ಸೌರ ವಿದ್ಯುತ್ ಅಥವ ಪರಿಸರಪೂರಕ
ವಿದ್ಯುತ್ ಉತ್ಪಾದನೆ ಎಲ್ಲ
ಕನಸಿನ ಮಾತು, ಅಸಂಬದ್ದ ಆಲೋಚನೆ
ಅದೆಲ್ಲ ಆಗುವುದಿಲ್ಲ ಹೋಗುವುದಿಲ್ಲ
ಎನ್ನುವ ತರ್ಕ ನಮ್ಮ
ಸಮಾಜದ ಹೆಚ್ಚಿನ ಪಾಲು
ಜನರದ್ದು. ಆದರೆ ಇವೆಲ್ಲ ನಿಜವಾಗಿಸಿದ
ಕಂಪೇನಿ ಜರ್ಮನಿಯಲ್ಲಿದೆ. ಇದರ
ಮುಖ್ಯಸ್ಥೆ ರಾಜದಾನಿಯಲ್ಲಿ ನೆಲೆಸಿಲ್ಲ
, ದುಬಾರಿ ಕಾರಿನಲ್ಲಿ ಓಡಾಡುವುದಿಲ್ಲ , ಎಮ್ ಬಿ ಎ
ಕಲಿತಿಲ್ಲ. ಪ್ರಾಥಮಿಕ
ಶಾಲಾ ಶಿಕ್ಷಕಿ ಅಂದರೆ ಗೊತ್ತಲ್ಲಾ - ಪುಟ್ಟ
ಮಕ್ಕಳಿಗೆ ಅ ಆ ಇ ಈ ….
ಕಲಿಸೋದು ಅವರ
ಶೈಕ್ಷಣಿಕ ಅರ್ಹತೆ. ಮಕ್ಕಳ ಬವಿಷ್ಯದ
ಬಗೆಗಿನ ಕಾಳಜಿ ಐದು ಮಕ್ಕಳ
ಬೆಳೆಸುವುದರಲ್ಲೇ ನಿರತಳಾಗಿದ್ದ ಈ
ಮಹಿಳೆಯನ್ನು ಮನೆಯಿಂದ
ಹೊರಗೆಳೆಯಿತು. :rainbow
ಚೆರ್ನೋಬಿಲ್
ಅಣುವಿದ್ಯುತ್ ಕೇಂದ್ರದಲ್ಲಿ
ಅಪಘಾತವಾಗದಿದ್ದರೆ ಉರ್ಸುಲಾ ಸ್ಲಾಡೆಕ್
ಈಗ ಮೊಮ್ಮಕ್ಕಳ ನೋಡಿಕೊಳ್ಳುತ್ತಾ ಇದ್ದರು.
ಅಪಘಾತವಾದುದು ಎರಡು ಸಾವಿರ ಕಿಮಿ ದೂರವಾದರೂ
ವಿಕಿರಣ ಇವರ ಪರಿಸರದಲ್ಲೆಲ್ಲ
ಹರಡಿ ಬಿದ್ದಿತ್ತು. ನನ್ನ ಮಕ್ಕಳು
ಸೊಪ್ಪುತರಕಾರಿ ತಿನ್ನಬಹುದೋ / ನಮ್ಮ ಹಾಲು ಕುಡಿಯಬಹುದೋ ಇತ್ಯಾದಿ
ಯೋಚನಗೆ ಕೂರುವಂತಾಯಿತು. ಸರಕಾರ
ಹಾಲಿನ ಹುಡಿ ಉಪಯೋಗಕ್ಕೆ
ಸೂಚನೆಕೊಟ್ಟಿತ್ತು. ಮನೆಯಲ್ಲಿ ಐದು ಮಕ್ಕಳಿದ್ದು ಮುಂದೆ ಅವರು ಜೀವಿಸಲಿರುವ ಪ್ರಪಂಚದ ಬಗೆಗೆ ಚಿಂತಿಸದೆ ಇರಲು ಸಾದ್ಯವಾಗಲಿಲ್ಲ. ಮೊದಲು
ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದ ಸ್ಲಾಡೆಕ್,
ವೈದ್ಯರಾದ ಅವಳ ಗಂಡ ಮತ್ತು ಅದೇ ರೀತಿಯಲ್ಲಿ ಚಿಂತಿಸುವ ಜನ ಸೇರಿ ಅಣುವಿದ್ಯುತ್
ವಿರೋದಿಸುವ ಪೋಷಕರ ತಂಡವನ್ನು
ಕಟ್ಟಿದರು.
ಆ ಕಾಲದಲ್ಲಿ ಜರ್ಮನಿಯ
ವಿದ್ಯುತ್ ಬೇಡಿಕೆ ಅಣು ವಿದ್ಯುತ್ ಹಾಗೂ ಕಲ್ಲಿದ್ದಲ್ಲು
ಕೆಂದ್ರಗಳಿಂದ ಪೊರೈಸಲಾಗುತಿತ್ತು. ಪರ್ಯಾಯಗಳನ್ನು ಇವರು ಚಿಂತಿಸಲಾರಂಬಿಸಿದರು. ನೆನಪಿರಲಿ.
ಇವರಿದ್ದುದ್ದು ಪುಟ್ಟ ಹಳ್ಳಿ -
ಒಟ್ಟು ಜನಸಂಖ್ಯೆ ಬರೇ ಎರಡು ಸಾವಿರದ
ಮುನ್ನೂರು. ತಮ್ಮ ಊರಲ್ಲಿ ಹಲವು
ಸಣ್ಣ ಪುಟ್ಟ ಜಲವಿದ್ಯುತ್
ಕೆಂದ್ರಗಳು ನಿಷ್ಕ್ರೀಯವಾಗಿರುವುದರ
ಕಂಡರು. ಊರ ವಿದ್ಯುತ್ ಸರಬರಾಯಿ ಕಂಪೇನಿಗೆ ಅದನ್ನು ಪುನಶ್ಚೇತನದ ಬಗ್ಗೆ ವಿನಂತಿಸಿದರೆ “
ನೀನು ಸುಮ್ನೆ ಕೂತ್ಕೊಳ್ಳಮ್ಮ, ವಿದ್ಯುತ್
ಬಗೆಗೆ ನಿನಗೇನು ಗೊತ್ತು “ ಎಂಬ
ಹೀಯಾಳಿಕೆ ಕೇಳಿದರು. :(
ಆದರೆ ಇವರು ಸುಮ್ಮನೆ ಕೂರಲಿಲ್ಲ. ಇಂದು ಹಿಂತಿರುಗಿ ನೋಡಿದರೆ ಇವರು ನಡೆದು ಬಂದ
ದಾರಿ ಸುಗಮವಾಗಿತ್ತು ಅನ್ನುವಂತಿಲ್ಲ. ಸಾಕಷ್ಟು
ಕಲ್ಲು ಮುಳ್ಳಿನ ಹೊಸ ದಾರಿ. ವಿಘ್ನಗಳ
ಲೆಕ್ಕಿಸದೆ ಮುನ್ನಡೆದರು. ತಮ್ಮ
ತಂಡವ ಮುನ್ನಡೆಸಿದರು. ಎರಡು
ಬಾರಿ ಪ್ರಜಾನಿರ್ಧಾರ ನಡೆಯಿತು.
ಕೊನೆಗೂ ಈ ಗುಂಪಿಗೆ ಜಯವಾಯಿತು.
ಊರ ವಿದ್ಯುತ್ ಕಂಪೇನಿ
ಕರಾರು ಮುಗಿದು ಪುನರ್ನಕರಣ ಸಮಯದಲ್ಲಿ
ತಮ್ಮ ತಂಡದಿಂದ ಕರಾರು
ಪಡಕೊಳ್ಳಲು ಅರ್ಜಿ ಹಾಕಿದರು, ದಕ್ಕಿಸಿಕೊಂಡರು.
ತಮ್ಮ ಊರಲ್ಲಿ ಪರಿಸರಪೂರಕ ವಿದ್ಯುತ್ ಸರಬರಾಜು ಎಂದಾಗ ದೂರದ ಊರಿನವರೂ ಅವರಿಗೆ ಹೇಳಿದರು – ನಮ್ಗೂ ನೀವೇ ವಿದ್ಯುತ್ ಕೊಡಿ. ಜರ್ಮನಿಯ ಕಾನೂನಿನ ಪ್ರಕಾರ ನಾವು ಸರಬರಾಜು ಕಂಪೇನಿ ಆಯ್ದುಕೊಳ್ಳಬಹುದು. ಹಾಗೆ ಅದು ಪುಟ್ಟ ಹಳ್ಳಿಯ ಗಡಿ ದಾಟಿ ದೇಶವ್ಯಾಪ್ತಿ ಉದ್ಯಮವಾಗಿ ಬೆಲೆಯಿತು. ದೂರದೂರಿನ
ಸೌರ ಮತ್ತು ಇನ್ನಿತರ ರಿನ್ಯೂವೆಬಲ್
ಶಕ್ತಿ ತಯಾರಕರೂ ಇವರಿಗೆ
ಮಾರಲು ಒಪ್ಪಿದರು. ಹಾಗೆ
ಇಂದು ಒಂದೂ ಕಾಲು
ಲಕ್ಷಕ್ಕೂ ಮಿಕ್ಕಿ ಇವರ
ಕಂಪೇನಿಯ ಸಂತೃಪ್ತ ಗ್ರಾಹಕರು. :) ಹರಿಯುವ
ನೀರು, ಬೀಸುವ ಗಾಳಿ,
ಮನೆ ಬಿಸಿ ಮಾಡುವ ಇಂಜಿನು
ಹಾಗೂ ಬೆಳಗುವ ಸೂರ್ಯ
- ಇವಷ್ಟೇ ಕಂಪೇನಿ ಶಕ್ತಿ ಮೂಲಗಳು. ಉಳಿದ
ಅಣು ವಿದ್ಯುತ್ ಉಷ್ಣ ವಿದ್ಯುತ್ ಕಂಪೇನಿಗಳ
ಜತೆಯಲ್ಲಿ ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ
ಸ್ಪರ್ಧಿಸುತ್ತಿದ್ದಾರೆ.
ದಯಮಾಡಿ ಈ ಮೇಲಿನ ವಾಕ್ಯಗಳನ್ನು ನಮ್ಮಲ್ಲಿರುವ ತಜ್ಞರು ಓದಬಾರದಾಗಿ ಕೋರಿಕೊಳ್ಳುತ್ತೇನೆ. ಯಾಕೆಂದರೆ ಅವರ ತಲೆ ಹಾಳಾಗುವುದು ಬೇಡ. :@
ದಯಮಾಡಿ ಈ ಮೇಲಿನ ವಾಕ್ಯಗಳನ್ನು ನಮ್ಮಲ್ಲಿರುವ ತಜ್ಞರು ಓದಬಾರದಾಗಿ ಕೋರಿಕೊಳ್ಳುತ್ತೇನೆ. ಯಾಕೆಂದರೆ ಅವರ ತಲೆ ಹಾಳಾಗುವುದು ಬೇಡ. :@
ಮೊದಲು ಚಳಿಗಾಲದಲ್ಲಿ
ಮನೆಬಿಸಿ ಮಾಡಲು ಒಲೆ ಉರಿಸುತ್ತಾ
ಇದ್ದರು. ಈಗ ಪುಟ್ಟ
ಇಂಜಿನು ಬಳಸುತ್ತಾರೆ. ಅದರಲ್ಲಿ ತಯಾರಾದ
ವಿದ್ಯುತ್ ಅನ್ನು ವಿದ್ಯುತ್ ಜಾಲಕ್ಕೆ ಸೇರಿಸಿದರೆ,
ಹೊಗೆಯ ನಿರುಪಯುಕ್ತವೆಂದು ಪರಿಗಣಿಸುವ
ಶಾಖವಿದೆಯಲ್ಲ ಅದು ಮನೆಯನ್ನು ಬಿಸಿ ಮಾಡುತ್ತದೆ.
ಈ ಬಗೆಗೆ ನಾನು ತಿಂಗಳ
ಹಿಂದೆ ಈ ವಿಚಾರ
ಬರೆದಿದ್ದೆ.
ಸಾದ್ಯವಾದಷ್ಟು
ಉಳಿಸಿ
ಅಂದರೆ ಅನಿವಾರ್ಯ ಅನಿಸುವಷ್ಟೇ
ಬಳಸಿ.
ಸ್ಥಳೀಯವಾಗಿ ಉತ್ಪಾದಿಸಿ.
ಉಳಿದುದನ್ನು ಜಾಲಕ್ಕೆ ರವಾನಿಸಿ.
ಎನ್ನುವ ಘೋಷಣೆ ಇವರ
ಕಂಪೇನಿಯದು. ಏಳು ಜನ ಮೊಮ್ಮಕ್ಕಳು ಅಜ್ಜಿಯ
ಸಮಯ ಬೇಡುವುದಾದರೂ ಇವರು ಇನ್ನೂ ಸಾಗಬೇಕಾದ
ಮುಂದಿನ ದಾರಿ ಬಗೆಗೆ
ಉತ್ಸಾಹಕವಾಗಿಯೇ ಇದ್ದಾರೆ. ಮುಂದಿನ ಎರಡು ವರ್ಷದಲ್ಲಿ ಹತ್ತು ಲಕ್ಷ ಗ್ರಾಹಕರ ಗುರಿ ಅಜ್ಜಮ್ಮ ಅವರದ್ದು. ಅವರಿಗೆ ಜೈ ಅನ್ನೋಣ. :tup
ಕಾನೂನು ಮಾಡುವ ಮಟ್ಟಿಗೆ ನಾವು ಹಿಂದುಳಿದಿಲ್ಲ. ನಮ್ಮಲ್ಲೂ ಇದೆ
- ಕಾಂಪ್ಕೊ ವಿದ್ಯುತ್ ಗಿರಿಗಿಟಿ ಇರುವುದು
ಗದಗದಲ್ಲಿ . ಅಲ್ಲಿ ತಯಾರಾಗುವ ವಿದ್ಯುತ್
ಬಳಕೆಯಾಗುವುದು ಪುತ್ತೂರಿನ ಕಾರ್ಖಾನೆಯಲ್ಲಿ. ಇದಕ್ಕೆ
ಸಾಗಾಣಿಕೆ ವೆಚ್ಚ ಮೆಸ್ಕೋಂ
ಪಡಕೊಳ್ಳುತ್ತದೆ. ಆದರೆ ಇದು ಜನಸಾಮನ್ಯರಿಗೆ ತಲಪುವ ಮಟ್ಟದಲ್ಲಿಲ್ಲ. ದೊಡ್ಡ ಕಂಪೇನಿಗಳಿಂದ ನಮ್ಮನ್ನು ಆಳುವವರಿಗೆ ಚೆಕ್ ಈಸ್ಕೊಳ್ಳೋದು ಸುಲಭ. ಬೇಕಾದರೆ ಯೆಡ್ಡಿನ ಕೇಳಿ. :) ಸಾಮಾನ್ಯ ಜನರಿಗೆ ಬಾಯಿಉಪಚಾರ ಸಾಕು.
ಅಲ್ಲಿ ಎಲ್ಲ ವಿದ್ಯುತ್ ಬಳಕೆದಾರರು
ಕೊಡುವ ಒಂದು ಅಧಿಕ
ತೇರಿಗೆಯನ್ನು ಈ ಪರಿಸರ ಸ್ನೇಹಿ ಉತ್ಪಾದಕರಿಗೆ ಹಂಚಲಾಗುತ್ತದೆ. ಈ ಲೆಕ್ಕಾಚಾರ ಪಾರದರ್ಶಕವಾಗಿದ್ದು ರಾಜಕಾರಣಿಗಳು
ಮೂಗು ತೂರಿಸುವಂತಿಲ್ಲ, ಕುತಂತ್ರ
ನಡೆಸುವಂತಿಲ್ಲ. ಅವರಿಗೆ ಸಾದ್ಯವಾಗೋದು
ನಮಗೇಕೆ ಅಸಾದ್ಯ ? ಯಾಕೆಂದರೆ, ಮುಜುಗರ ಆಗುತ್ತದೆ ಹೇಳಲು - ಲಗಾಡಿ ತೆಗೆಯಲು
ಅವರ ಮದ್ಯೆ ಎಲ್ಲವನ್ನೂ ಮುಕ್ಕುವ. :@ ಅಲ್ಲಲ್ಲ - ಸಮಾಜಕ್ಕೆ ಅನುಗ್ರಹಿಸುವ ಜನಪರ ಹೋರಾಟಗಾರ ಯೆಡ್ಡಿ ಕರಂಟ್ ಲಾಜೆ ಜೋಡಿ ಇಲ್ಲ. ;)
ವಿಡಿಯೊ ಬಲಬಾಗ ಮುಚ್ಚಿರುವ ಕಾರಣ ಮೇಲಿನ ವಿಡಿಯೊ ಯುಟ್ಯೂಬ್ ನಲ್ಲಿಯೇ ನೋಡಲು ಕೊಂಡಿ
ವಿಡಿಯೊ ಬಲಬಾಗ ಮುಚ್ಚಿರುವ ಕಾರಣ ಮೇಲಿನ ವಿಡಿಯೊ ಯುಟ್ಯೂಬ್ ನಲ್ಲಿಯೇ ನೋಡಲು ಕೊಂಡಿ
4 comments:
ಹಿಂದೊಂದು ಕಾಲದಲ್ಲಿ ಕಾಡಿನ ಬದಿಯಲ್ಲಿ ದನ ಮೇಯಿಸಿ ಹಾಲು ಹೈನು ಬಳಸಿ ಸಾವಯವ ಗೊಬ್ಬರವನ್ನೇ ಬಳಸಿ ಸಾಗುವಳಿ ಮಾಡುತ್ತಿದ್ದೆವು.
ಬಂತು ಪಂಪ್ ಸೆಟ್ : ನೀರಿನ ಬೆಲೆ ಅರಿಯದೇ ಬಳಸಿ ಕರೆಂಟ್ ನೀರು ಪೋಲು ಮಾಡಿದೆವು.
ನೀರಿಗೆ ಬೋರು ಕೊರೆದೆವು. ಅಲ್ಲೂ ನೀರು ಇಲ್ಲ ಆಯಿತು.
ಈಗ ಕಾಡಿಲ್ಲ .....ಕಟ್ಟಿಗೆ ಇಲ್ಲ. ಹಳ್ಳಿಯಲ್ಲೂ ಅನಿಲದ ಅಡುಗೆ.
ಭೂಮಿ ಅಕ್ಷಪಾತ್ರೆ ಅಲ್ಲ ಅಂತ ಅನುಭವಕ್ಕೆ ಬರುತ್ತಾ ಇದೆ.
ಕಲ್ಲಿದ್ದಲು, ಪೆಟ್ರೋಲ್ ಮುಗಿಯುವ ತನಕ ಸುಮ್ಮನೆ ಇರುತ್ತೇವೆ.
ಅವು ಮುಗಿದಾಗ ಅಣುಶಕ್ತಿಗೆ ಲಗ್ಗೆ. ಅದರ ರೆಸಿಡ್ಯೂ ಹಾಲಾಹಲ ಎಲ್ಲಿಗೆ ಕಳುಹಿಸೋಣ?
ಪರಿಸರ ಉಳಿಸಲು ಮತ್ತು ಸಕಲ ಪರಿಹಾರಕಂಡುಕೊಳ್ಳಲು ನಮಗೆ ಇಂದು ಸೌರಶಕ್ತಿಯೇ ವರದಾನ.
ಪ್ರತೀ ಛಾವಣಿಯೂ ಸೌರ ಪಲಕ ಆಗಲಿ. ಬೀಳು ಜಾಗದಲ್ಲೂ ಸೂರ್ಯ ಫಲಕಗಳ ಶಕ್ತಿಕೊಯಿಲಿನ ಹೊಲಗಳು ಏಳಲಿ.
ನಾವು ಈಗ ಕಣ್ಣುತೆರೆಯದೇ ಇದ್ದರೆ ನಾಳೆ ಕತ್ತಲೆಯಲ್ಲೇ ಉಳಿಯುವೆವು.
ನಾವು ಈ ಕಿನ್ನರಿಯನ್ನು ಯಾರಮುಂದೆ ಬಾರಿಸೋಣ?
ದಯವಿಟ್ಟು ಹೇಳಿ
ಕೇಸರಿ
ಸರಕಾರಿ ಪದ್ದತಿ ಅಂದರೆ ಹಾಗೆಯೇ.ಇದ್ದದ್ದನ್ನು ಹಾಗೆಯೇ ನಡೆಸಿಕೊಂಡು ಹೋಗುವುದು.ಸಾಧ್ಯವಾದರೆ ಅದರಲ್ಲಿ ತಮಗೊಂದಿಷ್ಟು ಲಾಭ ಮಾಡಿಕೊಳ್ಳುವುದು.ಬದಲಾವಣೆಯನ್ನು ಯಾರೂ ಸಹಿಸರು.ಹೊಸ ಆಲೋಚನೆಗಳು ಇಲ್ಲವೇ ಇಲ್ಲ.ಬದಲಾವಣೆ ಜನರಿಂದ ಮಾತ್ರ ಸಾಧ್ಯ.ಆದರೆ ಮೊದಲು ಜನರ ಆಲೋಚನೆ ಬದಲಾಗಬೇಕಲ್ಲ.ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ ಇದು.
ಸೋಮಾರಿತನದ ಪ್ರಶಸ್ತಿ ಯಾರಿಗೆ ಬೇಕೆಂದಾಗ ಕೈ ಎತ್ತಲೂ ಸೋಮಾರಿತನ ಬಿಡದವನಿಗೆ ಪ್ರಶಸ್ತಿ ಕೊಟ್ಟರಂತೆ. ಪರ್ಯಾಯ ಇಂಧನ, ಶಕ್ತಿಮೂಲಗಳ ಬಗ್ಗೆ ನಮ್ಮಲ್ಲೆ ತೊಡಗಿಕೊಂಡ ಸಾಕಷ್ಟು ವಿಚಾರಪರರು, ಉದ್ಯಮಿಗಳು ಇದ್ದರೂ ‘ಸೋಮಾರಿ’ ಸ್ಥಿತಿಯಲ್ಲಿರುವ ನಮ್ಮ ‘ಪ್ರಜಾಪ್ರಭು’ಗಳನ್ನು ಸಂಘಟಿಸುವಲ್ಲಿ ಸೋತಿದ್ದಾರೆ. ಜರ್ಮನ್ ಅಜ್ಜಿಗೆ ಜೈ ಎನ್ದನುವುದರೊಡನೆ ನಮ್ಮ ಜಾಗೃತಿಗೆ ಹೆಚ್ಚಿನ ಪ್ರೇರಣೆಯನ್ನು ಕಂಡುಕೊಳ್ಳೋಣ.
ಅಶೋಕವರ್ಧನ
ನಮ್ಮ ಘನ ಸರ್ಕಾರ ನಡೆಸುವ ಸೇವಾ ದುರಂಧರರು ಇದನ್ನು ಒಮ್ಮೆ ಓದುವುದು ಒಳ್ಳೇಯದು..
ಪ್ರಗತಿ, ಅಭಿವೃದ್ಧಿ ಅನ್ನುವ ಶಬ್ದಗಳ ಕಲ್ಪನೆಯಾದರೂ ಒಂದಷ್ಟು ಆದೀತು.:)
Post a Comment