ಇತ್ತೀಚಿನ ವರ್ಷಗಳಲ್ಲಿ ನಾನು ವಾಹನ ಚಾಲನೆ ಕಡಿಮೆ ಮಾಡುತ್ತಾ ಬಂದಿದ್ದೇನೆ. ಮೊದಲನೆಯದಾಗಿ ನನ್ನ ಪರಿಸರಾಸಕ್ತಿಯಿಂದಾಗಿ ಇಂದನ ದಹನ ನನಗೆ ಒಗ್ಗುವುದಿಲ್ಲ. ಎರಡನೆಯದಾಗಿ ದೈಹಿಕವಾಗಿ ಸೋಲುತ್ತಾ ಬಂದಂತೆ ನನ್ನ ವಾಹನ ಮೇಲಿನ ನಿಯಂತ್ರಣ ಕಳಪೆಯಾಗುತ್ತಾ ಹೋಗುತ್ತಿದೆ. ಮೂರನೆಯದಾಗಿ ಸದಾ ಬಾದಿಸುವ ನನ್ನ ದೈಹಿಕ ನೋವು ಜತೆ ಸೇರುವ ಮಾನಸಿಕ ಒತ್ತಡ ಪ್ರಯಾಣವನ್ನು ಅಸಹನೀಯವನ್ನಾಗಿ ಮಾಡುತ್ತದೆ. ಎಲ್ಲ ಕಾರಣಗಳಿಂದಲೂ ನಾನು ಮಾನಸಿಕವಾಗಿ ಹಿಂಸೆ ಪಡುತ್ತೇನೆ. ಆದರೆ ಗ್ರಾಮಾಂತರ ಪ್ರದೇಶದ ವಾಸ್ತವ್ಯ ಮತ್ತು ಮಕ್ಕಳ ಶಾಲೆ ಅನ್ನುವ ಅನಿವಾರ್ಯ ಕಾರಣಗಳಿಂದಾಗಿ ನಾನು ವಾಹನ ಚಾಲನೆಯನ್ನು ಪೂರ್ತಿಯಾಗಿ ಕೊನೆಗೊಳಿಸಲಿಲ್ಲ.
ವಾಹನ ಚಾಲನೆ ಜನರನ್ನು ಎಷ್ಟರ ಮಟ್ಟಿಗೆ ಪರಿವರ್ತಿಸುತ್ತದೆ ಎನ್ನುವುದನ್ನು ಈ ಅರುವತ್ತು ವರ್ಷ ಹಿಂದಿನ cartoon ಚಿತ್ರ ಬಹಳ ಚೆನ್ನಾಗಿ ವಿವರಿಸುತ್ತದೆ. ವಾಹನ ಚಾಲನೆಗೆ ಕೂತ ಸರ್ವಶಕ್ತನೆಂಬ ಭ್ರಮೆ ಹೊತ್ತಿರುವ ಚಾಲಕನಿಗೆ ಎಲ್ಲವೂ ತಡೆ ಎನಿಸಲು ಪ್ರಾರಂಬವಾಗುತ್ತದೆ. ಅಸಹನೆ ಉಂಟಾಗುತ್ತದೆ. ಈ ರೀತಿ ಪರಿವರ್ತನೆಯಾಗುವ ಬದಲಿಗೆ ನಾನು ವಾಹನ ಚಾಲನೆಯಿಂದಲೇ ದೂರವಿರ ಬಯಸುತ್ತೇನೆ. ಇದರಲ್ಲಿ ನಿಮಗೂ ಸಂದೇಶವಿದೆಯೆಂದು ಅನಿಸಿದರೆ ನನಗದು ಕುಶಿಯಾಗುವ ವಿಚಾರ.
2 comments:
ನಮ್ಮೆಲ್ಲರ ಕಾರು ಪ್ರೀತಿ ಖಂಡಿತವಾಗಿ ಇಂದು ಅರುವತ್ತು ಪಾಲು ಹೆಚ್ಚಿದೆ.
ಡಿನ್ಸ್ನೇ ಅವರ ಕಾಲದ ಕಾರ್ಟೂನಿಗಿಂತ ನಾವು ಅರುವತ್ತು ಪಾಲು ಹೆಚ್ಚಿಗೆ ಕ್ರೂರ ಮೃಗಗಳಾಗಿದ್ದೇವೆ.
ಈ ಚರ್ಯೆಗೆ ಕೊನೆ ಎಂದೋ ಗೊತ್ತಿಲ್ಲ.
ತಮ್ಮ ಸಂದೇಶಕ್ಕೆ ಶುಭ ಹಾರೈಕೆಗಳು.
ಪೆಜತ್ತಾಯ
ಚೆಂದದ ಲೇಖನ.
Post a Comment