Tuesday, November 10, 2009

ಐವರು ಮೊಟರ್ ಸೈಕಲಿನಲ್ಲಿ ಅರುಣಾಚಲ ಪ್ರದೇಶಕ್ಕೆ

 

ಮೊನ್ನೆ ಅಂತರ್ಜಾಲದಲ್ಲಿ ಅರುಣಾಚಲ ಪ್ರದೇಶದಲ್ಲಿ ಮೋಟರ್ ಸೈಕಲ್ ಪ್ರವಾಸದ ಬಗೆಗೆ ಅಮೇರಿಕದಲ್ಲಿ ವಿಡಿಯೋ ಪ್ರದರ್ಶನ ಎಂದು ಸುಳಿವು ಕಂಡು ಆಶ್ಚರ್ಯ ಸಂತಸ ಎರಡೂ ಆಯಿತು. ಅಪರಿಚಿತ ಊರುಗಳಲ್ಲಿ ದೀರ್ಘ ಪ್ರವಾಸ ಎಂದರೆ ನಾವು ಬಹಳಷ್ಟು ತಯಾರಿ ಮಾಡಬೇಕಾಗುತ್ತದೆ. ರಸ್ತೆ ಇಲ್ಲದ ಪ್ರದೇಶದಲ್ಲಿ ಬೆಂಗಾವಲು ವಾಹನ ಇಲ್ಲದ ಕನಿಷ್ಟ ತಯಾರಿಯೊಂದಿಗೆ ಸಂದರ್ಭಕ್ಕೆ ಒಗ್ಗಿಕೊಳ್ಳುವ ಕಥೆ ಊಹನೆಯಲ್ಲಿಯೇ ತುಂಬಾ ಕುಶಿ ಕೊಡುತ್ತದೆ. ನನ್ನ ಪ್ರವಾಸವೂ ಇದೇ ದೋರಣೆಯಲ್ಲಿ ಸಾಗಿತ್ತು.

ಒಮ್ಮೆ ಏಕಾಂಗಿಯಾಗಿ ಲಡಾಕಿಗೆ ಮತ್ತು ಐದು ಜನರ ಪಟಲಾಂ ಕಟ್ಟಿಕೊಂಡು ಅರುಣಾಚಲ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಪ್ರದೇಶಗಳಲ್ಲಿ ಮೊಟರ್ ಸೈಕಲ್ ಪ್ರವಾಸ ಮಾಡಿದ ತುಣುಕುಗಳು ಇಲ್ಲಿವೆ.   ಹಿಂದೆ ಪ್ರವಾಸ ಮಾಡಿದವರ ಕಥೆಗಳು ಓದುವಾಗ ನಮಗೆ ಎದುರಾಗಬಹುದಾದ ಸನ್ನಿವೇಶಗಳ ಸುಳಿವು ಕೊಡುತ್ತದೆ. ನಮ್ಮ ಸಮಾಜದಲ್ಲಿ ಬಿನ್ನ ಹಾದಿಯಲ್ಲಿ ನಡೆಯುವ ಚಿಂತನೆಯೇ ಬಹಳ ಕಡಿಮೆ. ಹಲವು ನನ್ನ ಪ್ರಾಯದವರು ಆರಾಮ ಕುರ್ಚಿಯ ಪ್ರವಾಸದಲ್ಲಿಯೇ ತೃಪ್ತರಾಗಿದ್ದರು. ನಾನು ಇಂದಿಗೂ ಇಂತಹ ಕಥೆಗಳ ಇಷ್ಟಪಡುತ್ತೇನೆ.




ನಮ್ಮಲ್ಲಿ ಕಾಶ್ಮೀರಕ್ಕೆ ಮೊಟರ್ ಸೈಕಲಿನಲ್ಲಿ ಹೋಗಿ ಬಂದವರು ಬಹಳ ಜನ ಇದ್ದಾರೆ. ಲಡಾಕಿನಲ್ಲಿ ಪ್ರಪಂಚದ ಅತ್ಯಂತ ಎತ್ತರದ ದಾರಿ ಎನ್ನುವ ಫಲಕದ ಎದುರು ಪೋಟೊ ತೆಗೆದುಕೊಳ್ಳುವುದು ನಮ್ಮವರ ಅತಿ ಮುಖ್ಯ ಗುರಿಯಾಗಿತ್ತು. ಆದರೆ ಈ ವ್ಯಕ್ತಿ ಒಬ್ಬಂಟಿಯಾಗಿ ಹೆಣ ಬಾರದ ಕೆಮರಾ ಹೊತ್ತುಕೊಂಡು ಹೋಗಿ ತಂದ ಚಿತ್ರಗಳು ಅದ್ಬುತವಾಗಿವೆ. ಎಲ್ಲವೂ ಅವರೇ ಆದಾಗ ಶುದ್ದ ಮರಕೋತಿಯಾಟ ನಡೆಯುತ್ತದೆ. ಕೆಮರವನ್ನು ಇಟ್ಟು ಹಿಂದಕ್ಕೆ ಹೋಗಿ ಅದರ ಎದುರು ಸವಾರಿ ಮಾಡಿ ಪುನಹ ಹೋಗಿ ಕೆಮರ ಹಿಡಿದುಕೊಂಡು ಬರಬೇಕು.  ಇವರ ಡೇರೆ ಬಿಡಿಸುವುದು ಮಡಚವುದು ನೋಡುವಾಗ ನನಗೆ ನನ್ನ ಪ್ರವಾಸದ ನೆನಪಾಗುತ್ತದೆ. ಇದೊಂದು ಡಿವಿಡಿ ಜಾಹಿರಾತು ಆದರೂ ಕೆಲವು ಚಿತ್ರಗಳು ತುಂಬಾ ಚೆನ್ನಾಗಿವೆ. ಹಲವು ಪ್ರಶಸ್ತಿಗಳನ್ನು ಈ ವಿಡಿಯೋ ಗಿಟ್ಟಿಸಿಕೊಂಡಿದೆ.

2 comments:

Anonymous said...

ಪ್ರಿಯ ಗೋವಿಂದಾ
ವಿಶ್ವಯಾನದ ಅನುಭವದಲ್ಲಿ ನೀನು ಹುಡುಕಿ ಹಿಡಿದ ಇವೆಲ್ಲಾ ಸಾಂಪ್ರದಾಯಿಕ ಸಮಾಜದ ಸ್ತರದಲ್ಲಿ ಹುಚ್ಚು ಎಂದೇ ಕಾಣಬಹುದು, ಸಾಬೀತೂಪಡಿಸಬಹುದು. ಅವರ ಹುಚ್ಚನ್ನು ಮೀರಿ ತಾವು ಬೆಳೆದು ತೋರಿಸುವ ಪ್ರೇರಣೆ ಕೆಲವರಾದರೂ ಪಡೆದರೆ ನಿನ್ನ ಶ್ರಮ ಸಾರ್ಥಕ. ನಾನಂತೂ ಇವುಗಳೊಡನೆ ನನ್ನೆರಡು ಭಾರತ ಬೈಕ್ ಯಾನಗಳ comparative statement ಹಾಕಲು ಸುರುಮಾದಿಬಿಟ್ಟಿದ್ದೆ. ಏನು ಮಾಡೋಣಾ ಇಲ್ಲಿನ ವಿವರಗಳು ಏನೇನೂ ಸಾಕಾಗಲಿಲ್ಲ. ಬಯ್ಯಲುಂಟೇ ಅಮ್ಮನಿಗೆ ಬಾಯಲ್ಲಿ ವಿಶ್ವ ತೋರಿದವ ನೀನು - ಗೋವಿಂದ.
ಅಶೋಕವರ್ಧನ

ಎಸ್.ಎಮ್. ಪೆಜತ್ತಾಯ said...

ಗೋವಿಂದರೇ!

ನಿಮ್ಮ ಬ್ಲಾಗ್ ನೋಡುತ್ತಾ ನಾನು ಅರುಣಾಚಲ ಸುತ್ತಿ ಬಂದೆ!

ಹಿಮಾಲಯದಲ್ಲಿ ನಾನು ಕಂಡ ದೊಡ್ಡ ನಿಧಿ ಯಾವುದು ಗೊತ್ತೇ? ... ಅದು ಅಲ್ಲಿನ ಕಷ್ಟ ಸಹಿಷ್ಣುಗಳಾದ ಜನರ ಮುಖದ ಮೇಲಿನ ನಗು!

ತಮ್ಮಂತಹರ ' ಈ-ಬಂಧ 'ದಿಂದ ಈಗ ಮನೋವೇಗದಲ್ಲಿ ಪೀಠ ಭೂಮಿಯ ಕಡೆಗೆ ಖರ್ಚಿಲ್ಲದೇ ಬೈಕ್ ಸವಾರಿ ಮಾಡಿದ ಅನುಭವ ಪಡೆದೆ. ಆ ಎತ್ತರದ ಹವಾಮಾನವನ್ನು ಅನುಭವಿಸಿದೆ. ಇಂದಿನ ಆ ಅನುಭವ ಸ್ಮರಣೀಯ!

ಈ ಅನುಭವ ಒದಗಿಸಿದ ತಮಗೆ ವಂದನೆಗಳು.

ಕೇಸರಿ ಪೆಜತ್ತಾಯ