ಒಬಾಮ ಗೆದ್ದ ಎಂದಾಕ್ಷಣ
ನನಗೆ ಭಾರಿ ಸಂತಸವೇನೂ ಆಗಲಿಲ್ಲ.
ಆದರೆ ತಮ್ಮ
ವ್ಯಾಪಾರಕ್ಕೆ ತೊಂದರೆ ಎಂದು ನಮ್ಮ ಸಾಫ್ಟ್ ವೇರ್
ಧನಿಗಳಿಗೆ ಆದಂತೆ ಬೇಸರವೂ
ಆಗಲಿಲ್ಲ. ಈ ಗೆಲುವಿನಿಂದಾಗಿ ನಾವಿರುವ ಈ ಪ್ರಪಂಚ ಒಂದು ಕಂಟಕದಿಂದ
ಪಾರಾದದ್ದು ಮಾತ್ರ ಖಂಡಿತ ಎನ್ನಬಹುದು.
ಪ್ರಪಂಚ ಚಪ್ಪಟೆಯಾಗಿದೆ ಎನ್ನುವ
ಹಲವು ಒಬಾಮ ವಿರೋದಿ ಪಕ್ಷದ ಬೈಬಲ್ ಪಂಡಿತ ದುಷ್ಟರು
ಮಣ್ಣುಮುಕ್ಕಿದ್ದೂ ಸಂತಸದ ವಿಚಾರ
ಈ ಸಲ ಚುನಾವಣೆಯಲ್ಲಿ ನಿರ್ಣಾಯಕ
ತಿರುವು ಕೊಟ್ಟದ್ದು ಸಾಂಡಿ ಚಂಡಮಾರುತ. ಅಷ್ಟರ ವರೆಗೆ
ಎರಡೂ ಪಕ್ಷದವರೂ ಭೂಮಿ ಬಿಸಿಯಾಗುತ್ತಿರುವ ವಿಚಾರ ಪ್ರಚಾರದಿಂದ ಹೊರಗಿಟ್ಟಿದ್ದರು. ಒಬಾಮ ಉತ್ತರ
ದ್ರುವದ ಹಿಮಕವಚ ಕರಗಿ ಸಮುದ್ರ ಮೇಲೇರುವುದನ್ನು ತಡೆಗಟ್ಟುವುದಾಗಿ ಹೇಳಿದ್ದ
ಮಾತು ರೊಮ್ನಿ ಲೆವಡಿ ಮಾಡಿದ್ದ. ಕೊನೆಗೆ
ಚಂಡಮಾರುತ ಅಪ್ಪಳಿಸುತ್ತದೆ ಎನ್ನುವಾಗ
ಎರಡೂ ಅಭ್ಯರ್ಥಿಗಳು ಪೂರ್ವ ಕರಾವಳಿಯ
ಪ್ರಚಾರ ತಿರುಗಾಟವನ್ನು
ರದ್ದುಪಡಿಸಿದರು.
ಆದರೆ ಚಂಡಮಾರುತ ಅಪ್ಪಳಿಸಿದಾಗ -
ಒಬಾಮ ಚುರುಕಾದ. ಪರಿಹಾರ ಒದಗಿಸಿದ. ಸಮುದ್ರದ
ಅಬ್ಬರದ ದಿನ ಅಪ್ಪಳಿಸಿದ ಚಂಡಮಾರುತ
ಅಪಾರ ಹಾನಿ ಉಂಟುಮಾಡಿತು.
ನ್ಯುಯೊರ್ಕ್ ಪಟ್ಟಣದ ನಿವಾಸಿಗಳು ಶಿಲಾಯುಗಕ್ಕೆ ತಳ್ಳಲ್ಪಟ್ಟ ಕಥೆ ನಾಗೇಶ ಹೆಗ್ಡೆಯವರ
ಪ್ರಜಾವಾಣಿ ಅಂಕಣ ಚೆನ್ನಾಗಿ ಚಿತ್ರಿಸುತ್ತದೆ.
ಆ ಆನೆ ಪಕ್ಷದ ಹಲವು ಪುಡಾರಿಗಳು ಮಹಿಳೆಯರ ಹಕ್ಕಿನ ವಿರುದ್ದ
ಯುದ್ದವನ್ನೇ ಸಾರಿದ್ದರು. ಅತ್ಯಾಚಾರಕ್ಕೆ
ಒಳಗಾಗಿ ಜನಿಸಿದ ಮಗು ಸಹಾ ದೇವರ ಕೊಡುಗೆ
/ ಅತ್ಯಾಚಾರವೇ ಮಹಿಳೆಯ ವಿರುದ್ದ ಹಿಂಸೆ. ಪುನಹ
ಗರ್ಬಪಾತ ಎನ್ನುವ ಹಿಂಸೆಗೆ ಮಹಿಳೆಯ ಒಳಪಡಿಸುವುದು
ತಪ್ಪು / ಅತ್ಯಾಚಾರದಲ್ಲಿ ಮಹಿಳೆಯ
ಶರೀರ ತನ್ನ ಕಾಪಾಡಿಕೊಳ್ಳುತ್ತದೆ ಇತ್ಯಾದಿ
ನುಡಿಮುತ್ತು ಉದುರಿಸಿದ ಪುಡಾರಿಗಳನ್ನೆಲ್ಲ ಮತದಾರರು ಮನೆಗೆ ಕಳುಹಿಸಿದ್ದಾರೆ.
ಅಮೇರಿಕದಲ್ಲಿ ನವೆಂಬರ್ ಮೊದಲ ವಾರ ಗಡಿಯಾರ ಹಿಂದಕ್ಕಿಡುವ ಪರಿಪಾಠ. ಸೆಕೆಗಾಲದಲ್ಲಿ ಮುಂದಿಡುವ ಇದನ್ನು daylight saving time ಅನ್ನುತ್ತಾರೆ. ರೊಮ್ನಿಯ ವರ್ತನೆ ಬಗೆಗೆ ಚಿಂತನೆಗೆ ಹಚ್ಚುವ ಚಿತ್ರವೊಂದನ್ನು ಇಲ್ಲಿ ಹಾಕಿದ್ದೇನೆ.
ಕಳೆದ ವಾರ ಬೆಂಗಳೂರಿಗೆ ಬಂದ ಸ್ಟೆಫನ್ ಹಾರ್ಪರ್
ಕೆನಡಾ ದೇಶದ ಜನರ ಪ್ರತಿನಿಧಿ, ಪ್ರದಾನಿ ಎನ್ನುವ ಬದಲು ತೈಲ ಕಂಪೇನಿ
ನೌಕರ ಎಂದರೆವ್ ಹೆಚ್ಚು ಸಮಂಜಸ. ಸಾವಿರಾರು ಎಕ್ರೆ ಕಾಡು ಕಡಿಸಿ ತೈಲ ಮರಳಿನ ಗಣಿಗಾರಿಕೆಗೆ ಪ್ರೋತ್ಸಾಹಿಸಿದ
ಮಹಾನುಬಾವ. ವಿರೊಧ ವ್ಯಕ್ತಪಡಿಸಿದ ವಿಜ್ಞಾನಿಗಳಿಗೆ ಪರಿಸರವಾದಿಗಳಿಗೆ ಅಪಾರ ಹಿಂಸೆ ಕೊಟ್ಟವ.
ಆದರೆ ರಾಜಕಾರಣಿ ಅಲ್ಲವೇ ! ಕೆನಡದಲ್ಲೂ ಮತದಾನ ಹಕ್ಕಿನ ಕನ್ನಡಿಗರಿದ್ದಾರೆ. ಹಾಗೆ ಅವರಿಗೆಲ್ಲ ಫೋಟೊ ತೋರಿಸಲು ಈ ಅಸಾಮಿ ಇಲ್ಲಿ ದೇವಸ್ಥಾನಕ್ಕೂ ಬೇಟಿ ಕೊಡುತ್ತಾನೆ.
ಆದರೆ ರಾಜಕಾರಣಿ ಅಲ್ಲವೇ ! ಕೆನಡದಲ್ಲೂ ಮತದಾನ ಹಕ್ಕಿನ ಕನ್ನಡಿಗರಿದ್ದಾರೆ. ಹಾಗೆ ಅವರಿಗೆಲ್ಲ ಫೋಟೊ ತೋರಿಸಲು ಈ ಅಸಾಮಿ ಇಲ್ಲಿ ದೇವಸ್ಥಾನಕ್ಕೂ ಬೇಟಿ ಕೊಡುತ್ತಾನೆ.
ಈ ಹಾರ್ಪರ್ ಅವನನ್ನು ಜೋರ್ಜ್ ಬುಸ್ನ ಕಿರಿ ತಮ್ಮ
ಎನ್ನಬಹುದು. ಅಂದು ಬುಸ್ ಇರಾಕ್ ದಾಳಿ ಮಾಡಿದ. ಅದರಲ್ಲಿ ರಾಜಕಾರ್ಯದ ಜತೆ ಸ್ವಕಾರ್ಯವೂ ಸೇರಿತ್ತು. ಟೆಕ್ಸಾಸ್ ಪ್ರಾಂತ್ಯದ ಬುಶ್ ಕುಟುಂಬಕ್ಕೆ ತೈಲ ವ್ಯಾಪಾರ ಸಂಪರ್ಕವಿದೆ. ಇಂದು ಈ ಮನುಷ್ಯ
ಕೆನಡದೊಳಗಿನ ಆದಿವಾಸಿಗಳ ಬೂಮಿ ಲಗಾಡಿ
ತೆಗೆಯುತ್ತಿದ್ದಾನೆ. ಟಾರ್ ಮರಳಿನ ಗಣಿಗಾರಿಕೆ ಬಹಳ ಗಲೀಜು. ಎರಡು ಟನ್ ಮರಳು ಪ್ಲಸ್ ಐದು ಟನ್ ನೀರು ಕುದಿಸಿದರೆ ಒಂದು ಬಾರಲ್ ತೈಲ ದೊರಕುತ್ತದೆ. ಉಳಿದ ಕಶಾಯ ಯಾವುದೇ ಮುಲಾಜಿಲ್ಲದೆ ನದಿ ನೀರಿಗೆ ಬಿಸಾಕುತ್ತಾರೆ.
ಬಾರತ ಬಯಲು ಶೌಚಾಲಯ ಪದ್ದತಿ
ಅನುಸರಿತ್ತಿರಬಹುದು. ಜಗತ್ತಿನ ನಾಗರಿಕರು ಪತ್ರಿಕೆಗಳು ಅಣಕಿಸಬಹುದು. ಆದರೆ ಈ ಅನಾಮಿಕ ತೈಲ ಕಂಪೇನಿಗಳು
ಜಗತ್ತನ್ನೇ ತಮ್ಮ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿವೆ. ಹೊಗೆ ಹಾಗೂ ಮಲೀನತೆಯನ್ನು
ಪರೀಸರಕ್ಕೆ ಬೀಸಾಕುತ್ತಿವೆ. ಅಪಾರ ಹಾನಿ ಉಂಟು ಮಾಡುವುದು ಅಗೋಚರವಾಗಿಯೇ ಉಳಿದುಬಿಡುತ್ತದೆ.
ಈ ಮದ್ಯೆ ಒಂದು ಸಂತಸದ ವಿಚಾರ.
ಅಮೇರಿಕದ ಹಲವು ಕಾಲೇಜುಗಳ ನಿಯಂತ್ರಣದಲ್ಲಿ ಅಪಾರ ಬಂಡವಾಳ ಇರುತ್ತದೆ. ಹಿಂದೆ ಬಹುಜನ ದಾನಿಗಳು ಅಮೇರಿಕದ ಕಾಲೇಜುಗಳ ನಿರ್ವಹಣೆಗೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಬಹಳಷ್ಟು ದಾನ ಇತ್ತಿದ್ದಾರೆ. ಅವೆಲ್ಲ
ಈಗ ಕಾಲೇಜುಗಳ ಹೆಸರಿನಲ್ಲಿ
ಶೇರುಮಾರುಕಟ್ಟೆಯಲ್ಲಿ ಇರುತ್ತದೆ. ಹಿಂದೆ ದಕ್ಷಿಣ ಆಪ್ರಿಕದಲ್ಲಿ
ವರ್ಣಬೇದ ನಾಶಮಾಡಲು ಕಾಲೇಜುಗಳು
ಅಲ್ಲಿನ ಕಂಪೇನಿಗಳ ಮೇಲೆ ಹೂಡಿದ್ದ ಬಂಡವಾಳ
ಹಿಂತೆಗೆತವೂ ಬಹು ನಿರ್ಣಾಯಕ ಪಾತ್ರವಹಿಸಿದೆ.
ಈಗ ಅದೇ ಮಾದರಿ ತೈಲ ಕಂಪೇನಿ
ವಿರೋದ ಅನುಸರಿಸಲು ಪರಿಸರ ಹೋರಾಟ ಗುಂಪು ಕರೆ ಇತ್ತಿದೆ
ಮಾತ್ರವಲ್ಲ ಸಫಲವೂ ಆಗುತ್ತಿದೆ.
ಪ್ರಪಂಚದ ಜನಜೀವನ ಸಂಪೂರ್ಣ ನಾಶವಾಗುವ
ಮಿತಿಯ ಐದು ಪಟ್ಟು ಪೆಟ್ರೊಲ್, ಕಲ್ಲಿದ್ದಲು ದಾಸ್ತಾನು ಇದೆ. ಆ ಕಂಪೇನಿಗಳ
ಮಾರುಕಟ್ಟೆ ಬೆಲೆ ಆ ದಾಸ್ತಾನಿನ ಮೌಲ್ಯವನ್ನೂ
ಒಳಪಟ್ಟಿದೆ. ಅಕಸ್ಮಾತ್ ಆಷ್ಟೂ ಇಂದನ ದಹಿಸಿದರೆ ಹಿಂದೆ ಬರಲಾಗದ ಶೋಚನೀಯ
ಸ್ಥಿತಿಗೆ ಪ್ರಪಂಚ
ತಲಪುತ್ತದೆ. ಉದಾಹರಣೆ ರಿಲಿಯನ್ಸ್
ಪಾಲುಬಂಡವಾಳ ಎಂಟುನೂರು ರೂಪಾಯಿ ಬೆಲೆ
ಈಗ ಆಂದ್ರದ ಕರಾವಳಿಯಲ್ಲಿರುವ ನೈಸರ್ಗಿಕ
ಅನಿಲದ ಮೌಲ್ಯವನ್ನೂ ಒಳಗೊಂಡಿದೆ.
ಗಣಿಗಾರಿಕೆ ಎಷ್ಟು ಶಕ್ತಿಶಾಲಿ ಎಂದರೆ ಎಡ್ಡಿಯ ಕಾಲದಲ್ಲಿ
ಕರ್ನಾಟಕದ ರಸ್ತೆಗಳಲ್ಲಿ ರೆಡ್ಡಿಯ ಲಾರಿಗಳ
ಹಾರಾಟ ನೆನಪಿಸಿಕೊಂಡರೆ ಸಾಕು. ಮೊನ್ನೆ ಪ್ರಾಮಾಣಿಕ
ತೈಲ ಮಂತ್ರಿ ಜೈಪಾಲ ರೆಡ್ಡಿಯನ್ನು ಅಂಬಾನಿ
ಎಂಬ ಎಣ್ಣೆ ದೊರೆ ಕೆಳಗಿಳಿಸಿದ್ದು ನೆನಪಿಸಿಕೊಳ್ಳಬಹುದು. ಈ ಸನ್ನಿವೇಶ ಇಂದು
ಇಡೀ ಪ್ರಪಂಚದಲ್ಲಿದೆ. ಅಂತೂ ಒಬಾಮ ಗೆಲುವು ಪರಿಸರಕ್ಕೆ ಖಂಡಿತ ಲಾಭ. ಪುನಹ ಚುನಾವಣೆ ಎದುರಿಸುವ ಅನಿವಾರ್ಯತೆ ಇಲ್ಲದಿರುವ ಒಬಾಮ ಈಗಾಗಲೇ ದಿಟ್ಟ ಹೆಜ್ಜೆಗಳಿಡುವ ಲಕ್ಷಣ ತೋರಿಸಿದ್ದಾನೆ. :-)
http://www.iol.co.za/scitech/science/environment/obama-re-commits-to-climate-change-pledge-1.1419983#.UJ_D_uSDqzl
http://www.iol.co.za/scitech/science/environment/obama-re-commits-to-climate-change-pledge-1.1419983#.UJ_D_uSDqzl
1 comment:
Interesting tit bits.
S R Bhatta
ರಾಘವೇಂದ್ರ ಭಟ್, ಮೈಸೂರು
Post a Comment