Thursday, September 17, 2009

ತಮಿಳುನಾಡಿನಲ್ಲಿ ಕೃಷಿ ಸಲಹೆ ಕೊಟ್ಟರೆ “ದಂಡ”

ತಮಿಳುನಾಡು ಶಾಸಕರ ಆಲೋಚನೆ ಪ್ರಕಾರ ರೈತರಿಗೆ ಕೃಷಿ ಬಗೆಗೆ ತಿಳುವಳಿಕೆ ಸೊನ್ನೆ. ಅದುದರಿಂದ ಒಂದು ರೈತ ವಿರೋಧಿ ಮಸೂದೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಈ ಗಂಬೀರ ಪರಿಣಾಮದ ಮಸೂದೆಗೆ ಶಾಸಕರೆನ್ನುವ ಕುರಿಗಳು ಯಾವುದೇ ಚರ್ಚೆ ಇಲ್ಲದೆ ಕೈ ಎತ್ತಿಯೇ ಬಿಟ್ಟಿದ್ದಾರೆ. ಸುಳಿವು ಕೊಟ್ಟ ಸೆಲ್ವಂ ಎಂಬ ಮಾಜಿ ಸರಕಾರಿ ಅದಿಕಾರಿ ಹಾಲಿ ಸಾವಯುವ ಕೃಷಿಕ ಇದರ ಬಗೆಗೆ ಚೆನ್ನಾಗಿ ವಿವರಿಸಿದ್ದಾರೆ. Thanks Selvam.  

ಈ ಕಾನೂನು ಪ್ರಕಾರ ಕೃಷಿ ಸಲಹೆ ಕೊಡಲು ಹಕ್ಕು ಇರುವುದು ತಮಿಳುನಾಡಿನಲ್ಲಿ ಕೃಷಿ ಅಬ್ಯಾಸ ಮಾಡಿದವರಿಗೆ ಸಿಮಿತ. ಮೊನ್ನೆ ತೀರಿಹೋದ ಹಸಿರು ಕ್ರಾಂತಿ ಪಿತಾಮಹ ನೋರ್ಮನ್ ಬರ್ಲಾಗ್ ಅವರಿಗೆ ಸಹಾ ತಮಿಳು ರೈತರಿಗೆ ಸಲಹೆ ಕೊಡುವ ಯೋಗ್ಯತೆ ಇಲ್ಲ. ಉಳಿದವರು ಕೃಷಿ ಬಗೆಗೆ ಸಲಹೆ ಕೊಟ್ಟರೆ ಮೊದಲ ಬಾರಿ ಐದು ಸಾವಿರ ರೂಪಾಯಿ ಹಾಗೂ ಎರಡನೆಯ ಬಾರಿ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲ್ಪಡುತ್ತದೆ. ಮೂರನೆಯ ಬಾರಿ ಸಲಹೆ ಕೊಟ್ಟರೆ ಆರು ತಿಂಗಳು ಗೂಡು ವಾಸ ವಿಧಿಸುವರಂತೆ.

ನಮ್ಮ ಪರಂಪರೆಯ ಕೃಷಿ ಜ್ನಾನ ಹೆಚ್ಚೆಚ್ಚು ನಿರ್ಲಕ್ಷಿತವಾಗುವುದು ಸಮಾಜಕ್ಕೆ ಗಂಬೀರ ಅಪಾಯ. ತಮಿಳುನಾಡಿನ ಶಾಸನ ಕೃಷಿ ಪಾರಂಪರಿಕ ಜ್ನಾನ ಸಂಪೂರ್ಣ ನಿರ್ಲಕ್ಷಿಸುತ್ತದೆ. ತರಗತಿಯಲ್ಲಿಯೇ ಪ್ರಥಮ ಬಾರಿ ಬತ್ತದ ತೆನೆ ಕಂಡವ ಕೂಡ ರೈತ ಮಕ್ಕಳಿಂದ ಮೇಲು.

ಬಳಕೆದಾರರ ವೇದಿಕೆಯ ಡಾ ರವೀಂದ್ರನಾಥ ಐತಾಳರು ತಮ್ಮ ಉದಯವಾಣಿ ಅಂಕಣದಲ್ಲಿ ಅದುನಿಕ ವಿಜ್ನಾನ ಅಥವಾ ವೈದ್ಯ ವಿಜ್ನಾನ ಎಲ್ಲಿ ತಪ್ಪಿ ಬೀಳುವುದೆಂದು ಒಂದು ಕೂತೂಹಲಕರ ಉದಾಹರಣೆ ಕೊಟ್ಟಿದ್ದಾರೆ. ಇದು ಕೃಷಿಗೂ ಅನ್ವಯ. ಮಣ್ಣು ಇರುವುದು ಗಿಡ ಹಿಡಿದುಕೊಳ್ಳಲು ಮಾತ್ರ. ಒಳಸುರಿಗಳನ್ನೆಲ್ಲ ನಾವು ಹಾಕಿ ಬೆಳೆಸುತ್ತೇವೆ ಎಂದು ಬಹುಕಾಲ ರಸಾಯನಿಕ ಕೃಷಿಯ ದೋರಣೆಯಾಗಿತ್ತು.


ಶಿರಸಿಯ ಡಾ| ವೆಂಕಟ್ರಮಣ ಹೆಗಡೆಯವರು ತಾವು ಐದು ವರ್ಷ ಕೃಷಿ ವಿಚಾರ ಕಲಿತು ಪದವಿ ಪಡೆದದ್ದು. ನಮಗೆ ಡಾಕ್ಟರ್ ಕರೆದುಕೊಳ್ಳುವ ಹಕ್ಕುಂಟು ಹಾಗೂ ಮನುಷ್ಯರಿಗೆ ಚಿಕಿತ್ಸೆ ಕೊಡುವವರು ಕೆಂಪು ಚಿಹ್ನೆ ಮತ್ತು ಪಶು ವೈದ್ಯರು ನೀಲಿ ಚಿಹ್ನೆ ಬಳಸುವಂತೆ ನಾವು ಹಸುರು ಚಿಹ್ನೆ ಬಳಸುತ್ತೇವೆ ಎಂದು ಬಹಳ ಹಿಂದೆಯೇ ಹೇಳಿದ್ದಾರೆ. ಹಾಗೆ ತಮಿಳುನಾಡಿನ ಕಾನೂನು ಇವರನ್ನು ವೃತ್ತಿ ನಿರತ ಕೃಷಿ ತಜ್ನನೆಂದು ಗುರುತಿಸುತ್ತದೆ.

ಹೊಸತಾಗಿ ಮನೆಗೆ ಬಂದ ಸೊಸೆ ಎಲ್ಲರೂ ನನಗೆ ಹೊಂದಿಕೊಂಡರೆ ಗೃಹಶಾಂತಿ ಖಚಿತ ಎಂದಂತೆ ನಾವು ನಮ್ಮ ಕೃಷಿಯನ್ನು ಬಾಹ್ಯ ಒಳಸುರಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳುತ್ತಿದ್ದೇವೆ. ಎಲ್ಲ ಆರೋಗ್ಯ ಸಮಸ್ಯೆಗಳಿಗೂ antibiotics ಮದ್ದು ಎಂಬಂತೆ ಸ್ಥಳೀಯ ಪರೀಸ್ಥಿತಿಯನ್ನು ಪಾರಂಪಾರಿಕ ಪದ್ದತಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ.

ಪ್ರತಿಬಾರಿಯೂ ಬಿತ್ತನೆ ಬೀಜ ಮಾರುಕಟ್ಟೆಯಿಂದ ಖರೀದಿಸಬೇಕು. ಮುಂದಿನ ಬೆಳೆಗೆ ಕಾಪಾಡಬಾರದು ಎನ್ನುವ ಬೀಜ ಮಾರಾಟ ಕಂಪೆನಿ ರಕ್ಷಕ ಕಾನೂನಿನಂತೆಯೇ ಈ ಕಾನೂನು ಸಹಾ ರೈತರ ಹಿತಾಸಕ್ತಿಗೆ ಮಾರಕ. ಏಕೆಂದರೆ ಇಂದು ಸರಕಾರಿ ಅಧಿಕಾರಿಗಳ ವಿಜ್ನಾನಿಗಳ ನಿಷ್ಟೆ ಇರುವುದು ಒಳಸುರಿ ತಯಾರಿಸುವ ಬಹುರಾಷ್ಟ್ರೀಯ ಕಂಪೇನಿಗಳಿಗೆ. ಈ ಬೆಳವಣಿಕೆಯನ್ನು ಊಹಿಸುವಾಗ ರೈತರ ಭವಿಷ್ಯದ ಬಗೆಗೆ ಭಯ ಉಂಟಾಗುತ್ತದೆ.

3 comments:

Anonymous said...

ಪ್ರಿಯ ಗೋ
ಪುಸ್ತಕದ ಬದನೆಕಾಯಿಯೇ ಕೊದಿಲಿಗೆ ಲಾಯ್ಕು ಎಂಬ ಪುಡಾರೀಕರಣದ ಅತಿರೇಕವನ್ನು ತೋರಿಸಿಕೊಟ್ಟದ್ದಕ್ಕೆ ಕೃತಜ್ಞತೆಗಳು. ಆದರೆ ಮೂವತ್ನಾಲ್ಕು ವರ್ಷಗಳಿಗಿಂತಲೂ ಹೆಚ್ಚಿಗೆ ಪುಸ್ತಕೋದ್ಯಮವನ್ನೇ ಬುದ್ಧಿಪೂರ್ವಕವಾಗಿ ವೃತ್ತಿಯನ್ನಾಗಿ ನಡೆಸುತ್ತಿರುವ ನನಗೆ ನಿನ್ನೆ ಹುಟ್ಟಿದ ಮ್ಯಾನೇಜ್ಮೆಂಟ್ ಪದವೀಧರರು ಸಲಹೆ ಕೊಡುವುದು, ಇನ್ನೂ ಲೋಕಜ್ಞಾನಕ್ಕೆ ಕಣ್ಣು ತೆರೆಯದ ಅಕಾಡೆಮಿ, ಪ್ರಾಧಿಕಾರ, ಪ್ರಸಾರಾಂಗ ಮುಂತಾದ ಯಾರದೋ ಹಣದ ಅಧ್ಯಕ್ಷ/ ನಿರ್ದೇಶಕ ಎಂಬವರು ಹೇಗೆ ನಡೆಯಬೇಕೆಂದು ಆದೇಶ ಕಳಿಸುವುದು ಅಭ್ಯಾಸವಾಗಿ ನಿನ್ನ ಲೇಖನ ಹೆಚ್ಚು ಆಶ್ಚರ್ಯ ಉಂಟು ಮಾಡಲಿಲ್ಲ.
ಅಶೋಕವರ್ಧನ

Anonymous said...

S.M. PEJATHAYA ಬರೆಯುತ್ತಾರೆ

ಗೋವಿಂದ ಭಟ್ಟರೇ
ತಮ್ಮ ಬ್ಲಾಗ್ ನೋಡಿದೆ.
ಕೈಕಾಲು ನಡುಗ ಹತ್ತಿತು. ( ಸಿಟ್ಟಿನಿಂದ!)

ಕೃಷಿ ಸಲಹೆ ಸರಕಾರದ ಸ್ವತ್ತು?
ತಮಿಳು ನಾಡಿನ ಸರಕಾರದ ನೀತಿ ವಿಚಿತ್ರ.
ತಮಿಳು ನಾಡಿನ ಹೆಚ್ಚಿನ ಕೃಷಿ ಉದ್ಯಮಗಳು ನಾನು ಕಂಡಂತೆ ಹೆಚ್ಚಿನ ಪಾಲು ಅವರ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಪಾಠ ಕಲಿಸುತ್ತಾ ಇರುವ ಅಥವಾ ಕಲಿಸಿ ರಿಟಾಯರ್ ಆಗ ಜನರ ಕೈಯ್ಯಲ್ಲಿ ಇವೆ.

ಸಾಗುವಳಿ ಕೂಡಾ ಈ ಪಚ್ಚೆಡಿಗಳ ಸ್ವಂತ ಕ್ಶೇತ್ರ ಆಗಿಬಿಟ್ಟರೆ ನಾವು ಪಡ್ಚ!

ನಮ್ಮ ಕೃಷಿಗೆ ಆರು ಸಾವಿರ ವರುಷಗಳಿಗಿಂತಲೂ ಹೆಚ್ಚಿನ ಕಾಲಾವಧಿಯ ಇತಿಹಾಸ ಇದೆ. ಅಗ ವ್ಯವಸಾಯ ಇಲಾಖೆಗಳು ಇದ್ದುವೆ? ತಲತಲಾಂತರಗಳಿಂದ ಇಳಿದು ಬಂದ "ಅನುಭವ ಮತ್ತು ಜ್ಞಾನ" ನಮ್ಮ ರೈತಾಪಿಜನರಲ್ಲಿ ಇಂದಿಗೂ ಇದೆ.

ಇನ್ನು ನಾವೆಲ್ಲಾ " ಲೈಸನ್ಸ್ " ಪಡೆದು ಕೃಷಿ ಮಾಡುವ ದಿನ ಬರಬಹುದೇ?

ಹಿರಿಯಣ್ಣನ ರಾಜ್ಯ ಮಾಡಿದ ಕಾನೂನುಗಳು ನಮ್ಮ ಚಿನ್ನ ತಂಬಿಯ ರಾಜ್ಯದಲ್ಲೂ ಜ್ಯಾರಿ ಆದಾವೇ?

ಜೀವನದಲ್ಲಿ ಎಂದೂ ಒಂದೆಕರೆ ಸ್ವಂತವಾಗಿ ಸಾಗುವಳಿ ಮಾಡದ ಹಲವು ಕೃಷಿ ಡಾಕ್ಟರೇಟುಗಳು ನಮ್ಮಲ್ಲಿ ಇದ್ದಾರೆ. ಇನ್ನು ಅವರು ನುಡಿದಂತೆ ನಾವು ನಡೆಯ ಬೇಕಾದರೆ?

ನಮ್ಮ ಸ್ವಾತಂತ್ರ್ಯ ಎಲ್ಲಿ ಅಂತ ಹುಡುಕ ಬೇಕಾದೀತು.

ನಾನು ಈ ಜನ್ಮದಲ್ಲಿ ಕೃಷಿಯ ಕೆಲಸ ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ಆದರೂ ಮರ್ಯಾದೆಯಿಂದ ಮತ್ತು ಹೆಮ್ಮೆಯಿಂದ ಬಾಳಿ ಬದುಕಿದ್ದೇನೆ.

ಉತ್ತಮ ಪಾಯಿಂಟ್ ಎತ್ತಿಕೊಂಡಿದ್ದೀರಿ. ಹೀಗೇ ಈ ಬಗ್ಗೆ ಸ್ವಲ್ಪ ವಿಚಾರ ವಿನಿಮಯ ಆಗಲಿ! - ಎಂತ ನನ್ನ ಆಸೆ.


ಕೇಸರಿ ಪೆಜತ್ತಾಯ.

Unknown said...

hai,
good blog write up. now the TN governmnet has with hold the amendment due to pressure from farmers lobby. Vandana Shiva strongly criticized and the govt taken note of it and teporarly with hold the legislation. Good decision by the TN govt