
ಆದರೆ ಕೆನ್ಯಾ ತಲಪುವಾಗ ಪರೀಸ್ಥಿತಿ ಕಠೀಣವಾಗಿರುವುದು ಅರಿವಾಯಿತು. ನನ್ನ ದಾರಿಯಲ್ಲಿದ್ದ ಉಗಂಡಾ ಹಾಗೂ ಸುಡಾನ್ ಅಂತರ್ಯುದ್ದ ಬರ್ಜರಿಯಾಗಿ ನಡೆಯುತ್ತಿದ್ದರೆ ಉತ್ತರದ ಇತಿಯೋಪಿಯ ಸಹಾ ದಾರಿ ಬಿಡುತ್ತಿರಲಿಲ್ಲ. ಹಾಗಾಗಿ ನನ್ನ ಯೋಜನೆಗಳೆಲ್ಲ ತಲೆಕೆಳಗಾಗಿ ಯುರೋಪಿನಿಂದ ಹಿಂತಿರುಗುವ ಬದಲು ಅಮೇರಿಕವನ್ನು ಹಾದು ಜಗತ್ತು ಪೂರ್ತಿ ಸುತ್ತು ಬರಲು ತೀರ್ಮಾನಿಸಿದೆ.
ಸುಡಾನ್ ದೇಶದಲ್ಲಿ ಉತ್ತರದಲ್ಲಿ ಅರಬ್ ಮುಸ್ಲಿಮರ ಪ್ರಾಬಲ್ಯ. ಅದಿಕಾರವೆಲ್ಲ ಅವರ ಕೈಯಲ್ಲಿ ಕೇಂದ್ರಿತ. ದಕ್ಷಿಣದಲ್ಲಿ ವಾಸ್ತವ್ಯ ಇರುವುದು ಕರಿಯ ಕ್ರೈಸ್ತ ಅನುಯಾಯಿಗಳು. ಬ್ರೀಟಿಶರು ಸ್ವಾತಂತ್ರ ಕೊಡುವಾಗ ಈಜಿಪ್ಟ್ ಜತೆ ಒಪ್ಪಂದ ಮಾಡಿ ಒಂದು ಕಿತಾಪತಿ ಮಾಡಿದ್ದರು. ಈ ಕರಿ ಜನರೇ ಜೀವಿಸುವ ದಕ್ಷಿಣ ಸುಡಾನ್ ಪ್ರಾಂತ್ಯವನ್ನು ಪಕ್ಕದ ಕರಿಯ ಜನರಿರುವ ಕೆನ್ಯಾ ಉಗಂಡಾದಿಂದ ಬೇರ್ಪಡಿಸಿ ಬಹು ಕಾಲ ಈಜಿಪ್ಟ್ ವಶವಾಗಿದ್ದ ಉತ್ತರ ಸುಡಾನ್ ಜತೆ ಸೇರಿಸಿಬಿಟ್ಟರು. ಚಿತ್ರದಲ್ಲಿ ಕಾಣುವಂತೆ ಉತ್ತರಬಾಗ ಮರುಭೂಮಿಯಾದರೆ ದಕ್ಷಿಣಬಾಗದಲ್ಲಿ ಹುಲ್ಲುಗಾವಲು ಹಾಗೂ ಕುರುಚಲು ಕಾಡು. ಉತ್ತರದವರಿಂದ ಸತತವಾಗಿ ದಬ್ಬಾಳಿಕೆ, ಅನ್ಯಾಯ. ಶ್ರೀಲಂಕದಲ್ಲಿ ಇದ್ದಂತಹ ಪರೀಸ್ಥಿತಿ.

ಸ್ವಾತಂತ್ರ ಸಿಕ್ಕರೂ ಶಾಂತಿ ನೆಲೆಸುವುದು ??? ನಲುವತ್ತು ಬಿಲಿಯ ಡಾಲರ್ ಸಾಲವನ್ನು ಹೇಗೆ ಪಾಲು ಮಾಡುವುದು – ಈ ಸಾಲ ಕರಿಯರ ದಮನಕ್ಕೆ ವಿಮಾನ ಹಾಗೂ ಮದ್ದುಗುಂಡು ಖರೀದಿಗೆ ಈ ಸಾಲದ ಹಣ ಉಪಯೋಗವಾದದ್ದು ಹೊರತು ಅನ್ನ ಬಟ್ಟೆಗಾಗಿ ಅಲ್ಲ. ಕರಿಯರಿಗಂತೂ ಬಡಿಗೆ ಕೊಟ್ಟು ಬಡಿಸಿಕೊಂಡ ಅನುಭವ. ಅಪಾರ ಜೀವಹಾನಿಯಾಗಿದೆ. ಉದ್ದೇಶಿತ ಗಡಿ ಪ್ರದೇಶದ ನೆಲದಡಿಯಲ್ಲಿ ತೈಲಸಂಪತ್ತಿದೆ. ಸತತ ದಬ್ಬಾಳಿಕೆ ಅನುಭವಿಸಿದ ದಕ್ಷಿಣದಲ್ಲೀಗ ಬೆಡಿ ಹಿಡಿದ ಹಲವಾರು ಬಣಗಳಿವೆ. ಅವುಗಳ ಒಟ್ಟುಗೂಡಿಸುವುದು ಸುಲಭಸಾದ್ಯವಲ್ಲ. ಇವೆಲ್ಲ ಲೆಕ್ಕಾಚಾರ ಗೊಂದಲಾಮಯ. ಅದರೂ ಇನ್ನಾದರೂ ಶಾಂತಿ ನೆಲಸುವುದೋ ?