ಮೊನ್ನೆ ಚೀನಾದಲ್ಲಿ ಒಲಂಪಿಕ್ ಉದ್ಘಾಟನಾ ಸಮಾರಂಬವನ್ನು ಪ್ರಪಂಚವೇ ಮೈಮರೆತು ನೋಡುತ್ತಿದ್ದಾಗ ಜಾರ್ಜಿಯ ಒಂದು ಸೇನಾ ಕಾರ್ಯಾಚರಣೆ ನಡೆಸಿತು. ಬಹುತೇಕ ರಷ್ಯನ್ ಮೂಲದ ಜನರಿರುವ ಪ್ರದೇಶವನ್ನು ಬಲತ್ಕಾರವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತು. ಸಾವಿರಾರು ಜನರನ್ನು ಕೊಂದಿತು. ಕೆಲವು ಸಾವಿರ ನಾಗರಿಕರು ಜೀವ ಉಳಿಸಿಕೊಳ್ಳಲು ರಷ್ಯಕ್ಕೆ ಓಡಿ ಹೋದರು. ಕೂಡಲೇ ಎಚ್ಚೆತ್ತ ರಷ್ಯ ತಮ್ಮವರ ಸಹಾಯಕ್ಕೆ ಪೂರ್ಣ ಪ್ರಮಾಣದ ಸೇನೆ ಕಳುಹಿಸಿತು.
ರಾಜ ಕುಮಾರ್ ಸತ್ತ ದಿನದ ಗಲಬೆಯಲ್ಲಿ ತಮ್ಮ ಕೈವಾಡವಿರಲು ತಾವು ಮನೆ ಹೊರಡಲೇ ಇಲ್ಲ ನಮ್ಮ ಡುಮ್ಮ ಸಿಂಗರು ಅಂದು ಹೇಳಿದರಲ್ಲ, ಹಾಗೆ ಈ ದಿನ ಜಾರ್ಜ್ ಬುಷ್ ನಿರಾತಂಕವಾಗಿ ಚೀನಾದಲ್ಲಿದ್ದರು. ಕೆಲವು ದಿನ ಅವರು ಮತ್ತು ಅವರ ಸಹಾಯಕರು ಈ ಯುದ್ದ ವಿಚಾರದಲ್ಲಿ ತೆಪ್ಪಗಿದ್ದರು. ಏನೂ ಹೆದರಿಕೊಬೇಡಿ ಜತೆಯಲ್ಲಿ ನಾನಿದ್ದೇನೆ ಎಂದು ಮೊದಲು ಅಲ್ಲಿನ ಅದ್ಯಕ್ಷರಿಗೆ ಮಿಲಿಟರಿ ಕಾರ್ಯಾಚರಣೆ ಮಾಡಲು ಹರಸಿದ ನಮ್ಮ ಜಾರ್ಜ್ ಆ ವೇಳೆಗೆ
ವಾರ ಕಳೆದಾಗ ಜಾರ್ಜಿಯಾ ದೇಶದ ಅದ್ಯಕ್ಷನ ಪರೀಸ್ಥಿತಿ ಕೈಲಾಗದವ ಮೈ ಪರಚಿಸಿಕೊಂಡ ಎಂಬತಾಯಿತು. ಅಲ್ಲಿನ ಮಿಲಿಟರಿಯು ಪೂರ್ತಿ ಪುಡಿಯಾದ ನಂತರ ಸುಮ್ಮನಿರುವುದು ಸರಿಯಲ್ಲ ಅನ್ನಿಸಿದ ಅಮೇರಿಕದ ಜಾರ್ಜ್ ಅವರಿಂದ ರಷ್ಯದ ಪುಟಿನ್ ಅವರಿಗೆ ಫೋನ್. ಏನಯ್ಯಾ , ಒಂದು ಸ್ವತಂತ್ರ ಗಣರಾಜ್ಯವನ್ನು ಅತಿಕ್ರಮಿಸಿದರೆ ........ ಎನ್ನಲು ಆ ಕಡೆಯಿಂದ ಹಾ ಹಾ ಜೋಕ್ ಚೆನ್ನಾಗಿದೆ ಜಾರ್ಜ್ ಎನ್ನುವ ಉತ್ತರ ಬಂತಂತೆ. ಇತ್ತೀಚೆಗೆ ವರೆಗೆ ಸ್ವತಂತ್ರ ದೇಶಗಳಾಗಿದ್ದ ಇರಾಕ್ ಹಾಗೂ ಅಫ್ಘಾನಿಸ್ಥಾನಿನಲ್ಲಿ ಇನ್ನೂ ಕಾರ್ಯಾಚರಣೆ ನಡೆಸುತ್ತಿರುವ ಆಮೇರಿಕಕ್ಕೆ ಹೇಳುವ ನೈತಿಕ ಹಕ್ಕು ??
ಮಾದ್ಯಮದ ಮೇಲಿನ ನಿಯಂತ್ರಣದಿಂದಾಗಿ ಅಮೇರಿಕದ ಹಲವಾರು ಕಿತಾಪತಿಗಳು ಅರ್ಧ ಸತ್ಯಗಳು ಬೆಳಕು ಕಾಣುವುದೇ ಇಲ್ಲ. ರಷ್ಯಾದ ಪ್ರವ್ಡಾ ಪತ್ರಿಕೆಯ ಈ ಜಾರ್ಜ್ ಬುಷ್ ಸಾಹೇಬನಿಗೆ ಬರೆದ ಕುಹಕ ಪತ್ರ ಓದಿ ನೋಡಿ.
1 comment:
very nice blog and write ups Govind.
- Harish Kera
Post a Comment