Monday, August 17, 2009

ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೊರಟಿದ್ದ ಶಾರುಖ್

ಶಾರುಖ್ ಖಾನ್ ಹೆಸರಿನ ಹಿಂದಿ ಚಿತ್ರನಟ ಇನ್ನೆಂದೂ ಅಮೇರಿಕಕ್ಕೆ ಕಾಲು ಇಡಬಾರದು ಅನ್ನಿಸುತ್ತೆ ಎಂದು ನಿನ್ನೆ ಹೇಳಿದ. ಈಗ ಅವನ ಹಿಂದಿನ ವರ್ತನೆ ನೆನಪಿಸಿಕೊಳ್ಳುವ ಕಾಲ. ಬರೇ ಮೂರು ವರ್ಷ ಹಿಂದೆ If Pepsi is banned in India, I would go to the US and drink it ಎಂದು ಈ ನಟ ಟಿವಿ ಎದುರುಗಡೆ ಹೇಳಿ ಕೊಂಡಿದ್ದ.

ಮೂರು ವರ್ಷ ಹಿಂದೆ ನೀರನ್ನು ಸರಿಯಾಗಿ ಶುದ್ದಿಕರಿಸದೆ ತಂಪು ಪಾನಿಯ ತಯಾರಿಸಲಾಗುತ್ತಿದೆ ಎಂದು ಸಾಕ್ಷಿ ಸಮೇತ ಪರಿಸರವಾದಿ ಪತ್ರಕರ್ತೆ ಸುನಿತಾ ನಾರಾಯಣ ಮುಂದಾಳತ್ವದಲ್ಲಿ ಜನಜಾಗೃತಿ ಆಂದೋಲನ ನಡೆಯುತಿತ್ತು. ಈ ಆಂದೋಲನದ ವಿರುದ್ದ ಮಾತನಾಡಿದ ಶಾರುಖ್ ಎಂದೂ ಸಾರ್ವಜನಿಕ ಹಿತಾಸಕ್ತಿ ಕಾರ್ಯದಲ್ಲಿ ತೊಡಗಿಸಿಕೊಂಡವನಲ್ಲ.

ಸತ್ಯಕ್ಕೆ ಸಾಕ್ಷಿ ಬೇಕು, ಸುಳ್ಳು ಹಾಗೆ ಚಲಾವಣೆ ಸಾದ್ಯ ಎನ್ನುವಂತೆ ಕೋಟಿಗಟ್ಟಲೆ ರೂಪಾಯಿ ಪೆಪ್ಸಿ ಕಂಪೇನಿಯಿಂದ ಪಡೆಯುತಿದ್ದ ಈ ನಟನ ಮೂರ್ಖತನದ ಮಾತು ಬಾರತದ ಜನತೆಗೆ ದ್ರೋಹ. ಸಿನೆಮಾ ನಟರು ಕುಡಿಯುತ್ತಾರೆ ಮತ್ತು ಭಾರತದಲ್ಲಿ ಇತರ ಅಹಾರ ಪದಾರ್ಥಗಳು ಮಲೀನಗೊಂಡಿವೆ ಎನ್ನುವ ದಿಕ್ಕು ತಪ್ಪಿಸುವ ಬಣ್ಣದ ನೀರಿನ ಸಂಸ್ಥೆಗಳ ಪ್ರಚಾರದ ಮುಂಚೂಣಿಯಲ್ಲಿ ಇವನಿದ್ದ. ಸದಾ ಹೊಗೆ ಬಿಡುವ ಮತ್ತು ಸಿನೆಮದಲ್ಲಿ ದೂಮಪಾನ ಅವಕಾಶ ಇರಬೇಕು ಎನ್ನುವ ಈ ನಟ ಯುವಜನರಿಗೆ ಕೆಟ್ಟ ಮಾದರಿ.

ನಮ್ಮ ಮೆಚ್ಚಿನ ಮಾಜಿ ಅದ್ಯಕ್ಷ ಡಾ|  ಅಬ್ದುಲ್ ಕಲಾಂ ಅವರಂತೆ ಪ್ರಶ್ನಾತೀತ ವ್ಯಕ್ತಿ ಆಗಿದ್ದರೆ ಬೇರೆ ಮಾತು.   ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೋಗಲು ತಯಾರು ಇರುವಂತಹ ವ್ಯಕ್ತಿ ಅಲ್ಲಿನ ಸರಕಾರ ಕೈಗೊಳ್ಳುವ ಚಿಲ್ಲರೆ ತಪಾಸಣೆಯನ್ನು ಆಕ್ಷೇಪಿಸುವಂತಿಲ್ಲ. ಸರಿಯಾಗಿ ಕಾಸು ಕೊಟ್ಟರೆ ಇಂತವರು ಬಾಂಬು ಕೊಂಡೊಯ್ಯಲೂ ತಯಾರು. ಅತಿ ಹೆಚ್ಚು ಹಣಕ್ಕೆ ನಿಷ್ಟೆಯನ್ನು ಮಾರಲು ಸಿದ್ದನಿರುವ ಇವರ ಬಗೆಗೆ ನಾವು ಅನುಕಂಪ ಸೂಚಿಸುವುದೂ ತಪ್ಪಾಗುತ್ತದೆ.

2 comments:

Anonymous said...

ವೃತ್ತಿ ಪರಿಣತಿಯನ್ನು ವೈಯಕ್ತಿಕ ಜೀವನದ ಶುಚಿ ಉಳಿಸಿಕೊಳ್ಳದಷ್ಟು ಬೆರೆಸುವ ಇಂಥವರಿಗೆ ನೀನು ಹೇಳಿದಷ್ಟೂ ಮಾತು ಚೊಕ್ಕವಾಗಿ ಅನ್ವಯಿಸುತ್ತದೆ. made for each other ಎನ್ನುವಂತೆ ನಮ್ಮ ‘ಹ್ಹಿರಿಯ ರಾಜಕಾರಣಿ’ ಅಂಬಿಕಾ ಸೋನಿಯ ಹೇಳಿಕೆಯನ್ನೂ ನೀನು ಗಮನಿಸಿರಬೇಕು: ಅಮೆರಿಕನ್ನರು ಭಾರತಕ್ಕೆ ಬಂದಾಗ ನಾವೂ ಅವರಿಗೆ ಹೀಗೇ ಮಾಡಬೇಕಂತೆ! ಸಕಾಲಿಕವನ್ನು ಎತ್ತಿ ಆಡಿದ್ದಕ್ಕೆ ನಿನಗೆ ಅಭಿನಂದನೆ.
ಅಶೋಕವರ್ಧನ

sunaath said...

ಇದು ಸರಿಯಾದ ವಿಚಾರಸರಣಿ. ಅಮೇರಿಕನ್ನರು ತಮ್ಮ ದೇಶದ ಸುರಕ್ಷತೆಗಾಗಿ ಕೈಗೊಳ್ಳುವ ಕ್ರಮಕ್ಕೆ ನಾವು ಆಕ್ಷೇಪಿಸಲಾರೆವು. Tit for tat ಮಾಡಬೇಕೆನ್ನುವ ಅಂಬಿಕಾ ಸೋನಿಯ ಮೂರ್ಖ ಮಾತು ವೋಟಿನ ರಾಜಕಾರಣ!