ಇಂದಿನ ಕನ್ನಡ
ಪ್ರಭ ಓದುವಾಗ ಆರು ತಿಂಗಳು
ಹಿಂದೆ ಇವರೇ ಬರೆದ
ಎರಡು ಲೇಖನಗಳು ನೆನಪಾದವು.
ಕನ್ನಡದ ಉದಯವಾಣಿಯಲ್ಲೂ ಇಂಗ್ಲೀಶಿನಲ್ಲಿ ನ್ಯೂಸ್ ವೀಕ್ ಬಳಗದ ಜಾಲ ಪತ್ರಿಕೆಯಲ್ಲೂ ಬೆಂಗಳೂರು ಬಗೆಗಿನ ಲೇಖನ ಪ್ರಕಟವಾಗಿತ್ತು. ಅಮೇರಿಕದಿಂದ
ಪ್ರಕಟವಾಗುವ ಪತ್ರಿಕೆಯಲ್ಲೂ ಬೆಂಗಳೂರಿನ
ಬಗ್ಗೆ ಕೆಟ್ಟದಾಗಿ ಬರೆಯುವ ಈ ಕಾರ್ನಾಡ್
ಬಗೆಗೆ ಯೋಚಿಸಲೂ ಹೇಸಿಗೆ
ಅನಿಸುತ್ತದೆ - ಹಲವಾರು ವರ್ಷಗಳಿಂದ ಇಲ್ಲಿಯೇ
ಬದುಕಿರಿರುವುದಾದರೂ ನೆಲೆ ನಿಂತ ಊರಿಗೆ
ಸಮಾಜಕ್ಕೆ ಈತನ ಕೊಡುಗೆ
ಸೊನ್ನೆ. ಬೆಂಗಳೂರಿನ ಕಸದ
ರಾಶಿಗೆ ಯುರೋಪಿನಂತಿತ್ತು ಬೆಂಗಳೂರು
ಎನ್ನುವ ಈ ಕಾರ್ನಾಡನ
ಕೊಡುಗೆ ಇಲ್ಲವೇ ? ಉಂಟು. ತಮ್ಮ ಪಾಲಿನ ಕಸ.
ನಾ ಮೊದಲು ನೋಡಿದ ಬೆಂಗಳೂರು ಇದಲ್ಲವಲ್ಲ ಎಂದು ಗಿರೀಷ ಕಾರ್ನಾಡ ಉದಯವಾಣಿಯಲ್ಲಿ ಹಪಹಪಿಸಿದ್ದಾರೆ. ಆದರೆ ದಾರಿ ಅಗಲಗೊಳಿಸಲು ಅವರ ಮನೆ ಗೋಡೆ ಕೆಡವುದರ ವರೆಗೆ ಅವರೂ ಸುಮ್ಮನಿದ್ದರು. ಮುಂಬಯಿಯಲ್ಲಿ ಪದ್ಯ ಹೇಳುವವಳಿಗಾಗಿ ಬಹಳ ಅಗತ್ಯವಿದ್ದ ಮೇಲ್ಸೇತುವೆ ನಿರ್ಮಾಣ ಸ್ಥಗಿತಗೊಳಿಸಲಾಗಿತ್ತು. ವಿಳಂಬವಾದಂತೆ ಯೋಜನಾ ಖರ್ಚು ಏರುತ್ತಾ ಹೋಗುತ್ತದೆ.
ಪ್ರತಿ ದಿನ ನಾಲ್ಕು
ನೂರು ಕಾರುಗಳು ಸಾವಿರದ ಇನ್ನೂರು ಬೈಕುಗಳು
ರಸ್ತೆಗಿಳಿಯುತ್ತದೆ ಎನ್ನುವ ಈ ಕಾರ್ನಾಡರು
ಸ್ವತಹಾ ಕಾರು ಉಪಯೋಗಿಸುವವರೇ
ಆಗಿದ್ದಾರಲ್ಲ ! ರಸ್ತೆ ಅಗಲವಾದರೆ ಇವರಿಗೂ ಅನುಕೂಲವಲ್ಲವೇ ? ರಾಚ್ಗನ್ ತಮಿಳು ಸಿನೆಮದಲ್ಲಿ ಕಾರು ತಯಾರಿ ಕಂಪೇನಿ ಯಜಮಾನನಾಗಿ ನಟಿಸಿದ
ಈ ಕಾರ್ನಾಡರಿಗೆ ಕಾರು
ತಯಾರಿ ಹಾಗೂ ಉಪಯೋಗದ
ಸಮಸ್ಯೆಗಳ ಬಗೆಗೆ
ಅರಿವು ಇರಬಹುದಲ್ಲ ??
ಕೊನೆಗೆ ಇಂಗ್ಲೀಷ್ ಕನ್ನಡದಲ್ಲೆರಡರಲ್ಲೂ ತಮ್ಮ ಗೋಳು ಬರೆಯುವ ಅವರು ಮೊದಲು
ವೈಯುಕ್ತಿಕ
ವಾಹನದ ಬದಲಾಗಿ ವೈಯುಕ್ತಿಕ ಶ್ರಮ ಉಪಯೋಗಿಸಿ ನಡೆಯೋಣ, ಸೈಕಲ್
ಉಪಯೋಗಿಸೋಣ ಅಥವಾ ಬಸ್ಸಿನ ವ್ಯವಸ್ಥೆ ಹೆಚ್ಚು ಬಲಿಷ್ಟಗೊಳಿಸೋಣ ಎನ್ನಬಹುದಾಗಿತ್ತು. ಅವರ ನಾಟಕಗಳಲ್ಲಿ
ಈ ಸಂದೇಶ ಕೊಡುತ್ತಿದ್ದರೆ ಪರಿಣಾಮಕಾರಿಯಾಗುತಿತ್ತು.
ಕಾರು ನಾಡರ ಬಗೆಗೆ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ಓದಲು
http://www.kannadaprabha.com/pdf/7112012/9.pdf
ಕಾರು ನಾಡರ ಬಗೆಗೆ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ಓದಲು
http://www.kannadaprabha.com/pdf/7112012/9.pdf
1 comment:
ನಾನೇನು ದೊಡ್ಡ ಸಾಹಿತ್ಯಪ್ರೇಮಿಯಲ್ಲ, ಅದನ್ನೇನೂ ಬಹಳಾ ಅಭ್ಯಾಸ ಮಾಡಿದವಳಲ್ಲ. ವಿ.ಎಸ್.ನೈಪುಲರ ಕೆಲವು ಪುಸ್ತಕಗಳನ್ನು ಓದಿದ್ದೇನೆ, ಹಾಗೂ ಅವರ ವಿಚಾರ,ಯೋಚನಾಕ್ರಮಗಳ ಬಗ್ಗೆ ಆದರ, ಗೌರವವನ್ನಿಟ್ಟುಕೊಂಡಿದ್ದೇನೆ. ಇತ್ತೀಚೆಗೆ ಅವರ ಸ್ವಂತದ ಬದುಕು,ಜೀವನ, ಕೆಲವೊಂದು ಅವರ ವೈಚಿತ್ರ್ಯಗಳನ್ನು ಓದಿ ತಿಳಿದುಕೊಂಡೆ. ಮನುಷ್ಯನೆಂದ ಮೇಲೆ ಯಾರೂ ಲೋಪಗಳಿಂದ ಹೊರತಾದವರಲ್ಲ.ಹಾಗಾಗಿ ನೈಪೂಲರೂ ಇದಕ್ಕೆ ಬದ್ಧರಾಗಿದ್ದಾರೆ. ಆದರೆ ಎಂದೂ ಅವರ ವಿದ್ವತ್ತಿಗೆ ,ಜ್ನಾನಕ್ಕೆ ಎರಡು ಮಾತಿಲ್ಲ. ಕಾರ್ನಾಡರ ಬಗ್ಗೆ ಕೆಲವೊಂದು ವಿಚಾರಗಳನ್ನು ಕೇಳಿ ತಿಳಿದಿದ್ದೆ. ನಿಮ್ಮ ಈ ಬ್ಲಾಗಿನಿಂದ ನನಗೆ ಸ್ಪಷ್ಟವಾಯಿತು ಅವರ ಮಾನಸಿಕ ಸಂಕಷ್ಟಗಳು, ಸಮಸ್ಯೆಗಳು. ಅವರು ಮನುಷ್ಯ ದೊಡ್ಡವನಾದರೂ, ಅದೇಕೆ ವಿಷ ಕಕ್ಕುತ್ತಿದ್ದಾರೆ ಎಂದು ನನಗೆ ಅರ್ಥವಾಗಿಲ್ಲ. ಬಹುಶಃ ಮನುಷ್ಯ ಅಧಿಕಾರ, ಸ್ಥಾನ ದೊರಕಿದಾಗ ತನ್ನ ಜವಾಬ್ದಾರಿ, ತನಗಿರುವ ಕರ್ತವ್ಯಗಳನ್ನು ಮರೆಯುತ್ತಾನೆ, ಮತ್ತು ಅದು ಅವನಿಗೆ ತನ್ನ ಸ್ಥಾನದ ಇರವನ್ನು ಮರೆಸುತ್ತದೆ. ಕಾರ್ನಾಡರಿಗೆ ಇದ್ದ ಗೌರವವನ್ನು ಕಳೆದುಕೊಳ್ಳುವ ಅಗತ್ಯವಿರಲಿಲ್ಲ ಎಂಬ ಕನಿಕರ ಮೂಡಿತು ನನಗೆ.
ಶೈಲಜ
Post a Comment