ಈ ವ್ಯಕ್ತಿ ನಾರಾಯಣ ಮೂರ್ತಿ ಮರಕಿಣಿ ಅಂತ. ಮೋಹನ ಲಾಲ್ ಅಂದುಕೊಂಡಿರೋ ಹೇಗೆ ? ಮೊನ್ನೆ ಜತೆಯಲ್ಲಿ ಗಾಳಿ ಪಟ ಬಿಟ್ಟಿದ್ದೆವು. ಆಮೇಲೆ ಮರದಲ್ಲಿ ಸಿಕ್ಕಿ ಹಾಕಿಕೊಂಡ ಗಾಳಿಪಟ ತೆಗೆಯಲು ಇವರು ಮರಹತ್ತಿದರು. ಹಾಗಾಗಿ ಇವರ ಹೆಸರಿನಲ್ಲೂ ಮರ - ಕಿಣಿ ಎಂದಿರಬಹುದೋ ???
ನಾವು ಬರೇ ಇಂಗ್ಲೀಷಿಗೆ ಈ ಸಂಪರ್ಕ ಸೇತುವೆಯನ್ನು ಸಿಮಿತಗೊಳಿಸುವುದೋ ಅಥವಾ ಕನ್ನಡ ಯಾ ಹವ್ಯಕ ಬಾಷೆಯಲ್ಲಿ ಬರೆಯಲು ಪ್ರಯತ್ನಿಸೋಣವೇ ಎನ್ನುವ ಬಗೆಗೆ ನಿಮ್ಮಗಳ ಅಭಿಪ್ರಾಯ ತಿಳಿಸಿ.
ವಿಚಾರಗಳ ಕನ್ನಡದಲ್ಲೇ ಬರೆದರೆ ಹೆಚ್ಚು ಅಪ್ತವಾಗಿರುತ್ತದೆ ಎಂದು ನನ್ನ ಅಬಿಪ್ರಾಯ. ಆದರೆ ಕೆಲಸ ಹೆಚ್ಚುತ್ತದೆ. ಆಗ ಇಂಗ್ಲೀಷ್ ಸಿಮಿತ ಜ್ನಾನವುಳ್ಳವರೂ ಓದಲು ಮತ್ತು ಪಾಲ್ಗೊಳ್ಳಲು ಸಾದ್ಯವಾಗುತ್ತದೆ. English ಬಳಸಿದರೆ ಕೆಲಸ ಸುಲಭ. ಆದರೆ ವಿಷಯ ಅಷ್ಟೊಂದು ಅಪ್ತವೆನಿಸದೆ ಪರಿಕೀಯ ಬಾಷೆಯೆನಿಸುತ್ತದೆ.
ಹಿಂದೊಮ್ಮೆ ಸೈಕಲ್ ಜತೆಗೆ ಪ್ರಪಂಚ ಸುತ್ತಿದೆ. ಹಕ್ಕಿಯಂತೆ ಹಾರುವ ಆಸೆಯಲ್ಲಿ ಯಡವಟ್ಟಾಗಿ ಬೆನ್ನೆಲುಬು ಡಮಾರ್. ಸದಾ ಬಾದಿಸುವ ನೋವು ಮರೆಯಲು ಹಾಗೂ ಅನಿಸಿಕೆಗಳ ಹಂಚಿಕೊಳ್ಳಲು ಈ ಬರವಣಿಕೆ. ಈಗ ದಕ್ಷಿಣ ಕನ್ನಡದಲ್ಲಿ [ನಿವೃತ್ತ ] ಅಡಿಕೆ ಕೃಷಿಕ. ವಂದನೆಗಳು