Tuesday, November 02, 2010

ಸೈಕಲ್ ಅಂಗಡಿಯಲ್ಲಿ

ಕಳೆದ  ವಾರ  ಸುನಿಲನ  ಜತೆ   ಸೈಕಲ್   ಅಂಗಡಿಗೆ  ಹೋಗಿದ್ದೆ. ನಿಜವಾಗಿ   ನಮ್ಮ  ಮುಂದೆ ಎರಡು  ಸಾದ್ಯತೆಗಳಿದ್ದವು. ಮೊದಲನೆಯದು   ಅವನ  ಹಳೆಯ ಸೈಕಲಿಗೆ  ಗೇರು ಅಳವಡಿಸುವುದು.  ಸುಮಾರು ಎಂಟು ನೂರು ರೂಪಾಯಿ  ಆಗುತ್ತದೆ  ಆದರೆ  ನಾವು  ಅದು  ಸರಿಯಾಗಿ ಕೆಲಸ ಮಾಡುವ  ಬಗೆಗೆ   ಗಾರಂಟಿ ಕೊಡುವುದಿಲ್ಲ  ಎಂದು    ಅಂಗಡಿಯವರು ಹೇಳಿದ ಕಾರಣ   ಆರು ಗೇರುಗಳ  ಒಂದು ಹೊಸ    ಹೀರೊ   ಸೈಕಲ್  ಕೊಂಡೆವು.  ಅನಂತರ  ನಾನು ಹಲವು  ಸೈಕಲ್ ಅಂಗಡಿಗಳಲ್ಲಿ ವಿಚಾರಿಸಲು  ಎಲ್ಲರೂ   ಅನಂತರ ಗೇರು ಅಳವಡಿಕೆ  ಬಗೆಗೆ    ಗಾರಂಟಿ ಇಲ್ಲವೆನ್ನುವ  ಮಾತು ಹೇಳುವುದನ್ನು ಕೇಳಿ ನನಗೆ  ನಿಜಕ್ಕೂ  ಆಶ್ಚರ್ಯ  ಉಂಟಾಗುತ್ತದೆ.    

ಇಪ್ಪತೈದು ವರ್ಷ ಹಿಂದೆ  ನಾನು ಮಂಗಳೂರಿನಲ್ಲಿ ಹೊಸ  ಸೈಕಲ್  ಕೊಂಡುಕೊಂಡಿದ್ದೆ.   ಆಗ  ಗೇರು ಅಳವಡಿಸಿದ  ಸೈಕಲ್  ಹೆಚ್ಚು  ಜನಪ್ರಿಯವಾಗಿರಲಿಲ್ಲ  ಮತ್ತು  ಅಂಗಡಿಗಳಲ್ಲಿ  ಮೊದಲೇ   ಗೇರು ಅಳವಡಿಸಿದ  ಸೈಕಲು  ಮಾರಾಟಕ್ಕೆ  ಲಭ್ಯವಿರಲಿಲ್ಲ.      ಸೈಕಲಿಗೆ   ಅಳವಡಿಸಲು   ಬೆಂಗಳೂರಿನ  ಅಂಗಡಿಯೊಂದರಿಂದ  ಇನ್ನೂರು ರೂಪಾಯಿ  ಕೊಟ್ಟು  ಬಿಡಿಬಾಗಗಳ  ತಂದು ನಾನು ಮನೆಯಲ್ಲಿಯೇ  ಜೋಡಿಸಿದ್ದೆ.  ಗೇರುಗಳ    alignment  ಸ್ವಲ್ಪ  ನಾಜೂಕು  ಕೆಲಸವಾದರೂ  ಸಾದ್ಯವಿಲ್ಲವೆನ್ನುವಷ್ಟು  ಕಷ್ಟಕರವಲ್ಲ.    ಐದು ಗೇರುಗಳ  ಅ ಸೈಕಲಿನಲ್ಲಿ  ದೆಹಲಿ  ವರೆಗೆ  ಹೋಗಿದ್ದೆ.

ನಮ್ಮ  ಸೈಕಲು ಅಂಗಡಿಯವರ  ಕೆಲಸದ ಗುಣಮಟ್ಟ ನೋಡುವಾಗ   ಕೆಲವೊಮ್ಮೆ   ನಿಜಕ್ಕೂ  ಬೇಸರವಾಗುತ್ತದೆ.  ನನಗೆ   ಸೊಂಟ  ಸಮಸ್ಯೆಯಿಂದಾಗಿ   ಬಗ್ಗಲು ಕಷ್ಟವಾಗುವುದರಿಂದ    ತರಿಕೆರೆಯಲ್ಲಿ   ಚಕ್ರ  ಉಜ್ಜುವ   ಸಮಸ್ಯೆಗೆ ಕಾರಣ  ಗುರುತಿಸಲು  ಕಷ್ಟವಾಯಿತು.  ಆಗ   ಸುತ್ತುಮುತ್ತಲು ಸೇರಿದ ಜನ  ಸಹಾಯ ಮಾಡುವ  ಬದಲು ತಲೆ ತಿನ್ನುತ್ತಾರೆ.       ಗಡ್ಡದಾರಿ  ಸೈಕಲ್ ಅಂಗಡಿಯವ ಸುತ್ತಿಗೆ ಸ್ಪಾನರ್  ಹಿಡಿದುಕೊಂಡು   ಬಂದು  ಅಕ್ಸಲ್  ಬೋಲ್ಟ್  ಸಡಿಲ ಮಾಡಿ ಗಟ್ಟಿ ಮಾಡಿ  ದೊಡ್ಡ  ಮೊತ್ತಕ್ಕೇ   ಕೈಯೊಡ್ಡಿದ.   ಅದರೆ  ಸಮಸ್ಯೆ    ಮಾತ್ರ   ಹಾಗೆ   ಉಳಕೊಂಡಿತ್ತು.   ಸಮಸ್ಯೆ ಪರಿಹಾರಕ್ಕೆ  ನೈಜ ಪ್ರಯತ್ನ  ಮಾಡುತ್ತಿದ್ದರೆ  -  ಬಗ್ಗಿ    ನೋಡಿದರೆ   ಟೈರ್  ಉಜ್ಜುವುದು  ಸಾಮಾನು ಹೊತ್ತಿರುವ   ಕಾರಿಯರಿನ  ಬದಿಯೆಂದು  ಅವನಿಗೆ    ಅರ್ಥವಾಗುತಿತ್ತು.   


ಅಂತೂ  ನಮ್ಮ  ಸೈಕಲ್  ರಿಪೇರಿಯವರ  ಕೆಲಸದ ಗುಣಮಟ್ಟ ನೋಡುವಾಗ  ಈ  ಚಿತ್ರ  ನೆನಪಾಗುತ್ತದೆ.   ಪರದೇಶಗಳಲ್ಲಿ  ಸೈಕಲಂಗಡಿಯವರು, ರಿಪೇರಿಯವರು  ಸ್ವತಹ  ಸೈಕಲ್ ಬಳಸುತ್ತಾರೆ.  ನಮ್ಮವರಿಗೆ  ನಿತ್ಯ   ಬಳಸಲು  ಕೀಳರಿಮೆ  ತಡೆಯೊಡ್ಡುತ್ತದೆ.  ಅವರು  ವ್ಯಾಪಾರ ಮಾಡುವುದು ಮಾತ್ರ.

3 comments:

Nanda Kishor B said...

the last point what you mentioned is really true....

Anonymous said...

೧೯೭೬ರ ಸುಮಾರಿಗೆ ನಾನೊಂದು ಗೇರಿನ ಸೈಕಲು ಖರೀದಿಸಿದ್ದೆ. ನನ್ನ ಪ್ರಾಯದ ಸೊಕ್ಕಿನಲ್ಲಿ ಅದು ಸುಖವೋ ಅಲ್ಲವೋ ಎಂದು ತಿಳಿದಿರಲಿಲ್ಲ! ಅದಕ್ಕೂ ಹೆಚ್ಚಿಗೆ ನನ್ನ ಸೂಕ್ಷ್ಮ ಆರ್ಥಿಕತೆಗೆ ಆ ಸೈಕಲ್ ಬಲುದೊಡ್ಡ ಹೂಡಿಕೆ ಎಂದು ಭಯ ಹುಟ್ಟಿ ಪುತ್ತೂರಿನ ಮಾವನಿಗೆ ಮಾರಿಬಿಟ್ಟೆ! ಉಳಿದಂತೆ ನಾನು ತುಳಿದದ್ದೆಲ್ಲಾ (ಹಗಲಿನ ಅರ್ಧ ಭಾಗದಲ್ಲಿ ತಮ್ಮ, ಆನಂದ ಮೈಸೂರಿನಿಂದ ಮಡಿಕೇರಿಗೆ ಬಾಡಿಗೆ ಸೈಕಲ್ ಮೆಟ್ಟಿಕೊಂಡು ಬಂದಾಗ, ಬಾಡಿಗೆ ಉಳಿಸುವ ಬುದ್ಧಿವಂತಿಕೆಯಲ್ಲಿ ಉಳಿದರ್ಧ ಹೊತ್ತಿನಲ್ಲಿ ನಾನದನ್ನು ಬಿಟ್ಟುಕೊಂದು ಮೈಸೂರು ತಲಪಿದ್ದೆಲ್ಲಾ)ಸಾಮಾನ್ಯ ಸೈಕಲ್ಲುಗಳೇ. ಹಾಗಾಗಿ ಬ್ಯಾಟರಿ ಸಹಾಯದ ತ್ರಿಚಕ್ರಿಯಾಗಲೀ ಈಗ ಸುನಿಲನ ಆರುಗೇರಿನ ದ್ವಿಚಕ್ರಿಯಾಗಲೇ ನನಗೆ ಪೂರ್ತಿ ಅರ್ಥವಾಗುವುದಿಲ್ಲ. ಆದರೆ ‘ಅಸಾಮಾನ್ಯವಾದ್ದದ್ದನ್ನು ಮಾಡುವ ಛಲ’ ಇದೆಯಲ್ಲಾ ಅದಕ್ಕೆ ನನ್ನ ಪೂರ್ಣ ಅಂಕ ಉಂಟು. ಸುನಿಲನ ಸಾಹಸ ಸರಣಿಗೆ ನನ್ನ ಮುಂಗಡ ಅಭಿನಂದನೆಗಳು.
ಅಶೊಕವರ್ಧನ

Pejathaya said...

ಪ್ರೀತಿಯ ಗೋವಿಂದ್

ಹಿಂದೆ Highway Men ಅಂತ ಕರೆಯಲ್ಪಡುವ ದರೋಡೆಕೋರರು ಇದ್ದರಂತೆ! ಈಗ ಅವರ ಬದಲಿಗೆ Highway Mechanics.

ಇದುನನ್ನ ಸ್ವಂತ ಅನುಭವ ಕೂಡಾ!

- ಪೆಜತ್ತಾಯ ಎಸ್. ಎಮ್.