ಇತ್ತೀಚಿನ ದಿನಗಳಲ್ಲಿ ನಾನು ನಿತ್ಯವೂ ವೈಯುಕ್ತಿಕ ಓಡಾಟಗಳಿಗೆಲ್ಲ ಬಳಸುವುದು ನನ್ನ ಮೂರು ಚಕ್ರದ ರಥವನ್ನೇ. ದಿನವೂ ಸರಾಸರಿ ಹದಿನೈದು ಕಿಮಿ ಬಳಸುತ್ತೇನೆ. ನಿನ್ನೆ ಗೆಳೆಯರನ್ನು ಕಾಣಲು ಮಂಗಳೂರಿಗೆ ಹೋಗಿದ್ದೆ. ವಾರದ ಹಿಂದೆ ಬೆಂಗಳೂರಿನಲ್ಲಿ ಕೆಲಸವಿದ್ದಾಗ ರೈಲಿನಲ್ಲಿ ಅದನ್ನೂ ಕೊಂಡು ಹೋಗಿ ಅಲ್ಲಿಯೂ ಬಳಸಿದ್ದೆ. ಈ ಪ್ರವಾಸದ ವರದಿಯನ್ನು ಓದಲು ಇಲ್ಲಿ ಕ್ಲಿಕ್ಕಿಸಿ. ಈ ಬಳಕೆಗಳು ನನಗೆ ಇದು ಹೊಗೆ ಉಗುಳುವ ವಾಹನಗಳಿಗೊಂದು ಪರ್ಯಾಯ ಎಂದು ಖಚಿತವಾಗಿ ಹೇಳುವ ದೈರ್ಯವನ್ನು ಕೊಟ್ಟಿದೆ.
ಕೆಟ್ಟ ರಸ್ತೆಗಳಲ್ಲಿ ಟ್ರೈಕಿನ ಪ್ರಯಾಣಕ್ಕೆ ಮೂರು ಚಕ್ರ ಮತ್ತು ಹೆಚ್ಚು ಅಗಲವಿರುವ ಕಾರಣ ಸೈಕಲುಗಳಿಂದ ಸ್ವಲ್ಪ ಹೆಚ್ಚು ಸಮಯ ಹಾಗೂ ಶ್ರಮ ಬೇಕಾಗುತ್ತದೆ. ನನಗೆ ಏಳು ಕಿಮಿ ದೂರದ ವಿಟ್ಲ ಪ್ರಯಾಣಕ್ಕೆ ಸರಾಸರಿ ಇಪ್ಪೆತ್ತರಡು ನಿಮಿಷ, ಹದಿನಾರು ಕಿಮಿ ದೂರದ ಪುತ್ತೂರು ನಲುವತ್ತೈದು ನಿಮಿಷ ಮತ್ತು ನಲುವತ್ತು ಕಿಮಿ ದೂರದ ಮಂಗಳೂರು ಅಂದಾಜು ಒಂದು ಮುಕ್ಕಾಲು ಗಂಟೆ ಚಾಲನಾ ಸಮಯ ಎನ್ನಬಹುದು.
30 Jan to Mangalore by trike at EveryTrail
ನನ್ನ ಪರಮಾವದಿ (ಹನ್ನೊಂದು ವರ್ಷಗಳಿಂದ ಬಳಸುವ ಒಮ್ನಿ ) ಕಾರಿನ ವಾರ್ಷಿಕ ಉಪಯೋಗ ಸುಮಾರು ಎಂಟು ಸಾವಿರ ಕಿಮಿ. ಇದಕ್ಕಾಗಿ ಇಂದನ, ತೇರಿಗೆ, ದಂಡ ಮತ್ತು ಸವಕಳಿ ಲೆಕ್ಕ ಹಾಕಿದರೆ ಕನಿಷ್ಟವೆಂದರೂ ಸುಮಾರು ನಲುವತ್ತು ಸಾವಿರ ಖರ್ಚು. ಈ ನಲುವತ್ತು ಸಾವಿರ ಎಂದರೆ [ಉತ್ತಮ ಬೆಳೆ ದೊರೆತ ವರ್ಷ] ನನ್ನ ವಾರ್ಷಿಕ ಆದಾಯದ ಮೂರನೇಯ ಒಂದು ಬಾಗ. ಅಂದರೆ ದಿನಕ್ಕೆ ಮೂರು ಘಂಟೆ ಕೆಲಸ ಮಾಡುವುದು ಕಾರಿನ ಖರ್ಚಿಗಾಗಿ ಎಂದಾಯಿತು. ನಾನು ಅಪರೂಪಕ್ಕೆ ೪೦ ಕಿಮಿ ದೂರದ ಮಂಗಳೂರಿಗೆ ಟ್ರೈಕಿನಲ್ಲಿ ಹೋದರೂ ಒಟ್ಟು ಬೇಕಾಗುವುದು ಒಂದೂವರೆ ಘಂಟೆ ಅಧಿಕ ಸಮಯ. ಖರ್ಚು ಬರೇ ನಾಲ್ಕು ರೂಪಾಯಿ ಬೆಲೆಯ ಒಂದು ಯುನಿಟ್ ವಿದ್ಯುತ್. ಮನೆಯಲ್ಲಾದರೆ ಅದೂ ಸೌರ ಫಲಕಗಳಿಂದ ದೊರೆಯುತ್ತದೆ. ಉಳಿದ ದಿನದ ಓಡಾಟದಲ್ಲಿ ಹೆಚ್ಚುವರಿ ಸಮಯದ ಅಗತ್ಯ ಒಂದು ಘಂಟೆಗಿಂತಲೂ ಕಡಿಮೆ.
ಐವತ್ತು ಕಿಲೊ ತೂಕದ ಜನಕ್ಕಾಗಿ ಸಾವಿರ ಕಿಲೊದ ಕಾರು ಓಡುವುದು ನನಗೆ ಸಮಂಜಸ ಎನಿಸುವುದಿಲ್ಲ. ನೂರಾರು ರೂಪಾಯಿ ಇಂದನ ಖರ್ಚು ಮಾಡಿ ವಾತಾವರಣ ಮಲೀನಗೊಳಿಸಿ ಪ್ರಯಾಣಿಸುವ ನಾವು ಉಳಿಸುವ ಸಮಯವನ್ನು ಸಕಾರಾತ್ಮಕವಾಗಿ ಬಳಸುತ್ತೇವೆಯೋ ? ಅನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ಕೊಡಬೇಕಾಗುತ್ತದೆ. ಹಾಗೆಯೇ ಕಾರು ಬಳಸದಿರುವುದೂ ಪ್ರವಾಹದ ವಿರುದ್ದ ಈಜಿದಂತೆ. ಈಗ ಜನರು ಕನಿಕರ ತೋರುವ ಪರೀಸ್ಥಿತಿ ಉಂಟಾಗುತ್ತಿದೆ.
Monday, January 31, 2011
Wednesday, December 01, 2010
ಈ ರಿಕಂಬಂಟ್ ಸೈಕಲುಗಳೆಂದರೆ
ಮೊದಲೆಲ್ಲ ಒಂದೇ ಸೈಕಲ್ ಮನೆಮಂದಿಗೆಲ್ಲ ಅನ್ನುವಂತಿತ್ತು. ಈ ರಿಕಂಬಂಟ್ ಸೈಕಲುಗಳಲ್ಲಿ ಅದಕ್ಕೆ ಆಸ್ಪದ ಕಡಿಮೆ.
ಈ ರಿಕಂಬಂಟ್ ಸೈಕಲುಗಳು ಟ್ರೈಕುಗಳು ಹೆಚ್ಚಾಗಿ ಬಳಕೆದಾರನ ಅಳತೆಗೆ ಸರಿಯಾಗಿ ರೂಪಿಸಲ್ಪಟ್ಟಿರುತ್ತದೆ. ಎಲ್ಲರಿಗೂ ಸೂಕ್ತ ಎನ್ನುವ ಒಂದೇ ಅಳತೆಯಲ್ಲ. ದರ್ಜಿ ಅಳತೆ ತೆಗೆದು ಬಟ್ಟೆ ಕತ್ತರಿಸಿ ಹೊಲಿಯುವಂತೆ ನನ್ನ ಟ್ರೈಕ್ ನನ್ನ ಸೊಂಟದ ಕೆಳಬಾಗದ ಉದ್ದಕ್ಕೆ [ x-seam] ಅನುಸಾರವಾಗಿ ನನ್ನಿಂದ ಜೋಡಿಸಲ್ಪಟ್ಟಿದೆ. ವ್ಯಾಪಾರಿಗಳಿಂದ ಕೊಳ್ಳುವುದಾದರೆ ಈ ಜೋಡಣೆಗಳನ್ನೆಲ್ಲ ಅವರೇ ಮಾಡಿಕೊಡುತ್ತಾರೆ. ನಾನು ಕಾರ್ಖಾನೆಯಿಂದ ನೇರವಾಗಿ ತರಿಸಿದ ಕಾರಣ ನಾನೇ ಮಾಡಬೇಕಾಯಿತು.
ನನ್ನ ಟ್ರೈಕ್ ಬರುವಾಗ ಉಳಿದ ಬಿಡಿಬಾಗಗಳೊಂದಿಗೆ ಉದ್ದವಾದ ಎರಡು ತುಂಡು ಚೈನ್ ಇಟ್ಟಿದ್ದರು. ನಾನು ಮೊದಲಿಗೆ ಟೈರು ಇತ್ಯಾದಿ ಬಾಗಗಳ ಸೇರಿಸಿ ಅದಕ್ಕೊಂಡು ರೂಪ ಕೊಡುತ್ತೇನೆ. ಅನಂತರ ಮುಂದಿನ ಚೈನ್ ಕೂರುವ ಬಾಗವನ್ನು ಜೋಡಿಸಿ ಟ್ರೈಕಿನ ಸೀಟಿನಲ್ಲಿ ಕಾಲು ಚಾಚಿ ಕುಳಿತು ನನಗೆ ಅಗತ್ಯವಿರುವ ಉದ್ದಕ್ಕೆ ಸರಿಯಾಗಿ ಅದನ್ನು ಬಿಗಿಮಾಡಿದೆ. ಅನಂತರ ಚೈನ್ ಆ ಅಳತೆಗೆ ಸರಿಯಾಗಿ ತುಂಡರಿಸಿ ಜೋಡಿಸಿದೆ.
ಹಾಗೆ ಇದರಲ್ಲಿ ಸವಾರನ ಎತ್ತರ ಮುಖ್ಯವಲ್ಲ, ಸೊಂಟದಿಂದ ಕೆಳಗಿರುವ ನಿರ್ದಿಷ್ಟ ಅಳತೆ ಸರಿಯಾಗಿದ್ದರೆ ಅದನ್ನು ಸವಾರಿ ಮಾಡಬಹುದು. ಹಾಗಾಗಿ ನನ್ನಿಂದ ಉದ್ದವಿರುವ ಅನಿಲನಿಗೆ ಒಂದು ಅಂಗಳದಲ್ಲಿ ಸುತ್ತು ಬರಬಹುದು ಹೊರತು ದೀರ್ಘ ಸವಾರಿ ಕಷ್ಟ ಸಾದ್ಯ. ಸಣ್ಣ ಪುಟ್ಟ ವ್ಯತ್ಯಾಸವಾಗಿದ್ದರೆ ಸೀಟಿನ ಹಿಂಬದಿ ಮಾಲುವಿಕೆಯಲ್ಲಿ ಹೆಚ್ಚು ಕಡಿಮೆ ಮಾಡಿ ಸರಿಪಡಿಸಲೂ ಬಹುದು.
ಕೆಲವು ರಿಕಂಬಂಟ್ ಸೈಕಲುಗಳಲ್ಲಿ ಆಸನವನ್ನು ಮುಂದೆ ಹಿಂದೆ ಮಾಡುವ ಅವಕಾಶ ಇರುತ್ತದೆ. ಅದರಲ್ಲಿ ಸ್ವಲ್ಪ ಗಾತ್ರ ವ್ಯತ್ಯಾಸ ಇದ್ದರೂ ಸವಾರಿ ಮಾಡಬಹುದು. ಆದರೆ ಗಾತ್ರ ವ್ಯತ್ಯಾಸ ಎಂದರೆ ಸಂಕೋಲೆ ಅಲ್ಲ ಚೈನ್ ಉದ್ದ ವ್ಯತ್ಯಾಸ ಮಾಡಬೇಕಾದರೆ ಅದು ಕಷ್ಟ ಸಾದ್ಯ.
ಅದುದರಿಂದ ಒಮ್ಮೆ ಕೂರಬಹುದೋ ಒಂದು ಸುತ್ತು ಚಲಾಯಿಸಬಹುದೋ ಎಂದೆಲ್ಲ ಕೇಳಿದವರು ಹೆಚ್ಚಿನವರು ನಿರಾಶೆ ಹೊಂದುತ್ತಾರೆ.

Tuesday, November 02, 2010
ಸೈಕಲ್ ಅಂಗಡಿಯಲ್ಲಿ
ಕಳೆದ ವಾರ ಸುನಿಲನ ಜತೆ ಸೈಕಲ್ ಅಂಗಡಿಗೆ ಹೋಗಿದ್ದೆ. ನಿಜವಾಗಿ ನಮ್ಮ ಮುಂದೆ ಎರಡು ಸಾದ್ಯತೆಗಳಿದ್ದವು. ಮೊದಲನೆಯದು ಅವನ ಹಳೆಯ ಸೈಕಲಿಗೆ ಗೇರು ಅಳವಡಿಸುವುದು. ಸುಮಾರು ಎಂಟು ನೂರು ರೂಪಾಯಿ ಆಗುತ್ತದೆ ಆದರೆ ನಾವು ಅದು ಸರಿಯಾಗಿ ಕೆಲಸ ಮಾಡುವ ಬಗೆಗೆ ಗಾರಂಟಿ ಕೊಡುವುದಿಲ್ಲ ಎಂದು ಅ ಅಂಗಡಿಯವರು ಹೇಳಿದ ಕಾರಣ ಆರು ಗೇರುಗಳ ಒಂದು ಹೊಸ ಹೀರೊ ಸೈಕಲ್ ಕೊಂಡೆವು. ಅನಂತರ ನಾನು ಹಲವು ಸೈಕಲ್ ಅಂಗಡಿಗಳಲ್ಲಿ ವಿಚಾರಿಸಲು ಎಲ್ಲರೂ ಅನಂತರ ಗೇರು ಅಳವಡಿಕೆ ಬಗೆಗೆ ಗಾರಂಟಿ ಇಲ್ಲವೆನ್ನುವ ಮಾತು ಹೇಳುವುದನ್ನು ಕೇಳಿ ನನಗೆ ನಿಜಕ್ಕೂ ಆಶ್ಚರ್ಯ ಉಂಟಾಗುತ್ತದೆ.
ಇಪ್ಪತೈದು ವರ್ಷ ಹಿಂದೆ ನಾನು ಮಂಗಳೂರಿನಲ್ಲಿ ಹೊಸ ಸೈಕಲ್ ಕೊಂಡುಕೊಂಡಿದ್ದೆ. ಆಗ ಗೇರು ಅಳವಡಿಸಿದ ಸೈಕಲ್ ಹೆಚ್ಚು ಜನಪ್ರಿಯವಾಗಿರಲಿಲ್ಲ ಮತ್ತು ಅಂಗಡಿಗಳಲ್ಲಿ ಮೊದಲೇ ಗೇರು ಅಳವಡಿಸಿದ ಸೈಕಲು ಮಾರಾಟಕ್ಕೆ ಲಭ್ಯವಿರಲಿಲ್ಲ. ಆ ಸೈಕಲಿಗೆ ಅಳವಡಿಸಲು ಬೆಂಗಳೂರಿನ ಅಂಗಡಿಯೊಂದರಿಂದ ಇನ್ನೂರು ರೂಪಾಯಿ ಕೊಟ್ಟು ಬಿಡಿಬಾಗಗಳ ತಂದು ನಾನು ಮನೆಯಲ್ಲಿಯೇ ಜೋಡಿಸಿದ್ದೆ. ಗೇರುಗಳ alignment ಸ್ವಲ್ಪ ನಾಜೂಕು ಕೆಲಸವಾದರೂ ಸಾದ್ಯವಿಲ್ಲವೆನ್ನುವಷ್ಟು ಕಷ್ಟಕರವಲ್ಲ. ಐದು ಗೇರುಗಳ ಅ ಸೈಕಲಿನಲ್ಲಿ ದೆಹಲಿ ವರೆಗೆ ಹೋಗಿದ್ದೆ.
ನಮ್ಮ ಸೈಕಲು ಅಂಗಡಿಯವರ ಕೆಲಸದ ಗುಣಮಟ್ಟ ನೋಡುವಾಗ ಕೆಲವೊಮ್ಮೆ ನಿಜಕ್ಕೂ ಬೇಸರವಾಗುತ್ತದೆ. ನನಗೆ ಸೊಂಟ ಸಮಸ್ಯೆಯಿಂದಾಗಿ ಬಗ್ಗಲು ಕಷ್ಟವಾಗುವುದರಿಂದ ತರಿಕೆರೆಯಲ್ಲಿ ಚಕ್ರ ಉಜ್ಜುವ ಸಮಸ್ಯೆಗೆ ಕಾರಣ ಗುರುತಿಸಲು ಕಷ್ಟವಾಯಿತು. ಆಗ ಸುತ್ತುಮುತ್ತಲು ಸೇರಿದ ಜನ ಸಹಾಯ ಮಾಡುವ ಬದಲು ತಲೆ ತಿನ್ನುತ್ತಾರೆ. ಅ ಗಡ್ಡದಾರಿ ಸೈಕಲ್ ಅಂಗಡಿಯವ ಸುತ್ತಿಗೆ ಸ್ಪಾನರ್ ಹಿಡಿದುಕೊಂಡು ಬಂದು ಅಕ್ಸಲ್ ಬೋಲ್ಟ್ ಸಡಿಲ ಮಾಡಿ ಗಟ್ಟಿ ಮಾಡಿ ದೊಡ್ಡ ಮೊತ್ತಕ್ಕೇ ಕೈಯೊಡ್ಡಿದ. ಅದರೆ ಸಮಸ್ಯೆ ಮಾತ್ರ ಹಾಗೆ ಉಳಕೊಂಡಿತ್ತು. ಸಮಸ್ಯೆ ಪರಿಹಾರಕ್ಕೆ ನೈಜ ಪ್ರಯತ್ನ ಮಾಡುತ್ತಿದ್ದರೆ - ಬಗ್ಗಿ ನೋಡಿದರೆ ಟೈರ್ ಉಜ್ಜುವುದು ಸಾಮಾನು ಹೊತ್ತಿರುವ ಕಾರಿಯರಿನ ಬದಿಯೆಂದು ಅವನಿಗೆ ಅರ್ಥವಾಗುತಿತ್ತು.
ಅಂತೂ ನಮ್ಮ ಸೈಕಲ್ ರಿಪೇರಿಯವರ ಕೆಲಸದ ಗುಣಮಟ್ಟ ನೋಡುವಾಗ ಈ ಚಿತ್ರ ನೆನಪಾಗುತ್ತದೆ. ಪರದೇಶಗಳಲ್ಲಿ ಸೈಕಲಂಗಡಿಯವರು, ರಿಪೇರಿಯವರು ಸ್ವತಹ ಸೈಕಲ್ ಬಳಸುತ್ತಾರೆ. ನಮ್ಮವರಿಗೆ ನಿತ್ಯ ಬಳಸಲು ಕೀಳರಿಮೆ ತಡೆಯೊಡ್ಡುತ್ತದೆ. ಅವರು ವ್ಯಾಪಾರ ಮಾಡುವುದು ಮಾತ್ರ.
Wednesday, October 27, 2010
ನಾಯಿ ಹೇಲು ವಿಲೆವಾರಿಗೆ ಜಿಪಿಎಸ್ ಬಳಕೆ
ಇತ್ತೀಚಿಗೆ ಹಲವು ವಾರಗಳಿಂದ ಜಿಪಿಎಸ್ ಸಂಬಂದಿಸಿದ ವಿಚಾರಗಳೇ ನನ್ನ ತಲೆಯಲ್ಲಿ ಸುಳಿದಾಡುತ್ತಿದೆ. ಜಿಪಿಎಸ್ ಮಾಪಿನಿಂದ ಸಮಾಜಕ್ಕೆ ಹಲವು ಪ್ರಯೋಜನಗಳಿವೆ., ನಮ್ಮ ದೈನಂದಿನ ಬಳಕೆಗೆ ಮಾತ್ರವಲ್ಲ, ಪೋಲೀಸ್, ಅಗ್ನಿ ಶಾಮಕ ದಳ ಮತ್ತು ತುರ್ತು ವೈದ್ಯಕೀಯ ನೆರವು ದಾವಿಸಲು ಜಿಪಿಎಸ್ ನಕ್ಷೆಗಳು ಸಹಾಯಕವಾಗಬಹುದು ಎನ್ನುವ ವಿಚಾರ ಮನದಲ್ಲಿ ಸುಳಿದಾಡುತಿತ್ತು. ಆದರೆ -
ಫ್ರಾನ್ಸಿನಲ್ಲಿ ಜಿಪಿಎಸ್ ಬಳಕೆಯಲ್ಲಿ ಹೊಸತನ ತೋರಿದ್ದಾರೆ. ಊರಳಗಿನ ರಸ್ತೆಗಳಿಗೆ ನಾಯಿ ಮಲ ಕೆಟ್ಟ ಹೆಸರು ತರುತಿತ್ತು. ಮುಂದಿನ ೨೦೧೨ರ ಒಲಂಪಿಕ್ ನಡೆಸುವ ಅವಕಾಶ ತಪ್ಪಿದ್ದು ಸಹಾ ನಾಯಿ ಹೇಲಿನಿಂದಾಗಿ ಎನ್ನುವ ಗುಮಾನಿ ದಟ್ಟವಾಗಿದೆ. ನಮ್ಮ ಎರ್ ಬಸ್ ವಿಮಾನ ಗೊತ್ತಲ್ಲ- ಅದು ಜೋಡಣೆಯಾಗುವ ಟೌಲೋಸ್ ಪಟ್ಟಣದಲ್ಲಿ ಇದು ಪ್ರಥಮವಾಗಿ ಜಾರಿಗೆ ಬಂದಿದೆ. ಪೊಲೀಸ್ ಹಾಗೂ ಪಟ್ಟಣದ ಅಧಿಕಾರಿಗಳಿಗೆ ಕೆಮರ ಮತ್ತು ಜಿಪಿಎಸ್ ಕೊಡಲ್ಪಟ್ಟಿತು. ಅವರು ನಾಯಿ ಮಲ ಕಂಡಾಗ ತುರ್ತಾಗಿ ಪೋಟೊ ಕ್ಲಿಕ್ಕಿಸಿ ಪೌರ ಕಾರ್ಮಿಕರಿಗೆ ರವಾನಿಸಬೇಕು. ಪೌರ ಕಾರ್ಮಿಕರು ತಕ್ಷಣ ವಾಹನದಲ್ಲಿ ಬಂದು ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ. ಈಗ ಪರೀಸ್ಥಿತಿ ಉತ್ತಮಗೊಂಡಿದೆ ಎನ್ನುತ್ತಾರೆ ಅಲ್ಲಿನ ವಕ್ತಾರರು.
ಹತ್ತು ದಿನ ಹಿಂದೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಗೆಗೊಂದು ಗೂಗಲ್ ಮಾಪಿನ ತಪ್ಪು ಬೊಟ್ಟುಮಾಡಿದ್ದೆ. ಅದೀಗ ಹೆಚ್ಚಿನಂಶ ಸ್ವಯಂಸೇವಕರೊಬ್ಬರಿಂದ ತಿದ್ದಲ್ಪಟ್ಟಿದೆ. ನನ್ನ ಬ್ಲೋಗ್ ಬರಹದ ಕಾರಣ ಇದ್ದರೂ ಇರಬಹುದು. ಅದರೆ ಗೂಗಲ್ ಸಂಸ್ಥೆಯ ಹಕ್ಕುಗೊಳಪಟ್ಟಿರುವ ಬೂಪಟಕ್ಕೆ ನಮ್ಮ ಸೇವೆ ಸಲ್ಲಿಸುವುದರ ಬದಲಿಗೆ ಸಮಾಜದ ಒಳಿತಿಗಾಗಿ ಸ್ಥಾಪನೆಗೊಂಡಿರುವ ಈ ಒಪನ್ ಸ್ಟ್ರೀಟ್ ಬೂಪಟಕ್ಕೆ ಕೈಜೋಡಿಸಿದರೆ ಉತ್ತಮ ಅನಿಸುತ್ತದೆ. ಗೂಗಲ್ ನಲ್ಲಿ ನಮ್ಮೂರಿನಲ್ಲಿಯೇ ಇನ್ನೂ ಸುಮಾರು ತಪ್ಪುಗಳು ಉಳಿದಿವೆ.
ತಿಂಗಳ ಹಿಂದೆ ಮಂಗಳೂರು ಪುತ್ತೂರು ರಸ್ತೆಗೆ ಸಿಮಿತವಾಗಿದ್ದ ಒಪನ್ ಸ್ಟ್ರೀಟ್ ನಕ್ಷೆಗೆ ಹಲವಾರು ಉಪಯುಕ್ತ ಒಳರಸ್ತೆಗಳ ಸೇರಿಸಿದ್ದೇನೆ. ಪುತ್ತೂರಿಗೆ ಮಂಗಳೂರು ಹಾಸನ ರಸ್ತೆಯಿಂದ ಬಂದು ಸೇರುವುದು ಒಂದು ಪೆರ್ನೆ ಬನ್ನೂರು ಒಳರಸ್ತೆ. ಉಪ್ಪಿನಂಗಡಿಯಿಂದ ಪುತ್ತೂರು ಇನ್ನೂ ಸಂಪರ್ಕಿಸಿಲ್ಲ. ನಾನು ಎಲ್ಲ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದು ಟ್ರೈಕ್ ಓಡಾಟದಲ್ಲಿಯೇ.
ಜರ್ಮನಿಯ ಸರಕಾರ ಹತ್ತಿರದ ಓಡಾಟಗಳಿಗೆ ಕಾಲ್ನಡುಗೆ ಮತ್ತು ಸೈಕಲ್ ಗಳನ್ನು ಪ್ರೋತ್ಸಾಹಿಸುತ್ತದೆ. ಬಿತ್ತಿಪತ್ರಗಳು ಸಿನೆಮಾ ಕ್ಲಿಪ್ ಗಳು ತಯಾರಾಗಿವೆ. ಸಿನೆಮಾತಾರೆಯರು ಕ್ರಿಡಾಪಟುಗಳು ಕೈಜೋಡಿಸಿದ್ದಾರೆ. ಜರ್ಮನ್ ಬಾಷೆಯಲ್ಲಿರುವ ಅವರ ಘೋಷವಾಕ್ಯ ಸಾಮಾನ್ಯವಾಗಿ Turn on your brain, turn off your motor , For zero CO2 on short trip ಅನ್ನುತ್ತದೆ. ಅದನ್ನು ಅರ್ಥ ಕೆಡದಂತೆ ಕನ್ನಡಕ್ಕೆ ಅನುವಾದಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನನ್ನ ಗಮನಕ್ಕೆ ಬಂದ ಪುಟ್ಟ ಸಿನೆಮಾ ಕ್ಲಿಪ್ ಇಲ್ಲಿ ಅಂಟಿಸಿದ್ದೇನೆ.
ಕಾರಲ್ಲಿ ಕೂತವನಿಗೆ ......
ಹೆಚ್ಚು ಅಗಲವಿರುವ ಮೇಲಿನ ಚಿತ್ರ ನೇರ ವೀಕ್ಷಿಸಲು http://is.gd/gm4oL ಕ್ಲಿಕ್ಕಿಸಿ

Labels:
GPS
Friday, October 22, 2010
ಮೂರು ಚಕ್ರದಲ್ಲಿ ಮಂಗಳೂರಿಗೆ
ನಿನ್ನೆ ಮಂಗಳೂರಿಗೆ ಟ್ರೈಕಿನಲ್ಲಿ ಹೋಗಿದ್ದೆ. ೧೬ ಕಿಮಿ ದೂರದ ಬಿ ಸಿ ರೋಡ್ ೪೫ ನಿಮಿಷಗಳಲ್ಲಿ ದಾಟಿದರೆ (ಬಿಸಿ ರಸ್ತೆಯಲ್ಲ, ಬಂಟವಾಳ ಕ್ರಾಸ್ ರೋಡ್ ಅನ್ನುವ ನೇತ್ರಾವತಿ ತೀರದಲ್ಲಿರುವ ಊರು) ಮಂಗಳೂರು ಹೊರವಲಯ ಒಂದು ಘಂಟೆ ಮೂವತ್ತೇಳು ನಿಮಿಷಗಳ ಪ್ರಯತ್ನದಲ್ಲಿ ಒಂದು ಬಾಟರಿಯ ಶಕ್ತಿಯ ಸಹಾಯದಲ್ಲಿ ತಲಪಿದೆ.
ಆ ಬಾಟರಿಯನ್ನು ಅಶೋಕನ ಅಂಗಡಿಯಲ್ಲಿ ಚಾರ್ಜಿಗಿಟ್ಟು ಮಂಗಳೂರು ಪಟ್ಟಣದೊಳಗಿನ ತಿರುಗಾಟ ಮಾಡಿದೆ. ಅಗತ್ಯವಿರುವಾಗ ಸುಮಾರು ಇಪ್ಪತ್ತೈದು ಕಿಮಿ ವೇಗ ಸಾದ್ಯವಾಗುವ ಕಾರಣ ಊರೊಳಗಿನ ತಿರುಗಾಟಕ್ಕೆ ಸರಿಸುಮಾರು ಕಾರಿನಷ್ಟೇ ಸಮಯ ಬೇಕಾಗುತ್ತದೆ. ಒಂದು ಪುಟ್ಟ ವಿಡಿಯೊ ತೆಗೆಯಲು ಪ್ರಯತ್ನಿಸಿದ್ದೆ. ಆದರೆ ಕೆಮರಾ ಮತ್ತದರ ಮೌಂಟ್ ಹೊಂದಾಣಿಕೆಯಾಗದೆ ನನ್ನ ತಲೆಯೇ ಚಿತ್ರದ ಅರ್ದ ಬಾಗ ಆವರಿಸುತ್ತದೆ ಎಂದು ತಡವಾಗಿ ಅರಿವಾಯಿತು. ಮೊದಲು ಈ ಕೆಮರಾ ಜತೆಗೆ ಉಪಯೋಗಿಸಿದ ಮೌಂಟ್ ಬೀಜಾಪುರದಿಂದ ಬರುವಾಗ ಬಸ್ಸಿನ ಮೇಲಿನ ಪ್ರಯಾಣದಲ್ಲಿ ಹುಡಿಯಾಗಿತ್ತು. ಮೊದಲೇ ಅರಿವಾಗಿದ್ದರೆ ಮೌಂಟಿನ ಜಾಗ ಬದಲಾಯಿಸುತ್ತಿದ್ದೆ.
ಮದ್ಯಾಹ್ನ ಸುಮಾರು ಮೂರುವರೆಗೆ ಮಂಗಳೂರಿನಿಂದ ಹೊರಟೆ. ವಾಪಾಸು ಬರುವಾಗ ಸ್ವಲ್ಪ ಹೆಚ್ಚು ಅಂದರೆ ಒಂದು ಬಾಟರಿಯ ಪೂರ್ತಿ ಚಾರ್ಜು (೧೦ Ah) ಉಪಯೋಗವಾಗಿತ್ತು. ಮಂಗಳೂರಿನೊಳಗೆ ಹದಿನೈದು ಕಿಮಿ ಓಡಿಸಿದ ಕಾರಣ (4 Ah) ಕಲ್ಲಡ್ಕ ದಾಟುವಾಗ ೨೦ Ah ಅಂದರೆ ಎರಡು ಬಾಟರಿಯ ಚಾರ್ಜು ಮುಗಿಸಿದ್ದೆ. ಮನೆಗೆ ತಲಪುವಾಗ ೨೩ Ah ಮುಗಿದಿತ್ತು. ಅಂದರೆ ಮಂಗಳೂರಿನಲ್ಲಿ ಅಶೋಕನ ಅಂಗಡಿಯಲ್ಲಿ ಮಾಡಿದ ಚಾರ್ಜು ನನ್ನನ್ನು ಕಲ್ಲಡ್ಕದಿಂದ ಮನೆಗೆ ತಲಪಿಸಿತು ಅನ್ನಬಹುದು.
ಹಾಗಾದರೆ ಸಲೀಸಾಗಿ ಮಂಗಳೂರಿಗೆ ಒಂದೇ ಬಾಟರಿಯನ್ನು ಅವಲಂಬಿಸಿ ಹೋಗಿ ಅಲ್ಲಿ ಮೂರು ಘಂಟೆ ಚಾರ್ಜಿಗಿಟ್ಟರೆ ಆರಾಮವಾಗಿ ವಾಪಾಸು ಬರಬಹುದು ಅಂದಾಯಿತು. ನಿನ್ನೆ ಕೆಲವೊಮ್ಮೆ ವಿಳಂಬವಾಗಿ GPS on ಮಾಡಿದ ಕಾರಣ ಪೂರ್ತಿ ದೂರ ನಿಖರವಾಗಿ ದಾಖಲಾಗಲಿಲ್ಲ. ಅದುದರಿಂದ ೯೦ ಕಿಮಿ ಮಿಕ್ಕಿದ ದೂರ ಪ್ರಯಾಣ ಮಾಡಿರಬಹುದು ಅನಿಸುತ್ತದೆ.
ಒಟ್ಟು ೮೫೦ ವಾಟ್ಸ್ ವಿದ್ಯುತ್ ಖರ್ಚು ಅಂದರೆ ಸುಮಾರು ನಾಲ್ಕು ರೂಪಾಯಿ ಬೆಲೆಯ ವಿದ್ಯುತ್ ಬೆಂಬಲ ನನ್ನ ಪ್ರಯಾಣಕ್ಕೆ ಸಾಕಾಯಿತು. ಮನೆ ತಲಪುವಾಗ ನಾಲ್ಕು ಘಂಟೆ ಮೂವತ್ತ ಮೂರು ನಿಮಿಷ ಟ್ರೈಕ್ ಚಾಲನೆ ಮಾಡಿದ್ದೆ. ನಾನು ಕಾರಿನಲ್ಲಿ ಈ ಪ್ರಯಾಣ ಮಾಡಿದರೂ ಸುಮಾರು ಮೂರು ಘಂಟೆ ಬೇಕಾಗುತಿತ್ತು. ಹಾಗಾಗಿ ಟ್ರೈಕ್ ಪ್ರಯಾಣದಿಂದಾಗಿ ಬೇಕಾದ ಹೆಚ್ಚಿನ ಸಮಯ ಸುಮಾರು ಒಂದೂವರೆ ಘಂಟೆ ಮಾತ್ರ. ಇಲ್ಲಿ ನಾನು ಹೇಳಲಿಚ್ಚಿಸುವುದು ಈ ವಿದ್ಯುತ್ ಬೆಂಬಲದ ಪ್ರಯಾಣ ನಮಗೆ ಪ್ರಾಯೋಗಿಕ.
ನಿನ್ನೆಯ ವಿಜಯ ಕರ್ನಾಟಕದಲ್ಲಿ ನನ್ನ ಟ್ರೈಕ್ ಪ್ರವಾಸದ ಬಗೆಗೊಂದು ಬರಹ ಪ್ರಕಟವಾಗಿದೆ. ಇದಕ್ಕೆ ಐವತ್- ಮೂರರವ ಮೂರು ಚಕ್ರದ ಮೇಲೆ ಕುಳಿತ ಕಥೆ ವಿಕ ಚೆನ್ನಾಗಿ ಕೊಟ್ಟಿದೆ ಎಂದು ಅಶೋಕವರ್ಧನರು ಪ್ರತಿಕ್ರಿಯಿಸಿದ್ದಾರೆ. ಸಂಪರ್ಕ ಕೊಂಡಿಗಳು ಇಲ್ಲಿ ಮತ್ತು ಇಲ್ಲಿವೆ.
ಆದರೆ ಬಹಳ ಮುಖ್ಯವಾದ ವಿದ್ಯುತ್ ಬೆಂಬಲದ ಚಾಲನೆಗೆ ಅಗತ್ಯ ಪ್ರಾಮುಖ್ಯತೆ ದೊರಕಲೇ ಇಲ್ಲ ಎನ್ನುವುದು ನನಗೆ ಬಹಳ ಬೇಸರದ ವಿಚಾರ. ಈ ಲೇಖನದಲ್ಲಿ ಅರ್ಥ ಬರುವಂತೆ ಇದೊಂದು ವಿದ್ಯುತ್ ಚಾಲಿತ ವೀಲ್ ಚೇರ್ ಅಲ್ಲ - ವಿದ್ಯುತ್ ಬೆಂಬಲಿತ ಪೆಡಲಿಸುವ ಸೈಕಲ್. ಪ್ರವಾಸದ ಉದ್ದಕ್ಕೂ ಸುಮಾರು ಶೇಕಡಾ ಐವತ್ತು ನೂಕು ಬಲ ನನ್ನ ಕಾಲಿನಿಂದಲೇ ರವಾನೆಯಾಗಿದೆ.
ಮುಂದೆ ಸಾಗಲು ಅಡ್ಡಿಯಾಗುವ ಗಾಳಿಯ ತಡೆಯನ್ನು ಕನಿಷ್ಟಗೊಳಿಸುವ ಆಕಾರ - ರಿಕಂಬಂಟ್ ಅರ್ಥವನ್ನು ಬಾಟರಿ ಚಾಲನೆ ಅಂದಿದ್ದಾರೆ. ನನ್ನ ಅಂಗವಿಕಲತೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆತಿದೆ. ಆದರೂ ಒಟ್ಟಿನಲ್ಲಿ ಒಂದು ಹೊಸ ಚಿಂತನೆಗೆ ಅವಕಾಶವನ್ನು ದೊರಕಿಸಿಕೊಡುತ್ತದೆ.
ನಮ್ಮ ನಿತ್ಯದ ಓಡಾಟಕ್ಕೆ ಪರ್ಯಾಯವಾಗಬಲ್ಲ ಮಾನವ ಶ್ರಮ ಮತ್ತು ವಿದ್ಯುತ್ ಬೆಂಬಲ ಸಮ್ಮೀಲನವಾಗುವ ವಾಹನ ಹೊರತು ಇದು ಮೂಸಿಯಂನಲ್ಲಿಡುವ ಯಂತ್ರವಲ್ಲ. ನಾನು ಮಾಡುತ್ತಿದ್ದೇನೆ, ಹಾಗಾಗಿ ಅನುಸರಿಸಿ ಅನ್ನುವ ಅರ್ಥದಲ್ಲಿ ಯಾರಿಗೂ ಇದನ್ನು ಉಪದೇಶಿಸುತ್ತಿಲ್ಲ. ಪೆಟ್ರೋಲ್ ಬಳಕೆಗೆ ಪರ್ಯಾಯವಾಗಬಲ್ಲ ಕಾರಣ ಈ ನಿಟ್ಟಿನಲ್ಲಿ ಚಿಂತಿಸಿ ಎಂದಷ್ಟೇ ವಿನಂತಿಸಿಕೊಳ್ಳುತ್ತೇನೆ. ವಿದ್ಯುತ್ ಬೆಂಬಲಿತ ಚಾಲನೆಯ ಈ ಪರ್ಯಾಯದ ಬಗೆಗೆ ಜನಸಾಮಾನ್ಯರಿಗೆ ಅರ್ಥೈಸಲು ಒಂದು ಉತ್ತಮ ಅವಕಾಶ ತಪ್ಪಿಹೋಯಿತು ಅನ್ನುವ ನಿರಾಶೆ ನನಗೆ.

Subscribe to:
Posts (Atom)