ಇಂದಿನ ಉದಯವಾಣಿಯಲ್ಲಿ ಡಾ| ಸಿ ನಿತ್ಯಾನಂದ ಪೈ ಅವರು ಎಂಡೊಸಲ್ಫಾನ್ ನಿಷೇದಕ್ಕೆ ಬಾರತದ ಪ್ರತಿರೋಧವೇಕೆ ? ಎನ್ನುವ ವಿವರವಾದ ಬರಹ ಬರೆದಿದ್ದಾರೆ.
ಈ ಕೀಟನಾಶಕದ ನಿಷೇದಕ್ಕೆ ಅಂತರಾಷ್ಟ್ರೀಯ ಪ್ರಯತ್ನಗಳಾಗುತ್ತಿದ್ದು ಬಾರತದಲ್ಲಿ ಖಾಸಗಿ ವಲಯ ಮಾತ್ರವಲ್ಲ ಸರಕಾರಿ ಕಾರ್ಖಾನೆಯಲ್ಲೂ ತಯಾರಾಗುವ ಎಂಡೊಸಲ್ಫಾನ್ ಅಳಿವಿಗೆ ನಮ್ಮ ಸರಕಾರ ಪ್ರಬಲ ವಿರೋಧ ವ್ಯಕ್ತ ಪಡಿಸುತ್ತದೆ. ಇಲ್ಲಿ ಪ್ರಜೆಗಳ ಆರೋಗ್ಯದ ಬದಲು ಸರಕಾರದ ನಿಲುವಿನಲ್ಲಿ ವ್ಯಾಪಾರಿ ಹಿತಾಸಕ್ತಿಯೇ ಮೇಲುಗೈ ಸಾಧಿಸುತ್ತದೆ. ಬಾರತ ಸರಕಾರದ ನಿಲುವಿನ ಬಗೆಗೆ ನ್ಯುಜೀಲಾಂಡಿನ ಚಳುವಳಿಗಾರ್ತಿ Dr. Meriel Watts ಸ್ಪಷ್ಟವಾಗಿ ಹೇಳುತ್ತಾರೆ. This is a clear conflict of interest, a manufacturer is using its power to veto international agreements on a chemical."
ಡಾ ನಿತ್ಯಾನಂದ ಪೈ ಅವರು ಕೊನೆಯಲ್ಲಿ ಈ ಲೇಖನ ಅಚ್ಚಿಗೆ ಹೋಗುವ ಮುನ್ನ ತಿಳಿದು ಬಂದಂತೆ ವಿಶ್ವದಲ್ಲಿಯೇ ಅತ್ಯದಿಕ ಪ್ರಮಾಣದ ಎಂಡೊಸಲ್ಫಾನ್ ತಯಾರಿಸುತ್ತಿರುವ ಬಾಯರ್ ಸಂಸ್ಥೆ ೨೦೧೦ ರಿಂದ ಇದರ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ ಎಂದು ಬರೆದಿದ್ದಾರೆ. ತೀರ್ಮಾನದ ಹಿಂದಿನ ಗುಟ್ಟು ಕುತೂಹಲದಾಯಕವಾಗಿರುವ ಕಾರಣ ನಾನು ಇದನ್ನು ಹಂಚಿಕೊಳ್ಳಲು ತೀರ್ಮಾನಿಸಿದೆ.
ಹತ್ತಿ ಬೆಳೆಯುವಾಗ ವ್ಯಾಪಕವಾಗಿ ಎಂಡೊಸಲ್ಫಾನ್ ಉಪಯೋಗಿಸುತ್ತಾರೆ. ಇದನ್ನು ವಿರೋಧಿಸುವ ಸಂಸ್ಥೆಗಳು ನವೀನ ಪ್ರತಿಭಟನೆ ರೂಪಿಸಿದವು. ಅದರ ಅಂಗವಾಗಿ ೧೬ ದೇಶಗಳಲ್ಲಿ ಹಳೆಯ ಉಪಯೋಗಿಸಿದ ಮಾಮೂಲಿ ಕಾಚ ಹಿಂತಿರುಗಿಸಿದ ಜನರಿಗೆ ಸಾವಯುವ ಹತ್ತಿಯಿಂದ ತಯಾರಿಸಿದ ಕಾಚವನ್ನು ಉಚಿತವಾಗಿ ಹಂಚಲಾಯಿತು. ಹೀಗೆ ರಾಶಿ ಬಿದ್ದ ಹಳೆಯ ಕಾಚಗಳನ್ನು ಜರ್ಮನಿಯಲ್ಲಿರುವ ಪ್ರಪಂಚದ ಅತಿ ದೊಡ್ಡ ಎಂಡೊಸಲ್ಫಾನ್ ತಯಾರಕ ಬಾಯರ್ ಕಂಪೇನಿಗೆ ರವಾನಿಸಲಾಯಿತು. ಇಲ್ಲಿ ಅಣಕವೆಂದರೆ ಭಾರತದಲ್ಲಿ ಬೆಳೆದ ಸಾವಯುವ ಹತ್ತಿ ಈ ಆಂದೋಲನದಲ್ಲಿ ಗಮನಾರ್ಹ ಪಾತ್ರ ವಹಿಸಿದೆ. ಬದಲಿ ಕೊಟ್ಟ ಕಾಚಗಳು ತಯಾರಾದುದು ಬಾರತದಲ್ಲಿ ಬೆಳೆದ ಸಾವಯುವ ಹತ್ತಿಯಿಂದ. ಆದರೆ ಬಾರತ ಸರಕಾರ ಮಾತ್ರ ಈ ಆಂದೋಲನದ ವಿರುದ್ದ ಕೆಲಸ ಮಾಡುತ್ತಿದೆ.
ಹಳೆಯ ಕಾಚಗಳ ಪರ್ವತ ಕಂಡು ಬೆದರಿದ ಬಯಾರ್ ಸಂಸ್ಥೆ ಬರುವ ವರ್ಷ ಈ ಕೀಟನಾಶಕ ತಯಾರಿಕೆ ಸಂಪೂರ್ಣ ನಿಲ್ಲಿಸಿಲು ಒಪ್ಪಿಕೊಂಡಿತು.
ನಮ್ಮಲ್ಲಿ ಇಂತಹ ಎಂಡೊಸಲ್ಫಾನ್ ನಿಷೇದಕ್ಕೆ ಆಂದೋಲನ ನಡೆಯುವುದಾದರೆ ಹಳೆಯ ಚಡ್ಡಿ ಕಾಚ ಕಳುಹಿಸಲು ಯೋಗ್ಯ ವಿಳಾಸ,
ಬಾರತ ಸರಕಾರದ ಸರ್ವ ತೀರ್ಮಾನಗಳೂ ಕೈಗೊಳ್ಳುವಂತಹ
ದೆಹಲಿ ಸಿಂಹಾಸನದ ಹಿಂದಿನ ಶಕ್ತಿ -
೧೦ ಜನಪತ್ .
Thursday, August 27, 2009
Monday, August 24, 2009
ಹಿಂದು ಕವಿಯಲ್ಲಿ ರಾಷ್ಟ್ರ ಗೀತೆ ಬರೆಸಿದ ಪಾಕಿಸ್ಥಾನದ ಜಿನ್ನಾ
ಪಾಕಿಸ್ಥಾನ ಜಾತ್ಯಾತೀತ ರಾಷ್ಟ್ರವಾಗಬೇಕೆಂದು ಬಯಸಿದ ಜಿನ್ನಾ ರಾಷ್ಟ್ರ ಗೀತೆ ಬರೆಸಲು ಉರ್ದು ಅರಿತ ಹಿಂದು ಕವಿಯ ಹುಡುಕಾಟದಲ್ಲಿದ್ದರು. ಆಗ ಅವರಿಗೆ ದೊರಕಿದ ವ್ಯಕ್ತಿ ಜಗನಾಥ ಅಜಾದ್. ಜಿನ್ನಾ ಅವರಿಂದಲೇ ಅದೇಶ ದೊರೆತ ಅಜಾದ್ ಅವರಿಗೆ ಇಲ್ಲವೆನ್ನಲಾಗಲಿಲ್ಲ. ೧೯೪೭ರ ಆಗಸ್ತ್ ೯ ರಂದು ಸಂದೇಶ ಸಿಕ್ಕ ನಂತರ ಗೀತೆ ರಚಿಸಲು ದೊರೆತ ಸಮಯವಕಾಶ ಕೇವಲ ಐದು ದಿನಗಳು ಮಾತ್ರ.
ಜಗನಾಥ ಅಜಾದ್ ರಚಿಸಿದ ಗೀತೆ ಜಿನ್ನಾ ಅವರಿಗೆ ಒಪ್ಪಿಗೆಯಾಯಿತು. Aey sarzameen-i-pak Zarrey terey hein aaj sitaron sey tabnak Roshan heh kehkashan sey kahin aaj teri khak. ( Oh land of Pakistan, each particle of yours is being illuminated by stars. Even your dust has been brightened like a rainbow ) ಎನ್ನುವ ವಾಕ್ಯಗಳಿರುವ ರಾಷ್ಟ್ರ ಗೀತೆ ಅಂದಿನ ರಾಜದಾನಿ ಕರಾಚಿಯಲ್ಲಿದ್ದ ಪಾಕಿಸ್ಥಾನ ರೇಡಿಯೊದಲ್ಲಿ ಪ್ರಥಮ ಬಾರಿಗೆ ಬಿತ್ತರಿಸಲಾಯಿತು. ಒಂದೂವರೆ ವರ್ಷ ಇದು ಪಾಕಿಸ್ಥಾನದ ರಾಷ್ಟ್ರಗೀತೆಯಾಗಿತ್ತು. ಜಿನ್ನಾರ ಮರಣದ ನಂತರ ಎಲ್ಲವೂ ಇಸ್ಲಾಂಮಯವಾಗಿ ಹಫೀಜ್ ಜಲಂದರಿ ಬರೆದ ಗೀತೆ ರಾಷ್ಟ್ರ ಗೀತೆಯಾಯಿತು.
ಮೇಜರ್ ಜಸ್ವಂತ್ ಸಿಂಗ್ ಅವರನ್ನು ಕಮಲ ಪಕ್ಷ ಹೊರದಬ್ಬುವಾಗ (ಅಲ್ಲಲ್ಲ, ದೂರವಾಣಿಯಲ್ಲಿ ತಲಾಖ್-ಸಿದ್ದು) ಜಿನ್ನಾ ಅವರ ಜಾತ್ಯಾತಿತವಾದದ ಚಿಂತನೆ ಪ್ರಸ್ತುತವೆನಿಸುತ್ತದೆ. ಜಾತ್ಯಾತಿತವಾದ ಸಂದೇಶವಿರುವ ಅವರ ಪ್ರಥಮ ಬಾಷಣ ಸಾಕಷ್ಟು ಪ್ರಚಾರ ಕಂಡ ಕಾರಣ ಇಲ್ಲಿ ಉಲ್ಲೇಖಿಸುವುದಿಲ್ಲ. ಹಿಂದುಗಳಿಗೆ ಒಳಿತಾಗುವುದು ಜಿನ್ನಾ ಅವರ ಚಿಂತನೆ ಖಂಡಿಸುವುದರಲ್ಲಿ ಅಲ್ಲ.

Saturday, August 22, 2009
ಕೋಟ್ಯಾದೀಶರೇ ಎಚ್ಚರದಿಂದ ವಾಹನ ಓಡಿಸಿ ಎನ್ನುವ ಕಾನೂನು ಬರಲಿ
ಇಂದು ಸಂಜೀವ್ ನಂದ ಎಂಬ ಒಳ್ಳೆಯ ಹುಡುಗ ಜೈಲಿನಿಂದ ಬಿಡುಗಡೆಯಾದ. ಹತ್ತು ವರ್ಷ ಹಿಂದೆ ಮೂವರು ಪೋಲಿಸರೂ ಸೇರಿದಂತೆ ಆರು ಜನರ ಕಾರಿನ ಅಡಿಗೆ ಹಾಕಿ ಕೊಂದ ಸಂಜೀವ ನಂದನಿಗೆ ಕೆಳಗಿನ ನ್ಯಾಯಾಲಯ ವಿಧಿಸಿದ್ದ ಐದು ವರ್ಷ ಸಜೆಯಲ್ಲಿ ಎರಡು ವರ್ಷ ಜೈಲಿನಲ್ಲಿದ್ದರೆ ಸಾಕು ಎಂದು ದೆಹಲಿ ಉಚ್ಚ ನ್ಯಾಯಾಲಯ ಇತ್ತೀಚೆಗೆ ತೀರ್ಪು ಕೊಟ್ಟಿದೆ. ಅವನ ಒಳ್ಳೆಯ ನಡತೆ ನೋಡಿ ಅ ಎರಡು ವರ್ಷ ಕಾರಾಗೃಹ ಶಿಕ್ಷೆಯಲ್ಲೂ ಮೂರು ತಿಂಗಳು ಮಾಫಿ.
ನಮ್ಮಲ್ಲಿ ರಸ್ತೆಯಲ್ಲಿ ವೇಗದ ಮಿತಿ ತಪ್ಪಿ ಗಾಡಿ ಓಡಿಸಿದರೆ ದಾರಿ ಹೋಕರನ್ನು ಯಮಪುರಿಗೆ ಅಟ್ಟಿದರೆ ಚಿಲ್ಲರೆ ದಂಡ ಕಟ್ಟಿ ಬಚಾವಾಗಬಹುದು. ಕೋಟಿಗಟ್ಟಲೆ ರೂಪಾಯಿಯ ಕಾರನ್ನು ವಾಯುವೇಗದಲ್ಲಿ ಓಡಿಸಿ ರಸ್ತೆಯಲ್ಲಿರುವವರನ್ನು ಕೊಲ್ಲುವ ಸಂಜೀವ ನಂದ ಸಲ್ಮನ್ ಖಾನ್ ಅವರಂತವರಿಗೆ ಆದಾಯ ಅಂತಸ್ತಿಗೆ ತಕ್ಕಂತೆ ದಂಡವಾಗ ಬೇಕು. ಫಿನ್ ಲಾಂಡ್ ದೇಶದಲ್ಲಿ ಮಿತಿ ತಪ್ಪಿ ಓಡಿಸಿದರೆ ಅವರವರ ಸಾಮರ್ಥ್ಯ ಅನುಗುಣವಾಗಿ ದಂಡಕಟ್ಟಲೇ ಬೇಕು.
ಇತ್ತೀಚೆಗೆ ಫಿನ್ ಲಾಂಡಿನ ಹಣವಂತ ಜರಿ ಬಾರ್ ಎಂಬಾತ ಕಾರು ವೇಗವಾಗಿ ಓಡಿಸಿದ್ದಕ್ಕೆ ಕಟ್ಟಿದ ದಂಡ ಕೇವಲ ಒಂದು ಲಕ್ಷ ನಲುವತ್ತೊಂದು ಸಾವಿರ ಡಾಲರ್ ಅಂದರೆ ಸುಮಾರು ಅರುವತ್ತೈದು ಲಕ್ಷ ರೂಪಾಯಿ ದಂಡ. ಅವನು ಮಾಡಿದ ತಪ್ಪು ವೇಗದ ಮಿತಿ ಅರುವತ್ತು ಕಿಮಿ ಇದ್ದಲ್ಲಿ ಎಂಬತ್ತ ಎರಡು ಕಿಮಿ ಯಲ್ಲಿ ಕಾರು ಓಡಿಸಿದ್ದು.
ವೇಗ ಇಪ್ಪತ್ತು ಕಿಮಿ ಹೆಚ್ಚಾದರೆ ನಿಗದಿತ ಫೈನ್. ಅವನ ವೇಗ ಎಂಬತ್ತು ಕಿಮಿ ಒಳಗಿದ್ದರೆ ಆರು ಸಾವಿರ ರೂಪಾಯಿ ಕಟ್ಟಿದರೆ ಸಾಕಿತ್ತು. ಆದರೆ ಮುತ್ತೂ ಹೆಚ್ಚಿನ ಎರಡು ಕಿಮಿ ಅಂದರೆ ಆತನ ಹನ್ನೆರಡು ದಿನದ ಆದಾಯವನ್ನು ಡಂಡ ಕಟ್ಟಬೇಕಾಯಿತು. ಮುಂಚಿನ ವರ್ಷ ತನ್ನ ಕಂಪೇನಿಯ ಒಂದಂಶ ಮಾರಿದ ಕಾರಣ ಅವನ ದಿನದ ಆದಾಯ ಐದೂವರೆ ಲಕ್ಷವಾಗಿತ್ತು. ಅಲ್ಲಿನ ತೇರಿಗೆ ಲೆಕ್ಕಾಚಾರ ಪಾರದರ್ಶಕ ಮತ್ತು ಸಾರ್ವಜನಿಕರಿಗೆ ಲಭ್ಯ. ನಮ್ಮಲ್ಲಿರುವಂತೆ ಅಧಿಕಾರಿಗಳ ತೆರೆಮರೆಯ ಆಟ ಅಲ್ಲಿಲ್ಲವಂತೆ.
ಎಂಟು ವರ್ಷ ಹಿಂದೆ ನೋಕಿಯ ದೂರವಾಣಿ ಕಂಪೇನಿಯ ಯಜಮಾನ ಪೆಕ್ಕ ಆಲ ಪೀಟಿಲ ವೇಗದ ಮಿತಿ ಮೀರಿ ಸಿಕ್ಕಿಬಿದ್ದು ಸುಮಾರು ಹದಿನೈದು ಲಕ್ಷ ದಂಡ ಕಟ್ಟಬೇಕಾಗಿ ಬಂದಿತ್ತು. ೧೯೯೯ರ ಅವನ ಆದಾಯ ನಾಲ್ಕು ಮಿಲಿಯ ಡಾಲರ್ ಎನ್ನುವ ನೆಲೆಯಲ್ಲಿ ದಂಡ ಲೆಕ್ಕ ಹಾಕಲಾಗಿತ್ತು. ನಮ್ಮಲ್ಲೂ ಇಂತಹ ಕಾನೂನು ಬಂದರೆ ಚೆನ್ನಾಗಿರುತ್ತದೆ.

Thursday, August 20, 2009
ಹರಿಯುವ ನೀರಿನ ಉಪಯೋಗದಲ್ಲಿ ಅಮೇರಿಕದವರಿಂದ ನಾವೇ ಮೇಲು.
ಸುಲಬವಾಗಿ ಲಬ್ಯವಿರುವ ಸಂಪನ್ಮೂಲಗಳನ್ನು ಉದಾಹರಣೆಗೆ ಜಲವಿದ್ಯುತ್ ಅವಕಾಶಗಳನ್ನು ಆರ್ಥಿಕವಾಗಿ ಬಲೀಷ್ಟವಾಗಿರುವ ರಾಷ್ಟ್ರಗಳು ಸಮರ್ಪಕವಾಗಿ ಬಳಸಿಕೊಂಡಿವೆ ಎನ್ನುವುದು ತಪ್ಪು ಕಲ್ಪನೆ. ಅಮೇರಿಕದಲ್ಲಿರುವ ಎಂಬತ್ತು ಸಾವಿರ ಅಣೆಕಟ್ಟುಗಳಲ್ಲಿ ಕೇವಲ ಎರಡು ಸಾವಿರದ ನಾಲ್ಕು ನೂರರಲ್ಲಿ ವಿದ್ಯುತ್ ತಯಾರಾಗುತ್ತದೆ. ಅಂದರೆ ಶೇಕಡ 97 ರಲ್ಲಿ ನೀರು ಅದರಷ್ಟಕೆ ಹರಿದು ಹೋಗುತ್ತದೆ. ಅದರರ್ಥ ಎಲ್ಲದರಲ್ಲೂ ವಿದ್ಯುತ್ ತಯಾರಿ ಸಾದ್ಯವೆಂದಲ್ಲ. ಹಲವರಲ್ಲಿ ಶಕ್ಯತೆ ಇದ್ದು ಇತ್ತೀಚೆಗೆ ಗುರುತಿಸಿದ್ದಾರೆ.
ಹೆಚ್ಚಿನ ಅಣೆಕಟ್ಟುಗಳು ನೆರೆ ನಿಯಂತ್ರಣ, ನೀರಾವರಿ ಮತ್ತಿತರ ಉಪಯೋಗಗಳಿಗಾಗಿ ನಿರ್ಮಿಸಲ್ಪಟ್ಟಿದೆ. ಹಲವರ ಆಕಾರ ವಿದ್ಯುತ್ ತಯಾರಿಗೆ ಅನುಗುಣವಾಗಿಲ್ಲ. ಅಮೇರಿಕನರ ಜೀವನ ಶೈಲಿಯೇ ಅಗ್ಗದ ಇಂದನ ಅವಲಂಬಿಸಿದೆ. ಆಗ ಜಲವಿದ್ಯುತ್ ಬಗೆಗೆ ಒತ್ತಡವೂ ಇರಲಿಲ್ಲ. ಈಗ ಪರಿಸರವಾದಿಗಳ ವಿರೋಧ ಕಾರಣ ಕಲ್ಲಿದ್ದಲಿಗೆ ಪರ್ಯಾಯ ಹುಡುಕುತ್ತಿದ್ದಾರೆ. ಹಲವು ಅಣೆಕಟ್ಟುಗಳ ವಿದ್ಯುತ್ ಉತ್ಪಾದನೆಗೋಸ್ಕರ ಪರಿವರ್ತನೆಗೊಳಿಸುತ್ತಿದ್ದಾರೆ.
ಅಮೇರಿಕದಲ್ಲಿ ನಲ್ವತ್ತರ ದಶಕದಲ್ಲಿ ಶೇಕಡ ೪೨ರಷ್ಟು ಜಲ ವಿದ್ಯುತ್ ಪೊರೈಕೆಯಾದರೆ ಅನಂತರ ಹೊಸ ಜಲವಿದ್ಯುತ್ ಕೇಂದ್ರಗಳು ಸ್ಥಾಪಿಸಲ್ಪಡಲಿಲ್ಲ. ಅನಂತರ ಅಣು ವಿದ್ಯುತ್ ಮತ್ತು ಕಲ್ಲಿದ್ದಲು ದಹಿಸಲು ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಅದುದರಿಂದ ಇಂದು ಪ್ರಪಂಚದಲ್ಲಿ ಸುಮಾರು ಶೇಕಡಾ ೨೦ರಷ್ಟು ವಿದ್ಯುತ್ ಜಲ ವಿದ್ಯುತ್ ಕೇಂದ್ರಗಳಲ್ಲಿ ತಯಾರಾದರೆ ಅಮೇರಿಕದಲ್ಲಿ ಅದು ಶೇಕಡ ಹತ್ತಕ್ಕೆ ಇಳಿಯುತ್ತದೆ.
ಅವಕಾಶ ಮತ್ತು ಸಾಧನೆಯನ್ನು ಅವಲೋಕಿಸುವಾಗ ನಾವು ಈ ವಿಚಾರದಲ್ಲಿ ಮುಂದಿದ್ದೇವೆ. ನದಿ ಮತ್ತು ಕಾಲುವೆಗಳಲ್ಲಿ ಹರಿಯುವ ನೀರಿನ ತಡೆಗಟ್ಟಿ ವಿದ್ಯು ತ್ ಉತ್ಪಾದನೆ ನಡೆಸಲಾಗುತ್ತಿದೆ. ಈ ವರ್ಷ ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ಎರಡು ಕಿರು ವಿದ್ಯುತ್ ಘಟಕಗಳು ಕಾರ್ಯವೆಸಗಲು ಪ್ರಾರಂಬಿಸಿವೆ.
ಪ್ರಿಯ ಜಿ ಯನ್ ಅಶೋಕವರ್ದನರು ಬರೆದು ಕಳಿಸಿದ್ದು ಪ್ರತಿಕ್ರಿಯೆ ಎನಿಸುವ ಬದಲು ತಿದ್ದಿಪಡಿಯಾದುದರಿಂದ ಇಲ್ಲಿಯೇ ಸೇರಿಸುತ್ತಿದ್ದೇನೆ.
ನೀನು ಹೇಳುವ ಅರ್ಥದಲ್ಲಿ ‘ಸದುಪಯೋಗಗೊಳಿಸುವಲ್ಲಿ’ ನಾವು ಮೇಲು. ಆದರೆ ಇಂದಿನ ಉದಾಹರಣೆಯ ಮಟ್ಟಕ್ಕೆ ಇಳಿಯುವಾಗ ವಾಸ್ತವ ಹಾಗಿಲ್ಲ ಎಂದು ವಿಷಾದ ಮೂಡುತ್ತದೆ. ಇಂದಿನ ಮಿನಿ ಜಲವಿದ್ಯುತ್ ಯೋಜನೆಗಳೆಲ್ಲಾ ಸಬ್ಸಿಡಿ, ಟರ್ನ್ ಆಫ್ ಗಳನ್ನು ಮಾತ್ರ ಲಕ್ಷಿಸಿ ಮುಖ್ಯವಾಗಿ ಜನೋಪಯೋಗಿ ಮತ್ತೆ ಪರಿಸರವೆಲ್ಲವನ್ನೂ ಕೆಡಿಸುವ ಯೋಜನೆಗಳಾಗಿಯೇ ಬರುತ್ತಿವೆ ಎನ್ನುವುದನ್ನು ಗಮನಿಸಲೇಬೇಕು. ಜಲಾನಯನ ಪ್ರದೇಶಗಳನ್ನೆಲ್ಲಾ ಕಲಕುತ್ತಿರುವ ಈ ಯೋಜನೆಗಳಿಂದ ನಾವೆಷ್ಟು ‘ಮೇಲಾಗುತ್ತೇವೋ’ ಎಂದು ಹೆದರಿಕೆಯಾಗುತ್ತದೆ.
ಬಿದ್ದರೂ ಮೂಗು ಮೇಲೆ ಎಂಬಂತೆ ಅಮೇರಿಕದವರು ನಮ್ಮಿಂದಲೂ ಬುರ್ನಾಸ್ ಎಂದು ಬರೆಯಲುಹೊರಟೆ. ನಮ್ಮಲ್ಲಿ ಈ ಕಿರು ಜಲಾಶಯಗಳು ಮುಳಗಿಸುವುದರ ಅಲೋಚಿಸುವಾಗ ಹೆದರಿಕೆಯಾಗುತ್ತದೆ. ಹತಾಷೆ ಬಾವನೆ ಉಂಟಾಗುತ್ತದೆ. ಅಸಂಬದ್ದ ಸಬ್ಸಿಡಿ ನೀತಿಯಿಂದಾಗಿಯೇ ಐಶ್ವರ್ಯ ಎಂಬ ನಕ್ಷತ್ರ ಗಿರಿಗಿಟಿ ಒಡತಿಯಾದದ್ದು.

Monday, August 17, 2009
ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೊರಟಿದ್ದ ಶಾರುಖ್
ಶಾರುಖ್ ಖಾನ್ ಹೆಸರಿನ ಹಿಂದಿ ಚಿತ್ರನಟ ಇನ್ನೆಂದೂ ಅಮೇರಿಕಕ್ಕೆ ಕಾಲು ಇಡಬಾರದು ಅನ್ನಿಸುತ್ತೆ ಎಂದು ನಿನ್ನೆ ಹೇಳಿದ. ಈಗ ಅವನ ಹಿಂದಿನ ವರ್ತನೆ ನೆನಪಿಸಿಕೊಳ್ಳುವ ಕಾಲ. ಬರೇ ಮೂರು ವರ್ಷ ಹಿಂದೆ If Pepsi is banned in India, I would go to the US and drink it ಎಂದು ಈ ನಟ ಟಿವಿ ಎದುರುಗಡೆ ಹೇಳಿ ಕೊಂಡಿದ್ದ.
ಮೂರು ವರ್ಷ ಹಿಂದೆ ನೀರನ್ನು ಸರಿಯಾಗಿ ಶುದ್ದಿಕರಿಸದೆ ತಂಪು ಪಾನಿಯ ತಯಾರಿಸಲಾಗುತ್ತಿದೆ ಎಂದು ಸಾಕ್ಷಿ ಸಮೇತ ಪರಿಸರವಾದಿ ಪತ್ರಕರ್ತೆ ಸುನಿತಾ ನಾರಾಯಣ ಮುಂದಾಳತ್ವದಲ್ಲಿ ಜನಜಾಗೃತಿ ಆಂದೋಲನ ನಡೆಯುತಿತ್ತು. ಈ ಆಂದೋಲನದ ವಿರುದ್ದ ಮಾತನಾಡಿದ ಶಾರುಖ್ ಎಂದೂ ಸಾರ್ವಜನಿಕ ಹಿತಾಸಕ್ತಿ ಕಾರ್ಯದಲ್ಲಿ ತೊಡಗಿಸಿಕೊಂಡವನಲ್ಲ.
ಸತ್ಯಕ್ಕೆ ಸಾಕ್ಷಿ ಬೇಕು, ಸುಳ್ಳು ಹಾಗೆ ಚಲಾವಣೆ ಸಾದ್ಯ ಎನ್ನುವಂತೆ ಕೋಟಿಗಟ್ಟಲೆ ರೂಪಾಯಿ ಪೆಪ್ಸಿ ಕಂಪೇನಿಯಿಂದ ಪಡೆಯುತಿದ್ದ ಈ ನಟನ ಮೂರ್ಖತನದ ಮಾತು ಬಾರತದ ಜನತೆಗೆ ದ್ರೋಹ. ಸಿನೆಮಾ ನಟರು ಕುಡಿಯುತ್ತಾರೆ ಮತ್ತು ಭಾರತದಲ್ಲಿ ಇತರ ಅಹಾರ ಪದಾರ್ಥಗಳು ಮಲೀನಗೊಂಡಿವೆ ಎನ್ನುವ ದಿಕ್ಕು ತಪ್ಪಿಸುವ ಬಣ್ಣದ ನೀರಿನ ಸಂಸ್ಥೆಗಳ ಪ್ರಚಾರದ ಮುಂಚೂಣಿಯಲ್ಲಿ ಇವನಿದ್ದ. ಸದಾ ಹೊಗೆ ಬಿಡುವ ಮತ್ತು ಸಿನೆಮದಲ್ಲಿ ದೂಮಪಾನ ಅವಕಾಶ ಇರಬೇಕು ಎನ್ನುವ ಈ ನಟ ಯುವಜನರಿಗೆ ಕೆಟ್ಟ ಮಾದರಿ.
ನಮ್ಮ ಮೆಚ್ಚಿನ ಮಾಜಿ ಅದ್ಯಕ್ಷ ಡಾ| ಅಬ್ದುಲ್ ಕಲಾಂ ಅವರಂತೆ ಪ್ರಶ್ನಾತೀತ ವ್ಯಕ್ತಿ ಆಗಿದ್ದರೆ ಬೇರೆ ಮಾತು. ಪೆಪ್ಸಿ ಕುಡಿಯಲು ಅಮೇರಿಕಕ್ಕೆ ಹೋಗಲು ತಯಾರು ಇರುವಂತಹ ವ್ಯಕ್ತಿ ಅಲ್ಲಿನ ಸರಕಾರ ಕೈಗೊಳ್ಳುವ ಚಿಲ್ಲರೆ ತಪಾಸಣೆಯನ್ನು ಆಕ್ಷೇಪಿಸುವಂತಿಲ್ಲ. ಸರಿಯಾಗಿ ಕಾಸು ಕೊಟ್ಟರೆ ಇಂತವರು ಬಾಂಬು ಕೊಂಡೊಯ್ಯಲೂ ತಯಾರು. ಅತಿ ಹೆಚ್ಚು ಹಣಕ್ಕೆ ನಿಷ್ಟೆಯನ್ನು ಮಾರಲು ಸಿದ್ದನಿರುವ ಇವರ ಬಗೆಗೆ ನಾವು ಅನುಕಂಪ ಸೂಚಿಸುವುದೂ ತಪ್ಪಾಗುತ್ತದೆ.

Subscribe to:
Posts (Atom)