ಹಿಮಾಲಯ ಪರ್ವತಗಳ ಮೇಲೆ ಅಪಾರ ಪ್ರಮಾಣದಲ್ಲಿ ಹಿಮಬೀಳುತ್ತದೆ. ಬೇಸಿಗೆಯಲ್ಲಿ ಆ ಹಿಮ ಕರಗಿ ನೀರಾಗಿ ಈ ಪರಿಸರದಲ್ಲಿ ಜನ್ಮ ತಾಳುವ ಏಳು ಬೃಹತ್ ನದಿಗಳಲ್ಲಿ ಹರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೂಮಿ ಉಷ್ಣಾಂಶದಿಂದಾಗಿ ಬೀಳುವ ಹಿಮ ರೂಪಿಸುವ ನೀರ್ಗಲ್ಲು ಗಣನೀಯವಾಗಿ ಕಡಿಮೆಯಾಗುತ್ತಿದ್ದು ಈ ನದಿಗಳ ದಡದಲ್ಲಿರುವ ೧.೩ ಬಿಲಿಯ ಜನರು ಸದ್ಯದಲ್ಲಿಯೇ ನೀರಿನ ಕೊರತೆ ಅನುಭವಿಸುವಂತಾಗಿದೆ.
ನೂರು ದಿನಗಳಲ್ಲಿ ಸ್ವೇಡನ್ ದೇಶದ ಕಾಪೆನ್ ಹಾಗನ್ ಪಟ್ಟಣದಲ್ಲಿ ಜಗತ್ತಿನ ರಾಜಕೀಯ ಮುಖಂಡರು ಸಭೆ ಸೇರಲಿದ್ದಾರೆ. ಇದರನ್ನು ಗಮನಸೇಳೆಯುವ ಅಂಗವಾಗಿ ಚೀನಾದ ಬೀಜಿಂಗಿನಲ್ಲಿರುವ ಭೂಮಿ ದೇವಾಲಯದಲ್ಲಿ ನೂರು ಮಂಜುಗಡ್ಡೆಯ ಮಕ್ಕಳ ವಿಗ್ರಹಗಳನ್ನು ನಿರ್ಮಿಸಲಾಗಿತ್ತು. ಭವಿಷ್ಯದ ಗಂಬೀರತೆಯನ್ನು ಸೂಚಿಸಲು ಕರಗುವ ಕರಗುತ್ತಿರುವ ವಿಗ್ರಹಗಳೇ ಸಾಕ್ಷಿ ಎನ್ನುವಂತಿತ್ತು.
ಈ ಸಭೆಯಲ್ಲಿ ಪ್ರಪಂಚದ ಮುಖ್ಯ ದೇಶಗಳು ಈ ಸನ್ನಿವೇಶವನ್ನು ಎದುರಿಸುವ ಬಗೆಗೆ ಗಂಬೀರ ಚರ್ಚೆ ನಡೆಸಲಿವೆ. ಭಾರತ ಮತ್ತು ಚೀನ ಈ ಸಮಾವೇಶದಲ್ಲಿ ಮುಖ್ಯ ಪಾತ್ರ ವಹಿಸಲಿದ್ದು ಅಮೇರಿಕ ಹಾಗೂ ಯುರೋಪಿಯನ್ ದೇಶಗಳೊಂದಿಗೆ ತಮ್ಮ ಪಾಲಿನ ನಿರ್ವಹಣೆ ಚರ್ಚಿಸಲಿವೆ. ಇದು ಪರೋಕ್ಷವಾಗಿ ಪ್ರಪಂಚದ ಆರು ಬಿಲಿಯ ಜನರ ಅಳಿವು ಉಳಿವಿನ ಪ್ರಶ್ನೆಯಾಗಿರುತ್ತದೆ.
ಪುಟ್ಟ ಮಗು ಕೊಡೆ ಹಿಡಿಯುವ ಮೂಲಕ ತನ್ನ ಪ್ರಯತ್ನ ಮಾಡುವುದೋ ? ಈ ಜಾಗತಿಕ ಆಂದೋಲನದಲ್ಲಿ ನೀವು ಸಹಾ ಕೈ ಜೋಡಿಸಬಹುದು. Greenpeace ತಾಣದಲ್ಲಿ ಸಹಿ ಹಾಕಬಹುದು. ರಾಜಕೀಯ ಮುಖಂಡರಿಗೆ ಒತ್ತಡ ಹಾಕಲು ಸಮಯ ಸಿಮಿತವಾಗಿದೆ. ತ್ವರೆ ಮಾಡಿ.
ಮೊನ್ನೆ ಯಾರೋ ಒಬ್ಬರು ಭೂಮಿಯ ಉಷ್ಣಾಂಶ ಹೆಚ್ಚುವುದಕ್ಕೆ ಪುರಾವೆಗಳಿಲ್ಲ. ಎಲ್ಲವೂ ಪರಿಸರವಾದಿಗಳ ವಿಜ್ನಾನಿಗಳು ಮಾಡುತ್ತಿರುವ ಅಂಕಿ ಸಂಖ್ಯೆಗಳ ದೊಂಬರಾಟ ಎಂದರು. ಅವರಿಗೆ ಅರ್ಥಮಾಡಿಸಲು ಈ ಚಿತ್ರ ತೋರಿಸಬೇಕಾಯಿತು.
Thursday, September 03, 2009
Subscribe to:
Post Comments (Atom)
No comments:
Post a Comment