ಕಾರುಗಳ ಮಾರಾಟಗಾರರ ಚಾತುರ್ಯ ಚಮತ್ಕಾರದಲ್ಲಿ ಇಂದು ಕಾರುಗಳು ಬದುಕಿನ ಅನಿವಾರ್ಯ ಅಂಗವಾಗಿಬಿಟ್ಟಿದೆ. ಬೇಕುಗಳ ಪಟ್ಟಿಯಲ್ಲಿ ಮೊದಲಸ್ಥಾನ ಪಡೆದಿದೆ. ಏಳಿಗೆಯ ಸಂಕೇತವೆಂದು ಸೂಚಿಸುವ ಕಾರುಗಳಿಗಾಗಿ ಕಾಡುಗಳ ಕಡಿಯುತ್ತೇವೆ. ರೈತರ ಬೂಮಿ ಅತಿಕ್ರಮಿಸುತ್ತೇವೆ. ಹೀಗೆ ಇರುವ ಜಾಗವನ್ನೆಲ್ಲ ರಸ್ತೆ ಹಾಗೂ ಕಾರು ಪಾರ್ಕುಗಳು ಅಕ್ರಮಿಸುತ್ತವೆ. ಇವುಗಳ ತಯಾರಿ ಹಾಗೂ ಉಪಯೋಗಕ್ಕೆ ಸಮಾಜವು ಸರಕಾರದ ಮೂಲಕ ಅಪಾರ ರೀಯಾಯತಿ ಕಲ್ಪಿಸುತ್ತದೆ. ದರ್ಮಾರ್ಥ ಬೂಮಿ, ರಿಯಾಯತಿ ಸುಂಕಗಳು ಸೂಕ್ಷ್ಮವಾಗಿ ಗಮನಿಸಿದರೆ ಕಂಡರೂ ಕಾರುಗಳಿಗೆ ದೊರಕುವ ಹಲವು ಪೂರಕ ಸಹಾಯ ಅಗೋಚರವಾಗಿಯೇ ಉಳಿದುಬಿಡುತ್ತದೆ. ಇಂತಹ ಜಾಹಿರಾತುಗಳು ಮನಸ್ಸಿಗೆ ಸೂಚನೆಗಳ ರವಾನಿಸಿ ಇದು ನಾವು ಅನುಸರಿಸ ಬೇಕಾಗುವ ಸರಿಯಾದ ದಾರಿ ಎಂದು ಓದುಗರ ಸುಪ್ತ ಮನಸ್ಸನ್ನು ಒಪ್ಪಿಸುತ್ತದೆ. ಬಂಟಿಯ ಸ್ನೇಹಿತರ ಸ್ಕೂಲಿಗೆ ಬಿಡಲು ನಾವು ತಯಾರಾಗುತ್ತೇವೆ.
ಬರ್ಕ್ ಲಿ ಎಂಬ ಊರಿನಲ್ಲಿನಲ್ಲಿ ಇರೋದು ಅಮೇರಿಕದ ಪ್ರಸಿದ್ದ ವಿಶ್ವವಿದ್ಯಾಲಯ. ಅಲ್ಲಿನ ವಿದ್ಯಾರ್ಥಿಗಳು ರಸ್ತೆ ಬದಿ railings ಗೆ ಸೈಕಲು ಬೀಗ ಹಾಕಿದುದರ ಪರಿಣಾಮ ಸೈಕಲು ಮುಟ್ಟುಗೋಲು. ಅದನ್ನು ಬಿಡಿಸಿಕೊಳ್ಳಲು ಕೇವಲ ಇನ್ನೂರ ಇಪ್ಪತ್ತು ಡಾಲರ್ ಅಂದರೆ ಸುಮಾರು ಹತ್ತು ಸಾವಿರ ರೂಪಾಯಿ ದಂಡ. ಸೈಕಲು ನಿಲುಗಡೆ ಬರ್ತಿಯಾದ ಕಾರಣ ಅನಿವಾರ್ಯವಾಗಿ ರಸ್ತೆ ಬದಿ ನಿಲ್ಲಿಸಿದಕ್ಕಾಗಿ ಈ ದಂಡ. ನಿಲ್ಲಿಸಲಾಗಲಿ ರಸ್ತೆಯಲ್ಲಿ ಓಡಿಸಲಾಗಲಿ ಹೆಚ್ಚು ಜಾಗ ಅಪೇಕ್ಷಿಸದ ಪರೀಸರ ಮಾಲಿನ್ಯ ಉಂಟುಮಾಡದ ಸೈಕಲುಗಳಿಗೆ ಇಷ್ಟು ದಂಡ ಹಾಕುವ ಅಲ್ಲಿನ ಪೋಲಿಸರು ಕಾರುಗಳ ಅಡಾದಿಡ್ಡಿ ನಿಲ್ಲಿಸಿದರೆ ಬರೇ ನಲುವತ್ತಾರು ಡಾಲರ್ ದಂಡ ಹಾಕುತ್ತಾರೆ. ಅಂದರೆ ಸೈಕಲಿನ ಮೇಲೆ ಹಾಕುವ ದಂಡ ಕಾರಿನದಕಿಂತ ನಾಲ್ಕುವರೆ ಪಟ್ಟು ಹೆಚ್ಚು.
ಸುಂಕಗಳಲ್ಲಿ ಎಕ್ಸೈಸ್ ಮತ್ತು ಕಸ್ಟಂ ಅವಳಿ ಸಹೋದರರಿದ್ದಂತೆ. ಸರಕಾರದ ಒಂದೇ ಖಚೇರಿಯ ವಿಬಾಗಗಳಾಗಿರುವ ಇವುಗಳಲ್ಲಿ ಪರದೇಶದಿಂದ ಅಮದಾಗುವ ವಸ್ತುಗಳಿಗೆ ಕಸ್ಟಂ ಮತ್ತು ನಮ್ಮ ದೇಶದಲ್ಲೇ ತಯಾರಾಗಿ ಕಾರ್ಖಾನೆಯಿಂದ ಹೊರತರುವ ಮೊದಲೇ ಹೇರುವ ಸುಂಕ ಎಕ್ಶೈಸ್. ನಾನೊ ಕಾರಿಗಿಂತ ಕಡಿಮೆ ಜಾಗ ಆಕ್ರಮಿಸುವ ಒಂದು ಮೂರು ಚಕ್ರದ ಸೈಕಲನ್ನು ನನ್ನ ವೈಯುಕ್ತಿಕ ಅಗತ್ಯಕ್ಕೆಂದು ನಾನು ಪರದೇಶದಿಂದ ತರಿಸಿದೆ.
ಸವೆಯದ ದಾರಿಯಲ್ಲಿ ಪಯಣಿಸಲು ಹೊರಟರೆ ಆಗುವುದು ಹೀಗೆಯೇ. ಒಂದು ನಾನೊ ಕಾರಿಗೆ ಸುಮಾರು ಹತ್ತು ಸಾವಿರ ರೂಪಾಯಿ ಎಕ್ಸೈಸ್ ಸುಂಕ ಹಾಕುವ ನಮ್ಮ ದೆಹಲಿ ಸರಕಾರ ನನ್ನ ಟ್ರೈಸಿಕಲ್ಲಿಗೆ ಅರುವತ್ತೆಂಟು ಸಾವಿರ ರೂಪಾಯಿ ಸುಂಕ ಹೇರಿತು. ಉಪಯೋಗಿಸಲು ಹೆಚ್ಚಿನ ಖರ್ಚಾಗಲಿ, ರಸ್ತೆಯಲ್ಲಿ ಹೆಚ್ಚು ಜಾಗವಾಗಲಿ ಬೇಡದ ಈ ಟ್ರೈಸಿಕಲ್ಲು ಆರು ನಾನೊ ಕಾರಿಗೆ ಸಮ ಎಂದು ಕೇಂದ್ರ ಸರಕಾರದ ತೀರ್ಮಾನ.
ಸ್ವಾವಲಂಬನೆಯ ಪ್ರತೀಕವೆನಿಸುವ ಸೈಕಲಿಗೆ ಪರದೇಶಿ ಇಂದನ ದಹಿಸಿ ಹೊಗೆ ಚೆಲ್ಲುತ್ತಾ ಸಾಗುವ ಕಾರಿಗೆ ಸಿಗುವ ಮಾನ ಎಲ್ಲಿಯೂ ಸಿಗುತ್ತಿಲ್ಲ. ನಿಜವಾಗಿ ಸೈಕಲಿಗೆ ಬೆಂಬಲ ದೊರಕಬೇಕಾಗಿತ್ತು. ಒಂದು ಕಾರಿಗೆ ಹಾಕುವ ಸುಂಕ ಹತ್ತು ಸೈಕಲುಗಳಿಗೆ ಸಮನಾಗಬೇಕಿತ್ತು. ಆದರಿದು ಉಲ್ಟಾ ಆಗಿದೆ. ಹಾಗಾಗಿ ಇದೊಂದು ದುರಂತ.