

ಎರಡನೇಯ ತಲೆಮಾರಿನ ಸುದಾರಣೆಯಲ್ಲಿ ಮೇಲಿನ ಚಿತ್ರದಲ್ಲಿರುವಂತೆ ನಿಮ್ಮ ಮೀಟರ್ ಮೇಲೆ ಒಂದು ಚಿಕ್ಕ ಮಾಹಿತಿ ಸಂಗ್ರಾಹಕ ಮತ್ತು ಮನೆಯಲ್ಲಿ ಅನುಕೂಲವಿರುವಲ್ಲಿ ಅಳವಡಿಸುವ ಕೆಳಗಿನ ಚಿತ್ರದಲ್ಲಿರುವಂತಹ ಡಿಸ್ ಪ್ಲೆ. ಕಾರ್ಡ್ ಲೆಸ್ ಪೋನ್ ಕೆಲಸ ಮಾಡುವಂತೆ ಸಂಗ್ರಾಹಕದಿಂದ ಮಾಹಿತಿ ನಿರಂತರವಾಗಿ ಹರಿದು ಬರುತ್ತದೆ. ಇದನ್ನು ನಮಗೆ ಅನುಕೂಲವಾಗುವ ಗೋಡೆಯಲ್ಲಿ ಅಳವಡಿಸಬಹುದು, ಮೇಜಿನ ಮೇಲೆ ಇಡಬಹುದು. ಒಮ್ಮೆ ಇದನ್ನು ನೋಡಲು ನಾವು ಆ ಕ್ಷಣ ಉಪಯೋಗಿಸುವ ವಿದ್ಯುತ್ ಘಂಟೆಗೆ ಎಷ್ಟು ಹಣವಾಗುತ್ತದೆ ಎನ್ನುವುದನ್ನೊ ಅದು ಸ್ಪಷ್ಟವಾಗಿ ತೋರಿಸುತ್ತದೆ. ಸ್ವಾಬಾವಿಕವಾಗಿ ಪೋಲಾಗುವಲ್ಲಿ ಬ್ರೇಕ್ ಹಾಕಲು ಅರಿವು ಹಾಗೂ ಪ್ರೇರಣೆ ದೊರಕುತ್ತದೆ.
ಅಮೇರಿಕದಲ್ಲಿ ಇದರ ಬೆಲೆ ಸುಮಾರು ಐದು ಮುಕ್ಕಾಲು ಸಾವಿರ ರೂಪಾಯಿ ಅನ್ನಬಹುದು ( USD 135) ಅಲ್ಲಾದರೆ ಉಳಿತಾಯವೇ ಈ ಹಣವನ್ನು ದುಡಿದುಕೊಡುತ್ತದಂತೆ. ನಮ್ಮಲ್ಲೂ ಇದು ಕೈಗೆಟಕುವ ಬೆಲೆಗೆ ಬೇಗನೆ ಸಿಗುವಂತಾಗಲಿ.
ವಿವರಗಳಿಗೆ : http://fivepercent.us/2008/07/28/cent-a-meter-centometer-or-power-cost-meter-pays-for-itself/
No comments:
Post a Comment