ಹಲವಾರು ಡೈರಿ ಪಾರ್ಮ್ ಗಳನ್ನು ಯುರೋಪಿನಲ್ಲಿ ಸಂದರ್ಶಿಸಿದ ನನಗೆ ಗಂಡು ಕರುಗಳ ವಿಧಿ ಬಗ್ಗೆ ಕುತೂಹಲ. ಅವರಲ್ಲಿ ಪ್ರಶ್ನಿಸಲು ಅದನ್ನು ವಾರಕ್ಕೊಮ್ಮೆ ಬರುವ ಗಂಡುಕರು ಸಾಕುವವರಿಗೆ ಆ ವಾರ ಹುಟ್ಟಿದ ಕೊಡುತ್ತೇವೆ ಎನ್ನುವ ಉತ್ತರ ಸಿಗುತಿತ್ತು. ಕೊನೆಗೆ ನೆದರ್ ಲಾಂಡ್ ನಲ್ಲಿ ಈ ಗಂಡು ಕರುಗಳ ಉಳಿಕೆ ಜೀವನ ಕಣ್ಣಾರೆ ಕಾಣುವ ಅವಕಾಶ ದೊರಕಿತು.
ಅದು ನಿಜಕ್ಕೂ ಘೋರವಾದ ಚಿತ್ರ. ಅವುಗಳನ್ನು ಅಲುಗಾಡಲೂ ಸಾದ್ಯವಿಲ್ಲದ ಪೆಟ್ಟಿಗೆಗಳಲ್ಲಿ ಕೂಡಿಡುತ್ತಾರೆ. ಅನಾವಶ್ಯಕ ಕಾಲಾಡಿಸಿ ಕೊಬ್ಬು ಕರಗಿಸುವುದು ಬೇಡವೆಂದು ಸಾಕುವವರ ಉದ್ದೇಶ. ಕೋಳಿ ಸಾಕಣೆಯಲ್ಲೂ ಇದೇ ಚಿತ್ರ ಕಂಡರೂ ಕೋಳಿಗಳೊಂದಿಗೆ ಬಾವನಾತ್ಮಕ ಸಂಬಂದ ನಮಗೆ ಇರುವುದಿಲ್ಲ. ಕರುಗಳ ಉಳಿಕೆ ಜೀವನ ಇಂತಹ ಗೂಡಿನಲ್ಲಿ ನಿಂತುಕೊಂಡು ತಿನ್ನುವುದು ಸಗಣಿ ಹಾಕುವುದಷ್ಟೇ ಕೆಲಸ. ಕರುಗಳ ಕಣ್ಣಲ್ಲಿ ಕಾಣುವ ನೋವು, ಕೆಲವು ಕ್ಷಣ ಕೇಳಿದ ರೋದನೆ ತಿಂಗಳುಗಟ್ಟಲೆ ಮನಸ್ಸಿನಿಂದ ಮಾಸದು.
ಇರಾಕಿನಲ್ಲಿ ಅಮೇರಿಕದ ಸೇನೆಯೂ ಕೈದಿಗಳನ್ನು ಇಂತಹ ಮೂರಡಿ ಉದ್ದ ಮೂರಡಿ ಅಗಲದ ಹಾಗೂ ಆರಡಿ ಎತ್ತರದ ಅಲುಗಾಡಲೂ ಸಾದ್ಯವಿಲ್ಲದಂತಹ ಚಿಕ್ಕ ಗೂಡಿನಲ್ಲಿ ನಿಲ್ಲಿಸುವ ಕ್ರೂರ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಸುದ್ದಿ ಬೆಳಕಿಗೆ ಬಂದ ನಂತರ ಸಂದರ್ಶನವೊಂದರಲ್ಲಿ ಅಂತಹ ಕ್ರೂರ ಸನ್ನಿವೇಷ ಎನಿಲ್ಲ, ಹೆಚ್ಚೆಂದರೆ ಒಮ್ಮೆಗೆ ಹನ್ನೆರಡು ಘಂಟೆ ನಿಲ್ಲಿಸಲಾಗುತ್ತದೆ ಹಾಗೂ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಈ ಪಂಜರಗಳ ಗಮನಿಸಲಾಗುತ್ತದೆ ಎನ್ನುವ ಸಮರ್ಥನೆ ನೀಡಲಾಗಿದೆ.
ಅಮೇರಿಕದವರೊಬ್ಬರು ಮಾಹಿತಿ ಹಕ್ಕಿನಲ್ಲಿ ಕೋರಿದ ಪ್ರಕಾರ ಸೇನೆ ಅಂತಹ ಆದರೆ ಅದಕ್ಕಿಂತ ದೊಡ್ಡ ಪೆಟ್ಟಿಗೆಗಳ ಕೆಲವು ಅಸ್ಪಷ್ಟ ಬಾವಚಿತ್ರಗಳ ಇತ್ತೀಚೆಗೆ ಕಳುಹಿಸಿಕೊಟ್ಟಿದೆ. ಅಮೇರಿಕದ ಈ ಕೃತ್ಯ ಖಂಡನೀಯ. ಆದರೆ ಈ ಕೈದಿಗಳ ಪರೀಸ್ಥಿತಿ ಪಶ್ಚಿಮದ ದೇಶದಲ್ಲಿ ಜನಿಸುವ ಗಂಡುಕರುಗಳಿಗೆ ಬಿನ್ನವಲ್ಲ ಅನ್ನಿಸುತ್ತದೆ. .
Saturday, August 09, 2008
Subscribe to:
Post Comments (Atom)
No comments:
Post a Comment