ಅಮೇರಿಕದ ಮಿಸೂರಿ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಒಮ್ಮೆ ಪರಿಚಿತ ಡೇನಿಯಲ್ ಜಿಮ್ಮರ್ ಮಾನ್ ಅವರ ಜತೆ ಅವರ ಕುದುರೆ ಗಾಡಿಯಲ್ಲಿ ಕುಳಿತು ಓಡಾಡುತ್ತಿದ್ದೆ. ಮೆನೊನೈಟ್ ಎಂಬ ವಿಶಿಷ್ಟ ಪಂಗಡಕ್ಕೆ ಸೇರಿದ ಅವರು ಮೂಲ ಗುಂಪು ಆಮೀಷರಿಂದ ಹೆಚ್ಚು ಉದಾರವಾದಿಗಳು. ಡೇನಿಯಲ್ ಅವರ ಮಗಳು ಅಳಿಯ ಒಂದು ಸೈಕಲ್ ಅಂಗಡಿ ಇಟ್ಟಿದ್ದರಿಂದ ನನಗೆ ಅವರ ಪರಿಚಯವಾಗಿ ಅವರ ಪರಿಸರದಲ್ಲಿ ನಾಲ್ಕು ದಿನ ಉಳಕೊಂಡಿದ್ದೆ.
ಉಳಿದ ಕೃಷಿಕರಿಂದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಈ ಪಂಗಡದ ಬೆಗೆಗೆ ಕೂತೂಹಲ ಬಾರತ ಬಿಡುವ ಮೊದಲೇ ಉಂಟಾಗಿತ್ತು. ನಾನು ಅವರ ಜತೆಯಲ್ಲಿದ್ದ ಅನುಭವ ಕಥೆ ಅಮಿಷಕ್ಕೆ ಒಳಗಾಗದ ಆಮಿಷ್ ಜನಾಂಗ ಎಂಬ ತಲೆಬರಹದೊಂದಿಗೆ ಸುಧಾ ವಾರ ಪತ್ರಿಕೆ ಮುಖಪುಟ ಲೇಖನವಾಗಿ 1987ರಲ್ಲಿ ಪ್ರಕಟಿಸಿತ್ತು.
ಹಾಗೆ ದಾರಿಯಲ್ಲಿ ಸಿಕ್ಕವರಲ್ಲಿ ಡೇನಿಯಲ್ ನನ್ನ ಪರಿಚಯ ಹೇಳಿದರು. ಇವ ಇಂಡಿಯನ್ ಎಂದಾಗ ಆ ಅಮಾಯಕ ವ್ಯಕ್ತಿ ಅಂದರೆ ಯಾವ ಪಂಗಡಕ್ಕೆ ಸೇರಿದವನು ಎಂದಾಗ ನನಗೆ ಗಲಿಬಿಲಿ. ಅವರು ನನ್ನನ್ನು ಅಮೇರಿಕದ ಮೂಲನಿವಾಸಿ ಎಂದುಕೊಂಡಿದ್ದರು. ಅಮೇರಿಕದಲ್ಲಿ ಬಾರತ ಎಂಬ ದೇಶ ಇದೆ ಎನ್ನುವ ಕಲ್ಪನೆ ಇಲ್ಲದವರು ಸಾಕಷ್ಟು ಜನ ಇದ್ದಾರೆ ಅನ್ನುವುದು ಸೋಜಿಗದ ಸಂಗತಿ.
ಇಂದಿನ ಕನ್ನಡ ಪ್ರಭದ ಏಳನೇಯ ಪುಟದಲ್ಲಿ ಪೆರು ಹಿಂಸೆ 25 ಬಾರತಿಯರ ಸಾವು ಎಂದಾಗ ಕುತೂಹಲದಿಂದ ಓದಿದೆ. ಅವರು ಪೆರುವಿನ ಮೂಲನಿವಾಸಿಯರನ್ನು ಇಂಗ್ಲೀಷಿನಲ್ಲಿ ಇಂಡಿಯನ್ ಎಂದು ಬರೆದುದು ಬಾಷಾಂತರವಾಗುವಾಗ ಬಾರತೀಯ ಎಂದಾಗಿದೆ. ಪ್ರಾಯುಷ ಬಾಷಾಂತರಿಸಿದ ಪತ್ರಿಕೆ ಉದ್ಯೋಗಿಗೆ ಇಂಡಿಯನ್ ಎಂದರೆ ಅಲ್ಲಿನ ಮೂಲನಿವಾಸಿ ಎಂದು ಅರ್ಥವಾಗಲಿಲ್ಲ. ಈ ತಪ್ಪು ಕಲ್ಪನೆಯಿಂದಾಗಿ ನನಗೆ ಇದಕ್ಕೆ ಹೋಲುವ ಹಳೆಯ ಅನುಭವ ನೆನಪಾಯಿತು. ಅಂದು ನಾನು ಅಲ್ಲಿ ಅಮೇರಿಕದ ಮೂಲನಿವಾಸಿಯಾಗಿದ್ದೆ. ಇಂದು ಅವರು ಬಾರತೀಯರಾಗಿದ್ದಾರೆ.
Sunday, June 07, 2009
Subscribe to:
Post Comments (Atom)
2 comments:
ಗೋವಿಂದಾಯ ನಮಃ
ಇಂಥದ್ದೆ ಅನುವಾದೀ ಭಯಂಕರರು ಮೊನ್ನೆ ಏರ್ ಫ್ರಾನ್ಸ್ ವಿಮಾನ ಕಣ್ಮರೆಯಾದಾಗ ಈ-ಟೀವಿಯಲ್ಲಿದ್ದದ್ದು ಕೇಳಿಸಿಕೊಂಡೆ. "ವಿಮಾನವು ಬೆಳಕಿನ ಪ್ರಭಾವದಿಂದ ಅವಘಡಕ್ಕೊಳಗಾಗಿರಬೇಕೆಂದು ಶಂಕಿಸಲಾಗಿದೆ". Lightningನಲ್ಲಿ ಬೆಳಕಿಲ್ಲ ಎನ್ನುವಂತಿಲ್ಲ ಅಲ್ವಾ?
ಅಶೋಕವರ್ಧನ
ನನ್ನ ಗೆಳೆಯರೊಬ್ಬರು ಇದನ್ನು ಕನ್ನಡಪ್ರಭದ ಸಂಪಾದಕರ ಗಮನ ಸೆಳೆಯಲು ಅವರ ಪ್ರತಿಕ್ರಿಯೆ
True. There is a mistake. Thanks for pointing it out.
Generally, it happens in our translation desk as many of the young journalists who do these translations are not aware of the foreign terminology. They tend to look it from the Indian perspective and get confused. However, we keep updating the young journalists about these common errors but it do happens somehow! I take this opportunity, again, to sensitise our translation desk.
Please let us know of such errors even in the future, so that we can be more alert.
Thanks & Regards
Ravi Hegde
Executive Editor - News
Kannada Prabha,
Post a Comment