Friday, February 18, 2011

ಉದಯವಾಣಿಯಲ್ಲೊಂದು ನನ್ನ ಸಂದರ್ಶನ



ಮೊನ್ನೆ  ಬಾನುವಾರ  ಬೆಂಬಲ ವಾಹನದಲ್ಲಿರುವ  ಗೆಳೆಯರೊಂದಿಗೆ   ಒಂದು  ತ್ರಿಚಕ್ರ  ಸವಾರಿ  ಕೈಗೊಂಡಿದ್ದೆ. ಗುರುವಾಯನಕೆರೆಯಿಂದ  ಮುಂದಿನ   ತಿರುವಿನಲ್ಲಿ  ತ್ರಿ ಚಕ್ರ ಹಾಗೂ  ನಾನೊ ಕಾರುಗಳ   ನಿಲ್ಲಿಸಿ      ನಾರಾವಿ ರಸ್ತೆಯೋ  ವೇಣೂರು  ರಸ್ತೆಯೋ  ಎಂದು     ಚರ್ಚಿಸುತ್ತಿದ್ದೆವು.   ನಮ್ಮ  ಬೆನ್ನಟ್ಟಿದ   ಟಿವಿ  ವರದಿಗಾರರೊಬ್ಬರು ಆಗ  ಮದ್ಯೆ ಬಾಯಿ ಹಾಕಿದರು – ಎರಡೂ  ಅಲ್ಲ.  ಮೊದಲು  ನನಗೊಂದು ಸಂದರ್ಶನ.   

ಆಗ  ನನಗೊಂದು  ಅಲೋಚನೆ ಹೊಳೆಯಿತು.  ರಂಜನ್ ರಾವ್  ಯೆರ್ಡೂರರ  ಮನೆ  ಪಕ್ಕದಲ್ಲಿಯೇ  ಇದೆ.  ಅವರನ್ನು    ಮಾತನಾಡಿಸಿ  ಇಪ್ಪತ್ತು  ವರ್ಷ  ದಾಟಿದೆ.     ಹಾಗೆ  ಅವರನ್ನು  ಮಾತನಾಡಿಸಿದಂತೆಯೂ  ಆಯಿತು.  ಇವರಿಗೊಂದು   ಸಂರ್ದರ್ಶನ   ಸಿಕ್ಕಂತೆಯೂ  ಆಯಿತು.  ಹಾಗೆ  ನನ್ನ  ಬಾಟರಿ ಸ್ವಲ್ಪ ಚಾರ್ಜು ತುಂಬಿಸಿಕೊಂಡಂತೆಯೂ   ಆಯಿತು.   ಹಾಗೆ ಸರ್ವಸಮ್ಮತವೆನಿಸುವ  ಸೂತ್ರ  ತಯಾರಾಯಿತು.  ಅಲ್ಲಿಯೇ  ಸಿಕ್ಕ ರಂಜನ  ರಾಯರ  ಜತೆ ಕೆಲಸ ಮಾಡುವರೊಬ್ಬರಲ್ಲಿ ವಿಚಾರಿಸಲು   ಸಂಜೆ  ಬೆಂಗಳೂರಿಗೆ ಹೋಗುತ್ತಾರೆ  ಎಂದು ಉತ್ತರ ಸಿಕ್ಕಿ   ನಮ್ಮ  ಮೆರವಣಿಗೆ  ಆ ಕಡೆಗೆ ತಿರುಗಿತು. 

ನಾವಲ್ಲಿಗೆ  ತಲಪುವಾಗ  ರಂಜನ್ ರಾವ್  ಬೆಂಗಳೂರ ದಾರಿಯಲ್ಲಿದ್ದರೂ  ನಮಗೆ  ತೊಂದರೆಯಾಗಲಿಲ್ಲ.     ಟವಿ   ವರದಿಗಾರರು   ಸಂಚಾರವಾಣಿಯಿಂದ  ರಿಂಗಿಸಿ  ಸ್ಥಳೀಯ   ಪತ್ರಿಕೆ ವರದಿಗಾರರನ್ನು ಕರೆಸಿದರು.  ಹಾಗೊಂದು  ಅನಿರೀಕ್ಷಿತ  ಸಂದರ್ಶನ ಲಕ್ಷ್ಮಿ  ಮಚ್ಚೀನರಿಂದ   ನಡೆಯಿತು. [ ಇವರೋ  ತಮ್ಮ ಹೆಸರಿನ  ಉತ್ತರ ಬಾಗದಲ್ಲಿರುವ  ಗಂಡು ಹೆಸರನ್ನು  ಮುಚ್ಚಿಟ್ಟು  ಅಪರಿಚತರಿಗೆ  ಗೊಂದಲ ಉಂಟುಮಾಡುತ್ತಾರೆ ]    ಅಪಘಾತಕ್ಕೆ ಸಿಲುಕಿ ಅವರ ಹೆಚ್ಚಿನ  ಕೈಬೆರಳುಗಳೂ   ಈಗ  ಬಂದನದಲ್ಲಿದ್ದರೂ   ಟೈಪಿಸಿ    ಈ  ಬರಹ ತಯಾರು ಮಾಡಿದ್ದಾರೆ.  ಅದುದರಿಂದ  ಇದರಲ್ಲಿರುವ   ಸಣ್ಣ ಪುಟ್ಟ    ತಪ್ಪುಗಳನ್ನೆಲ್ಲ  ಕ್ಷಮಿಸೋಣ.    

1 comment:

Mohith said...

ಲೇಖನ ಓದಿದೆ. ಚೆನ್ನಾಗಿ ಬರೆದಿದ್ದಾರೆ .