ವಾರದ ಹಿಂದೆ ಕಥೆಗಾರ ವಸುದೇಂದ್ರರು ನಮ್ಮಲ್ಲಿಗೆ ಬಂದಿದ್ದರು. ಅವರೊಂದಿಗೆ ಮಾತನಾಡುತ್ತಾ ತುಳಿಯುವುದರೊಂದಿಗೆ ಈ ಸಹಾಯಕ ನೂಕುಬಲದ ಉಪಯುಕ್ತತೆ ವಿವರಿಸಿದೆ. ಉದಾಹರಣೆಯಾಗಿ ನಾನು ಯಾವುದೇ ಜಾಗದಿಂದ ಪಟ್ಟಣದೊಳಗಿನ ಇನ್ಯಾವುದೇ ಜಾಗಕ್ಕೆ ಕಾರು ಅಥವಾ ಮೊಟರ್ ಸೈಕಲುಗಳಿಗೆ ಬೇಕಾಗುವ ಸಮಯದ ಒಂದೂವರೆಯಿಂದ ಎರಡು ಪಾಲಿನಷ್ಟು ಹೊತ್ತಿನಲ್ಲಿ ನನ್ನ ಟ್ರೈಕಿನಲ್ಲಿ ಹೋಗಲು ಸಾದ್ಯ ಎಂದು ಹೇಳಿದ್ದೆ. ಅದರೆ ಹೋಲಿಕೆ ಹೆಚ್ಚಿನ ಪಾಲು ಅಗಲವಾದ ಎಂಬತ್ತು ಕಿಮಿ ಸಾದ್ಯವಿರುವ ಹೆದ್ದಾರಿಯಾದರೆ ಮಾತ್ರ ಅಸಂಬವ ಎಂದೂ ಹೇಳಿದ್ದೆ.
ಅವರನ್ನು ನನ್ನ ಅಪ್ತ ಗೆಳೆಯ ನಾರಾಯಣ ಮೂರ್ತಿ ಹದಿನೈದುವರೆ ಕಿಮಿ ದೂರದ ಮರಕಿಣಿಯಿಂದ ಕರೆ ತಂದಿದ್ದರು. ನಾರಾಯಣ ಮೂರ್ತಿಗೆ ಈ ದೂರ ಕ್ರಮಿಸಲು ಸುಮಾರು ಇಪ್ಪತೈದು ಮೂವತ್ತು ನಿಮಿಷ ಬೇಕಾಗುವುದಂತೆ. ಮೊನ್ನೆ ಟ್ರೈಕಿನಲ್ಲಿ ನಾನು ನಲುವತ್ತೊಂಬತ್ತು ನಿಮಿಷಗಳಲ್ಲಿ ನಮ್ಮ ಮನೆಯಿಂದ ಅಲ್ಲಿಗೆ ತಲಪಿದ್ದೆ. ಉದ್ದಕ್ಕೂ ರಸ್ತೆ ವಾಹನಗಳ ಓಡಾಟಕ್ಕೆ ಪೂರಕವಾಗಿತ್ತು. ಹೊಂಡ ಗುಂಡಿಗಳ ಮುಚ್ಚಿದರೂ ಅದರ ಮೇಲೆ ಮಹಾಕಾಯ ಹೊರಳದ ಕಾರಣ ಅಲ್ಲೆಲ್ಲ ರಸ್ತೆ ನನ್ನ ತ್ರಿ ಚಕ್ರವನ್ನು ಎತ್ತೆತ್ತಿ ಬಿಸಾಕುತಿತ್ತು. ಆದರೂ ಸುಮಾರು ಹದಿನೆಂಟುವರೆ ಕಿಮಿ ವೇಗ ಸಾದ್ಯವಾಗಿತ್ತು. ಅರುವತ್ತು ಎಪ್ಪತ್ತು ಕಿಮಿ ವೇಗ ನಾರಾಯಣ ಮೂರ್ತಿ ಆಗಾಗ ಸಾದಿಸಿದರೂ ಆ ಪ್ರಕಾರ ದೂರ ಕ್ರಮಿಸಿರುವುದಿಲ್ಲ. ಸಮಯ ಉಳಿಸಿರುವುದೂ ಇಲ್ಲ. ಹಾಗಾಗಿ ಈ ವಾಹನಗಳ ವೇಗವೆಲ್ಲ ನಮ್ಮ ಮಂಕು ಮಾಡುತ್ತೆ.
1 comment:
:):):)
Post a Comment