ಇತ್ತೀಚಿನ ದಿನಗಳಲ್ಲಿ
ನನ್ನ ಮೇಲೆ ಬಹಳ ಪ್ರಬಾವ ಬಿದ್ದಿರುವ
ವ್ಯಕ್ತಿಯೊಬ್ಬರು ಎಂದರೆ ಕಲಾವಿದೆ ಹಾಗೂ ಪರಿಸರ ಹೋರಾಟಗಾರ್ತಿ ಕೆನಡಾ ದೇಶದ ಫ್ರಾಂಕೆ ಜೇಮ್ಸ್. ಅವರ ಚಿತ್ರ ಪ್ರಬಂದಗಳು ಪರಿಸರಾಂದೋಲನಗಳು ಅಧ್ಬುತ ಎನ್ನಬೇಕು. ಸುಮಾರು ಎರಡು ವರ್ಷಗಳಿಂದ ಇವರ ಚಟುವಟಿಕೆ ಮೇಲೆ ಗಮನವಿಟ್ಟಿರುವ ನಾನು ಈಗ ಅನಿಸಿಕೆ ಹಂಚಿಕೊಳ್ಳುತ್ತ್ತಿದ್ದೇನೆ.
ಕಾರು ಹೊಂದಿದ
ಕುಟುಂಬದಿಂದ ಬದಲಾವಣೆಯಾಗುವಾಗ ಏನೆಲ್ಲ
ಎದುರಿಸಬೇಕು ಅನ್ನುವುದನ್ನು ಅವರ
ಮಾತುಗಳಲ್ಲಿಯೇ ಕೇಳಬೇಕು, ಅಲ್ಲ
ಚಿತ್ರಕಥೆ ಓದಬೇಕು. ದೊಡ್ಡ
ಹಡಗಿನಂತಹ ಕಾರು ಅವರಲ್ಲಿತ್ತು. ಡೆವಿಡ್ ಸುಜುಕಿ
ಎಂಬ ಪರಿಸರವಾದಿಯ ಬಾಷಣ
ಕೇಳಿ ಮಾರಿಯೇ ಬಿಟ್ಟರು . ಹತ್ತಿರದಲ್ಲಿ
ದಿನಸಿ ಅಂಗಡಿ ಇತ್ತು. ನಡೆಯುವ ಆಸಕ್ತಿ
ಇತ್ತು. ಒಬ್ಬೊಬ್ಬ ಸಂಬಂದಿಕರ
ಪ್ರತಿಕ್ರಿಯೆಯೂ ಬಿನ್ನವಾಗಿತ್ತು. ಕಾರು ಇಲ್ಲವಾದ
ನಂತರ ಮನೆ ಎದುರು ಕಾರು – ದಾರಿ ಬೇಕಾ ?
ಬೇಡ. ಆದರೆ ಪಟ್ಟಣದ ಕಾನೂನು ಪ್ರಕಾರ ಒಂದು ನಿವೇಶನದಲ್ಲಿ ಒಂದು
ಮರ ನೆಡಲು ಮಾತ್ರ ಅವಕಾಶ. :( ಹಲವು ಸಮಸ್ಯೆಗಳ ಎದುರಿಸಿ ಕೊನೆಗೂ
ಅಲ್ಲಿ ಹೂಗಿಡಗಳನ್ನು ನೆಟ್ಟರು. ಕಾಂಕ್ರೀಟು ಅಗೆದು ಹಾಕಿ
ನೀರು ಇಂಗುವಂತೆ ಮಾಡಿದರು. ಅವರ, ಅಂದರೆ
ಆ ದೇಶದವರ ಕಾರು
ಸಹಿತ ಜೀವನ ನಮಗೆ ಆಕರ್ಷಕವಾಗಿ ಕಂಡರೆ ಕಾರು
ರಹಿತ ಜೀವನವೂ ಮಾರ್ಗದರ್ಶಕ ಏಕಾಗಬಾರದು ? :tup
ಯಾವ ವಿಚಾರವನ್ನೇ ಆಗಲಿ
ತಮ್ಮ ಕಲೆಯ ಮೂಲಕ
ಪ್ರಚಾರಾಂದೋಲನ ನಡೆಸುವ ಫ್ರಾಂಕೆ
ಕೆನಡಾ ದೇಶಕ್ಕೆ ಅಪಾರ ತಲೆನೋವು ತರಿಸುವ ವ್ಯಕ್ತಿಯಾಗಿ
ಹೊರಹೊಮ್ಮಿದ್ದಾರೆ. ಹೌದಾ ಪ್ರದಾನ ಮಂತ್ರಿಗಳೇ, ಮಲೀನತೆ ತೇರಿಗೆ
ನಿಜಕ್ಕೂ ದೇಶಕ್ಕೆ ಹಾನಿಮಾಡುವುದೇ
ಎಂದು ಮುಗ್ದವಾಗಿ
ಪ್ರಶ್ನಿಸುತ್ತಾರೆ. ನೀವು
ಮಾತಾಡುತ್ತಿರುವ ವಿಚಾರ ಪರಿಣಾಮ
ನಿಮಗೆ ಚೆನ್ನಾಗಿ ಗೊತ್ತಾ ?
ಮುಂದೆ ಹಿಮ ಕರಡಿ ಕಾಣೋದು ಎರಡು ಡಾಲರ್ ನಾಣ್ಯದಲ್ಲಿ ಮಾತ್ರವಾದರೆ
ನಮ್ಮ ನಿಮ್ಮ
ಮಕ್ಕಳು ಮೊಮ್ಮಕ್ಕಳು ಏನು ಹೇಳಬಹುದು.
ಎಂದೂ ಕೇಳುತ್ತಾರೆ. ಈ ಹಾರ್ಪರ್ ಮಹರಾಯ ಬೆಂಗಳೂರಿಗೆ ಬಂದಾಗ ಇದನ್ನು
ಹಂಚಿಕೊಳ್ಳುವ ಆಲೋಚನೆ ಬಂದರೂ ತಕ್ಷಣ ಇವೆಲ್ಲ ಬರೆಯಲು
ಸಾದ್ಯವಾಗಲಿಲ್ಲ. :(
ಒಬ್ಬರು ಪ್ರೊಫೆಸರ್ ಸಾಹೇಬರು ಅಮುಲ್ ಮಾದರಿಯಲ್ಲಿ ಹಳ್ಳಿಗಳಲ್ಲಿ ಸೌರ ವಿದ್ಯುತ್ ಸಾದ್ಯತೆಗಳ ವಿಚಾರ ಹಿಂದು ಬಿಸಿ-ನೆಸ್ ಲೈನ್ ಪತ್ರಿಕೆಯಲ್ಲಿ ಬರೆದುದು ಸಂತಸದ ಸಂಗತಿ. ಆದರೆ
ಪಟ್ಟಣದಲ್ಲಿ ಕೂತ ಅವರಿಗೆ ಇದೊಂದು ಕೆಲಸಕ್ಕೆ
ಬಾರದ ಆಲೋಚನೆ ಎಂದು ಅರಿವಾಗಿರಲಿಕ್ಕಿಲ್ಲ. ನನ್ನ ಅಬಿಪ್ರಾಯದಲ್ಲಿ ಇದೊಂದು ಬೇಲೆ
ಇಜ್ಜಂದಿನ ಆಚಾರಿ……… :O ಕಾರಣ,
ಇದು ಹಾಲಿನ ಸೊಸೈಟಿಯಲ್ಲಿ ಹಾಲು ಹುಯಿದಷ್ಟು
ಸರಳವಲ್ಲ. ಪ್ರೊಫೆಸರ್ ಸಾಹೇಬರ
ತರ್ಕ ಎರಡನೆ ಪಾರದಲ್ಲಿಯೇ
ಕವಚಿಬಿದ್ದಿದೆ. ಮೊದಲನೆಯ ಮಾತು - ಇನ್ನೂ ವಿದ್ಯುತ್
ಜಾಲ ತಲಪದ
ಮನೆಗಳು ಎಂದ ಅವರು
ಹೆಚ್ಚಿನ ವಿದ್ಯುತ್ ಜಾಲಕ್ಕೆ ಹರಿಸಬಹುದು
ಎಂದೂ ಹೇಳುತ್ತಾರೆ. ಆದರೆ ಜಾಲಕ್ಕೆ ಹರಿಸಲು ಅಡ್ಡ
ಬರುವ ತಾಂತ್ರಿಕ ಸಮಸ್ಯೆ ಅವರ ಗಮನಕ್ಕೆ ಬಂದಂತಿಲ್ಲ.
ಇನ್ನೊಂದು ಅಸಂಬದ್ದ ಆಲೋಚನೆ ಕೇರಳಾ ಸರಕಾರದ್ದು. ಅದು ಹತ್ತು ಸಾವಿರ ಸೌರ ವಿದ್ಯುತ್ ಘಟಕಗಳ ಸ್ಥಾಪಿಸಲು ತಯಾರಾಗಿದೆ. ಅವರಿಗೆ ೧೫೦೦೦ ಜಾಲ-ಸಂಪರ್ಕ
ಘಟಕಗಳ ಸ್ಥಾಪಿಸುವ ಆಸಕ್ತಿಯೇನೊ
ಇತ್ತು. ಆದರೆ ಕೇಂದ್ರ
ಸರಕಾರ ಸಬ್ಸಿಡಿ ಕೊಡೋದು
ಜಾಲ ಸಂಪರ್ಕ ರಹಿತ ಘಟಕಗಳಿಗೆ ಮಾತ್ರ. :( ಪತ್ರಿಕೆಯಲ್ಲಿ
ಒಂದರ ಕೆಳಗೆ ಇನ್ನೊಮ್ಮೆ - ಎರಡು ಬಾರಿ
ಲೇಖನ ಪ್ರಕಟವಾದುದು ನೋಡಿ, ದಯಮಾಡಿ
ನಗಬೇಡಿ. ಟೊಯಿಲೆಟ್ ಪೇಪರ್ ಪತ್ರ್ರಿಕೆಯಲ್ಲಿ ಇಂತಹ
ಅಭಾಸಗಳು ಮಾಮೂಲಿ. :D ವಿಷಯಕ್ಕೆ ಬರೋಣವಾಗಲಿ. ಒಂದು ಲಕ್ಷ
ಇಪ್ಪತ್ತು ಸಾವಿರ ರಾಜ್ಯ ಕೇಂದ್ರ
ಸರಕಾರದ ಸಬ್ಸಿಡಿ. ಉಳಿದ ಒಂದು ಲಕ್ಷ ಬಳಕೆದಾರ ಹಾಕಿದರಾಯಿತು. ಈಗಾಗಲೇ
ನಾಲ್ಕು ಸಾವಿರ ಅರ್ಜಿ ಬಂದಿದೆ.
ನೀರು ಹರಿಯುವ ಕಾಲುವೆ ಮೇಲೆ ಸೌರ ಫಲಕಗಳ ಸ್ಥಾಪಿಸಿರುವ ಗುಜರಾತಿನ ಹಲವು ಸೌರ ವಿದ್ಯುತ್ ಯೋಜನೆಗಳು ಹೆಚ್ಚು ಅರ್ಥಪೂರ್ಣ. ಹೊಸ ಯೋಜನೆಯೊಂದರ ಪ್ರಕಾರ ಕಟ್ಟಡದ ಯಜಮಾನ ಚಾವಣಿಯನ್ನು ಬಾಡಿಗೆಗೆ ಅಥವಾ ಪಾಲುಗಾರಿಕೆ ನೆಲೆಯಲ್ಲಿ ಯೋಜನಾಕರ್ತರಿಗೆ ಕೊಡುತ್ತಾನೆ. ಅದರಲ್ಲಿ ತಯಾರಾದ ವಿದ್ಯುತ್ ಪೂರ್ತಿ ಜಾಲಕ್ಕೆ ಹರಿಯುವ ಬಗೆಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಳ್ಳುತ್ತದೆ. ಎಲ್ಲವೂ ರಾಜಕೀಯಮಯವಾದ ನಮ್ಮ ದೇಶದಲ್ಲಿ ನರೆಂದ್ರ ಮೋಡಿ ಸಾಧನೆ ವಿರೋಧ ಕಾಂಗ್ರೆಸ್ ಪಕ್ಷಕ್ಕೆ ಸಮದಾನ ಇಲ್ಲ. ಮೋಡಿ ಕೊಡಲೊಪ್ಪುವ ವಿದ್ಯುತ್ ತಿರಸ್ಕಾರ - ಕತ್ತಲಲ್ಲಿ ಕೂರಲೂ ತಯಾರು. ;)
ಗೆಳೆಯ ದಿನಕರ್ ಹೇಳುವ
ಪ್ರಕಾರ ಈಗ ನೂರಾರು
ಫಲಕಗಳು ಬೆಳ್ತಂಗಡಿ ತಾಲೂಕಿನಲ್ಲಿಯೇ
ಮೂಲೆಗೆ ಬಿದ್ದಿದೆ. ಬಾಟರಿ ಆಯುಷ್ಯ
ಮುಗೀತು. ಒಮ್ಮೆಲೆ ಅಷ್ಟು ಹಣ
ಹಾಕುವುದು ಕಷ್ಟ / ಅಷ್ಟು
ಪ್ರಯೋಜನ ಇಲ್ಲ. ವಿದ್ಯುತ್ ಅಗ್ಗ. ಇತ್ಯಾದಿ ಆಲೋಚನೆಗಳು ಈ
ಫಲಕಗಳ ಮೂಲೆಗುಂಪಾಗಿಸಿವೆ. :( ಮೇಲ್ಕಂಡ
ಯೋಜನೆಯ ಫಲಕದ ಗತಿಯೂ ಅದೇ
ಆಗುತ್ತದೆ. ಮೂರು ವರ್ಷದಲ್ಲಿ ತಯಾರಾಗೊ ವಿದ್ಯುತ್
ಸುಮಾರು ಅದರ ಅಂದರೆ ಫಲಕದ ತಯಾರಿಕೆಗೆ ಖರ್ಚಾಗಿರುತ್ತದೆ. ಅದೂ
ಪೂರ್ಣ ಉಪಯೋಗ ಪಡಕೊಂಡರೆ
ಮಾತ್ರ. :@ ಸಾಮಾನ್ಯವಾಗಿ ಹೇಳುವುದಾದರೆ ಐದು ಆರು ವರ್ಷ ಕೆಲಸ ಮಾಡಲೇ ಬೇಕು.
ಇವರು ಹೇಳೊದು ಒಂದು ವಿಚಾರ ನಾನು ಒಪ್ಪುವುದಿಲ್ಲ. ಮನೆ
ಮೇಲೆ ಇಟ್ಟರಾಯಿತು. ಅದರ ಪಾಡಿಗೆ ಅದು ಕೆಲಸ ಮಾಡುತ್ತಲೇ ಇರುತ್ತದೆ. ಕಾರಣ ಸೂರ್ಯದೇವನ
ಹಿಂಬಾಲಿಸುವ ಫಲಕಗಳು ಶೇಕಡ ೪೦ ರಷ್ಟು
ಹೆಚ್ಚು ಶಕ್ತಿ ಹಿಡಿದು ಕೊಡು ತ್ತದೆ. ನಮ್ಮಲ್ಲಿ ಸಂಬಳ ಅಗ್ಗವಾದುದರಿಂದ ನಾವು ಈ ವಿಚಾರ ಮುಂದುವರಿದ ದೇಶಗಳ ಅನುಸರಿಸಬೇಕಾಗಿಲ್ಲ.
ಸೌರ
ಪಲಕಗಳೆಂದರೆ ಅದರಲ್ಲಿ ಹಲವು
ಪುಟ್ಟ ಸರ್ಕೀಟುಗಳ ಸಾಲಾಗಿ ಜೋಡಿಸಿರುತ್ತಾರೆ. ಸೌರ ಪಲಕಗಳಿಗೆ ನೆರಳು ಬೀಳಲೇ ಬಾರದು. ಬಿದ್ದರೆ
ಎರಡು ರೀತಿಯ ಹಾನಿ ಯುಂಟಾಗುತ್ತದೆ. ತಾತ್ಕಾಲಿಕ ಹಾನಿ ಎಂದರೆ ೩೬ ತುಂಡುಗಳಲ್ಲಿ
ಒಂದು ತುಂಡಿಗೆ ಎಲೆ ಬಿದ್ದು ನೆರಳಾದರೂ
ಆ ಇಡೀ ಫಲಕದ
ಒಟ್ಟು ವಿದ್ಯುತ್ ಉತ್ಪಾದನೆ ಅರ್ಧಕ್ಕರ್ಧ
ಕುಸಿಯುತ್ತದೆ. :( ಎರಡನೆಯದಾಗಿ ಫಲಕದ ಒಳಗಿನ ವೈರಿಂಗ್ ಅಂದರೆ ಪುಟ್ಟ ತುಂಡುಗಳ ಜೋಡಿಸಿದ ಜಾಗ ಬಿಸಿಯಾಗಿ ಶಾಶ್ವತ
ಹಾನಿ ಉಂಟು ಮಾಡುತ್ತದೆ. :@ ಹಾಗಾಗಿ
ಹೆಚ್ಚು ಫಲಕಗಳಿದ್ದರೆ ಚಡ್ಡಿ
ಹಾಕಿದ ತುಕ್ರನನ್ನು ಫಲಕಗಳ
ಸೂರ್ಯದೇವನ ಹಿಂಬಾಲಿಸಿ ದಿನಕ್ಕೆ
ನಾಲ್ಕು ಬಾರಿ ತಿರುಗಿಸಲು ನೇಮಿಸುವುದು ಉತ್ತಮ.
ತುಕ್ರನಿಗೆ ಬೇಕಾದರೆ chief
operation officer ಅಂಗಿಗೆ ಸಿಕ್ಕಿಸುವ
ನಾಮಫಲಕ ಕೊಡೋಣ.
ಇಂತಹ ದೊಡ್ಡ ಘಟಕಗಳೆಂದರೆ ಸಾಮಾನ್ಯವಾಗಿ ಏನು ಮಾಡ್ತಾರೆ ಎಂದರೆ
ಫಲಕದ ಅಡಿಯಲ್ಲೊಂದು ಪುಟ್ಟ ಮೊಟರ್ ಹಾಕಿ
ಬಿಡ್ತಾರೆ. ಅದಕ್ಕಾಗಿ ಪ್ರತ್ಯೆಕ
ವೈರಿಂಗ್…….. ಎಸಿ ರೂಮಿನಲ್ಲಿ
ಸೂಟ್ ಹಾಕಿದವನೊಬ್ಬ ನಿಯಂತ್ರಿಸುತ್ತಾನೆ. ಫಲಕದ
ಮೊಟರು ಹಾಗೂ ಸೂಟಿನವನ ಎಸಿ ಎರಡೂ ಸುಮಾರು ವಿದ್ಯುತ್ ತಿಂದುಹಾಕುತ್ತದೆ. ತುಕ್ರ
ಚೋಮರಿಗೆ ಸಿಕ್ಕರೂ ಸಿಗೋದು ಗೇಟು ಕಾಯುವ ಕೆಲಸ ಮಾತ್ರ. :(
ಕಾನೂನು ಪ್ರಕಾರ
ವಿತರಣಾ ಜಾಲಗಳು ಇಂತಹ
ವಿದ್ಯುತ್ ಒಂದಂಶ ತೆಗೆದುಕೊಳ್ಳಬೇಕು. ನಮ್ಮಲ್ಲಿ
ಗುಣಮಟ್ಟದ
ವಿದ್ಯುತ್ ಅಥವಾ ದರ್ಮಾರ್ಥ
ವಿದ್ಯುತ್ ಇವುಗಳ ಆಯ್ಕೆ
ಜನಸಾಮಾನ್ಯರಿಗಿಲ್ಲ. ಪ್ರೊಫೆಸ್ಸರ್
ಸಾಹೇಬರು ಹೇಳುವಂತೆ ಮನೆಗೆ ಸಂಪರ್ಕ
ಕೊಟ್ಟ ಸರಿಗೆಯಲ್ಲಿ ವಾಪಾಸು ಕಳುಹಿಸಲೂ ಬಹುದು. ಹಾಲು
ಡೈರಿಯವರು ಕಾಲು ಲೀಟರ್ ಸಹಾ
ಕೊಂಡಂತೆ ಯಶಸ್ವಿ
ಉದಾಹರಣೆಗಳೂ ನಮ್ಮ ಮುಂದಿವೆ.
ಜರ್ಮನಿಯಲ್ಲಿ ಇಂದು
ಸುಮಾರು ಶೇಕಡ ಮೂವತ್ತರಷ್ಟು, ಸೌರ ವಿದ್ಯುತ್, ಗಾಳಿ ಯಂತ್ರ, ಹರಿಯುವ ನೀರಿನ
ಟರ್ಬೈನ್ ಇತ್ಯಾದಿಗಳಿಂದ
ತಯಾರಾಗುತ್ತದೆ. ಅದಕ್ಕೆ ಸ್ವಲ್ಪ ಹೆಚ್ಚು ಬೆಲೆಗೆ ವಿತರಣಾ
ಜಾಲ ಖರೀದಿಸುತ್ತದೆ. ಆ ಪ್ರಿಮಿಯಂ ಹಣವನ್ನು ಬಳಕೆದಾರರ ಮೇಲೆ
ಹಂಚಿ ಹಾಕುವ ಪಾರದರ್ಶಕ ವ್ಯವಸ್ಥೆ ಇರುತ್ತದೆ. ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಮೂಗು ತೂರಿಸುವ ಹಾಗೂ
ಕುರ್ಚಿಗೆ ಅನುಸಾರವಾಗಿ ದೋಚುವ ಸಾದ್ಯತೆ
ಇಲ್ಲವೆ ಇಲ್ಲ. ಆದರೆ
ಯೆಡ್ಡಿ ಅಂಥವರು ರಾಜಕಾರಣದಲ್ಲಿರುವಾಗ ದರ್ಮಾರ್ಥ ವಿದ್ಯುತ್ ಸರಿ ಎನ್ನುವಾಗ
ನಮ್ಮ ದೇಶದ ಶಕ್ತಿ ಜಾಲ ಉದ್ದಾರವಾಗೋಲ್ಲ.
ಕೊ ಜೆನೆರೆಶನ್
ಬಾರಿ ಹೊಸ ವಿಚಾರವೇನೂ ಅಲ್ಲ.
ನಮ್ಮ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ಸಿಪ್ಪೆ ಬಳಸಿ ಕಬ್ಬಿನ ಹಾಲು ಕುದಿಸುತ್ತಾರೆ.
ಉಳಿಕೆ ಉಷ್ಣದಲ್ಲಿ ವಿದ್ಯುತ್ ತಯಾರಾಗುತ್ತದೆ. ಅದೇ
ರೀತಿ ಉಕ್ಕಿನ ತಯಾರಿಕೆಯಲ್ಲೂ
ವಿದ್ಯುತ್ ಲಭಿಸುತ್ತದೆ. ಇವರೆಲ್ಲ
ತಮ್ಮ ಬಳಕೆಗೆ ಆಗಿ ಮಿಕ್ಕಿದ್ದನ್ನು ಜಾಲಕ್ಕೆ
ಹರಿಸುತ್ತಾರೆ. ಹೆಚ್ಚಾಗಿ ಹೊರ
ರಾಜ್ಯಗಳಲ್ಲಿ ಮಾರಾಟ ಮಾಡುತ್ತಾರೆ.
ಕಾರಣ, ನಮ್ಮ
ರಾಜ್ಯದ ವಿದ್ಯುತ್ ಮಂತ್ರಿ (ಣಿ) ಬಾವಿ
ತೋಡಲು ಹೊರಡುವುದು ಬೆಂಕಿ ಬಿದ್ದಾಗಲೇ. :O
ಸಣ್ಣ ಮಟ್ಟಿನಲ್ಲಿ ಶಾಖ ಮತ್ತು
ವಿದ್ಯುತ್ ಜತೆಯಾಗಿ ಪಡಕೊಳ್ಳುವುದು ಇತ್ತೀಚಿನ ಪರಿಕಲ್ಪನೆ.
ಸಾಮಾನ್ಯವಾಗಿ ನಮ್ಮ ವಾಹನಗಳಲ್ಲಿ ಅಥವಾ
ಯಾವುದೆ ಅಂತರ್ದಹನ ಇಂಜಿನನಲ್ಲಿ
ಇಂದನದ ಶೇಕಡ ೨೦
ಚಾಲನೆಗೆ ಉಪಯೋಗವಾದರೆ ಉಳಿದ ಬಾಗ ಶಾಖವಾಗಿ ನಷ್ಟವಾಗುತ್ತದೆ. ಇದನ್ನು
ಬಳಸಿಕೊಂಡ ಈ ತತ್ವ
ಇಂದನದ ಶೇಕಡಾ ಎಂಬತ್ತರಿಂದ
ತೊಂಬತ್ತರಷ್ಟು ಶಕ್ತಿ
ಬಳಸಿಕೊಳ್ಳುತ್ತವೆ. ಜರ್ಮನಿಯಲ್ಲಿ
ಅವರು ಇದಕ್ಕೆ ಹೆಚ್ಚಾಗಿ ಬಳಸುವುದು ನೈಸರ್ಗಿಕ
ಅನಿಲ. ಈಗ ಹೊಂಡ ಕಂಪೇನಿ ಇದಕ್ಕೆ ಸೂಕ್ತವಾದ ಪುಟ್ಟ ಯಂತ್ರಗಳ ತಯಾರಿಸುತ್ತದೆ.
ನಮ್ಮಲ್ಲಿ ರಾತ್ರಿ
ಚಳಿಗೆ ಕಟ್ಟಿಗೆ ಉರಿಸುತ್ತೇವೆಲ್ಲಾ !
ಅದನ್ನು ಆಮ್ಲಜನಕ ನಿಯಂತ್ರಿತ
ವಾತಾವರಣದಲ್ಲಿ ಹೊತ್ತಿಸಿದರೆ
ಪ್ರೊಡ್ಯುಸರ್ ಅನಿಲವಾಗುತ್ತದೆ. ನಮ್ಮಲ್ಲಿಯೂ ಹಾಸನ, ಚಿಕ್ಕಮಗಳೂರು ಮಡಿಕೇರಿಯಂತಹ ಚಳಿ ಪ್ರದೇಶಗಳಲ್ಲಿ ಖಂಡಿತ ಸಾದ್ಯ. ಆಗ ಇಂದನದ ಹೆಚ್ಚಿನ ಬಾಗ ಕಸಕಡ್ಡಿ ಪೊರೈಸುತ್ತದೆ. ಮೂರು ಕಿಲೊ ಸೌದೆ ಒಂದು ಲಿಟರ್ ಡಿಸಲ್ ಉಳಿತಾಯ ಸಾದ್ಯ. ಹಾಗೆ ದಾರಾಳ ಬಯೋಗಾಸ್ ಇದ್ದಲ್ಲಿ ಅದೂ ಉಪಯೋಗಿಸಬಹುದು. ಮೂರು ಕಡೆಗಳಲ್ಲಿ
ಲಭಿಸುವ ಶಾಖ ಉಪಯೋಗಿಸಿ
ರೂಮು ಬಿಸಿಮಾಡಬಹುದು
/ ನೀರು ಬಿಸಿಮಾಡಬಹುದು.
ನಮ್ಮ ಜಾಲಗಳು ದ್ವಿಮುಖ ವಿದ್ಯುತ್
ಹರಿವಿಗೆ ಅನುಗುಣವಾಗಿಲ್ಲ. ಆದರೆ
ಸಣ್ಣ ಮಟ್ಟಿನ ವಿದ್ಯುತ್ ಒಳಹರಿವು ತಾಂತ್ರಿಕ
ಸಮಸ್ಯೆಗಳ ಉಂಟು ಮಾಡದು. ಅದು ಅದೇ
ಆಸುಪಾಸಿನಲ್ಲಿ ಖರ್ಚಾಗಿ ಹೋಗುತ್ತದೆ.
ಪರಿವರ್ತಕ ವರೆಗೆ ಮುಟ್ಟುವುದೇ
ಇಲ್ಲ. ಕಾರಣ ಅದು
ಅತ್ಯಂತ ಹೆಚ್ಚು ವಿದ್ಯುತ್ ಬಳಸುವ ಸಮಯ.
ನೀರು ಬಿಸಿ ಮಾಡಲು
ಸೌರ ಫಲಕಗಳಿಗೆ ಸರಕಾರ ಸಹಾಯದನ
ಕೊಡುತ್ತವೆ. ಕಾರಣ - ನೀರು ಬಿಸಿ ಮಾಡುವುದು ಹೆಚ್ಚಾಗಿ ಬೆಳಗಿನ ಜಾವ.
ಆಗ ಎಲ್ಲ ಮನೆಯಲ್ಲೂ
ಹೀಟಿಂಗ್ ಕಾಯಿಲುಗಳು ಒನ್ ಆದಾಗ
ಜಾಲಕ್ಕೆ ವಿಪರೀತ ಒತ್ತಡ ಬೀಳುತ್ತದೆ. ಅದನ್ನು ತಪ್ಪಿಸುವ ದೂರಾಲೋಚನೆ ಇದರ ಹಿಂದಿದೆ. ಸಬ್ಸಿಡಿ ಕೊಡೋದು ಬಿಸಿ ನೀರ
ವ್ಯವಸ್ಥೆಯಂತೆ ವಿದ್ಯುತ್ ವ್ಯವಸ್ಥೆ ಸ್ಥಾಪಿಸಲು
ಆಗಬಾರದು. ಆದು ಈಗ ಹಲವಾರು
ಗುಡ್ಡಗಳಲ್ಲಿ ಕೆಲಸಕ್ಕೆ ಬಾರದ
ಗಿರಿಗಿಟಿ ಸ್ಥಾಪಿಸಿದಂತಾಗುತ್ತದೆ. ನಾವು
ಜಾಲಕ್ಕೆ ಕೊಡುವ ವಿದ್ಯುತ್ತಿಗೆ ನ್ಯಾಯ
ಬೆಲೆ ದೊರಕಬೇಕು.
Peaking generators ಅಂದರೆ ವಿದ್ಯುತ್ ಉಪಯೋಗ ವಿಪರೀತವಾದಾಗ ನಡೆಯುವ ಉತ್ಪಾದನಾ ಕೆಂದ್ರಗಳು ಸಾಮಾನ್ಯವಾಗಿ ಗ್ಯಾಸಿನಿಂದ ನಡೆಯುತ್ತವೆ. ಅತಿ ಅಗತ್ಯವೆನಿಸಿದಾಗ ಅದನ್ನು ನಡೆಸುತ್ತಾರೆ. ಹಗಲಿನಲ್ಲಿ ಹಳ್ಳಿಗಳಲ್ಲಿ ಫಾನ್ ಪಟ್ಟಣಗಳಲ್ಲಿ ಎಸಿ ಗರಿಷ್ಟ ಉಪಯೋಗದ ಸಮಯ ಸೌರ ಫಲಕಗಳ ಉತ್ಪಾದನೆಯೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದುದರಿಂದ ಅವು ಸ್ವಾಭಾವಿಕವಾಗಿ peak load ನಿರ್ವಹಿಸಲು ಸಲೀಸು ಮಾಡಿಕೊಡುತ್ತದೆ. ಅದುದರಿಂದ ಅದಕ್ಕೆ ಉತ್ತಮ ದರ ಕೊಡೋದು ಬುದ್ದಿವಂತಿಕೆಯೇ ಆಗುತ್ತದೆ. :)
ಈಗ ಎರಡು
ವರ್ಷಗಳಲ್ಲಿ microinvertors ಎಂಬ ಹೊಸ
ಉತ್ಪನ್ನ ಅಮೇರಿಕದ ಮಾರುಕಟ್ಟೆಗೆ ಬಂದಿದೆ ಎನ್ನುವುದೂ
ಈ ಬರಹಕ್ಕೆ ಒಂದು ಕಾರಣ. ಪ್ರತಿ
ಫಲಕಕ್ಕೆ ಸಿಕ್ಕಿಸುವಂತಹ ಪುಟ್ಟ
ಪರಿವರ್ತಕ. ಅದನ್ನು ನಂತರ ನೇರ ನಮ್ಮ ಮನೆ
ವಿದ್ಯುತ್ ಪ್ಲಗ್ಗಿಗೂ ಸಿಕ್ಕಿಸಬಹುದು
ಎನ್ನುವಷ್ಟು ಸರಳ. ಆದರೆ
ಅದು 110 V, 60 HZ. ನಮ್ಮಲ್ಲಿ
ಜಾಲ ಇರೋದು 220 V 50 Hz.
ಅದುದರಿಂದ ನಮ್ಮಲ್ಲಿ ಹಾಗೆಯೇ ಉಪಯೋಗಿಸುವಂತಿಲ್ಲ. ಎರಡು ಮೂರು
ವರ್ಷದಿಂದ ಅವರಿಗೆ ಪತ್ರ ಬರೆಯುತ್ತಲೇ
ಇದ್ದೇನೆ, ನಮಗಾಗುವ ಸಾಮಾನು ತಯಾರಾಗುವಾಗ
ಹೇಳಿ. ಅದರ ಹಿಂದಿರುವ ಒಬ್ಬರು
ರಘು ಬೇಲೂರು
ನಮ್ಮವರು ನಾನಿವರೊಂದಿಗೆ ಪತ್ರವ್ಯವಹಾರ ನಡೆಸಿಲ್ಲವಾದರೂ ಅವರಿಗೆ
ಊರ ನೆನಪಿದ್ದರೆ ? ತನ್ನ ಕೊಡುಗೆ
ಇರಲೆಂದು ಅನಿಸಿದರೆ ? ಏನೊ
ಒಂದು ಆಸೆ.
ಈಗ ರಾತ್ರಿನಾ ? ಹಾಗಾದರೆ
ಮುಂದಿನ ಕೊಂಡಿಗಳ ಕ್ಲಿಕ್ಕಿಸಿ. ಅಮೇರಿಕದ
ಕಲಿಫೊರ್ನಿಯದಲ್ಲಿ ಒಬ್ಬರ ಮನೆಯಲ್ಲಿ ಅಳವಡಿಸಿದ
ಫಲಕಗಳಲ್ಲಿ ವಿದ್ಯುತ್ ಎಷ್ಟು
ತಯಾರಾಗುತ್ತದೆ ವಿವರವಾಗಿ ನೋಡ
ಬಹುದು. ಕೊಂಡಿ ಒಂದು ಮತ್ತು ಕೊಂಡಿ ಎರಡು.
ಅವರು ಫಲಕಗಳ ಹಾಕಿದ
ಕಥೆ ಇಲ್ಲಿದೆ.
ಪುತ್ತೂರಿಗೆ ಯಂತ್ರ ಮೇಳ
ನೋಡಲು ಬಂದ ದೇವಕಿ - ಅಶೋಕವರ್ಧನರು ವಾಪಾಸಾಗುವಾಗ
ನನ್ನಲ್ಲಿಗೆ ಬಂದರು. ಮೇಳದ ಬಗ್ಗೆ ಅವರಿಗೆ
ನಿರಾಶೆಯಾಗಿತ್ತು. ಹಾಗೊಂದು
ಪತ್ರವನ್ನೂ ಆಮೇಲೆ ನನಗೆ ಬರೆದರು. ಅದನ್ನೇ ವಿಸ್ತರಿಸಿ ಕೃಷಿಕರಿಗೊಲಿಯದ ಯಂತ್ರ ಮೇಳ ಎಂದೇ ಹೆಸರಿಸಿ ಅವರ ಬ್ಲೋಗಿಗೆ ಏರಿಸಿದರು. ಹಲವಾರು ವರ್ಷಗಳಿಂದ ಇದರ ಅರಿವು ಇದ್ದ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಅವರಿಗೆ ಉತ್ತರ ಬರೆಯಲು ಕೂತವನಿಗೆ ಹಲವು ವಿಚಾರಗಳು
ಮನಸ್ಸಿಗೆ ಬಂದವು. ಹಾಗೆ ಪೇಸ್ ಬುಕ್ನಲ್ಲಿ ಕಂಡ ಕೊಂಕೋಡಿಯವರ ಅಂತರಾಷ್ಟ್ರೀಯ ಯಂತ್ರ
ಮೇಳದ ಪ್ರಸ್ತಾಪವೂ ನನ್ನ
ಕೆಣಕಿತು. :@ ಯಾಕೆಂದರೆ -
ಪರದೇಶದಲ್ಲಿ
ಹಿರಿಯ ಸಾವಯುವ ಕೃಷಿಕರಿಂದ
ಉಗಿಸಿಕೊಂಡ ಅನುಭವ ನನಗಿದೆ. :f ಯಾಕೆಂದರೆ ಅವರ
ನಂಬಿಕೆಯಲ್ಲಿ ಸಾವಯುವ ಬೇಸಾಯ ಕಲಿಯಲು
ಅಮೇರಿಕದಿಂದ ಬಾರತಕ್ಕೆ ಬರಬೇಕು
ಹೊರತು ನಮ್ಮಲ್ಲಿಂದ ಅಮೇರಿಕಕ್ಕೆ
ಹೋಗುವುದು ಅಲ್ಲವೇ ಅಲ್ಲ
ಎಂದು ಉಗಿದಿದ್ದರು ಪೌಲ್
ಕೀನೆ. ಪೌಲ್ ಕೀನೆ
ಬಾರತದಲ್ಲಿ ಕೆಲಕಾಲ ಕಳೆದಿದ್ದರು ಮತ್ತು ನಾನು ಬೇಟಿ ಮಾಡೋವಾಗ ಪೆನ್ಸಿಲ್ವಾನಿಯ
ರಾಜ್ಯದಲ್ಲಿ ವಾಲ್ನಟ್ ಎಕ್ರೆಸ್
ಅನ್ನುವ ಪ್ರಖ್ಯಾತ ಸಾವಯುವ
ಕೃಷಿ ಕ್ಷೇತ್ರದ
ಯಜಮಾನರಾಗಿದ್ದರು. ಹಾಗೆ ಅಂತರಾಷ್ಟ್ರೀಯ
ಯಂತ್ರ ಮೇಳ ಅನ್ನುವಾಗ
ಸ್ವಾಬಾವಿಕವಾಗಿ ಮೈಯೆಲ್ಲ ಉರಿಯಿತು. ಕೆಳಗೆ ಕಾಪಿ ಮಾಡಿರುವ ಪ್ರತಿಕ್ರಿಯೆ ಬರೆಸಿತು. -
ಯಂತ್ರಗಳ ಮಟ್ಟಿಗೆ ನಾವಿನ್ನೂ ಗುಲಾಮಗಿರಿ ಅನುಬವಿಸುತ್ತಿದ್ದೇವೆ.
ಅದುದರಿಂದ ಅಂತರಾಷ್ಟ್ರೀಯ ಮಟ್ಟದ ಯಂತ್ರ ಮೇಳ ನಮಗೆ ಬೇಕಾದುದಲ್ಲ. ನಿಜಕ್ಕೂ
ಅಗತ್ಯವಾದ ಯಂತ್ರಗಳ ವಿ ಟೆಕ್
ವಿಶ್ವನಾಥ್ ಆಂತಹ ಉತ್ಸಾಹಿಗಳು
ತರುತ್ತಾರೆ. ಅವರಿಗೆ ಸಹಾಯ ಕೊಟ್ಟರೆ ಸಾಕು.
ಆದರೆ ಪ್ರಮುಖ ವಿಚಾರ ಒಂದಿದೆ - ಅಡಿಕೆ ತೆಂಗು ಬೆಳೆಯದ ದೇಶಕ್ಕೆ ಹೋಗಿ
ನಮಗೆ ಬೇಕಾದ ಯಂತ್ರ ಹುಡುಕಿದರೆ ಮನೆಯಲ್ಲಿ ಕಳಕೊಂಡ ಮುತ್ತನ್ನು ಬೆಳಕಿರುವಲ್ಲಿ ಹುಡುಕಿದ
ಅಜ್ಜಿಯ ಕಥೆಯೇ ಆಗುತ್ತದೆ. ಅಮೇರಿಕದಂತಹ ದೇಶಗಳಲ್ಲಿ ಈ ಯಂತ್ರ ಮೇಳಗಳು ಮಾತ್ರವಲ್ಲ ಸಾಮಾನ್ಯ ರೈತರು
ಪಾಲ್ಗೊಳ್ಳುವ ರೈತ ಸಂತೆಗಳೂ ಆಗುತ್ತವೆ. . ಅಂತಹ ರೈತ ಸಂತೆಗಳು ನಮ್ಮಲ್ಲೂ
ಆಗಬೇಕು, ಹೊರತು ಬೃಹತ್ ಮೇಳಗಳಲ್ಲ. ಅದರಲ್ಲಿ ತಳಮಟ್ಟದ ಮಾಹಿತಿ ಇರುವ ತುಕ್ರ ಚೋಮರೂ
ಪಾಲ್ಗೊಳ್ಳುವಂತಾಗಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಹಿಂದೆ ನಾವು ಕೆಲಸ ಮಾಡಿಸುತ್ತಿದ್ದೆವು ಆದರೆ ಸಲಕರಣೆ ಕೊಳ್ಳುವ ತೀರ್ಮಾನ
ನಮ್ಮದಾಗಿತ್ತು. ಸ್ವಾಬಾವಿಕವಾಗಿ ಕೊಟ್ಟು ಪಿಕ್ಕಾಸಿನಿಂದ ಮುಂದೆ ಹೋಗಲಿಲ್ಲ. ಮುಂದೊಂದು
ಉದಾಹರಣೆ ಕೊಡುತ್ತೇನೆ. ಎಲ್ಲ ಕೆಲಸಗಳಲ್ಲೂ ಯಂತ್ರ ಮನುಷ್ಯನನ್ನು
ಸೋಲಿಸಬಹುದು ಎನ್ನುವ ಬಲವಾದ ವಾದ ನಮ್ಮಲ್ಲ್ಲಿದೆ. ದಯವಿಟ್ಟು ಕೆಳಗಿರುವ ವಿಡಿಯೊ ನೋಡಿ - ಇಂತಹ ಬೀಸುಗತ್ತಿ ಯುರೋಪಿನ ಹೊಲದಲ್ಲಿ ಉಪಯೋಗಿಸಿ ನೋಡಿದ್ದೇನೆ. ಒಂದೇ ದಿನದಲ್ಲಿ ಬೀಸುವಿಕೆ ಅಬ್ಯಾಸವಾಗದಿದ್ದರೂ ಉಪಯುಕ್ತ ಅನ್ನಿಸಿತ್ತು. ಒಂದು ಬೀಸುಗತ್ತಿ ನಾನು ಹಿಡಿದುಕೊಂಡಿರುವುದರ ಪೋಟೊ ನನ್ನ ಸೈಕಲು ಯಾತ್ರೆ ಆಲ್ಬಂನಲ್ಲಿತ್ತು. ಆಲ್ಬಂ ನೋಡಿದವರು ಯಾರೂ ಅದನ್ನು ಗಮನಿಸಲೇ ಇಲ್ಲ. ಅದರಲ್ಲಿ ಅಶ್ಚರ್ಯವೂ ಇಲ್ಲವೆನ್ನಿ.
ಈಗ ನಮ್ಮಲ್ಲಿ ಪೆಟ್ರೊಲ್ ಚಾಲಿತ ಯಂತ್ರ ಬಂದಿದೆ. ಬೀಸುಗತ್ತಿ ಬಂದಿಲ್ಲ.
ಎಲ್ಲ ವಿಚಾರಗಳೂ ಅಷ್ಟೇ. ಯೋಚಿಸಿ ನೋಡಿ - ಮಾರಾಟದಲ್ಲಿ ಲಾಬ ಇರುವುದು, ದುಬಾರಿ ಸವೆಯುವ ಬಾಗಗಳ
ಬಿಡಿಬಾಗಗಳ ಲೆಕ್ಕದಲ್ಲಿ ಹಣ ಬರೋದು ಹಾಗೂ ಸಬ್ಸಿಡಿ ದೊರಕುವುದು ಪೆಟ್ರೊಲ್ ಚಾಲಿತ ಮಾದರಿಗೆ
ಮಾತ್ರ. ನಾವೀಗ ನಮ್ಮ ಅಗತ್ಯ ಉಪಕರಣಗಳ
ಹುಡುಕಬೇಕಾದ್ದು ಅಮೇರಿಕ ಇಸ್ರೇಲ್
ಚೀನಾದಲ್ಲಲ್ಲ, ನಮ್ಮ ಹಿತ್ತಲಿನಲ್ಲಿ - ಎಂದು
ಬರೆದಿದ್ದೆ.
ಈಗ ಕಳೆ ಕೀಳುವ ಯಂತ್ರದವರು
ಗಂಟೆಗೆ ೧೭೦ ರೂಪಾಯಿ ಬಾಡಿಗೆ
ಪಡಕೊಳ್ಳುತ್ತಾರೆ. ಈ ಬೀಸುಗತ್ತಿಯಲ್ಲಿ ಖಂಡಿತಾ ನೂರು ರಾಪಾಯಿಗೆ ಅಷ್ಟೇ ಕೆಲಸ ಮಾಡಿಸಬಹುದು ಎನ್ನುವ
ದೈರ್ಯ ನನಗುಂಟು. ಆದರೆ
ಕಮ್ಮಾರನ ಜತೆ ಕೂತು ಇದರ
ವಿನ್ಯಾಸ ಹಾಗೂ ಕೆಲಸವರಿಗೆ
ತರಬೇತಿ ನನ್ನ ಇಂದಿನ
ಆರೋಗ್ಯದಲ್ಲಿ ಅಸಾದ್ಯ. :( ಆದರೆ
ಕತ್ತಿ ಬೀಸಲು ನಮ್ಮ
ಹಳ್ಳಿಗಳಲ್ಲಿ ಜನವೇ ಇಲ್ಲದಿರುವ
ಕಾರಣ ಗುತ್ತಿಗೆದಾರರನ್ನು ಹಿಡಿಯಬೇಕಾದ್ದು
ಅನಿವಾರ್ಯ. :)
ಮೇಳದಲ್ಲಿ ಕಂಡ ಧಾನ್ಯ
ಪುಡಿಮಾಡುವ ಯಂತ್ರದ ಚಿತ್ರ ರಮೇಶ್
ದೇಲಂಪಾಡಿ ಮುಖಪುಟದಲ್ಲಿ ಹಾಕಿದ್ದು. ಇದರಲ್ಲಿ
ದ್ರವರೂಪದ ಸಾರಜನಕವನ್ನು
ಪರೋಕ್ಷ ತಂಪುಕಾರಕವಾಗಿ ಇಲ್ಲಿ ಉಪಯೋಗಿಸಲಾಗುತ್ತದೆ. ಹೀಗಾಗಿ ಧಾನ್ಯ ಪುಡಿಯಾಗುವಾಗ ಬಿಸಿಯಾಗುವುದು
ತಪ್ಪುತ್ತದೆ.ಆದರೆ ಮನೆ ಮನೆಯ ಬಳಕೆಗೆ ಅಲ್ಲ.ಸಣ್ಣ ಕೈಗಾರಿಕೆಗಳಿಗೆ ಸೂಕ್ತ. ಅಂತ ವರದಿ ಓದಿದೆ.
ಬೀಸುವ ಬದಲು ಗುದ್ದುವ ತಂತ್ರದಲ್ಲಿ ದಾನ್ಯ ಬಿಸಿಯಾಗುವುದರ ತಡೆಗಟ್ಟುವುದು ಹೆಚ್ಚು
ಸರಳ. ಆದರೆ ಏನಾದರೂ ಗಿಮಿಕ್ ಇಲ್ಲವಾದರೆ ಯಂತ್ರ ಕುತೂಹಲ ಮೂಡಿಸುವುದಾದರೂ ಹೇಗೆ. ;)
ಅಲ್ಲದೆ ಸರಳ ಕುಟ್ಟುವ
ಯಂತ್ರದಲ್ಲಿ ಬತ್ತ ಕುಟ್ಟಿ ಅಕ್ಕಿ ಮಾಡಲೂ
ಬಹುದು. ಅವಲಕ್ಕಿ ಮಾಡಬಹುದು.
ನಮ್ಮಲ್ಲಿ ಏನೂ ಸಾದನೆ ಇಲ್ಲ ಎಂದು ನಾನು
ಅನ್ನುವುದಿಲ್ಲ. ಪ್ರಯತ್ನ ಸಾಲದು ಎನ್ನುವೆ. ಸೇಮಿಗೆ
ಯಂತ್ರಕ್ಕೆ ಗೇರು ಹಾಗೂ
ಹಿಟ್ಟು ತುಂಬುವ ಕೊಳವೆ
ಉದ್ದ ಮಾಡಿ ಮೊಟರ್ ಅಳವಡಿಸಿ
ಈಗ ದೊಡ್ಡ ಮಟ್ಟದಲ್ಲಿ
ತಯಾರು ಮಾಡಿ ಕಾರ್ಯಕ್ರಮಗಳಿಗೆ ಪೊರೈಸುವ
ಗುತ್ತಿಗೆಯವರಿದ್ದಾರೆ.
ಹೊಂಡ ಮಾಡಲು ಹೊಂಡ ಇಂಜೀನು
ಬಹಳ ಅಗತ್ಯವೇನಲ್ಲ. ಯುರೋಪು ಅಮೇರಿಕದ ಕೃಷಿ ಕ್ಷೇತ್ರಗಳಲ್ಲಿ ಮೇಲ್ಕಾಣುವಂತಹ ಕೈಯಲ್ಲಿ ತಿರುಗಿಸಬಹುದಾದ ಸಲಕರಣೆ ನೋಡಿದ್ದೇನೆ. ಅದರ ಒಂದು ಮುಖ್ಯ ಉಪಯೋಗ ಬೇಲಿ ಕಂಬ ಊರಲು ಸರಿಯಾಗುವ ಹೊಂಡ. ತಯಾರಕರ ಹೇಳಿಕೆ ಪ್ರಕಾರ ಆರು ಇಂಚು ಅಗಲ ಎರಡು ಅಡಿ ಆಳದ ಹೊಂಡ ಮಾಡಬಹುದು. ನನ್ನಲ್ಲಿದ್ದ ನಾನೇ ತೆಗೆದ ಚಿತ್ರ ಸದ್ಯಕ್ಕೆ ನನ್ನ ಕೈ ಎಟಕಿನಲ್ಲಿ ಇಲ್ಲದಿರುವುದರಿಂದ ಮೇಲಿನ ಚಿತ್ರ ಜಾಲತಾಣ ಒಂದರಿಂದ ಎಗರಿಸಿದ್ದು. ಹಾಗಾಗಿ ಸಂಪರ್ಕ ಕೊಂಡಿ ಹಾಕುತ್ತಿಲ್ಲ. :( ಕ್ರಯ ಸುಮಾರು ೨೦ ಇಂಗ್ಲೇಂಡಿನ ಪೌಂಡ್ ಕ್ರಯ ಅಂದರೆ ಸಾವಿರದ ಆರು ನೂರು ರೂಪಾಯಿ.
ಅಂದು ಗಟ್ಟಿ ಮಣ್ಣಿಗೆ ಹೇಗಾಗುವುದೋ ಸಂಶಯ ಇತ್ತು. ಮೆದು ಮಣ್ಣಿನಲ್ಲಿ ಆರಾಮವಾಗಿ ಶ್ಯಾವಿಗೆ ಯಂತ್ರ ತಿರುಗಿಸಿದಂತೆ ತಿರುಗಿಸಿ ನಾಲ್ಕು ಐದು ಇಂಚು ಅಗಲದ ಗುಂಡಿ ಸುಲಬವಾಗಿ ಮಾಡಬಹುದು ಅನ್ನಿಸಿತ್ತು. ಯಂತ್ರವೇ ಆಗಬೇಕೆನ್ನುವವರಿಗೆ ಇದೇ
ಉಪಕರಣ ಸರಳ ಯಂತ್ರವನ್ನಾಗಿಯೂ ಮಾಡಬಹುದು. ಆ
ತಿರುಗಣಿ ಬ್ಲೇಡು ಹಾಗೂ
ನಮ್ಮ ಸೇವಿಗೆ ಯಂತ್ರದ
ರಚನೆಯ ಹಿಡಿ. ಇದನ್ನು
ಚಕ್ರ ಇರೋ ಗಾಡಿ ಮೇಲೆ ಅಳವಡಿಸಿದರೆ ಆಯಿತು. ಗುಂಡಿ ತೋಡುವಲ್ಲಿ ಒಬ್ಬ ಒತ್ತಿ ಹಿಡಿತಾನೆ. ಇನ್ನೊಬ್ಬ
ತಿರುಗಿಸ್ತಾನೆ. ಲಿವರೇಜಿಗೆ
ಬೇಕಾದರೆ ಉದ್ದ ಪೈಪು
ಉಪಯೋಗಿಸಿದರಾಯಿತು. ನಮ್ಮಲ್ಲಿ
ಮಳೆಗಾಲ ಪ್ರಾರಂಬವಾದಾಗ ಗುಂಡಿ
ತೋಡಲು ಜನ ಸಿಕ್ಕದೆ
ನನ್ನ ಕಾಡು ಬೆಳೆಸುವ ಹುಚ್ಚು ಕನಸಿನಲ್ಲೇ
ಉಳಿದಿದೆ. ಬೆರ್ಮುಡಾ ಹಾಕಿ ಮಾಡಬಹುದಾದ ಕೆಲಸವಾದರೆ ಸಂಬಳ
ಕಡಿಮೆಯಾದರೂ ನಮ್ಮ ಹಳ್ಳಿಹುಡುಗರು ಖಂಡಿತಾ ಒಪ್ಪಿಕೊಳ್ಳುತ್ತಾರೆ.
ಕನ್ನಡ ಪ್ರಭ
ಅಂಕಣದಲ್ಲಿ ಅಡಿಕೆ ಪತ್ರಿಕೆಯ ನಾ.
ಕಾರಂತರು ಬರೆದ ವಾಕ್ಯಗಳು
ಗಮನ ಸೆಳೆದವು. - ಎಲ್ಲರೂ
ಸಬ್ಸಿಡಿ ಉಂಟಾ ಕೇಳುವವರೇ.
ಯಂತ್ರದ ನಿಜ ಬೆಲೆ ಹೇಳಿದರೆ
ಸಬ್ಸಿಡಿ ಬೇಕೇ ಬೇಕು
ಎನ್ನುತ್ತಾರೆ ವಿಟೆಕ್ ವಿಶ್ವನಾಥ್.
ಸಬ್ಸಿಡಿ ಮತ್ತು ಮೀಸಲಾತಿ ತೊಲಗದೆ
ಬಾರತ ಉದ್ದಾರವಾಗದು ಎನ್ನುತ್ತಾರೆ
ಕೃಷಿಕ ಡಾ ತಿರುಮಲೇಶ್ವರಯ್ಯ ಗಬ್ಲಡ್ಕ.
ನನ್ನ ಆತ್ಮೀಯ ಗೆಳೆಯರೊಬ್ಬರು
ಅಮೇರಿಕದ ಪೆನ್ಸಿಲ್ವಾನಿಯದಲ್ಲಿ ಕುದುರೆಗಳ
ಸಹಾಯದಿಂದ ಕೃಷಿ ಮಾಡುತ್ತಾರೆ.
ನೂರು ವರ್ಷ
ಹಳೆಯ ಕೆಲವು ಯಂತ್ರೋಪಕರಣಗಳನ್ನೂ ಬಳಸುತ್ತಾರೆ. ಬೀಡು
ಕಬ್ಬಿಣದಿಂದ ಮಾಡಿದ ಅವು ತುಕ್ಕು
ಹಿಡುಯುವುದೇ ಇಲ್ಲ. ಅವರಿಗೆ ಅಂದರೆ
ಎರಿಕ್ ಮತ್ತು ಅನ್
ಇಬ್ಬರಿಗೂ ಕೃಷಿ ಹಿನ್ನೆಲೆ
ಇರಲಿಲ್ಲ. ಪ್ರಾರಂಬದಲ್ಲೊಂದು ಟ್ರಾಕ್ಟರ್
ಕೊಂಡಿದ್ದರು. [ನಮ್ಮಲ್ಲೂ ಅಧುನಿಕ ಕೃಷಿಗೆ
ಹೊರಡುವವ ಮೊದಲು ಕತ್ತಿ ಬದಲಿಗೆ ಟ್ರಾಕ್ಟರ್ ಕೊಂಡರೆ ಸಾಫ್ಟ್ ವೇರ್
ಲಕ್ಷಾದೀಶ ಪ್ರಥಮ ಸಂಬಳದಲ್ಲಿ ಕಾರು ಕೊಳ್ಳುತ್ತಾನೆ] ನಂತರ
ಅದಕ್ಕೆ ಕೆಲಸವೇ ಇಲ್ಲವೆಂದು :( ಎರಿಕ್ - ಅನ್ ಅರಿತು ಮಾರಿಬಿಟ್ಟರು. ನಾವು ದೊಡ್ಡ ಯಂತ್ರಗಳ
ಮೊದಲು ಅಲ್ಲಿ ಬಳಕೆಯಲ್ಲಿದ್ದ ಇಂತಹ
ಮಾದರಿಗಳ ಹುಡುಕಬೇಕಾದ್ದು ಹೊರತು
ಅತ್ಯಾದುನಿಕ ದುಬಾರಿ ಆಲೋಚನೆಗಳನ್ನಲ್ಲ
ಹಿಂದೆ ಗೊಬ್ಬರದ ರಾಶಿಯಲ್ಲಿ ಹಂದಿಗಳು ಎಂದು
ಇವರ ಒಂದು ಪ್ರಯೋಗದ
ಬಗೆಗೆ ಬರೆದಿದ್ದೆ. ಅಲ್ಲೂ ಗೊಬ್ಬರ
ಮೊಗಚಿಹಾಕಲು ಟ್ರಾಕ್ಟರ್ ಚಾಲಿತ
ದುಬಾರಿ ಯಂತ್ರಗಳೂ ಲಭ್ಯ.
ಆದರೆ ಹಂದಿಗಳು ಬಹು ಚೆನ್ನಾಗಿ
ಆ ಕೆಲಸ ಮಾಡುತ್ತದೆ. ನಾವು ಹುಡುಕಬೇಕಾದ್ದು ಇಂತಹ ಮಾದರಿಗಳನ್ನು.
ನನ್ನ
ನೋಡಿಕೊಳ್ಳುತ್ತಿರುವ ಗಿರಿಯಪ್ಪನ ಹತ್ತಿರವೊಂದು ಮಾರ್ಪಾಡಿಸಿದ ಪಿಕ್ಕಾಸು ಉಂಟು. ಕುಂಟು ಹಾಗೂ
ಅಗಲಬಾಯಿಯಾದ ಕಾರಣ ನೆಲದಲ್ಲಿರುವ
ಕುತ್ತಿ ಇತ್ಯಾದಿ ತೆಗೆಯಲು ತುಂಬಾ ಸಹಾಯಕ.
ಊರ ಕಮ್ಮಾರರಲ್ಲಿಯೇ ಮಾಡಿಸಿದ್ದು.
ಅದಕ್ಕೆ ಪುರುಸೊತ್ತೆ ಇರುವುದಿಲ್ಲ. ಸುತ್ತುಮುತ್ತಲಿನವರೆಲ್ಲ ಕೊಂಡು ಹೋಗುತ್ತಿರುತ್ತಾರೆ. ನಮಗೆ
ಬೇಕಾದ್ದು ಇಂತಹ ತಳಮಟ್ಟದ
ಪ್ರಯತ್ನಗಳು. ಯಂತ್ರ ಮೇಳದಲ್ಲಿ ಹೆಚ್ಚು ಗಮನಸೆಳೆಯಬೇಕಾಗಿದ್ದ ಸಮೀರರ
ಹಾಗೂ ಉಪಾದ್ಯರ ಉಪಕರಣಗಳ
ಬಗೆಗೆ ಜನರ ಕುತೂಹಲ ಎಷ್ಟಿತ್ತು
ಎಂದು ಅಶೋಕವರ್ಧನರು ಚೆನ್ನಾಗಿ ವಿವರಿಸಿದ್ದಾರೆ. http://www.athreebook.com/2012/11/blog-post_12.html#more
ಅಶೋಕವರ್ಧನರು
ಬರೆಯುತ್ತಾರೆ -ದಾರಿ ತಪ್ಪಿದ ಶಿಕ್ಷಣ ಮತ್ತು ಮೌಲ್ಯರಹಿತ ಸಾಮಾಜಿಕ ಭದ್ರತೆಗಳುರೂಢಿಸಿಹೋಗಿ ಇಂದು ನಾವು ಯಾವುದೇ ವೃತ್ತಿರಂಗಕ್ಕೆ ಹೋದರೂಪ್ರಾಥಮಿಕ ಹಂತದಿಂದ ಕಲಿಯಬೇಕಾಗಿದೆ. ಈ ಕಾರಣಕ್ಕೆ ಕೃಷಿಹಿನ್ನೆಲೆಯಿಂದಲೇ ಬಂದವರೂ ಇಂದು ಕೃಷಿಯಲ್ಲಿ ಮುಂದುವರಿಯುವುದಾದರೆಅಸಾಮಾನ್ಯ ಕೊರತೆಗಳು, ಆತಂಕಗಳು ಕಾಡುತ್ತವೆ. ಅವನ್ನು ಗ್ರಹಿಸಿ,ಚರ್ಚಿಸಿ, ರೂಪಿಸಿ, ರೂಢಿಸಿಕೊಡುವಂಥ ಯಂತ್ರ ಪರಿಣತರು ಮೇಳಕ್ಕೆಬರಬೇಕಿತ್ತು. ಆದರೆ ಇಂತಹ ಸ್ಪೂರ್ತಿ ಕೊಟ್ಟು ಮುನ್ನಡೆಸುವ
ಪರಿಣಿತರು ನಮ್ಮಲ್ಲಿದ್ದರೋ ಅನ್ನುವ
ಸಂಶಯ ನನಗೆ. ಯಾಕೆಂದರೆ ಅಧುನಿಕ ಶಿಕ್ಷಣ ಪಡೆದವರೆಲ್ಲ ಮಾದರಿಗೆ ಅಮೇರಿಕದ ಕಡೆ ಮುಖಮಾಡಿರುತ್ತಾರೆ.
ಪ್ರೋಜೆಕ್ಟ್ ವರ್ಕ್ ಸಮಯದಲ್ಲಿ ನನ್ನಲ್ಲಿಗೆ ಹಲವು ವಿದ್ಯಾರ್ಥಿಗಳು ಸಮಾಲೋಚನೆಗೆ ಬಂದದ್ದುಂಟು. ಆ ಚರ್ಚೆಗಳಲ್ಲಿ ಅವರ ಮತ್ತು ಅವರ ಮಾರ್ಗದರ್ಶಿಗಳ ಚಿಂತನೆ ಅರ್ಥವಾಗುತ್ತದೆ. ಮಾಸ್ ಪ್ರೊಡಕ್ಟನ್, ವಿಸಿಟಿಂಗ್ ಕಾರ್ಡ್ ನುಡಿಮುತ್ತು ಉದುರಿಸುವ ಪ್ರೊಫೆಸರುಗಳು ಮಾರ್ಗದರ್ಶಕರು, ನಿರ್ಣಾಯಕರು. :( ಸ್ವಾಭಾವಿಕವಾಗಿ ಹೆಚ್ಚಿನ ಪ್ರೊಜೆಕ್ಟ್ ವರ್ಕ್ ನಿಷ್ಪ್ರಯೋಜಕ. ವಿದ್ಯಾರ್ಥಿಗಳ ಸಾಮಾನ್ಯ ವಾದ ಸರಣಿ - ನಾವು ಮೆಕಾನಿಕಲ್ ವಿಬಾಗದವರು. ಹಾಗೆ ಒಂದು ಪೆಟ್ರೊಲ್ ಇಂಜಿನ್ ಜೋಡಿಸಿದ ಯಂತ್ರದ ಮಾರ್ಪಾಡಿಗೆ ಆಸಕ್ತಿ ಹೊಂದಿದ್ದೇವೆ ಎನ್ನುವ ಪೂರ್ವಾಗ್ರಹ ತುಂಬಿದ ಮನಸ್ಸಿನಲ್ಲಿಯೇ ಬಂದಿರುತ್ತಾರೆ. ನೈಜ ಸಾಧನೆ ಬಗೆಗೆ ಅವರಿಗೆ ಆಸಕ್ತಿ ಇರುವುದೇ ಇಲ್ಲ.
ಅಧುನಿಕ ಕೃಷಿ
ವಿಜ್ಞಾನ ಅಂದರೆ ಕೃಷಿ
ಒಳಸುರಿ ಮಾರುಕಟ್ಟೆ ಮಣ್ಣಿನ
ಫಲವತ್ತತೆ ನಿರಾಕರಿಸುತ್ತದೆ. ಹೌದು. ಒಳಸುರಿ ಮಾರುಕಟ್ಟೆಯನ್ನೇ ಕೃಷಿ ವಿಜ್ಞಾನ ಎಂದು ನಂಬತೊಡಗಿದ್ದೇವೆ. ಮಣ್ಣಿರುವುದು
ಬರೇ ಗಿಡಗಳ ಹಿಡಿದಿಡಲು.
ಅವಶ್ಯ ಒಳಸುರಿ ಬುದ್ದಿವಂತ
ರೈತ ಬಳಸುತ್ತಾನೆ. ವಿಜ್ಞಾನಿ
ಎಂದರೆ ಇಲ್ಲಿ ಕಂಪೇನಿಗಳ
ಮುಖವಾಡ ಮತ್ತು ಬುದ್ದಿವಂತ
ರೈತ ಅವುಗಳ ಪ್ರಚಾರಕ್ಕೆ
ಸಿಕ್ಕಿ ಬಿದ್ದ ಬಕ್ರಾ. ಸಾವಯುವ ಕೃಷಿ ಮಣ್ಣಿನ ಸಮತೋಲನಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಹಾಗೆ ಇಂದು ಕೃಷಿ ಮಾಡಲು ಯಂತ್ರಗಳು ಬೇಕೆ ಬೇಕು ಎಂದು ನಂಬಿದ್ದೇವೆ ಅಥವಾ ನಮ್ಮನ್ನು ನಂಬಿಸಿದ್ದಾರೆ ಅನ್ನಬಹುದು. :)
ದೇಹದ ನೈಸರ್ಗಿಕ ಚಲನೆಗೆ ಅನುಗುಣವಾಗಿ ಕೆಲಸ ಮಾಡುವಂತೆ ಉಪಕರಣ ರಚನೆಯಾಗಬೇಕು. ಪರದೇಶಗಳಲ್ಲಿ ಉಪಯೋಗಿಸುವ ಕೊಟ್ಟು ಓಡಿಬಂದು ಹಾರುವಂತೆ ಮಣ್ಣು ಎತ್ತಿ ಎಸೆಯುವ ರೀತಿ ರೂಪಿಸಿದ್ದಾರೆ. ನಮ್ಮಲ್ಲಿ ಕಾಂಕ್ರೀಟ್ ಕೆಲಸಗಳಿಗೆ ಅಂತಹದನ್ನು ಉಪಯೋಗಿಸುತ್ತಾರೆ. ಮಣ್ಣಿನ ಕೆಲಸಕ್ಕೆ ನಮ್ಮಲ್ಲಿ ಪೂರ್ತಿ ಶಕ್ತಿ ಹಾಕಿಯೇ ಎಳೆಯಬೇಕು. ಇದನ್ನು ಬದಲಾವಣೆ ಸಾದ್ಯವೋ ? ಜನ ಒಪ್ಪುತ್ತಾರೋ ಚಿಂತನೆಯೋಗ್ಯ ಅನಿಸುತ್ತದ.
ಈಗ ಪೇಟೆಯ ಹೆಂಗಸರರಿಗೆ ಕಸ ಗುಡಿಸಲು ಬಗ್ಗ ಬೇಕಾಗಿಲ್ಲ, ನೆಲ ಒರಸಲು ಕೂರಬೇಕಾಗಿಲ್ಲ. ಮಾಲುಗಳಲ್ಲೂ …. :) ಆದರೆ ಹಳ್ಳಿಯವರಿಗೆ ಬಗ್ಗಿ ಮಾಡುವ ಕೆಲಸಗಳಿಗೆ ಪರಿಹಾರಗಳಿನ್ನೂ ತಲಪಲಿಲ್ಲ. :( ಇಲ್ಲೂ ನಮಗೆ ಈಗ ಅತಿ ಅಗತ್ಯವೆನಿಸುವುದು ಪೆಟ್ರೊಲ್ ಯಂತ್ರಗಳಲ್ಲ. ಸರಳ ಉಪಕರಣಗಳು. ಇವೆಲ್ಲ ನಮ್ಮವರೇ ಕೂತು ಚಿಂತಿಸಬೇಕಾದ್ದು ಹೊರತು ಹೊರಗಿನ ಆಲೋಚನೆ ಪ್ರಯೋಜನವಿಲ್ಲ.
ವೈಯುಕ್ತಿಕ
ಕಾರಣಗಳಿಂದಾಗಿ ಕೃಷಿಯಿಂದ ನಿವೃತ್ತನಾದ
ನಾನು ಯಂತ್ರ ಮೇಳಕ್ಕೆ ಹೋಗಲಿಲ್ಲ.
ಕೆಲವು ವಿಚಾರಗಳಲ್ಲಿ ಗೊಂದಲಗಳಿದ್ದೂ ಬರಹಕ್ಕಿಳಿಸಿದ್ದೇನೆ. ಕೆಲವೆಡೆ ಶಬ್ದ ಪ್ರಯೋಗಗಳೂ ತಪ್ಪಿರಬಹುದು. ಯಂತ್ರಗಳೇ ಬೇಡ ಎಂದು ನಾನು ಹೇಳುವುದಲ್ಲ, ಅವುಗಳ ಬಗೆಗೆ ಇರುವ ಅತಿರೇಕದ ಭ್ರಮೆಯಿಂದ ಹೊರ ಬಂದು ಚಿಂತಿಸುವ. ಸಾರ್ವಜನಿಕೆ ಸಾರಿಗೆ ಬೇಕು.
ದಿನಕ್ಕೆ ಇಪ್ಪತ್ತೆರಡು ಗಂಟೆ ತುಕ್ಕು ಹಿಡಿಯುತ್ತಾ ಕೂತಿರುವ
ವೈಯುಕ್ತಿಕ ಕಾರು ಉಪಯೋಗ ಕಡಿಮೆಯಾಗಬೇಕು ಎನ್ನುವ
ಚಿಂತನೆ ನನ್ನದು. ಅದೇ
ರೀತಿ ನಮ್ಮ ಕೈಗೆಟಕುವ
ಸರಳ ಉಪಕರಣಗಳು ಹೆಚ್ಚೆಚ್ಚು ಬರಲಿ ಅನ್ನುವ ಅಭಿಲಾಷೆ.
ಒಬಾಮ ಗೆದ್ದ ಎಂದಾಕ್ಷಣ
ನನಗೆ ಭಾರಿ ಸಂತಸವೇನೂ ಆಗಲಿಲ್ಲ.
ಆದರೆ ತಮ್ಮ
ವ್ಯಾಪಾರಕ್ಕೆ ತೊಂದರೆ ಎಂದು ನಮ್ಮ ಸಾಫ್ಟ್ ವೇರ್
ಧನಿಗಳಿಗೆ ಆದಂತೆ ಬೇಸರವೂ
ಆಗಲಿಲ್ಲ. ಈ ಗೆಲುವಿನಿಂದಾಗಿ ನಾವಿರುವ ಈ ಪ್ರಪಂಚ ಒಂದು ಕಂಟಕದಿಂದ
ಪಾರಾದದ್ದು ಮಾತ್ರ ಖಂಡಿತ ಎನ್ನಬಹುದು.
ಪ್ರಪಂಚ ಚಪ್ಪಟೆಯಾಗಿದೆ ಎನ್ನುವ
ಹಲವು ಒಬಾಮ ವಿರೋದಿ ಪಕ್ಷದ ಬೈಬಲ್ ಪಂಡಿತ ದುಷ್ಟರು
ಮಣ್ಣುಮುಕ್ಕಿದ್ದೂ ಸಂತಸದ ವಿಚಾರ
ಈ ಸಲ ಚುನಾವಣೆಯಲ್ಲಿ ನಿರ್ಣಾಯಕ
ತಿರುವು ಕೊಟ್ಟದ್ದು ಸಾಂಡಿ ಚಂಡಮಾರುತ. ಅಷ್ಟರ ವರೆಗೆ
ಎರಡೂ ಪಕ್ಷದವರೂ ಭೂಮಿ ಬಿಸಿಯಾಗುತ್ತಿರುವ ವಿಚಾರ ಪ್ರಚಾರದಿಂದ ಹೊರಗಿಟ್ಟಿದ್ದರು. ಒಬಾಮ ಉತ್ತರ
ದ್ರುವದ ಹಿಮಕವಚ ಕರಗಿ ಸಮುದ್ರ ಮೇಲೇರುವುದನ್ನು ತಡೆಗಟ್ಟುವುದಾಗಿ ಹೇಳಿದ್ದ
ಮಾತು ರೊಮ್ನಿ ಲೆವಡಿ ಮಾಡಿದ್ದ. ಕೊನೆಗೆ
ಚಂಡಮಾರುತ ಅಪ್ಪಳಿಸುತ್ತದೆ ಎನ್ನುವಾಗ
ಎರಡೂ ಅಭ್ಯರ್ಥಿಗಳು ಪೂರ್ವ ಕರಾವಳಿಯ
ಪ್ರಚಾರ ತಿರುಗಾಟವನ್ನು
ರದ್ದುಪಡಿಸಿದರು.
ಆದರೆ ಚಂಡಮಾರುತ ಅಪ್ಪಳಿಸಿದಾಗ -
ಒಬಾಮ ಚುರುಕಾದ. ಪರಿಹಾರ ಒದಗಿಸಿದ. ಸಮುದ್ರದ
ಅಬ್ಬರದ ದಿನ ಅಪ್ಪಳಿಸಿದ ಚಂಡಮಾರುತ
ಅಪಾರ ಹಾನಿ ಉಂಟುಮಾಡಿತು.
ನ್ಯುಯೊರ್ಕ್ ಪಟ್ಟಣದ ನಿವಾಸಿಗಳು ಶಿಲಾಯುಗಕ್ಕೆ ತಳ್ಳಲ್ಪಟ್ಟ ಕಥೆ ನಾಗೇಶ ಹೆಗ್ಡೆಯವರ
ಪ್ರಜಾವಾಣಿ ಅಂಕಣ ಚೆನ್ನಾಗಿ ಚಿತ್ರಿಸುತ್ತದೆ.
ಆ ಆನೆ ಪಕ್ಷದ ಹಲವು ಪುಡಾರಿಗಳು ಮಹಿಳೆಯರ ಹಕ್ಕಿನ ವಿರುದ್ದ
ಯುದ್ದವನ್ನೇ ಸಾರಿದ್ದರು. ಅತ್ಯಾಚಾರಕ್ಕೆ
ಒಳಗಾಗಿ ಜನಿಸಿದ ಮಗು ಸಹಾ ದೇವರ ಕೊಡುಗೆ
/ ಅತ್ಯಾಚಾರವೇ ಮಹಿಳೆಯ ವಿರುದ್ದ ಹಿಂಸೆ. ಪುನಹ
ಗರ್ಬಪಾತ ಎನ್ನುವ ಹಿಂಸೆಗೆ ಮಹಿಳೆಯ ಒಳಪಡಿಸುವುದು
ತಪ್ಪು / ಅತ್ಯಾಚಾರದಲ್ಲಿ ಮಹಿಳೆಯ
ಶರೀರ ತನ್ನ ಕಾಪಾಡಿಕೊಳ್ಳುತ್ತದೆ ಇತ್ಯಾದಿ
ನುಡಿಮುತ್ತು ಉದುರಿಸಿದ ಪುಡಾರಿಗಳನ್ನೆಲ್ಲ ಮತದಾರರು ಮನೆಗೆ ಕಳುಹಿಸಿದ್ದಾರೆ.
ಅಮೇರಿಕದಲ್ಲಿ ನವೆಂಬರ್ ಮೊದಲ ವಾರ ಗಡಿಯಾರ ಹಿಂದಕ್ಕಿಡುವ ಪರಿಪಾಠ. ಸೆಕೆಗಾಲದಲ್ಲಿ ಮುಂದಿಡುವ ಇದನ್ನು daylight saving time ಅನ್ನುತ್ತಾರೆ. ರೊಮ್ನಿಯ ವರ್ತನೆ ಬಗೆಗೆ ಚಿಂತನೆಗೆ ಹಚ್ಚುವ ಚಿತ್ರವೊಂದನ್ನು ಇಲ್ಲಿ ಹಾಕಿದ್ದೇನೆ.
ಕಳೆದ ವಾರ ಬೆಂಗಳೂರಿಗೆ ಬಂದ ಸ್ಟೆಫನ್ ಹಾರ್ಪರ್
ಕೆನಡಾ ದೇಶದ ಜನರ ಪ್ರತಿನಿಧಿ, ಪ್ರದಾನಿ ಎನ್ನುವ ಬದಲು ತೈಲ ಕಂಪೇನಿ
ನೌಕರ ಎಂದರೆವ್ ಹೆಚ್ಚು ಸಮಂಜಸ. ಸಾವಿರಾರು ಎಕ್ರೆ ಕಾಡು ಕಡಿಸಿ ತೈಲ ಮರಳಿನ ಗಣಿಗಾರಿಕೆಗೆ ಪ್ರೋತ್ಸಾಹಿಸಿದ
ಮಹಾನುಬಾವ. ವಿರೊಧ ವ್ಯಕ್ತಪಡಿಸಿದ ವಿಜ್ಞಾನಿಗಳಿಗೆ ಪರಿಸರವಾದಿಗಳಿಗೆ ಅಪಾರ ಹಿಂಸೆ ಕೊಟ್ಟವ.
ಆದರೆ ರಾಜಕಾರಣಿ ಅಲ್ಲವೇ ! ಕೆನಡದಲ್ಲೂ
ಮತದಾನ ಹಕ್ಕಿನ ಕನ್ನಡಿಗರಿದ್ದಾರೆ. ಹಾಗೆ ಅವರಿಗೆಲ್ಲ ಫೋಟೊ ತೋರಿಸಲು
ಈ ಅಸಾಮಿ ಇಲ್ಲಿ ದೇವಸ್ಥಾನಕ್ಕೂ ಬೇಟಿ ಕೊಡುತ್ತಾನೆ.
ಈ ಹಾರ್ಪರ್ ಅವನನ್ನು ಜೋರ್ಜ್ ಬುಸ್ನ ಕಿರಿ ತಮ್ಮ
ಎನ್ನಬಹುದು. ಅಂದು ಬುಸ್ ಇರಾಕ್ ದಾಳಿ ಮಾಡಿದ. ಅದರಲ್ಲಿ ರಾಜಕಾರ್ಯದ ಜತೆ ಸ್ವಕಾರ್ಯವೂ ಸೇರಿತ್ತು. ಟೆಕ್ಸಾಸ್ ಪ್ರಾಂತ್ಯದ ಬುಶ್ ಕುಟುಂಬಕ್ಕೆ ತೈಲ ವ್ಯಾಪಾರ ಸಂಪರ್ಕವಿದೆ. ಇಂದು ಈ ಮನುಷ್ಯ
ಕೆನಡದೊಳಗಿನ ಆದಿವಾಸಿಗಳ ಬೂಮಿ ಲಗಾಡಿ
ತೆಗೆಯುತ್ತಿದ್ದಾನೆ. ಟಾರ್ ಮರಳಿನ ಗಣಿಗಾರಿಕೆ ಬಹಳ ಗಲೀಜು. ಎರಡು ಟನ್ ಮರಳು ಪ್ಲಸ್ ಐದು ಟನ್ ನೀರು ಕುದಿಸಿದರೆ ಒಂದು ಬಾರಲ್ ತೈಲ ದೊರಕುತ್ತದೆ. ಉಳಿದ ಕಶಾಯ ಯಾವುದೇ ಮುಲಾಜಿಲ್ಲದೆ ನದಿ ನೀರಿಗೆ ಬಿಸಾಕುತ್ತಾರೆ.
ಬಾರತ ಬಯಲು ಶೌಚಾಲಯ ಪದ್ದತಿ
ಅನುಸರಿತ್ತಿರಬಹುದು. ಜಗತ್ತಿನ ನಾಗರಿಕರು ಪತ್ರಿಕೆಗಳು ಅಣಕಿಸಬಹುದು. ಆದರೆ ಈ ಅನಾಮಿಕ ತೈಲ ಕಂಪೇನಿಗಳು
ಜಗತ್ತನ್ನೇ ತಮ್ಮ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿವೆ. ಹೊಗೆ ಹಾಗೂ ಮಲೀನತೆಯನ್ನು
ಪರೀಸರಕ್ಕೆ ಬೀಸಾಕುತ್ತಿವೆ. ಅಪಾರ ಹಾನಿ ಉಂಟು ಮಾಡುವುದು ಅಗೋಚರವಾಗಿಯೇ ಉಳಿದುಬಿಡುತ್ತದೆ.
ಈ ಮದ್ಯೆ ಒಂದು ಸಂತಸದ ವಿಚಾರ.
ಅಮೇರಿಕದ ಹಲವು ಕಾಲೇಜುಗಳ ನಿಯಂತ್ರಣದಲ್ಲಿ ಅಪಾರ ಬಂಡವಾಳ ಇರುತ್ತದೆ. ಹಿಂದೆ ಬಹುಜನ ದಾನಿಗಳು ಅಮೇರಿಕದ ಕಾಲೇಜುಗಳ ನಿರ್ವಹಣೆಗೆ ಹಾಗೂ ವಿದ್ಯಾರ್ಥಿ ವೇತನಕ್ಕೆ ಬಹಳಷ್ಟು ದಾನ ಇತ್ತಿದ್ದಾರೆ. ಅವೆಲ್ಲ
ಈಗ ಕಾಲೇಜುಗಳ ಹೆಸರಿನಲ್ಲಿ
ಶೇರುಮಾರುಕಟ್ಟೆಯಲ್ಲಿ ಇರುತ್ತದೆ. ಹಿಂದೆ ದಕ್ಷಿಣ ಆಪ್ರಿಕದಲ್ಲಿ
ವರ್ಣಬೇದ ನಾಶಮಾಡಲು ಕಾಲೇಜುಗಳು
ಅಲ್ಲಿನ ಕಂಪೇನಿಗಳ ಮೇಲೆ ಹೂಡಿದ್ದ ಬಂಡವಾಳ
ಹಿಂತೆಗೆತವೂ ಬಹು ನಿರ್ಣಾಯಕ ಪಾತ್ರವಹಿಸಿದೆ.
ಈಗ ಅದೇ ಮಾದರಿ ತೈಲ ಕಂಪೇನಿ
ವಿರೋದ ಅನುಸರಿಸಲು ಪರಿಸರ ಹೋರಾಟ ಗುಂಪು ಕರೆ ಇತ್ತಿದೆ
ಮಾತ್ರವಲ್ಲ ಸಫಲವೂ ಆಗುತ್ತಿದೆ.
ಪ್ರಪಂಚದ ಜನಜೀವನ ಸಂಪೂರ್ಣ ನಾಶವಾಗುವ
ಮಿತಿಯ ಐದು ಪಟ್ಟು ಪೆಟ್ರೊಲ್, ಕಲ್ಲಿದ್ದಲು ದಾಸ್ತಾನು ಇದೆ. ಆ ಕಂಪೇನಿಗಳ
ಮಾರುಕಟ್ಟೆ ಬೆಲೆ ಆ ದಾಸ್ತಾನಿನ ಮೌಲ್ಯವನ್ನೂ
ಒಳಪಟ್ಟಿದೆ. ಅಕಸ್ಮಾತ್ ಆಷ್ಟೂ ಇಂದನ ದಹಿಸಿದರೆ ಹಿಂದೆ ಬರಲಾಗದ ಶೋಚನೀಯ
ಸ್ಥಿತಿಗೆ ಪ್ರಪಂಚ
ತಲಪುತ್ತದೆ. ಉದಾಹರಣೆ ರಿಲಿಯನ್ಸ್
ಪಾಲುಬಂಡವಾಳ ಎಂಟುನೂರು ರೂಪಾಯಿ ಬೆಲೆ
ಈಗ ಆಂದ್ರದ ಕರಾವಳಿಯಲ್ಲಿರುವ ನೈಸರ್ಗಿಕ
ಅನಿಲದ ಮೌಲ್ಯವನ್ನೂ ಒಳಗೊಂಡಿದೆ.
ಗಣಿಗಾರಿಕೆ ಎಷ್ಟು ಶಕ್ತಿಶಾಲಿ ಎಂದರೆ ಎಡ್ಡಿಯ ಕಾಲದಲ್ಲಿ
ಕರ್ನಾಟಕದ ರಸ್ತೆಗಳಲ್ಲಿ ರೆಡ್ಡಿಯ ಲಾರಿಗಳ
ಹಾರಾಟ ನೆನಪಿಸಿಕೊಂಡರೆ ಸಾಕು. ಮೊನ್ನೆ ಪ್ರಾಮಾಣಿಕ
ತೈಲ ಮಂತ್ರಿ ಜೈಪಾಲ ರೆಡ್ಡಿಯನ್ನು ಅಂಬಾನಿ
ಎಂಬ ಎಣ್ಣೆ ದೊರೆ ಕೆಳಗಿಳಿಸಿದ್ದು ನೆನಪಿಸಿಕೊಳ್ಳಬಹುದು. ಈ ಸನ್ನಿವೇಶ ಇಂದು
ಇಡೀ ಪ್ರಪಂಚದಲ್ಲಿದೆ. ಅಂತೂ ಒಬಾಮ ಗೆಲುವು ಪರಿಸರಕ್ಕೆ ಖಂಡಿತ ಲಾಭ. ಪುನಹ ಚುನಾವಣೆ ಎದುರಿಸುವ ಅನಿವಾರ್ಯತೆ ಇಲ್ಲದಿರುವ ಒಬಾಮ ಈಗಾಗಲೇ ದಿಟ್ಟ ಹೆಜ್ಜೆಗಳಿಡುವ ಲಕ್ಷಣ ತೋರಿಸಿದ್ದಾನೆ. :-) http://www.iol.co.za/scitech/science/environment/obama-re-commits-to-climate-change-pledge-1.1419983#.UJ_D_uSDqzl
ಕನ್ನಡದ ಉದಯವಾಣಿಯಲ್ಲೂ ಇಂಗ್ಲೀಶಿನಲ್ಲಿ ನ್ಯೂಸ್ ವೀಕ್ ಬಳಗದ ಜಾಲ ಪತ್ರಿಕೆಯಲ್ಲೂ ಬೆಂಗಳೂರು ಬಗೆಗಿನ ಲೇಖನ ಪ್ರಕಟವಾಗಿತ್ತು. ಅಮೇರಿಕದಿಂದ
ಪ್ರಕಟವಾಗುವ ಪತ್ರಿಕೆಯಲ್ಲೂ ಬೆಂಗಳೂರಿನ
ಬಗ್ಗೆ ಕೆಟ್ಟದಾಗಿ ಬರೆಯುವ ಈ ಕಾರ್ನಾಡ್
ಬಗೆಗೆ ಯೋಚಿಸಲೂ ಹೇಸಿಗೆ
ಅನಿಸುತ್ತದೆ - ಹಲವಾರು ವರ್ಷಗಳಿಂದ ಇಲ್ಲಿಯೇ
ಬದುಕಿರಿರುವುದಾದರೂ ನೆಲೆ ನಿಂತ ಊರಿಗೆ
ಸಮಾಜಕ್ಕೆ ಈತನ ಕೊಡುಗೆ
ಸೊನ್ನೆ. ಬೆಂಗಳೂರಿನ ಕಸದ
ರಾಶಿಗೆ ಯುರೋಪಿನಂತಿತ್ತು ಬೆಂಗಳೂರು
ಎನ್ನುವ ಈ ಕಾರ್ನಾಡನ
ಕೊಡುಗೆ ಇಲ್ಲವೇ ? ಉಂಟು. ತಮ್ಮ ಪಾಲಿನ ಕಸ.
ನಾ ಮೊದಲು
ನೋಡಿದ ಬೆಂಗಳೂರು ಇದಲ್ಲವಲ್ಲ ಎಂದು ಗಿರೀಷ ಕಾರ್ನಾಡ ಉದಯವಾಣಿಯಲ್ಲಿ ಹಪಹಪಿಸಿದ್ದಾರೆ. ಆದರೆ ದಾರಿ
ಅಗಲಗೊಳಿಸಲು ಅವರ ಮನೆ ಗೋಡೆ ಕೆಡವುದರ ವರೆಗೆ
ಅವರೂ ಸುಮ್ಮನಿದ್ದರು. ಮುಂಬಯಿಯಲ್ಲಿ ಪದ್ಯ ಹೇಳುವವಳಿಗಾಗಿ ಬಹಳ ಅಗತ್ಯವಿದ್ದ ಮೇಲ್ಸೇತುವೆ ನಿರ್ಮಾಣ ಸ್ಥಗಿತಗೊಳಿಸಲಾಗಿತ್ತು. ವಿಳಂಬವಾದಂತೆ ಯೋಜನಾ ಖರ್ಚು ಏರುತ್ತಾ ಹೋಗುತ್ತದೆ.
ಪ್ರತಿ ದಿನ ನಾಲ್ಕು
ನೂರು ಕಾರುಗಳು ಸಾವಿರದ ಇನ್ನೂರು ಬೈಕುಗಳು
ರಸ್ತೆಗಿಳಿಯುತ್ತದೆ ಎನ್ನುವ ಈ ಕಾರ್ನಾಡರು
ಸ್ವತಹಾ ಕಾರು ಉಪಯೋಗಿಸುವವರೇ
ಆಗಿದ್ದಾರಲ್ಲ ! ರಸ್ತೆ ಅಗಲವಾದರೆ ಇವರಿಗೂ ಅನುಕೂಲವಲ್ಲವೇ ? ರಾಚ್ಗನ್ ತಮಿಳು ಸಿನೆಮದಲ್ಲಿ ಕಾರು ತಯಾರಿ ಕಂಪೇನಿ ಯಜಮಾನನಾಗಿ ನಟಿಸಿದ
ಈ ಕಾರ್ನಾಡರಿಗೆ ಕಾರು
ತಯಾರಿ ಹಾಗೂ ಉಪಯೋಗದ
ಸಮಸ್ಯೆಗಳ ಬಗೆಗೆ
ಅರಿವು ಇರಬಹುದಲ್ಲ ??
ಕೊನೆಗೆ ಇಂಗ್ಲೀಷ್ ಕನ್ನಡದಲ್ಲೆರಡರಲ್ಲೂ ತಮ್ಮ ಗೋಳು ಬರೆಯುವ ಅವರು ಮೊದಲು
ವೈಯುಕ್ತಿಕ
ವಾಹನದ ಬದಲಾಗಿ ವೈಯುಕ್ತಿಕ ಶ್ರಮ ಉಪಯೋಗಿಸಿ ನಡೆಯೋಣ, ಸೈಕಲ್
ಉಪಯೋಗಿಸೋಣ ಅಥವಾ ಬಸ್ಸಿನ ವ್ಯವಸ್ಥೆ ಹೆಚ್ಚು ಬಲಿಷ್ಟಗೊಳಿಸೋಣ ಎನ್ನಬಹುದಾಗಿತ್ತು. ಅವರ ನಾಟಕಗಳಲ್ಲಿ
ಈ ಸಂದೇಶ ಕೊಡುತ್ತಿದ್ದರೆ ಪರಿಣಾಮಕಾರಿಯಾಗುತಿತ್ತು.
ಹಿಂದೊಮ್ಮೆ ಸೈಕಲ್ ಜತೆಗೆ ಪ್ರಪಂಚ ಸುತ್ತಿದೆ. ಹಕ್ಕಿಯಂತೆ ಹಾರುವ ಆಸೆಯಲ್ಲಿ ಯಡವಟ್ಟಾಗಿ ಬೆನ್ನೆಲುಬು ಡಮಾರ್. ಸದಾ ಬಾದಿಸುವ ನೋವು ಮರೆಯಲು ಹಾಗೂ ಅನಿಸಿಕೆಗಳ ಹಂಚಿಕೊಳ್ಳಲು ಈ ಬರವಣಿಕೆ. ಈಗ ದಕ್ಷಿಣ ಕನ್ನಡದಲ್ಲಿ [ನಿವೃತ್ತ ] ಅಡಿಕೆ ಕೃಷಿಕ. ವಂದನೆಗಳು