Tuesday, November 10, 2009
ಐವರು ಮೊಟರ್ ಸೈಕಲಿನಲ್ಲಿ ಅರುಣಾಚಲ ಪ್ರದೇಶಕ್ಕೆ
ಮೊನ್ನೆ ಅಂತರ್ಜಾಲದಲ್ಲಿ ಅರುಣಾಚಲ ಪ್ರದೇಶದಲ್ಲಿ ಮೋಟರ್ ಸೈಕಲ್ ಪ್ರವಾಸದ ಬಗೆಗೆ ಅಮೇರಿಕದಲ್ಲಿ ವಿಡಿಯೋ ಪ್ರದರ್ಶನ ಎಂದು ಸುಳಿವು ಕಂಡು ಆಶ್ಚರ್ಯ ಸಂತಸ ಎರಡೂ ಆಯಿತು. ಅಪರಿಚಿತ ಊರುಗಳಲ್ಲಿ ದೀರ್ಘ ಪ್ರವಾಸ ಎಂದರೆ ನಾವು ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ. ರಸ್ತೆ ಇಲ್ಲದ ಪ್ರದೇಶದಲ್ಲಿ ಬೆಂಗಾವಲು ವಾಹನ ಇಲ್ಲದ ಕನಿಷ್ಟ ತಯಾರಿಯೊಂದಿಗೆ ಸಂದರ್ಭಕ್ಕೆ ಒಗ್ಗಿಕೊಳ್ಳುವ ಕಥೆ ಊಹನೆಯಲ್ಲಿಯೇ ತುಂಬಾ ಕುಶಿ ಕೊಡುತ್ತದೆ. ನನ್ನ ಪ್ರವಾಸವೂ ಇದೇ ದೋರಣೆಯಲ್ಲಿ ಸಾಗಿತ್ತು.
ಒಮ್ಮೆ ಏಕಾಂಗಿಯಾಗಿ ಲಡಾಕಿಗೆ ಮತ್ತು ಐದು ಜನರ ಪಟಲಾಂ ಕಟ್ಟಿಕೊಂಡು ಅರುಣಾಚಲ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಪ್ರದೇಶಗಳಲ್ಲಿ ಮೊಟರ್ ಸೈಕಲ್ ಪ್ರವಾಸ ಮಾಡಿದ ತುಣುಕುಗಳು ಇಲ್ಲಿವೆ. ಹಿಂದೆ ಪ್ರವಾಸ ಮಾಡಿದವರ ಕಥೆಗಳು ಓದುವಾಗ ನಮಗೆ ಎದುರಾಗಬಹುದಾದ ಸನ್ನಿವೇಶಗಳ ಸುಳಿವು ಕೊಡುತ್ತದೆ. ನಮ್ಮ ಸಮಾಜದಲ್ಲಿ ಬಿನ್ನ ಹಾದಿಯಲ್ಲಿ ನಡೆಯುವ ಚಿಂತನೆಯೇ ಬಹಳ ಕಡಿಮೆ. ಹಲವು ನನ್ನ ಪ್ರಾಯದವರು ಆರಾಮ ಕುರ್ಚಿಯ ಪ್ರವಾಸದಲ್ಲಿಯೇ ತೃಪ್ತರಾಗಿದ್ದರು. ನಾನು ಇಂದಿಗೂ ಇಂತಹ ಕಥೆಗಳ ಇಷ್ಟಪಡುತ್ತೇನೆ.
ನಮ್ಮಲ್ಲಿ ಕಾಶ್ಮೀರಕ್ಕೆ ಮೊಟರ್ ಸೈಕಲಿನಲ್ಲಿ ಹೋಗಿ ಬಂದವರು ಬಹಳ ಜನ ಇದ್ದಾರೆ. ಲಡಾಕಿನಲ್ಲಿ ಪ್ರಪಂಚದ ಅತ್ಯಂತ ಎತ್ತರದ ದಾರಿ ಎನ್ನುವ ಫಲಕದ ಎದುರು ಪೋಟೊ ತೆಗೆದುಕೊಳ್ಳುವುದು ನಮ್ಮವರ ಅತಿ ಮುಖ್ಯ ಗುರಿಯಾಗಿತ್ತು. ಆದರೆ ಈ ವ್ಯಕ್ತಿ ಒಬ್ಬಂಟಿಯಾಗಿ ಹೆಣ ಬಾರದ ಕೆಮರಾ ಹೊತ್ತುಕೊಂಡು ಹೋಗಿ ತಂದ ಚಿತ್ರಗಳು ಅದ್ಬುತವಾಗಿವೆ. ಎಲ್ಲವೂ ಅವರೇ ಆದಾಗ ಶುದ್ದ ಮರಕೋತಿಯಾಟ ನಡೆಯುತ್ತದೆ. ಕೆಮರವನ್ನು ಇಟ್ಟು ಹಿಂದಕ್ಕೆ ಹೋಗಿ ಅದರ ಎದುರು ಸವಾರಿ ಮಾಡಿ ಪುನಹ ಹೋಗಿ ಕೆಮರ ಹಿಡಿದುಕೊಂಡು ಬರಬೇಕು. ಇವರ ಡೇರೆ ಬಿಡಿಸುವುದು ಮಡಚವುದು ನೋಡುವಾಗ ನನಗೆ ನನ್ನ ಪ್ರವಾಸದ ನೆನಪಾಗುತ್ತದೆ. ಇದೊಂದು ಡಿವಿಡಿ ಜಾಹಿರಾತು ಆದರೂ ಕೆಲವು ಚಿತ್ರಗಳು ತುಂಬಾ ಚೆನ್ನಾಗಿವೆ. ಹಲವು ಪ್ರಶಸ್ತಿಗಳನ್ನು ಈ ವಿಡಿಯೋ ಗಿಟ್ಟಿಸಿಕೊಂಡಿದೆ.
Thursday, November 05, 2009
ರಾಮಜ್ಜನ ಉಯಿಲು ಎನ್ನುವ ವಿಡಿಯೋ ಪ್ರಸಂಗ
ದೆಹಲಿ ಉಚ್ಚ ನ್ಯಾಯಾಲಯ ಕಳೆದ ತಿಂಗಳು ವಿಡಿಯೋಕೃತ ಉಳಿಲು ಕಾನೂನುಬದ್ದ ಎಂದು ತೀರ್ಪು ಕೊಟ್ಟಿದೆ. ಅಕ್ಷರಗಳಲ್ಲಿ ಸ್ಫಷ್ಟವಾಗಿ ಬರೆದರೂ ಶ್ರೀಯುತರು ಸತ್ತ ನಂತರ ಸಾವಿರ ಸಂಶಯಗಳು ಮೇಲೇಳುತ್ತವೆ. ಇದು ಇನ್ನೂ ಹೆಚ್ಚು ಸ್ಪಷ್ಟ. ಇದರಿಂದ ನಮ್ಮಲ್ಲಿಗೆ ಹಲವು ತಕರಾರು ಬರುವುದು ತಪ್ಪಬಹುದು ಎಂದು ನ್ಯಾಯಾಲಯ ಅಬಿಪ್ರಾಯ ಪಟ್ಟಿದೆ. ಉಳ್ಳವರಿಗೆ ಇದೊಂದು ಹೊಸ ಅದ್ಬುತವಾದ ಅವಕಾಶ. ಸಹಸ್ರ ಚಂದ್ರ ದರ್ಶನ ಷಷ್ಟಿ ಪೂರ್ತಿ ಕಾರ್ಯಕ್ರಮ ಇತ್ಯಾದಿಗಳಿಗೆ ಹೊಸತಾಗಿ ಸೆರ್ಪಡೆಯಾಗ ಬಹುದಾದ ಆಡಂಬರದ ಕಾರ್ಯಕ್ರಮ ಉಳಿಲು ಓದುವುದು. ಇಂತಹ ಕಾರ್ಯಕ್ರಮಗಳ ಕೊರತೆ ಇದೆ ಎನ್ನುವುದು ಕೆಲವರ ಅಬಿಪ್ರಾಯ.
ಅಜ್ಜಿಯನ್ನು ಪಕ್ಕದಲ್ಲಿ ಕೂರಿಸಿಕೊಂಡ ಅಜ್ಜ ಉಯಿಲು ಓದುವ ಕಾರ್ಯಕ್ರಮಕ್ಕೆ ಮಕ್ಕಳು ಮೊಮ್ಮಕ್ಕಳನ್ನೆಲ್ಲ ಪರ ಊರಿಂದ ಪರದೇಶಗಳೀಂದ ಕರೆಸಬಹುದು. ದುಡ್ಡೇ ದೊಡ್ಡಪ್ಪ ಅನ್ನುವ ಈ ಕಾಲದಲ್ಲಿ ಎಲ್ಲರಿಗೂ ತಮ್ಮ ಪಾಲು ಎಷ್ಟು ಖಚಿತಪಡಿಸಿಕೊಳ್ಳುವ ತವಕ ಇರುವುದು ಸಹಜ. ನನ್ನ ಮಾತು ಮೀರಿ ಅವಳ ಜತೆ ಓಡಿಹೋದ ಮಗನಿಗೆ ಐವತ್ತೆಕ್ರೆ ಎಕ್ರೆ ತೋಟ ಎಂದ ತಕ್ಷಣ ಹಿಮ್ಮೇಳದ ಚೆಂಡೆ ಒಮ್ಮೆ ಚುರುಕಾಗುತ್ತದೆ.
ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ ಕದ್ರಿ ಗೋಪಾಲನಾಥರನ್ನೋ ಕಟೀಲು ಮೇಳವನ್ನೋ ಕರೆಸಬಹುದು. ನಮ್ಮ ಚಿಕ್ಕಪ್ಪನ ಮೃತ್ಯು ಪತ್ರ ತಯಾರಿ ದಿನ ಗುರುಕಿರಣ ಬಂದು ಹಾಡಿದ್ದ ಎಂದು ಹೆಮ್ಮೆಯ ವಿಚಾರ ಆಗಬಹುದು. ಇನ್ನೂ ಶ್ರೀಮಂತರಾದರೆ ಶಾರುಖ್ ಕುಣಿದ ಎಂದು ಹೇಳಿಕೊಳ್ಳಬಹುದು. ಕಾರ್ಯಕ್ರಮವನ್ನೇ ಸಿಂಗಾಪುರದಲ್ಲಿ ಮಾಡುವ ಬಗೆಗೆ ಚಿಂತಿಸಬಹುದು. ವಿಡಿಯೋದವರು ಪತ್ರಿಕೆಗಳಲ್ಲಿ ನಾವು ಅದರಲ್ಲಿ ಹೆಚ್ಚು ಸಮರ್ಥರು ಎಂದು ಈ ಬಗ್ಗೆ ಜಾಹಿರಾತು ಕೊಡಬಹುದು. ಅಡಿಗೆಯವರೂ ಶಾಮಿಯಾನದವರೂ ನಾವು ಈ ಕಾರ್ಯಕ್ರಮ ನಿರ್ವಹಿಸಬಲ್ಲೆವು ಎಂದು ದ್ವನಿ ಸೇರಿಸಬಹುದು.
ಈ ಕಾರ್ಯಕ್ರಮದ ಒಂದು ಉಪಕಾರವೆಂದರೆ ಅವರು ಸತ್ತ ನಂತರ ಉತ್ತರಾದಿಕಾರಿಗಳು ದೊಣ್ಣೆ ಹಿಡಿದುಕೊಂಡು ಕಾದಾಡುವ ಸಾದ್ಯತೆ ಕಡಿಮೆ. ಎಲ್ಲರಿಗೂ ಅವರ ಪಾಲಿನ ಬಗೆಗೆ ಖಚಿತವಿರುತ್ತದೆ. ಅಪ್ಪ ನನ್ನ ಹೆಸರಿನಲ್ಲಿ ಐದು ಕೋಟಿ ಇಟ್ಟಿದ್ದಾನಲ್ಲ ಅದನ್ನು ಕೊಡು ಎಂದು ಪ್ರೀತಿಯ ಮಗಳು ಸಹೋದರರ ಜತೆ ಜಗಳಕ್ಕೆ ನಿಲ್ಲುವ ಅವಕಾಶ ಇರುವುದಿಲ್ಲ. ಹೆರಿಗೆಗೆ ಮೊದಲು ಸ್ಕಾನ್ ಮಾಡಿ ಮಗು ಹೆಣ್ಣೊ ಗಂಡೋ ಎಂದು ಖಚಿತಪಡಿಸಿಕೊಂಡಂತೆ ಈ ಕಾರ್ಯಕ್ರಮ ನೆರವೇರಿದರೆ ಎಲ್ಲರಿಗೂ ಯಜಮಾನರ ಸಾವಿನ ಅನಂತರ ತಮ್ಮ ಪಾಲಿನ ಬಗೆಗೆ ಕುತೂಹಲ ಉಳಿಯುವುದೂ ಇಲ್ಲ.

Sunday, November 01, 2009
ತೂಗು ಸೇತುವೆಗೆ ಅಧಾರ ಕಲ್ಪಿಸಿದ ಗಾಳಿಪಟ
ನಾನು ಬಹಳ ಪ್ರೀತಿಸುವ ಹವ್ಯಾಸಗಳಲ್ಲಿ ಗಾಳಿಪಟ ಬಿಡುವುದು ಒಂದು. ಹಿಂದೆ ಪಣಂಬೂರಿನಲ್ಲಿ ಗಾಳಿಪಟ ಉತ್ಸವ ಆದಾಗ ಗಾಳಿಪಟ ಖರೀದಿಸಿ ತಂದು ವಾರಗಟ್ಟಲೆ ಮಕ್ಕಳ ಸೇರಿಸಿಕೊಂಡು ಬಿಡುತ್ತಾ ಸಂತಸ ಪಟ್ಟಿದ್ದೆವು. ಈಗ ಮದ್ರಾಸಿನಲ್ಲಿ ಗಾಳಿ ಪಟ ಬಿಟ್ಟರೆ ಸಾವಿರ ರೂಪಾಯಿ ದಂಡ ಮೂರು ತಿಂಗಳು ಜೈಲು ಸುದ್ದಿ ಓದುವಾಗ ಮದ್ರಾಸಿನ ಮಕ್ಕಳ ಬಗೆಗೆ ಮರುಕ ಉಂಟಾಗುತ್ತದೆ. ಸಂಪೂರ್ಣ ನಿಷೇದಿಸುವ ಬದಲು ಕಡಲ ತೀರದಲ್ಲಾಗಲಿ ನಿರ್ದಿಷ್ಟ ಆಟದ ಮೈದಾನದಲ್ಲಾಗಲಿ ಬಿಡಬಹುದೆಂದು ಕಾನೂನು ಮಾಡಬಹುದಾಗಿತ್ತು.
ಸಮಸ್ಯೆ ಇರುವುದು ಇನ್ನೊಬ್ಬರ ಗಾಳಿಪಟದ ದಾರ ಕತ್ತರಿಸಲೆಂದು ಗಾಳಿಪಟ ಬಿಡುವ ನೂಲಿಗೆ ಗಾಜಿನ ಪುಡಿ ಲೇಪನ. ಇದರ ವಿರೋದ ಪ್ರಚಾರಾಂದೋಲನ ಕೈಗೊಂಡು ಮಕ್ಕಳ ಮನ ಪರಿವರ್ತನೆ ಮಾಡಬೇಕು ವಿನಾ ಗಾಳಿ ಪಟವನ್ನೇ ಕಾನೂನು ಬಾಹಿರ ಮಾಡುವುದು ಸರಿಯೆನಿಸುವುದಿಲ್ಲ. ಕಡಿದು ಹೋದ ದಾರ ದಾರಿಗೆ ಅಡ್ಡವಾಗಿದ್ದು ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲ ಎನ್ನುವುದನ್ನೂ ಖಚಿತ ಪಡಿಸಿಕೊಳ್ಳಬೇಕು. ನಿಮ್ಮ ಕ್ರಿಯೆಯ trickle down effect ಗೂ ನೀವು ಹೊಣೆ ಎನ್ನುವ ವಿಚಾರ ಮನದಟ್ಟುಮಾಡಬೇಕು. ಇದು ಜೀವನದ ಒಂದು ಮುಖ್ಯ ಪಾಠ.
ನಾನು ಅಪಘಾತದಲ್ಲಿ ಒಳಗಾದ ಹಾರು ರೆಕ್ಕೆಯಾಗಲಿ ಅಥವಾ ವಿಮಾನವಾಗಲಿ ಹೇಗೆ ಹಾರುತ್ತದೆಂದು ವೈಜ್ನಾನಿಕವಾಗಿ ವಿವರಿಸಲು ಗಾಳಿಪಟವೇ ಪ್ರಥಮ ಹಾಗೂ ಸರಳ ಉದಾಹರಣೆ. ಗಾಳಿ ಪಟ ಬಿಡುವುದೆಂದರೆ ಪ್ರತಿ ಕ್ಷಣವೂ ಚುರುಕಾಗಿರಬೇಕಾಗುತ್ತದೆ. ಮಾದರಿ ವಿಮಾನ ಹಾರಿಸುವಂತೆ ಗಾಳಿ ಪಟವೂ ಆ ಕ್ಷಣದಲ್ಲಿ ಹೇಗೆ ಹಾರುತ್ತಿದೆ ಎನ್ನುವುದರ ಗಮನಿಸಿ ನಿಯಂತ್ರಿಸುತ್ತಾ ಇರಬೇಕಾಗುತ್ತದೆ.
ನೂರ ಐವತ್ತು ವರ್ಷ ಹಿಂದೆ ಅಮೇರಿಕ ಕೆನಡ ದೇಶಗಳ ಗಡಿಯಲ್ಲಿರುವ ನೈಗರಾ ಜಲಪಾತದ ಮೇಲೆ ಪ್ರಥಮ ಸೇತುವೆ ಕಟ್ಟುವಾಗ ಮೊದಲು ಹಗ್ಗವನ್ನು ಈ ಕಡೆಯಿಂದ ಆ ಕಡೆಗೆ ಕಟ್ಟುವ ಬಗೆ ಹೇಗೆ ಎನ್ನುವುದರ ಪ್ರಶ್ನೆ ಉಂಟಾಗಿತ್ತಂತೆ. ಎರಡು ದೇಶಗಳ ನಡುವೆಯಿದ್ದ ಎಂಟು ನೂರು ಅಡಿ ಅಗಲದ ಕಣಿವೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಮೊದಲ ಹಗ್ಗ ಎಳೆಯುವುದು ದೊಡ್ಡ ಸವಾಲಾಗಿತ್ತು. ದೋಣಿ ಉಪಯೋಗಿಸುವಂತಿರಲಿಲ್ಲ. ವಿಮಾನ ಎನ್ನುವ ಕಲ್ಪನೆ ಇಲ್ಲದ ಕಾಲ. ಬಿಲ್ಲು ಬಾಣ ಉಪಯೋಗಿಸೋಣ ಎಂದರೆ ಬಾಣ ಎಸೆಯುವುದಕ್ಕಿಂತ ಹೆಚ್ಚು ದೂರವಿತ್ತು. ಅಗ ಸೇತುವೆ ವಿನ್ಯಾಸ ಮಾಡುವ ತಂತ್ರಜ್ನ ಚಾರ್ಲ್ಸ್ ಎಲ್ಲೆಟ್ ಒಂದು ಗಾಳಿ ಪಟ ಹಾರಿಸುವ ಸ್ಪರ್ದೆ ಏರ್ಪಡಿಸಿದರು.
ಪ್ರಪಾತದ ಒಂದು ಬದಿಯಿಂದ ಆಚೆ ಬದಿಗೆ ತಲಪಿ ಕೈಗೆಟಕುವಂತೆ ಪ್ರಥಮ ಬಾರಿ ಗಾಳಿ ಪಟ ಹಾರಿಸಿದವನಿಗೆ ಐದು ಡಾಲರ್ ಬಹುಮಾನ ಘೋಷಿಸಿದರು. ೧೮೪೯ ರಲ್ಲಿ ಈ ಐದು ಡಾಲರ್ ಚಿಕ್ಕ ಮೊತ್ತವಾಗಿರಲಿಲ್ಲ. ಕೆನಡದ ಬದಿಯಿಂದ ಗಾಳಿಪಟ ಹಾರಿಸಿದ ಹೊಮನ್ ನಾಶ್ ಎನ್ನುವ ಅಮೇರಿಕದ ಹತ್ತು ವರ್ಷದ ಹುಡುಗ ಈ ಸ್ಪರ್ದೆಯಲ್ಲಿ ಗೆದ್ದ. ಗಾಳಿ ಬೀಸುವುದು ಕೆನಡದ ಬದಿಯಿಂದ ಎಂಬ ಕಾರಣಕ್ಕೆ ಹೊಳೆಯನ್ನು ದೋಣಿಯಲ್ಲಿ ದಾಟಿ ಪೂರಕವಾಗಿರುವ ಗಾಳಿಗೆ ಕಾದಿದ್ದನಂತೆ. ಆವನು ತಗ್ಗಿನಲ್ಲಿ ಹಾರಿಸಿದ ಗಾಳಿ ಪಟವನ್ನು ಅಮೇರಿಕದ ಬದಿಯಲ್ಲಿ ಹಿಡಿಯಲು ಸಾದ್ಯವಾಯಿತು.
ಅನಂತರ ನಿರ್ಮಿಸಲಾದ ಏಳು ನೂರ ಅರುವತ್ತ ಎರಡು ಅಡಿ ಉದ್ದ ಮತ್ತು ಎಂಟು ಅಡಿ ಅಗಲದ ತೂಗು ಸೇತುವೆ ಸಾದ್ಯವಾದುದು ಹೋಮನ್ ನಾಶ್ ನ ಗಾಳಿಪಟದಿಂದ. ಗೆದ್ದ ಹೋಮನ್ ನಾಶ್ ಎಂಬತ್ತು ವರ್ಷ ಅನಂತರ ಆತನ ಸಾವಿನ ವರೆಗೂ ಈ ಬಗೆಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದನಂತೆ. ಹಾಗೆ ಮೊದಲು ಗಾಳಿ ಪಟದ ಹಗ್ಗದ ಆದಾರದಲ್ಲಿ ಗಟ್ಟಿಯಾದ ಹಗ್ಗ ಎಳೆದರು. ನಂತರ ಹೆಚ್ಚು ತೋರದ ಹಾಗೂ ಬಾರವಾದ ಸರಿಗೆ ಎಳೆಯುತ್ತಾ ಹೋಗಿ ಅನಂತರ ತೂಗು ಸೇತುವೆಯನ್ನು ಆಧರಿಸುವ ಕಬ್ಬಿಣದ ಹಗ್ಗವನ್ನೂ ಎಳೆಯಲಾಯ್ತು.
ಒಂದು ಚಿಕ್ಕ ಹಗ್ಗ ಎಂತಹ ಬೃಹತ್ ಸೇತುವೆಯಾಗಿ ಬದಲಾವಣೆ ಹೊಂದಿತೋ ಹಾಗೆಯೇ ಚಿಕ್ಕ ಚಿಂತನೆ ನಮ್ಮ ಕನಸುಗಳ ನನಸಾಗಿಸುತ್ತದೆ. ಪ್ರತಿ ಸಲ ಯೋಚಿಸಿದಾಗ ಚಿತ್ರ ನಮಗೆ ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಆದರೆ ಹಾರಾಡುವ ಗಾಳಿಪಟಕ್ಕೆ ಸಿಮಿತಗೊಳಿಸುವ ಹಗ್ಗದ ಆದಾರವಿದೆ. ಚಿಂತನೆಯನ್ನು ಸಿಮಿತಗೊಳಿಸುವುದು ನಮ್ಮ ಅಲೋಚನೆ ಸಾಮರ್ಥ್ಯ ಹಾಗೂ ಸಾದಿಸುವ ಹಸಿವು ಮಾತ್ರ.

Tuesday, October 27, 2009
ನ್ಯೂ ಯೋರ್ಕಿನಲ್ಲಿ ಜೇನು ಪೆಟ್ಟಿಗೆ ಇಟ್ಟ ಯಶವಂತ ಡಾಕ್ಟ್ರು
ಗಗನಚುಂಬಿ ಕಟ್ಟಡಗಲೇ ತುಂಬಿರುವ ನ್ಯೂ ಯೋರ್ಕ್ ಪಟ್ಟಣ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ ಚಿತ್ರದಲ್ಲಿ ಜೇನು ಗೂಡಿಗೆ ಅವಕಾಶವೇ ಇಲ್ಲ. ಹೀಗಿರುವಾಗ ಡಾ ಯಶವಂತ್ ಚಿತಾಲ್ಕರ್ ಎಂಬ ಮನಶಾಸ್ತ್ರಿಗಳ ಟೆರೇಸಿನ ಚಿತ್ರ ನನಗೆ ಕಂಡಾಗ ಆಶ್ಚರ್ಯವಾಯಿತು. ಚಿತ್ರದಲ್ಲಿ ಕಾಣುವಂತೆ ಅವರಲ್ಲಿ ಹಲವು ಬಗೆಯ ಗಿಡಗಳು ಮಾತ್ರವಲ್ಲ ಎರಡು ಜೇನು ಗೂಡುಗಳೂ ಇವೆ.
ಇದೀಗ ಜೇನು ನೊಣಗಳು ಮೊಬೈಲ್ ಟವರಿನಿಂದಾಗಿ ಗೂಡಿಗೆ ವಾಪಾಸಾಗದೆ ನಾಶವಾಗುತ್ತಿರುವ ಸುದ್ದಿ ಮದ್ಯೆ ಅಮೇರಿಕದ ಪಟ್ಟಣಗಳಲ್ಲಿ ಜೇನು ಸಾಕುವ ವಿಚಾರ ಕೇಳಿ ಕುಶಿಯಾಯಿತು. ಸಾಲು ಮನೆಯಲ್ಲಿ ವಾಸಿಸುವ ಇವರ ವಸತಿಯ ಮೇಲೆ ತರಕಾರಿ ಹಾಗೂ ಜೇನು ಸಾಕಣೆ ಸ್ಪೂರ್ತಿದಾಯಕ ವಿಚಾರ.
ಪಟ್ಟಣ ಕೃಷಿ ಮುಖ್ಯವಾಗಿ ತರಕಾರಿ ಬೆಳೆಯುವುದು ಕನ್ನಡ ಓದುಗರಿಗೆ ಹೊಸ ವಿಚಾರವಲ್ಲ. ಹಾಸನದಲ್ಲಿ ಡಾ| ವಿಜಯ ಅಂಗಡಿ ಮತ್ತು ಬೆಂಗಳೂರಿನಲ್ಲಿ ಶ್ರೀಮತಿ ಅನುಸೂಯ ಶರ್ಮ ಇದರ ಮಾಡಿ ಪ್ರಚರಿಸುತ್ತಿದ್ದಾರೆ. ಅದರೆ ಜೇನು ಗೂಡು ???
ಸ್ವಲ್ಪ ಸಮಯ ಹಿಂದೆ ಅಲ್ಲೊಂದು ಗೂಡಿನಲ್ಲಿ ಜೇನು ನೊಣಗಳು ಸಾಲಾಗಿ ಗೂಡಿಗೆ ಬರುವುದು ಹೋಗುವುದು ಕಂಡ ಯಶವಂತ್ ಡಾಕ್ಟ್ರು ಅದರ ಸಮ್ಮೋಹನಕ್ಕೆ ಒಳಗಾದರು. ಅವರು ಗೂಡು ಇಟ್ಟುಕೊಳ್ಳುವುದೆಂದರೆ ಹಾರುವ ಕೀಟಗಳು ನನಗೆ ದರ್ಮಾರ್ಥವಾಗಿ ಆಹಾರೋತ್ಪನ್ನ ತರುತ್ತವೆ. ಪಟ್ಟಣದಲ್ಲಿದ್ದುಕೊಂಡೇ ಕೃಷಿಕನಾಗಿರಲು ಸಾದ್ಯ ಎನ್ನುತ್ತಾರೆ. ಕಳೆದ ಚಳಿಗಾಲದಲ್ಲೊಂದು ತರಗತಿಯಲ್ಲಿ ಬಾಗವಹಿಸಿದ ಡಾ ಚಿತಾಲ್ಕರ್ ಈಗ ಎರಡು ಜೇನು ಕುಟುಂಬಗಳ ಒಡೆಯರು.
ಅಲ್ಲಿ ವಾಸವಾಗಿರುವ ಜಿಮ್ ಫಿಸ್ಚರ್ ಕಳೆದ ವರ್ಷ ಜೇನು ಸಾಕಣೆ ತರಗತಿ ಏರ್ಪಡಿಸಿದ್ದರು. ಅನಂತರ ಸುಮಾರು ಮೂವತ್ತು ಗೂಡುಗಳು ಹೆಚ್ಚಲು ಅದು ಪ್ರೇರಕ. ಮೇಷ್ಟ್ರು ಶಿಷ್ಯರೂ ಜತೆಗೂಡಿ ಸಹಕಾರಿ ಸಂಘಕ್ಕೆ ಅಡಿಗಲ್ಲು ಹಾಕಿದ್ದಾರೆ. ಉಪಕರಣಗಳ ಜತೆಯಾಗಿ ಖರೀದಿ ಮತ್ತು ಜೇನು ಮಾರಾಟ ಅವರ ಚಿಂತನೆಯಲ್ಲಿದೆ. ಪಟ್ಟಣಗಳಲ್ಲಿ ಜೇನು ಸಾಕಲು ನೆರೆಹೊರೆಯವರದೇ ಕಿರಿಕಿರಿ. ಯಾರೂ ಜೇನು ಗೂಡುಗಳ ಸಮೀಪ ವಾಸಿಸಲು ಇಷ್ಟಪಡುವುದಿಲ್ಲ. ಜೇನು ನೊಣಗಳ ಬಗೆಗೆ ಮನದಾಳದಲ್ಲಿರುವ ಮೂಢ ನಂಬಿಕೆಗಳೇ ಕಾರಣ ಎನ್ನುತಾರೆ ಫಿಸ್ಚರ್ ಮಾಷ್ಟ್ರು.
ಪಟ್ಟಣದಲ್ಲಿ ಪಾರ್ಕುಗಳ ಗಿಡ ಮರಗಳ ಸನೀಹ ಇದ್ದರೆ ಮಾತ್ರ ಜೇನು ಗೂಡುಗಳು ಪ್ರಯೋಜನಕಾರಿಯಾಗಬಹುದು ಎಂದು ನಿಕ್ ಕಾಲ್ಡರೋನ್ ಎನ್ನುವ ಕೀಟಶಾಸ್ತ್ರಿ ಮೇಷ್ಟ್ರು ಹೇಳುತ್ತಾರೆ. ನಮ್ಮ ಸುತ್ತಲೂ ಪರಿಸರ ಜೀವಂತವಾಗಿರಬೇಕಾದರೆ ಗಿಡಮರಗಳು ಇರಬೇಕು. ಅವುಗಳಿಗೆ ಪರಾಗಸ್ಪರ್ಷ ಮಾದುವ ಜೀವಿಗಳ ಅಗತ್ಯ ಇರುತ್ತದೆ. ಗೂಡುಗಳಿಗೆ ಅಪಾಯವಿದ್ದರೆ ಮಾತ್ರ ಜೇನು ಕೊಣಗಳು ಕಚ್ಚುತ್ತವೆ. ಗೂಡಿನಿಂದ ದೂರವಿರುವಾಗ ಹೆಚ್ಚಾಗಿ ಕಚ್ಚುವುದಿಲ್ಲ ಎನ್ನುತ್ತಾರೆ ಕಾಲ್ಡೆರೋನ್.
ಅಂದ ಹಾಗೆ ಡಾಕ್ಟ್ರು ಜೇನು ಸಾಕುವ ಸುದ್ದಿ ಯಾರಿಗೂ ಹೇಳಬೇಡಿ. ಯಾಕೆಂದರೆ ನ್ಯೂಯೋರ್ಕ್ ಪಟ್ಟಣದಲ್ಲಿ ಜೇನು ಸಾಕಣೆ ಕಾನೂನು ಬಾಹಿರ. ನಿಗದಿತ ದಂಡ ಎರಡು ಸಾವಿರ ಡಾಲರ್ ಅಂದರೆ ಒಂದು ಲಕ್ಷ ರೂಪಾಯಿ. ಇದನ್ನು ನ್ಯಾಯಬದ್ದ ಗೊಳಿಸಲು ಪ್ರಯತ್ನಗಳಾಗುತ್ತಿವೆಯಂತೆ.
ಇತ್ತೀಚಿನ ದಿನಗಳಲ್ಲಿ ಕೀಟ ಬಾದೆ ಹಾಗೂ ನೊಣಗಳು ದಿಕ್ಕು ತಪ್ಪಿ ಗೂಡಿಗೆ ವಾಪಾಸಾಗದ ನಿಗೂಡ ಸಮಸ್ಯೆಯಿಂದಾಗಿ ಇತರ ಕಡೆಗಳಂತೆ ಅಮೇರಿಕದಲ್ಲೂ ಜೇನು ಸಂತತಿ ನಾಶವಾಗುತ್ತಿದೆ. ಜತೆಯಲ್ಲಿ ಬಿನ್ನವಾದ ಕಾರಣಗಳಿಗೆ ಈಗ ಅಲ್ಲಿ ಪಟ್ಟಣದಲ್ಲಿ ಜೇನು ಸಾಕಣೆ ಜನಪ್ರಿಯವಾಗುತ್ತಿದೆಯಂತೆ. ಜೇನು ನೊಣ ವಿರಳವಾದರೆ ಅಹಾರ ಬೆಳೆಗಳಿಗೆ ಪರಾಗ ಸ್ಪರ್ಷ ಹೇಗೆ ಎಂದು ಚಿಂತಿತರಾದವರೂ ಇದ್ದಾರೆ. ಅವರ ಕೈತೋಟದ ಬೆಳೆಗಳು ಅಬಿವೃದ್ದಿ ಹೊಂದಲು ಜೇನು ಸಾಕುವವರಿದ್ದಾರೆ.
ಹತ್ತು ವರ್ಷಗಳಿಂದ ಜೇನು ಸಾಕುವ ನ್ಯೂ ಯೋರ್ಕಿನ ನಾಗರಿಕರೊಬ್ಬರ ಗಿಡಗಳಲ್ಲಿ ಹೂಗಳು ದಾರಾಳವಾಗಿದ್ದರೂ ಕಾಯಿ ಕಚ್ಚುತ್ತಿರಲಿಲ್ಲ. ತೋಟಗಾರಿಕೆ ಇಲಾಖೆಯವರಲ್ಲಿ ವಿಚಾರಿಸಲು ಇಲ್ಲಿ ಪರಾಗಸ್ಪರ್ಶಕ್ಕೆ ಕೀಟಗಳು ಇಲ್ಲ ಎನ್ನುವ ಉತ್ತರ ಬಂತು. ಅದನ್ನು ಕೇಳಿ ಅವರು ಜೇನು ಸಾಕಣೆ ಪ್ರಾರಂಬಿಸಿದರು. ಈಗ ಕುಶಿಯಾಗಿದ್ದಾರೆ.
ಸೈಕಲ್ ಪ್ರವಾಸದ ಸಮಯದಲ್ಲಿ ಅಮೇರಿಕದಲ್ಲಿ ಹೊವಾರ್ಡ್ ಪಾರ್ಕ್ಸ್ ಎನ್ನುವ ಮಿತ್ರರೊಬ್ಬರು ಸುಮಾರು ಇಪ್ಪತ್ತು ಅಡಿ ಉದ್ದ ಇಪ್ಪತ್ತು ಅಡಿ ಅಗಲದಲ್ಲಿ ಸುಮಾರು ಮೂವತ್ತು ಜೇನು ಕುಟುಂಬಗಳ ಸಾಕುತ್ತಿದ್ದರು. ಎಲ್ಲವೂ ಎರಡು ಕುಟುಂಬಗಳಿರುವ ಉಪ್ಪರಿಗೆ ಪೆಟ್ಟಿಗೆಗಳು. ಗೂಡಿನ ಪ್ರವೇಶ ದ್ವಾರದಲ್ಲಿ ಬೇರೆ ಬೇರ್ ಬಣ್ಣದಲ್ಲಿ ವಿವಿಧ + / - ಚಿಹ್ನೆಗಳು. ಜೇನು ನೊಣಗಳು ಅದನ್ನು ಗುರುತಿಸಿ ತಮ್ಮ ವಸತಿಗೆ ಹಿಂತಿರುಗುತ್ತವೆ ಎಂದಾಗ ನನಗೆ ಸೋಜಿಗ ಊಂಟುಮಾಡಿತ್ತು.
ಈಗ ಅಮೇರಿಕದ ಅದ್ಯಕ್ಷ ಒಬಾಮ ಅವರ ಬಿಳಿ ಮನೆ ಹುಲ್ಲು ಹಾಸಿನಲ್ಲೂ ಪ್ರಥಮ ಬಾರಿಗೆ ಜೇನು ಗೂಡಿದೆ. ಈ ಸಲ ಸುಮಾರು ನೂರು ಪೌಂಡ್ ಜೇನು ಸಿಗಬಹುದು. ಅದುದರಿಂದ ಬಿಳಿ ಮನೆ ಉಪಯೋಗಕ್ಕೆ ಮಾತ್ರವಲ್ಲ ಬಂದ ಗಣ್ಯ ಅತಿಥಿಗಳಿಗೆ ಉಡುಗರೆಯಾಗಿ ಕೊಡಲೂ ಸಾಕು ಎನ್ನುತಾರೆ ಅಲ್ಲಿನ ನಿರ್ವಾಹಕರು.
Saturday, October 24, 2009
ಹಿಮಾಲಯದಲ್ಲೊಂದು ಯಶಸ್ವಿ ಮಳೆ ನೀರು ಕೊಯಿಲು.
ಚೆವಾಂಗ್ ನೋರ್ಫೆಲ್ ಅವರು ಕೃತಕ ನೀರ್ಗಲ್ಲನ್ನು ರೂಪಿಸುತ್ತಾರೆ. ಹಲವು ತಿಂಗಳು ಹರಿದು ಹೋಗುವ ನೀರು ಕಾಪಿಡುವ ಇದು ನಮ್ಮ ಮಳೆನೀರಿನ ಕೊಯಿಲಿನ ಇನ್ನೊಂದು ಸ್ವರೂಪ. ಇತ್ತೀಚೆಗೆ ನೈಜ ನಿರ್ಗಲ್ಲುಗಳು ಪರ್ವತದ ಮೇಲ್ಬಾಗಕ್ಕೆ ಹೆಚ್ಚು ಸಿಮಿತವಾಗುತ್ತಿವೆ ಮತ್ತು ತಡವಾಗಿ ನೀರಾಗುತ್ತವೆ. ಕೆಳಬಾಗದಲ್ಲಿದ್ದು ಆರಂಬದಲ್ಲಿ ನೀರಾಗುತ್ತಿದ್ದ ನೀರ್ಗಲ್ಲುಗಳು ಈಗ ರೂಪುಗೊಳ್ಳುವುದೇ ಇಲ್ಲ
ಸರಳವಾದ ಅವರ ಪ್ರಯೋಗ ಸದ್ಯಕ್ಕೆ ಪರ್ಯಾಯಗಳಿಲ್ಲ. ಆದರೆ ಇದಕ್ಕೆ ಸಹಾ ನೀರು ಬೇಕು. ಹಿಮಗಾಲದಲ್ಲಿ ದೊರಕುವ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಲ್ಲಿನಿಂದ ನಿರ್ಮಿಸಲಾದ ದೊಡ್ಡ ಕೆರೆಗಳಲ್ಲಿ ಉಳಿಸಿಕೊಳ್ಳುವುದು. ಇದರ ಆಕಾರ ನಮ್ಮ ಕರಾವಳಿಯಲ್ಲಿ ತೋಡುಗಳಿಗೆ ಅಡ್ಡವಾಗಿ ಕಟ್ಟುವ ಕಟ್ಟದಂತಿರುತ್ತದೆ ಅನಿಸುತ್ತದೆ. ಚಳಿ ಹೆಚ್ಚಾದಂತೆ ಈ ಕೆರೆಗಳಲ್ಲಿರುವ ನೀರು ಹಿಮಗಡ್ಡೆಗಳಾಗುತ್ತವೆ.
ನೋರ್ಫಲ್ ಅವರ ಕೃತಕ ನೀರ್ಗಲ್ಲುಗಳು ಎಪ್ರಿಲ್ ಅಥವಾ ಮೆ ತಿಂಗಳಲ್ಲಿ ನೀರಾಗುತ್ತವೆ ಎನ್ನುತ್ತಾರೆ.
ನಾವು ಜೂನ್ ಇಪ್ಪತ್ತೊಂದರ ನಂತರ ಬಿತ್ತನೆ ಮಾಡಿದರೆ ಬೆಳೆ ಬೆಳೆಯಲು ಸಾದ್ಯವೇ ಇಲ್ಲ ಎನ್ನುವ ಗಾದೆ ಮಾತಿದೆ. ಈ ವರ್ಷ ನೀರಿನ ಆಗಮನ ವಿಳಂಬವಾಗಿ ಜೂನ್ ಇಪ್ಪತ್ತೆಂಟಕ್ಕೆ ಬಿತ್ತನೆ ಮಾಡಿದೆವು ಎನ್ನುತ್ತಾರೆ ಅಲ್ಲಿನ ರೈತರೊಬ್ಬರು.
ಮೊದಲು ಹೊಲದಲ್ಲಿ ತುಂಬಾ ಹಿಮ ಇರುತಿತ್ತು. ಈಗ ಇಲ್ಲವೇ ಇಲ್ಲ ಎನ್ನುತ್ತಾರೆ ಹಳ್ಳಿಯ ಜನ. ಶೇಕಡ ಎಂಬತ್ತರಷ್ಟು ರೈತರು ನೀರ್ಗಲ್ಲು ನೀರಾಗುವುದರನ್ನೇ ಅವಲಂಬಿಸುತ್ತಾರೆ. ಈ ಕೃತಕ ನೀರ್ಗಲ್ಲು ಬೇಗ ನೀರಾಗುವ ಕಾರಣ ರೈತರು ಬೇಗ ಬಿತ್ತನೆ ಮಾಡಬಹುದು. ಈಗ ಎತ್ತರದಲ್ಲಿ ಮಾತ್ರ ಉಳಿದಿರುವ ನೀರ್ಗಲ್ಲುಗಳು ತಡವಾಗಿ ನೀರಾಗುವ ಕಾರಣ ಬಿತ್ತನೆಯನ್ನು ವಿಳಂಬಿಸಬೇಕಾಗುತ್ತದೆ.
ನೋರ್ಫಲ್ ಹತ್ತು ನೀರ್ಗಲ್ಲು ನಿರ್ಮಿಸಿದ್ದಾರೆ. ಅತಿ ದೊಡ್ಡದು ಒಂದು ಮೈಲು ಉದ್ದವಾಗಿತ್ತು. ೨೦೦೬ರಲ್ಲಿ ಬಂದ ಅಪರೂಪದ ಮಳೆ ಈ ಕೃತಕ ತಡೆಯನ್ನು ಕೊಚ್ಚಿಕೊಂಡು ಹೋಯಿತು. ಉತ್ತಮ ಕೃತಕ ನೀರ್ಗಲ್ಲು ನೀರ್ಮಾಣಕ್ಕೆ ಸುಮಾರು ಇಪ್ಪತೈದು ಲಕ್ಷ ರೂಪಾಯಿ ಅಗತ್ಯ. ಆದರೆ ಅವರಿಗೆ ಸರಕಾರದಿಂದ ಐದು ವರ್ಷದಲ್ಲಿ ಹತ್ತು ಲಕ್ಷ ದೊರಕುತ್ತದೆ. ಪತ್ರಕರ್ತರು ಬಂದು ನೋಡಿದ್ದಾರೆ ಹಾಗೂ ಬರೆದಿದ್ದಾರೆ. ಈ ವರೆಗೆ ಯಾವ ವಿಜ್ನಾನಿಯೂ ಈ ಕಡೆ ತಲೆ ಹಾಕಲಿಲ್ಲ. ಅದರ ಬಗೆಗೆ ಅವರಿಗೆ ಗೊಡವೆ ಇಲ್ಲ. ಪಂಡಿತ ಸಭೆಗೆ ಈ ಜ್ನಾನ ತಿಳಿಸುವ ಬದಲು ತಾನು ಹಳ್ಳಿಗರಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆಸಕ್ತ ಎನ್ನುತ್ತಾರೆ ನೋರ್ಫೆಲ್.
ರಾಜದಾನಿ ಲೇಹ್ ನಲ್ಲಿ ಹೆಚ್ಚು ಪ್ರವಾಸಿಗಳು ಬರುವುದೂ ಸಮಸ್ಯೆ ಬಿಗಡಾಯಿಸಲು ಕಾರಣ. ಕಳೆದ ಎಂಟು ವರ್ಷಗಳಲ್ಲಿ ವಾರ್ಷಿಕ ಪ್ರವಾಸಿಗಳ ಸಂಖ್ಯೆ ಹದಿನೆಂಟು ಸಾವಿರದಿಂದ ಎಪ್ಪತ್ತನಾಲ್ಕು ಸಾವಿರಕ್ಕೆ ಏರಿದೆ. ದಿನಾ ಸ್ನಾನ ಶೌಚಾಲಯದಲ್ಲಿ ಫ್ಲಶ್ ಇತ್ಯಾದಿ ನೀರಿನ ಖರ್ಚು ಹೆಚ್ಚಿಸುವ ಅಬ್ಯಾಸಗಳು ಹೆಚ್ಚು ವ್ಯಾಪಕವಾಗುತ್ತಿವೆ. ಈಗ ದಿನಂಪ್ರತಿ ಏಳು ಲಕ್ಷ ಗಾಲನ್ ಪೊರೈಸುವ ಇಂಡಸ್ ನದಿಯಿಂದ ಹದಿನಾರು ಲಕ್ಷ ಗಾಲನ್ ನೀರು ಎತ್ತುವ ಯೋಜನೆ ಕಾರ್ಯಗತವಾಗುವ ಹಂತದಲ್ಲಿದೆ. ಇಂಡಸ್ ನದಿಯಿಂದ ಪಡಕೊಳ್ಳುವ ಪ್ರತಿ ಹನಿ ನೀರು ಪಾಕಿಸ್ತಾನದ ಕೃಷಿಗೆ ಅಷ್ಟರ ಮಟ್ಟಿಗೆ ಕೊರತೆ ಉಂಟು ಮಾಡುತ್ತದೆ. ಅವರಿಗೆ ಕಡಿಮೆಯಾದರೆ ನಮಗೇನು ಎನ್ನುವ ಮಾತು ಕೇಳಿಬರುತ್ತದೆ
ಕಳೆದ ತಿಂಗಳು ಲಡಾಕಿನಲ್ಲಿ ನಡೆದ ಹವಾಮಾನ ಸಮಾವೇಶದಲ್ಲಿ ನೋರ್ಫೆಲ್ ದೃಶ್ಯ ವಿವರಣೆ ಕಾರ್ಯಕ್ರಮ ಕೊಟ್ಟಿದ್ದರು. ಹಮಾಮಾನ ಬದಲಾವಣೆಯಲ್ಲಿ ಲಡಾಖ್ ಮೊದಲು ಸಮಸ್ಯೆ ಅನುಭವಿಸುತ್ತದೆ. ಅದುದರಿಂದ ನಾವು ನ್ಯಾಯ ಬಯಸುತ್ತೇವೆ ಎಂದು ಸರಕಾರೇತರ ಸಂಸ್ಥೆ ನಡೆಸುವ ಪದ್ಮ ತಾಶಿ ಹೇಳುತ್ತಾರೆ. ಹವಾಮಾನ ನ್ಯಾಯ ಎಂದರೆ ಈ ಸಮಸ್ಯೆಗೆ ಮುಖ್ಯ ಕಾರಣವಾದ ಮುಂದುವರಿದ ದೇಶಗಳು ಪರಿಹಾರ ಹಣ ಕೊಟ್ಟರೆ ನೋರ್ಫೆಲ್ ಅವರ ಕಟ್ಟಗಳನ್ನು ಮತ್ತು ೨೦೦೬ ರ ನೆರೆಯಲ್ಲಿ ನಷ್ಟ ಅನುಭವಿಸಿದ ಹಳ್ಳಿಗಳನ್ನು ಪುನರ್ ನೀರ್ಮಾಣ ಮಾಡ ಬಹುದು.
ಪರೀಸ್ಥಿತಿ ಮುಂದುವರಿದರೆ ನಾವು ಮುಂದಿನ ತಲೆಮಾರಿಗೆ ಈ ಭೂಮಿಯನ್ನು ವರ್ಗಾಯಿಸುವುದಿಲ್ಲ. ನೀರು ಇಲ್ಲವೆನ್ನುವ ಸನ್ನಿವೇಶದಲ್ಲಿ ಲಡಾಖಿನ ಜನ ಗಂಟು ಮೂಟೆ ಕಟ್ಟಿ ಹೊರಡಬೇಕಾಗುತ್ತದೆ ಎನ್ನುವ ಚಿಂತನೆ ಅಲ್ಲಿನ ಹಿರಿಯರಲ್ಲಿದೆ.
ಕಾಶ್ಮೀರದಲ್ಲಿರುವ ಸಾವಿರಾರು ಜನರಿಗೆ ನೀರು ಪೊರೈಸುವ ಹಾಗೂ ಬಾರತದ ಅತಿ ದೊಡ್ಡ ನೀರ್ಗಲ್ಲು ಇತರ ಹಿಮಾಲಯದ ನೀರ್ಗಲ್ಲುಗಳಿಂದ ವೇಗವಾಗಿ ಚಿಕ್ಕದಾಗುತ್ತಿರುವುದು ಕಳವಳಕಾರಿ ವಿಚಾರ. ಕಳೆದ ನೂರು ವರ್ಷದಲ್ಲಿ ೧.೧ ಡಿಗ್ರಿ ತಾಪಾಮಾನ ಹೆಚ್ಚಿದೆ. ಕಾಶ್ಮೀರದ ಅತಿ ದೊಡ್ಡದಾದ ಜೇಲಂ ನದಿಗೆ ನೀರು ಪೊರೈಸುವ ಕಲಹೊಯಿ ನೀರ್ಗಲ್ಲು ಕಳೆದ ಮೂವತ್ತು ವರ್ಷಗಳಲ್ಲಿ ೧೧ ಚದರ ಕಿಮಿಗಳಲ್ಲಿ ೨.೬ ಚದರ ಕಿಮಿ ಕುಗ್ಗಿದೆ. ಕಾಶ್ಮೀರದ ಜನ ಈ ನೀರ್ಗಲ್ಲುಗಳನ್ನೇ ನೀರಿಗೆ ಅವಲಂಬಿಸುವ ಕಾರಣ ತಜ್ನರ ಪ್ರಕಾರ ಇದು ಬಹಳ ಗಂಬೀರ ವಿಚಾರ
ಈ ಬಗ್ಗೆ ನಮ್ಮ ಪರಿಸರ ಸಚಿವ ಜೈರಾಮ ರಮೇಶರು ಏನು ಮಾಡುತ್ತಿದ್ದಾರೆ ?? ಅವರು ಹವಾಮಾನ ಬದಲಾವಣೆ ಮತ್ತು ನಿರ್ಗಲ್ಲುಗಳ ಕುಗ್ಗುವುದಕ್ಕೆ ಇರುವ ಸಂಬಂದ ಇನ್ನೂ ಖಚಿತವಾಗಿಲ್ಲ. ಇನ್ನೂ ಹೆಚ್ಚು ಆ ಬಗ್ಗೆ ಸಂಶೋದನೆಗಳು ನಡೆಯಬೇಕು ಎಂದು ಆಗಸ್ತ್ ತಿಂಗಳಲ್ಲಿ ಅಪ್ಪಣೆ ಕೊಡಿಸಿದ್ದಾರೆ.
Subscribe to:
Posts (Atom)