ಸುದ್ದಿ ಶೋದಕ. ಸಲಿಸಾಗಿ ಹಿಂದಿ ಮಾತನಾಡುವ ಇವರಿಗೆ ಎರಡು ದೇಶಗಳಲ್ಲಿ ಜಾಡು ಹಿಡಿದು ಹಿಂಬಾಲಿಸಿ ಪತ್ತೆದಾರಿ ನಡೆಸುವ ನಿಪುಣತೆ ಸಿದ್ದಿಸಿತ್ತು.  

ಅಮೇರಿಕದ ವೈದ್ಯಕೀಯ ಕಾಲೇಜುಗಳಿಗೆ ಬಾರತದಿಂದ ಗೋರಿಗಳ ಅಗೆದು ಅಸ್ಥಿಪಂಜರ ಪೊರೈಕೆ, ಕೊಳೆಗೇರಿಯ ಬಡ ಮಕ್ಕಳನ್ನು ಕದ್ದು ಅನಾಥರೆಂದು ದಾಖಲೆ ತಯಾರು ಮಾಡಿ ವಿದೇಶಿಯರಿಗೆ ದತ್ತು ಸ್ವೀಕಾರಕ್ಕೆ ಮಾರಾಟ, ಸಾಫ್ಟ್ ವೇರ್ ಕಂಪೆನಿಗಳಿಗೆ ಭೂಮಿ ಪೊರೈಕೆ - ರಿಯಲ್ ಎಸ್ಟೇಟ್ ಅವ್ಯವಹಾರ ಸಂಬಂದಿಸಿ ಬೆಂಗಳೂರಿನ ಹೊರವಲಯದಲ್ಲಿ ಮುತ್ತಪ್ಪ ರೈ ಸಂದರ್ಶನ ಇವೆಲ್ಲ ಇವರ ಗಮನಾರ್ಹ ಸಾಧನೆಗಳು.

ಬಿಹಾರದ ಹಳ್ಳಿಗರೊಬ್ಬರ ಅಸ್ಥಿಪಂಜರ ಅಮೇರಿಕ ತಲಪಿದಾಗ ಲಕ್ಷಾಂತರ ರೂಪಾಯಿ ಬಾಳುತ್ತದೆ ಎಂದು ನನಗೆ ತಿಳಿದದ್ದು ಇವರ ಪತ್ತೆದಾರಿ ಕೆಲಸದಿಂದ. ಅಮೇರಿಕದಲ್ಲಿ ಅಸ್ಥಿಪಂಜರಗಳು ಸಿಗುವುದು ದುರ್ಲಭ. ಅದುದರಿಂದ ಹೊರದೇಶಗಳಿಂದ ಮುಖ್ಯವಾಗಿ ಬಾರತದಿಂದ ಅಮದಿಸುವುದು ಅನಿವಾರ್ಯ. ೧೯೮೫ರಲ್ಲಿ ಅಸ್ಥಿ ಪಂಜರ ರಪ್ತು ಮಾದುವುದು ಬಾರತ ಸರಕಾರದಿಂದ ನಿಷೇದಿಸಲ್ಪಟ್ಟರೂ ಕಳೆದ ಇಪ್ಪತ್ತಎರಡು ವರ್ಷಗಳಲ್ಲಿ ವ್ಯವಹಾರ ಅವ್ಯಾಹಿತವಾಗಿ ನಡೆದು ಬರುತ್ತಿದೆ. ಗೋರಿಗಳ ಅಗೆದು ಹೂಳಲ್ಪಟ್ಟ ಹೆಣವನ್ನು ತೆಗೆದು ಮಾಂಸದಿಂದ ಬೇರ್ಪಡಿಸಿ ಅಂದರೆ ಸಂಸ್ಕರಿಸಿ ಅದನ್ನು ಅಮೇರಿಕ ಮತ್ತಿತರ ದೇಶಗಳ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ರಪ್ತು ಮಾಡುವ ಜಾಲ ಸಕ್ರೀಯವಾಗಿದೆ.

ಅನಾಥಾಲಯದಲ್ಲಿದ್ದ ಮಕ್ಕಳ ನೋಡಲು ಚೆನ್ನಾಗಿರಲಿಲ್ಲವೆಂದು ಚೆನ್ನಾಗಿರುವ ಬಡವರ ಮಕ್ಕಳನ್ನು ಕದ್ದು ಸಾಗಾಟದ ಜಾಲ, ಪರದೇಶಿಗಳು ಬಾರತಕ್ಕೆ ಬಂದು ಕಾನೂನಿಗೆ ವಿರೋದವಾಗಿ ಕಿಡ್ನಿ ಖರೀದಿ ಮಾಡುವುದು ಇವೆಲ್ಲರ ಸುಳಿವು ಸಿಕ್ಕಿ ಜಾಡು ಹಿಡಿದು ಹಿಂಬಾಲಿಸಿದ್ದಾರೆ.  ನಮ್ಮಲ್ಲಿ  ಉಳಿದಿದ್ದರೆ  ಇನ್ನೂ ಸಾಧನೆ  ಮಾಡುತ್ತಿದ್ದರೋ  ಏನೊ.  We miss him.

Monday, August 10, 2009

ವೃತ್ತಿ ಮೌಲ್ಯಗಳ ಕೊರತೆಯ ಮುಖಗಳು

ವೃತ್ತಿ ಮೌಲ್ಯಗಳ ಕೊರತೆಯಿಂದಲೇ ದೆಹಲಿ ಮೆಟ್ರೊ ಅವಘಡ ಸಂಬವಿಸಿತು ಎಂದು ನಿನ್ನೆಯ ಕನ್ನಡ ಪ್ರಭ ಪತ್ರಿಕೆಯಲ್ಲಿ ಅದರ ಮುಖ್ಯಸ್ಥ ಶ್ರೀಧರನ್ ಹೇಳಿದ್ದಾರೆ.
ಕಳಪೆ ಕೆಲಸಗಳ ಬಗೆಗೆ ಹತ್ತು ವರ್ಷ ಹಿಂದಿನ ಮಾತು ಮತ್ತು ಪ್ರತಿಕ್ರಿಯೆ ನೆನಪಾಯಿತು.
ಇಂಗ್ಲೇಂಡಿನ ರಾಣಿಯ ಸಂಗಾತಿ ಫಿಲಿಪರಿಗೆ ಜನಾಂಗಿಯ ತಾತ್ಸಾರ ಎಂಬ ಸೀಕು. ಸಾರ್ವಜನಿಕವಾಗಿಯೇ ಬಾಯಿ ಚಪಲ ಪ್ರದರ್ಶನ. ಕಳಪೆ ಕೆಲಸ ಕಂಡು ಇದು ಮಾಡಿದ್ದು ಬಾರತೀಯನಿರಬೇಕು ಎನ್ನುವ ಉದ್ಗಾರ. ಅದಕ್ಕೆ ಮಾದ್ಯಮಗಳ ವ್ಯಾಪಕ ಪ್ರಚಾರ.

ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕ ಶೇಖರ ಗುಪ್ತ ಅವರ ಅಂಕಣದಲ್ಲಿ ಸರಿಯಾಗಿ ಹತ್ತು ವರ್ಷ ಹಿಂದೆ ಆಗಸ್ತ್ ೧೯೯೯ರಲ್ಲಿ ಈ ವಿಚಾರ ವಿಮರ್ಷೆ ಮಾಡಿದರು. ಈ ಬರಹ ನನ್ನ ಮನಸ್ಸಿನಲ್ಲಿ ಅಂದಿನಿಂದಲೂ ಅಚ್ಚೊತ್ತಿದಂತಾಗಿದೆ.   ಇದನ್ನು ಇನ್ನೊಂದು ನಿಯತಕಾಲಿಕದ ಅಂಕಣಕಾರ ತರುಣ್ ತೇಜ್ ಪಾಲ್ ಅನುಮೋದಿಸಿದ್ದರು.  

ವೃತ್ತಿ ಮೌಲ್ಯಗಳು ಹಾಗೂ ಕೆಲಸದ ಗುಣಮಟ್ಟ ಕುಸಿಯುತ್ತಲೇ ಇರುವುದು ಬೇಸರದ ವಿಚಾರ. ಬೇಡಿಕೆ ಇರುವ ಕಾರಣ ಸುದಾರಿಸಿಕೊಂಡು ಹೋಗುವ ಅನಿವಾರ್ಯತೆ. ವಿಶ್ವ ಮಟ್ಟದ ಕೆಲಸಗಾರರ ತಯಾರು ಮಾಡುವ ಸಾಮರ್ಥ್ಯ ನಮಗಿದ್ದು ಎಲ್ಲ ಹಂತಗಳಲ್ಲೂ ಎಡವಿದ್ದೇವೆ.


ಚೀನಾದಲ್ಲಿ ಕೆಲಸ ಮಾಡುತ್ತಿರುವ ರಮೇಶ್ ಅವರು ಚೀನಾದ ಕೆಲಸಗಾರರ ವೃತ್ತಿಪರತೆ ಬಗೆಗೆ ತಮ್ಮ ಬ್ಲೋಗಿನಲ್ಲಿ ಹೇಳಿಕೊಂಡಿದ್ದಾರೆ. ಅವರಿಂದ ನಾವು ಕಲಿಯುವುದು ಸಾಕಷ್ಟಿದೆ. ಆದರೆ ಮನಸ್ಸು ಬೇಕು.  

ಕಡಿಮೆ ಉತ್ಪಾದನೆ, ಕಳಪೆ ಗುಣಮಟ್ಟ ಮತ್ತು ಇವುಗಳ ಉತ್ತಮಗೊಳಿಸಲು ಆಸಕ್ತಿ ಇಲ್ಲದಿರುವುದು ಬಾರತೀಯ ಕೆಲಸಗಾರರ ಋಣಾತ್ಮಕ ವಿಚಾರಗಳು. ಉತ್ತಮ ಕೆಲಸಗಾರರು ಹೊರಹೋಗುವ ಕಾರಣ ಹಳ್ಳಿಗಳಲ್ಲಿ ಪರೀಸ್ಥಿತಿ ಹೆಚ್ಚು ಕಠೀಣವಾದರೂ ವಿಚಾರ ಮರೆಯಲ್ಲೇ ಉಳಿಯುತ್ತದೆ.

Wednesday, August 05, 2009

ಹಣದುಬ್ಬರ ಬಾದಿಸದ ಅಮೇರಿಕ.

ಹಣದುಬ್ಬರ ಎನ್ನುವ ವಿಷ ನಮ್ಮ ಜೀವನವನ್ನು ಹಾಳುಮಾಡುತ್ತದೆ. ಹಣವು ಬೆಲೆ ಕಳಕೊಂಡಂತೆ ನಮಗೆ ನ್ಯಾಯವಾದ ಪ್ರತಿಫಲ ದೊರಕಿತೋ ಎನ್ನುವ ಗೊಂದಲ ಉಂಟುಮಾಡುತ್ತದೆ. ಜನರಲ್ಲಿ ಹೆಚ್ಚಿನ ಅಪೇಕ್ಷೆ ಮೂಡುತ್ತದೆ. ಉದ್ಯೋಗಿಗಳು ಮುಷ್ಕರ ಹೂಡುತ್ತಾರೆ. ಈ ರೀತಿ ರೂಪಾಯಿ ಬೆಲೆ ಕಳೆದುಕೊಳ್ಳಲು ನಮ್ಮಲ್ಲಿರುವ ಭ್ರಷ್ಟ ವ್ಯವಸ್ಥೆಯ ಚುಕ್ಕಾಣಿ ಹಿಡಿದ ಗಾಂಧಿ ಟೋಪಿಯ ಅಸಮರ್ಥ ರಾಜಕಾರಣಿಗಳೇ ಕಾರಣ.

ನಾನು ಅಮೇರಿಕದಲ್ಲಿ ಸೈಕಲಿಸುವಾಗ ಮೊದಲ ಹತ್ತು ದಿನಗಳಲ್ಲಿ ನಿರೀಕ್ಷಿತ ವೇಗದಲ್ಲಿಯೇ ಮುಂದುವರಿದಿದ್ದೆ. ಆಗ  ಪೆನ್ಸಿಲ್ವಾನಿಯಾ  ರಾಜ್ಯದಲ್ಲಿ   ಸಿಕ್ಕ ಸಾವಯುವ ಕೃಷಿಕರಾದ ಎರಿಕ್ ಆನ್ ದಂಪತಿಗಳಲ್ಲಿ ಒಂದು ವಾರ ಕಳೆದದ್ದು  ನಾನು ವೇಳಾಪಟ್ಟಿಯಲ್ಲಿ ಹಿಂದೆ ಬೀಳಲು ಕಾರಣವಾಯಿತು. ಅವರು ನೆರೆಯ ಆಮೀಷ   ಜನರೊಂದಿಗೆ ಉತ್ತಮ ಸಂಬಂದ ಹೊಂದಿದ್ದ ಕಾರಣ ದಿನ ಹೋದದ್ದೆ ಅರಿವಾಗಲಿಲ್ಲ.

ನನ್ನ ಅಬ್ಯಾಸ ಎಂದರೆ ಮುಂದಿರುವ ಸಮಸ್ಯೆಯನ್ನು ಮೊದಲು ಬ್ರೆಡ್ ತುಂಡುಮಾಡುವ ಹಾಗೆ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡುವುದು ಅಂದರೆ ಗುರಿಯನ್ನು ಹಂಚಿಹಾಕುವುದು. ನನ್ನ ಮುಂದಿರುವ ಪಯಣ ನ್ಯೂ ಯೊರ್ಕನಿಂದ ಲಾಸ್ ಎಂಜಲಸ್ ಪಟ್ಟಣಕ್ಕಿರುವ ಮೂರು ಸಾವಿರ ಚಿಲ್ಲರೆ ಮೈಲು ಬಾಗಿಸು ನನಗೆ ಲಭ್ಯವಿರುವ ನೂರು ದಿನ ಅಂದರೆ ಸರಾಸರಿ ದಿನಕ್ಕೆ ನಲುವತ್ತು ಮೈಲು ಕ್ರಮಿಸಲೇ ಬೇಕಾಗಿತ್ತು.

ಅಮೇರಿಕ ಸೇರುವ  ಮೊದಲೇ   ಲಾಸ್ ಎಂಜಲಸ್ ನಿಂದ ಹೊರಡುವ ವಿಮಾನದಲ್ಲಿ ಸ್ಥಳ ಕಾದಿರಿಸಲಾಗಿದ್ದು ನೂರು ದಿನಗಳಲ್ಲಿ ನಾನು ಅಮೇರಿಕ ಬಿಡಲೇ ಬೇಕಾಗಿತ್ತು. ಆಸಕ್ತಿ ಇರುವ ಏನನ್ನೂ ನೋಡದೆ ಬರೇ ಸೈಕಲಿಸುವುದರಲ್ಲಿ ನನಗೆ ಅರ್ಥ ಕಾಣಲಿಲ್ಲ. ಎರಿಕ್ ಸಹಾಯದಿಂದ ಎಲ್ಲ ಪರ್ಯಾಯಗಳ ಆಲೋಚಿಸಿ ಕೊನೆಗೆ ವಿಮಾ ಪಾಲಿಸಿಯಂತೆ ಖರೀದಿಸಿದ್ದು ಚಾಲನೆ ನಮಗೆ ಬಿಡಿ ಎನ್ನುವ ದ್ಯೇಯವಾಕ್ಯ ಹೊಂದಿರುವ ಗ್ರೆಹೌಂಡ್ ಕಂಪೇನಿ ಬಸ್ಸು ಟಿಕೇಟು. ಹಾಗೆ ಹಲವು ಬಾರಿ ಸೈಕಲು ಮತ್ತು ನಾನು ಬಸ್ಸೇರಿದ್ದು ಪರವಾಗಿಲ್ಲ ಇನ್ನು ಸೈಕಲಿಸಬಹುದು ಎಂದು ಅನಿಸಿದ ಕೂಡಲೇ ಬಸ್ಸಿಂದಿಳಿಯುತ್ತಿದ್ದೆ. ಆಗ ಅಂದರೆ 1985ರಲ್ಲಿ ನಾನು ಟಿಕೇಟಿಗೆ ಕೊಟ್ಟ ಒಟ್ಟು ಮೊತ್ತ 119 ಡಾಲರ್ ಗಳು.

ಹನ್ನೆರಡು ವರ್ಷ ಅನಂತರ ಹಳೆಯ ಗೆಳೆಯರ ಕಂಡು ಬರೋಣ ಎಂದು ಅಮೇರಿಕಕ್ಕೆ ಹಾರಿದೆ. ಆಗ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ನಾನು ಕೊಟ್ಟ ಹಣ 132 ಡಾಲರ್. ಈಗ ಪುನಹ ಹನ್ನೆರಡು ವರ್ಷಗಳಾಗಿದ್ದು ಕುತೂಹಲದಿಂದ ಪ್ರಯಾಣದ ದರದಲ್ಲಾಗಿರುವ ಬದಲಾವಣೆಯನ್ನು ಜಾಲದಲ್ಲಿ ನೋಡಿದೆ. ಇಂದು 2009ರಲ್ಲಿ ಅದೇ ಪ್ರಯಾಣಕ್ಕೆ ಗರೀಷ್ಟ ಇನ್ನೂರ ನಲುವತ್ತು ಡಾಲರ್. ಮುಂಗಡವಾಗಿ ಪಡಕೊಂಡ ಟಿಕೇಟಿಗೆ ಬಹಳ   ರಿಯಾಯತಿ ಇದ್ದರೂ ಈ ಬರಹದಲ್ಲಿ ನಾಲ್ಕು ಕಡೆಗಳಲ್ಲಿ ತೋರಿಸುವ ದರಗಳು ಅವುಗಳನ್ನು ಹೊರತು ಪಡಿಸಿದೆ.


ಎಪ್ಪತೈದು ವರ್ಷ ಹಿಂದೆ 1934ರಲ್ಲಿಯೇ ಇದು 32.5 ಡಾಲರ್ ಆಗಿತ್ತೆಂದು ಪತ್ರಿಕಾ ಪ್ರಕಟನೆ ಹೇಳುತ್ತದೆ. ಅಂದರೆ 75 ವರ್ಷದಲ್ಲಿ ಇದು ಬರೇ ಏಳು ಪಾಲು ಹೆಚ್ಚಾಗಿದೆ. ನಮಗೆಲ್ಲ ನಿಜಕ್ಕೂ ಆಶ್ಚರ್ಯಕರವಾದ ವಿಚಾರ.

ಹೋಲಿಸಿ ನೋಡುವಾಗ 1967ರಲ್ಲಿ ನಾನು ಮೈಸೂರಿನ ವಸತಿ ಶಾಲೆಯಲ್ಲಿದ್ದಾಗ ನಮ್ಮೂರಿನಿಂದ ಮೈಸೂರಿಗೆ ದೊಡ್ಡವರಿಗೆ ಐದು ರೂಪಾಯಿ ಇದ್ದ ನೆನಪು. ಈಗ ಅರೆ ಸುಖಾಸಿನ ಬಸ್ಸಿನಲ್ಲಿ ಮೈಸೂರಿಗೆ  ಇನ್ನೂರು  ರೂಪಾಯಿ  ದಾಟಿದೆ. ಅಂದರೆ ನಲುವತ್ತೆರಡು ವರ್ಷದಲ್ಲಿ ನಲುವತ್ತು ಪಾಲು ಹೆಚ್ಚಳ. ದಿಕ್ಕು ತಪ್ಪಿಸುವ ಹೊಲಸು ರಾಜಕೀಯದಲ್ಲಿ ಸಮಾಜಕ್ಕೆ ಸೋಲು.

ಹೋಲಿಕೆಗೆ ಕನಿಷ್ಟ ವೇತನ ಇನ್ನೊಂದು ಉತ್ತಮ ಮಾನದಂಡ. ಅಮೇರಿಕದಲ್ಲಿ ಕಳೆದ ತಿಂಗಳು ಘಂಟೆಗೆ ಏಳು ಕಾಲು ಡಾಲರ್ ತಲಪಿದ ಕನಿಷ್ಟ ವೇತನ ಇಪ್ಪತ್ತ ನಾಲ್ಕು ವರ್ಷ ಹಿಂದೆ ನಾಲ್ಕು ಡಾಲರ್ ಆಗಿತ್ತು. ಅದರಲ್ಲೂ ಒಂದು ಡಾಲರ್ ನಲುವತ್ತು ಸೆಂಟ್ಸ್ ಕಳೆದ ಎರಡು ವರ್ಷಗಳಲ್ಲಿ ಏರಿದ್ದು. ನಮ್ಮಲ್ಲಿ ಇದೇ ಅವದಿಯಲ್ಲಿ ಕೆಲಸಗಾರರ ವೇತನ ಕನಿಷ್ಟ ಹತ್ತು ಪಟ್ಟು ಹೆಚ್ಚಿದೆ.

ಸಮಯ ಹೋದಂತೆ ನಮ್ಮ ರೂಪಾಯಿ ದುರ್ಬಲವಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ.  ನಾನು ಅಂದು  ಪ್ರವಾಸ ಕೈಗೊಂಡಾಗ ನಮಗೆ ವಿದೇಶಿ ವಿನಿಮಯ 520 ಡಾಲರ್ ಸಿಕ್ಕಿತ್ತು. ಐದುನೂರು ಬಾಂಕಿನಲ್ಲಿ ಮತ್ತು ಇಪ್ಪತ್ತು ವಿಮಾನ ನಿಲ್ದಾಣದಲ್ಲಿ. ಆಗ ದರ ಸುಮಾರು ಹನ್ನೆರಡುವರೆ ರೂಪಾಯಿ ಇದ್ದು ಸ್ವಲ್ಪ ಹೆಚ್ಚಿಗೆ ವಿನಿಮಯವನ್ನು ಮುಂಬಯಿಯ ಕಡಲತೀರದ ಕೋಟೆ ಪ್ರದೇಶದ ಗೂಡಂಗಡಿಯಲ್ಲಿ   ಡಾಲರೊಂದಕ್ಕೆ    ಇಪ್ಪತ್ತು  ಪೈಸೆ  ಹೆಚ್ಚು  ಕೊಟ್ಟು    ಖರೀದಿಸಿದ್ದೆ.  ಇಪ್ಪತ್ತ ನಾಲ್ಕು ವರ್ಷ ಅನಂತರ ಇಂದು ಡಾಲರ್ ಎಂದರೆ ನಲವತ್ತೆಂಟು ರೂಪಾಯಿ.

Saturday, August 01, 2009

ದರ್ಮಾರ್ಥ ಕುಡಿಯುವ ನೀರು -ನ್ಯೂಯೋರ್ಕ್ ಪಟ್ಟಣದಲ್ಲಿ ಆಂದೋಲನ

 ಬಾಟಲಿಯಲ್ಲಿ ಕುಡಿಯುವ ನೀರು ಹಾಗೂ ಕೋಲಾದಂತಹ ತಂಪು ಪಾನಿಯಗಳ ಬಳಸುವುದು ನಮ್ಮಲ್ಲಿ ಪ್ರತಿಷ್ಟೆಯ ವಿಷಯವಾಗುತ್ತಿದೆ. ಪತ್ರಿಕೆಗಳಲ್ಲಿ ಟಿವಿಯಲ್ಲಿ ಮೀಟಿಂಗುಗಳ ಚಿತ್ರಗಳಲ್ಲಿ ಮೇಜುಗಳ ಮೇಲೆ ಕಾಣುವುದೇ ಬಿಸ್ಲೇರಿ ಬಾಟಲಿಗಳು. ಮಾದ್ಯಮದಲ್ಲಿ ತುಂಬಾ ಜಾಹಿರಾತು ಇರುವುದರಿಂದ ಇದೊಂದು ಅನಿವಾರ್ಯ ಅಂಶ ಎಂದು ಮನಸ್ಸಿಗೆ ಒತ್ತಡ ಹಾಕುತ್ತದೆ. ಬಾಟಲಿ ನೀರು ಪ್ರಪಂಚದಾದ್ಯಂತ ಕನಿಷ್ಟ ಅಸಲಿನ ಬಹಳ ಲಾಭದಾಯಕ ಉದ್ಯಮ.  

ಐದು ವರ್ಷಗಳ ಹಿಂದೆ ಬರಹಗಾರ್ತಿ ನೇಮಿಚಂದ್ರರು ಉದಯವಾಣಿ ಅಂಕಣದಲ್ಲಿ ಒಂದು ಘಟನೆಯನ್ನು ಪ್ರಸ್ತಾಪಿಸಿದ್ದರು. ಬೆಂಗಳೂರಿನ ಒಂದು ಹೊಸ ತಲೆಮಾರಿನ ಹೋಟೆಲಿಗೆ ಹೋದಾಗ ಅಲ್ಲಿ ಕುಡಿಯಲು ಬಿಸ್ಲೇರಿ ತಂದಿಟ್ಟರಂತೆ. ನೀರು ತಾ ಎಂದಾಗ ಸಾದ್ಯವಿಲ್ಲ ಎನ್ನುವ ಉತ್ತರ ಬಂತಂತೆ. ಆ ಹೋಟೇಲಿನ ಮೇಲ್ವಿಚಾಲಕರಿಂದ ಎಲ್ಲರೂ ಬಿಸ್ಲೇರಿಯನ್ನೇ ಅಪೇಕ್ಷಿಸುತ್ತಾರೆಂಬ ಸಮಜಾಯಿಶಿ.

ನಾನು ಹೋಟೇಲಿಗೆ ಹೋದಾಗ ಕುಡಿಯಲು ನೀರು ತಂದಿಡುವುದರ ಅಪೇಕ್ಷಿಸುವುದು ಗ್ರಾಹಕರ ಹಕ್ಕೆಂದು ಬಾವಿಸಿದ್ದೆ. ಆದರೆ ಈಗ ಪರೀಸ್ಥಿತಿ ಬದಲಾಗುತ್ತಿದೆ ಎನ್ನುವ ವಿಷಾದವನ್ನು ನೇಮಿಚಂದ್ರರು ವ್ಯಕ್ತಪಡಿಸಿದ್ದರು. ಪರದೇಶದಲ್ಲಿ ಅದು ಸಾಮಾನ್ಯ. ಒಪ್ಪುತ್ತೇನೆ. ಆದರೆ ನಮ್ಮಲ್ಲಿ ದರ್ಮಾರ್ಥ ಕುಡಿಯುವ ನೀರು ಹೋಟೇಲುಗಳು ಪೊರೈಸುತ್ತಿದ್ದವಲ್ಲ ಎಂದಿದ್ದರು.  

ನಮ್ಮಲ್ಲಿ ಬಾಯಾರಿದವರಿಗೆ ದಾರಿಹೋಕರಿಗೆ ನೀರು ಕೊಡುವುದು ಒಂದು ಸಮಾಜ ಸೇವೆ ಅನ್ನುವ ಬಾವನೆ ಇತ್ತು. ಮೊದಲು ಅದಕ್ಕಾಗಿ ಜನರನ್ನು ನಿಯಮಿಸಿದ್ದೂ ಉಂಟು. ಹಲವು ಪಟ್ಟಣಗಳ ಜನನಿಬಿಡ ಸ್ಥಳಗಳಲ್ಲಿ ರೈಲು ನಿಲ್ದಾಣದಲ್ಲಿ ಜೈನ ಸಂಘದವರು ನೀರ ಸೇವೆ ಮಾಡುವುದುಂಟು.

ಈಗ ಇದರ ಅನುಕರಣೆ  ದುಡ್ಡೇ  ದೊಡ್ಡಪ್ಪ  ಅನ್ನುವ   ಅಮೇರಿಕದಲ್ಲಿ. ಇದನ್ನು ಬಾಟಲಿ ನೀರಿನ ವಿರುದ್ದ ಅಂದೋಲನದ ಗೆಲುವು ಅನ್ನಬಹುದು. ಅಮೇರಿಕದ ನ್ಯೂಯೋರ್ಕ್ ಪಟ್ಟಣದಲ್ಲಿ ಹಲವು ಹೋಟೇಲುಗಳಲ್ಲಿ ನಿಮ್ಮ ಬಾಟಲಿಗೆ ದರ್ಮಾರ್ಥ ನೀರು ತುಂಬಿಸಿಕೊಳ್ಳ ಬಹುದೆನ್ನುವ ಪ್ರಕಟನೆ ಹೊರಗೆ ಪ್ರದರ್ಶಿಸುತ್ತಾರಂತೆ. ಆ ಹೋಟೇಲುಗಳನ್ನು ಅಂತರ್ಜಾಲದಲ್ಲೂ ಗುರುತಿಸಬಹುದು. ಹೋಟೇಲುಗಳಿಗೆ ಈ ಸೇವೆಗೆ ಬಿಟ್ಟಿ ಪ್ರಚಾರ ದೊರಕುವುದು ಲಾಭ.

ಅವರ ಬ್ಲೋಗ್ ತಾಣದಲ್ಲಿ ಹಲವು ನೀರಿಗೆ ಸಂಬಂದ ಪಟ್ಟ ಲೇಖನಗಳ ಕೊಂಡಿಗಳಿವೆ. ಹಲವು ಜತೆಗಾರ ಅಂಗಡಿಗಳ ಹಾಗೂ ನಾಯಿಗಳಿಗಾಗಿ   ತಯಾರಿಸುವ    ಬಾಟಲಿ ನೀರಿನಂತಹ ಅತಿರೇಕದ ಉತ್ಪನ್ನಗಳ ವಿವರಗಳಿವೆ.

ಇತರ ಗ್ರಹಗಳ ಜೀವಿಗಳು ನಮ್ಮಲ್ಲಿಗೆ ಬಂದರೆ …….. ಮೊದಲು ಒಂದು ಲೋಟ ನೀರು ಕೊಡಿ ಎಂದು ಬಿಸಿಲಿನಲ್ಲಿ ನಡೆದು ಕೊಂಡು ಬಂದ ಅತಿಥಿ ಮೊದಲು ಅಪೇಕ್ಷಿಸುವಂತೆ ನೀರನ್ನೇ ಕೇಳಬಹುದಂತೆ.