Sunday, March 13, 2011

ದುರ್ದಿನ ಕರೆ ಕೊಟ್ಟ ಡಾ ದೇವಿ ಶೆಟ್ರು

ಕಳೆದ  ವಾರ  ಬೆಂಗಳೂರಿನ ಆಸ್ಪತ್ರೆಯೊಂದರ  ಯಜಮಾನ   ಡಾ ದೇವಿ   ಶೆಟ್ಟಿ ಅವರು ಬಹಿರಂಗ ಪತ್ರ ಬರೆದರು.   ಆತ್ಮೀಯ  ಸಹಪಾಠಿ  ಗೆಳೆಯ ವೆಂಕಟೇಶ್  ಅವರು ಈ ಪತ್ರದ ಪ್ರತಿಯನ್ನು ನನಗೆ ರವಾನಿಸಿದರು.   ಪತ್ರದಲ್ಲಿ  ಹೃದಯವಂತ  ವೈದ್ಯರು    ಸರಕಾರಿ ತೇರಿಗೆ ಹೆಚ್ಚು ಮಾಡಿದರೆ   ತಮ್ಮಲ್ಲಿ ಬಂದ  ರೋಗಿಗಳಿಂದ  ಹೆಚ್ಚು ಹಣ   ಪಡಕೊಳ್ಳಬೇಕಾಗುತ್ತದೆ  ಎಂದು ಅಲವತ್ತು ಪಟ್ಟುಕೊಂಡರು.  ಹಾಗೆ  ಮಾರ್ಚು ೧೨ ರಂದು ರಾಜ್ ಭವನ್  ಚಲೋ  ಕರೆ ಕೊಟ್ಟರು.   ಆ  ದಿನವನ್ನು    ದುರವಸ್ಥೆ ದಿನ /ಬೇಗುದಿ ದಿನವೆಂದು  ಆಚರಿಸಲು  ಹೇಳಿದರು.      ರೋಗಿಗಳ ಬಗೆಗಿನ ಕಾಳಜಿ ಕಂಡು  ನನಗೆ ಕುಶಿಯಾಯಿತು  ಮತ್ತು ಮುನ್ನೂರ  ಐವತ್ತು ಕಿಮಿ ದೂರವಲ್ಲವಾದರೆ  ಖಂಡಿತ ಪಾಲ್ಗೊಳ್ಳುವ   ಅವರ  ಕೈ  ಬಲ ಪಡಿಸುವ   ಹುಮ್ಮಸ್ಸು  ಬಂತು.   ಡಾ. ಶೆಟ್ರು   ಪತ್ರಿಕೆಗಳಿಗೂ  ಈ ಪತ್ರ ರವಾನಿಸಿ  ಓದುಗರ  ಪತ್ರಗಳು  ಅಂಕಣದಲ್ಲಿ   ಪ್ರಕಟವಾಗುವಂತೆ ನೋಡಿಕೊಂಡರು.    ಆಮೇಲೆ  ?


 ಮರುದಿನ   ಅವರು ದೆಹಲಿಯಲ್ಲಿ    ವಿತ್ತ ಮಂತ್ರಿ ಪ್ರಣಬ್ ಮುಖರ್ಜಿಯನ್ನು ಬೇಟಿಯಾದದ್ದು   ಪತ್ರಿಕೆಗಳು  ಸುದ್ದಿಮಾಡಿವೆ.  ಆದರೆ   ಮಾತುಕತೆಯ  ಪರಿಣಾಮ ಮಾತ್ರ  ಹೊರಹಾಕಿಲ್ಲ.  ಇಂದು ಪತ್ರಿಕೆಗಳಲ್ಲಿ  ನಿನ್ನೆ ನಡೆದಿರಬಹುದಾದ   ಈ ರಾಜ್ ಭವನ್  ಚಲೋ ಕಾರ್ಯಕ್ರಮ  ಏನಾಯಿತು  ಎಂದು ಹುಡುಕಲು  ಏನೂ  ಸುಳಿವು ದೊರಕುತ್ತಿಲ್ಲ.  ಆಸ್ಪತ್ರೆ ಜಾಲತಾಣದ  ಮೊದಲ ಪುಟದಲ್ಲಿದ್ದ    ಅವರ   ಬಹಿರಂಗ ಪತ್ರವೂ    ಈಗ ನಾಪತ್ತೆ.    ಅಂತೂ  ಪ್ರತಿಭಟನೆ  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು   ಹೊರಡದೆ ಇದ್ದುದು  ಒಳ್ಳೆದಾಯಿತು ಅನ್ನಿಸಿತು. 

ನಮಗೀಗ  ಮಾದ್ಯಮಗಳ ಹಾಗೂ  ಅಂತರ್ಜಾಲದ ಮೂಲಕ  ವರುಷದಲ್ಲಿ ನೂರಾರು    ಆಚರಣೆ ಪ್ರತಿಭಟನೆ  ಕರೆಗಳು  ಬರುತ್ತವೆ.  ಅಪ್ಪನ  ದಿನ, ಅಮ್ಮನ ದಿನ,. ಕೆಲಸಗಾರರ ದಿನ,  ದೇವರ  ಜನ್ಮ  ದಿನ, ಸ್ವಾತಂತ್ರ ದಿನ,  ದೀಪವಾರಿಸುವ ದಿನ, ಏನೂ  ಖರೀದಿಸದಿರುವುದು, ಪರಸ್ಪರ ಅಪ್ಪಿಕೊಳ್ಳುವುದು ........ ಇತ್ಯಾದಿ  ಇತ್ಯಾದಿ.  ಮೊನ್ನೆ  ಫೆಬ್ರವರಿ  ೧೪ ರಂದು  ಪೆಟ್ರೋಲ್ ಖರೀದಿ  ಮಾಡದಿರುವ ಕರೆ ಇತ್ತು.   ಇಂತಹ  ಆಚರಣೆಗಳಿಂದ     ಯಾವ  ಪ್ರಯೋಜನವೂ  ಇಲ್ಲ.  ಎಲ್ಲರೂ  ಹಿಂದಿನ ದಿನವೇ  ಬೇಕಾದಷ್ಟು  ದಾಸ್ತಾನು ಮಾಡಿಕೊಂಡಿರಬಹುದು.   ಅಂದು ಖಾಸಗಿ ವಾಹನ  ಉಪಯೋಗಿಸುವುದಿಲ್ಲ ಎಂದಿದ್ದರೂ  ಅರ್ಥವಿರುತಿತ್ತು.  ಅಂದ ಹಾಗೆ   ಬರುವ ತಿಂಗಳು ಎಪ್ರಿಲ್ ೨೨  ಭೂಮಿ ದಿನವಾಗಿ  ಆಚರಿಸಲಾಗುತ್ತದೆ.    ಅದಕ್ಕೀಗ  ದೇವಿ ಶೆಟ್ರ   ದುರ್ದಿನವೂ  ಸೆರ್ಪಡೆಯಾಗಿ ಕ್ರಮೇಣ  ಇನ್ಯಾವುದೋ   ಕಾರಣಕ್ಕೆ   ಮುಂದೆ  ಜನಪ್ರಿಯವಾಗಬಹುದು.  


ಕೆಲವು ಕರೆಗಳು ಮಜವಾಗಿಯೂ  ಇರುತ್ತದೆ.  ಅಂತಹದರಲ್ಲೊಂದು ಪಾಂಟ್ ದರಿಸದಿರುವ ಕರೆ. ಪ್ರಪಂಚದ ವಿವಿದ ಕಡೆಗಳಲ್ಲಿ ಸಾರ್ವಜನಿಕ  ಸ್ಥಳಗಳಲ್ಲಿ ಮತ್ತು   ಮೆಟ್ರೊ ರೈಲುಗಳಲ್ಲಿ  ಪಾಂಟ್ ದರಿಸದಿರುವ  ದಿನ   ಬೇರೆ ಬೇರೆಯಾಗಿಯೇ ಆಚರಿಸಲಾಗುತ್ತದೆ. ಉಳಿದೆಡೆ ಮೆ ತಿಂಗಳ ಮೊದಲ ಶುಕ್ರವಾರ ಪಾಂಟ್ ಹಾಕದಿರುವ ದಿನವಾದರೆ   ರೈಲುಗಳಲ್ಲಿ ಜನವರಿ  ೧೧  ರಂದು  ಆಚರಿಸಲಾಗುತ್ತದೆ.




ಮಾರ್ಚು ೧೨ ರಂದು  ದುರ್ದಿನ  ಆಚರಣೆ  ಬಗೆಗೆ   ಕರೆ ಕೊಟ್ಟ  ಡಾ|  ಶೆಟ್ರು  ಆಮೇಲೆ ಮರೆತು ಬಿಟ್ಟರೋ ಅನ್ನುವ    ಕಾರಣ  ಇದೆಲ್ಲ  ಬರೆಯೋಣ ಅನ್ನಿಸಿತು. 

2 comments:

Nanda Kishor B said...

higu ideye??? hehehe...

Dr.K.G.Bhat,M.B:B.S said...

ದೇವಿ ಶೆಟ್ರ ಕಾಳಜಿಯಿಂದಾಗಿ ಆ ತೆರಿಗೆಯನ್ನ ವಾಪಾಸ್ ತೆಗುಕೊಂಡಿದ್ದಾರೆ ನಮ್ಮ ವಿತ್ತ(ಪಿತ್ತ)ಮಂತ್ರಿಯವರು.ನಿಜವಾಗಿ ಅವರ ಕಾಳಜಿ ಮೆಚ್ಚಬೇಕಾದ್ದೇ.ಇಂದು ಹವಾನಿಯಂತ್ರಿತ ಕೊಠಡಿ ಇಲ್ಲದ ಆಸ್ಪತ್ರೆ ಇಲ್ಲ.ಅಂತಹುದ್ದರಲ್ಲಿ ಈ ತೆರಿಗೆಯಿಂದಾಗಿ ರೋಗಿಗಳಿಗೆ ಬಿಲ್ಲಿನಲ್ಲಿ ಶೇಕಡಾ ಐದರ ಹೆಚ್ಚಳ ಖಂಡಿತಾ ಹೊರೆಯಾಗುತ್ತಿತ್ತು.ಅದನ್ನು ಆಸ್ಪತ್ರೆಯೇ ಭರಿಸಬೇಕೆನ್ನುವುದು ಕೂಡಾ ಸಮಂಜಸವಾಗಲಾರದು.