ನಿನ್ನೆ ತಿರುಗಾಟದಲ್ಲಿ ಉಪ್ಪಿನಂಗಡಿ ಸಮೀಪ ಮಠದಲ್ಲಿರುವ ಮಸೀದಿ ಕಂಡಾಗ ಹಿಂದಿನ ಕಥೆಯೊಂದು ನೆನಪಾಯಿತು. ಐಶ್ವರ್ಯ ತ್ರಿಲೋಕ ಸುಂದರಿಯೆಂದು ಆಯ್ಕೆಯಾಗುವಾಗ ಕೇಂದ್ರದಲ್ಲಿ ಕಲ್ಪನಾಥ ರೈ ಅನ್ನುವ ಮಂತ್ರಿಯಿದ್ದರು. ರೈ ಒಬ್ಬರು ಗೆದ್ದರೆ ನಾವು ಸುಮ್ಮನಿರುವುದಾದರೂ ಹೇಗೆ ಎಂದು ಬುದ್ದಿವಂತ ಸಹಾಯಕನೊಬ್ಬ ಪ್ರಶ್ನಿಸಿ ಒಂದು ಪ್ರಸ್ತಾಪವನ್ನು ಮುಂದಿಟ್ಟ. ಉತ್ತರ ಪ್ರದೇಶದ ಈ ರೈ ಮಂತ್ರಿಗಳು ರುಜು ಹಾಕಿದರು.
ನಮ್ಮ ಯೆಡಿಯೂರಪ್ಪನವರು ಈ ಮಸೀದಿಯನ್ನೂ ಹಂಚೋಣಕ್ಕೆ ಸೇರಿಸುವರೇ ? ಏಕೆಂದರೆ ಅದು ಮಠದಲ್ಲಿದೆ.
Monday, July 05, 2010
Subscribe to:
Post Comments (Atom)
1 comment:
ಗೋವಿಂದಣ್ಣಾ ಭಲೆ!
ಪ್ರಚಾರ ಅಲೆಯ ಕೊಡಿಗಳಲ್ಲೇ ಇರಲು ಬಯಸುವ ಇದೇ ಪುಡಾರಿಗಳು ಕ್ರಿಕೆಟಿಗನೊಬ್ಬ (ಶ್ರೀಶಾಂತೋ ರಾಬಿನ್ ಉತ್ತಪ್ಪನೋ) ಉತ್ಕರ್ಷದಲ್ಲಿದ್ದಾಗ ಕರ್ನಾಟಕ ಮತ್ತು ಕೇರಳಕ್ಕೆಳೆದುಕೊಂಡು ಸಾರ್ವಜನಿಕ ಮೂಲಭೂತ ಅವಶ್ಯಕತೆಗಳಿಗಿಲ್ಲದ ಹಣವನ್ನು ಲಕ್ಷಗಳ ಲೆಕ್ಕದಲ್ಲಿ ಚೆಲ್ಲಿದ್ದು ಹೇಗೆ ಮರೆಯಲು ಸಾಧ್ಯ?
ಸೇವಕ ಬಂದು ಎತ್ತು ಕರು ಹಾಕಿದೆ ಎಂದರೆ ಕೊಟ್ಟಿಗೇಲಿ ಕಟ್ಟು ಎನ್ನುವ (ಹೆಡ್ಡರಲ್ಲ) ನೀಚ ದೊಡ್ಡವರು, ನಾಳೆ ಹೆಡ್ಡುಬಿದ್ದದ್ದು ಬಯಲಾದರೆ ಮತೀಯ ಸೌಹಾರ್ದಕ್ಕೆ (ಮಠೀಯ ಸೌಹಾರ್ದ?) ಸಾಕ್ಷಿ ಎಂದೇನಾದರೂ ನೆಪ ಹುಡುಕಿ ಮತ್ತೆ ಸಮಜಾಯಿಷಿ ಕೊಡುವುದೂ ನಾನು ಮುಂದಾಗಿಯೇ ಕಾಣಬಲ್ಲೆ!
ಅಶೋಕವರ್ಧನ
Post a Comment