ನಡುರಾತ್ರೆ ಎಪಿ ಸುಬ್ರಮಣ್ಯಂ ಅವರಿಂದ ಸತತ ನನ್ನ ಸಂಪರ್ಕ ಪ್ರಯತ್ನ. ನಾನು ರಾತ್ರಿ ಬೇಗ ಮಲಗುವ ವ್ಯಕ್ತಿ. ಅದುದರಿಂದ ನಿದ್ದೆಯ ಮದ್ಯೆ ಕಿವಿಗೊಟ್ಟು ಎಲ್ಲಕ್ಕೂ ಹೂಂಗುಟ್ಟಿದೆ. ಎರಡು ಜನ ಎರಡು ಪೆಡಲ್ ಎರಡು ಚಕ್ರದ ಗಾಡಿ ಯಾವುದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಕಿವಿ ಸಮಸ್ಯೆಯೂ ನನಗುಂಟು. ಮರುದಿನ ಮಾಮೂಲಿ ಒಂಬತ್ತು ಕಿಮಿ ದೂರದ ತ್ರಿಚಕ್ರ ತಿರುಗಾಟದಿಂದ ಹಿಂತಿರುಗಿದ ನಂತರ ನಮ್ಮ ಸುಬ್ಬಣ್ಣ ಮೊದಲು ಮಾತನಾಡಿದ ಅನಿಲ ಪರದೇಶಿ ಸೈಕಲಿಗರ ಬೇಟಿಯಾದೆಯಾ ? ಎನ್ನುವಾಗಲೇ ನನಗೆ ಎಚ್ಚರವಾದುದು, ಒಂದು ಅವಕಾಶ ತಪ್ಪಿಸಿಕೊಂಡೆನಾ ? ಕೂಡಲೇ ಸುಬ್ರಮಣ್ಯಂ ಅವರ ಪುನಹ ಸಂಪರ್ಕಿಸಿದೆ. ಅವರು ಸೈಕಲ್ ಸವಾರರ ಜಾಲತಾಣದ ವಿಳಾಸವೂ ಚೂರು ಪ್ರವಾಸದ ವಿವರವನ್ನೂ ಕೊಟ್ಟರು. http://eurasia.cyclic.eu/
ನೋಡಿದರೆ ಅವರಿರುವುದು ಜರ್ಮನಿಯ ಪ್ರಖ್ಯಾತ ಹೇಸ್ ಕಂಪೇನಿಯ ಪಿನೊ ಎನ್ನುವ ಇಬ್ಬರು ಪ್ರಯಾಣಿಸಬಹುದಾದ ಸೈಕಲು. ಪ್ರಾಯುಶ: ಈ ಸೈಕಲು ಇನ್ನೊಮ್ಮೆ ನೋಡುವ ಅವಕಾಶ ಸಿಗುವುದು ದುರ್ಲಬ. ಕೂಡಲೆ ಪೆಡಲಿಸಿದೆ ರಸ್ತೆ ಬದಿಗೆ. ಕಾಲು ಗಂಟೆಯೊಳಗೆ ಅವರು ಆಗಮಿಸಿದರು. ಒಬ್ಬ ಸೈಕಲ್ ಆಸಕ್ತ ನಿಮಗೆ ದಾರಿಯಲ್ಲಿ ಸಿಗಬಹುದೆಂಬ ಸೂಚನೆ ಮೊದಲೇ ಸುಬ್ಬಣ್ಣ ಅವರಿಗಿತ್ತಿದ್ದರು ಅನಿಸುತ್ತದೆ.
ಐದು ನಿಮಿಷ ಮಾತುಕಥೆಯ ಅನಂತರ ನಾನಂದೆ – ಇಲ್ಲಿ ಮಾರ್ಗದ ಬದಿ ಬಿಸಿಲಲ್ಲಿ ನಿಂತು ಮಾತನಾಡುವ ಬದಲು ಆರು ಕಿಮಿ ಮುಂದೆ ಕಲ್ಲಡ್ಕದಲ್ಲಿ ವಿಶಿಷ್ಟವಾದ ಚಾ ಕುಡಿಯೋಣ. ನಾನು ನಿಮ್ಮ ಜತೆ ಬರುತ್ತೇನೆ ಅಂದೆ. ಸಮ್ಮತಿಸಿದರು. ಕಲ್ಲಡ್ಕವರೆಗೆ ಹೆಚ್ಚಿನ ಬಾಗ ನಾನವರ ಅನುಸರಿಸಿದೆ. ಹಾಗೆ ಅವರ ಸೈಕಲ್ ಹಾಗೂ ಹಿಂಬಾಲಕ ಗಾಡಿಯ ವರ್ತನೆ ನೋಡುವ ಅವಕಾಶ ಸಿಕ್ಕಿತು.
ಎದುರು ಕುಳಿತ ವ್ಯಕ್ತಿಯ ಬಾರ ಮುಂದಿನ ಚಕ್ರದ ಮೇಲೆ ಬೀಳುವ ಕಾರಣ ರಸ್ತೆ ಹಿಡಿತ ಉತ್ತಮ. ರಸ್ತೆ ಹಾಗೂ ಸುತ್ತುಮುತ್ತಲ ಪರಿಸರವ ಇಬ್ಬರಿಗೂ ಏಕಕಾಲಕ್ಕೆ ನೋಡುವ ಅವಕಾಶ. ಇಬ್ಬರೂ ಅವರವರ ಸಾಮರ್ಥ್ಯದ ಅನುಸಾರವಾಗಿ ತುಳಿಯಬಹುದು. ಬೆಲೆ ಸುಮಾರು ಎರಡೂವರೆ ಲಕ್ಷ ರೂಪಾಯಿಯಿಂದ ಪ್ರಾರಂಬ. ಈ ನವೀನ ಸೈಕಲು ಹೇಸ್ ಕಂಪೇನಿಯ ಕೊಡುಗೆಯಾದರೂ ಈಗ ಟೈವಾನ್ ದೇಶದಿಂದ ಅನುಕರಣೆ ಮಾದರಿಯೂ ಹೊರಬಂದಿದೆ.
http://hasebikes.com/150-1-tandem-pino-tour.html
ಗಂಟೆ ಹನ್ನೆರಡಾಗಿತ್ತು. Geoff ಎರಡು ದಿನ ಹಿಂದೆ times ದಿನಪತ್ರಿಕೆಯಲ್ಲಿ ಈ ಹೊಟೆಲ್ ಮತ್ತು ವಿಶಿಷ್ಟ ಚಾ ಬಗೆಗೆ ಒಂದು ವರದಿ ಪ್ರಕಟವಾದುದನ್ನು ನೋಡಿದ್ದರು. ಕಲ್ಲಡ್ಕದ ಕೆಟಿ ಕುಡಿದ ನಂತರ ಮಂಗಳೂರು ನನ್ನ ಮಟ್ಟಿಗೆ ಒಂದೂವರೆ ಘಂಟೆ ಎಂದೆ. ದಾರಿಯಲ್ಲಿ ಊಟ ಸಿಗುವುದೋ ವಿಚಾರಿಸಿದರು. ಸಿಗಬಹುದಾದ ಬಿಸಿ ರೋಡ್ ಹೆಚ್ಚು ದೂರವಲ್ಲ. ಬಾನುವಾರ. ಮುಂದೆ ಮಂಗಳೂರಿನ ವರೆಗೆ ಊಟಕ್ಕೆಂದು ನಿಲ್ಲುವ ಬದಲು ಇಲ್ಲಿಯೇ ದೋಸೆ ತಿಂದರೆ ಉತ್ತಮವೆನ್ನುವುದು ನನ್ನ ಸೂಚನೆ ಪ್ರಕಾರ ತೀರ್ಮಾನಿಸಿದರು. ಹೀಗೆ ದೋಸೆ ಕೆಟಿಯ ನಡುವ ಸಂಗ್ರಹವಾದ ಸುದ್ದಿ ಇಷ್ಟು.
Geoff ಮತ್ತು Lodi - ಬೆಳ್ಜಿಯಂ ದೇಶಕ್ಕೆ ಸೇರಿದವರು. Geoff ಒಂದು ಥಿಯೇಟರ್ ಮೆನೇಜರ್ ಮತ್ತು Lodi ಪುಟ್ಟ ಮಕ್ಕಳ ಟೀಚರ್. ಇಬ್ಬರೂ ಸೈಕಲಿನಲ್ಲಿ ಕೆಲಸಕ್ಕೆ ಹೋಗುವವರು. ಕೆಲಸಕ್ಕೆ ಒಂದು ವರ್ಷ ರಜೆಮಾಡಿ ತಿರುಗಾಡುತ್ತಿದ್ದಾರೆ. ಜುಲೈ ತಿಂಗಳಲ್ಲಿ ಪ್ರವಾಸ ಹೊರಟಿದ್ದಾರೆ. ದುಬೈಯಿಂದ ಕೊಚ್ಚಿಗೆ ಹಾರಿ ಬಂದು ಮುಂಬಯಿ ಕಡೆಗೆ ಹೊರಟಿದ್ದಾರೆ. ವಿವರಗಳು ಅವರ ಜಾಲತಾಣದಲ್ಲಿವೆ. ಗೂಗಲ್ ಅನುವಾದ ಸ್ವಷ್ಟವಲ್ಲವಾದರೂ ಸಾಮಾನ್ಯ ಅರಿವು ಮೂಡಿಸುತ್ತದೆ.
ಪಾಣೆಮಂಗಳೂರು ದಾಟುವಾಗ ಅವರನ್ನು ವಾಹನದಟ್ಟಣೆ ಕಡಿಮೆ ಇರುವ ಹಳೆ ರಸ್ತೆಯಲ್ಲಿ ಕರೆದೊಯ್ದೆ. ಹಿಂಬಾಲಿಸುತ್ತಿದ್ದ ಅವರು ಗಲಿಬಿಲಿಗೊಡು ನಿದಾನಿಸಿದರು ಯಾಕೆಂದರೆ ಅವರ ಜಿಪಿಎಸ್ ಹೆದ್ದಾರಿಯಲ್ಲಿಯೇ ಮುಂದುವರಿಯುವುದರ ಸೂಚಿಸುತಿತ್ತು. ಶತಮಾನದ ಅಂಚಿನಲ್ಲಿರುವ ಹಳೆಯ ಸೇತುವೆ ಹಾಗೂ ಟಿಪ್ಪು ಸುಲ್ತಾನನ ಕಾಲದ ಕಲ್ಲಿನಿಂದ ಮಾಡಿದ ಫಿರಂಗಿ ತೋರಿಸಿದೆ. ಅದರ ಮುಂದೆ ಯಾವುದೇ ವಿವರಣೆ ಇಲ್ಲದ ಕಾರಣ ಅವರು ಅವರ ಸೈಕಲಿನೊಂದಿಗೆ ಫಿರಂಗಿಯ ಚಿತ್ರ ಸೆರೆ ಹಿಡಿದದ್ದು ನನ್ನ ಒತ್ತಾಯಕ್ಕೆ.
ಬಿ ಸಿ ರೋಡು ದಾಟಿದ ನಂತರ ನಾನು ಅವರಿಂದ ಬೀಳ್ಕೊಂಡೆ. ಅವರೊಂದಿಗೆ ಸುಮಾರು ಹದಿನೈದು ಕಿಮಿ ಸಾಗುವ ಸದವಕಾಶ ನನ್ನದಾಗಿತ್ತು. ಮಾತನಾಡುತ್ತಾ ನಾವು ಹತ್ತು ನಿಮಿಷ ಅಲ್ಲಿದ್ದೆವು. ಅವರು ಮುಂದಕ್ಕೆ ಸಾಗಿದ ನಂತರ ಪಕ್ಕದಲ್ಲಿದ್ದವರು ಹೇಳಿದರು – ಎದುರಿನಲ್ಲಿ ತಾಜ್ ಸೈಕಲ್ ಅಂಗಡಿ ಉದ್ಘಾಟನೆ. ಮೊದಲೇ ನಮಗೆ ಅರಿವಿಗೆ ಬಂದಿದ್ದರೆ ನಾನು ಈ ಬೆಳ್ಜಿಯಮ್ ಜೋಡಿಯನ್ನು ಅಲ್ಲಿ ಕರೆದೊಯ್ದು ಅವರಿಗೆ ಶುಭ ಕೋರುತ್ತಿದ್ದೆವು.
ಕಾರಣಾಂತರ ನನ್ನ ಕೆಮರಾ ದ್ವಂಸಗೊಂಡ ಕಾರಣ ಉತ್ತಮ ಚಿತ್ರ ತೆಗೆಯಲು ಸಾದ್ಯವಾಗಲಿಲ್ಲ. ಜತೆಯಲ್ಲಿರುವ ಪೋಟೊ ತೆಗೆದದ್ದು ಬಹು ಕಾಲ ಉಪಯೋಗಿಸದಿದ್ದ ಅಗಲ ಕೋನದ ಮಸೂರದ ಕೆಮರದಲ್ಲಿ. ಅದುದರಿಂದ ಗುಣಮಟ್ಟ ಕಳಪೆ. http://is.gd/k0uj4b ಯಲ್ಲಿ ಅವರ ಸೈಕಲ್ ಚಾಲನೆ ನೋಡಬಹುದು.

ಅವರ ಹಿಂಬಾಲಕ ಗಾಡಿ ಇಂಗ್ಲೇಂಡಿನ
http://www.carryfreedom.com/ ಅನ್ನುವ ಕಂಪೇನಿ ತಯಾರಿಸಿದ್ದು. ಜಾಲದಲ್ಲಿ ಅವರ
ಬಿದುರಿನ ಗಾಡಿ ಮಾಡುವ
ಬಗೆಗೆ ಮಾಹಿತಿ ಇದೆ. ನಾನು ಮಾಹಿತಿ
ಸಂಗ್ರಹಿಸಿದರೂ ಗಾಡಿ ತಯಾರಿ
ಸಾದ್ಯವಾಗಲೇ ಇಲ್ಲ.
ಪಾಣೆಮಂಗಳೂರು ದಾಟುವಾಗ ಅವರನ್ನು ವಾಹನದಟ್ಟಣೆ ಕಡಿಮೆ ಇರುವ ಹಳೆ ರಸ್ತೆಯಲ್ಲಿ ಕರೆದೊಯ್ದೆ. ಹಿಂಬಾಲಿಸುತ್ತಿದ್ದ ಅವರು ಗಲಿಬಿಲಿಗೊಡು ನಿದಾನಿಸಿದರು ಯಾಕೆಂದರೆ ಅವರ ಜಿಪಿಎಸ್ ಹೆದ್ದಾರಿಯಲ್ಲಿಯೇ ಮುಂದುವರಿಯುವುದರ ಸೂಚಿಸುತಿತ್ತು. ಶತಮಾನದ ಅಂಚಿನಲ್ಲಿರುವ ಹಳೆಯ ಸೇತುವೆ ಹಾಗೂ ಟಿಪ್ಪು ಸುಲ್ತಾನನ ಕಾಲದ ಕಲ್ಲಿನಿಂದ ಮಾಡಿದ ಫಿರಂಗಿ ತೋರಿಸಿದೆ. ಅದರ ಮುಂದೆ ಯಾವುದೇ ವಿವರಣೆ ಇಲ್ಲದ ಕಾರಣ ಅವರು ಅವರ ಸೈಕಲಿನೊಂದಿಗೆ ಫಿರಂಗಿಯ ಚಿತ್ರ ಸೆರೆ ಹಿಡಿದದ್ದು ನನ್ನ ಒತ್ತಾಯಕ್ಕೆ.
ಬಿ ಸಿ ರೋಡು ದಾಟಿದ ನಂತರ ನಾನು ಅವರಿಂದ ಬೀಳ್ಕೊಂಡೆ. ಅವರೊಂದಿಗೆ ಸುಮಾರು ಹದಿನೈದು ಕಿಮಿ ಸಾಗುವ ಸದವಕಾಶ ನನ್ನದಾಗಿತ್ತು. ಮಾತನಾಡುತ್ತಾ ನಾವು ಹತ್ತು ನಿಮಿಷ ಅಲ್ಲಿದ್ದೆವು. ಅವರು ಮುಂದಕ್ಕೆ ಸಾಗಿದ ನಂತರ ಪಕ್ಕದಲ್ಲಿದ್ದವರು ಹೇಳಿದರು – ಎದುರಿನಲ್ಲಿ ತಾಜ್ ಸೈಕಲ್ ಅಂಗಡಿ ಉದ್ಘಾಟನೆ. ಮೊದಲೇ ನಮಗೆ ಅರಿವಿಗೆ ಬಂದಿದ್ದರೆ ನಾನು ಈ ಬೆಳ್ಜಿಯಮ್ ಜೋಡಿಯನ್ನು ಅಲ್ಲಿ ಕರೆದೊಯ್ದು ಅವರಿಗೆ ಶುಭ ಕೋರುತ್ತಿದ್ದೆವು.
ಕಾರಣಾಂತರ ನನ್ನ ಕೆಮರಾ ದ್ವಂಸಗೊಂಡ ಕಾರಣ ಉತ್ತಮ ಚಿತ್ರ ತೆಗೆಯಲು ಸಾದ್ಯವಾಗಲಿಲ್ಲ. ಜತೆಯಲ್ಲಿರುವ ಪೋಟೊ ತೆಗೆದದ್ದು ಬಹು ಕಾಲ ಉಪಯೋಗಿಸದಿದ್ದ ಅಗಲ ಕೋನದ ಮಸೂರದ ಕೆಮರದಲ್ಲಿ. ಅದುದರಿಂದ ಗುಣಮಟ್ಟ ಕಳಪೆ. http://is.gd/k0uj4b ಯಲ್ಲಿ ಅವರ ಸೈಕಲ್ ಚಾಲನೆ ನೋಡಬಹುದು.
ಇಪ್ಪತ್ತೈದು
ವರ್ಷ ಹಿಂದೆ ನಾನು ಸೈಕಲು ಪ್ರವಾಸ ಕೈಗೊಂಡಾಗ
ಹಲವು ವಿದೇಶಿಯರ ಆತಿಥ್ಯ ಎಂದೂ ಮರೆಯುವಂತದ್ದಲ್ಲ. ಹಾಗೆ ಈ ಸೈಕಲಿಗರಿಗೆ ನನ್ನ ಕೈಲಾದ ಆತಿಥ್ಯ ಕೊಡಲು ಸಾದ್ಯವಾದುದು ಧನ್ಯತಾ
ಬಾವ ಮೂಡಿಸುತ್ತದೆ. ಮತ್ತೊಂದು
ತಮಾಷೆ ಎಂದರೆ ಜರ್ಮನಿಯ ಸೈಕಲು ಗೆಳೆಯ
ಫ್ರೆಡ್ ಬಾರತಕ್ಕೆ ಬಂದಾಗ ನಾನು ನಾಲ್ಕು ವರ್ಷದ ಬಾಲಕ.
ಅದೇ ರೀತಿ ನಾನು ಇವರ ಬೆಳ್ಜಿಯಂ
ಸಂದರ್ಶಿಸಿದಾಗ ಇವರಿಗೂ ಸುಮಾರು
ಅದೇ ವಯಸ್ಸು - ನಾಲ್ಕು ವರ್ಷದ ಆಸುಪಾಸು.
5 comments:
ಮಂಗಳೂರಿನಲ್ಲೂ ಈ ಜೋಡಿ ಸಂಚರಿಸಿದ್ದು ನೋಡಿದ್ದೇನೆ, ಸಂದರ್ಶಿಸಬೇಕೆಂದಿದ್ದೆ ಕಾರಣಾಂತರಗಳಿಂದ ಆಗಲಿಲ್ಲಿ, ನೀವು ಈ ಬಗ್ಗೆ ಬರೆದಿದ್ದು ಖುಷಿಯಾಯ್ತು..ನಿಮ್ಮನ್ನು ಕೆಲವು ಸಲ ರಸ್ತೆಯಲ್ಲಿ ನೋಡಿದ್ದೇನೆ, ಬ್ಲಾಗ್ನಲ್ಲಿ ಬಲ್ಲೆ, ಇನ್ನೊಮ್ಮೆ ಮುಖತ ಮಾತನಾಡೋಣ...
-ವೇಣುವಿನೋದ್.
ಕಾರಣಾ೦ತರಗಳಿ೦ದ ಅವರೊ೦ದಿಗೆ ಮಾತುಕತೆ ನಡೆಸುವುದು ಬಿಡಿ, ಸವಾರಿಯ ಅವರ ಸೈಕಲ್ ನ ವಿವರಗಳನ್ನೂ ಅರಿಯುವುದು ನನ್ನಿ೦ದ ಅಸಾಧ್ಯ ಎ೦ದಾದಾಗ, ಥಟ್ಟನೆ ನಿಮ್ಮ , ಸಾಹಸಗಳ ನೆನಪಾಯಿತು, ಸಾರ್ಥಕವಾಯಿತು. ಗೋವಿ೦ದಣ್ಣಾ ನೀವು ಸವಿವರವಾಗಿ ದಾಖಲಿಸಿದ್ದೀರಿ,
ಅವರ ಪ್ರವಾಸದ ವಿವರ ಜಾಲತಾಣದಲ್ಲಿ ನೋಡಿದಾಗ ರೋಮಾ೦ಚನವಾಯಿತು, ಅವರ ಈ ಕೆಳಗಿನ ವಾಕ್ಯ ಓದಿ, . No, we’ll travel for us and only us because we want to (that for the « why » and not « what for »)! Selfish? Maybe! But above all, we will remain honest with ourselves and our relatives! Hence the idea of going on own funds. But after careful consideration, a little boost wouldn’t be unwelcome.
ಮತ್ತು ಅವರ ಪರಿಸರ ಕಾಳಜಿಯೂ ಮೆಚ್ಚತಕ್ಕದ್ದೇ. ಜಾಲತಾಣದಲ್ಲಿ Présentation ಎ೦ಬ ಶಿರೋನಾಮೆಯಡಿ, ಆ೦ಗ್ಲ ಭಾಷೆಯಲ್ಲೂ ವಿವರ ಸಿಗುತ್ತದೆ.
ಆಚಾರಕ್ಕಿಲ್ಲದಿದ್ದರೂ, ಪ್ರಚಾರಕ್ಕಾದರೂ ನಮ್ಮ ಕಾಳಜಿ ಇ೦ತವರಿಗೆ ಒದಗಲಿ.
ಗುರು ಗೋವಿಂದ
ಬ್ಲಾಗ್ ಬರಹ ನನಗೆ ಹಿಡಿಸಿತು. ಕಲ್ಲಡ್ಕದ ಕೇಟಿ ಮತ್ತು ದೋಸೆಗಳನ್ನು ವಿದೇಶೀಯರಿಗೆ ಪರಿಚಯಿಸಿ ನಮ್ಮ ದ.ಕ.ದ ಹಿರಿಮೆಯನ್ನು ಮೆರೆದಿರಿ.
ನಾನು ಟಿಪ್ಪೂ ಸುಲ್ತಾನನ ಕಾಲದ ಕಲ್ಲು ಫಿರಂಗಿಯನ್ನು ನೋಡಿಲ್ಲ. ಒಂದು ಫೋಟೋ ಯಾವಾಗಲಾದರೂ ಕಳುಹಿಸುವಿರಾ?
ಪ್ರೀತಿಯಿಂದ
ಪೆಜತ್ತಾಯ
http://is.gd/9Vgr4m - ಕ್ಲಿಕ್ಕಿಸಿದರೆ ನನ್ನ ಅವರ ಬೇಟಿಯನ್ನು ಅವರ ಬ್ಲೋಗಿನಲ್ಲಿ ಓದಬಹುದು. ಮೈಸೂರಿನಿಂದ ಮಲ್ಪೆ ವರೆಗಿನ ಪ್ರವಾಸ ವಿವರಗಳು ದೊರಕುತ್ತದೆ.
ಹೇಸ ಕ೦ಪನಿಯ ಸೈಕಲ್ ಹಾಗೂ ಬೆಲ್ಜಿಯ೦ ಜೋಡಿಯ ಪರಿಚಯ ನೀಡಿದ್ದಕ್ಕೆ ಧನ್ಯವಾದಗಳು.
Post a Comment