ಇದು ದಕ್ಷಿಣ ಕೊರಿಯಾದ ಜಿಂಡೊ ಎಂಬಲ್ಲಿ ಕಂಡು ಬರುವ ನೈಸರ್ಗಿಕ ಮರಳ ದಾರಿ. ಸುಮಾರು ಎರಡು ಮುಕ್ಕಾಲು ಕಿಲೋಮೀಟರ್ ಉದ್ದದ ಈ ಸೇತುವೆ ದಾರಿ ವರುಷಕ್ಕೆ ಒಂದೆರಡು ಬಾರಿ ಸಮುದ್ರದಿಂದ ಮೇಲೇಳುತ್ತದೆ. ಜ್ಯೋತಿಷಿಗಳೂ ವಿಜ್ನಾನಿಗಳೂ ಸಮುದ್ರದ ಇಳಿತವನ್ನು ಮೊದಲೇ ನಿರ್ಣಯಿಸುತ್ತಾರಂತೆ. ಅಲೆಗಳ ಮಟ್ಟ ಕೆಳಗಿರುವ ಸುಮಾರು ಒಂದು ಘಂಟೆ ಸಮಯ ಈ ದಾರಿಯಲ್ಲಿ ನಡೆಯುತ್ತಾ ಆಚೆ ದಡ ತಲಪಬಹುದು. ಇದೊಂದು ಹಬ್ಬವನ್ನಾಗಿ ಅವರೀಗ ಆಚರಿಸುತ್ತಾರೆ. ಮೊಸೆಸ್ ಪವಾಡ ಎಂದು ಕರೆಯಲ್ಪಡುವ ಈ ವರ್ಷ ಎಪ್ರಿಲ್ 17 ಕ್ಕೆ ನಡೆದ ಈ ಹಬ್ಬಕ್ಕೆ ಪ್ರಪಂಚದ ಹಲವು ಮೂಲೆಗಳಿಂದ ಜನ ದಾವಿಸಿ ಬರುವರಂತೆ.
ಇಂದು ಕಾಣಸಿಗುವ ಕುರುಹುಗಳ ಗಮನಿಸಿದರೆ ಎರಡು ಮೂರು ಶತಮಾನಗಳ ಹಿಂದೆ ಬಾರತ ಮತ್ತು ಲಂಕೆಯ ಮದ್ಯೆ ಈ ರೀತಿಯ ದಾರಿ ಖಂಡಿತ ಇದ್ದಿರಬಹುದು. ನಮ್ಮ ಪೂರ್ವಿಕರು ನಡೆದು ಶ್ರಿಲಂಕೆಗೆ ಹೋದರು ಎಂದು ಇತಿಹಾಸದ ಪುಟ ತೆರೆದಿಡುವ ತಮಿಳರಿದ್ದಾರಂತೆ. ಕ್ರಮೇಣ ಪ್ರಕೃತಿಕ ಕಾರಣಗಳಿಗೆ ಈ ಬಾರತಕ್ಕೆ ಶ್ರಿಲಂಕವನ್ನು ಲಿಂಕಿಸುವ ಈ ಶ್ರಿ ರಾಮಚಂದ್ರ ರಾಜ ರಸ್ತೆ ಸಮುದ್ರ ಪಾಲಾಗಿರಬಹುದು. ರಾಜಕೀಯ ಕಾರಣಗಳಿಂದ ವಿಷಯ ಎಷ್ಟು ಗೊಜಲಾಗಿದೆ ಎಂದರೆ ಎಲ್ಲರೂ ಒಪ್ಪುವಂತಹ ಸತ್ಯ ಸಂಗತಿ ಮುಂದಿನ ದಿನಗಳಲ್ಲಿ ಹೊರಬರಲು ಸಾದ್ಯವೇ ಇಲ್ಲ ಎನ್ನುವುದು ಖಚಿತ. .
1 comment:
Interesting..
Post a Comment