ಇಂದು ಪುತ್ತೂರಿನ ಸುದ್ದಿ ಬಿಡುಗಡೆಯಲ್ಲಿ ಮೂರನೇಯ ಪುಟದಲ್ಲಿ ನಿನ್ನ ಪೋಟೊ ಇದೆ. ಹೆಸರು ಮಾತ್ರ ನಿನ್ನ ಮಲೆಯಾಳಿ ಮಾಡಿದ್ದಾರೆ - ಗೋವಿಂದನ್ ಆಗಿದೆ ಎಂದು ಆತ್ಮೀಯ ಅನಿಲ್ ಸಂದೇಶ ರವಾನಿಸಿದ. ಹಾಗೆ ಪತ್ರಿಕೆ ಬಿಡಿಸಿ ನೋಡುವಾಗ ಮೊನ್ನೆ ಸೋಮವಾರ ತೆಗೆದ ಪೋಟೊ ಎಂದು ಖಚಿತವಾಯಿತು. ಊರ ಮಾಹಿತಿ ನಿಖರವಲ್ಲ. ಹೆದ್ದಾರಿಯಿಂದ ಹಳ್ಳಿರಸ್ತೆಗೆ ತಿರುಗುವುದು ನೇರಳಕಟ್ಟೆಯಲ್ಲಿ ಹೊರತು ನಾನು ಅಲ್ಲಿಯವನಲ್ಲ. ನಾನು ಕಳೆದ ಎಂಟು ತಿಂಗಳಲ್ಲಿ ಕನಿಷ್ಟ ಇಪ್ಪತ್ತು ಬಾರಿ ಟ್ರೈಕಿನಲ್ಲಿ ಪುತ್ತೂರಿಗೆ ಹೋಗಿದ್ದೇನೆ. ಇವರು ನಾನು ಪುತ್ತೂರಿನಲ್ಲಿ ಕಾಣಿಸಿದ್ದೇ ಪ್ರಥಮ ಅನ್ನುವ ರೀತಿ ಬರೆದಿದ್ದಾರೆ. ಅವರು ಪತ್ರಕರ್ತರಾಗಿದ್ದರೆ ಬದಿಯಲ್ಲಿ ನಿಲ್ಲಲು ವಿನಂತಿಸಿ ಆಗ ಹೆಸರು ಊರು ಕೇಳುವ ಸೌಜನ್ಯ ಇರಬೇಕಾಗಿತ್ತು ಹೊರತು ಮುಖ್ಯ ರಸ್ತೆಯಲ್ಲಿ ಬಸ್ ನಿಲ್ದಾಣದ ಸಮೀಪ ಹತ್ತು ಕಿಮಿ ವೇಗದಲ್ಲಿ ಅಕ್ಕಪಕ್ಕದಲ್ಲಿ ಸಾಗುವಾಗ ಖಂಡಿತಾ ಅಲ್ಲ.
ಎಂಡೋಸಲ್ಫನ್ ಸಿಂಪರಣೆಯಿಂದ ಸಮಸ್ಯೆಗೊಳಗಾದ ಜನರ ಬಗೆಗೆ ಇತ್ತೀಚೆಗೆ ಬಿ ಸಿ ರೋಡಿನಲ್ಲಿರುವ ಸುಂದರ್ ರಾವ್ ಹೇಳಿದರು - ಅವರು ನಮ್ಮ ನಿಮ್ಮ ಕಣ್ಣಿಗೆ ಬೀಳುವುದಿಲ್ಲ ಯಾಕೆಂದರೆ ಅವರು ಮನೆಯಿಂದ ಹೊರಡುವುದೇ ಇಲ್ಲ. ಹಾಗಾಗಿ ಪತ್ರಿಕೆಗಳಲ್ಲಿ ಸುದ್ದಿಯಾಗುವುದೇ ಇಲ್ಲ. ಹಾಗೆ ಆಗಾಗ ಪುತ್ತೂರಿಗೆ ಹೋಗುವವನನ್ನು ಇವರು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಗಮನ ಸೆಳೆದರು ಎಂದು ಬರೆಯುವುದರ ನೋಡಲು ಬೇಸರವಾಗುತ್ತದೆ.
6 comments:
ಫೊಟೊ ಕ್ಲಿಕ್ಕಿಸಿದವರು ಪತ್ರಕರ್ತರಾಗಿಲ್ಲದೆ ಇರಬಹುದು.ಅದರೆ ಶೀರ್ಶಿಕೆಕೊಟ್ಟು ಪ್ರಕಟಿಸಿದವರು ಪತ್ರಕರ್ತರಲ್ಲದೆ ಬೇರೆಯಾರಾಗಿರರು ಸಾಧ್ಯ..??
ಏನು ಮಾಡೋಣ ಹೇಳಿ..?
ಅವರ ಪತ್ರಿಕೊದ್ಯಮದ ತಿಳುವಳಿಕೆಯ ಮಟ್ಟ ಅಷ್ಟೇ ಅಂತ ತಿಳ್ಕೊಂಡ್ ಬಿಡಿ.
ನನಗೂ ಸುದ್ದಿ ಓದಿ ಏನಪ್ಪಾ ಇದು..!
ಹೀಗೂ ಬರೀತಾರಲ್ಲ..!
ಅಂತ ಅನಿಸಿತು.
ಸುದ್ದಿ ಗಮನಿಸಿದ್ದೇನೆ. ಫೋಟೋ ನೋಡಿ ನನಗೂ ಗೊಂದಲವಾಗಿತ್ತು. ಈಗ ಕ್ಲಿಯರ್ ಆಯ್ತು.
ಗೋವಿ೦ದ ಭಟ್ಟರೆ,ನಿಮ್ಮ ಬಗ್ಗೆ ಹೇಳುವುದಕ್ಕಿ೦ತ/ತಿಳಿದುಕೊಳ್ಳುವುದಕ್ಕಿ೦ತ ಅವರಿಗೆ ಅವರದ್ದೇ ಆದ ಸುದ್ದಿ ಮಾಡುವ ಚಟವಿರಬೇಕು...!! ಹೇಳ್ತಾರಲ್ಲ ಏನಕೇನ ಪ್ರಕಾರೇಣ.....,ಇಲ್ಲಿಗೂ ಅನ್ವಯವಾಗುತ್ತದೆ,ಅಲ್ಲವೇ?.
evare nijavada patrakartaru..?
nimma kalpane tappu !
ಇರಬಹುದು,ಆದರೆ ದಯವಿಟ್ಟು ತಮ್ಮ ಹೆಸರನ್ನು ತಿಳಿಸಿ ಘನತೆಯನ್ನು ಹೆಚ್ಚಿಸಿಕೊಳ್ಳಿ.
ನಿಜವಾದ ಪತ್ರಕರ್ತರು ಮಾನವತೆ,ಸಹೃದಯತೆ,ಇತ್ಯಾದಿಗಳನ್ನು ಬಿಟ್ಟು ವ್ಯವಹರಿಸುತ್ತಾರೆ ಅಂತ ಗೊತ್ತಿರಲಿಲ್ಲ.
(ದಯವಿಟ್ಟು ಪತ್ರಕರ್ತರು ಗಮನಿಸಿ..)
hmmm..
ಏನು ಮಾಡೋಣ ಹೇಳಿ?
ಇಂಥೋರೂ ಇರುತ್ತಾರೆ..
Post a Comment