
ನಮ್ಮಲ್ಲಾದರೆ ಇಂತಹ ಸನ್ನಿವೇಶಗಳಲ್ಲಿ ಹೊಸ ಮಾದರಿ ದುಬಾರಿ ಕಾರುಗಳ ಮೆರವಣಿಕೆಯೇ ಸಾಗುತ್ತದೆ. ಮೆರವಣಿಕೆ ಆಡಂಬವರವೆನಿಸಿದಷ್ಟು ತನ್ನ ಘನತೆ ಹೆಚ್ಚೆನ್ನುವ ಭ್ರಮೆ ಮಂತ್ರಿ ಸಾಹೇಬರಿಗೆ. ಯೆಡ್ಡಪ್ಪನ ಸರ್ಕಾರ ಸದಾ ಅಕಾಶದಲ್ಲಿ ಹಾರಾಡುತ್ತಿದ್ದ ಆತನಿಗಾಗಿ ಇತ್ತೀಚೆಗೆ ನಾಲ್ಕು ಬಹು ದುಬಾರಿ ಕಾರುಗಳನ್ನೂ ಕೊಂಡಿತ್ತು.
ಅಲ್ಲಿ ಇತ್ತೀಚೆಗೆ ಹೊಸ ಸಮ್ಮಿಶ್ರ ಸರಕಾರ ಅಧಿಕಾರ ಸ್ವೀಕಾರ ಮಾಡಿದ ಅನಂತರ ಹೊಸ ಮಂತ್ರಿಗಳೆಲ್ಲ ರಾಣಿಯ ಬೇಟಿಗೆಂದು ತೆರಳಿದರು. ಹೌದಾ ಇದರಲ್ಲೇನು ವಿಶೇಷ ? ೨೩ ಜನರ ಮಂತ್ರಿಮಂಡಲದಲ್ಲಿ ಆರು ಸ್ಥಾನ ಪಡಕೊಂಡ ಕಿರಿಯ ಪಕ್ಷದ ಹೊಸ ಮಂತ್ರಿಗಳು ಅರಮನೆಗೆ ಹೋದದ್ದು ಸೈಕಲು ತುಳಿದುಕೊಂಡು.

ಪ್ರಥಮ ಬಾರಿಗೆ ಮಂತ್ರಿಯಾದ ಮಧು ಸರೀನ್ ಎಂಬ ಬಾರತದಲ್ಲಿ ಜನಿಸಿದವರು ಒಂದು ವಿಶಿಷ್ಟ ಆದರೆ ಅಲ್ಲಿ ಜನಪ್ರಿಯವಾದ ಸರಕು ಸಾಗಾಣಿಕಾ ಸೈಕಲಿನಲ್ಲಿ ತೆರಳಿದ್ದರು. ಚುನಾವಣಾ ಪ್ರಚಾರಕ್ಕೂ ಅವರು ಇದೇ ಸೈಕಲು ಬಳಸಿದ್ದರು. ಅವರ ಸೈಕಲಿನಲ್ಲೊಂದು ಅಣು ವಿದ್ಯುತ್ ಬೇಡ ಕೃತಜ್ನತೆಗಳೆಂಬ ಸ್ಟಿಕ್ಕರ್ ಇತ್ತು. ಪ್ರಪಂಚಕ್ಕೊಂದು ಸುತ್ತು ಸೈಕಲು ಪ್ರವಾಸದಲ್ಲಿ ಇದೇ ಸ್ಟಿಕ್ಕರ್ ನನ್ನ ಸೈಕಲ್ ಡೈನೆಮೊಕ್ಕೆ ಅಂಟಿಸಿದ್ದೆ.
ಮುಮು ಸದಾನಂದ ಗೌಡ್ರು ಅಧಿಕಾರ ಸ್ವೀಕರಿಸಿ ದಕ್ಷಿಣ ಕನ್ನಡಕ್ಕೆ ಬಂದಾಗ ಮಂಗಳೂರಿನಿಂದ ಪುತ್ತೂರಿಗೆ ದಾವಿಸುತ್ತಿದ್ದ ಅವರ ಮೆರವಣಿಕೆಯಲ್ಲಿ ಐವತ್ತಕ್ಕೂ ಹೆಚ್ಚು ಕಾರು ಜೀಪುಗಳಿದ್ದವು ಎಂದು ನೆನಸಿಕೊಳ್ಳುವಾಗ ಹೇಸಿಗೆಯಾಗುತ್ತದೆ. ಹಲವರಲ್ಲಿ ಇದ್ದುದು ಚಾಲಕ ಮಾತ್ರ. ಅವುಗಳಲ್ಲಿ ಬಹುಪಾಲು ಇಂದನ ಖರ್ಚು ಸಮಾಜ ತುಂಬಿಕೊಡುವ ಸರಕಾರಿ ವಾಹನಗಳು. ನನ್ನ ಗ್ರಹಚಾರ ಎಂದರೆ ಅಂದು ನಾನು ಮಂಗಳೂರಿಗೆ ಹೊರಟಿದ್ದೆ.
http://www.copenhagenize.com/2011/10/bicycles-to-visit-queen.html
http://www.copenhagenize.com/2011/09/election-campaigning-by-bicycle.html
http://news.xinhuanet.com/english2010/world/2011-10/03/c_131173286.htm
1 comment:
ಯಾವುದೇ ಉದಾತ್ತ ಕಾರ್ಯಕ್ರಮವನ್ನೂ ಹೇಗೆ ಭ್ರಷ್ಟಗೊಳಿಸುವುದೆನ್ನುವುದರಲ್ಲಿ ಅಪ್ರತಿಮ ಪರಿಣತಮತಿಗಳಾದ ನಮ್ಮ ಪುಡಾರಿಗಳಿಗೆ ಇದು ತಿಳಿದರೆ ದೇಶದ ಆರ್ಥಿಕತೆಗೆ ಇನ್ನಷ್ಟು ಅಪಾಯ ಖಂಡಿತ. ಈಗಾಗಲೇ ಬಡ ಮಕ್ಕಳಿಗೆ ಸೈಕಲ್ ಯೋಜನೆ ನಮ್ಮ ಗುಜರಿ ಸಂಪತ್ತನ್ನು ಏರಿಸಿಟ್ಟಿದೆ. ಇನ್ನು ಕಂತ್ರಿಗಳಿಗೆ ಸೈಕಲ್ ಎಂಬ ಹುಳ ಇವರ ಮಂಡೆಗೆ ಹೊಕ್ಕರೆ ಇನ್ನೇನೆಲ್ಲಾ ಲೂಟಲಿದ್ದಾರೋ ಹೆದರಿಕೆಯಾಗುತ್ತದೆ.
ಶೋಕವರ್ಧನ
Post a Comment