೧೯೮೪ರಲ್ಲಿ ಲೋಕಸಭೆ ಚುನಾವಣೆಗೆ ನಿಂತಾಗ ಇಂದಿರಾ ಗಾಂಧಿ ಕೊಲೆಯಾಯಿತು. ಅನುಕಂಪದ ಅಲೆಯಿಂದಾಗಿ ನಾನು ಸೋತೆ. ೧೯೮೯ರಲ್ಲಿ ಲೋಕಸಭೆಗೆ ಸ್ಪರ್ಢಿಸಿದೆ. ರಾಜೀವ ಗಾಂಧಿ ಕೊಲೆಯಾಗಿ ಕಾಂಗ್ರೇಸು ಪರ ಅನುಕಂಪದ ಅಲೆಯಲ್ಲಿ ನಾನು ಸೋತೆ ಎಂದು ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಮಾಜಿ ಮಂತ್ರಿ ಪಿ ಜಿ ಅರ್ ಸಿಂಧ್ಯ ಹೇಳಿಕೊಂಡಿದ್ದಾರೆ. ಅನಂತರ ನಾನು ಲೋಕ ಸಭೆಗೆ ಸ್ಪರ್ಧಿಸಲಿಲ್ಲ ಎಂದೂ ಹೇಳಿದ್ದಾರೆ.
೧೯೮೧ ಮತ್ತು ೧೯೯೫ ರ ಘಟನೆಗಳ ಗಮನಿಸಿ.
೧೯೮೧ರಲ್ಲಿ
ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ವಿವಾಹ
ಯುರೋಪಿನ ಕಾಲ್ಚೆಂಡು ಆಟದಲ್ಲಿ ಇಂಗ್ಲೇಂಡ್ ವಿಜಯ
ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು
ದರ್ಮಗುರು ಪೋಪರ ಮರಣ.
೧೯೯೫ರಲ್ಲಿ
ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ವಿವಾಹ
ಯುರೋಪಿನ ಕಾಲ್ಚೆಂಡು ಆಟದಲ್ಲಿ ಇಂಗ್ಲೇಂಡ್ ವಿಜಯ
ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು
ದರ್ಮಗುರು ಪೋಪರಿಗೆ ಗಂಡೇಟು
ಹಾಗೆ ಇನ್ನು ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ಮದುವೆಯಾಗುವ ಆಲೋಚನೆ ಮಾಡಿದರೆ ಪೋಪರಿಗೆ ತಿಳಿಸಬೇಕೆನ್ನುವ ಮಾತು ಚಾಲ್ತಿಯಲ್ಲಿದೆ. ಹಾಗೆ ನಮ್ಮ ಸಿಂಧ್ಯ ರು ಪುನಹ ಲೋಕಸಭೆಗೆ ಸ್ಪರ್ದಿಸುವುದಾದರೆ ಸೊನಿಯಾ ರಾಹುಲರಿಗೆ ತಿಳಿಸಬೇಕು ಎನ್ನೋಣವೇ |
Monday, June 29, 2009
Friday, June 26, 2009
ಮತವಂಚನೆಯಲ್ಲಿ ಹೊಸ ದಾಖಲೆ ಇರಾನಿನಲ್ಲಿ
ಇತ್ತೀಚೆಗೆ ಇರಾನಿನನಲ್ಲಿ ನಡೆದ ಚುನಾವಣೆ ಯಶಸ್ವಿಯಾಗಿ ಅದು ನಡೆದ ರೀತಿ ಜಗತ್ತಿನಲ್ಲಿ ಗಮನಸೆಳೆದಿದೆ. ಈ ಸಲ ಲೆಕ್ಕಾಚಾರ ತಪ್ಪಿದ ಲಾಲೂ ಪಸ್ವಾನರು ನಮ್ಮ ಕಮುನಿಸ್ಟ್ ನಾಯಕರೊಂದಿಗೆ ಹೋಗಿ ಇದನ್ನು ಅಭ್ಯಸಿಸಲಿದ್ದಾರೆ ಮತ್ತು ಗೌಡಜ್ಜನ ಪರವಾಗಿ ಕುರಾಮಸ್ವಾಮಿ ಈ ಪಟಲಾಂನಲ್ಲಿ ಹೋಗುವ ಸಾದ್ಯತೆ ಹೆಚ್ಚಿದೆ ಎನ್ನುವ ಸುದ್ದಿ ಕುಹಕವಾದರೂ ಅಲ್ಲಿ ನಡೆದ ಗೋಲ್ ಮಾಲ್ ಗಮನ ಸೆಳೆಯುವಂತಿದೆ.
ಇರಾನಿನ ಮತದಾನದ ಬಗೆಗೆ ನನಗೆ ಬಹುಕಾಲದಿಂದ ಅಭಿಮಾನ. ಅವರ ಸಂವಿದಾನ ಸರಿಯಾಗಿ ಅರ್ಥಮಾಡಿಕೊಳ್ಳಲು ನಾನು ರಾಜ್ಯಶಾಸ್ತ್ರ ವಿದ್ಯಾರ್ಥಿಯಲ್ಲ. ದಾರ್ಮಿಕ ಮಾರ್ಗದರ್ಶಕ ಎಂಬ ಪ್ರಶ್ನಾತೀತ ನಾಯಕರಲ್ಲಿ ಅಧಿಕಾರ ಕೇಂದ್ರಿಕೃತವಾಗಿದೆ. ಅದುದರಿಂದ ಈ ಅಯ್ಕೆಯಾದ ಅದ್ಯಕ್ಷರಿಗೆ ಸಿಮಿತ ಅದಿಕಾರ. ಸರಳವಾಗಿ ನಾನು ಕಂಡಂತೆ ಇಲ್ಲಿ ಗೆಲ್ಲಬೇಕಾದರೆ ಶೇಕಡ ಐವತ್ತು ಮತ ಗಳಿಸಲೇ ಬೇಕು. ಇಲ್ಲವಾದರೆ ಹೆಚ್ಚು ಮತ ಪಡೆದ ಇಬ್ಬರು ಅಬ್ಯರ್ಥಿಗಳು ಕಣದಲ್ಲಿದ್ದು ಮರುಮತದಾನ. ಕಳೆದ ಬಾರಿ ಅಂದರೆ ನಾಲ್ಕು ವರ್ಷ ಹಿಂದೆ ಸುಮಾರು ಶೇಕಡ ಇಪ್ಪತ್ತರಷ್ಟು ಮತ ಪಡೆದ ಅಭ್ಯರ್ಥಿಗಳ ಮದ್ಯೆ ಮರುಮತದಾನವಾಗಿ ಒಬ್ಬರು ಶೇಕಡ ಅರುವತ್ತು ಮತ ಪಡೆದು ಗೆದ್ದರು. ಆ ಸಲ ಶೇಕಡಾ ಅರುವತ್ತು ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸಲ ಶೇಕಡ ಎಂಬತ್ತೈದು ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು. ಮತಗಳನ್ನು ಎಣಿಕೆ ಮಾಡುವುದು ಕೈ ಎಣಿಕೆಯೇ ಆದೂ ಮತದಾನ ಮುಗಿದ ಎರಡು ಘಂಟೆಯೊಳಗೆ ಸರಕಾರಿ ಸುದ್ದಿ ಸಂಸ್ಥೆಯಿಂದ ಫಲಿತಾಂಶದ ಸುಳಿವು ಕರಾರುವಕ್ಕಾಗಿ ಕೊಡಲು ಸಾದ್ಯ ಆಗಿದೆ. ಹಾಲಿ ಆದ್ಯಕ್ಷರಿಗೆ ಅಹ್ಮದಿನೆಜಾದ್
ಅವರಿಗೆ ಶೇಕಡ 69 ಮತ ಮತ್ತು ವಿರೋದಿ ಅಭ್ಯರ್ಥಿ ಮುಸಾವಿಗೆ 28 ಮಾತ್ರವೆನ್ನುವ ಖಚಿತ ಲೆಕ್ಕಾಚಾರ.
ಇರಾನಿನ ಒಂದು ವಿಶೇಷ ಎಂದರೆ ನಿಗದಿತ ಮತಕೇಂದ್ರಕ್ಕೆ ಹೋಗಬೇಕಾಗಿಲ್ಲ. ಗುರುತುಪತ್ರ ತೋರಿಸಿ ಎಲ್ಲಿಯೂ ಮತದಾನ ಮಾಡಬಹುದು. ಈ ವಿಚಾರವನ್ನು ಆಡಳಿತರೂಡರು ಚೆನ್ನಾಗಿ ಉಪಯೋಗಿಸಿದಂತಿದೆ. 5೦ ಪುಟ್ಟ ಊರುಗಳಲ್ಲಿ ಅಲ್ಲಿನ ಜನಸಂಖ್ಯೆಯಿಂದ ಮೂವತ್ತು ಲಕ್ಷಕ್ಕೂ ಹೆಚ್ಚು ಮತಗಳು ಪೆಟ್ಟಿಗೆಯೊಳಗೆ ಬಿದ್ದಿದೆ. ಆದರೆ ಅವುಗಳು ಜನರು ಪ್ರವಾಸಿಗಳು ಬೇಟಿ ನೀಡುವ ಊರುಗಳೇ ಅಲ್ಲವಂತೆ. ಒಂದು ಹೋಲಿಕೆಯೆಂದರೆ ನಮ್ಮಲ್ಲೂ ಚುನಾವಣೆ ತೆರೆಮರೆಯ ಆಟಗಳು ನಡೆಯುವುದು ಇಂತಹ ಪ್ರತ್ಯೇಕವಾಗಿರುವ ಗಮನಸೆಳೆಯದ ದೂರದ ಮತೆಗಟ್ಟೆಗಳಲ್ಲಿಯೇ.
ದೇಶದಾದ್ಯಂತ ಏಕರೀತಿಯಲ್ಲಿ ಮತದಾನವಾಗುವುದು ಅಸಂಬವ. ನಮ್ಮಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿಸುತ್ತಿನಲ್ಲೂ ಬಹುಮತ ಬದಲಾವಣೆ ಆಗುತ್ತಲೇ ಇತ್ತು. ಅದರೆ ಅಲ್ಲಿ ಪ್ರತಿ ಸುತ್ತಿನಲ್ಲೂ ಹಾಲಿ ಅದ್ಯಕ್ಷರಾದ ಅಹ್ಮದಿನೆಜಾದ್ ಶೇಕಡಾ ಎಪ್ಪತ್ತರಷ್ಟು ಮತಗಳನ್ನು ಉದ್ದಕ್ಕೂ ಪಡೆದುದು ಅದ್ಬುತವೇ ಸರಿ. ನಾಲ್ಕು ಕೋಟಿ ಮತಗಳ ಎಣಿಕೆ ಮುಂದುವರಿಯುತ್ತಿರುವಾಗ ಮತಗಳಗಳ ಶೇಕಡವಾರು ಲೆಕ್ಕಾಚಾರ ಬದಲಾಗಲೇ ಇಲ್ಲ.
ಸಮಾನ್ಯವಾಗಿ ಮತಗಳ ಎಣಿಕೆ ಮಾಡುವಾಗ ವಿವಿದ ಅಭ್ಯರ್ತಿಗಳ ಮತ ಸಂಖ್ಯೆ ಹೆಚ್ಚುತ್ತ ಹೋಗುತ್ತದೆ.
ಪ್ರಾಯುಷ ಪ್ರಪಂಚದಲ್ಲೇ ಮೊದಲ ಬಾರಿ ಒಬ್ಬರು ಅಭ್ಯರ್ಥಿ ಇರಾನಿನಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಬೆಳಗ್ಗೆ 09:47ಕ್ಕೆ 633,048 ಮತಪಡೆದಿದ್ದ ಮೋಹ್ಸಿನ್ ರಾಜಿ ಮಧ್ಯಾಹ್ನ 13:53 ಕ್ಕಾಗುವಾಗ 587,913 ಪಡೆದಿದ್ದಾರೆಂದು ವರದಿಯಾಗಿದೆ.
ಅಂತೂ ಚುನಾವಣೆ ಇತಿಹಾಸದಲ್ಲಿಯೇ ಹೊಸ ಮೈಲುಗಲ್ಲು. ಅಲ್ಲಿನ ಜನರು ಈಗ ಕೇಳುತ್ತಿರುವ ಪ್ರಶ್ನೆ ನನ್ನ ಮತ ಏನಾಯಿತು ??

Labels:
politics
Monday, June 22, 2009
ಪಾಕಿಸ್ಥಾನದವರಿಗೆ ಈಗ ಜರ್ದಾರಿಯವರನ್ನು ಉಗಿಯೋದು ದುಬಾರಿ
ಪಾಕಿಸ್ತಾನದಲ್ಲಿ ಮಾತನಾಡಿಕೊಳ್ಳುತ್ತಿದ್ದಾರಂತೆ - ಈಗ ಜರ್ದಾರಿನ ಉಗಿಯೊದು ಸಹಾ ದುಬಾರಿಯಾಗಿಬಿಟ್ಟಿದೆ. ವಿಷಯ ಏನು ಎಂದರೆ ಜರ್ದಾರಿ ಜೋಕುಗಳ ನಿಯಂತ್ರಿಸಲು ಇಪ್ಪತ್ತು ಪೈಸೆ ಪ್ರತಿ ಸಂಚಾರವಾಣಿ ಸಂದೇಶಕ್ಕೆ ತೇರಿಗೆ ವಿದಿಸಲ್ಪಟ್ಟಿದೆ.
ನಮ್ಮಲ್ಲಿರುವ ಸರ್ದಾಜಿ ಜೋಕುಗಳೆಲ್ಲ ಪಾಕಿಸ್ಥಾನದಲ್ಲಿ ಜರ್ದಾರಿ ಜೋಕುಗಳಾಗಿ ಪರಿವರ್ತನೆ ಹೊಂದಿವೆ. ಸರ್ವಾದಿಕಾರಿಗಳ ಮೇಲೆ ಜೋಕು ಪ್ರಯೋಗ ಎಲ್ಲ ಕಮುನಿಸ್ಟ್ ದೇಶಗಳಲ್ಲೂ ಮಾಮೂಲು. ಪರೋಕ್ಷವಾಗಿ ಕುಟುಕುವುದರಿಂದ ಶಿಕ್ಷೆಗೆ ಒಳಪಡುವುದಿಲ್ಲ.
ಸಂಚಾರವಾಣಿ ಉಪಯೋಗದ ಮಟ್ಟಿಗೆ ಜಗತ್ತಿನಲ್ಲಿ ಐದನೇಯ ಸ್ಥಾನದಲ್ಲಿರುವ ಪಾಕಿಸ್ಥಾನದಲ್ಲಿ
ಸರಕಾರ ಬಹಳ ಸಮಯದಿಂದ ಈ ಜರ್ದಾರಿ ಜೋಕುಗಳ ನಿಯಂತ್ರಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಜೈಲಿಗೆ ಹಾಕುತ್ತೇವೆ ಎಂದು ಬೆದರಿಸುತ್ತಲೂ ಇದೆ. ಯಾವ ರೀತಿಯಲ್ಲಿ ಹಿಡಿಯಲು ಸಾದ್ಯವಾಗಬಹುದೆಂಬ ಸುಳಿವು ಮಾತ್ರ ಅವರಿಗೆ ಇನ್ನೂ ಸಿಕ್ಕಿಲ್ಲ.
ಅದುದರಿಂದ SMSಗಳಿಗೆ ತೇರಿಗೆ ಹಾಕಿದರೆ ಅನ್ನುವ ಆಲೋಚನೆ ಬಂದು ಈಗ ಪ್ರತಿ SMSಗಳಿಗೆ 20 ಪೈಸೆ ತೇರಿಗೆ ವಿದಿಸಲ್ಪಡುತ್ತಿದೆ. ಅದರೆ ಬರೇ ಜರ್ದಾರಿ ಜೋಕುಗಳು ಮಾತ್ರವಲ್ಲ ಎಲ್ಲ ಸಂದೇಶಗಳಿಗೂ ಈ ತೇರಿಗೆ ವಿದಿಸಲ್ಪಡುವುದು ಬಡಜನತೆಗೆ ನಂಗಲಾರದ ತುತ್ತು ಅನ್ನುತ್ತದೆ ಅಲ್ಲಿನ ಪತ್ರಿಕೆಗಳು.
ಕಳೆದ ವರ್ಷ ಅಮೇರಿಕದ ಚುನಾವಣೆ ಸಮಯದಲ್ಲಿ ಸಾರ ಪಾಲಿನ್ ಳನ್ನು ಜರ್ದಾರಿ ಅಪ್ಪಿಕೊಂಡಾಗ ಈ ಜೋಕ್ ಗಳ ಸಂಚಾರ ಜೋರಾಗಿತ್ತಂತೆ. ಅಲ್ಲಿಂದ ಹೆಕ್ಕಿದ ಒಂದು ನಗೆಹನಿ
Just imagine Sarah Palin divorces her current husband and marries Asif Zardari.
Then Palin becomes Vice President of USA.
Then Zardari kills Palin, changes the Will which henceforth says, ‘Zardari will become the President of USA if I die.’
And eventually Zardari becomes President of USA six months after Palin’s death.
And Bilawal changes his name to Bilawal Palin-Zardari
ನಂತರದ ಸೆರ್ಪಡೆ : ಜುಲೈ ೨೦ರ ಕನ್ನಡ ಪ್ರಭ

Sunday, June 21, 2009
ಸ್ವದೇಶಿ ಪರದೇಶಿ ವಿಮಾನಯಾನ ಸಂಸ್ಥ ಅಧಿಕಾರಿಗಳ ಬಿನ್ನ ವರ್ತನೆ.
ಏರ್ ಇಂಡಿಯಾದಲ್ಲಿ ಹಣದ ಇಕ್ಕಟ್ಟು. ಹಿರಿಯ ಅಧಿಕಾರಿಗಳು ಜುಲೈ ತಿಂಗಳ ಸಂಬಳ ತ್ಯಾಗಕ್ಕೆ ತಯಾರಾಗಿ ಎಂದಿದೆ ಆಡಳಿತ. ಹಾಗೆ ನೆನಪಾಯಿತು ಒಂದು ಈ ಸಂಸ್ಥೆಯ ಹಿರಿಯ ಅಧಿಕಾರಿಯೊಂದಿಗೆ ಸಂವಾದ - ಒಂದು ಹಳೆಯ ಅನುಭವ.
ನನ್ನ ಸೈಕಲ್ ಪ್ರವಾಸದ ಅಂಗವಾಗಿ ಬೇರೆ ಬೇರೆ ವಿಮಾನ ಸಂಸ್ಥೆಗಳ ಇಬ್ಬರು ಅಧಿಕಾರಿಗಳಲ್ಲಿ ಮಾತನಾಡಿದ್ದೆ. ಇಬ್ಬರಲ್ಲೂ ಒಂದೇ ಬಗೆಯ ಕೋರಿಕೆ ಮಾಡಿದ್ದೆ. ಇಬ್ಬರೂ ಬಹಳ ಬಿನ್ನವಾಗಿ ವರ್ತಿಸಿದ್ದರು. Air Indiaದ ಹಿರಿಯ ಅಧಿಕಾರಿ ನಕಾರಾತ್ಮಕವಾಗಿ ವರ್ತಿಸಿದ್ದರೆ ಇನ್ನೊಂದರ China Airlinesನ ಕಿರಿಯ ಅಧಿಕಾರಿ ನನ್ನ ಅಗತ್ಯಕ್ಕೆ ಸ್ಪಂದಿಸಿದ್ದರು. ನಮ್ಮ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಸರಕಾರಿ ಕಛೇರಿಯಂತೆ ಕೆಲಸಮಾಡುತ್ತದೆ ಅಂದರೂ ಸರಿ.
ವಿಮಾನ ಪ್ರಯಾಣ ಟಿಕೇಟು ದ್ವಿಮುಖಯಾನವಾದರೆ ಅಗ್ಗ. ಆದರೆ ಹೋದ ದಾರಿಯಲ್ಲಿಂದಲೇ ಬರಬೇಕೆಂಬ ನಿರ್ಬಂದ. ತ್ರಿಕೋನಾಕಾರದ ಪಯಣವಾದರೆ ಪೂರ್ವ ನಿರ್ದೇಶಿತ ದಾರಿಯಲ್ಲಿಯೇ ಪಯಣ. ವಿಮಾನದಿಂದ ಇಳಿದಲ್ಲಿಂದಲೇ ಹತ್ತಬೇಕು. ಜತೆಗೆ ಹೊರಹೋಗುವ ಅಥವಾ ಊರು ತಲಪುವ ಟಿಕೇಟು ತೋರಿಸದಿದ್ದರೆ ಯಾವ ದೇಶದವರೂ ನಮ್ಮನ್ನು ಒಳಕ್ಕೆ ಬಿಡುವುದಿಲ್ಲ. ಹೀಗೆ ವಾಪಾಸು ಬರುವ ಟಿಕೇಟು ಅನಿವಾರ್ಯ. ಎಲ್ಲ ದೇಶದವರಿಗೂ ಈ ವ್ಯಕ್ತಿ ನಮ್ಮಲ್ಲಿ ಉಳಕೊಳ್ಳುತ್ತಾನೋ ಅನ್ನುವ ಸಂಶಯ. ಹೀಗೆಲ್ಲ ಸಮಸ್ಯೆಗಳು.
ಸ್ವಾಮಿ. ನಾನು ಆಫ್ರಿಕದಿಂದ ಯುರೋಪಿಗೆ ಸೈಕಲಿನಲ್ಲಿ ಪ್ರವಾಸ ಮಾಡುವವನಿದ್ದೇನೆ. ನಾನು ವಿಮಾನದಿಂದ ಇಳಿದಲ್ಲಿಯೇ ಪುನಹ ಹತ್ತುವುದಿಲ್ಲವಾದುದರಿಂದ ಮಾರುಕಟ್ಟೆಯಲ್ಲಿರುವ ಯಾವ ಮಾಮೂಲಿ ಕೊಡುಗೆಗಳೂ ನನಗೆ ಹೊಂದುವುದಿಲ್ಲ. ಹಾಗಾಗಿ ಬಾರತದಿಂದ ಆಫ್ರಿಕಕ್ಕೂ ವಾಪಾಸು ಯೂರೊಪಿನಿಂದ ಬಾರತಕ್ಕೂ ಬರುವಂತಹ ಟಿಕೇಟು ಅವಕಾಶ ಮಾಡಿಕೊಡಬೇಕು ಎಂದು ನನ್ನ ಬಿನ್ನಹ Air India ಸಾರ್ವಜನಿಕ ಸಂಪರ್ಕಾದಿಕಾರಿ ಬರ್ಗಾವೋಂಕರ್ ಅವರಲ್ಲಿ ಅವರ ಏಳನೇಯ ಅಂತಸ್ತಿನಲ್ಲಿರುವ ಕಛೇರಿಯಲ್ಲಿ ಅರಿಕೆ ಮಾಡಿಕೊಂಡೆ.
ನನ್ನ ಬಜೇಟು ಮೀರಿದೆ, ಕೆಲಸ ಹೋಗಬಹುದು ಏನೆಲ್ಲ ಅಸಂಬದ್ದ ಅರ್ಥಹೀನ ಮಾತುಗಳನ್ನು ಅ ಹಿರಿಯ ಅಧಿಕಾರಿ ಹೇಳಿದ.
ನಾನು ದರ್ಮಾರ್ಥ ಕೊಡುಗೆ ಅಪೇಕ್ಷಿಸುತ್ತಿಲ್ಲ. ಪ್ರಯಾಣಕ್ಕಾಗುವ ಹಣ ಕೊಡುತ್ತೇನೆ. ವಾಪಾಸು ಬರುವಾಗ ನನಗೆ ಇನ್ನೊಂದು ಸ್ಥಳದಿಂದ ಹತ್ತುವ ಅವಕಾಶ ಮಾತ್ರ ನಾನು ಅಪೇಕ್ಷಿಸುವುದು. ಏನು ಹೇಳಿದರೂ ಅರ್ಥವಾಗುವ ಸ್ಥಿತಿಯಲ್ಲಿ ಅವರಿರಲಿಲ್ಲ.

ಮೇಲಾಗಿ ಸಂಪರ್ಕಕ್ಕೆ ಬಂದವರಿಗೆ ನಾನು ಹಂಚುವ ನನ್ನ ಪುಟ್ಟ ವಿಳಾಸ ಚೀಟಿಯಲ್ಲಿ ನಿಮ್ಮ ಸಹಾಯವನ್ನು ಸೂಚಿಸುವೆ ಎಂದೂ ಹೇಳಿದೆ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂದು ಹೊರಬಂದೆ. ಕೆಳಬಂದಾಗ ನನಗೆ ಅ ಕಛೇರಿಗೆ ದಾರಿ ತೋರಿಸಿದವರು ಹೇಳಿದರು. There are many wrong people at wrong places in Air India.
ಈಜಿಪ್ಟ್ ಎರ್ ಸಂಸ್ಥೆಯ ಎಜನ್ಸಿಯವರು ನನಗೆ ಮುಂಬಯಿ ನೈರೋಬಿ ಲಂಡನ್ ಮುಂಬಯಿ ತ್ರಿಕೋನ ಪ್ರಯಾಣ ಟಿಕೇಟು ಒದಗಿಸಿದರು. ತಮಾಷೆ ಎಂದರೆ ಮೊದಲ ಎರಡು ಹಂತ ಅಂದರೆ ಮುಂಬಯಿ ನೈರೊಬಿ ಮತ್ತು ನೈರೋಬಿ ಲಂಡನ್ ಮಾರ್ಗದಲ್ಲಿ ಅವರ ವಿಮಾನ ಹಾರುತ್ತಿರಲಿಲ್ಲ. ಹಾಗೆ ನೈರೋಬಿಗೆ ಕೆನ್ಯಾ ವಿಮಾನದಲ್ಲಿ ಹಾರುತ್ತಿಯಾ ಅಲ್ಲ ಎರ್ ಇಂಡಿಯಾದಲ್ಲೋ ಎಂದು ಅವರು ಕೇಳಿದಾಗ ಕೆನ್ಯಾ ವಿಮಾನವೇ ಇರಲೆಂದು ಹೇಳಿದೆ. ಅಷ್ಟರ ಮಟ್ಟಿಗೆ ಏರ್ ಇಂಡಿಯ ಬಗೆಗೆ ಜುಗುಪ್ಸೆ ಉಂಟಾಗಿತ್ತು.
ಟೋಕಿಯೊವಿನ ಹಾನೆಡ ನಿಲ್ದಾಣದಲ್ಲಿ ಇಳಿದಾಕ್ಷಣ ಅಲ್ಲಿರುವ ಚೀನಾ (ಟೈವಾನ್) ವಿಮಾನಯಾನ ಸಂಸ್ಥೆಯ ಕಛೇರಿಗೆ ನುಗ್ಗಿದೆ. ಅಲ್ಲಿ ಅಧಿಕಾರಿಯೊಬ್ಬರು ಸಹಾಯಕಿಯೊಂದಿಗೆ ಇದ್ದರು. ಇಬ್ಬರಿಗೂ ಇಂಗ್ಲೀಷ್ ಜ್ನಾನ ಅಷ್ಟಕಷ್ಟೇ. ನಾನು ಇಲ್ಲಿಂದ 900 ಕಿಮಿ ದೂರದ ಮಟ್ಸುಯಾಮಕ್ಕೆ ಸೈಕಲಿಸಲಿದ್ದೇನೆ. ವಾಪಾಸು ಇಲ್ಲಿಗೆ ಬರುವ ಬದಲಿಗೆ ಅಲ್ಲಿಗೆ ಹತ್ತಿರವಿರುವ ಫುಕೋಕದಲ್ಲಿ ವಿಮಾನ ಏರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡೆ.
ಅವರು ಮೊದಲು ಸಾದ್ಯವಿಲ್ಲ ನಿನ್ನಲ್ಲಿರುವುದು ಯಾವುದೇ ಬದಲಾವಣೆಗೆ ಅಸ್ಪದವಿಲ್ಲದಿರುವ ಕಡೇ ದರ್ಜೆ ITX ಟೀಕೇಟು ಎಂದರೂ ನಂತರ ನನ್ನ ಸಮಸ್ಯೆ ಅರ್ಥ ಮಾಡಿಕೊಂಡರು. ಯಾವುದೇ ದಾಕ್ಷಿಣ್ಯಕ್ಕೆ ಒಳಪಡದಿದ್ದರೂ ನನ್ನ ಕೇಳಿಕೆ ಪ್ರಕಾರ ಅಸ್ಪದವನ್ನಿತ್ತರು. ಹಾಗೆ ಸಾವಿರ ಕಿಮಿ ಸೈಕಲಿಸುವುದು ಉಳಿತಾಯವಾದ ನಾನು ಫುಕೋಕ ಪಟ್ಟಣದಿಂದ ಇಪ್ಪತ್ತು ದಿನಗಳ ಅನಂತರ ಹಾರಿ ಪ್ರಯಾಣ ಮುಂದುವರಿಸಿದೆ.
ಸಂಬಳ ಕೊಡಲು ಇವರಲ್ಲಿ ಯಾಕೆ ದುಡ್ಡಿಲ್ಲವೆಂದು ಕಲ್ಪಿಸಿಕೊಳ್ಳಲು ಸಾದ್ಯವಾಗುತ್ತದೆ. ಕಳಪೆ ಸೇವೆ ಅನ್ನಬೇಕಾಗುತ್ತದೆ.

cycle trip
Friday, June 12, 2009
ತೆಂಗಿನೆಣ್ಣೆ ಹಿಂಡಲು ಮಾಂಸಹಾರಿ ವಿಧಾನ
ಸೇವಾಗ್ರಾಮದ ಗಾಂಧಿ ಆಶ್ರಮ science for villages ಎನ್ನುವ ಪಾಕ್ಷಿಕ ಪ್ರಕಟಿಸುತಿತ್ತು. ನಾನು ಅದರ ಖಾಯಂ ಓದುಗನಾಗಿದ್ದೆ. ಹಲವು ಕೂತೂಹಲಕರ ಪ್ರಯೋಗಗಳು ಅದರಲ್ಲಿ ಇದ್ದವು. ಇಪ್ಪತ್ತೋಂದು ವರ್ಷ ಹಿಂದೆ ಎಪ್ರಿಲ್ 1988 ರ ಸಂಚಿಕೆಯಲ್ಲಿ ಇಂಡೋನೇಶ್ಯದಲ್ಲಿ ಚಲಾವಣೆ ಇರುವ ತೆಂಗಿನ ಕಾಯಿಯಿಂದ ಎಣ್ಣೆ ಬೇರ್ಪಡಿಸುವ ವಿಧಾನ ಪ್ರಕಟವಾಗಿತ್ತು. ಪತ್ರಿಕೆ ರದ್ದಿಗೆ ಸೇರುವಾಗ ಒಂದು ಪ್ರತಿ ಇರಲೆಂದು ಇಟ್ಟುಕೊಂಡೆ. ಜಗತ್ತಿನಲ್ಲಿ ಒಂದೆಡೆ ತೆಂಗಿನಕಾಯಿ ಬೆಳೆಯುವಲ್ಲಿ ಇಂತಹ ವಿಧಾನ ಚಾಲ್ತಿಯಲ್ಲಿತ್ತು ಎನ್ನುವ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಹೊರತು ಇದು ಪ್ರಾಯೋಗಿಕ ಎಂದಲ್ಲ.
ಸರಳವಾಗಿ ಹೇಳುವುದಾದರೆ ನದಿಯಲ್ಲಿರುವ ಏಡಿಯನ್ನು ಹಿಡಿದು ಅದರ ಚಿಪ್ಪನ್ನು ಬೇರ್ಪಡಿಸಿ ಪುಡಿಮಾಡಬೇಕಂತೆ. ಅನಂತರ ಅದನ್ನು ತೆಂಗಿನ ತುರಿಯೊಂದಿಗೆ ಮಿಶ್ರ ಮಾಡಿ ಒಂದು ರಾತ್ರಿ ಬಿಡಬೇಕು. ಮರುದಿನ ಬೆಳಗಾಗುವಾಗ ಅ ಮಿಶ್ರಣ ಕೆಂಬಣ್ಣದ ತೈಲಮಯವಾಗಿರುತ್ತದೆ. ಪ್ಲಾಸ್ಟೀಕ್ ಹಾಳೆಯಲ್ಲಿ ಮೂರುನಾಲ್ಕು ಘಂಟೆ ಒಣಗಿಸಿ ಎಣ್ಣೆ ಹಿಂಡಬೇಕು ಅನ್ನುತ್ತದೆ ಲೇಖನ. ವಿವರಕ್ಕೆ ಮೂಲ ಲೇಖನವನ್ನು ಜತೆಗಿರಿಸಿದ್ದೇನೆ. ಈಗ virgin coconut oil ಎನ್ನುವ ಹೊಸ ಸ್ವರೂಪವೂ ನಮ್ಮ ಮುಂದಿದೆ. ಈ ಎಣ್ಣೆ ಯಾವ ವರ್ಗಕ್ಕೆ ಸೇರಿದ್ದೆಂದು ದಯವಿಟ್ಟು ಪ್ರಶ್ನಿಸಬೇಡಿ. ನನಗೂ ಗೊತ್ತಿಲ್ಲ.ಇದು ಸೇರುವುದು ಸಸ್ಯಹಾರಕ್ಕೋ ಮಾಂಸಹಾರಕ್ಕೋ ಅನ್ನುವುದು ಸಹಾ ಗೊತ್ತಿಲ್ಲ.

Subscribe to:
Posts (Atom)