Thursday, August 20, 2009

ಹರಿಯುವ ನೀರಿನ ಉಪಯೋಗದಲ್ಲಿ ಅಮೇರಿಕದವರಿಂದ ನಾವೇ ಮೇಲು.

ಸುಲಬವಾಗಿ ಲಬ್ಯವಿರುವ ಸಂಪನ್ಮೂಲಗಳನ್ನು ಉದಾಹರಣೆಗೆ ಜಲವಿದ್ಯುತ್ ಅವಕಾಶಗಳನ್ನು ಆರ್ಥಿಕವಾಗಿ ಬಲೀಷ್ಟವಾಗಿರುವ ರಾಷ್ಟ್ರಗಳು ಸಮರ್ಪಕವಾಗಿ ಬಳಸಿಕೊಂಡಿವೆ ಎನ್ನುವುದು ತಪ್ಪು ಕಲ್ಪನೆ. ಅಮೇರಿಕದಲ್ಲಿರುವ ಎಂಬತ್ತು ಸಾವಿರ ಅಣೆಕಟ್ಟುಗಳಲ್ಲಿ ಕೇವಲ ಎರಡು ಸಾವಿರದ ನಾಲ್ಕು ನೂರರಲ್ಲಿ ವಿದ್ಯುತ್ ತಯಾರಾಗುತ್ತದೆ. ಅಂದರೆ ಶೇಕಡ 97 ರಲ್ಲಿ ನೀರು ಅದರಷ್ಟಕೆ ಹರಿದು ಹೋಗುತ್ತದೆ. ಅದರರ್ಥ ಎಲ್ಲದರಲ್ಲೂ ವಿದ್ಯುತ್ ತಯಾರಿ ಸಾದ್ಯವೆಂದಲ್ಲ. ಹಲವರಲ್ಲಿ ಶಕ್ಯತೆ ಇದ್ದು ಇತ್ತೀಚೆಗೆ ಗುರುತಿಸಿದ್ದಾರೆ.  

ಹೆಚ್ಚಿನ ಅಣೆಕಟ್ಟುಗಳು ನೆರೆ ನಿಯಂತ್ರಣ, ನೀರಾವರಿ ಮತ್ತಿತರ ಉಪಯೋಗಗಳಿಗಾಗಿ ನಿರ್ಮಿಸಲ್ಪಟ್ಟಿದೆ. ಹಲವರ ಆಕಾರ ವಿದ್ಯುತ್ ತಯಾರಿಗೆ ಅನುಗುಣವಾಗಿಲ್ಲ. ಅಮೇರಿಕನರ ಜೀವನ ಶೈಲಿಯೇ ಅಗ್ಗದ ಇಂದನ ಅವಲಂಬಿಸಿದೆ. ಆಗ ಜಲವಿದ್ಯುತ್ ಬಗೆಗೆ ಒತ್ತಡವೂ ಇರಲಿಲ್ಲ. ಈಗ ಪರಿಸರವಾದಿಗಳ ವಿರೋಧ ಕಾರಣ ಕಲ್ಲಿದ್ದಲಿಗೆ ಪರ್ಯಾಯ ಹುಡುಕುತ್ತಿದ್ದಾರೆ. ಹಲವು ಅಣೆಕಟ್ಟುಗಳ ವಿದ್ಯುತ್ ಉತ್ಪಾದನೆಗೋಸ್ಕರ ಪರಿವರ್ತನೆಗೊಳಿಸುತ್ತಿದ್ದಾರೆ.

ಅಮೇರಿಕದಲ್ಲಿ ನಲ್ವತ್ತರ ದಶಕದಲ್ಲಿ ಶೇಕಡ ೪೨ರಷ್ಟು ಜಲ ವಿದ್ಯುತ್ ಪೊರೈಕೆಯಾದರೆ ಅನಂತರ ಹೊಸ ಜಲವಿದ್ಯುತ್ ಕೇಂದ್ರಗಳು ಸ್ಥಾಪಿಸಲ್ಪಡಲಿಲ್ಲ. ಅನಂತರ ಅಣು ವಿದ್ಯುತ್ ಮತ್ತು ಕಲ್ಲಿದ್ದಲು ದಹಿಸಲು ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಅದುದರಿಂದ ಇಂದು ಪ್ರಪಂಚದಲ್ಲಿ ಸುಮಾರು ಶೇಕಡಾ ೨೦ರಷ್ಟು ವಿದ್ಯುತ್ ಜಲ ವಿದ್ಯುತ್ ಕೇಂದ್ರಗಳಲ್ಲಿ ತಯಾರಾದರೆ ಅಮೇರಿಕದಲ್ಲಿ ಅದು ಶೇಕಡ ಹತ್ತಕ್ಕೆ ಇಳಿಯುತ್ತದೆ.

ಅವಕಾಶ ಮತ್ತು ಸಾಧನೆಯನ್ನು ಅವಲೋಕಿಸುವಾಗ ನಾವು ಈ ವಿಚಾರದಲ್ಲಿ ಮುಂದಿದ್ದೇವೆ. ನದಿ ಮತ್ತು ಕಾಲುವೆಗಳಲ್ಲಿ ಹರಿಯುವ ನೀರಿನ ತಡೆಗಟ್ಟಿ ವಿದ್ಯು ತ್ ಉತ್ಪಾದನೆ ನಡೆಸಲಾಗುತ್ತಿದೆ. ಈ ವರ್ಷ ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಎರಡು ಕಿರು ವಿದ್ಯುತ್ ಘಟಕಗಳು ಕಾರ್ಯವೆಸಗಲು ಪ್ರಾರಂಬಿಸಿವೆ.

ಪ್ರಿಯ ಜಿ ಯನ್ ಅಶೋಕವರ್ದನರು ಬರೆದು ಕಳಿಸಿದ್ದು ಪ್ರತಿಕ್ರಿಯೆ ಎನಿಸುವ ಬದಲು ತಿದ್ದಿಪಡಿಯಾದುದರಿಂದ ಇಲ್ಲಿಯೇ ಸೇರಿಸುತ್ತಿದ್ದೇನೆ.

ನೀನು ಹೇಳುವ ಅರ್ಥದಲ್ಲಿ ‘ಸದುಪಯೋಗಗೊಳಿಸುವಲ್ಲಿ’ ನಾವು ಮೇಲು. ಆದರೆ ಇಂದಿನ ಉದಾಹರಣೆಯ ಮಟ್ಟಕ್ಕೆ ಇಳಿಯುವಾಗ ವಾಸ್ತವ ಹಾಗಿಲ್ಲ ಎಂದು ವಿಷಾದ ಮೂಡುತ್ತದೆ. ಇಂದಿನ ಮಿನಿ ಜಲವಿದ್ಯುತ್ ಯೋಜನೆಗಳೆಲ್ಲಾ ಸಬ್ಸಿಡಿ, ಟರ್ನ್ ಆಫ್ ಗಳನ್ನು ಮಾತ್ರ ಲಕ್ಷಿಸಿ ಮುಖ್ಯವಾಗಿ ಜನೋಪಯೋಗಿ ಮತ್ತೆ ಪರಿಸರವೆಲ್ಲವನ್ನೂ ಕೆಡಿಸುವ ಯೋಜನೆಗಳಾಗಿಯೇ ಬರುತ್ತಿವೆ ಎನ್ನುವುದನ್ನು ಗಮನಿಸಲೇಬೇಕು. ಜಲಾನಯನ ಪ್ರದೇಶಗಳನ್ನೆಲ್ಲಾ ಕಲಕುತ್ತಿರುವ ಈ ಯೋಜನೆಗಳಿಂದ ನಾವೆಷ್ಟು ‘ಮೇಲಾಗುತ್ತೇವೋ’ ಎಂದು ಹೆದರಿಕೆಯಾಗುತ್ತದೆ.

ಬಿದ್ದರೂ ಮೂಗು ಮೇಲೆ ಎಂಬಂತೆ ಅಮೇರಿಕದವರು ನಮ್ಮಿಂದಲೂ ಬುರ್ನಾಸ್ ಎಂದು ಬರೆಯಲುಹೊರಟೆ. ನಮ್ಮಲ್ಲಿ ಈ ಕಿರು ಜಲಾಶಯಗಳು ಮುಳಗಿಸುವುದರ ಅಲೋಚಿಸುವಾಗ ಹೆದರಿಕೆಯಾಗುತ್ತದೆ. ಹತಾಷೆ ಬಾವನೆ ಉಂಟಾಗುತ್ತದೆ. ಅಸಂಬದ್ದ ಸಬ್ಸಿಡಿ ನೀತಿಯಿಂದಾಗಿಯೇ ಐಶ್ವರ್ಯ ಎಂಬ ನಕ್ಷತ್ರ ಗಿರಿಗಿಟಿ ಒಡತಿಯಾದದ್ದು.  

1 comment:

Anonymous said...

ನೀನು ಹೇಳುವ ಅರ್ಥದಲ್ಲಿ ‘ಸದುಪಯೋಗಗೊಳಿಸುವಲ್ಲಿ’ ನಾವು ಮೇಲು. ಆದರೆ ಇಂದಿನ ಉದಾಹರಣೆಯ ಮಟ್ಟಕ್ಕೆ ಇಳಿಯುವಾಗ ವಾಸ್ತವ ಹಾಗಿಲ್ಲ ಎಂದು ವಿಷಾದ ಮೂಡುತ್ತದೆ. ಇಂದಿನ ಮಿನಿ ಜಲವಿದ್ಯುತ್ ಯೋಜನೆಗಳೆಲ್ಲಾ ಸಬ್ಸಿಡಿ, ಟರ್ನ್ ಆಫ್ ಗಳನ್ನು ಮಾತ್ರ ಲಕ್ಷಿಸಿ ಮುಖ್ಯವಾಗಿ ಜನೋಪಯೋಗಿ ಮತ್ತೆ ಪರಿಸರವೆಲ್ಲವನ್ನೂ ಕೆಡಿಸುವ ಯೋಜನೆಗಳಾಗಿಯೇ ಬರುತ್ತಿವೆ ಎನ್ನುವುದನ್ನು ಗಮನಿಸಲೇಬೇಕು. ಜಲಾನಯನ ಪ್ರದೇಶಗಳನ್ನೆಲ್ಲಾ ಕಲಕುತ್ತಿರುವ ಈ ಯೋಜನೆಗಳಿಂದ ನಾವೆಷ್ಟು ‘ಮೇಲಾಗುತ್ತೇವೋ’ ಎಂದು ಹೆದರಿಕೆಯಾಗುತ್ತದೆ.
ಅಶೋಕ ವರ್ಧನ ಜಿ.ಎನ್