Friday, December 05, 2008

ರಕ್ಷಣೆಯ ನೆಪದಲ್ಲೊಂದು ದುಬಾರಿ ಯೋಜನೆ

ನಿನ್ನೆಯ ಪತ್ರಿಕೆಯಲ್ಲಿ ಒಂದು ಸುದ್ದಿ ಅಂದರೆ ಸರಕಾರಿ ಪ್ರಕಟನೆ ನನ್ನ ಗಮನ ಸೆಳೆಯಿತು. ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ೩೦೦೦ ಮೀನುಗಾರಿಕಾ ದೋಣಿಗಳಿಗೆ ಜಿಪಿಎಸ್ ಅಳವಡಿಕೆಗೆ ಕೇಂದ್ರ ಸರಕಾರಕ್ಕೆ ಅಹವಾಲು. ಪಾಕಿಸ್ತಾನದ ಬಯೋತ್ಪಾದಕರಿಗೆ   ಸಮುದ್ರದಲ್ಲಿ  ಮುಂಬಯಿಗೆ    ದಾರಿ ತೋರಲು ಉಪಯೋಗಿಸಿದ ಕಾರಣ ಜಿಪಿಎಸ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.



ನಮ್ಮ ಮೊಬೈಲ್ ಪೋನ್ ಗಾತ್ರದ ಈ ಉಪಕರಣ ನಿಜಕ್ಕೂ ಅದ್ಬುತ ಸಾದನ. ಅಮೇರಿಕ ಇದಕ್ಕಾಗಿ ಹಾರಿಸಿರುವ ೨೪ ಉಪಗ್ರಹಗಳಲ್ಲಿ ಅಲ್ಲಿಗೆ ಕಾಣುವ ಎರಡು ಯಾ ಮೂರು ಉಪಗ್ರಹಗಳಿಂದ ಬರುವ ಸಂಕೇತವನ್ನು ಉಪಯೋಗಿಸಿ ಇದು ನಾವಿರುವ ಸ್ಥಳದ ಅಕ್ಷಾಂಶ ರೆಖಾಂಶವನ್ನು ನಿಖರವಾಗಿ ಹೇಳುತ್ತದೆ. ಇಪ್ಪತ್ತು ಅಡಿ ವ್ಯತ್ಯಾಸವ ಸಹಾ ಇದರಲ್ಲಿ ಲೆಕ್ಕಕ್ಕೆ ಸಿಗುವುದು. ನಾವಿಕರಿಗೆ ಪೋಲಿಸರಿಗೆ ಕಾಡು ಉಳಿಸಲು ಅಗ್ನಿ ನಿಯಂತ್ರಣಕ್ಕೆ ಎಲ್ಲಕ್ಕೂ ಸಹಾಯವಾಗಬಲ್ಲ ಸಾದನ.

ವರ್ಷದ ಹಿಂದೆ ಸಕಲೇಶಪುರ ಹತ್ತಿರ ಕಾಡು ನುಗ್ಗಿದ ಸಾಫ್ಟ್ ವೇರ್ ತಂತ್ರಜ್ನರು ಅನಿರೀಕ್ಷಿತವಾಗಿ ಮಳೆಗಾಲ ಪ್ರಾರಂಬವಾಗಿ ದಿಕ್ಕಿನ ಪ್ರಜ್ನೆ ತಪ್ಪಿ ವಾಪಾಸು ಬರಲು ಸಾದ್ಯವಾಗದೆ ಮೃತ ಪಟ್ಟಿದ್ದರು. ಗೋವಾ ಕರ್ನಾಟಕ ಗಡಿಯಲ್ಲಿ ಉದುರಿದ ನೌಕಾದಳದ ಹೆಲಿಕಾಫ್ಟರಿನಲ್ಲಿ ಬದುಕುಳಿದ ವ್ಯಕ್ತಿ ಮೊಬೈಲ್ ಪೋನ್ ಮೂಲಕ ಸುದ್ದಿ ಹೇಳಿದರೂ ಕಾಡಿನ ಮದ್ಯೆ ಇದ್ದ ಅವರನ್ನು ಹುಡುಕಲು ಸಾದ್ಯವಾಗಿರಲಿಲ್ಲ. ಎರಡೂ ಸನ್ನಿವೇಶದಲ್ಲಿ ಸರಳ ಜಿಪಿಎಸ್ ಸಾದನ ಜೀವ ಉಳಿಸುತಿತ್ತು.

ಕಳೆದ ವರ್ಷ ನಾನು ವಿಚಾರಿಸುವಾಗ ಸುಮಾರು ನಾಲ್ಕು ಸಾವಿರ ರೂಪಾಯಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಬ್ಯವಿರುವ ಇದು ನಮ್ಮೂರು ತಲಪುವಾಗ ಒಂಬತ್ತು ಸಾವಿರವಾಗುತ್ತದೆ ಎಂದು ತಿಳಿದು ಬಂತು. ವಿಪರೀತ ಸುಂಕ (basic 30 % + ) ಮತ್ತು ಸ್ಪರ್ದಾತ್ಮಕವಲ್ಲದ ಸಣ್ಣ ಮಾರುಕಟ್ಟೆಯಿಂದಾಗಿ ಹೆಚ್ಚು ದುಬಾರಿಯೆನಿಸುತ್ತದೆ. ಸರಕಾರ   ಅಮದು   ಸುಂಕ  ಕಡಿಮೆ ಮಾಡಿ   ಈ  ಉಪಕರಣ   ಜನರ  ಕೈಗೆಟಕುವಂತೆ  ಮಾಡಿದರೆ   ತುಂಬಾ  ಉಪಕಾರವಿದೆ. 

ಈ ಸರಳ ಸಾದನ ದೊಡ್ಡ ಸಂಖ್ಯೆಯಲ್ಲಿ ತರಿಸಿದರೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿ ಖರ್ಚಾಗಬಹುದು. ಅಂದರೆ ಕೋಟಿ ರೂಪಾಯಿಗೆ ಸಾವಿರ ಉಪಕರಣಗಳು ಸಿಗುತ್ತವೆ. ಮೂರು ಸಾವಿರ ಉಪಕರಣಗಳಿಗೆ ಮೂರು ಕೋಟಿ ರೂಪಾಯಿ ಸಾಕು. ದೋಣಿ ಎಲ್ಲಿದೆಯೆಂದು ಗುರುತಿಸಲು ಅಳವಡಿಸುವಂತಹದಕ್ಕೂ ಅಷ್ಟು ಖರ್ಚಿಲ್ಲ. ಒಂದಕ್ಕೆ ಹದಿನೈದು ಸಾವಿರ ಮಿಗದು. ಇವರ ಇಪ್ಪತ್ತು ಕೋಟಿ ಲೆಕ್ಕಾಚಾರದಲ್ಲಿ ಜೇಬಿಗಿಳಿಸುವ ಮೊತ್ತವೇ ಹೆಚ್ಚಿನ ಪಾಲು ಎನಿಸುತ್ತದೆ.

ಒಮ್ಮೆ ಇತಿಹಾಸದ ಕ್ಲಾಸಿನಲ್ಲಿ ಮೇಡಂ ಕೇಳಿದರಂತೆ. ನಾನು ಎಲ್ಲಿದ್ದೆ ಅಂದರೆ ಎಲ್ಲಿಯವರೆಗೆ ಪಾಠ ತಲಪಿದೆಯೆಂದು. ಕೊನೆ ಬೆಂಚಿನ ಯಜಮಾನರ ಉತ್ತರ ಬಂತು ಅಕ್ಬರನ ಶಯನ ಕೋಣೆಯಲ್ಲಿ, ಮೇಡಂ.

ಅಂದ  ಹಾಗೆ    ಯಾರಾದರೂ ನಮಗೆ ಎಲ್ಲಿದ್ದಿಯ ? ಎಂದು ಮೊಬೈಲಿಗೆ ಫೋನಿಸಿದರೆ ನಾವು ಮುಖ್ಯ ರಸ್ತೆ ಅದ್ರಾಮ ಬ್ಯಾರಿಯ ತರಕಾರಿ ಅಂಗಡಿಯ ……..ಅನ್ನಬೇಕಾಗಿಲ್ಲ.      ಉತ್ತರ 13.210320 ಪೂರ್ವ 73.45213 ಅಂದರಾಯಿತು.

3 comments:

Unknown said...

ಒಳ್ಳೆ ಮಾಹಿತಿ ಕೊಟ್ಟಿದ್ಡೀರಿ ಭಟ್ರೆ. ಇದು ಕನ್ನಡಪ್ರಭದಲ್ಲೋ ಪ್ರಜಾವಾಣಿಯಲ್ಲಿಯೋ ಬಂದಿದ್ದರೆ ಬಹುಜನಕ್ಕೆ ತಲುಪುತ್ತಿತ್ತು.

Govinda Nelyaru said...

ಪ್ರಿಯರೇ,

ನೀವು ಹೇಳೊದು ನಿಜ. ಬಹಳ ಉಪಯುಕ್ತ ಹಂಚಿಕೊಳ್ಳುವಂತಹ ಮಾಹಿತಿ. ಆದರೆ ಪತ್ರಿಕೆಗಳ ಹಿಂದೆ ಓಡುವ ಚೈತನ್ಯ ನನಗಿಲ್ಲ. ಒಂದಷ್ಟು ಜನಕ್ಕೆ ತಲಪಲಿ ಎಂದು ಇಲ್ಲಿ ಬರೆದೆ. ಓದಿದವರು ಇದರ ಬಗ್ಗೆ ಬರೆದರೂ ಸಂತೋಷ. ನೋಡೋಣ.

ಕೃತಜ್ನತೆಗಳೊಂದಿಗೆ

ಗೋವಿಂದ

Harisha - ಹರೀಶ said...

ಮಾಹಿತಿಗೆ ಧನ್ಯವಾದಗಳು :-)