ಒಬ್ಬರು ಪ್ರೊಫೆಸರ್ ಸಾಹೇಬರು ಅಮುಲ್ ಮಾದರಿಯಲ್ಲಿ ಹಳ್ಳಿಗಳಲ್ಲಿ ಸೌರ ವಿದ್ಯುತ್ ಸಾದ್ಯತೆಗಳ ವಿಚಾರ ಹಿಂದು ಬಿಸಿ-ನೆಸ್ ಲೈನ್ ಪತ್ರಿಕೆಯಲ್ಲಿ ಬರೆದುದು ಸಂತಸದ ಸಂಗತಿ. ಆದರೆ
ಪಟ್ಟಣದಲ್ಲಿ ಕೂತ ಅವರಿಗೆ ಇದೊಂದು ಕೆಲಸಕ್ಕೆ
ಬಾರದ ಆಲೋಚನೆ ಎಂದು ಅರಿವಾಗಿರಲಿಕ್ಕಿಲ್ಲ. ನನ್ನ ಅಬಿಪ್ರಾಯದಲ್ಲಿ ಇದೊಂದು ಬೇಲೆ
ಇಜ್ಜಂದಿನ ಆಚಾರಿ……… :O ಕಾರಣ,
ಇದು ಹಾಲಿನ ಸೊಸೈಟಿಯಲ್ಲಿ ಹಾಲು ಹುಯಿದಷ್ಟು
ಸರಳವಲ್ಲ. ಪ್ರೊಫೆಸರ್ ಸಾಹೇಬರ
ತರ್ಕ ಎರಡನೆ ಪಾರದಲ್ಲಿಯೇ
ಕವಚಿಬಿದ್ದಿದೆ. ಮೊದಲನೆಯ ಮಾತು - ಇನ್ನೂ ವಿದ್ಯುತ್
ಜಾಲ ತಲಪದ
ಮನೆಗಳು ಎಂದ ಅವರು
ಹೆಚ್ಚಿನ ವಿದ್ಯುತ್ ಜಾಲಕ್ಕೆ ಹರಿಸಬಹುದು
ಎಂದೂ ಹೇಳುತ್ತಾರೆ. ಆದರೆ ಜಾಲಕ್ಕೆ ಹರಿಸಲು ಅಡ್ಡ
ಬರುವ ತಾಂತ್ರಿಕ ಸಮಸ್ಯೆ ಅವರ ಗಮನಕ್ಕೆ ಬಂದಂತಿಲ್ಲ.
ಇನ್ನೊಂದು ಅಸಂಬದ್ದ ಆಲೋಚನೆ ಕೇರಳಾ ಸರಕಾರದ್ದು. ಅದು ಹತ್ತು ಸಾವಿರ ಸೌರ ವಿದ್ಯುತ್ ಘಟಕಗಳ ಸ್ಥಾಪಿಸಲು ತಯಾರಾಗಿದೆ. ಅವರಿಗೆ ೧೫೦೦೦ ಜಾಲ-ಸಂಪರ್ಕ
ಘಟಕಗಳ ಸ್ಥಾಪಿಸುವ ಆಸಕ್ತಿಯೇನೊ
ಇತ್ತು. ಆದರೆ ಕೇಂದ್ರ
ಸರಕಾರ ಸಬ್ಸಿಡಿ ಕೊಡೋದು
ಜಾಲ ಸಂಪರ್ಕ ರಹಿತ ಘಟಕಗಳಿಗೆ ಮಾತ್ರ. :( ಪತ್ರಿಕೆಯಲ್ಲಿ
ಒಂದರ ಕೆಳಗೆ ಇನ್ನೊಮ್ಮೆ - ಎರಡು ಬಾರಿ
ಲೇಖನ ಪ್ರಕಟವಾದುದು ನೋಡಿ, ದಯಮಾಡಿ
ನಗಬೇಡಿ. ಟೊಯಿಲೆಟ್ ಪೇಪರ್ ಪತ್ರ್ರಿಕೆಯಲ್ಲಿ ಇಂತಹ
ಅಭಾಸಗಳು ಮಾಮೂಲಿ. :D ವಿಷಯಕ್ಕೆ ಬರೋಣವಾಗಲಿ. ಒಂದು ಲಕ್ಷ
ಇಪ್ಪತ್ತು ಸಾವಿರ ರಾಜ್ಯ ಕೇಂದ್ರ
ಸರಕಾರದ ಸಬ್ಸಿಡಿ. ಉಳಿದ ಒಂದು ಲಕ್ಷ ಬಳಕೆದಾರ ಹಾಕಿದರಾಯಿತು. ಈಗಾಗಲೇ
ನಾಲ್ಕು ಸಾವಿರ ಅರ್ಜಿ ಬಂದಿದೆ.
ನೀರು ಹರಿಯುವ ಕಾಲುವೆ ಮೇಲೆ ಸೌರ ಫಲಕಗಳ ಸ್ಥಾಪಿಸಿರುವ ಗುಜರಾತಿನ ಹಲವು ಸೌರ ವಿದ್ಯುತ್ ಯೋಜನೆಗಳು ಹೆಚ್ಚು ಅರ್ಥಪೂರ್ಣ. ಹೊಸ ಯೋಜನೆಯೊಂದರ ಪ್ರಕಾರ ಕಟ್ಟಡದ ಯಜಮಾನ ಚಾವಣಿಯನ್ನು ಬಾಡಿಗೆಗೆ ಅಥವಾ ಪಾಲುಗಾರಿಕೆ ನೆಲೆಯಲ್ಲಿ ಯೋಜನಾಕರ್ತರಿಗೆ ಕೊಡುತ್ತಾನೆ. ಅದರಲ್ಲಿ ತಯಾರಾದ ವಿದ್ಯುತ್ ಪೂರ್ತಿ ಜಾಲಕ್ಕೆ ಹರಿಯುವ ಬಗೆಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುತ್ತದೆ. ಎಲ್ಲವೂ ರಾಜಕೀಯಮಯವಾದ ನಮ್ಮ ದೇಶದಲ್ಲಿ ನರೆಂದ್ರ ಮೋಡಿ ಸಾಧನೆ ವಿರೋಧ ಕಾಂಗ್ರೆಸ್ ಪಕ್ಷಕ್ಕೆ ಸಮದಾನ ಇಲ್ಲ. ಮೋಡಿ ಕೊಡಲೊಪ್ಪುವ ವಿದ್ಯುತ್ ತಿರಸ್ಕಾರ - ಕತ್ತಲಲ್ಲಿ ಕೂರಲೂ ತಯಾರು. ;)
ಗೆಳೆಯ ದಿನಕರ್ ಹೇಳುವ
ಪ್ರಕಾರ ಈಗ ನೂರಾರು
ಫಲಕಗಳು ಬೆಳ್ತಂಗಡಿ ತಾಲೂಕಿನಲ್ಲಿಯೇ
ಮೂಲೆಗೆ ಬಿದ್ದಿದೆ. ಬಾಟರಿ ಆಯುಷ್ಯ
ಮುಗೀತು. ಒಮ್ಮೆಲೆ ಅಷ್ಟು ಹಣ
ಹಾಕುವುದು ಕಷ್ಟ / ಅಷ್ಟು
ಪ್ರಯೋಜನ ಇಲ್ಲ. ವಿದ್ಯುತ್ ಅಗ್ಗ. ಇತ್ಯಾದಿ ಆಲೋಚನೆಗಳು ಈ
ಫಲಕಗಳ ಮೂಲೆಗುಂಪಾಗಿಸಿವೆ. :( ಮೇಲ್ಕಂಡ
ಯೋಜನೆಯ ಫಲಕದ ಗತಿಯೂ ಅದೇ
ಆಗುತ್ತದೆ. ಮೂರು ವರ್ಷದಲ್ಲಿ ತಯಾರಾಗೊ ವಿದ್ಯುತ್
ಸುಮಾರು ಅದರ ಅಂದರೆ ಫಲಕದ ತಯಾರಿಕೆಗೆ ಖರ್ಚಾಗಿರುತ್ತದೆ. ಅದೂ
ಪೂರ್ಣ ಉಪಯೋಗ ಪಡಕೊಂಡರೆ
ಮಾತ್ರ. :@ ಸಾಮಾನ್ಯವಾಗಿ ಹೇಳುವುದಾದರೆ ಐದು ಆರು ವರ್ಷ ಕೆಲಸ ಮಾಡಲೇ ಬೇಕು.
ಇವರು ಹೇಳೊದು ಒಂದು ವಿಚಾರ ನಾನು ಒಪ್ಪುವುದಿಲ್ಲ. ಮನೆ
ಮೇಲೆ ಇಟ್ಟರಾಯಿತು. ಅದರ ಪಾಡಿಗೆ ಅದು ಕೆಲಸ ಮಾಡುತ್ತಲೇ ಇರುತ್ತದೆ. ಕಾರಣ ಸೂರ್ಯದೇವನ
ಹಿಂಬಾಲಿಸುವ ಫಲಕಗಳು ಶೇಕಡ ೪೦ ರಷ್ಟು
ಹೆಚ್ಚು ಶಕ್ತಿ ಹಿಡಿದು ಕೊಡು ತ್ತದೆ. ನಮ್ಮಲ್ಲಿ ಸಂಬಳ ಅಗ್ಗವಾದುದರಿಂದ ನಾವು ಈ ವಿಚಾರ ಮುಂದುವರಿದ ದೇಶಗಳ ಅನುಸರಿಸಬೇಕಾಗಿಲ್ಲ.
ಸೌರ ಪಲಕಗಳೆಂದರೆ ಅದರಲ್ಲಿ ಹಲವು ಪುಟ್ಟ ಸರ್ಕೀಟುಗಳ ಸಾಲಾಗಿ ಜೋಡಿಸಿರುತ್ತಾರೆ. ಸೌರ ಪಲಕಗಳಿಗೆ ನೆರಳು ಬೀಳಲೇ ಬಾರದು. ಬಿದ್ದರೆ ಎರಡು ರೀತಿಯ ಹಾನಿ ಯುಂಟಾಗುತ್ತದೆ. ತಾತ್ಕಾಲಿಕ ಹಾನಿ ಎಂದರೆ ೩೬ ತುಂಡುಗಳಲ್ಲಿ ಒಂದು ತುಂಡಿಗೆ ಎಲೆ ಬಿದ್ದು ನೆರಳಾದರೂ ಆ ಇಡೀ ಫಲಕದ ಒಟ್ಟು ವಿದ್ಯುತ್ ಉತ್ಪಾದನೆ ಅರ್ಧಕ್ಕರ್ಧ ಕುಸಿಯುತ್ತದೆ. :( ಎರಡನೆಯದಾಗಿ ಫಲಕದ ಒಳಗಿನ ವೈರಿಂಗ್ ಅಂದರೆ ಪುಟ್ಟ ತುಂಡುಗಳ ಜೋಡಿಸಿದ ಜಾಗ ಬಿಸಿಯಾಗಿ ಶಾಶ್ವತ ಹಾನಿ ಉಂಟು ಮಾಡುತ್ತದೆ. :@ ಹಾಗಾಗಿ ಹೆಚ್ಚು ಫಲಕಗಳಿದ್ದರೆ ಚಡ್ಡಿ ಹಾಕಿದ ತುಕ್ರನನ್ನು ಫಲಕಗಳ ಸೂರ್ಯದೇವನ ಹಿಂಬಾಲಿಸಿ ದಿನಕ್ಕೆ ನಾಲ್ಕು ಬಾರಿ ತಿರುಗಿಸಲು ನೇಮಿಸುವುದು ಉತ್ತಮ. ತುಕ್ರನಿಗೆ ಬೇಕಾದರೆ chief operation officer ಅಂಗಿಗೆ ಸಿಕ್ಕಿಸುವ ನಾಮಫಲಕ ಕೊಡೋಣ.
ಸೌರ ಪಲಕಗಳೆಂದರೆ ಅದರಲ್ಲಿ ಹಲವು ಪುಟ್ಟ ಸರ್ಕೀಟುಗಳ ಸಾಲಾಗಿ ಜೋಡಿಸಿರುತ್ತಾರೆ. ಸೌರ ಪಲಕಗಳಿಗೆ ನೆರಳು ಬೀಳಲೇ ಬಾರದು. ಬಿದ್ದರೆ ಎರಡು ರೀತಿಯ ಹಾನಿ ಯುಂಟಾಗುತ್ತದೆ. ತಾತ್ಕಾಲಿಕ ಹಾನಿ ಎಂದರೆ ೩೬ ತುಂಡುಗಳಲ್ಲಿ ಒಂದು ತುಂಡಿಗೆ ಎಲೆ ಬಿದ್ದು ನೆರಳಾದರೂ ಆ ಇಡೀ ಫಲಕದ ಒಟ್ಟು ವಿದ್ಯುತ್ ಉತ್ಪಾದನೆ ಅರ್ಧಕ್ಕರ್ಧ ಕುಸಿಯುತ್ತದೆ. :( ಎರಡನೆಯದಾಗಿ ಫಲಕದ ಒಳಗಿನ ವೈರಿಂಗ್ ಅಂದರೆ ಪುಟ್ಟ ತುಂಡುಗಳ ಜೋಡಿಸಿದ ಜಾಗ ಬಿಸಿಯಾಗಿ ಶಾಶ್ವತ ಹಾನಿ ಉಂಟು ಮಾಡುತ್ತದೆ. :@ ಹಾಗಾಗಿ ಹೆಚ್ಚು ಫಲಕಗಳಿದ್ದರೆ ಚಡ್ಡಿ ಹಾಕಿದ ತುಕ್ರನನ್ನು ಫಲಕಗಳ ಸೂರ್ಯದೇವನ ಹಿಂಬಾಲಿಸಿ ದಿನಕ್ಕೆ ನಾಲ್ಕು ಬಾರಿ ತಿರುಗಿಸಲು ನೇಮಿಸುವುದು ಉತ್ತಮ. ತುಕ್ರನಿಗೆ ಬೇಕಾದರೆ chief operation officer ಅಂಗಿಗೆ ಸಿಕ್ಕಿಸುವ ನಾಮಫಲಕ ಕೊಡೋಣ.
ಇಂತಹ ದೊಡ್ಡ ಘಟಕಗಳೆಂದರೆ ಸಾಮಾನ್ಯವಾಗಿ ಏನು ಮಾಡ್ತಾರೆ ಎಂದರೆ
ಫಲಕದ ಅಡಿಯಲ್ಲೊಂದು ಪುಟ್ಟ ಮೊಟರ್ ಹಾಕಿ
ಬಿಡ್ತಾರೆ. ಅದಕ್ಕಾಗಿ ಪ್ರತ್ಯೆಕ
ವೈರಿಂಗ್…….. ಎಸಿ ರೂಮಿನಲ್ಲಿ
ಸೂಟ್ ಹಾಕಿದವನೊಬ್ಬ ನಿಯಂತ್ರಿಸುತ್ತಾನೆ. ಫಲಕದ
ಮೊಟರು ಹಾಗೂ ಸೂಟಿನವನ ಎಸಿ ಎರಡೂ ಸುಮಾರು ವಿದ್ಯುತ್ ತಿಂದುಹಾಕುತ್ತದೆ. ತುಕ್ರ
ಚೋಮರಿಗೆ ಸಿಕ್ಕರೂ ಸಿಗೋದು ಗೇಟು ಕಾಯುವ ಕೆಲಸ ಮಾತ್ರ. :(
ಕಾನೂನು ಪ್ರಕಾರ
ವಿತರಣಾ ಜಾಲಗಳು ಇಂತಹ
ವಿದ್ಯುತ್ ಒಂದಂಶ ತೆಗೆದುಕೊಳ್ಳಬೇಕು. ನಮ್ಮಲ್ಲಿ
ಗುಣಮಟ್ಟದ
ವಿದ್ಯುತ್ ಅಥವಾ ದರ್ಮಾರ್ಥ
ವಿದ್ಯುತ್ ಇವುಗಳ ಆಯ್ಕೆ
ಜನಸಾಮಾನ್ಯರಿಗಿಲ್ಲ. ಪ್ರೊಫೆಸ್ಸರ್
ಸಾಹೇಬರು ಹೇಳುವಂತೆ ಮನೆಗೆ ಸಂಪರ್ಕ
ಕೊಟ್ಟ ಸರಿಗೆಯಲ್ಲಿ ವಾಪಾಸು ಕಳುಹಿಸಲೂ ಬಹುದು. ಹಾಲು
ಡೈರಿಯವರು ಕಾಲು ಲೀಟರ್ ಸಹಾ
ಕೊಂಡಂತೆ ಯಶಸ್ವಿ
ಉದಾಹರಣೆಗಳೂ ನಮ್ಮ ಮುಂದಿವೆ.
ಜರ್ಮನಿಯಲ್ಲಿ ಇಂದು
ಸುಮಾರು ಶೇಕಡ ಮೂವತ್ತರಷ್ಟು, ಸೌರ ವಿದ್ಯುತ್, ಗಾಳಿ ಯಂತ್ರ, ಹರಿಯುವ ನೀರಿನ
ಟರ್ಬೈನ್ ಇತ್ಯಾದಿಗಳಿಂದ
ತಯಾರಾಗುತ್ತದೆ. ಅದಕ್ಕೆ ಸ್ವಲ್ಪ ಹೆಚ್ಚು ಬೆಲೆಗೆ ವಿತರಣಾ
ಜಾಲ ಖರೀದಿಸುತ್ತದೆ. ಆ ಪ್ರಿಮಿಯಂ ಹಣವನ್ನು ಬಳಕೆದಾರರ ಮೇಲೆ
ಹಂಚಿ ಹಾಕುವ ಪಾರದರ್ಶಕ ವ್ಯವಸ್ಥೆ ಇರುತ್ತದೆ. ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಮೂಗು ತೂರಿಸುವ ಹಾಗೂ
ಕುರ್ಚಿಗೆ ಅನುಸಾರವಾಗಿ ದೋಚುವ ಸಾದ್ಯತೆ
ಇಲ್ಲವೆ ಇಲ್ಲ. ಆದರೆ
ಯೆಡ್ಡಿ ಅಂಥವರು ರಾಜಕಾರಣದಲ್ಲಿರುವಾಗ ದರ್ಮಾರ್ಥ ವಿದ್ಯುತ್ ಸರಿ ಎನ್ನುವಾಗ
ನಮ್ಮ ದೇಶದ ಶಕ್ತಿ ಜಾಲ ಉದ್ದಾರವಾಗೋಲ್ಲ.
ಕೊ ಜೆನೆರೆಶನ್
ಬಾರಿ ಹೊಸ ವಿಚಾರವೇನೂ ಅಲ್ಲ.
ನಮ್ಮ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಸಿಪ್ಪೆ ಬಳಸಿ ಕಬ್ಬಿನ ಹಾಲು ಕುದಿಸುತ್ತಾರೆ.
ಉಳಿಕೆ ಉಷ್ಣದಲ್ಲಿ ವಿದ್ಯುತ್ ತಯಾರಾಗುತ್ತದೆ. ಅದೇ
ರೀತಿ ಉಕ್ಕಿನ ತಯಾರಿಕೆಯಲ್ಲೂ
ವಿದ್ಯುತ್ ಲಭಿಸುತ್ತದೆ. ಇವರೆಲ್ಲ
ತಮ್ಮ ಬಳಕೆಗೆ ಆಗಿ ಮಿಕ್ಕಿದ್ದನ್ನು ಜಾಲಕ್ಕೆ
ಹರಿಸುತ್ತಾರೆ. ಹೆಚ್ಚಾಗಿ ಹೊರ
ರಾಜ್ಯಗಳಲ್ಲಿ ಮಾರಾಟ ಮಾಡುತ್ತಾರೆ.
ಕಾರಣ, ನಮ್ಮ
ರಾಜ್ಯದ ವಿದ್ಯುತ್ ಮಂತ್ರಿ (ಣಿ) ಬಾವಿ
ತೋಡಲು ಹೊರಡುವುದು ಬೆಂಕಿ ಬಿದ್ದಾಗಲೇ. :O
ಸಣ್ಣ ಮಟ್ಟಿನಲ್ಲಿ ಶಾಖ ಮತ್ತು
ವಿದ್ಯುತ್ ಜತೆಯಾಗಿ ಪಡಕೊಳ್ಳುವುದು ಇತ್ತೀಚಿನ ಪರಿಕಲ್ಪನೆ.
ಸಾಮಾನ್ಯವಾಗಿ ನಮ್ಮ ವಾಹನಗಳಲ್ಲಿ ಅಥವಾ
ಯಾವುದೆ ಅಂತರ್ದಹನ ಇಂಜಿನನಲ್ಲಿ
ಇಂದನದ ಶೇಕಡ ೨೦
ಚಾಲನೆಗೆ ಉಪಯೋಗವಾದರೆ ಉಳಿದ ಬಾಗ ಶಾಖವಾಗಿ ನಷ್ಟವಾಗುತ್ತದೆ. ಇದನ್ನು
ಬಳಸಿಕೊಂಡ ಈ ತತ್ವ
ಇಂದನದ ಶೇಕಡಾ ಎಂಬತ್ತರಿಂದ
ತೊಂಬತ್ತರಷ್ಟು ಶಕ್ತಿ
ಬಳಸಿಕೊಳ್ಳುತ್ತವೆ. ಜರ್ಮನಿಯಲ್ಲಿ
ಅವರು ಇದಕ್ಕೆ ಹೆಚ್ಚಾಗಿ ಬಳಸುವುದು ನೈಸರ್ಗಿಕ
ಅನಿಲ. ಈಗ ಹೊಂಡ ಕಂಪೇನಿ ಇದಕ್ಕೆ ಸೂಕ್ತವಾದ ಪುಟ್ಟ ಯಂತ್ರಗಳ ತಯಾರಿಸುತ್ತದೆ.
ನಮ್ಮಲ್ಲಿ ರಾತ್ರಿ
ಚಳಿಗೆ ಕಟ್ಟಿಗೆ ಉರಿಸುತ್ತೇವೆಲ್ಲಾ !
ಅದನ್ನು ಆಮ್ಲಜನಕ ನಿಯಂತ್ರಿತ
ವಾತಾವರಣದಲ್ಲಿ ಹೊತ್ತಿಸಿದರೆ
ಪ್ರೊಡ್ಯುಸರ್ ಅನಿಲವಾಗುತ್ತದೆ. ನಮ್ಮಲ್ಲಿಯೂ ಹಾಸನ, ಚಿಕ್ಕಮಗಳೂರು ಮಡಿಕೇರಿಯಂತಹ ಚಳಿ ಪ್ರದೇಶಗಳಲ್ಲಿ ಖಂಡಿತ ಸಾದ್ಯ. ಆಗ ಇಂದನದ ಹೆಚ್ಚಿನ ಬಾಗ ಕಸಕಡ್ಡಿ ಪೊರೈಸುತ್ತದೆ. ಮೂರು ಕಿಲೊ ಸೌದೆ ಒಂದು ಲಿಟರ್ ಡಿಸಲ್ ಉಳಿತಾಯ ಸಾದ್ಯ. ಹಾಗೆ ದಾರಾಳ ಬಯೋಗಾಸ್ ಇದ್ದಲ್ಲಿ ಅದೂ ಉಪಯೋಗಿಸಬಹುದು. ಮೂರು ಕಡೆಗಳಲ್ಲಿ
ಲಭಿಸುವ ಶಾಖ ಉಪಯೋಗಿಸಿ
ರೂಮು ಬಿಸಿಮಾಡಬಹುದು
/ ನೀರು ಬಿಸಿಮಾಡಬಹುದು.
ನಮ್ಮ ಜಾಲಗಳು ದ್ವಿಮುಖ ವಿದ್ಯುತ್
ಹರಿವಿಗೆ ಅನುಗುಣವಾಗಿಲ್ಲ. ಆದರೆ
ಸಣ್ಣ ಮಟ್ಟಿನ ವಿದ್ಯುತ್ ಒಳಹರಿವು ತಾಂತ್ರಿಕ
ಸಮಸ್ಯೆಗಳ ಉಂಟು ಮಾಡದು. ಅದು ಅದೇ
ಆಸುಪಾಸಿನಲ್ಲಿ ಖರ್ಚಾಗಿ ಹೋಗುತ್ತದೆ.
ಪರಿವರ್ತಕ ವರೆಗೆ ಮುಟ್ಟುವುದೇ
ಇಲ್ಲ. ಕಾರಣ ಅದು
ಅತ್ಯಂತ ಹೆಚ್ಚು ವಿದ್ಯುತ್ ಬಳಸುವ ಸಮಯ.
ನೀರು ಬಿಸಿ ಮಾಡಲು
ಸೌರ ಫಲಕಗಳಿಗೆ ಸರಕಾರ ಸಹಾಯದನ
ಕೊಡುತ್ತವೆ. ಕಾರಣ - ನೀರು ಬಿಸಿ ಮಾಡುವುದು ಹೆಚ್ಚಾಗಿ ಬೆಳಗಿನ ಜಾವ.
ಆಗ ಎಲ್ಲ ಮನೆಯಲ್ಲೂ
ಹೀಟಿಂಗ್ ಕಾಯಿಲುಗಳು ಒನ್ ಆದಾಗ
ಜಾಲಕ್ಕೆ ವಿಪರೀತ ಒತ್ತಡ ಬೀಳುತ್ತದೆ. ಅದನ್ನು ತಪ್ಪಿಸುವ ದೂರಾಲೋಚನೆ ಇದರ ಹಿಂದಿದೆ. ಸಬ್ಸಿಡಿ ಕೊಡೋದು ಬಿಸಿ ನೀರ
ವ್ಯವಸ್ಥೆಯಂತೆ ವಿದ್ಯುತ್ ವ್ಯವಸ್ಥೆ ಸ್ಥಾಪಿಸಲು
ಆಗಬಾರದು. ಆದು ಈಗ ಹಲವಾರು
ಗುಡ್ಡಗಳಲ್ಲಿ ಕೆಲಸಕ್ಕೆ ಬಾರದ
ಗಿರಿಗಿಟಿ ಸ್ಥಾಪಿಸಿದಂತಾಗುತ್ತದೆ. ನಾವು
ಜಾಲಕ್ಕೆ ಕೊಡುವ ವಿದ್ಯುತ್ತಿಗೆ ನ್ಯಾಯ
ಬೆಲೆ ದೊರಕಬೇಕು.
Peaking generators ಅಂದರೆ ವಿದ್ಯುತ್ ಉಪಯೋಗ ವಿಪರೀತವಾದಾಗ ನಡೆಯುವ ಉತ್ಪಾದನಾ ಕೆಂದ್ರಗಳು ಸಾಮಾನ್ಯವಾಗಿ ಗ್ಯಾಸಿನಿಂದ ನಡೆಯುತ್ತವೆ. ಅತಿ ಅಗತ್ಯವೆನಿಸಿದಾಗ ಅದನ್ನು ನಡೆಸುತ್ತಾರೆ. ಹಗಲಿನಲ್ಲಿ ಹಳ್ಳಿಗಳಲ್ಲಿ ಫಾನ್ ಪಟ್ಟಣಗಳಲ್ಲಿ ಎಸಿ ಗರಿಷ್ಟ ಉಪಯೋಗದ ಸಮಯ ಸೌರ ಫಲಕಗಳ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದುದರಿಂದ ಅವು ಸ್ವಾಭಾವಿಕವಾಗಿ peak load ನಿರ್ವಹಿಸಲು ಸಲೀಸು ಮಾಡಿಕೊಡುತ್ತದೆ. ಅದುದರಿಂದ ಅದಕ್ಕೆ ಉತ್ತಮ ದರ ಕೊಡೋದು ಬುದ್ದಿವಂತಿಕೆಯೇ ಆಗುತ್ತದೆ. :)
ಈಗ ಎರಡು
ವರ್ಷಗಳಲ್ಲಿ microinvertors ಎಂಬ ಹೊಸ
ಉತ್ಪನ್ನ ಅಮೇರಿಕದ ಮಾರುಕಟ್ಟೆಗೆ ಬಂದಿದೆ ಎನ್ನುವುದೂ
ಈ ಬರಹಕ್ಕೆ ಒಂದು ಕಾರಣ. ಪ್ರತಿ
ಫಲಕಕ್ಕೆ ಸಿಕ್ಕಿಸುವಂತಹ ಪುಟ್ಟ
ಪರಿವರ್ತಕ. ಅದನ್ನು ನಂತರ ನೇರ ನಮ್ಮ ಮನೆ
ವಿದ್ಯುತ್ ಪ್ಲಗ್ಗಿಗೂ ಸಿಕ್ಕಿಸಬಹುದು
ಎನ್ನುವಷ್ಟು ಸರಳ. ಆದರೆ
ಅದು 110 V, 60 HZ. ನಮ್ಮಲ್ಲಿ
ಜಾಲ ಇರೋದು 220 V 50 Hz.
ಅದುದರಿಂದ ನಮ್ಮಲ್ಲಿ ಹಾಗೆಯೇ ಉಪಯೋಗಿಸುವಂತಿಲ್ಲ. ಎರಡು ಮೂರು
ವರ್ಷದಿಂದ ಅವರಿಗೆ ಪತ್ರ ಬರೆಯುತ್ತಲೇ
ಇದ್ದೇನೆ, ನಮಗಾಗುವ ಸಾಮಾನು ತಯಾರಾಗುವಾಗ
ಹೇಳಿ. ಅದರ ಹಿಂದಿರುವ ಒಬ್ಬರು
ರಘು ಬೇಲೂರು
ನಮ್ಮವರು ನಾನಿವರೊಂದಿಗೆ ಪತ್ರವ್ಯವಹಾರ ನಡೆಸಿಲ್ಲವಾದರೂ ಅವರಿಗೆ
ಊರ ನೆನಪಿದ್ದರೆ ? ತನ್ನ ಕೊಡುಗೆ
ಇರಲೆಂದು ಅನಿಸಿದರೆ ? ಏನೊ
ಒಂದು ಆಸೆ.
ಈಗ ರಾತ್ರಿನಾ ? ಹಾಗಾದರೆ
ಮುಂದಿನ ಕೊಂಡಿಗಳ ಕ್ಲಿಕ್ಕಿಸಿ. ಅಮೇರಿಕದ
ಕಲಿಫೊರ್ನಿಯದಲ್ಲಿ ಒಬ್ಬರ ಮನೆಯಲ್ಲಿ ಅಳವಡಿಸಿದ
ಫಲಕಗಳಲ್ಲಿ ವಿದ್ಯುತ್ ಎಷ್ಟು
ತಯಾರಾಗುತ್ತದೆ ವಿವರವಾಗಿ ನೋಡ
ಬಹುದು. ಕೊಂಡಿ ಒಂದು ಮತ್ತು ಕೊಂಡಿ ಎರಡು.
ಅವರು ಫಲಕಗಳ ಹಾಕಿದ
ಕಥೆ ಇಲ್ಲಿದೆ.
ಮೇಲಿನ ಚಿತ್ರ ಎಲ್ ಇ ಡಿ ದೀಪಗಳಿಂದ ಅಲಂಕರಿಸಿದ ಜಪಾನಿನ ಬತ್ತದ ಗದ್ದೆ. ಚಿತ್ರವನ್ನು ಕ್ಲಿಕ್ಕಿಸಿದರೆ ದೊಡ್ಡ ಚಿತ್ರ ನೋಡಬಹುದು. ಇದರ ಮೂಲ ವರದಿ ಹಾಗೂ ಹೆಚ್ಚಿನ ಚಿತ್ರಗಳಿಗೆ ಇಲ್ಲಿ ಕೊಂಡಿ ಅಳವಡಿಸಿದ್ದೇನೆ. . ಈ ದೀಪಗಳ ಸೌರ ವಿದ್ಯುತ್ ಉಪಯೋಗಿಸಿ ಉರಿಸಲಾಗುತ್ತದೆ ಎನ್ನುತ್ತದೆ ಪತ್ರಿಕಾ ವರದಿ.
ಈ ಸೌರ ವಿದ್ಯುತ್ ವಿಚಾರ ನಾನು ನಾಲ್ಕು ವರ್ಷ ಮೊದಲು ಎರಡು ಬಾರಿ ಬರೆದಿದ್ದೇನೆ. ಅವುಗಳ ಕೊಂಡಿ ಇಲ್ಲಿವೆ ಒಂದು ಸೌರ ವಿದ್ಯುತ್ ಅವಕಾಶಗಳು ಎರಡು ಗ್ರಾಮೀಣ ಪ್ರದೇಶಗಳಿಗೆ ಸೌರ ವಿದ್ಯುತ್ ಉತ್ಪಾದನಾ ಅವಕಾಶ ಅನಂತರದ ವಿಚಾರವಷ್ಟೇ ಇಲ್ಲಿ ಬರೆದಿರುವೆ.
ಈ ಸೌರ ವಿದ್ಯುತ್ ವಿಚಾರ ನಾನು ನಾಲ್ಕು ವರ್ಷ ಮೊದಲು ಎರಡು ಬಾರಿ ಬರೆದಿದ್ದೇನೆ. ಅವುಗಳ ಕೊಂಡಿ ಇಲ್ಲಿವೆ ಒಂದು ಸೌರ ವಿದ್ಯುತ್ ಅವಕಾಶಗಳು ಎರಡು ಗ್ರಾಮೀಣ ಪ್ರದೇಶಗಳಿಗೆ ಸೌರ ವಿದ್ಯುತ್ ಉತ್ಪಾದನಾ ಅವಕಾಶ ಅನಂತರದ ವಿಚಾರವಷ್ಟೇ ಇಲ್ಲಿ ಬರೆದಿರುವೆ.
1 comment:
ನಮ್ಮ ಈಗಿನ ಶೈಲಿಯ ಜೀವನಕ್ಕೆ ಜಲ, ಉಷ್ಣ ಮತ್ತು ಪರಮಾಣು ವಿದ್ಯುತ್ ಮಾತ್ರ ಸಾಕಾಗಬಹುದು, ಈ ಸೌರ ಏನಿದ್ದರೂ, ವಿಕೇ೦ದ್ರೀಕೃತ ಬಳಕೆಗೆ ಸೂಕ್ತವಾಗುವ೦ತೆ ಉತ್ಪಾದನೆಯೂ ವಿಕೇ೦ದ್ರೀಕೃತವೇ ಆದರಷ್ಟೇ ಸುಸ್ಥಿರ ಸೈ. ಸೌರ ಫಲಕಗಳ ಉಪಯುಕ್ತ ಆಯುಷ್ಯ ಸುಮಾರು ೨೦ ವರ್ಷ ಮೀರುವುದಿಲ್ಲ ಅ೦ತ ಕೇಳಿದ್ದೇನೆ, ಅದರಲ್ಲೂ ಎ೦ಠತ್ತು ವರ್ಷಗಳ ಬಳಿಕ ಉತ್ಪಾದನೆ ಕಮ್ಮಿಯಾಗ್ತದ೦ತೆ, ಹೌದೇ ? ಸೌರ ಫಲಕಗಳ ಬೆಲೆ,ಚೀನಾದ ಹುಚ್ಚು ಸ್ಪರ್ಧೆಯ ದೆಸೆಯಿ೦ದ ಈ ಪಾಟಿ ಇಳಿದಿದೆ ಅ೦ತ ೩-೪ ತಿ೦ಗಳ ಹಿ೦ದೆ ಪೇಪರಲ್ಲಿ ಓದಿದೆ, ತಾತ್ಪರ್ಯ, ಈಗಿನ ದರದಲ್ಲಿ ಮು೦ದೆ ಸಿಗುವ ಗ್ಯಾರ೦ಟೀ ಇಲ್ಲ, ವಿಲೋಮವಾಗಿ ಈಗ ಕಮ್ಮಿ ಬೆಲೆಗೆ ಸಿಕ್ಕಿದ ಮಾಲಿನ ಆಯುಷ್ಯ / ಯೋಗ್ಯತೆಯೂ ಖಾತ್ರಿ ಇಲ್ಲ ಎನ್ನಬಹುದೇ ?
ನರೇ೦ದ್ರ ಮೋದಿಗೆ ರಾಜಕೀಯವಾಗಿ, ಒ೦ದು ಹೊಸ ಅಸ್ತ್ರವಾಗಿ ಝಳಪಿಸಲು ಕಾಲುವೆ ಮೇಲೆ ಸೌರಫಲಕ ಹೊದಿಸುವುದು ಬಳಕೆಯಾಗುವ೦ತೆ ವಿದ್ಯುತ್ ಉತ್ಪಾದನೆಗೂ ಒದಗುವುದು ಎಷ್ಟೋ, ನಾಕಾಣೆ. ಆದರೆ, ನನ್ನ೦ತ ಮೆಸ್ಕಾ೦ ಬಳಕೇದಾರರಿಗೆ, ಮು೦ದಿನ ತಿ೦ಗಳ ಬಳಿಕ ವಿದ್ಯುತ್ ಬರ ಖಾತ್ರಿ ಇರುವವರಿಗೆ, ಮನೆ ಖರ್ಚಿಗೆ, ನಮ್ಮ ಇನ್ವರ್ಟರ್ ನ ಬ್ಯಾಟ್ರಿ ಚಾರ್ಜ್ ಮಾಡಲು, ಸೌರಫಲಕ ಉತ್ತಮ ಉಪಾಯ ಅಲ್ಲವೇ ? ಅದರಲ್ಲಿ ಏನಾದರೂ ಅಡಗಿ ಕುಳಿತ ಸಮಸ್ಯೆ ಇದೆಯೇ ?
Post a Comment