ಇತ್ತೀಚಿಗೆ ಹಲವು ವಾರಗಳಿಂದ ಜಿಪಿಎಸ್ ಸಂಬಂದಿಸಿದ ವಿಚಾರಗಳೇ ನನ್ನ ತಲೆಯಲ್ಲಿ ಸುಳಿದಾಡುತ್ತಿದೆ. ಜಿಪಿಎಸ್ ಮಾಪಿನಿಂದ ಸಮಾಜಕ್ಕೆ ಹಲವು ಪ್ರಯೋಜನಗಳಿವೆ., ನಮ್ಮ ದೈನಂದಿನ ಬಳಕೆಗೆ ಮಾತ್ರವಲ್ಲ, ಪೋಲೀಸ್, ಅಗ್ನಿ ಶಾಮಕ ದಳ ಮತ್ತು ತುರ್ತು ವೈದ್ಯಕೀಯ ನೆರವು ದಾವಿಸಲು ಜಿಪಿಎಸ್ ನಕ್ಷೆಗಳು ಸಹಾಯಕವಾಗಬಹುದು ಎನ್ನುವ ವಿಚಾರ ಮನದಲ್ಲಿ ಸುಳಿದಾಡುತಿತ್ತು. ಆದರೆ -
ಫ್ರಾನ್ಸಿನಲ್ಲಿ ಜಿಪಿಎಸ್ ಬಳಕೆಯಲ್ಲಿ ಹೊಸತನ ತೋರಿದ್ದಾರೆ. ಊರಳಗಿನ ರಸ್ತೆಗಳಿಗೆ ನಾಯಿ ಮಲ ಕೆಟ್ಟ ಹೆಸರು ತರುತಿತ್ತು. ಮುಂದಿನ ೨೦೧೨ರ ಒಲಂಪಿಕ್ ನಡೆಸುವ ಅವಕಾಶ ತಪ್ಪಿದ್ದು ಸಹಾ ನಾಯಿ ಹೇಲಿನಿಂದಾಗಿ ಎನ್ನುವ ಗುಮಾನಿ ದಟ್ಟವಾಗಿದೆ. ನಮ್ಮ ಎರ್ ಬಸ್ ವಿಮಾನ ಗೊತ್ತಲ್ಲ- ಅದು ಜೋಡಣೆಯಾಗುವ ಟೌಲೋಸ್ ಪಟ್ಟಣದಲ್ಲಿ ಇದು ಪ್ರಥಮವಾಗಿ ಜಾರಿಗೆ ಬಂದಿದೆ. ಪೊಲೀಸ್ ಹಾಗೂ ಪಟ್ಟಣದ ಅಧಿಕಾರಿಗಳಿಗೆ ಕೆಮರ ಮತ್ತು ಜಿಪಿಎಸ್ ಕೊಡಲ್ಪಟ್ಟಿತು. ಅವರು ನಾಯಿ ಮಲ ಕಂಡಾಗ ತುರ್ತಾಗಿ ಪೋಟೊ ಕ್ಲಿಕ್ಕಿಸಿ ಪೌರ ಕಾರ್ಮಿಕರಿಗೆ ರವಾನಿಸಬೇಕು. ಪೌರ ಕಾರ್ಮಿಕರು ತಕ್ಷಣ ವಾಹನದಲ್ಲಿ ಬಂದು ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ. ಈಗ ಪರೀಸ್ಥಿತಿ ಉತ್ತಮಗೊಂಡಿದೆ ಎನ್ನುತ್ತಾರೆ ಅಲ್ಲಿನ ವಕ್ತಾರರು.
ಹತ್ತು ದಿನ ಹಿಂದೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಗೆಗೊಂದು ಗೂಗಲ್ ಮಾಪಿನ ತಪ್ಪು ಬೊಟ್ಟುಮಾಡಿದ್ದೆ. ಅದೀಗ ಹೆಚ್ಚಿನಂಶ ಸ್ವಯಂಸೇವಕರೊಬ್ಬರಿಂದ ತಿದ್ದಲ್ಪಟ್ಟಿದೆ. ನನ್ನ ಬ್ಲೋಗ್ ಬರಹದ ಕಾರಣ ಇದ್ದರೂ ಇರಬಹುದು. ಅದರೆ ಗೂಗಲ್ ಸಂಸ್ಥೆಯ ಹಕ್ಕುಗೊಳಪಟ್ಟಿರುವ ಬೂಪಟಕ್ಕೆ ನಮ್ಮ ಸೇವೆ ಸಲ್ಲಿಸುವುದರ ಬದಲಿಗೆ ಸಮಾಜದ ಒಳಿತಿಗಾಗಿ ಸ್ಥಾಪನೆಗೊಂಡಿರುವ ಈ ಒಪನ್ ಸ್ಟ್ರೀಟ್ ಬೂಪಟಕ್ಕೆ ಕೈಜೋಡಿಸಿದರೆ ಉತ್ತಮ ಅನಿಸುತ್ತದೆ. ಗೂಗಲ್ ನಲ್ಲಿ ನಮ್ಮೂರಿನಲ್ಲಿಯೇ ಇನ್ನೂ ಸುಮಾರು ತಪ್ಪುಗಳು ಉಳಿದಿವೆ.
ತಿಂಗಳ ಹಿಂದೆ ಮಂಗಳೂರು ಪುತ್ತೂರು ರಸ್ತೆಗೆ ಸಿಮಿತವಾಗಿದ್ದ ಒಪನ್ ಸ್ಟ್ರೀಟ್ ನಕ್ಷೆಗೆ ಹಲವಾರು ಉಪಯುಕ್ತ ಒಳರಸ್ತೆಗಳ ಸೇರಿಸಿದ್ದೇನೆ. ಪುತ್ತೂರಿಗೆ ಮಂಗಳೂರು ಹಾಸನ ರಸ್ತೆಯಿಂದ ಬಂದು ಸೇರುವುದು ಒಂದು ಪೆರ್ನೆ ಬನ್ನೂರು ಒಳರಸ್ತೆ. ಉಪ್ಪಿನಂಗಡಿಯಿಂದ ಪುತ್ತೂರು ಇನ್ನೂ ಸಂಪರ್ಕಿಸಿಲ್ಲ. ನಾನು ಎಲ್ಲ ರಸ್ತೆಗಳ ಜಿಪಿಎಸ್ ಟ್ರಾಕ್ ಸಂಗ್ರಹಿಸಿದ್ದು ಟ್ರೈಕ್ ಓಡಾಟದಲ್ಲಿಯೇ.
ಜರ್ಮನಿಯ ಸರಕಾರ ಹತ್ತಿರದ ಓಡಾಟಗಳಿಗೆ ಕಾಲ್ನಡುಗೆ ಮತ್ತು ಸೈಕಲ್ ಗಳನ್ನು ಪ್ರೋತ್ಸಾಹಿಸುತ್ತದೆ. ಬಿತ್ತಿಪತ್ರಗಳು ಸಿನೆಮಾ ಕ್ಲಿಪ್ ಗಳು ತಯಾರಾಗಿವೆ. ಸಿನೆಮಾತಾರೆಯರು ಕ್ರಿಡಾಪಟುಗಳು ಕೈಜೋಡಿಸಿದ್ದಾರೆ. ಜರ್ಮನ್ ಬಾಷೆಯಲ್ಲಿರುವ ಅವರ ಘೋಷವಾಕ್ಯ ಸಾಮಾನ್ಯವಾಗಿ Turn on your brain, turn off your motor , For zero CO2 on short trip ಅನ್ನುತ್ತದೆ. ಅದನ್ನು ಅರ್ಥ ಕೆಡದಂತೆ ಕನ್ನಡಕ್ಕೆ ಅನುವಾದಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದು. ನನ್ನ ಗಮನಕ್ಕೆ ಬಂದ ಪುಟ್ಟ ಸಿನೆಮಾ ಕ್ಲಿಪ್ ಇಲ್ಲಿ ಅಂಟಿಸಿದ್ದೇನೆ.
ಕಾರಲ್ಲಿ ಕೂತವನಿಗೆ ......
ಹೆಚ್ಚು ಅಗಲವಿರುವ ಮೇಲಿನ ಚಿತ್ರ ನೇರ ವೀಕ್ಷಿಸಲು http://is.gd/gm4oL ಕ್ಲಿಕ್ಕಿಸಿ
Wednesday, October 27, 2010
Subscribe to:
Post Comments (Atom)
3 comments:
ಶೀಘ್ರದಲ್ಲಿ ನಮ್ಮಲ್ಲೂ ಬರಬಹುದು.
nice article sir...:):)
good one sir waiting for IT :-)Murali
Post a Comment