ಹಾಗೆ ಅನಂತರದ ದಿನಗಳಲ್ಲಿ ನಾನು ಈ ಭೂಪಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಭೂಪಟ ಎಂದರೆ ನನಗೆ ಚಿಕ್ಕಂದಿನಲ್ಲಿಯೇ ಬಹಳ ಅಭಿಮಾನ. ಸೈಕಲ್ ಯಾತ್ರೆ ಸಂಬಂದಿಸಿ ದೆಹಲಿಗೆ ಹೋದಾಗ ನನಗೆ ಪಿಯುಸಿ ಕಲಿಯುವಾಗ ಸಹಪಾಠಿಯಾಗಿದ್ದ ಅಲ್ಲಿ ಕಾಣ ಸಿಕ್ಕ ಹಾಗೂ ಅತಿಥೇಯನಾಗಿದ್ದ ಸತ್ಯಪ್ರಕಾಶ ಆಗಾಗಲೇ ಹಲವು ಭೂಪಟಗಳ ಒಟ್ಟುಹಾಕಿದ್ದ. ಮಡುಚುವುದು ಮೊದಲಿನಂತೆಯೇ ಆಗಬೇಕು. ಇಲ್ಲವಾದರೆ ಬೇಗ ಹರಿದುಹೋಗುತ್ತದೆ ಎನ್ನುವ ಕಿವಿಮಾತು ಹೇಳಿಕೊಟ್ಟಿದ್ದ.
ಅನಂತರದ ಸೈಕಲು ಪ್ರವಾಸದಲ್ಲಿ ಒಂದು ರಾಶಿ ಭೂಪಟಗಳ ನಾನೂ ಕಲೆಹಾಕಿದ್ದೆ. ಇಂದಿಗೂ ಹಲವು ದೇಶಗಳ ಭೂಪಟ ನನ್ನ ಹತ್ತಿರವಿದೆ. ಅವುಗಳ ತಿರುವಿಹಾಕುವಾಗ ಆ ಪ್ರದೇಶಗಳ ವಿಚಾರ ಮನಸ್ಸು ಅವರಿಸಿಕೊಳ್ಳುತ್ತದೆ. ಈ ಮದ್ಯೆ ಅಂತರ್ಜಾಲದಿಂದಾಗಿ ಕಾಗದ ಬೂಪಟಗಳು ತನ್ನ ಮಹತ್ವ ಕಳಕೊಂಡವು. ಗೂಗಲ್ ಅಂತರ್ಜಾಲದಲ್ಲಿ ಇಡೀ ಪ್ರಪಂಚದ ಉಪಗ್ರಹ ಬೂಪಟ ಹಾಕಿದ ನಂತರವಂತೂ ಸಮಸ್ಯೆ ಎಲ್ಲ ಪರಿಹಾರ ಎಂದು ಅಂದುಕೊಂಡೆವು.
ಆದರೆ ಗೂಗಲ್ ಹಲವು ಅನಾಹುತಗಳನ್ನೂ ತಂದಿಟ್ಟಿದೆ. ಹಲವು ಜನ ವಾಹನಗಳ ದಾರಿ ತಪ್ಪಿಸಿಕೊಂಡಿದ್ದಾರೆ, ಚೌಗು ಪ್ರದೇಶದ ಮದ್ಯಬಾಗಕ್ಕೆ, ಪರ್ವತದ ತುದಿಗೆ ತಲಪಿದವರಿದ್ದಾರೆ. ಮಾತ್ರವಲ್ಲ ಗೂಗಲ್ ಬೂಪಟ ಬಳಸಿ ಪರಲೋಕಕ್ಕೆ ಹೋದವರ ಸಂಖ್ಯೆ ನಗಣ್ಯವಲ್ಲ. ಇದು copyright ಗೆ ಒಳಪಟ್ಟಿರುವುದರಿಂದ ನಮಗೆ ಸಿಮಿತ ಉಪಯೋಗ. ಅಮೇರಿಕದ ಗೂಗಲ್ ಕಂಪೇನಿಯ ಅತಿಯಾದ ಅವಲಂಬನೆ ಸಮಾಜದ ಮಟ್ಟಿಗೆ ಅಪಾಯಕಾರಿ ಬೆಳವಣಿಗೆ. ಎದುರಾಳಿಗಳ ನುಂಗುತ್ತಾ ಬಂದ ಈ ಸಂಸ್ಥೆ ಬವಿಷ್ಯದಲ್ಲಿ ಎಲ್ಲ ಮಾಹಿತಿಜಾಲದ ಮೇಲೆ ಬಿಗಿ ಹಿಡಿತ ಸಾಧಿಸುವ ಲಕ್ಷಣಗಳು ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿವೆ.
ಗೂಗಲ್ ಬಳಸಿದ ಉಪಗ್ರಹ ಚಿತ್ರಗಳು ನಿಜಕ್ಕೂ ಚೆನ್ನಾಗಿವೆ. ಆದರೆ ಅದನ್ನು ಉಪಯೋಗಿಸಿ ಗೀಟು ಎಳೆದ ಬೂಪಟಗಳಲ್ಲಿ ಬಹಳ ತಪ್ಪುಗಳನ್ನು ಕಾಣಬಹುದು. ಅದನ್ನು ನಂಬಿ ಕಾರು ಓಡಿಸಿದರೆ ನಮ್ಮೂರಲ್ಲಿಯೇ ತೋಡಿಗೆ ಇಳಿಯಬಹುದು, ಗುಡ್ಡ ಬೆಟ್ಟ ಹತ್ತಬಹುದು ಏಕೆಂದರೆ ಅದರಲ್ಲಿ ರಸ್ತೆ ಎಂದು ಸೂಚಿಸಿದಲ್ಲಿ ರಸ್ತೆಗಳಿಲ್ಲ. ಇದಕ್ಕೆ ಉದಾಹರಣೆ ಮೊನ್ನೆ ನಾನು ಸಾಗಿದ ಮಾಣಿ ಉಪ್ಪಿನಂಗಡಿ ಮದ್ಯೆದ ರಾಷ್ಟ್ರೀಯ ಹೆದ್ದಾರಿಯ ಬಾಗ. http://www.everytrail.com/view_trip.php?trip_id=849082
ಜನರೆಲ್ಲ ಕೈ ಜೋಡಿಸಿ ತಯಾರಿಸುವ ಈ ಹಕ್ಕು ಮುಕ್ತ ಬೂಪಟಗಳು ಖಂಡಿತ ನಮ್ಮ ಸಮಾಜಕ್ಕೆ ಉತ್ತಮ. ನಾವು ತಿದ್ದುಪಡಿ ಮಾಡಬಹುದು ಮಾತ್ರವಲ್ಲ ಇಷ್ಟಬಂದಂತೆ ಬಳಸಿಕೊಳ್ಳಬಹುದು. http://tools.geofabrik.de/mc/?mt0=mapnik&mt1=googlemap&lon=-0.13434&lat=51.51805&zoom=18 ವನ್ನು ಗಮನಿಸಿದರೆ ಊರವರು ಕೈಜೋಡಿಸಿ ತಯಾರಿಸಿದ ನಕ್ಷೆ ಗೂಗಲಿನಿಂದ ಮಿಗಿಲು ಎನ್ನುವ ವಿಚಾರ ಕಾಣಬಹುದು. ಅದುದರಿಂದ ಸಾರ್ವಜನಿಕರೇ ಸೇರಿ ರೂಪಿಸುವ ಈ ಭೂಪಟದ ಬಗೆಗೆ ಹೆಚ್ಚು ಆಸಕ್ತಿ ಉಂಟಾಯಿತು. ಮುಂದಿನ ದಿನಗಳಲ್ಲಿ ನಮಗೆ ಇದನ್ನು ಮೊಬೈಲ್ ಪೋನಿಗೂ ಇಳಿಸಿಕೊಳ್ಳಲು ಸಾದ್ಯ. ಸ್ವಲ್ಪ ಸಮಯ ಹಿಂದೆ ವಿಟ್ಲದ ಬೂಪಟದಲ್ಲಿ ನಾನು ಸೆರ್ಪಡೆಗೊಳಿಸಿದ ಮಾಹಿತಿ ಇಲ್ಲಿ ಕಾಣಬಹುದು. ಇನ್ನೂ ಅಪಾರ ಕೆಲಸ ಬಾಕಿ ಇರುತ್ತದೆ. ಗಂಟೆಗಟ್ಟಲೆ ಒರ್ಕುಟ್ ಮುಂತಾದ ತಾಣಗಳಲ್ಲಿ ಕಳೆಯುವ ಯುವ ಜನ ಇಂತಹ ಕಾರ್ಯದಲ್ಲಿ ಮಗ್ನರಾದರೆ ಭೂಗೋಳಶಾಸ್ತ್ರ, ರಚನಾತ್ಮಕ ಕಂಪ್ಯುಟರ್ ಬಳಕೆ ಮುಂತಾದ ಉಪಯುಕ್ತ ವಿಚಾರ ಅರಿಯಲು ಸಾದ್ಯ.
No comments:
Post a Comment