ವಿಯಟ್ನಾಂ ಯುದ್ದದಲ್ಲಿ ಪಾಲ್ಗೊಂಡ ಅವರಿಗೆ ಕ್ರಮೇಣ ಅಮೇರಿಕದ ವಿದೇಶಿ ನೀತಿ ಬಗೆಗೆ ಅಸಹನೆ ಮೂಡಿತು. ಯುದ್ದ ವಿರೋದಿ ಚಟುವಟಿಗಳಲ್ಲಿ ತೊಡಗಿಸಿಕೊಂಡರು. ಹೀಗೆ ಒಂದು ಪೂರ್ವನಿರ್ದಾರಿತ ಯುದ್ದ ಸಾಮುಗ್ರಿ ಕೊಂಡೊಯ್ಯುತ್ತಿದ್ದ ರೈಲು ನಿಲುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಬಂದ ಪಟ್ಟವರಿಗೆಲ್ಲ ತಿಳಿಸಿದ ಈ ಪೂರ್ವ ನಿಯೋಜಿತ ಸತ್ಯಾಗ್ರಹದಲ್ಲಿ ಊಹಿಸಿದಂತೆ ರೈಲು ನಿಲ್ಲುವುದು ಮತ್ತು ಇವರ ಬಂಧನ ನಡೆಯಲಿಲ್ಲ. ರೈಲು ಚಾಲಕರಿಗೆ ಸೀದಾ ಸಾಗಲು ಮೇಲಿನಿಂದ ಆದೇಶ ಬಂದಿತ್ತು. ಪರಿಣಾಮ ಸರಕಾರಿ ಪ್ರೇರಿತ ಕೊಲೆ ಪ್ರಯತ್ನ - ಇವರ ತಲೆಬುರುಡೆ ಜಖಂ ಹಾಗೂ ಕಾಲುಗಳೆರಡೂ ಖತಂ.
ದೈಹಿಕ ಸಮಸ್ಯೆಗಳಿಂದ ಸೋತ ನನಗೆ ತ್ರಿಚಕ್ರ ಬಹಳ ಜೀವನೋತ್ಸಾಹ ಮರಳಿಸಿದಂತೆ ವಿಲ್ಸನರಿಗೂ ಖಿನ್ನತೆಯ ಹೋರಾಡಲು ತ್ರಿಚಕ್ರ ಸಹಾಯ ಮಾಡಿದೆಯಂತೆ. ಈ ವಾಹನ ಕೊಡುವ ಸ್ವಾತಂತ್ರ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಜೀವನಕ್ಕೆ ಬಹಳ ಸಹಾಯಕವಾಗಿದೆಯೆನ್ನುತ್ತಾರೆ ವಿಲ್ಸನ್. ಇವರ T – ಅಂಗಿಯಲ್ಲಿ ಗಾಂದೀಜಿಯವರ ಚಿತ್ರ ಹಾಗೂ ಮಾತುಗಳೂ ನನಗೆ ಕುಶಿಯಾದವು. ಹಾಗೆ ಕಾರು ಹಾಗೂ ಸೈಕಲುಗಳ ಹೋಲಿಸುವ ಈ ಕೆಳಗಿನ ಪಾರವೂ ಇಷ್ಟವಾಯಿತು - ಬಾಷಾಂತರಿಸಿ ಅರ್ಥ ಕೆಡಿಸುವ ಬದಲು ಮೂಲವನ್ನೇ ಇಲ್ಲಿ ಅಂಟಿಸುತ್ತಿರುವೆ.
Cars have artificially enabled us to think we can move fast and go wherever we want instantaneously without any impact on our psyche, on the earth, or on our relationships. I like going 10 mph, that's the speed at which I believe my human genetics are designed for... that's a human scale. A bicycle begins to recover that feeling of a pace that is more human that enables you to be able to reflect and see more around you... To me, it's thrilling almost, to be on my handcycle."
ಇದು ವಿಲ್ಸನರ ಪ್ರಥಮ ದೀರ್ಘ ಪ್ರಯಾಣವಲ್ಲ. ೨೦೦೬ರಲ್ಲಿ ಸುಮಾರು ೯೦೦ ಮೈಲು ಗುಂಪು ಸೈಕಲು ಪ್ರವಾಸವನ್ನು ಮುನ್ನಡೆಸಿದ್ದರು. ಶಾಂತಿ ಮಂತ್ರ ಜಪಿಸುವ ಒಂದು ಕಾರ್ಯಕ್ರಮಕ್ಕೆ ಪೆಟ್ರೋಲ್ ಬಳಸದ ಸರಳ ಜೀವನ ಪ್ರತಿಪಾದಿಸುವ ಒಂದು ಸಂದೇಶವನ್ನೂ ಹೊತ್ತು ಸೈಕಲುಗಳಲ್ಲಿಯೇ ಸಾಗಿದ್ದರು.
http://www.vfp56.org/seattle.html
ಸರಕಾರಿ ರೈಲು ವಿಲ್ಸನ್ ಅವರ ಕಾಲು ಕಿತ್ತುಕೊಂಡ ಪ್ರಕರಣ ಓದುವಾಗ ಯಾಕೋ ಸ್ವಾಮಿ ನಿಗಮಾನಂದರ ನೆನಪಾಗುತ್ತದೆ. ಗಂಗಾ ನದಿ ತಟದಲ್ಲಿರುವ ಜಲ್ಲಿ ಪುಡಿಮಾಡುವ ಕೈಗಾರಿಕೆ ವಿರುದ್ದ ಹಲವಾರು ಬಾರಿ ಸತ್ಯಾಗ್ರಹ ಕೈಗೊಂಡ ಸ್ವಾಮಿ ನಿಗಮಾನಂದರು ಮಾದ್ಯಮದ ದೃಷ್ಟಿಗೆ ಬೀಳದೆ ಆತ್ಮಾರ್ಪಣೆ ಮಾಡಿಕೊಂಡರು. ಪವಿತ್ರ ಗಂಗಾನದಿಯನ್ನು ರಾಜಕೀಯವಾಗಿ ಬಳಸುವ ಅಲ್ಲಿ ಅದಿಕಾರದಲ್ಲಿರುವ ಕೇಸರಿ ಪಕ್ಷ ಅಪರಾದಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅವರು ಕೊನೆಯುಸಿರು ಎಳೆಯುವ ಸಮಯದಲ್ಲಿ ಆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡಕೊಂಡ ರಾಮದೇವ ಸ್ವಾಮಿಗಳಿಗೆ ಸರಕಾರ ಹಾಗೂ ಮಾದ್ಯಮಗಳಿಂದ ರಾಜಮರ್ಯಾದೆ ದೊರಕಿತ್ತು.