Wednesday, July 02, 2008

George W Bush ಸ್ಮರಣಾರ್ತ

ಅಮೇರಿಕದಲ್ಲೊಂದು ಬರ್ಜರಿ ಗುಂಡು ಪಾರ್ಟಿ. ಅಲ್ಲಿ ನಡೆದ ಚರ್ಚೆ ಮತ್ತು ತೀರ್ಮಾನದ ಮುಖ್ಯಾಂಶಗಳು ಈ ರೀತಿಯಾಗಿವೆ. ಬುಷ್ ಸಾಹೇಬರು ಸದ್ಯದಲ್ಲ್ಲಿ ಮಾಜಿಯಾಗುತ್ತಾರೆ. ದೇಶವನ್ನು ಲಗಾಡಿ ತೆಗೆಯಲು ಅವರ ಸಾದನೆ ನಿಜಕ್ಕೂ ಅದ್ಬುತ. ಅಸ್ತಿತ್ವದಲ್ಲಿ ಇಲ್ಲದ ಅಪಾಯಕಾರಿ ಅಸ್ತ್ರಗಳ ಹುಡುಕಿಕೊಂಡು ಅವರ ವೈಯುಕ್ತಿಕ ಸ್ವಾರ್ಥಕ್ಕಾಗಿ ಇರಾಕಿಗೆ ಸೇನೆ ಕಳುಹಿಸಿದ್ದಾರೆ. ಸೈನ್ಯ ಇರಾಕಿಗೆ ಹುಡುಕಲು ಹೋದದ್ದು ಅಪಾಯಕಾರಿ ಅಸ್ತ್ರಗಳನ್ನಲ್ಲ, ಅಲ್ಲಿನ ತೈಲ ಸಂಪತ್ತಿನ ವಶ ಪಡಿಸಿಕೊಳ್ಳುವುದಕ್ಕೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಪರಿಣಾಮವಾಗಿ ತೈಲ ಬೆಲೆ ನಾಲ್ಕು ಪಟ್ಟು ಏರಿದ್ದು ಹಾಗೂ ನಾಲ್ಕು ಸಾವಿರ ಅಮೇರಿಕದ ಸೈನಿಕರು ಅಲ್ಲಿ ಸತ್ತಿರುವುದು ನಮಗೆ ಜೀರ್ಣಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಅದರೆ ನಾಲ್ಕು ಲಕ್ಷ ಇರಾಕಿನ ಜನ ಸತ್ತರೂ ಅದು ಚರ್ಚಾಸ್ಪದ ವಿಚಾರವೇ ಅಲ್ಲ. ಜಾಗತಿಕ ಪರಿಸರಕ್ಕೆ ಮತ್ತು ಸಮಾಜಕ್ಕೆ ಬುಷ್ ಮಾಡಿದ ಹಾನಿ ಅಪರಿಮಿತ. ಹೀಗೆಲ್ಲ ಗುಂಡು ಪಾರ್ಟಿಯಲ್ಲಿ ಚರ್ಚೆಯಾಗಿ ಮಂಡನೆಯಾದ ಒಂದು ಕ್ರಾಂತಿಕಾರಿ ಪ್ರಸ್ತಾಪಕ್ಕೆ ನೆರೆದವರಿಂದ ಬಾರಿ ಬೆಂಬಲ ವ್ಯಕ್ತವಾಯಿತು. ಪ್ರಸ್ತಾಪ : ಊರ ಕೊಳಚೆ ನೀರಿನ ನಿರ್ಮಲಿಕರಣ ಕೇಂದ್ರಕ್ಕೆ ಬುಷ್ ಸಾಹೇಬರ ಹೆಸರಿಟ್ಟರೆ ಹೇಗೆ ??

ಪ್ರತಿಯೊಂದು ದೇಶದಲ್ಲಿ ಪ್ರಾತಸ್ಮರಣೀಯರನ್ನು ಗೌರವಿಸುವುದು ಸಂಪ್ರದಾಯ. ನಮ್ಮಲ್ಲಿ ಇಂದಿರಾ ಗಾಂದಿ, ನೆಹರು, ರಾಜೀವ ಗಾಂದಿಯವರ ಹೆಸರನ್ನು ರಸ್ತೆಗೆ, ವಿಮಾನ ನಿಲ್ದಾಣಕ್ಕೆ ಮತ್ತು ಆಸ್ಪತ್ರೆಗೆ ಇಟ್ಟಂತೆ ಅಮೇರಿಕದಲ್ಲೂ ಹಲವಾರು ಚಾರಿತ್ರಿಕ ಹಾಗೂ ಮುಖ್ಯ ಜಾಗಗಳಿಗೆ ಸೈನಿಕರ, ಮಾಜಿ ರಾಷ್ಟ್ರಾದ್ಯಕ್ಷರ, ವಿಜ್ನಾನಿಗಳ ಹೀಗೆ ಖ್ಯಾತನಾಮರುಗಳ ಹೆಸರುಗಳನ್ನು ಇಟ್ಟಿದ್ದಾರೆ. ಮಾಜಿ ಅದ್ಯಕ್ಷರಾದ ಲಿಂಕನ್ ಮತ್ತು ಕೆನಡಿ ಇವರಲ್ಲಿ ಪ್ರಮುಖರು. ಹಾಗೆಯೇ ಈ ಹೊಲಸು ಶುದ್ದಿಕರಣ ಕೇಂದ್ರಕ್ಕೆ ಬುಷ್ ಹೆಸರು.
ತಕ್ಷಣ ಕಾರ್ಯೋನ್ಮುಖರಾಗಿ ಅದಕ್ಕೊಂದು ನಿರ್ವಾಹಕ ಸಮಿತಿ ಏರ್ಪಟ್ಟು ಸಹಿ ಸಂಗ್ರಹಣೆ ಪ್ರಾರಂಬಿಸಿದರು. ಇದರೀಂದಾಗಿ ಖರ್ಚು ಹೆಚ್ಚೇನು ಇಲ್ಲ, ಬರೇ ಫಲಕಗಳಲ್ಲಿ ಹೆಸರು ಬದಲಾಯಿಸಿದರಾಯಿತು ಎನ್ನುವುದು ಈ ಸಮಿತಿ ಹೇಳಿಕೆ. ಜನಾಬಿಪ್ರಾಯ ಸಂಗ್ರಹ ಕೈಗೊಳ್ಳಲಿಕ್ಕೆ 7168 ಸಹಿಗಳು ಅವಶ್ಯವಾಗಿದ್ದು ಈಗಾಗಲೇ 10070 ಸಹಿಗಳನ್ನು ಸಂಗ್ರಹ ಮಾಡಿರುವರಂತೆ. ಈ ಅಭಿಯಾನ ಮುಂದುವರಿಯುತ್ತಲಿದ್ದು ಜುಲೈ 7 ರ ವರೆಗೆ ಸಹಿ ಸಂಗ್ರಹ ಅನಂತರ ಅದನ್ನು ಪೌರಾಡಳಿತಕ್ಕೆ ಒಪ್ಪಿಸಲಾಗುತ್ತದೆ. ಮತದಾನ ಅದಿಕಾರಿಗಳು ಆ ಸಹಿಗಳನ್ನು ನೈಜತೆಯ ಬಗ್ಗೆ ಪರಿಶೀಲನೆ ನಡೆಸಿ ಅವುಗಳಲ್ಲಿ 7168 ಸಹಿಗಳು ಸಾಚಾ ಆದಲ್ಲಿ ನವೆಂಬರ್ ತಿಂಗಳಲ್ಲಿ ಪ್ರಜಾಬಿಪ್ರಾಯ ಸಂಗ್ರಹಕ್ಕೆ ತೀರ್ಮಾನ ಕೈಗೊಳ್ಳುತ್ತಾರೆ. ಅದ್ಯಕ್ಷೀಯ ಚುನಾವಾಣೆ ಜತೆಯಲ್ಲಿಯೇ ಪರ ಯಾ ವಿರೋದ ಎನ್ನುವ ಮತಪತ್ರದೊಂದಿಗೆ ಈ ವಿಚಾರ ಜನರ ಮಂದಿಡಲಾಗುತ್ತದೆ. ಈ ಪ್ರದೇಶದಲ್ಲಿ ಬುಷ್ ವಿರೋದಿ ಪಕ್ಷಕ್ಕೆ ಹೆಚ್ಚಿನ ಬೆಂಬಲವಿರುವ ಕಾರಣ ಈ ಪ್ರಸ್ತಾಪ ಮತಗಟ್ಟೆಯಲ್ಲಿ ಗೆಲ್ಲುವ ಸಾದ್ಯತೆ ಇದೆಯಂತೆ. ಇದೊಂದು ಅಮೇರಿಕದಲ್ಲಿ ಪ್ರಜಾಪ್ರಬುತ್ವ ಕೆಲಸ ಮಾಡುವ ಉತ್ತಮ ಉದಾಹರಣೆ.


ಬುಷ್ ಹಿಂಬಾಲಕರು ಈ ಅವಮಾನಕರ (?) ಹೆಜ್ಜೆ ಬಗ್ಗೆ ಕೆಂಗಣ್ಣು ಬೀರುತ್ತಿದ್ದರೆ ವಿರೋದಿಗಳಲ್ಲೂ ಒಮ್ಮತವಿಲ್ಲ. ಕೆಲವರು ಈ ವ್ಯಕ್ತಿ ಶಾಶ್ವತ ಸ್ಮಾರಕಕ್ಕೆ ಯೋಗ್ಯನಲ್ಲವೆಂದೂ ಇನ್ನೂ ಕೆಲವರು ಅವನ ಹೆಸರು ಹಾಕಿದರೆ ಕೊಳಚೆ ಕೆಂದ್ರಕ್ಕೆ ಅವಮಾನ ಎಂದೂ ಹೇಳುತ್ತಿದ್ದಾರೆ. ಇದು ಜನರ ಅಬಿಪ್ರಾಯಕ್ಕೆ ಮುನ್ನಣೆ ಅಮೇರಿಕದಲ್ಲಿ ಮಾತ್ರ ಸಾದ್ಯ. ನಮ್ಮಲ್ಲೂ ಈ ರೀತಿ ಜನರ ಅಬಿಪ್ರಾಯ ಸಂಗ್ರಹಕ್ಕೆ ಅವಕಾಶವಿದ್ದರೆ ಬೆಂಗಳೂರಿನ ಕೊಳಚೆ ಸಂಗ್ರಹ ಕೇಂದ್ರವನ್ನು ಮಾಜಿ ಮಂತ್ರಿ ರೇವಣ್ಣನವರ ಅಪ್ಪ ಶ್ರೀ ದೇವೆಗೌಡರ ಹೆಸರು ಇಡುವ ಬಗ್ಗೆ ಆಲೋಚನೆ ಮಾಡಬಹುದಾಗಿತ್ತು. ಇಂದಿನ ಮಟ್ಟಿಗೆ ಅವರೇ ಅತ್ಯಂತ ಯೋಗ್ಯ ವ್ಯಕ್ತಿ.

ಯಾವುದಕ್ಕೂ ನವೆಂಬರ್ ತಿಂಗಳ ಮತದಾನ ನಿರ್ಣಾಯಕ. ನಿರ್ಣಯಕ್ಕೆ ಒಪ್ಪಿಗೆ ಲಬಿಸಿದರೆ ಬುಷ್ ಮಾಜಿ ಅದ್ಯಕ್ಷರಾಗುವಾಗಲೇ ಈ ಹೊಸ ಹೆಸರು ಜಾರಿಗೆ ಬರುತ್ತದೆ. ಕಾರ್ಯಕ್ರಮಕ್ಕೆ ನಿಮಗೆ ಸ್ವತಹ ಪಾಲ್ಗೊಳ್ಳಲು ಸಾದ್ಯವಿಲ್ಲವಾದರೆ ಶೌಚಾಲಯದಲ್ಲಿ ಒಮ್ಮೆ flush ಮಾಡಿದರೂ ಅದು ಚಪ್ಪಾಳೆ ತಟ್ಟಿದಂತೆಯೇ. ಅಂತೂ ಬರುವ ಜನವರಿ ಅನಂತರ ನೀವು ಅಮೇರಿಕದ ಸಾನ್ ಫ್ರಾನ್ಸಿಸ್ಕೊ ನಗರದಲ್ಲಿ ಶೌಚಾಲಯ ಉಪಯೋಗಿಸಿದರೆ ಅದು ನೇರವಾಗಿ ಬುಷ್ ಸ್ಮಾರಕ ಕೊಳಚೆ ಕೇಂದ್ರಕ್ಕೆ ಹೋಗುವ ಸಾದ್ಯತೆ ಉಜ್ವಲವಾಗಿರುತ್ತದೆ.


ಈ ಕೆಳ ಕಾಣುವ ಕೊಂಡಿ ಸಮಿತಿಯ ಅದಿಕೃತ ತಾಣ :


1 comment:

ಮಹೇಶ್ ಪುಚ್ಚಪ್ಪಾಡಿ said...

ಚೆನ್ನಾಗಿ ಪ್ರೆಸೆಂಟ್ ಮಾಡಿದ್ದೀರಿ.