Thursday, February 10, 2011

ಮನುಷ್ಯನನ್ನು ಮೃಗವಾಗಿಸುವ ಕಾರು ಪ್ರೀತಿ

ಕಾರು  ಚಾಲನೆ  ಹೋಲಿಸಿ ನೋಡಿದರೆ  ನನ್ನ ತ್ರಿ ಚಕ್ರ ಸಿಂಹಾಸನದಲ್ಲಿ  ಪ್ರಯಾಣ   ಬಹಳ  ಕುಶಿಯಾಗುತ್ತದೆ.  Shock absorber  ಇಲ್ಲದ  ಕಾರಣ    ರಸ್ತೆಯ  ಗುದ್ದಾಟ  ನೇರವಾಗಿ ಬೆನ್ನಿಗೆ ತಲಪಿದರೂ   ಚಾಲನೆ  ಬಹಳ ಮಜವಾಗಿರುತ್ತದೆ.  ಜನರ  ನಗುಮುಖ  ಕೈಸನ್ನೆಗಳಿಗೆ  ಸ್ಪಂದಿಸಲು ಸಾದ್ಯವಾಗುತ್ತದೆ.    ಕೊಂಚ  ನಿಲ್ಲಿ, ನಾನು ಮೊದಲು ದಾಟುತ್ತೇನೆ ಎಂದು  ಕೈಸನ್ನೆ ಮಾಡಿದಾಗ  ವಾಹನ   ಚಾಲಕರು ನಗು ಮುಖದಿಂದಲೇ    ದಾರಿ ಬಿಡುತ್ತಾರೆ.  ನನ್ನ ಮತ್ತು ವಾಹನದ  ತೂಕ  ಒಟ್ಟು  ಕೂಡಿಸಿದರೂ    ನೂರು ಕಿಲೊ ಮೀರದ  ಕಾರಣ ನಾವು  ಯಾರಿಗೂ  ಮರಣಾಂತಿಕವಾಗಿರುವುದಿಲ್ಲ  ಅನ್ನುವುದೂ  ನನಗೆ   ಸಂತಸದ ವಿಚಾರ.   

ಇತ್ತೀಚಿನ  ವರ್ಷಗಳಲ್ಲಿ  ನಾನು ವಾಹನ  ಚಾಲನೆ  ಕಡಿಮೆ ಮಾಡುತ್ತಾ  ಬಂದಿದ್ದೇನೆ.  ಮೊದಲನೆಯದಾಗಿ  ನನ್ನ ಪರಿಸರಾಸಕ್ತಿಯಿಂದಾಗಿ  ಇಂದನ  ದಹನ  ನನಗೆ   ಒಗ್ಗುವುದಿಲ್ಲ. ಎರಡನೆಯದಾಗಿ  ದೈಹಿಕವಾಗಿ  ಸೋಲುತ್ತಾ ಬಂದಂತೆ  ನನ್ನ  ವಾಹನ  ಮೇಲಿನ   ನಿಯಂತ್ರಣ  ಕಳಪೆಯಾಗುತ್ತಾ ಹೋಗುತ್ತಿದೆ.  ಮೂರನೆಯದಾಗಿ     ಸದಾ ಬಾದಿಸುವ  ನನ್ನ ದೈಹಿಕ  ನೋವು  ಜತೆ  ಸೇರುವ  ಮಾನಸಿಕ  ಒತ್ತಡ   ಪ್ರಯಾಣವನ್ನು     ಅಸಹನೀಯವನ್ನಾಗಿ ಮಾಡುತ್ತದೆ.    ಎಲ್ಲ  ಕಾರಣಗಳಿಂದಲೂ    ನಾನು     ಮಾನಸಿಕವಾಗಿ ಹಿಂಸೆ ಪಡುತ್ತೇನೆ.  ಆದರೆ  ಗ್ರಾಮಾಂತರ  ಪ್ರದೇಶದ  ವಾಸ್ತವ್ಯ  ಮತ್ತು    ಮಕ್ಕಳ  ಶಾಲೆ  ಅನ್ನುವ  ಅನಿವಾರ್ಯ   ಕಾರಣಗಳಿಂದಾಗಿ  ನಾನು    ವಾಹನ ಚಾಲನೆಯನ್ನು  ಪೂರ್ತಿಯಾಗಿ  ಕೊನೆಗೊಳಿಸಲಿಲ್ಲ.





ವಾಹನ ಚಾಲನೆ  ಜನರನ್ನು  ಎಷ್ಟರ   ಮಟ್ಟಿಗೆ  ಪರಿವರ್ತಿಸುತ್ತದೆ  ಎನ್ನುವುದನ್ನು  ಈ ಅರುವತ್ತು  ವರ್ಷ ಹಿಂದಿನ  cartoon  ಚಿತ್ರ  ಬಹಳ ಚೆನ್ನಾಗಿ  ವಿವರಿಸುತ್ತದೆ.  ವಾಹನ ಚಾಲನೆಗೆ ಕೂತ  ಸರ್ವಶಕ್ತನೆಂಬ  ಭ್ರಮೆ ಹೊತ್ತಿರುವ  ಚಾಲಕನಿಗೆ  ಎಲ್ಲವೂ  ತಡೆ ಎನಿಸಲು ಪ್ರಾರಂಬವಾಗುತ್ತದೆ.  ಅಸಹನೆ ಉಂಟಾಗುತ್ತದೆ.  ಈ ರೀತಿ ಪರಿವರ್ತನೆಯಾಗುವ ಬದಲಿಗೆ  ನಾನು  ವಾಹನ ಚಾಲನೆಯಿಂದಲೇ   ದೂರವಿರ ಬಯಸುತ್ತೇನೆ.   ಇದರಲ್ಲಿ  ನಿಮಗೂ  ಸಂದೇಶವಿದೆಯೆಂದು ಅನಿಸಿದರೆ  ನನಗದು  ಕುಶಿಯಾಗುವ  ವಿಚಾರ.   

2 comments:

Pejathaya said...

ನಮ್ಮೆಲ್ಲರ ಕಾರು ಪ್ರೀತಿ ಖಂಡಿತವಾಗಿ ಇಂದು ಅರುವತ್ತು ಪಾಲು ಹೆಚ್ಚಿದೆ.
ಡಿನ್ಸ್ನೇ ಅವರ ಕಾಲದ ಕಾರ್ಟೂನಿಗಿಂತ ನಾವು ಅರುವತ್ತು ಪಾಲು ಹೆಚ್ಚಿಗೆ ಕ್ರೂರ ಮೃಗಗಳಾಗಿದ್ದೇವೆ.

ಈ ಚರ್ಯೆಗೆ ಕೊನೆ ಎಂದೋ ಗೊತ್ತಿಲ್ಲ.

ತಮ್ಮ ಸಂದೇಶಕ್ಕೆ ಶುಭ ಹಾರೈಕೆಗಳು.

ಪೆಜತ್ತಾಯ

Nanda Kishor B said...

ಚೆಂದದ ಲೇಖನ.