Friday, July 16, 2010

ಸೈಕಲ್ ಪರ ಜಾಹಿರಾತು

ಕಾರು ಓಡಿಸುವುದು ವಿಮಾನದಲ್ಲಿ ಪ್ರವಾಸ ಮಾಡುವುದು ಯಶಸ್ಸಿನ ಸಂಕೇತ ಎಂದು ನಮಗೆ ಚಿಕ್ಕಂದಿನಿಂದಲೇ ತಲೆಯಲ್ಲಿ ತುಂಬಲಾಗಿದೆ. ನಾವು   ನಮ್ಮ ಸಮಾಜದ ವಿದ್ಯಾಬ್ಯಾಸವನ್ನು ಮಾದ್ಯಮಕ್ಕೆ, ಜಾಹಿರಾತುಗಳಿಗೆ ವಹಿಸಿಕೊಟ್ಟು  ನಿಶ್ಚಿಂತೆಯಿಂದಿದ್ದೇವೆ. ಹೆಚ್ಚು ನೈಸರ್ಗಿಕ ಸಂಪನ್ಮೂಲಗಳ ಖರ್ಚು ಮಾಡಿದವನೇ ಜಾಣ ಅನ್ನುವ ಬಾವನೆ ಅವು ಮನದಲ್ಲಿ ಮೂಡಿಸುತ್ತವೆ. ಈ ಕ್ಷತ್ರಿಮ ಸಂದೇಶದ ಹಿಂದೆ ಸ್ವಾರ್ಥ ಹಿತಾಶಕ್ತಿಗಳ ಕೈವಾಡವಿರುವುದು ನಮಗೆ ಅರಿವಾಗುವುದೇ ಇಲ್ಲ. ಸೈಕಲಿನಲ್ಲಿ ಓಡಾಡುವವ ಸ್ವಾಭಿಮಾನ ಉಳಿಸಿಕೊಳ್ಳಲು ಹರಸಾಹಸ ಮಾಡುವ ಸನ್ನಿವೇಶ. ಪ್ರಪಂಚದ ಎಲ್ಲೆಡೆ ಪರೀಸ್ಥಿತಿ ಕೆಟ್ಟದಾಗಿಲ್ಲ ಅನ್ನುವುದಕ್ಕೊಂದು ಉದಾಹರಣೆ. .


ಡೆನ್ಮಾರ್ಕಿನಲ್ಲೊಂದು ಟಿವಿ ಜಾಹಿರಾತು. ಹೊಸ ಕಾರು ತೊಳೆಯುತ್ತಿರುವಾತ ಪಕ್ಕದ ಮನೆಯವನನ್ನು ಕೂಗಿ ಕರೆದು ತನ್ನ ಕಾರನ್ನು ಬಣ್ಣಿಸುತ್ತಾನೆ. ನನ್ನ ಕಾರಿನಲ್ಲಿ  ಎಬಿಎಸ್, ಹದಿನಾರು ಇಂಚು ರಿಮ್ ಮತ್ತು ಆರು ಗೇರು ಇತ್ಯಾದಿ ಇರುವುದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.



ಎರಡನೇಯ ವ್ಯಕ್ತಿ ಇಪ್ಪತ್ತೆಂಟು ಇಂಚು ರಿಮ್, ಎಂಟು ಗೇರು, ಪ್ರಕಾಶಮಯ ದೀಪಗಳು ಮತ್ತು ಕಂಪ್ಯುಟರ್ ಅಳವಡಿಸಿದ ತಿರುಗಣಿ. ನನ್ನ ಪತ್ನಿ ಮತ್ತು ಮಗಳೂ ಅವುಗಳನ್ನು ಹೊಂದಿದ್ದಾರೆ ಎನ್ನುವಾಗ ಕಾರಿನ ಯಜಮಾನ ತಲೆ ತಗ್ಗಿಸಿ ಮನೆಯೊಳಗೆ ಹೋಗುತ್ತಾನೆ. ಕಂಡು ಕುಶಿಯಾಗಿ ಹಂಚಿಕೊಳ್ಳೋಣ ಅನಿಸಿತು.


ವ್ಯಾಯಾಮ ನಮ್ಮ ದೇಹದಲ್ಲಿ ಆರೋಗ್ಯಕರವಾದ endorphins ಹೆಚ್ಚು ತಯಾರಾಗಲು ಪೂರಕವಾಗಿದ್ದು ನಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಮುಂದುವರಿದ (?) ದೇಶಗಳಲ್ಲಿ ಕಾರು ಮೇಲಿನ ಅವಲಂಬನೆಯಿಂದಾಗಿ ಜನಸಾಮಾನ್ಯರು ವ್ಯಾಯಾಮ ಮಾಡುವ ಹಕ್ಕೂ  ಕಳಕೊಳ್ಳುತ್ತಿದ್ದಾರೆ. ಮನುಷ್ಯನ ವಿನ್ಯಾಸವು  ತನ್ನ ಪ್ರಯತ್ನದಲ್ಲೇ ಮುಂದೆ ಚಲಿಸುವಂತೆ ಇದ್ದು ನಮಗೆ ಈಗ ಕಾರು ಮತ್ತು ತೈಲ ಕಂಪೇನಿಗಳ ಬೋಧನೆಯಿಂದಾಗಿ ಆ ವಿಚಾರ ಮರೆತು ಹೋಗಿದೆ. ದರ್ಮಾರ್ಥ ಲಭ್ಯವಿರುವ ವಸ್ತುವನ್ನು ಪೊಟ್ಟಣ ಕಟ್ಟಿ ಮಾರುವುದು ಬಂಡವಾಳಶಾಹಿ ಚಿಂತನೆಯ ಫಲವಾಗಿದೆ. ಉದಾಹರಣೆ ಬಾಟಲಿ ನೀರು, ವ್ಯಾಯಾಮದ ಜಿಮ್, ಕಾರು ಮತ್ತು ಬಟ್ಟೆ ಒಣಗಿಸಲು ಉರುಳು ಯಂತ್ರಗಳು ಈಗ ಹಳ್ಳಿಗಳೂ ಸೇರಿದಂತೆ ಎಲ್ಲೆಲ್ಲೂ ಲಭ್ಯ.

3 comments:

  1. ದೈಹಿಕ ವ್ಯಾಯಾಮದ ಅರಿವು ಪಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಮೂಡಿದೆ.

    ನಾವು ಅವರ ಮೂವತ್ತು ವರುಷಗಳ ಹಿಂದಿನ ಕೊಳ್ಳುಬಾಕ ಸಂಸ್ಜೃತಿಯನ್ನು ತಬ್ಬಿಕೊಳ್ಳಲು ಪ್ರಯತ್ನಿಸುತ್ತಾ ಇದ್ದೇವೆ.

    ಇಂಗ್ಲಂಡಿನಲ್ಲಿ ಇರುವ ನನ್ನ ಪರಿಚಯದ ಎಪ್ಪತ್ತು ವರ್ಷ ಪ್ರಾಯದ ಬಾಬ್ ಮತ್ತು ಮೇರಿ ದಂಪತಿಗಳು ಸಾಕಷ್ಟು ಶ್ರೀಮಂತರಾಗಿದ್ದರೂ ಭಾನುವಾರದ ದಿನ ಕಡ್ಡಾಯವಾಗಿ ಇಪ್ಪತ್ತು ಮೈಲಿ ಪಾದಯಾತ್ರೆ ಮಾಡುತ್ತಾ ಇದ್ದಾರೆ.

    ಭಾನುವಾರದಿನ ಅವರು ಯಾವ ಕಾರಣಕ್ಕೂ ತಮ್ಮ ಕಾರುಗಳನ್ನು ಉಪಯೋಗಿಸುವುದಿಲ್ಲ.

    ಬಾಬ್ ಹೈಸ್ಕೂಲಿನ ಮಕ್ಕಳಿಗೆ ಧರ್ಮಾಥವಾಗಿ ವಾರಕ್ಕೆ ನಾಲ್ಕು ದಿನ ಹಾಕಿ ಆಟದ ಕೋಚ್ ಆಗಿ ದುಡಿಯುತ್ತಿದ್ದಾರೆ.

    ಇದಕ್ಕೆ ಅವರ ಆರೋಗ್ಯ ಮತ್ತು ಪರಿಸರದ ಮೇಲಿನ ಕಾಳಜಿಯೇ ಕಾರಣ.

    ಅವರ ರೀತಿ ಅನುಕರಣೀಯ ಅಲ್ಲವೆ?

    ವಂದನೆಗಳು

    ಪೆಜತ್ತಾಯ ಎಸ್. ಎಮ್.

    ReplyDelete
  2. ಸೈಕಲ್ ಓಡಿಸೋದು ತುಂಬಾ ಒಳ್ಳೇದು..
    ದೇಹಕ್ಕೂ ವ್ಯಾಯಾಮ...ಮನಸ್ಸಿಗೂ..ಪರಿಸರಕ್ಕೂ ಹಿತ...
    ನಿಮ್ಮವ,
    ರಾಘು.

    ReplyDelete
  3. ಸೈಕಲ್ ತುಳಿದು ಎಷ್ಟೋ ವರ್ಷಗಳಾಯ್ತು ಅಂತ ಹೇಳಕ್ಕೆ ಬೇಜಾರಾಗುತ್ತೆ :(

    ReplyDelete