ಇತ್ತೀಚಿನ ದಿನಗಳಲ್ಲಿ ನಾನು ನಿತ್ಯವೂ ವೈಯುಕ್ತಿಕ ಓಡಾಟಗಳಿಗೆಲ್ಲ ಬಳಸುವುದು ನನ್ನ ಮೂರು ಚಕ್ರದ ರಥವನ್ನೇ. ದಿನವೂ ಸರಾಸರಿ ಹದಿನೈದು ಕಿಮಿ ಬಳಸುತ್ತೇನೆ. ನಿನ್ನೆ ಗೆಳೆಯರನ್ನು ಕಾಣಲು ಮಂಗಳೂರಿಗೆ ಹೋಗಿದ್ದೆ. ವಾರದ ಹಿಂದೆ ಬೆಂಗಳೂರಿನಲ್ಲಿ ಕೆಲಸವಿದ್ದಾಗ ರೈಲಿನಲ್ಲಿ ಅದನ್ನೂ ಕೊಂಡು ಹೋಗಿ ಅಲ್ಲಿಯೂ ಬಳಸಿದ್ದೆ. ಈ ಪ್ರವಾಸದ ವರದಿಯನ್ನು ಓದಲು ಇಲ್ಲಿ ಕ್ಲಿಕ್ಕಿಸಿ. ಈ ಬಳಕೆಗಳು ನನಗೆ ಇದು ಹೊಗೆ ಉಗುಳುವ ವಾಹನಗಳಿಗೊಂದು ಪರ್ಯಾಯ ಎಂದು ಖಚಿತವಾಗಿ ಹೇಳುವ ದೈರ್ಯವನ್ನು ಕೊಟ್ಟಿದೆ.
ಕೆಟ್ಟ ರಸ್ತೆಗಳಲ್ಲಿ ಟ್ರೈಕಿನ ಪ್ರಯಾಣಕ್ಕೆ ಮೂರು ಚಕ್ರ ಮತ್ತು ಹೆಚ್ಚು ಅಗಲವಿರುವ ಕಾರಣ ಸೈಕಲುಗಳಿಂದ ಸ್ವಲ್ಪ ಹೆಚ್ಚು ಸಮಯ ಹಾಗೂ ಶ್ರಮ ಬೇಕಾಗುತ್ತದೆ. ನನಗೆ ಏಳು ಕಿಮಿ ದೂರದ ವಿಟ್ಲ ಪ್ರಯಾಣಕ್ಕೆ ಸರಾಸರಿ ಇಪ್ಪೆತ್ತರಡು ನಿಮಿಷ, ಹದಿನಾರು ಕಿಮಿ ದೂರದ ಪುತ್ತೂರು ನಲುವತ್ತೈದು ನಿಮಿಷ ಮತ್ತು ನಲುವತ್ತು ಕಿಮಿ ದೂರದ ಮಂಗಳೂರು ಅಂದಾಜು ಒಂದು ಮುಕ್ಕಾಲು ಗಂಟೆ ಚಾಲನಾ ಸಮಯ ಎನ್ನಬಹುದು.
30 Jan to Mangalore by trike at EveryTrail
ನನ್ನ ಪರಮಾವದಿ (ಹನ್ನೊಂದು ವರ್ಷಗಳಿಂದ ಬಳಸುವ ಒಮ್ನಿ ) ಕಾರಿನ ವಾರ್ಷಿಕ ಉಪಯೋಗ ಸುಮಾರು ಎಂಟು ಸಾವಿರ ಕಿಮಿ. ಇದಕ್ಕಾಗಿ ಇಂದನ, ತೇರಿಗೆ, ದಂಡ ಮತ್ತು ಸವಕಳಿ ಲೆಕ್ಕ ಹಾಕಿದರೆ ಕನಿಷ್ಟವೆಂದರೂ ಸುಮಾರು ನಲುವತ್ತು ಸಾವಿರ ಖರ್ಚು. ಈ ನಲುವತ್ತು ಸಾವಿರ ಎಂದರೆ [ಉತ್ತಮ ಬೆಳೆ ದೊರೆತ ವರ್ಷ] ನನ್ನ ವಾರ್ಷಿಕ ಆದಾಯದ ಮೂರನೇಯ ಒಂದು ಬಾಗ. ಅಂದರೆ ದಿನಕ್ಕೆ ಮೂರು ಘಂಟೆ ಕೆಲಸ ಮಾಡುವುದು ಕಾರಿನ ಖರ್ಚಿಗಾಗಿ ಎಂದಾಯಿತು. ನಾನು ಅಪರೂಪಕ್ಕೆ ೪೦ ಕಿಮಿ ದೂರದ ಮಂಗಳೂರಿಗೆ ಟ್ರೈಕಿನಲ್ಲಿ ಹೋದರೂ ಒಟ್ಟು ಬೇಕಾಗುವುದು ಒಂದೂವರೆ ಘಂಟೆ ಅಧಿಕ ಸಮಯ. ಖರ್ಚು ಬರೇ ನಾಲ್ಕು ರೂಪಾಯಿ ಬೆಲೆಯ ಒಂದು ಯುನಿಟ್ ವಿದ್ಯುತ್. ಮನೆಯಲ್ಲಾದರೆ ಅದೂ ಸೌರ ಫಲಕಗಳಿಂದ ದೊರೆಯುತ್ತದೆ. ಉಳಿದ ದಿನದ ಓಡಾಟದಲ್ಲಿ ಹೆಚ್ಚುವರಿ ಸಮಯದ ಅಗತ್ಯ ಒಂದು ಘಂಟೆಗಿಂತಲೂ ಕಡಿಮೆ.
ಐವತ್ತು ಕಿಲೊ ತೂಕದ ಜನಕ್ಕಾಗಿ ಸಾವಿರ ಕಿಲೊದ ಕಾರು ಓಡುವುದು ನನಗೆ ಸಮಂಜಸ ಎನಿಸುವುದಿಲ್ಲ. ನೂರಾರು ರೂಪಾಯಿ ಇಂದನ ಖರ್ಚು ಮಾಡಿ ವಾತಾವರಣ ಮಲೀನಗೊಳಿಸಿ ಪ್ರಯಾಣಿಸುವ ನಾವು ಉಳಿಸುವ ಸಮಯವನ್ನು ಸಕಾರಾತ್ಮಕವಾಗಿ ಬಳಸುತ್ತೇವೆಯೋ ? ಅನ್ನುವ ಪ್ರಶ್ನೆಗೆ ನಿರಾಶಾದಾಯಕ ಉತ್ತರ ಕೊಡಬೇಕಾಗುತ್ತದೆ. ಹಾಗೆಯೇ ಕಾರು ಬಳಸದಿರುವುದೂ ಪ್ರವಾಹದ ವಿರುದ್ದ ಈಜಿದಂತೆ. ಈಗ ಜನರು ಕನಿಕರ ತೋರುವ ಪರೀಸ್ಥಿತಿ ಉಂಟಾಗುತ್ತಿದೆ.
Monday, January 31, 2011
Subscribe to:
Posts (Atom)