Tuesday, November 13, 2012

ಕೃಷಿ ಯಂತ್ರೊಪಕರಣ ಮಟ್ಟಿಗೆ ನಮ್ಮಲ್ಲಿ ಇನ್ನೂ ಗುಲಾಮಗಿರಿ


ಪುತ್ತೂರಿಗೆ   ಯಂತ್ರ  ಮೇಳ  ನೋಡಲು ಬಂದ  ದೇವಕಿ  -  ಅಶೋಕವರ್ಧನರು  ವಾಪಾಸಾಗುವಾಗ  ನನ್ನಲ್ಲಿಗೆ    ಬಂದರು.  ಮೇಳದ  ಬಗ್ಗೆ    ಅವರಿಗೆ  ನಿರಾಶೆಯಾಗಿತ್ತು.  ಹಾಗೊಂದು ಪತ್ರವನ್ನೂ  ಆಮೇಲೆ  ನನಗೆ    ಬರೆದರು.  ಅದನ್ನೇ   ವಿಸ್ತರಿಸಿ   ಕೃಷಿಕರಿಗೊಲಿಯದ ಯಂತ್ರ ಮೇಳ  ಎಂದೇ  ಹೆಸರಿಸಿ    ಅವರ  ಬ್ಲೋಗಿಗೆ ಏರಿಸಿದರು.  ಹಲವಾರು ವರ್ಷಗಳಿಂದ  ಇದರ  ಅರಿವು  ಇದ್ದ   ನನಗೆ  ಆಶ್ಚರ್ಯವೇನೂ  ಆಗಲಿಲ್ಲ.     ಅವರಿಗೆ ಉತ್ತರ  ಬರೆಯಲು ಕೂತವನಿಗೆ  ಹಲವು ವಿಚಾರಗಳು  ಮನಸ್ಸಿಗೆ   ಬಂದವು.  ಹಾಗೆ    ಪೇಸ್ ಬುಕ್ನಲ್ಲಿ ಕಂಡ   ಕೊಂಕೋಡಿಯವರ  ಅಂತರಾಷ್ಟ್ರೀಯ   ಯಂತ್ರ    ಮೇಳದ ಪ್ರಸ್ತಾಪವೂ  ನನ್ನ  ಕೆಣಕಿತು.   :@  ಯಾಕೆಂದರೆ  - 

ಪರದೇಶದಲ್ಲಿ   ಹಿರಿಯ    ಸಾವಯುವ  ಕೃಷಿಕರಿಂದ  ಉಗಿಸಿಕೊಂಡ  ಅನುಭವ    ನನಗಿದೆ. :f  ಯಾಕೆಂದರೆ  ಅವರ  ನಂಬಿಕೆಯಲ್ಲಿ  ಸಾವಯುವ   ಬೇಸಾಯ   ಕಲಿಯಲು  ಅಮೇರಿಕದಿಂದ  ಬಾರತಕ್ಕೆ  ಬರಬೇಕು  ಹೊರತು  ನಮ್ಮಲ್ಲಿಂದ  ಅಮೇರಿಕಕ್ಕೆ  ಹೋಗುವುದು   ಅಲ್ಲವೇ  ಅಲ್ಲ  ಎಂದು  ಉಗಿದಿದ್ದರು     ಪೌಲ್  ಕೀನೆ.  ಪೌಲ್  ಕೀನೆ  ಬಾರತದಲ್ಲಿ  ಕೆಲಕಾಲ  ಕಳೆದಿದ್ದರು ಮತ್ತು  ನಾನು ಬೇಟಿ ಮಾಡೋವಾಗ  ಪೆನ್ಸಿಲ್ವಾನಿಯ  ರಾಜ್ಯದಲ್ಲಿ  ವಾಲ್ನಟ್  ಎಕ್ರೆಸ್  ಅನ್ನುವ  ಪ್ರಖ್ಯಾತ  ಸಾವಯುವ   ಕೃಷಿ ಕ್ಷೇತ್ರದ  ಯಜಮಾನರಾಗಿದ್ದರು.  ಹಾಗೆ  ಅಂತರಾಷ್ಟ್ರೀಯ  ಯಂತ್ರ  ಮೇಳ  ಅನ್ನುವಾಗ  ಸ್ವಾಬಾವಿಕವಾಗಿ  ಮೈಯೆಲ್ಲ  ಉರಿಯಿತು.  ಕೆಳಗೆ   ಕಾಪಿ ಮಾಡಿರುವ    ಪ್ರತಿಕ್ರಿಯೆ  ಬರೆಸಿತು.     -

ಯಂತ್ರಗಳ ಮಟ್ಟಿಗೆ ನಾವಿನ್ನೂ ಗುಲಾಮಗಿರಿ ಅನುಬವಿಸುತ್ತಿದ್ದೇವೆ. ಅದುದರಿಂದ ಅಂತರಾಷ್ಟ್ರೀಯ ಮಟ್ಟದ ಯಂತ್ರ ಮೇಳ ನಮಗೆ ಬೇಕಾದುದಲ್ಲ.  ನಿಜಕ್ಕೂ   ಅಗತ್ಯವಾದ ಯಂತ್ರಗಳ ವಿ ಟೆಕ್ ವಿಶ್ವನಾಥ್ ಆಂತಹ   ಉತ್ಸಾಹಿಗಳು   ತರುತ್ತಾರೆ.  ಅವರಿಗೆ   ಸಹಾಯ ಕೊಟ್ಟರೆ ಸಾಕು.

ಆದರೆ ಪ್ರಮುಖ ವಿಚಾರ ಒಂದಿದೆ - ಅಡಿಕೆ ತೆಂಗು ಬೆಳೆಯದ ದೇಶಕ್ಕೆ ಹೋಗಿ ನಮಗೆ ಬೇಕಾದ ಯಂತ್ರ ಹುಡುಕಿದರೆ ಮನೆಯಲ್ಲಿ ಕಳಕೊಂಡ ಮುತ್ತನ್ನು ಬೆಳಕಿರುವಲ್ಲಿ ಹುಡುಕಿದ ಅಜ್ಜಿಯ ಕಥೆಯೇ ಆಗುತ್ತದೆ. ಅಮೇರಿಕದಂತಹ ದೇಶಗಳಲ್ಲಿ ಈ ಯಂತ್ರ ಮೇಳಗಳು   ಮಾತ್ರವಲ್ಲ    ಸಾಮಾನ್ಯ ರೈತರು ಪಾಲ್ಗೊಳ್ಳುವ   ರೈತ ಸಂತೆಗಳೂ  ಆಗುತ್ತವೆ.  . ಅಂತಹ ರೈತ ಸಂತೆಗಳು   ನಮ್ಮಲ್ಲೂ   ಆಗಬೇಕು, ಹೊರತು  ಬೃಹತ್  ಮೇಳಗಳಲ್ಲ.    ಅದರಲ್ಲಿ   ತಳಮಟ್ಟದ  ಮಾಹಿತಿ  ಇರುವ   ತುಕ್ರ ಚೋಮರೂ ಪಾಲ್ಗೊಳ್ಳುವಂತಾಗಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.     

ಹಿಂದೆ ನಾವು ಕೆಲಸ ಮಾಡಿಸುತ್ತಿದ್ದೆವು ಆದರೆ ಸಲಕರಣೆ ಕೊಳ್ಳುವ ತೀರ್ಮಾನ ನಮ್ಮದಾಗಿತ್ತು. ಸ್ವಾಬಾವಿಕವಾಗಿ ಕೊಟ್ಟು ಪಿಕ್ಕಾಸಿನಿಂದ ಮುಂದೆ ಹೋಗಲಿಲ್ಲ. ಮುಂದೊಂದು ಉದಾಹರಣೆ ಕೊಡುತ್ತೇನೆ.

ಎಲ್ಲ  ಕೆಲಸಗಳಲ್ಲೂ ಯಂತ್ರ ಮನುಷ್ಯನನ್ನು ಸೋಲಿಸಬಹುದು ಎನ್ನುವ ಬಲವಾದ ವಾದ ನಮ್ಮಲ್ಲ್ಲಿದೆ. ದಯವಿಟ್ಟು  ಕೆಳಗಿರುವ ವಿಡಿಯೊ    ನೋಡಿ - ಇಂತಹ ಬೀಸುಗತ್ತಿ ಯುರೋಪಿನ ಹೊಲದಲ್ಲಿ ಉಪಯೋಗಿಸಿ ನೋಡಿದ್ದೇನೆ. ಒಂದೇ ದಿನದಲ್ಲಿ ಬೀಸುವಿಕೆ ಅಬ್ಯಾಸವಾಗದಿದ್ದರೂ ಉಪಯುಕ್ತ ಅನ್ನಿಸಿತ್ತು.   ಒಂದು ಬೀಸುಗತ್ತಿ ನಾನು ಹಿಡಿದುಕೊಂಡಿರುವುದರ    ಪೋಟೊ ನನ್ನ ಸೈಕಲು ಯಾತ್ರೆ ಆಲ್ಬಂನಲ್ಲಿತ್ತು.     ಆಲ್ಬಂ  ನೋಡಿದವರು    ಯಾರೂ  ಅದನ್ನು    ಗಮನಿಸಲೇ ಇಲ್ಲ.   ಅದರಲ್ಲಿ ಅಶ್ಚರ್ಯವೂ  ಇಲ್ಲವೆನ್ನಿ.  



ಈಗ ನಮ್ಮಲ್ಲಿ ಪೆಟ್ರೊಲ್ ಚಾಲಿತ ಯಂತ್ರ ಬಂದಿದೆ. ಬೀಸುಗತ್ತಿ ಬಂದಿಲ್ಲ. ಎಲ್ಲ ವಿಚಾರಗಳೂ ಅಷ್ಟೇ. ಯೋಚಿಸಿ ನೋಡಿ - ಮಾರಾಟದಲ್ಲಿ ಲಾಬ ಇರುವುದು, ದುಬಾರಿ ಸವೆಯುವ ಬಾಗಗಳ ಬಿಡಿಬಾಗಗಳ ಲೆಕ್ಕದಲ್ಲಿ ಹಣ ಬರೋದು ಹಾಗೂ ಸಬ್ಸಿಡಿ ದೊರಕುವುದು ಪೆಟ್ರೊಲ್ ಚಾಲಿತ ಮಾದರಿಗೆ ಮಾತ್ರ. ನಾವೀಗ  ನಮ್ಮ  ಅಗತ್ಯ ಉಪಕರಣಗಳ   ಹುಡುಕಬೇಕಾದ್ದು ಅಮೇರಿಕ ಇಸ್ರೇಲ್ ಚೀನಾದಲ್ಲಲ್ಲ, ನಮ್ಮ ಹಿತ್ತಲಿನಲ್ಲಿ   -     ಎಂದು ಬರೆದಿದ್ದೆ. 

ಈಗ  ಕಳೆ ಕೀಳುವ  ಯಂತ್ರದವರು  ಗಂಟೆಗೆ   ೧೭೦ ರೂಪಾಯಿ ಬಾಡಿಗೆ ಪಡಕೊಳ್ಳುತ್ತಾರೆ.  ಈ  ಬೀಸುಗತ್ತಿಯಲ್ಲಿ ಖಂಡಿತಾ  ನೂರು ರಾಪಾಯಿಗೆ ಅಷ್ಟೇ  ಕೆಲಸ ಮಾಡಿಸಬಹುದು  ಎನ್ನುವ  ದೈರ್ಯ  ನನಗುಂಟು.  ಆದರೆ  ಕಮ್ಮಾರನ ಜತೆ ಕೂತು    ಇದರ ವಿನ್ಯಾಸ    ಹಾಗೂ  ಕೆಲಸವರಿಗೆ  ತರಬೇತಿ  ನನ್ನ  ಇಂದಿನ  ಆರೋಗ್ಯದಲ್ಲಿ  ಅಸಾದ್ಯ. :(  ಆದರೆ  ಕತ್ತಿ  ಬೀಸಲು  ನಮ್ಮ  ಹಳ್ಳಿಗಳಲ್ಲಿ     ಜನವೇ  ಇಲ್ಲದಿರುವ  ಕಾರಣ  ಗುತ್ತಿಗೆದಾರರನ್ನು  ಹಿಡಿಯಬೇಕಾದ್ದು  ಅನಿವಾರ್ಯ. :) 


ಮೇಳದಲ್ಲಿ ಕಂಡ  ಧಾನ್ಯ ಪುಡಿಮಾಡುವ ಯಂತ್ರದ  ಚಿತ್ರ  ರಮೇಶ್  ದೇಲಂಪಾಡಿ   ಮುಖಪುಟದಲ್ಲಿ   ಹಾಕಿದ್ದು.    ಇದರಲ್ಲಿ   ದ್ರವರೂಪದ  ಸಾರಜನಕವನ್ನು  ಪರೋಕ್ಷ ತಂಪುಕಾರಕವಾಗಿ ಇಲ್ಲಿ ಉಪಯೋಗಿಸಲಾಗುತ್ತದೆ.   ಹೀಗಾಗಿ ಧಾನ್ಯ ಪುಡಿಯಾಗುವಾಗ ಬಿಸಿಯಾಗುವುದು ತಪ್ಪುತ್ತದೆ.ಆದರೆ ಮನೆ ಮನೆಯ ಬಳಕೆಗೆ ಅಲ್ಲ.ಸಣ್ಣ ಕೈಗಾರಿಕೆಗಳಿಗೆ ಸೂಕ್ತ. ಅಂತ   ವರದಿ ಓದಿದೆ.  ಬೀಸುವ ಬದಲು ಗುದ್ದುವ ತಂತ್ರದಲ್ಲಿ ದಾನ್ಯ ಬಿಸಿಯಾಗುವುದರ ತಡೆಗಟ್ಟುವುದು ಹೆಚ್ಚು ಸರಳ. ಆದರೆ ಏನಾದರೂ ಗಿಮಿಕ್    ಇಲ್ಲವಾದರೆ ಯಂತ್ರ ಕುತೂಹಲ ಮೂಡಿಸುವುದಾದರೂ ಹೇಗೆ. ;)  

ಅಲ್ಲದೆ  ಸರಳ  ಕುಟ್ಟುವ  ಯಂತ್ರದಲ್ಲಿ  ಬತ್ತ ಕುಟ್ಟಿ  ಅಕ್ಕಿ ಮಾಡಲೂ  ಬಹುದು.  ಅವಲಕ್ಕಿ  ಮಾಡಬಹುದು.    ನಮ್ಮಲ್ಲಿ ಏನೂ  ಸಾದನೆ  ಇಲ್ಲ  ಎಂದು ನಾನು   ಅನ್ನುವುದಿಲ್ಲ.   ಪ್ರಯತ್ನ   ಸಾಲದು ಎನ್ನುವೆ.  ಸೇಮಿಗೆ  ಯಂತ್ರಕ್ಕೆ  ಗೇರು   ಹಾಗೂ   ಹಿಟ್ಟು  ತುಂಬುವ  ಕೊಳವೆ    ಉದ್ದ ಮಾಡಿ  ಮೊಟರ್  ಅಳವಡಿಸಿ   ಈಗ  ದೊಡ್ಡ  ಮಟ್ಟದಲ್ಲಿ  ತಯಾರು ಮಾಡಿ   ಕಾರ್ಯಕ್ರಮಗಳಿಗೆ   ಪೊರೈಸುವ   ಗುತ್ತಿಗೆಯವರಿದ್ದಾರೆ. 



ಹೊಂಡ  ಮಾಡಲು  ಹೊಂಡ ಇಂಜೀನು  ಬಹಳ  ಅಗತ್ಯವೇನಲ್ಲ.   ಯುರೋಪು  ಅಮೇರಿಕದ  ಕೃಷಿ  ಕ್ಷೇತ್ರಗಳಲ್ಲಿ  ಮೇಲ್ಕಾಣುವಂತಹ    ಕೈಯಲ್ಲಿ  ತಿರುಗಿಸಬಹುದಾದ   ಸಲಕರಣೆ ನೋಡಿದ್ದೇನೆ.    ಅದರ  ಒಂದು    ಮುಖ್ಯ  ಉಪಯೋಗ  ಬೇಲಿ ಕಂಬ  ಊರಲು  ಸರಿಯಾಗುವ  ಹೊಂಡ.    ತಯಾರಕರ    ಹೇಳಿಕೆ ಪ್ರಕಾರ  ಆರು ಇಂಚು ಅಗಲ ಎರಡು ಅಡಿ ಆಳದ   ಹೊಂಡ  ಮಾಡಬಹುದು.  ನನ್ನಲ್ಲಿದ್ದ   ನಾನೇ  ತೆಗೆದ    ಚಿತ್ರ  ಸದ್ಯಕ್ಕೆ  ನನ್ನ  ಕೈ ಎಟಕಿನಲ್ಲಿ ಇಲ್ಲದಿರುವುದರಿಂದ    ಮೇಲಿನ  ಚಿತ್ರ  ಜಾಲತಾಣ  ಒಂದರಿಂದ    ಎಗರಿಸಿದ್ದು.  ಹಾಗಾಗಿ ಸಂಪರ್ಕ ಕೊಂಡಿ ಹಾಕುತ್ತಿಲ್ಲ. :(  ಕ್ರಯ   ಸುಮಾರು  ೨೦ ಇಂಗ್ಲೇಂಡಿನ  ಪೌಂಡ್  ಕ್ರಯ  ಅಂದರೆ  ಸಾವಿರದ  ಆರು ನೂರು ರೂಪಾಯಿ.  

ಅಂದು    ಗಟ್ಟಿ ಮಣ್ಣಿಗೆ  ಹೇಗಾಗುವುದೋ   ಸಂಶಯ ಇತ್ತು.    ಮೆದು  ಮಣ್ಣಿನಲ್ಲಿ  ಆರಾಮವಾಗಿ  ಶ್ಯಾವಿಗೆ ಯಂತ್ರ  ತಿರುಗಿಸಿದಂತೆ  ತಿರುಗಿಸಿ   ನಾಲ್ಕು  ಐದು ಇಂಚು  ಅಗಲದ  ಗುಂಡಿ  ಸುಲಬವಾಗಿ   ಮಾಡಬಹುದು  ಅನ್ನಿಸಿತ್ತು.    ಯಂತ್ರವೇ   ಆಗಬೇಕೆನ್ನುವವರಿಗೆ   ಇದೇ  ಉಪಕರಣ  ಸರಳ   ಯಂತ್ರವನ್ನಾಗಿಯೂ   ಮಾಡಬಹುದು.   ಆ  ತಿರುಗಣಿ  ಬ್ಲೇಡು  ಹಾಗೂ  ನಮ್ಮ  ಸೇವಿಗೆ  ಯಂತ್ರದ  ರಚನೆಯ  ಹಿಡಿ.  ಇದನ್ನು   ಚಕ್ರ ಇರೋ  ಗಾಡಿ ಮೇಲೆ  ಅಳವಡಿಸಿದರೆ  ಆಯಿತು.  ಗುಂಡಿ  ತೋಡುವಲ್ಲಿ    ಒಬ್ಬ  ಒತ್ತಿ ಹಿಡಿತಾನೆ.   ಇನ್ನೊಬ್ಬ  ತಿರುಗಿಸ್ತಾನೆ.  ಲಿವರೇಜಿಗೆ ಬೇಕಾದರೆ  ಉದ್ದ  ಪೈಪು  ಉಪಯೋಗಿಸಿದರಾಯಿತು.   ನಮ್ಮಲ್ಲಿ ಮಳೆಗಾಲ  ಪ್ರಾರಂಬವಾದಾಗ   ಗುಂಡಿ  ತೋಡಲು   ಜನ  ಸಿಕ್ಕದೆ  ನನ್ನ   ಕಾಡು ಬೆಳೆಸುವ ಹುಚ್ಚು  ಕನಸಿನಲ್ಲೇ  ಉಳಿದಿದೆ.  ಬೆರ್ಮುಡಾ  ಹಾಕಿ ಮಾಡಬಹುದಾದ ಕೆಲಸವಾದರೆ     ಸಂಬಳ  ಕಡಿಮೆಯಾದರೂ  ನಮ್ಮ ಹಳ್ಳಿಹುಡುಗರು  ಖಂಡಿತಾ    ಒಪ್ಪಿಕೊಳ್ಳುತ್ತಾರೆ.

ಕನ್ನಡ  ಪ್ರಭ ಅಂಕಣದಲ್ಲಿ  ಅಡಿಕೆ ಪತ್ರಿಕೆಯ   ನಾ.  ಕಾರಂತರು  ಬರೆದ  ವಾಕ್ಯಗಳು  ಗಮನ  ಸೆಳೆದವು.  -    ಎಲ್ಲರೂ  ಸಬ್ಸಿಡಿ  ಉಂಟಾ  ಕೇಳುವವರೇ.  ಯಂತ್ರದ  ನಿಜ ಬೆಲೆ  ಹೇಳಿದರೆ  ಸಬ್ಸಿಡಿ ಬೇಕೇ ಬೇಕು  ಎನ್ನುತ್ತಾರೆ  ವಿಟೆಕ್  ವಿಶ್ವನಾಥ್.  ಸಬ್ಸಿಡಿ ಮತ್ತು ಮೀಸಲಾತಿ ತೊಲಗದೆ  ಬಾರತ  ಉದ್ದಾರವಾಗದು  ಎನ್ನುತ್ತಾರೆ  ಕೃಷಿಕ  ಡಾ ತಿರುಮಲೇಶ್ವರಯ್ಯ  ಗಬ್ಲಡ್ಕ. 

ನನ್ನ   ಆತ್ಮೀಯ  ಗೆಳೆಯರೊಬ್ಬರು  ಅಮೇರಿಕದ  ಪೆನ್ಸಿಲ್ವಾನಿಯದಲ್ಲಿ   ಕುದುರೆಗಳ  ಸಹಾಯದಿಂದ  ಕೃಷಿ  ಮಾಡುತ್ತಾರೆ.    ನೂರು ವರ್ಷ  ಹಳೆಯ  ಕೆಲವು  ಯಂತ್ರೋಪಕರಣಗಳನ್ನೂ    ಬಳಸುತ್ತಾರೆ.   ಬೀಡು ಕಬ್ಬಿಣದಿಂದ  ಮಾಡಿದ ಅವು  ತುಕ್ಕು  ಹಿಡುಯುವುದೇ  ಇಲ್ಲ.  ಅವರಿಗೆ   ಅಂದರೆ  ಎರಿಕ್  ಮತ್ತು  ಅನ್  ಇಬ್ಬರಿಗೂ    ಕೃಷಿ  ಹಿನ್ನೆಲೆ  ಇರಲಿಲ್ಲ.  ಪ್ರಾರಂಬದಲ್ಲೊಂದು   ಟ್ರಾಕ್ಟರ್  ಕೊಂಡಿದ್ದರು.    [ನಮ್ಮಲ್ಲೂ   ಅಧುನಿಕ    ಕೃಷಿಗೆ  ಹೊರಡುವವ   ಮೊದಲು   ಕತ್ತಿ  ಬದಲಿಗೆ   ಟ್ರಾಕ್ಟರ್ ಕೊಂಡರೆ  ಸಾಫ್ಟ್ ವೇರ್  ಲಕ್ಷಾದೀಶ  ಪ್ರಥಮ  ಸಂಬಳದಲ್ಲಿ ಕಾರು ಕೊಳ್ಳುತ್ತಾನೆ]     ನಂತರ  ಅದಕ್ಕೆ  ಕೆಲಸವೇ  ಇಲ್ಲವೆಂದು  :( ಎರಿಕ್ - ಅನ್  ಅರಿತು   ಮಾರಿಬಿಟ್ಟರು.   ನಾವು   ದೊಡ್ಡ ಯಂತ್ರಗಳ  ಮೊದಲು  ಅಲ್ಲಿ   ಬಳಕೆಯಲ್ಲಿದ್ದ     ಇಂತಹ  ಮಾದರಿಗಳ  ಹುಡುಕಬೇಕಾದ್ದು  ಹೊರತು  ಅತ್ಯಾದುನಿಕ  ದುಬಾರಿ  ಆಲೋಚನೆಗಳನ್ನಲ್ಲ



ಹಿಂದೆ  ಗೊಬ್ಬರದ  ರಾಶಿಯಲ್ಲಿ ಹಂದಿಗಳು  ಎಂದು  ಇವರ  ಒಂದು  ಪ್ರಯೋಗದ  ಬಗೆಗೆ  ಬರೆದಿದ್ದೆ. ಅಲ್ಲೂ  ಗೊಬ್ಬರ  ಮೊಗಚಿಹಾಕಲು   ಟ್ರಾಕ್ಟರ್  ಚಾಲಿತ  ದುಬಾರಿ  ಯಂತ್ರಗಳೂ   ಲಭ್ಯ.  ಆದರೆ  ಹಂದಿಗಳು  ಬಹು ಚೆನ್ನಾಗಿ   ಆ  ಕೆಲಸ ಮಾಡುತ್ತದೆ.  ನಾವು ಹುಡುಕಬೇಕಾದ್ದು ಇಂತಹ  ಮಾದರಿಗಳನ್ನು. 


ನನ್ನ  ನೋಡಿಕೊಳ್ಳುತ್ತಿರುವ  ಗಿರಿಯಪ್ಪನ  ಹತ್ತಿರವೊಂದು ಮಾರ್ಪಾಡಿಸಿದ  ಪಿಕ್ಕಾಸು ಉಂಟು. ಕುಂಟು  ಹಾಗೂ   ಅಗಲಬಾಯಿಯಾದ  ಕಾರಣ   ನೆಲದಲ್ಲಿರುವ  ಕುತ್ತಿ ಇತ್ಯಾದಿ ತೆಗೆಯಲು  ತುಂಬಾ   ಸಹಾಯಕ.    ಊರ  ಕಮ್ಮಾರರಲ್ಲಿಯೇ  ಮಾಡಿಸಿದ್ದು.  ಅದಕ್ಕೆ  ಪುರುಸೊತ್ತೆ  ಇರುವುದಿಲ್ಲ. ಸುತ್ತುಮುತ್ತಲಿನವರೆಲ್ಲ   ಕೊಂಡು ಹೋಗುತ್ತಿರುತ್ತಾರೆ.   ನಮಗೆ  ಬೇಕಾದ್ದು  ಇಂತಹ  ತಳಮಟ್ಟದ  ಪ್ರಯತ್ನಗಳು.   ಯಂತ್ರ ಮೇಳದಲ್ಲಿ    ಹೆಚ್ಚು ಗಮನಸೆಳೆಯಬೇಕಾಗಿದ್ದ    ಸಮೀರರ  ಹಾಗೂ  ಉಪಾದ್ಯರ  ಉಪಕರಣಗಳ  ಬಗೆಗೆ  ಜನರ ಕುತೂಹಲ  ಎಷ್ಟಿತ್ತು  ಎಂದು  ಅಶೋಕವರ್ಧನರು  ಚೆನ್ನಾಗಿ ವಿವರಿಸಿದ್ದಾರೆ.  http://www.athreebook.com/2012/11/blog-post_12.html#more


ಅಶೋಕವರ್ಧನರು ಬರೆಯುತ್ತಾರೆ -ದಾರಿ ತಪ್ಪಿದ ಶಿಕ್ಷಣ ಮತ್ತು ಮೌಲ್ಯರಹಿತ ಸಾಮಾಜಿಕ ಭದ್ರತೆಗಳುರೂಢಿಸಿಹೋಗಿ ಇಂದು ನಾವು ಯಾವುದೇ ವೃತ್ತಿರಂಗಕ್ಕೆ ಹೋದರೂಪ್ರಾಥಮಿಕ ಹಂತದಿಂದ ಕಲಿಯಬೇಕಾಗಿದೆಈ ಕಾರಣಕ್ಕೆ ಕೃಷಿಹಿನ್ನೆಲೆಯಿಂದಲೇ ಬಂದವರೂ ಇಂದು ಕೃಷಿಯಲ್ಲಿ ಮುಂದುವರಿಯುವುದಾದರೆಅಸಾಮಾನ್ಯ ಕೊರತೆಗಳುಆತಂಕಗಳು ಕಾಡುತ್ತವೆಅವನ್ನು ಗ್ರಹಿಸಿ,ಚರ್ಚಿಸಿರೂಪಿಸಿರೂಢಿಸಿಕೊಡುವಂಥ ಯಂತ್ರ ಪರಿಣತರು ಮೇಳಕ್ಕೆಬರಬೇಕಿತ್ತು.  ಆದರೆ  ಇಂತಹ  ಸ್ಪೂರ್ತಿ ಕೊಟ್ಟು  ಮುನ್ನಡೆಸುವ   ಪರಿಣಿತರು  ನಮ್ಮಲ್ಲಿದ್ದರೋ  ಅನ್ನುವ  ಸಂಶಯ  ನನಗೆ.   ಯಾಕೆಂದರೆ   ಅಧುನಿಕ  ಶಿಕ್ಷಣ ಪಡೆದವರೆಲ್ಲ   ಮಾದರಿಗೆ    ಅಮೇರಿಕದ  ಕಡೆ ಮುಖಮಾಡಿರುತ್ತಾರೆ.

ಪ್ರೋಜೆಕ್ಟ್  ವರ್ಕ್  ಸಮಯದಲ್ಲಿ  ನನ್ನಲ್ಲಿಗೆ  ಹಲವು ವಿದ್ಯಾರ್ಥಿಗಳು ಸಮಾಲೋಚನೆಗೆ  ಬಂದದ್ದುಂಟು.   ಆ  ಚರ್ಚೆಗಳಲ್ಲಿ  ಅವರ  ಮತ್ತು ಅವರ  ಮಾರ್ಗದರ್ಶಿಗಳ  ಚಿಂತನೆ ಅರ್ಥವಾಗುತ್ತದೆ.      ಮಾಸ್ ಪ್ರೊಡಕ್ಟನ್, ವಿಸಿಟಿಂಗ್ ಕಾರ್ಡ್   ನುಡಿಮುತ್ತು ಉದುರಿಸುವ    ಪ್ರೊಫೆಸರುಗಳು  ಮಾರ್ಗದರ್ಶಕರು,  ನಿರ್ಣಾಯಕರು. :(   ಸ್ವಾಭಾವಿಕವಾಗಿ    ಹೆಚ್ಚಿನ  ಪ್ರೊಜೆಕ್ಟ್ ವರ್ಕ್ ನಿಷ್ಪ್ರಯೋಜಕ.   ವಿದ್ಯಾರ್ಥಿಗಳ    ಸಾಮಾನ್ಯ   ವಾದ ಸರಣಿ  -  ನಾವು ಮೆಕಾನಿಕಲ್  ವಿಬಾಗದವರು.  ಹಾಗೆ  ಒಂದು ಪೆಟ್ರೊಲ್  ಇಂಜಿನ್ ಜೋಡಿಸಿದ  ಯಂತ್ರದ  ಮಾರ್ಪಾಡಿಗೆ  ಆಸಕ್ತಿ ಹೊಂದಿದ್ದೇವೆ   ಎನ್ನುವ  ಪೂರ್ವಾಗ್ರಹ  ತುಂಬಿದ  ಮನಸ್ಸಿನಲ್ಲಿಯೇ  ಬಂದಿರುತ್ತಾರೆ.    ನೈಜ  ಸಾಧನೆ  ಬಗೆಗೆ  ಅವರಿಗೆ  ಆಸಕ್ತಿ  ಇರುವುದೇ  ಇಲ್ಲ.


ಅಧುನಿಕ   ಕೃಷಿ ವಿಜ್ಞಾನ   ಅಂದರೆ   ಕೃಷಿ  ಒಳಸುರಿ  ಮಾರುಕಟ್ಟೆ    ಮಣ್ಣಿನ  ಫಲವತ್ತತೆ  ನಿರಾಕರಿಸುತ್ತದೆ.   ಹೌದು. ಒಳಸುರಿ  ಮಾರುಕಟ್ಟೆಯನ್ನೇ   ಕೃಷಿ  ವಿಜ್ಞಾನ   ಎಂದು  ನಂಬತೊಡಗಿದ್ದೇವೆ.      ಮಣ್ಣಿರುವುದು  ಬರೇ  ಗಿಡಗಳ  ಹಿಡಿದಿಡಲು.   ಅವಶ್ಯ    ಒಳಸುರಿ  ಬುದ್ದಿವಂತ    ರೈತ   ಬಳಸುತ್ತಾನೆ.  ವಿಜ್ಞಾನಿ  ಎಂದರೆ  ಇಲ್ಲಿ     ಕಂಪೇನಿಗಳ  ಮುಖವಾಡ  ಮತ್ತು   ಬುದ್ದಿವಂತ  ರೈತ  ಅವುಗಳ  ಪ್ರಚಾರಕ್ಕೆ  ಸಿಕ್ಕಿ ಬಿದ್ದ  ಬಕ್ರಾ.   ಸಾವಯುವ  ಕೃಷಿ ಮಣ್ಣಿನ  ಸಮತೋಲನಕ್ಕೆ ಹೆಚ್ಚು  ಒತ್ತು ಕೊಡುತ್ತದೆ.    ಹಾಗೆ  ಇಂದು  ಕೃಷಿ  ಮಾಡಲು ಯಂತ್ರಗಳು  ಬೇಕೆ ಬೇಕು ಎಂದು ನಂಬಿದ್ದೇವೆ   ಅಥವಾ  ನಮ್ಮನ್ನು  ನಂಬಿಸಿದ್ದಾರೆ  ಅನ್ನಬಹುದು. :)


ದೇಹದ  ನೈಸರ್ಗಿಕ    ಚಲನೆಗೆ  ಅನುಗುಣವಾಗಿ  ಕೆಲಸ ಮಾಡುವಂತೆ    ಉಪಕರಣ  ರಚನೆಯಾಗಬೇಕು.  ಪರದೇಶಗಳಲ್ಲಿ  ಉಪಯೋಗಿಸುವ ಕೊಟ್ಟು  ಓಡಿಬಂದು ಹಾರುವಂತೆ  ಮಣ್ಣು ಎತ್ತಿ ಎಸೆಯುವ  ರೀತಿ  ರೂಪಿಸಿದ್ದಾರೆ.  ನಮ್ಮಲ್ಲಿ  ಕಾಂಕ್ರೀಟ್  ಕೆಲಸಗಳಿಗೆ   ಅಂತಹದನ್ನು ಉಪಯೋಗಿಸುತ್ತಾರೆ.    ಮಣ್ಣಿನ  ಕೆಲಸಕ್ಕೆ     ನಮ್ಮಲ್ಲಿ  ಪೂರ್ತಿ ಶಕ್ತಿ  ಹಾಕಿಯೇ  ಎಳೆಯಬೇಕು.  ಇದನ್ನು  ಬದಲಾವಣೆ ಸಾದ್ಯವೋ ?  ಜನ  ಒಪ್ಪುತ್ತಾರೋ  ಚಿಂತನೆಯೋಗ್ಯ  ಅನಿಸುತ್ತದ.


ಈಗ   ಪೇಟೆಯ  ಹೆಂಗಸರರಿಗೆ  ಕಸ ಗುಡಿಸಲು ಬಗ್ಗ ಬೇಕಾಗಿಲ್ಲ,  ನೆಲ ಒರಸಲು ಕೂರಬೇಕಾಗಿಲ್ಲ.    ಮಾಲುಗಳಲ್ಲೂ     ….   :) ಆದರೆ  ಹಳ್ಳಿಯವರಿಗೆ  ಬಗ್ಗಿ ಮಾಡುವ  ಕೆಲಸಗಳಿಗೆ  ಪರಿಹಾರಗಳಿನ್ನೂ  ತಲಪಲಿಲ್ಲ. :(   ಇಲ್ಲೂ  ನಮಗೆ   ಈಗ  ಅತಿ ಅಗತ್ಯವೆನಿಸುವುದು   ಪೆಟ್ರೊಲ್  ಯಂತ್ರಗಳಲ್ಲ.  ಸರಳ    ಉಪಕರಣಗಳು.   ಇವೆಲ್ಲ  ನಮ್ಮವರೇ  ಕೂತು ಚಿಂತಿಸಬೇಕಾದ್ದು  ಹೊರತು  ಹೊರಗಿನ  ಆಲೋಚನೆ ಪ್ರಯೋಜನವಿಲ್ಲ.   

ವೈಯುಕ್ತಿಕ  ಕಾರಣಗಳಿಂದಾಗಿ   ಕೃಷಿಯಿಂದ  ನಿವೃತ್ತನಾದ   ನಾನು ಯಂತ್ರ ಮೇಳಕ್ಕೆ  ಹೋಗಲಿಲ್ಲ. 
ಕೆಲವು ವಿಚಾರಗಳಲ್ಲಿ    ಗೊಂದಲಗಳಿದ್ದೂ  ಬರಹಕ್ಕಿಳಿಸಿದ್ದೇನೆ.    ಕೆಲವೆಡೆ   ಶಬ್ದ ಪ್ರಯೋಗಗಳೂ  ತಪ್ಪಿರಬಹುದು.  ಯಂತ್ರಗಳೇ  ಬೇಡ  ಎಂದು ನಾನು ಹೇಳುವುದಲ್ಲ, ಅವುಗಳ   ಬಗೆಗೆ  ಇರುವ   ಅತಿರೇಕದ ಭ್ರಮೆಯಿಂದ ಹೊರ ಬಂದು  ಚಿಂತಿಸುವ.   ಸಾರ್ವಜನಿಕೆ  ಸಾರಿಗೆ  ಬೇಕು.  ದಿನಕ್ಕೆ  ಇಪ್ಪತ್ತೆರಡು ಗಂಟೆ  ತುಕ್ಕು ಹಿಡಿಯುತ್ತಾ  ಕೂತಿರುವ  ವೈಯುಕ್ತಿಕ  ಕಾರು ಉಪಯೋಗ  ಕಡಿಮೆಯಾಗಬೇಕು   ಎನ್ನುವ  ಚಿಂತನೆ  ನನ್ನದು.  ಅದೇ  ರೀತಿ  ನಮ್ಮ  ಕೈಗೆಟಕುವ  ಸರಳ  ಉಪಕರಣಗಳು   ಹೆಚ್ಚೆಚ್ಚು     ಬರಲಿ  ಅನ್ನುವ  ಅಭಿಲಾಷೆ.  

Monday, November 12, 2012

ಒಬಾಮ ಗೆದ್ದ ಎಂದರೆ ಪ್ರಪಂಚ ಒಂದು ಕಂಟಕದಿಂದ ಪಾರಾಯಿತು


ಒಬಾಮ  ಗೆದ್ದ  ಎಂದಾಕ್ಷಣ  ನನಗೆ  ಭಾರಿ ಸಂತಸವೇನೂ  ಆಗಲಿಲ್ಲ.    ಆದರೆ    ತಮ್ಮ  ವ್ಯಾಪಾರಕ್ಕೆ  ತೊಂದರೆ  ಎಂದು   ನಮ್ಮ  ಸಾಫ್ಟ್ ವೇರ್  ಧನಿಗಳಿಗೆ  ಆದಂತೆ  ಬೇಸರವೂ  ಆಗಲಿಲ್ಲ.     ಈ ಗೆಲುವಿನಿಂದಾಗಿ ನಾವಿರುವ  ಈ    ಪ್ರಪಂಚ  ಒಂದು ಕಂಟಕದಿಂದ  ಪಾರಾದದ್ದು    ಮಾತ್ರ  ಖಂಡಿತ  ಎನ್ನಬಹುದು.  ಪ್ರಪಂಚ  ಚಪ್ಪಟೆಯಾಗಿದೆ  ಎನ್ನುವ     ಹಲವು   ಒಬಾಮ  ವಿರೋದಿ    ಪಕ್ಷದ  ಬೈಬಲ್  ಪಂಡಿತ    ದುಷ್ಟರು  ಮಣ್ಣುಮುಕ್ಕಿದ್ದೂ  ಸಂತಸದ  ವಿಚಾರ    

ಈ  ಸಲ   ಚುನಾವಣೆಯಲ್ಲಿ    ನಿರ್ಣಾಯಕ  ತಿರುವು  ಕೊಟ್ಟದ್ದು   ಸಾಂಡಿ ಚಂಡಮಾರುತ.  ಅಷ್ಟರ ವರೆಗೆ  ಎರಡೂ ಪಕ್ಷದವರೂ  ಭೂಮಿ  ಬಿಸಿಯಾಗುತ್ತಿರುವ  ವಿಚಾರ  ಪ್ರಚಾರದಿಂದ  ಹೊರಗಿಟ್ಟಿದ್ದರು.  ಒಬಾಮ  ಉತ್ತರ ದ್ರುವದ  ಹಿಮಕವಚ ಕರಗಿ  ಸಮುದ್ರ ಮೇಲೇರುವುದನ್ನು    ತಡೆಗಟ್ಟುವುದಾಗಿ  ಹೇಳಿದ್ದ  ಮಾತು  ರೊಮ್ನಿ ಲೆವಡಿ ಮಾಡಿದ್ದ.  ಕೊನೆಗೆ  ಚಂಡಮಾರುತ  ಅಪ್ಪಳಿಸುತ್ತದೆ  ಎನ್ನುವಾಗ  ಎರಡೂ  ಅಭ್ಯರ್ಥಿಗಳು   ಪೂರ್ವ ಕರಾವಳಿಯ    ಪ್ರಚಾರ  ತಿರುಗಾಟವನ್ನು     ರದ್ದುಪಡಿಸಿದರು.    ಆದರೆ  ಚಂಡಮಾರುತ  ಅಪ್ಪಳಿಸಿದಾಗ -  ಒಬಾಮ ಚುರುಕಾದ.   ಪರಿಹಾರ  ಒದಗಿಸಿದ.  ಸಮುದ್ರದ  ಅಬ್ಬರದ  ದಿನ  ಅಪ್ಪಳಿಸಿದ   ಚಂಡಮಾರುತ   ಅಪಾರ  ಹಾನಿ  ಉಂಟುಮಾಡಿತು.   ನ್ಯುಯೊರ್ಕ್  ಪಟ್ಟಣದ  ನಿವಾಸಿಗಳು ಶಿಲಾಯುಗಕ್ಕೆ ತಳ್ಳಲ್ಪಟ್ಟ  ಕಥೆ  ನಾಗೇಶ  ಹೆಗ್ಡೆಯವರ  ಪ್ರಜಾವಾಣಿ ಅಂಕಣ  ಚೆನ್ನಾಗಿ ಚಿತ್ರಿಸುತ್ತದೆ. 

ಆ  ಆನೆ ಪಕ್ಷದ  ಹಲವು  ಪುಡಾರಿಗಳು  ಮಹಿಳೆಯರ ಹಕ್ಕಿನ  ವಿರುದ್ದ  ಯುದ್ದವನ್ನೇ  ಸಾರಿದ್ದರು.  ಅತ್ಯಾಚಾರಕ್ಕೆ  ಒಳಗಾಗಿ ಜನಿಸಿದ  ಮಗು ಸಹಾ ದೇವರ ಕೊಡುಗೆ /  ಅತ್ಯಾಚಾರವೇ  ಮಹಿಳೆಯ ವಿರುದ್ದ  ಹಿಂಸೆ. ಪುನಹ  ಗರ್ಬಪಾತ  ಎನ್ನುವ  ಹಿಂಸೆಗೆ ಮಹಿಳೆಯ   ಒಳಪಡಿಸುವುದು  ತಪ್ಪು /  ಅತ್ಯಾಚಾರದಲ್ಲಿ  ಮಹಿಳೆಯ  ಶರೀರ  ತನ್ನ  ಕಾಪಾಡಿಕೊಳ್ಳುತ್ತದೆ   ಇತ್ಯಾದಿ  ನುಡಿಮುತ್ತು ಉದುರಿಸಿದ   ಪುಡಾರಿಗಳನ್ನೆಲ್ಲ   ಮತದಾರರು ಮನೆಗೆ  ಕಳುಹಿಸಿದ್ದಾರೆ.  


ಅಮೇರಿಕದಲ್ಲಿ   ನವೆಂಬರ್    ಮೊದಲ ವಾರ  ಗಡಿಯಾರ  ಹಿಂದಕ್ಕಿಡುವ  ಪರಿಪಾಠ.  ಸೆಕೆಗಾಲದಲ್ಲಿ  ಮುಂದಿಡುವ    ಇದನ್ನು  daylight saving time  ಅನ್ನುತ್ತಾರೆ.     ರೊಮ್ನಿಯ   ವರ್ತನೆ  ಬಗೆಗೆ  ಚಿಂತನೆಗೆ  ಹಚ್ಚುವ      ಚಿತ್ರವೊಂದನ್ನು ಇಲ್ಲಿ ಹಾಕಿದ್ದೇನೆ. 


ಕಳೆದ  ವಾರ    ಬೆಂಗಳೂರಿಗೆ  ಬಂದ  ಸ್ಟೆಫನ್  ಹಾರ್ಪರ್  ಕೆನಡಾ  ದೇಶದ  ಜನರ ಪ್ರತಿನಿಧಿ,    ಪ್ರದಾನಿ ಎನ್ನುವ  ಬದಲು   ತೈಲ  ಕಂಪೇನಿ  ನೌಕರ  ಎಂದರೆವ್  ಹೆಚ್ಚು ಸಮಂಜಸ.   ಸಾವಿರಾರು ಎಕ್ರೆ ಕಾಡು  ಕಡಿಸಿ  ತೈಲ  ಮರಳಿನ  ಗಣಿಗಾರಿಕೆಗೆ  ಪ್ರೋತ್ಸಾಹಿಸಿದ  ಮಹಾನುಬಾವ.  ವಿರೊಧ  ವ್ಯಕ್ತಪಡಿಸಿದ  ವಿಜ್ಞಾನಿಗಳಿಗೆ   ಪರಿಸರವಾದಿಗಳಿಗೆ ಅಪಾರ ಹಿಂಸೆ ಕೊಟ್ಟವ.
 ಆದರೆ   ರಾಜಕಾರಣಿ ಅಲ್ಲವೇ !     ಕೆನಡದಲ್ಲೂ   ಮತದಾನ  ಹಕ್ಕಿನ    ಕನ್ನಡಿಗರಿದ್ದಾರೆ.  ಹಾಗೆ  ಅವರಿಗೆಲ್ಲ   ಫೋಟೊ   ತೋರಿಸಲು    ಈ  ಅಸಾಮಿ ಇಲ್ಲಿ ದೇವಸ್ಥಾನಕ್ಕೂ  ಬೇಟಿ  ಕೊಡುತ್ತಾನೆ.   

 ಈ ಹಾರ್ಪರ್  ಅವನನ್ನು    ಜೋರ್ಜ್  ಬುಸ್ನ  ಕಿರಿ ತಮ್ಮ  ಎನ್ನಬಹುದು. ಅಂದು ಬುಸ್  ಇರಾಕ್  ದಾಳಿ ಮಾಡಿದ.  ಅದರಲ್ಲಿ  ರಾಜಕಾರ್ಯದ ಜತೆ  ಸ್ವಕಾರ್ಯವೂ  ಸೇರಿತ್ತು.  ಟೆಕ್ಸಾಸ್   ಪ್ರಾಂತ್ಯದ  ಬುಶ್  ಕುಟುಂಬಕ್ಕೆ  ತೈಲ   ವ್ಯಾಪಾರ  ಸಂಪರ್ಕವಿದೆ.    ಇಂದು ಈ  ಮನುಷ್ಯ   ಕೆನಡದೊಳಗಿನ  ಆದಿವಾಸಿಗಳ  ಬೂಮಿ  ಲಗಾಡಿ ತೆಗೆಯುತ್ತಿದ್ದಾನೆ.  ಟಾರ್  ಮರಳಿನ  ಗಣಿಗಾರಿಕೆ  ಬಹಳ  ಗಲೀಜು.  ಎರಡು ಟನ್  ಮರಳು  ಪ್ಲಸ್  ಐದು  ಟನ್  ನೀರು  ಕುದಿಸಿದರೆ  ಒಂದು ಬಾರಲ್  ತೈಲ  ದೊರಕುತ್ತದೆ.  ಉಳಿದ  ಕಶಾಯ  ಯಾವುದೇ  ಮುಲಾಜಿಲ್ಲದೆ   ನದಿ  ನೀರಿಗೆ ಬಿಸಾಕುತ್ತಾರೆ.  


ಬಾರತ  ಬಯಲು  ಶೌಚಾಲಯ ಪದ್ದತಿ  ಅನುಸರಿತ್ತಿರಬಹುದು.  ಜಗತ್ತಿನ  ನಾಗರಿಕರು  ಪತ್ರಿಕೆಗಳು   ಅಣಕಿಸಬಹುದು.    ಆದರೆ  ಈ  ಅನಾಮಿಕ  ತೈಲ   ಕಂಪೇನಿಗಳು ಜಗತ್ತನ್ನೇ   ತಮ್ಮ  ಕಸದ  ತೊಟ್ಟಿಯನ್ನಾಗಿ     ಮಾಡಿಕೊಂಡಿವೆ.   ಹೊಗೆ  ಹಾಗೂ   ಮಲೀನತೆಯನ್ನು  ಪರೀಸರಕ್ಕೆ  ಬೀಸಾಕುತ್ತಿವೆ.   ಅಪಾರ  ಹಾನಿ ಉಂಟು ಮಾಡುವುದು   ಅಗೋಚರವಾಗಿಯೇ  ಉಳಿದುಬಿಡುತ್ತದೆ.                


ಈ  ಮದ್ಯೆ  ಒಂದು  ಸಂತಸದ  ವಿಚಾರ.  ಅಮೇರಿಕದ  ಹಲವು ಕಾಲೇಜುಗಳ  ನಿಯಂತ್ರಣದಲ್ಲಿ   ಅಪಾರ  ಬಂಡವಾಳ  ಇರುತ್ತದೆ. ಹಿಂದೆ  ಬಹುಜನ ದಾನಿಗಳು     ಅಮೇರಿಕದ  ಕಾಲೇಜುಗಳ  ನಿರ್ವಹಣೆಗೆ  ಹಾಗೂ    ವಿದ್ಯಾರ್ಥಿ ವೇತನಕ್ಕೆ  ಬಹಳಷ್ಟು    ದಾನ ಇತ್ತಿದ್ದಾರೆ.  ಅವೆಲ್ಲ  ಈಗ  ಕಾಲೇಜುಗಳ  ಹೆಸರಿನಲ್ಲಿ   ಶೇರುಮಾರುಕಟ್ಟೆಯಲ್ಲಿ  ಇರುತ್ತದೆ.    ಹಿಂದೆ  ದಕ್ಷಿಣ  ಆಪ್ರಿಕದಲ್ಲಿ  ವರ್ಣಬೇದ  ನಾಶಮಾಡಲು  ಕಾಲೇಜುಗಳು  ಅಲ್ಲಿನ  ಕಂಪೇನಿಗಳ ಮೇಲೆ ಹೂಡಿದ್ದ  ಬಂಡವಾಳ  ಹಿಂತೆಗೆತವೂ   ಬಹು ನಿರ್ಣಾಯಕ  ಪಾತ್ರವಹಿಸಿದೆ.    ಈಗ   ಅದೇ  ಮಾದರಿ  ತೈಲ  ಕಂಪೇನಿ ವಿರೋದ   ಅನುಸರಿಸಲು  ಪರಿಸರ  ಹೋರಾಟ  ಗುಂಪು  ಕರೆ    ಇತ್ತಿದೆ  ಮಾತ್ರವಲ್ಲ   ಸಫಲವೂ  ಆಗುತ್ತಿದೆ. 



ಪ್ರಪಂಚದ  ಜನಜೀವನ    ಸಂಪೂರ್ಣ  ನಾಶವಾಗುವ   ಮಿತಿಯ  ಐದು ಪಟ್ಟು  ಪೆಟ್ರೊಲ್, ಕಲ್ಲಿದ್ದಲು ದಾಸ್ತಾನು ಇದೆ.  ಆ ಕಂಪೇನಿಗಳ  ಮಾರುಕಟ್ಟೆ  ಬೆಲೆ  ಆ  ದಾಸ್ತಾನಿನ  ಮೌಲ್ಯವನ್ನೂ  ಒಳಪಟ್ಟಿದೆ. ಅಕಸ್ಮಾತ್  ಆಷ್ಟೂ  ಇಂದನ  ದಹಿಸಿದರೆ  ಹಿಂದೆ  ಬರಲಾಗದ  ಶೋಚನೀಯ   ಸ್ಥಿತಿಗೆ  ಪ್ರಪಂಚ  ತಲಪುತ್ತದೆ.  ಉದಾಹರಣೆ  ರಿಲಿಯನ್ಸ್  ಪಾಲುಬಂಡವಾಳ  ಎಂಟುನೂರು  ರೂಪಾಯಿ ಬೆಲೆ    ಈಗ  ಆಂದ್ರದ ಕರಾವಳಿಯಲ್ಲಿರುವ   ನೈಸರ್ಗಿಕ  ಅನಿಲದ  ಮೌಲ್ಯವನ್ನೂ ಒಳಗೊಂಡಿದೆ.   



ಗಣಿಗಾರಿಕೆ   ಎಷ್ಟು ಶಕ್ತಿಶಾಲಿ  ಎಂದರೆ  ಎಡ್ಡಿಯ  ಕಾಲದಲ್ಲಿ  ಕರ್ನಾಟಕದ  ರಸ್ತೆಗಳಲ್ಲಿ ರೆಡ್ಡಿಯ  ಲಾರಿಗಳ  ಹಾರಾಟ  ನೆನಪಿಸಿಕೊಂಡರೆ ಸಾಕು. ಮೊನ್ನೆ   ಪ್ರಾಮಾಣಿಕ   ತೈಲ  ಮಂತ್ರಿ  ಜೈಪಾಲ  ರೆಡ್ಡಿಯನ್ನು  ಅಂಬಾನಿ  ಎಂಬ  ಎಣ್ಣೆ ದೊರೆ     ಕೆಳಗಿಳಿಸಿದ್ದು  ನೆನಪಿಸಿಕೊಳ್ಳಬಹುದು.  ಈ  ಸನ್ನಿವೇಶ  ಇಂದು    ಇಡೀ  ಪ್ರಪಂಚದಲ್ಲಿದೆ.     ಅಂತೂ     ಒಬಾಮ  ಗೆಲುವು  ಪರಿಸರಕ್ಕೆ  ಖಂಡಿತ  ಲಾಭ.  ಪುನಹ  ಚುನಾವಣೆ ಎದುರಿಸುವ  ಅನಿವಾರ್ಯತೆ ಇಲ್ಲದಿರುವ  ಒಬಾಮ  ಈಗಾಗಲೇ  ದಿಟ್ಟ ಹೆಜ್ಜೆಗಳಿಡುವ  ಲಕ್ಷಣ  ತೋರಿಸಿದ್ದಾನೆ.  :-)   
http://www.iol.co.za/scitech/science/environment/obama-re-commits-to-climate-change-pledge-1.1419983#.UJ_D_uSDqzl

Tuesday, November 06, 2012

ವಾಸಿಸುವ ಊರನ್ನೇ ಬೈಯ್ಯುವ ಬುದ್ದಿಜೀವಿ ಕಾರ್ನಾಡ






ಇಂದಿನ   ಕನ್ನಡ ಪ್ರಭ  ಓದುವಾಗ  ಆರು ತಿಂಗಳು  ಹಿಂದೆ  ಇವರೇ  ಬರೆದ  ಎರಡು  ಲೇಖನಗಳು  ನೆನಪಾದವು.  


ಕನ್ನಡದ  ಉದಯವಾಣಿಯಲ್ಲೂ  ಇಂಗ್ಲೀಶಿನಲ್ಲಿ  ನ್ಯೂಸ್ ವೀಕ್     ಬಳಗದ  ಜಾಲ  ಪತ್ರಿಕೆಯಲ್ಲೂ  ಬೆಂಗಳೂರು  ಬಗೆಗಿನ   ಲೇಖನ  ಪ್ರಕಟವಾಗಿತ್ತು.    ಅಮೇರಿಕದಿಂದ  ಪ್ರಕಟವಾಗುವ  ಪತ್ರಿಕೆಯಲ್ಲೂ  ಬೆಂಗಳೂರಿನ  ಬಗ್ಗೆ  ಕೆಟ್ಟದಾಗಿ ಬರೆಯುವ  ಈ ಕಾರ್ನಾಡ್  ಬಗೆಗೆ  ಯೋಚಿಸಲೂ  ಹೇಸಿಗೆ  ಅನಿಸುತ್ತದೆ  -   ಹಲವಾರು ವರ್ಷಗಳಿಂದ  ಇಲ್ಲಿಯೇ  ಬದುಕಿರಿರುವುದಾದರೂ    ನೆಲೆ ನಿಂತ  ಊರಿಗೆ  ಸಮಾಜಕ್ಕೆ    ಈತನ  ಕೊಡುಗೆ  ಸೊನ್ನೆ.  ಬೆಂಗಳೂರಿನ  ಕಸದ  ರಾಶಿಗೆ    ಯುರೋಪಿನಂತಿತ್ತು  ಬೆಂಗಳೂರು  ಎನ್ನುವ   ಈ  ಕಾರ್ನಾಡನ  ಕೊಡುಗೆ  ಇಲ್ಲವೇ ?  ಉಂಟು.  ತಮ್ಮ  ಪಾಲಿನ    ಕಸ.  

ನಾ  ಮೊದಲು ನೋಡಿದ  ಬೆಂಗಳೂರು  ಇದಲ್ಲವಲ್ಲ ಎಂದು ಗಿರೀಷ    ಕಾರ್ನಾಡ      ಉದಯವಾಣಿಯಲ್ಲಿ ಹಪಹಪಿಸಿದ್ದಾರೆ.  ಆದರೆ  ದಾರಿ ಅಗಲಗೊಳಿಸಲು    ಅವರ ಮನೆ ಗೋಡೆ  ಕೆಡವುದರ  ವರೆಗೆ ಅವರೂ  ಸುಮ್ಮನಿದ್ದರು.  ಮುಂಬಯಿಯಲ್ಲಿ   ಪದ್ಯ  ಹೇಳುವವಳಿಗಾಗಿ     ಬಹಳ   ಅಗತ್ಯವಿದ್ದ     ಮೇಲ್ಸೇತುವೆ   ನಿರ್ಮಾಣ  ಸ್ಥಗಿತಗೊಳಿಸಲಾಗಿತ್ತು. ವಿಳಂಬವಾದಂತೆ   ಯೋಜನಾ ಖರ್ಚು ಏರುತ್ತಾ  ಹೋಗುತ್ತದೆ.  

ಪ್ರತಿ ದಿನ  ನಾಲ್ಕು ನೂರು  ಕಾರುಗಳು  ಸಾವಿರದ ಇನ್ನೂರು  ಬೈಕುಗಳು  ರಸ್ತೆಗಿಳಿಯುತ್ತದೆ  ಎನ್ನುವ   ಈ ಕಾರ್ನಾಡರು  ಸ್ವತಹಾ  ಕಾರು  ಉಪಯೋಗಿಸುವವರೇ  ಆಗಿದ್ದಾರಲ್ಲ  !   ರಸ್ತೆ  ಅಗಲವಾದರೆ  ಇವರಿಗೂ  ಅನುಕೂಲವಲ್ಲವೇ ?   ರಾಚ್ಗನ್  ತಮಿಳು ಸಿನೆಮದಲ್ಲಿ  ಕಾರು ತಯಾರಿ ಕಂಪೇನಿ ಯಜಮಾನನಾಗಿ  ನಟಿಸಿದ    ಈ  ಕಾರ್ನಾಡರಿಗೆ   ಕಾರು  ತಯಾರಿ ಹಾಗೂ   ಉಪಯೋಗದ  ಸಮಸ್ಯೆಗಳ    ಬಗೆಗೆ   ಅರಿವು  ಇರಬಹುದಲ್ಲ ??   

ಕೊನೆಗೆ    ಇಂಗ್ಲೀಷ್  ಕನ್ನಡದಲ್ಲೆರಡರಲ್ಲೂ  ತಮ್ಮ  ಗೋಳು  ಬರೆಯುವ  ಅವರು  ಮೊದಲು  
ವೈಯುಕ್ತಿಕ   ವಾಹನದ ಬದಲಾಗಿ ವೈಯುಕ್ತಿಕ  ಶ್ರಮ  ಉಪಯೋಗಿಸಿ  ನಡೆಯೋಣ,  ಸೈಕಲ್ ಉಪಯೋಗಿಸೋಣ  ಅಥವಾ  ಬಸ್ಸಿನ ವ್ಯವಸ್ಥೆ ಹೆಚ್ಚು  ಬಲಿಷ್ಟಗೊಳಿಸೋಣ  ಎನ್ನಬಹುದಾಗಿತ್ತು.    ಅವರ  ನಾಟಕಗಳಲ್ಲಿ  ಈ   ಸಂದೇಶ    ಕೊಡುತ್ತಿದ್ದರೆ   ಪರಿಣಾಮಕಾರಿಯಾಗುತಿತ್ತು.   

ಕಾರು ನಾಡರ  ಬಗೆಗೆ  ಇನ್ನಷ್ಟು  ಉತ್ತಮ  ಪ್ರತಿಕ್ರಿಯೆ ಓದಲು
http://www.kannadaprabha.com/pdf/7112012/9.pdf

Tuesday, October 16, 2012

ಜಗತ್ತನ್ನು ಉಳಿಸಲು ದೇವರು ಅವತರಿಸುತ್ತಾನೆ …….



ದೇವರು  ಆರು ದಿನಗಳಲ್ಲಿ ಜಗತ್ತನ್ನು ಸೃಷ್ಟಿಸಿದ. ಇದು  ಅಮೇರಿಕ  ಎಂಬ  ದೇಶದ  ಹಲವು  ರಾಜ್ಯಗಳಲ್ಲಿ  ಪುಟ್ಟ   ಮಕ್ಕಳು  ಶಾಲೆಯಲ್ಲಿ    ಓದುವ   ಪಾಠ.    ಅನಂತರ  …  ಕ್ಷಮಿಸಿ ಇಲ್ಲಿ ಸ್ವಲ್ಪ   ಗೊಂದಲವಿದೆ.     ಗಿನಿಸಿಸ್ ಒಂದರ ಪ್ರಕಾರ  ಗಿಡ  ಮರಗಳ ಪ್ರಾಣಿಗಳ  ಅನಂತರ  ಆಡಮ್ ಹಾಗೂ   ಇವ್  ಇವರನ್ನು ಜತೆಯಾಗಿ ಸೃಷ್ಟಿಸಿದ.

  

ಆದರೆ,  ಗಿನಿಸಿಸ್  ಎರಡರ  ಪ್ರಕಾರ  ಮೊದಲು  ಆಡಮ್ ನಂತರ  ಗಿಡಮರಗಳು ಪ್ರಾಣಿಗಳ     ಸೃಷ್ಟಿಯಾದ  ನಂತರ  ಆಡಮನ   ಪಕ್ಕೆಲುಬುವಿನಿಂದ   ಅವನಿಗೊಂದು  ಜತೆಗಾರ್ತಿ ಇವ್ ಳನ್ನು   ಕೊಟ್ಟ.    



ಒಟ್ಟಿನಲ್ಲಿ ದೇವರು   ಆಡಮ್  ಮತ್ತು ಇವ್  ಅವರನ್ನು  ಸೃಷ್ಟಿಸಿದ  ಅನ್ನುವುದಕ್ಕೆ  ಯಾವುದೇ  ಸಂಶಯವಿಲ್ಲ.   ಅಮೇರಿಕದಲ್ಲಿ    ಪುಟ್ಟ  ಮಕ್ಕಳ   ವಿದ್ಯಾಬ್ಯಾಸ  ಈ ರೀತಿ  ಸಾಗಲು   ಅಲ್ಲಿನ  ಪ್ರಮುಖ    ಪಕ್ಷವು  ಡಾರ್ವಿನನ  ವಿಕಾಸವಾದವನ್ನು  ಸಂಪೂರ್ಣ  ಅಲ್ಲಗಳೆದು  ಬೈಬಲ್ ವಾದವನ್ನು  ಪ್ರತಿಪಾದಿಸುತ್ತದೆ.

ಅವರು  ಅಲ್ಲಿನ  ಮಕ್ಕಳಿಗೆ ಏನು ಬೇಕಾದರೂ  ಕಲಿಸಲಿ ಎಂದು ನಾವು  ಪೂರ್ತಿಯಾಗಿ     ಬಿಟ್ಟುಬಿಡುವಂತಿಲ್ಲ. ಯಾಕೆಂದರೆ   ನವೆಂಬರ್   ಮೊದಲ  ವಾರ   ಅಮೇರಿಕದಲ್ಲಿ  ಅಧ್ಯಕ್ಷರ   ಚುನಾವಣೆ  ನಡೆಯಲಿದೆ.  ಈ ಚುನಾವಣೆ ಫಲಿತಾಂಶ   ಮುಂದಿನ ದಿನಗಳಲ್ಲಿ  ಜಾಗತಿಕ   ಪರಿಸರ  ದ್ವಂಸದ    ಬಗೆಗೆ  ನಿರ್ಣಾಯಕ  ತಿರುವು ಕೊಡಲಿದೆ. ಯಾಕೆಂದರೆ  ಅಲ್ಲಿನ    ಒಂದು  ಪಕ್ಷವು  ಮಾನವನ  ಚಟುವಟಿಕೆಗಳಿಂದಾಗಿ    ಭೂಮಿ    ಉಷ್ಣವಾಗುವುದನ್ನೂ  ಅಲ್ಲಗಳೆಯುತ್ತದೆ.   ಮತದಾರರಲ್ಲಿ   ಇನ್ನೇನು  ಅವತರಿಸಲಿರುವ  ಆ  ಸರ್ವಶಕ್ತ  ದೇವನು  ಎಲ್ಲವನ್ನೂ  ಸರಿಪಡಿಸುತ್ತಾನೆ  ಎನ್ನುವ   ಭ್ರಮೆಯನ್ನುಂಟು   ಮಾಡುತ್ತಾರೆ  ಈ  ಪಕ್ಷದವರು.   ನನ್ನ  ತಕರಾರು ಇರುವುದು  ದಾರ್ಮಿಕ   ಕಾರಣವಲ್ಲ,  ನಾವಿರುವ ಈ   ಜಗತ್ತಿನ  ಬಗೆಗೆ   ಪರಿಸರ ಕಾಳಜಿ    ಅಷ್ಟೇ.  ಆದರೆ    ಈಗ   ಒಬಾಮನೇ    ಗೆದ್ದರೂ ಸುಖವಿಲ್ಲ.    ಯಾಕೆಂದರೆ ಶಾಸನ  ಸಭೆಗಳಲ್ಲಿ ಅವನ  ಪಕ್ಷಕ್ಕೆ  ಬಹುಮತವಿಲ್ಲ.  ಹಾಗೆ ಈ  ವಿತಂಡವಾದಿಗಳು  ಅವನ  ಪ್ರತಿ ಹೆಜ್ಜೆಗೂ  ಕಿರಿಕಿರಿ  ಉಂಟುಮಾಡುತ್ತಿದ್ದಾರೆ,  ಮುಂದೆಯೂ  ಮಾಡುತ್ತಾರೆ.    


ಅಮೇರಿಕದಲ್ಲೊಂದು  ಪ್ರಬಲ ಪಕ್ಷ – ಆನೆ ಪಕ್ಷ.  ಇವರೆಲ್ಲ  ದರ್ಮಬೀರುಗಳು.    ಈ  ಆನೆ ಪಕ್ಷದ   ರಾಜಕಾರಣಿಗಳ  ವರ್ತನೆ ಕೆಲವೊಮ್ಮೆ  ಹಾಸ್ಯಾಸ್ಪದವೂ  ಆಗಿರುವ  ಕಾರಣ  ಮೋಜು  ಅನಿಸುವುದಾದರೂ  ಅವರ ಕೈಯಲ್ಲಿ  ಅಧಿಕಾರ  ಅನ್ನುವಾಗ  ಬೀತಿ ಉಂಟಾಗುತ್ತದೆ.  ಡಾರ್ವಿನನ  ವಿಕಾಸವಾದದಿಂದ ಹಿಡಿದು   ಇಂದು  ವಿಜ್ಞಾನಿಗಳು  ಪ್ರಯೋಗದಿಂದ  ಖಚಿತಪಡಿಸುವ  ವಾತಾವರಣ  ಉಷ್ಣವಾಗುವುದರ ವರೆಗೆ ಎಲ್ಲವನ್ನೂ  ಅಲ್ಲಗಳೆಯುತ್ತಾರೆ.   ಮಾನವ ವಿಕಾಸ  ಬಗೆಗೆ    ಬೈಬಲ್‍ವಾದದಲ್ಲಿ   ಪಾಠ  ಮಾಡಬೇಕೆಂದು  ಶಿಕ್ಷಕರ  ಮೇಲೆ  ಒತ್ತಡವಿದೆ.      ನಿರಪರಾಧಿಗಳಿಗೆ      ಅತಿ ಹೆಚ್ಚು  ಮರಣದಂಡನೆ  ವಿದಿಸುವ  ರಾಜ್ಯ    ಸರಕಾರಗಳೆಲ್ಲ    ಈ  ಆನೆ ಪಕ್ಷದವು. ಈ   ಪಕ್ಷದ    ಬುಶ್  ಇತ್ಯಾದಿ    ತೈಲ ದೊರೆಗಳಿಗೆ     ಉತ್ತರ ದ್ರುವದ  ಹಿಮಕವಚ ಕರಗಿದರೆ   ಅಲ್ಲೂ  ತೈಲಬಾವಿ  ಕೊರೆಯುವ  ದೂರಾಲೋಚನೆ. 


ಏರುತ್ತಿರುವ  ಸಮುದ್ರ ಮಟ್ಟದಿಂದಾಗಿ  ಈಗಾಗಲೇ   ಅಮೇರಿಕದ  ಪೂರ್ವ ಕರಾವಳಿಯ  ಇತ್ತೀಚಿನ  ವರೆಗೆ     ೩೫೦ ಜನರ ವಾಸ್ತವ್ಯವಿದ್ದ   ಹಾಲೆಂಡ್ ಹೆಸರಿನ    ದ್ವೀಪವೊಂದು  ಮುಳುಗಿದರೂ  ಇವರು ಕಣ್ಮುಚ್ಚಿ ಕುಳಿತುಕೊಳ್ಳಲು  ತಯಾರು. ಮೇಲಿರುವ  ಚಿತ್ರದಲ್ಲಿರುವ   ಕಟ್ಟಡ  ಆ  ದ್ವೀಪದ  ಕೊನೆಯ  ಕಟ್ಟಡ.    ಈ  ವಿಚಾರದಲ್ಲಿ    ಕಿತಾಪತಿ  ಮಾಡದೆ   ಸುಮ್ಮನಿರಲು  ಮಾದ್ಯಮಗಳಿಗೆ ಹಾಗೂ  ವಿಜ್ಞಾನಿಗಳಿಗೆ  ಒತ್ತಡವಿದೆ.     

 ಅಂದು  ಈ  ಪಕ್ಷದ    ಜಾರ್ಜ್    ಬುಶ್  ಇರಾಕನ್ನು   ದಂಡೆತ್ತಿ  ಹೋದದ್ದು  ತೈಲ ಬಾವಿ  ವಶಪಡಿಸಿಕೊಳ್ಳುವುದಕ್ಕೆ.  ಆಗ  ಜನಬೆಂಬಲ  ದೊರಕಿಸಿಕೊಳ್ಳಲು   ಸದ್ದಾಮನಲ್ಲಿ  ಅಪಾಯಕಾರಿ  ಶಸ್ತ್ರಾಸ್ತ್ರಗಳಿವೆ  ಎಂದು    ಎಷ್ಟು ಅಪಪ್ರಚಾರ ಮಾಡಿದ್ದಾರೆಂದರೆ   ಇಂದಿಗೂ,   ಒಂಬತ್ತು  ವರ್ಷ    ಕಳೆದ  ನಂತರವೂ  ಆನೆ ಪಕ್ಷದ  ಅನುಯಾಯಿಗಳಿಗೆ  ಅದು ಸುಳ್ಳೆಂದು  ಅರಿವಾಗಲೇ  ಇಲ್ಲ.     ಎರಡೇ  ಪಕ್ಷಗಳು  ಅಂದ ನಂತರ  ಸಮಪಾಲು   ಜನ  ಇವರ   ಬೆಂಬಲಿಗರೆಂದು  ಹೇಳಬಹುದು.  ಮುಂದುವರಿಸಿ  ಹೇಳುವುದಾದರೆ   ಅರೆವಾಶಿ  ಅಮೇರಿಕನರು  ಅರೆ ಹುಚ್ಚರು  ಅನ್ನಲೂ  ಬಹುದು.  J


 ಇಷ್ಟರ  ವರೆಗೆ ನಮಗೆ ಇಸ್ಲಾಮಿಕ್  ಮೂಲಬೂತವಾದ  ಮಾತ್ರ  ಪರಿಚಿತವಾಗಿತ್ತು.  ನಿಜಕ್ಕೂ  ನೋಡಿದರೆ  ಈ   ಕ್ರೈಸ್ತ  ಭಯೋತ್ಪಾದನೆ  ಹೆಚ್ಚು  ಅಪಾಯಕಾರಿ.    ಇದರ   ಗಂಬೀರ  ಸಮಸ್ಯೆ  ನಮಗೆ  ಅರಿವಾಗದೆ ಇರುವುದಕ್ಕೆ  ಕಾರಣ  -  ಮಾದ್ಯಮಗಳೆಲ್ಲ  ಅವರ   ನಿಯಂತ್ರಣದಲ್ಲಿ  ಇರುವುದು.  ದೇವರು ಬಂದು  ನಮ್ಮನ್ನೆಲ್ಲ  ಕಾಪಾಡುತ್ತಾನೆ  ಎನ್ನುವ  ಮೂರ್ಖನ  ಕೈಯ್ಯಲ್ಲಿ    ಜಗತ್ತಿನ  ಅತಿ ದೊಡ್ಡ  ಅಣುಬಾಂಬುಗಳ ರಾಶಿಯ  ನಿಯಂತ್ರಣವಿದ್ದರೆ    ??        



eÛeé% …ßÎé @ÈÚƒ¾Úᒀ @ÈæßÂOÚ¥ÚÆÇ«Ú PÃÌ`¾Úß«é VÚßM®Úâ´VÚ×Úß }ÚÈÚß½ ®ÛÃ…ÄÀÈÚ«Úß„ Ôæ_`ÒOæàMsÚÈÚâ´.   eÛ}ÚÀ~Þ}Ú ÑÚÈÚáÛdÈÚ«Úß„ «æÄOÚ_`ÑÚÄß ÑÚÈÚßÁÚ «ÚsæÑÚ†æÞOÚß ÈÚß}Úß¡ @ÈæßÂOÚÈÚ«Úß„ ¥æÞÈÛƒ®Ú}ÚÀ¥Ú ÑÛÈÚáÛÃdÀÈÚ«Û„W ®ÚÂÈÚ~%ÑÚÄß ÑÚMÉ¨Û«Ú¥ÚÆÇ …¥ÚÅÛÈÚzæ }ÚÁÚ†æÞOæM¥Úß …ÕÁÚMVÚÈÛW OÚÁæ ¬ÞsÚÄß @ÈÚâ´ ®ÚÃ…Ä ÈæÞ¦OæVÚ×ÛW¥Ú§ÈÚâ´. 

C Õ«æ„Åæ¾Úᒀ «ÛÈÚâ´ CÈÚÁæVæ @eÛk}ÚÁÛW¥Ú§ Éßmé ÁæàÞÉß„ ÈÚß}Úß¡ B«Úà„ d«Ú¯Ã¾ÚßÁÛW DئÁÚßÈÚ …ÁÛOé J†ÛÈÚß @ÈÚÁÚ «ÚsÚßÈÚy ÔæVÚÅæzæ¾Úß ÑÚ°¨æ%¾Úß«Úß„ VÚÈÚ߬ÑÚ†æÞOÚß. ÁæàÞÉß„ @ÈÚÁÚß ÈæàÞÈÚß%«é ^Ú^é%«Ú @«Úß¾ÚáÛ¿ß. GÄÇ @ÈæßÂOÚ«Ú„ÁÚß C «æÄ¥Ú ¥æÞÈÚÁÚß- @M¥ÚÁæ ¾æßÞÑÚßPÃÑÚ¡«Ú OÛ«Úà«Ú«Úß„ ®ÛÆÑÚ†æÞOÚß GM…ߥÚß ÈæàÞÈÚß%«é ^Ú^é%«Ú ®ÚÃ~®Û¥Ú«æ. ÉßÑæàÓÞ¾Úß eÛÀOÚÓ«é Òn¾Úᒀ ¾æßÞÑÚßPÃÑÚ¡ ÈÚß}æ¡ d¬ÑÚß}Û¡«æ GM…ߥÚß ÈæàÞÈÚß%«Ú„ÁÚ «ÚM¸Oæ. ^Ú^é%Væ Ôæ^Úß` Ôæ^Úß` ÑÚMSæÀ¾Úß ÑÚ¥ÚÑÚÀÁÚß †æÞOÚß. ÔÛVÛW ÈÚߥÚßÈæ¾ÚáÛW d«ÚÑÚMSæÀ¾Úß«Úß„ Ôæ_`ÑÚßÈÚâ´¥Úß @ÈÚÁÚ ÑÚM®ÚÃ¥Û¾Úß. Éßmé ÁæàÞÉß„¾Úß }Û}Ú eÛeé% ÁæàÞÉß„ ÈÚßàÈÚÁÚß ®Ú~„¾ÚßÂM¥Ú 35 ÈÚßOÚQ×Ú«Úß„ ®Ús榥ڧÁÚß! ÈæàÞÈÚß%«Ú„ÁÚ C ¬ÄßɬM¥ÛW @…ÃÔÛM ÆMOÚ«é 1862ÁÚÆÇ …ÔÚß®Ú~„}Ú‡ÈÚ«Úß„ ¬ÎæÞƒÒ¥Úà§ DMlß. 

ÈæàÞÈÚß%«Ú„ÁÚß ÈÚß}Úß¡ eÛeé% …ßÎé @ÈÚÁÚ"†Û«é% @Væç«é BÈÛMeæÆOÚÅéÓ' }ÚÈÚß½¥æÞ A¥Ú ÉËÚ‡ÈæãM¥Ú«Úß„ ÑÚäÏoÑÚßÈÚ OÚ«ÚÑÚß OÚMt¥Ú§ÁÚß. }ÛÈÚâ´ «ÚM¸¥Ú§«æ„Þ GÄÇÁÚà «ÚM…†æÞOÚß GM…ߥÚß @ÈÚÁÚ BÁÛ¥æ¾ÚáÛW}Úß¡. @ÈÚÁÚM}æ¾æßÞ ÑÚIJVÚ×Úß ÈÚß}Úß¡ Ñè¦ @ÁæÞ¸¾ÚáÛ¥Ú ÈÚÔÛ¸VÚ×Úà «Úsæ¥ÚßOæàMt¥Û§Áæ, B}ÚÁÚ ÈÚßßÒÇÈÚßÁÚß }ÚÈÚß½«æ„Þ @«ÚßÑÚÂÑÚ†æÞOÚß GM¥Úß …¾ÚßÑÚß}Û¡Áæ. JM¥æÞ JM¥Úß ÈÚß}Ú- @M¥ÚÁæ }ÚÈÚß½ ÈÚß}ÚÈæãM¥Ú«æ„Þ ÔæàM¦ÁÚßÈÚ ÉËÚ‡¥Ú ÑÚäÏo @ÈÚÁÚ VÚßÂ."PÃÌ`¾Úß«é Áæçmé' ÑÚMYÚl«æ¾Úßß ÔÚ}Úß¡ @MËÚVÚ×Ú ¥æçÈÛ«ÚßËÛÑÚ«ÚÈÚâ´ ÉËÚ‡¥Ú OÛ«Úà«ÛW ®ÚÂÈÚ~%}ÚÈÛVÚ†æÞOÚß GM¥Úß …¾ÚßÑÚß~¡¥Ú§Áæ, ÑÚIJVÚ×Úß ËÚÂÞ¾Úß}é ÉËÚ‡¥Ú OÛ«Úà«Úß AVÚ†æÞOÚß G«Úß„~¡¥Û§Áæ. BM¢Ú «ÛVÚÂOÚ}æVÚ×Ú ÈÚߨæ´À ÑÚMYÚÎÚ%ÈÚ«Úß„ }Ú¯°ÑÚ†æÞOÛ¥ÚÁæ ¥æÞÈÚÁæÞ ®ÚÈÛsÚ }æàÞÁÚ†æÞOÚÎæo. 

ಇವೆಲ್ಲ  ಯೋಚಿಸುವಾಗ ಸಚ್ಚಿದಾನಂದ  ಹೆಗ್ಡೆಯವರ   ಮಾತು  ಇಲ್ಲಿ  ಪ್ರಸ್ತುತವೆನಿಸುತ್ತದೆ.   ಅವರು ಬರೆಯುತ್ತಾರೆ -    ಪ್ರಕೃತಿಯೊಂದಿಗೆ   ಒಂದಾಗುವುದು ಮಾನವ    ದರ್ಮ.   ಪ್ರಕೃತಿಯನ್ನು ತುಳಿಯುವುದು ಅದರ್ಮ.  ಪ್ರಕೃತಿ ಇರುವುದು  ಮಾನವನಿಗಾಗಿ ಎಂಬ  ಸೆಮೆಟಿಕ್ ಸಿದ್ದಾಂತವನ್ನು ನಾವು ಕೈ ಬಿಟ್ಟು  ಭಾರತಿಯ  ಸಂಸ್ಕೃತಿಗೆ  ಮರಳಬೇಕು.  ಈಗ  ಇರುವುದು  ಅದೊಂದೆ  ಪರಿಹಾರ.



ತಡವಾಗಿ   ಸೇರ್ಪಡಿಸಿದ   ಸೂಚನೆ  :    ಅಶೋಕಣ್ಣನವರು ಹೇಳಿದಂತೆ,    ಕನ್ನಡ  ಪ್ರಭದ  ಅಕ್ಷರಗಳು  ಅಳವಡಿಸಿರದ  ಗಣಕಗಳಲ್ಲಿ  ಜೋರ್ಜ  ಅವರ  ಅಂಕಣ  ಓದಲು  ಸಾದ್ಯವಾಗುವುದಿಲ್ಲ.   ಸುಲಭ  ಪರಿಹಾರವೆಂದರೆ  ಫೋಂಟ್  ಹಂಗಿಲ್ಲದೆ  ಓದಲು   ಮೂಲ   ಕನ್ನಡ  ಪ್ರಭ  ಪತ್ರಿಕೆಯ  ಪುಟವನ್ನೇ  ತೆರೆಯಿರಿ    - http://www.kannadaprabha.com/pdf/14102012/10.pdf.   ಆ  ಲೇಖನದ  ಇಂಗ್ಲೀಶ್ ಮೂಲಪ್ರತಿಯನ್ನೇ  ಓದುವ  ಆಸಕ್ತಿ ಇದ್ದರೆ  -   http://tjsgeorge.blogspot.in/2012/10/as-religious-hardliners-gain-ground.html

Saturday, October 06, 2012

ರಸ್ತೆಗಳ ಕಾರುಗಳಿಂದ ಮುಕ್ತಗೊಳಿಸೋಣ !!

ನಮ್ಮ  ಸಮಾಜ  ಇಂದು ಭ್ರಮಾಲೋಕದಲ್ಲಿದೆ.   ಕಾರುಗಳ   ಗುಲಾಮಗಿರಿಗೆ  ಎಲ್ಲರೂ   ಒಳಪಟ್ಟಿದ್ದೇವೆ.    ಪರದೇಶಗಳ  ಸಹಾಯದಿಂದ  ತಯಾರುವ ಕಾರುಗಳನ್ನು   ಪರದೇಶಿ ಇಂದನ  ಬಳಸಿ  ಕಾರುಗಳ    ಓಡಿಸುವುದು  ಹೆಮ್ಮೆಯ  ಸಂಕೇತ  ಅನ್ನುವುದೇ ಯೋಚಿಸಿ ನೋಡಿದರೆ    ಮುಜುಗರದ  ವಿಚಾರ.  ಇಂದು   ಸಾರ್ವಜನಿಕ  ಸೊತ್ತಾದ  ರಸ್ತೆಯನ್ನು   ಕಾರು  ಎಂಬ   ವೈಯುಕ್ತಿಕ  ಸೊತ್ತು   ಸಮಾಜಕ್ಕೆ  ಅರಿವೇ  ಆಗದಂತೆ    ಆತಿಕ್ರಮಿಸುತ್ತಿದೆ.   ಪರಿಣಾಮವಾಗಿ   ರಸ್ತೆ ಇರುವುದೇ  ಕಾರುಗಳಿಗಾಗಿ  ಎನ್ನುವ  ಬಾವನೆ ಸಮಾಜ  ಹೊಂದಿರುವುದು ಬೇಸರದ  ವಿಚಾರ.  

ಕೊಳ್ಳುಬಾಕ  ಸಂಸ್ಕೃತಿಯ  ಪ್ರಮುಖ  ಬಾಗಗಳಾದ  ಟಿವಿ  ಮೊಸೈಕಲು ಮೊಬೈಲುಗಳು  ಸಮಾಜವನ್ನು  ಪ್ರಜ್ನೆರಹಿತವಾಗಿ   ಭ್ರಮಾಲೋಕದತ್ತ ದೂಡುತ್ತಿವೆ.  ಜನ    ಕಾರು ಕೊಳ್ಳಲು,  ನಡೆಸಲು   ತಮ್ಮ ದುಡಿಮೆಯ  ಬಹು ಪಾಲು  ಹಣವನ್ನು  ವಿನಿಯೋಗಿಸುತ್ತಿದ್ದಾರೆ.   ಸರಕಾರಗಳು ಕಾರು ಓಡಾಟ  ಸುಗಮಗೊಳಿಸಲು  ಎನ್ನುವ  ನೆಪದಲ್ಲಿ   ರಸ್ತೆಗಾಗಿ  ಬಹುಪಾಲು ಹಣವನ್ನು  ಪೋಲು ಮಾಡಿತ್ತಿದೆ.   ಕಾರು  ದಟ್ಟಣೆಯಿಂದಾಗಿ    ಪರಿಸರ ಮಾಲಿನ್ಯ,  ರಸ್ತೆಯಲ್ಲಿ ತಡೆಯಿಂದಾಗಿ  ಸಮಯ ಪೋಲು ಇತ್ಯಾದಿ ಹಲವಾರು    ಸಮಸ್ಯೆಗಳು.   ವರ್ಷದಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ  ಹೆಚ್ಚು  ಜನ  ರಸ್ತೆ ಅಪಘಾತದಲ್ಲಿ  ಸತ್ತು  ಪ್ರಪಂಚದಲ್ಲಿಯೇ  ಅತಿ ಹೆಚ್ಚು  ರಸ್ತೆ ಅಪಘಾತದಲ್ಲಿ  ಸಾಯುವ  ದೇಶವೆನ್ನುವ ಕುಖ್ಯಾತಿ   ನಮ್ಮದು.     ಅರ್ಥಾತ್  ಒಂದು  ರೀತಿಯಲ್ಲಿ  ಕಾರಿಗಾಗಿ ನಾವು ಎನ್ನುವ  ಸ್ಥಿತಿ  ತಲಪಿದ್ದೇವೆ. 




ರಸ್ತೆಗಳ  ಮುಕ್ತಗೊಳಿಸೋಣ  ಹೋರಾಟ    ಇಂದು ನಿನ್ನೆಯದಲ್ಲ.  ಬಹಳ ಹಿಂದೆಯೇ  ಅದರ    ಕಿಡಿ ಹತ್ತಿದೆ.  ಆದರೆ  ಲಾಭದೆಡೆ  ಮುಖ ಮಾಡಿ ಕೂತ     ಸರಕಾರ  ಹಾಗೂ ಮಾದ್ಯಮಗಳು  ಸದಾ  ಕಾರು ಕಂಪೇನಿಗಳ  ಬೆಂಬಲಕ್ಕಿದ್ದು  ತಕ್ಷಣ  ಅವರ ನಿಯಂತ್ರಣದಲ್ಲಿರುವ     ಅಗ್ನಿಶಾಮಕದಳದ ಉಪಯೋಗ  ಪಡಕೊಳ್ಳುತ್ತಾರೆ.   ಅದುದರಿಂದ   ಈ  ಚಳುವಳಿಯೂ   ಅಣ್ಣಾ  ಹಜಾರೆ  ಸತ್ಯಾಗ್ರಹದಂತಾಗಿ   ಜಯ  ಸಾದಿಸಲಿಲ್ಲ. 

ಜಿ ಎಸ್ ಜಯದೇವರು  ತಮ್ಮ ಪುಸ್ತಕ    ಹಳ್ಳಿಹಾದಿಯಲ್ಲಿ   ಭ್ರಷ್ಟಾಚಾರ    ಜನರು ಒಪ್ಪಿಕೊಳ್ಳುವ    ವಿಚಾರ   ಹೇಳುತ್ತಾರೆ  - ಪ್ರತಿಯೊಬ್ಬರ  ಮನಸ್ಸಿನಲ್ಲೂ  ತಾವೂ  ಸಹ  ಇಂತಹ ಲಾಭದಾಯಕ  ಸ್ಥಾನಕ್ಕೆ  ಏರಿಕೊಂಡು  ಅಧಿಕಾರ ಅಂತಸ್ತು ಹಣ  ಎಲ್ಲವನ್ನೂ  ಗಳಿಸಬೇಕೆಂದು  ಭಾವಿಸುತ್ತಾರೆ. ಇದು ಬಹುಸಂಖ್ಯಾತ  ಬಾರತಿಯರ  ಕನಸು.  ಇಂತಹ ಕನಸನ್ನು ಕಾಣುತ್ತ  ಇದು ಸಾದ್ಯವಾಗದೆ ತಮಗೆ    ಇರುವುದರಿಂದ ವಿಫಲತೆಯ ಅತೃಪ್ತಿಯಲ್ಲಿ  ಯಾರೊ  ಒಬ್ಬ  ಮಾನ  ಮರ್ಯಾದೆ  ಮೈಚಳಿ ಬಿಟ್ಟು  ಮೆಲೇರಿದರೆ  ಅಬಿಮಾನದ  ಮಹಾಪೂರವನ್ನೇ  ಹರಿಸುತ್ತಾರೆ.  ತಮ್ಮ  ’ಕನಸನ್ನು   ಅವನು ನನಸು ಮಾಡಿದ ’   ಎಂದು ಅಂತರಂಗದಲ್ಲಿ ಅವನನ್ನು ಮೆಚ್ಚುತ್ತಾರೆ.  ಹಾಗಾಗಿ    ರಾಜಕೀಯದ  ಹೊಲಸಿನ ಬಗ್ಗೆ  ಅಸಹ್ಯವಾಗಲಿ, ಪ್ರತಿರೋದವಾಗಲಿ  ಇಂದು ಕಂಡು ಬರುತ್ತಿಲ್ಲ.    

 ಬಹುಕಾಲದಿಂದ  ಸಮಾಜಕ್ಕೆ  ಕಾರುಗಳ  ಬಗೆಗೆ  ಈ  ರೀತಿ  ಅಭಿಮಾನ  ಉಂಟೆಂಬ   ಬಾವನೆ  ನಾನು ಹೊಂದಿದ್ದೇನೆ.  ಎಲ್ಲರೂ   ಮುಂದೊಂದು ದಿನ  ಮಾರುತಿ ಸಾಂಟ್ರೊ  ಯಜಮಾನರಾಗುವವರೇ.  ನನಗೆ   ಜ್ಞಾನೋದಯವಾಗಲು     ಪ್ರಮುಖ  ಕಾರಣ - ಸ್ವಾವಲಂಬನೆ ಸಂಕೇತವಾದ  ಸೈಕಲಿನ ಬಗೆಗೆ  ಕೊರೆಯುವ  ಹುಚ್ಚು. :-)          ಕಾರುಗಳು  ಹೇಗೆ  ಸಮಾಜವನ್ನು  ಇಷ್ಟೊಂದು ಗುಲಾಮಗಿರಿಗೆ    ಒಳಪಡಿಸಿತೆಂದು  ವಿವರಿಸಲು  ಮುಖ್ಯ  ಮೈಲುಗಲ್ಲುಗಳಾದ  ವ್ಯಕ್ತಿಗಳ ಸನ್ನಿವೇಶಗಳ   ಸ್ಥೂಲ  ಚಿತ್ರಣ  ಮುಂದೆ   ಕೊಡುತ್ತೇನೆ.  

ಕಾರುಗಳು   ಇಷ್ಟೊಂದು  ಜನಪ್ರಿಯವಾಗಲು  ಅಮೇರಿಕದ   Miller McClintock  ಎಂಬವನ    ಕೊಡುಗೆ ಅಪಾರ.  ಮೂಲತ  ಸ್ಟಾನ್ಪೋರ್ಡಿನಲ್ಲಿ  ಇಂಗ್ಲೀಷು  ಮೇಸ್ಟ್ರಾದ  ಈ  ಬುದ್ದಿಜೀವಿ    ಸುಮಾರು  ವಾಹನ ಸಂಚಾರ   ಮಾಹಿತಿ  ಸಂಗ್ರಹಿಸಿ    ಹಾವರ್ಡ್ ನಲ್ಲಿ  ಈ  ವಿಷಯದಲ್ಲಿ  ಪ್ರಥಮ  ಪಿಚ್ಚಡಿ  ಎನಿಸಿಕೊಂಡವ.  ಮುಂದೆ  ಟ್ರಾಫಿಕ್  ಇಂಜಿನಿಯರುಗಳ  ಪಿತಾಮಹ.  

ಕಳೆದ  ಶತಮಾನದ   ದ್ವಿತೀಯ   ದಶಕದ  ಪ್ರಥಮಾರ್ಧದಲ್ಲಿ       ವಾಹನಗಳೆಂದರೆ ಅತಿ ಹೆಚ್ಚು  ಮಾನವ  ಜೀವನಕ್ಕೆ ಹಾನಿ ಉಂಟು ಮಾಡುವ ವಸ್ತು  ಎಂದು  ಫ್ರೌಡ  ಲೇಖನ  ಬರೆದಾತ.   ಲಾಸ್ ಎಂಜಲಸ್ ಸೇರಿದಂತೆ ಹಲವು ಪಟ್ಟಣಗಳು  ಇವನನ್ನು  ಸಲಹೆಗಾರನಾಗಿ   ಬಳಸಿಕೊಂಡವು.    ರಸ್ತೆ ಅಗಲ  ಮಾಡುವುದರಿಂದ  ಹೆಚ್ಚು ಹೆಚ್ಚು  ವಾಹನಗಳ  ಆಕರ್ಶಿಸಿ  ಚಾಲನೆ  ಮೊದಲಿನಷ್ಟೇ  ಗೊಜಲಾಗಿರುತ್ತದೆ.   ರಸ್ತೆಗಳಲ್ಲಿ  ಕಾರುಗಳ  ಬದಲು  ಟ್ರಾಮುಗಳ     ಚಾಲನೆಗೆ ಅನಿರ್ಬಂದಿತ ಓಡಾಟಕ್ಕೆ    ಹೆಚ್ಚು   ಪ್ರಾಶಸ್ತ್ಯ  ಕೊಡಬೇಕು  ಎಂದಲ್ಲ   ಬರೆದಾತ   ಇವನು.   ಆ  ಕಾಲದಲ್ಲಿಯೇ   ತುಂಬಾ ಮಕ್ಕಳ  ಬಲಿ ತೆಗೆದುಕೊಂಡ  ಕಾರುಗಳ    ಬಗೆಗೆ    ಜನರ ಮನಸ್ಸಿನಲ್ಲೂ  ಒಲುಮೆಯಿರಲಿಲ್ಲ.     ಆದರೆ     ಕಾರು ತಯಾರಕರು  ತುಂಬಾ  ಕಾರುಗಳ ತಯಾರಿಸುತ್ತಿದ್ದಾರಲ್ಲಾ  !!!

ಆಗ    ಈ  ಮಿಲ್ಲರ್     ಮಹಾತ್ಮ  ಸ್ಟೂಡ್ ಬೇಕರ್    ಕಂಪೇನಿಯ   ಸಂಪರ್ಕಕ್ಕೆ  ಬಂದ.    ಅವನ ವರ್ತನೆ   ಇಂದಿನ  ಪರೀಸ್ಥಿತಿಗೆ    ಹೋಲಿಸುವುದಾದರೆ   ಬಿಜೆಪಿಯಿಂದ  ಕಾಂಗ್ರೇಸಿಗೆ   ನೆಗೆದು  ಸೊನಿಯಾ  ಜಪ  ಪ್ರಾರಂಬಿಸಿದಂತಾಯಿತು.      ತಕ್ಷಣ  ಅವನ  ವಾದಸರಣಿಯೆಲ್ಲ  ಬದಲಾವಣೆ ಹೊಂದಿತು.  ಪಟ್ಟಣಗಳ  ರಚನೆ  ಕಾರು ಬಳಕೆಗೆ ಅನುಗುಣವಾಗಿರಬೇಕು.  ಆಗ  ಕಾರಿನ ಯಜಮಾನ  ಬಹಳ  ಸಮಯ ಉಳಿಸಲು    ಹಾಗೂ  ಕಾರ್ಯವೆಸಗಲು ಅನುಕೂಲವಾಗುತ್ತದೆ  ಎಂದ.     ಕಾಲೇಜುಗಳಲ್ಲಿ    ಸ್ಟುಡ್ ಬೇಕರ್  ಕಂಪೇನಿ  ಸಹಾಯದಿಂದ  ಐನೂರಕ್ಕೂ  ಹೆಚ್ಚು  ಮರಿ ಇಂಜೀನಿಯರುಗಳು  ತಯಾರಾದವು.  ಇದೊಂದು    ಕೈಗಾರಿಕೆಗಳು  ಬುದ್ದಿಜೀವಿಗಳ  ತಮ್ಮ  ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ  ಪಾಠ  ಕಲಿತ  ನಿರ್ಣಾಯಕ  ತಿರುವು. 





೧೯೧೯ರಲ್ಲಿ  ಅಮೇರಿಕದ  ರಾಜದಾನಿಯಿಂದ  ಸುಮಾರು ಎಂಬತ್ತು ಮಿಲಿಟರಿ  ಲಾರಿಗಳು ೪೮೦೦    ಕಿಮಿ  ದೂರದಲ್ಲಿರುವ   ಪಶ್ಚಿಮ  ಕರಾವಳಿಯತ್ತ  ಹೊರಡುತ್ತವೆ.  ಏಳುತ್ತಾ  ಬೀಳುತ್ತಾ  ದಾರಿಗಡ್ಡವಾದ ಸೇತುವೆಗಳ  ರಿಪೇರಿ ಮಾಡುತ್ತಾ  ಈ ಪಟಲಾಂ  ೬೨   ದಿನಗಳ  ತರುವಾಯ  ಗುರಿಮುಟ್ಟುತ್ತದೆ.    ಆಗ  ಅದರಲ್ಲಿ ಪುಡಿ ಅಧಿಕಾರಿಯಾಗಿದ್ದ ಐಸೆನ್ ಹೂವರ್ ಮುಂದೆ ಅಮೇರಿಕದ  ಅದ್ಯಕ್ಷನಾಗುತ್ತಾನೆ.   ಈ  ಮದ್ಯೆ  ಈತನಿಗೆ  ಎರಡನೇ   ಮಹಾಯುದ್ದದಲ್ಲಿ   ಹೀಟ್ಲರ್  ಮಹರಾಯ   ರಾಜರಸ್ತೆಗಳ   ಉಪಯುಕ್ತತೆ  ಪಾಠ ಮಾಡಿದ್ದ.   ಹಾಗೆ   ಐಸೆನ್ ಹೂವರ್  ಅಮೇರಿಕ  ದೇಶದಾದ್ಯಂತ   ಸಾಗಾಣಿಕೆಗೆ  ಅನಿವಾರ್ಯವಾದ  ಉತ್ತಮ  ರಸ್ತೆಗೆ  ಅಡಿಪಾಯ ಹಾಕುತ್ತಾನೆ.   




ಈ  ಕಾರು  ಗುಲಾಮಗಿರಿಗೆ  ಕಟ್ಟಡ ವಿನ್ಯಾಸಗಾರರೂ  ತಮ್ಮ  ಕೊಡುಗೆ ಇತ್ತಿದ್ದಾರೆ.  Walter Gropius  /   Le Corbusier   ಮುಂತಾದ   ಹಲವಾರು ಪ್ರಖ್ಯಾತ   ವಿನ್ಯಾಸಗಾರರು  ತಮ್ಮ  ಪಟ್ಟಣಗಳ   ಹಾಗೂ   ಕಟ್ಟಡಗಳ  ಕಾರುಗಳಲ್ಲಿ  ಅಗಮಿಸುವರಿಗೆ  ಅನುಕೂಲವಾಗಲೆಂದು  ನಿರ್ಮಿಸಿದರು.  ಇವರನ್ನು ಮಾದರಿಯೆಂದು  ಒಪ್ಪಿದ  ಉಳಿದ  ವಿನ್ಯಾಸಗಾರರೂ   ಮನೆಯಲ್ಲೊಂದು ಕಾರು ಉಂಟೆಂದು  ಪರಿಗಣಿಸಿ  ಕಾರು ಖರೀದಿಗೆ  ಹಾಗೂ  ಅದರಲ್ಲೇ  ತಿರುಗಾಟಕ್ಕೂ   ಪರೋಕ್ಷ   ಒತ್ತಡ  ಹಾಕಿದರು.    



   
ಹೆಚ್ಚು ಕಾರುಗಳ  ತಯಾರಿಕೆಗೆ ಹೆಚ್ಚು ಜನರಿಗೆ  ಕೆಲಸ ಕೊಡುವುದು   ಹಾಗೂ   ಅದು   ಅಭಿವೃದ್ದಿಗೆ  ಪೂರಕ   ಎಂದು  ಇತರ  ದೇಶಗಳ  ಪುಡಾರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದು  ಹೀಟ್ಲರ್  ಮಹಾಶಯ. ಜರ್ಮನಿಯಲ್ಲಿ ೧೯೩೨ರಲ್ಲಿ     ೩೩೦೦೦ ಜನ ೧ ಲಕ್ಷ  ನಾಲ್ಕು  ಸಾವಿರ  ಕಾರು ತಯಾರಿಸಿದರೆ  ಮೂರು ವರ್ಷ  ಅನಂತರ  ಒಂದು ಲಕ್ಷ  ಜನ  ಕೆಲಸ ಮಾಡಿ  ಮುರೂವರೆ  ಲಕ್ಷ  ಕಾರುಗಳ  ತಯಾರಿಸಿದರು.   ವೈಯುಕ್ತಿಕವಾಗಿ    ಅವನನ್ನು ಉಗಿದರೂ  ಅವನ  ಅಪಾರ   ಬುದ್ದಿವಂತಿಕೆ   ಎಲ್ಲ ದೇಶಗಳೂ ಇಂದು   ಅನುಬವಿಸುತ್ತಿದೆ,  ಅನುಸರಿಸುತ್ತಿದೆ.  ಅವನದೊಂದು   ಅರ್ಥಪೂರ್ಣ  ಹೇಳಿಕೆ  ಹೀಗಿದೆ.  “Through clever and constant application of propaganda, people can be made to see paradise as hell, and also the other way round, to consider the most wretched sort of life as paradise.” Adolf Hitler

ವಾಹನಗಳ  ಗೂಂಡಾಗಿರಿ  ಅರಿವಿರುವ    ನನಗೆ  ರಸ್ತೆಗಳಿರುವುದು  ಯಾರಿಗಾಗಿ ಎನ್ನುವ    ಗೊಂದಲ  ಹೊಸತಲ್ಲ.  ಆದರೆ   ಆರು ತಿಂಗಳು ಹಿಂದೆ ಒಂದು ಅಪಘಾತಕ್ಕೆ ಸಿಲುಕಿದ ನಂತರ  ನನ್ನೂರಿನ   ಜನರ  ವರ್ತನೆ  ಅಘಾತ ಉಂಟು ಮಾಡಿತು.  ಸೇರಿದ  ಗೂಂಡಾ  ಜನರ  ವರ್ತನೆ   ದಾರಿ ತಪ್ಪಿ ಬಂದ ಮೊಸೈಕಲಿಗನ    ಸಮರ್ತಿಸುವಂತಿತ್ತು.  ನೀವು  ಸೈಕಲಿಗಾಗಿ  ಲಕ್ಷ  ರೂಪಾಯಿ ಖರ್ಚು ಮಾಡಿರಬಹುದು, ಅದನ್ನು ತಪ್ಪು  ದಾರಿಯಲ್ಲಿ ಬಂದು   ಪುಡಿ ಮಾಡಿದ್ದಕ್ಕೆ   ಅವನು   ಒಂದೆರಡು ಸಾವಿರ  ಕೊಡುತ್ತಾನೆ  ಎನ್ನುತ್ತಾರೆ    ಸೇರಿದ  ಗೂಂಡಾಗಳು.   

ನಿಜಕ್ಕೂ  ನೋಡಿದರೆ  ಒಬ್ಬ  ಸೈಕಲು ಸವಾರನನ್ನು  ನೀನಾದರೂ  ಸೈಕಲಿನಲ್ಲಿ ಪ್ರಯಾಣ  ಮಾಡಿ  ವಾಹನದಟ್ಟನೆ, ಮಲೀನತೆ  ಕಡಿಮೆ ಮಾಡಿದೆಯಲ್ಲ  ಎನ್ನುವ  ಬಾವನೆಯಲ್ಲಿ  ವಾಹನ ಚಾಲಕ ನಗುಮುಖದಿಂದ ಸ್ವಾಗತಿಸಬೇಕು.  ಆದರೆ  ಇವನೆಲ್ಲಿಂದ ಬಂದ ಶನಿ  ಎನ್ನುವ   ಬಾವನೆ  ಹೆಚ್ಚು  ಫಾಶನ್  ಆಗಿರುವುದು  ಮಾನವ  ಜನಾಂಗದದ  ದುರದೃಷ್ಟ. 



ಕಾರುಗಳ  ಗುಲಾಮಗಿರಿಯಿಂದ  ಹೊರಬರಲು ಪ್ರಯತ್ನಿಸೋಣ.  ರಸ್ತೆಗಳಿರುವುದು  ನಾಗರಿಕರಿಗೆ ಹೊರತು  ವಾಹನಗಳಿಗಲ್ಲ  ಎನ್ನುವ   ಮಾತು ನ್ಯೂಯೊರ್ಕ್  ಮೆಯರ್  ಬ್ಲೂಮ್ ಬೆರ್ಗ್  ಇತ್ತೀಚೆಗೆ   ಘೋಷಿಸಿದ್ದರು.    ನಮ್ಮ  ಸೌಜನ್ಯರಹಿತ  ವರ್ತನೆಗೆ  ಕಾರಣ  ನಮ್ಮಲ್ಲಿನ     ಶೀಘ್ರ  ಬೆಳವಣಿಕೆಯೂ  ಹೌದು.  ಮೊಬೈಲ್  ಆಗಲಿ  ವಾಹನಗಳಾಗಲಿ ದೊರಕುವ ಮೊದಲು ಅರಿವು ಮೂಡಬೇಕಾಗಿತ್ತು.   ಇನ್ನಾದರೂ  ಎಚ್ಚೆತ್ತುಕೊಳ್ಳುವರೆಂದು  ಹಾರೈಕೆ. 

ಕೊನೆ ಮಾತು :  ಈಗ  ಹತ್ತು ತಿಂಗಳಿಂದ  ನಾನು ಕಾರು ಚಾಲನೆಯಿಂದ  ದೂರವಿದ್ದೇನೆ.  ನಡೆಯುವುದು, ಸೈಕಲು ಹಾಗೂ  ಸಾರ್ವಜನಿಕ  ಸಾರಿಗೆ ಉಪಯೋಗದಲ್ಲಿ  ಹಳ್ಳಿಯಲ್ಲಿದ್ದರೂ     ಸುದಾರಿಸಬಹುದೆಂಬ  ದೈರ್ಯ  ಬಂದಿದೆ.  ರಾತ್ರಿ ತಿರುಗಾಟ  ಇತ್ಯಾದಿ  ಸಾದ್ಯವಾಗದಿದ್ದರೂ  ಅನಿವಾರ್ಯ  ಓಡಾಟಕ್ಕೆ  ತೊಂದರೆಯಾಗಿಲ್ಲ.  ಈ ಪರ್ಯಾಯಗಳ  ಬಗೆಗೆ   ಮುಂದೆ ಬರೆಯುತ್ತೇನೆ.