ಸೇವಾಗ್ರಾಮದ ಗಾಂಧಿ ಆಶ್ರಮ science for villages ಎನ್ನುವ ಪಾಕ್ಷಿಕ ಪ್ರಕಟಿಸುತಿತ್ತು. ನಾನು ಅದರ ಖಾಯಂ ಓದುಗನಾಗಿದ್ದೆ. ಹಲವು ಕೂತೂಹಲಕರ ಪ್ರಯೋಗಗಳು ಅದರಲ್ಲಿ ಇದ್ದವು. ಇಪ್ಪತ್ತೋಂದು ವರ್ಷ ಹಿಂದೆ ಎಪ್ರಿಲ್ 1988 ರ ಸಂಚಿಕೆಯಲ್ಲಿ ಇಂಡೋನೇಶ್ಯದಲ್ಲಿ ಚಲಾವಣೆ ಇರುವ ತೆಂಗಿನ ಕಾಯಿಯಿಂದ ಎಣ್ಣೆ ಬೇರ್ಪಡಿಸುವ ವಿಧಾನ ಪ್ರಕಟವಾಗಿತ್ತು. ಪತ್ರಿಕೆ ರದ್ದಿಗೆ ಸೇರುವಾಗ ಒಂದು ಪ್ರತಿ ಇರಲೆಂದು ಇಟ್ಟುಕೊಂಡೆ. ಜಗತ್ತಿನಲ್ಲಿ ಒಂದೆಡೆ ತೆಂಗಿನಕಾಯಿ ಬೆಳೆಯುವಲ್ಲಿ ಇಂತಹ ವಿಧಾನ ಚಾಲ್ತಿಯಲ್ಲಿತ್ತು ಎನ್ನುವ ವಿಚಾರ ಹಂಚಿಕೊಳ್ಳುತ್ತಿದ್ದೇನೆ ಹೊರತು ಇದು ಪ್ರಾಯೋಗಿಕ ಎಂದಲ್ಲ.
ಸರಳವಾಗಿ ಹೇಳುವುದಾದರೆ ನದಿಯಲ್ಲಿರುವ ಏಡಿಯನ್ನು ಹಿಡಿದು ಅದರ ಚಿಪ್ಪನ್ನು ಬೇರ್ಪಡಿಸಿ ಪುಡಿಮಾಡಬೇಕಂತೆ. ಅನಂತರ ಅದನ್ನು ತೆಂಗಿನ ತುರಿಯೊಂದಿಗೆ ಮಿಶ್ರ ಮಾಡಿ ಒಂದು ರಾತ್ರಿ ಬಿಡಬೇಕು. ಮರುದಿನ ಬೆಳಗಾಗುವಾಗ ಅ ಮಿಶ್ರಣ ಕೆಂಬಣ್ಣದ ತೈಲಮಯವಾಗಿರುತ್ತದೆ. ಪ್ಲಾಸ್ಟೀಕ್ ಹಾಳೆಯಲ್ಲಿ ಮೂರುನಾಲ್ಕು ಘಂಟೆ ಒಣಗಿಸಿ ಎಣ್ಣೆ ಹಿಂಡಬೇಕು ಅನ್ನುತ್ತದೆ ಲೇಖನ. ವಿವರಕ್ಕೆ ಮೂಲ ಲೇಖನವನ್ನು ಜತೆಗಿರಿಸಿದ್ದೇನೆ. ಈಗ virgin coconut oil ಎನ್ನುವ ಹೊಸ ಸ್ವರೂಪವೂ ನಮ್ಮ ಮುಂದಿದೆ. ಈ ಎಣ್ಣೆ ಯಾವ ವರ್ಗಕ್ಕೆ ಸೇರಿದ್ದೆಂದು ದಯವಿಟ್ಟು ಪ್ರಶ್ನಿಸಬೇಡಿ. ನನಗೂ ಗೊತ್ತಿಲ್ಲ.ಇದು ಸೇರುವುದು ಸಸ್ಯಹಾರಕ್ಕೋ ಮಾಂಸಹಾರಕ್ಕೋ ಅನ್ನುವುದು ಸಹಾ ಗೊತ್ತಿಲ್ಲ.
Friday, June 12, 2009
Subscribe to:
Post Comments (Atom)
adike patrike(7) Adventure(4) america(25) animals(8) ATV(5) bush(4) cartoon(5) china(1) communication(4) consumer(13) cycle trip(24) denmark(2) energy(12) environment(1) europe(6) farming(14) food(5) freinds(3) fun(9) germany(5) GPS(3) health(3) italy(2) japan(7) kenya(1) language(2) living(21) media(22) money(15) paper chase(1) phone(4) politics(24) pollution(6) products(12) religion(8) russia(2) solar(4) switzerland(3) trike(6) we need this(5)
1 comment:
ನನ್ನಪ್ಪ ಹೇಳಿದ ಕತೆ ನೆನಪಾಯ್ತು. ಆದಿಮಾನವ ಇನ್ನೂ ಬೆಂಕಿಯನ್ನು ಪೂರ್ಣ ಪಳಗಿಸಿರಲ್ಲಿಲ್ಲವಂತೆ. ಒಮ್ಮೆ ಅವನ ಸಾಕು ಹಂದಿ ಒಳಗಿದ್ದಂತೆ ಜೋಪಡಿ ಬೆಂಕಿಬಿದ್ದು ಎಲ್ಲ ಸುಟ್ಟು ಹೋಯ್ತಂತೆ. ಆಗ ಆತ ಆಕಸ್ಮಿಕವಾಗಿ ಕಂದುಕೊಂಡ ಬೇಯಿಸಿದ ಮಾಂಸದ ರುಚಿ ಮತ್ತೆ ಪಡೆಯಲು ಎಷ್ಟೋ ಕಾಲದವರೆಗೆ ಜೋಪಡಿ ಮಾಡಿ, ಒಳಗೆ ಹಂದಿಕಟ್ಟಿ ಬೆಂಕಿ ಹಚ್ಚುತ್ತಿದ್ದನಂತೆ.
ಅಶೋಕವರ್ಧನ
Post a Comment