ಇಂದಿನ ಪತ್ರಿಕೆಯಲ್ಲಿ
ನೇತ್ರಾವತಿ ತಿರುವು ಶಂಕುಸ್ಥಾಪನೆ ಸುದ್ದಿ
ಪ್ರಕಟವಾಗಿದೆ. ಈಗ ಈ ಸುದ್ದಿ
ಮೂಲ. ಕನಸ-ವಾಡಿಯಲ್ಲಿ ಮಾತನಾಡಿದ ಮೊಯಿಲಿ ಎಂಬ
ಅಯೋಗ್ಯ ದೆಹಲಿ ಅಸ್ಥಾನದಲ್ಲಿ
ಎರಡು ಪ್ರಮುಖ ಕುರ್ಚಿಗಳಲ್ಲಿ ಕೂರುತ್ತಿದ್ದಾನೆ. ಪರಿಸರ
ಕಾರಣಗಳಿಗೆ ಬಾಕಿಯಿದ್ದ ನೂರಾರು
ಯೋಜನೆಗಳ ಹಸಿರು ನಿಶಾನೆ ತೋರಿಸಿದ. ವರ್ಷಕ್ಕೆ ಒಂಬತ್ತು ಅಡುಗೆ ಅನಿಲ ಜಾಡಿ
ಎಂದು ಹೇಳುತ್ತಾ ದೇಶವಿಡಿ ತಿರುಗುತ್ತಾ
ಇದ್ದವ ಸರಕಾರದಲ್ಲಿ ಏನೂ ಆಗದ ರಾ-ಹುಳ
ಮಹಿಳೆಯರಿಗೆ ಹನ್ನೆರಡು
ಜಾಡಿ ಅಗತ್ಯ ಎಂದಾಕ್ಷಣ ಸರಕಾರ ಅದೇಶ ಮಾರ್ಪಾಡಿಗೆ
ತಯಾರಾದ ರಾಜಕಾರಣಿ.
ನೇತ್ರಾವತಿ
ತಿರುವು ಬಗೆಗೆ ಚರ್ಚೆಯಾಗುತ್ತಿರುವಾಗ ನದಿ
ನಿರ್ವಹಣೆ ಬಗೆಗಿನ ಈ ಲೇಖನದ ವಿಚಾರ
ಪ್ರಸ್ತುತ ಅನ್ನಿಸಿತು. ನಮ್ಮ
ಸಾಂಪ್ರದಾಯಿಕ ಅರಿವುಗಳನ್ನೆಲ್ಲ ಮುಚ್ಚಿಟ್ಟು
ಬರೇ ಅಧಿಕಾರಿಗಳ ರಾಜಕಾರಣಿಗಳ ಅಧಿಕಾರ ದಾಹ ಸ್ವಾರ್ಥಕ್ಕಾಗಿ ಕೈಗೊಳ್ಳುತ್ತಿರುವ ನೇತ್ರಾವತಿ
ಯೋಜನೆ ಮಾರಕ ಎನ್ನುವುದನ್ನು ಇಂಗ್ಲೇಂಡಿನ ಅನುಬವದ
ಈ ಬರಹ ಪರೋಕ್ಷವಾಗಿ
ಅನುಮೋದಿಸುತ್ತದೆ.
ನಮ್ಮ ಪರಮಶಿವಯ್ಯನವರಂತಹ ನೀರಾವರಿ
ಪಂಡಿತರಿಗೆಲ್ಲ ಎಲ್ಲ ಆಂಗ್ಲ
ತಜ್ನರಿಂದಲೇ “ಜ್ಞಾನ ಉದಯಿಸಿರುವುದು “ . :-) ಅನ್ನುವಾಗ
ಅವರು ಅಲ್ಲಿ ಗುರುತಿಸಿರುವ ತಪ್ಪು
ಹಾಗೂ ಪರಿಹಾರ ನಮಗೂ
ಪ್ರಸ್ತುತ. ನಾವು ತಪ್ಪು ಮಾಡುತ್ತಲೆ
ಇದ್ದೇವೆ. ಪಾಠ ಮಾತ್ರ
ಕಲಿಯುತ್ತಿಲ್ಲ. :-( ನಿಜಕ್ಕೂ ನೋಡಿದರೆ
ಹಿತ್ತಲಗಿಡದಲ್ಲಿ ಅಡಗಿರುವ ಮದ್ದು
ನಾವು ಸದಪಯೋಗಗೊಳಿಸ ಬೇಕು ಅಷ್ಟೆ. ಈ
ವಿಚಾರ ಭಾರತ ಚೆನ್ನಾಗಿ
ಪರಿಚಯವಿರುವ ಪೌಲ್ ಕೀನೆ ಎನ್ನುವ
ಅಮೇರಿಕದ ರೈತ / ಉದ್ಯಮಿ ನನಗೆ
ಇಪ್ಪತ್ತೆಂಟು ವರ್ಷ ಹಿಂದೆ
ಮನದಟ್ಟು ಮಾಡಿದ್ದರು.
ಪ್ರತಿವರ್ಷವೂ ಗಂಗಾನದಿ
ತೀರದಲ್ಲಿ ನೆರೆಯಿಂದಾಗಿ ಮುಖ್ಯವಾಗಿ
ಬಿಹಾರ ಉತ್ತರ ಪ್ರದೇಶಗಳಲ್ಲಿ
ಅಪಾರ ಹಾನಿ ಉಂಟಾಗುತ್ತದೆ. ಅದೇ
ರೀತಿ ಇಂಗ್ಲೇಂಡಿನಲ್ಲೂ
ನೆರೆನೀರು ತಡೆಗಟ್ಟಲ್ಪಟ್ಟು ಎಲ್ಲೆಲ್ಲೊ
ಹರಿದು ನಷ್ಟ ಉಂಟಾಗುತ್ತಿದೆ. ಪರಿಹಾರಕ್ಕಾಗಿ ಒಂದಷ್ಟು
ಕಾಂಕ್ರೇಟು ಎರೆಯಲಾಗುತ್ತದೆ. ಹಾಗೆ
ಅಲ್ಲೂ ನಮ್ಮಲ್ಲೂ ನದಿ ದಡಗಳ
ಏರಿಸಿದರು, ರಸ್ತೆ ಸರ್ತ ಮಾಡಿದ
ಹಾಗೆ ನದಿಯನ್ನೂ ಸರ್ತ
ಮಾಡಿ ಉದ್ದ ಕಡಿಮೆ ಮಾಡಲು
ಪ್ರಯತ್ನಿಸಿದರು. ನದಿಯ ಉದ್ದವೇ
ಕಡಿಮೆಯಾದರೆ ನೆರೆ ನೀರು ತರಲೆ
ಮಾಡುವ ಬದಲು ಬೇಗ ಸಮುದ್ರ
ಸೇರುತ್ತದೆ ಎನ್ನುವುದು ಇಂಜೀನಿಯರುಗಳ
ಅದ್ಬುತ ತರ್ಕ. ಪರಿಣಾಮ
ಹರಿವಿನ ಅಗಲವೂ ಕಮ್ಮಿಯಾತು.
ನೀರಿನ ವೇಗ ಹೆಚ್ಚಿತು. ಜನವಸತಿಯಿರುವೆಡೆ ಹಾನಿಯೂ
ಜಾಸ್ತಿಯಾಯಿತು.
ಕೇದಾರನಾಥದಲ್ಲಿ ಸಂಬವಿಸಿದ ಮಳೆಹಾನಿ
ಬಗೆಗೆ ಇಂದಿಗೂ ಕರಾರುವಕ್ಕಾಗಿ ಹೇಳಲು ಸಾದ್ಯವಾಗುತ್ತಿಲ್ಲ. ಮೂರು ಸಾವಿರ
ಮೀಟರಿಗಿಂತ ಎತ್ತರದಲ್ಲಿ ಹಿಮ ಮಾತ್ರ ಪ್ರಮುಖ ಪಾತ್ರ ವಹಿಸುವುದೆಂಬ ನೆಪದಲ್ಲಿ ನಮ್ಮ ಹವಾಮಾನ
ಇಲಾಖೆ ಅಲ್ಲಿ ಮಳೆಮಾಪಕವನ್ನು ಇಟ್ಟಿಲ್ಲ. ನಮ್ಮ ಇಂದಿನ ಅಬಿವೃದ್ದಿಯ ದಿಕ್ಕನ್ನು
ಈ ಕೇದಾರನಾಥ ದೇವಾಲಯದ
ಪೋಟೊ ಹೇಳುತ್ತದೆ. ಈ ರೀತಿ ಕಟ್ಟಡ ಕಟ್ಟಿದರೆ ಮಳೆ ನೀರು
ದಾಟಿ ಹೋಗುವುದಾರರೂ ಎಲ್ಲಿ
???. :-(
ನೆರೆಪರಿಹಾರವೆಂದರೆ ಗುಡ್ಡ
ಪ್ರದೇಶದಲ್ಲಿ ಮರ ನೆಡುವುದು ಹೊರತು
ನದಿಯ ದಡ ಎತ್ತರಿಸುವುದಲ್ಲ. ಕಟ್ಟಡಗಳ
ಗೋಡೆ ಹೆಚ್ಚು ದಪ್ಪ
ಮಾಡುವುದೂ ಅಲ್ಲ. ಕಾಡುಮರಗಳ ಅಡಿಯಲ್ಲಿ ಮಳೆ ನೀರು ಇಂಗುವಿಕೆ ಹುಲ್ಲುಗಾವಲಿಗಿಂತ ಅರುವತ್ತೇಳು
ಪಾಲು ಹೆಚ್ಚು ಎಂದು ಅಲ್ಲಿ
ಗಮನಿಸಲಾಗಿದೆ ಎಂದು ಮೇಲಿನ
ಲೇಖನ ತಿಳಿಸುತ್ತದೆ. ನೇತ್ರಾವತಿಯ
ಹರಿವಿಗೆ ಪಶ್ಚಿಮ ಘಟ್ಟದಲ್ಲಿ ಬೀಳುವ ಮಳೆ ಪೂರಕವೆಂದೂ
ಇದನ್ನು ಅರ್ಥೈಸಬಹುದಾಗಿದೆ.
ನಮ್ಮಲ್ಲಿ
ಮಾತ್ರವಲ್ಲ ಇಂಗ್ಲೇಂಡಿನಲ್ಲೂ ಮೂರ್ಖ
ಅಧಿಕಾರಿಗಳು ಇದ್ದಾರೆ. :-) ಹೊ ! ಆ
ಭೂಮಿಯಲ್ಲಿ ಮರ ಉಂಟಾ? ಹಾಗದರೆ
ಸಬ್ಸಿಡಿ ಇಲ್ಲ ಎಂದು
ಅಲ್ಲಿನ ಕಾನೂನು ನಿರ್ಧಾಕ್ಷಿಣ್ಯವಾಗಿ ಹೇಳುತ್ತದೆ. :-( ಸ್ವಾಭಾವಿಕವಾಗಿ ಅಲ್ಲಿನ ರೈತರು ಗುಡ್ಡಗಳ
ಮೇಲಿನ ಮರ ನೇಡುವ
ಉಳಿಸಿಕೊಳ್ಳುವ ಬದಲು ಸಬ್ಸಿಡಿ ಆಸೆಗಾಗಿ ನುಣ್ಣನೆ
ಬೋಳಿಸುತ್ತಾರೆ.
ಗೆಳೆಯ ಸತ್ಯ
ಪ್ರಕಾಶ ವಾರಣಾಶಿ ಹಿಂದು ಪತ್ರಿಕೆ ಈ
ವಾರದ ಅಂಕಣದಲ್ಲಿ
ಬರೆಯುತ್ತಾರೆ - When the British
ruled India ,
among the many local practices they despised was that of the construction
sector. To them, ideas of our past generations appeared unprofessional, hence
introduced the European systems from their land. No doubt India
benefitted in numerous ways by these new systems, but unfortunately,
time-tested wisdom got lost in this process. Among these casualties, systems of
foundation are notable. ಇದು ಕಟ್ಟಡ
ಕಟ್ಟುವುದರಲ್ಲಿ ಸಿಮಿತವಲ್ಲ.
ಎಲ್ಲ ಬಾರತೀಯ ತಿಳುವಳಿಕೆ ಸಂಪ್ರದಾಯಗಳ
ಬಗೆಗೂ ಬ್ರಿಟೀಶರು ’ನಿರಾಕರಣ ದೋರಣೆ’ ತೋರಿಸಿದರು. ಅಳಿದುಳಿದ ಸಂಪ್ರದಾಯಗಳಿಗೆ ಈಗ ನಮ್ಮ ಇಂಜೀನಿಯರುಗಳು
ಉಸಿರುಗಟ್ಟಿಸುತ್ತಾರೆ.
1 comment:
ನೇತ್ರಾವತಿಯನ್ನು ಕೊಲ್ಲುವುದಕ್ಕೆ ಹೊಂಚುಹಾಕುವ ಶನಿಗಳು ಇವರೇಲ್ಲ ಛೇ!!!
Post a Comment