ಸ್ವಾವಲಂಬನೆ ನೆಲೆಯಲ್ಲಿ ನಾನು ಸೈಕಲನ್ನು ಪ್ರೀತಿಸಿದರೂ ಇಂದಿನ ದೈಹಿಕ ದುರ್ಬಲತೆಯಿಂದ ಸೈಕಲಿನಲ್ಲಿ ಕೂರುವಂತಿಲ್ಲ. ಹಾಗೆಯೇ ಪೆಟ್ರೋಲ್ ಬಳಸುವ ಸದಾಸಂ ನಿತ್ಯವೂ ಉಪಯೋಗಿಸುವುದು ಅನಿವಾರ್ಯವಾಗಿದೆ. ಇವೆರಡನ್ನೂ ಜತೆಗೂಡಿಸಿದಂತಹ ಒಂದು ಕುತೂಹಲಕರವಾದ ವಾಹನ ಜರ್ಮನಿಯಲ್ಲಿ ಅನ್ವೇಷಣೆ ಮಾಡಿದ್ದಾರೆ.
ಇದೊಂದು ಜರ್ಮನಿಯಲ್ಲಿ ತಯಾರಾದ ನಾಲ್ಕು ಚಕ್ರಕ್ಕೂ ಚಾಲನೆ ಇರುವ ಎಲ್ಲೆಡೆ ಸಾಗಲು ಸಾದ್ಯವಾಗುವಂತಹ ಗಾಡಿ. ಒಂದು ದೊಡ್ಡ ವಸ್ತು ಪ್ರದರ್ಶನದಲ್ಲಿ ಇದರನ್ನು ತೋರಿಸಿದರೂ ದೊಡ್ದ ಮಟ್ಟದ ತಯಾರಿ ದೂರ ಇರುವಂತಿದೆ. ಅಲ್ಲಿ ಒಬ್ಬ ವೃತ್ತಿಪರ ಸೈಕಲಿಗ ಓಡಿಸಿದ ಕಾರಣ ಜನಸಾಮಾನ್ಯರಿಗೆ ಇದನ್ನು ತುಳಿಯಲು ಸಾದ್ಯವೋ ಅನ್ನುವುದು ಇನ್ನೂ ನಿಗೂಡ. ಅವರ ಸಾದನೆ ಮಾತ್ರ ಖಂಡಿತ ಮೆಚ್ಚುವಂತದ್ದು.
ಖಾಯಂ ಆಗಿ ನಾಲ್ಕು ಚಕ್ರಕ್ಕೂ ಚಾಲನೆ, ಹೈಡ್ರಾಲಿಕ್ ಬ್ರೇಕು ಮತ್ತು ಅತ್ಯುತ್ತಮ ಮಟ್ಟದ ಸೈಕಲ್ ಗೇರುಗಳ ಒಳಗೊಂಡ ಈ ವಾಹನದ ಬೆಲೆ ಬಹಳ ದುಬಾರಿಯಾಗಿರುವ ಎಲ್ಲ ಲಕ್ಷಣಗಳಿರುವ ಕಾರಣ ನಾವು ಕನಸು ಕಾಣಬಹುದಾಷ್ಟೇ.
ನಾನು ಚೀನಾದಿಂದ ಸದಾಸಂ ತರಿಸುವ ಮೊದಲು ಇದಕ್ಕೆ ಹೋಲಿಕೆಯುಳ್ಳ ಆದರೆ ಪುಟ್ಟ ಇಂಜಿನ್ ಅಳವಡಿಸಿದ ಒಂದು ಸರಳ Go-kart ಇಲ್ಲಿ ತಯಾರಿಸುವ ಬಗ್ಗೆ ಬಹಳ ಯೋಚಿಸಿದ್ದೆ. ಆದರೆ ಯಾರೂ ನನ್ನಷ್ಟು ಆಸಕ್ತಿ ತೋರಿಸದ ಕಾರಣ ಆಲೋಚನೆ ಬಿಡಬೇಕಾಯಿತು. ಈಗ ಗಾಡಿಯ ಬಗೆಗೆ ಪ್ರಾಯೋಜಿಕ ಪರೀಕ್ಷೆಗಳೂ ನಡೆದಿಲ್ಲ. ಉಪಯುಕ್ತ ಎನಿಸುವುದಾದರೆ ಇದೇ ಮಾದರಿಯ ಸರಳ ವಾಹನ ನಮ್ಮಲ್ಲಿ ತಯಾರಿಸಲು ಖಂಡಿತ ಸಾದ್ಯ.
ವಿವರಗಳಿಗೆ
http://www.treehugger.com/files/2008/06/four-wheel-drive-bicycle.php
ಅಲ್ಲೂ ಉಂಟು ಸದಾಸಂ
Friday, July 11, 2008
Subscribe to:
Post Comments (Atom)
No comments:
Post a Comment