೧೯೮೪ರಲ್ಲಿ ಲೋಕಸಭೆ ಚುನಾವಣೆಗೆ ನಿಂತಾಗ ಇಂದಿರಾ ಗಾಂಧಿ ಕೊಲೆಯಾಯಿತು. ಅನುಕಂಪದ ಅಲೆಯಿಂದಾಗಿ ನಾನು ಸೋತೆ. ೧೯೮೯ರಲ್ಲಿ ಲೋಕಸಭೆಗೆ ಸ್ಪರ್ಢಿಸಿದೆ. ರಾಜೀವ ಗಾಂಧಿ ಕೊಲೆಯಾಗಿ ಕಾಂಗ್ರೇಸು ಪರ ಅನುಕಂಪದ ಅಲೆಯಲ್ಲಿ ನಾನು ಸೋತೆ ಎಂದು ಇಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಮಾಜಿ ಮಂತ್ರಿ ಪಿ ಜಿ ಅರ್ ಸಿಂಧ್ಯ ಹೇಳಿಕೊಂಡಿದ್ದಾರೆ. ಅನಂತರ ನಾನು ಲೋಕ ಸಭೆಗೆ ಸ್ಪರ್ಧಿಸಲಿಲ್ಲ ಎಂದೂ ಹೇಳಿದ್ದಾರೆ.
೧೯೮೧ ಮತ್ತು ೧೯೯೫ ರ ಘಟನೆಗಳ ಗಮನಿಸಿ.
೧೯೮೧ರಲ್ಲಿ
ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ವಿವಾಹ
ಯುರೋಪಿನ ಕಾಲ್ಚೆಂಡು ಆಟದಲ್ಲಿ ಇಂಗ್ಲೇಂಡ್ ವಿಜಯ
ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು
ದರ್ಮಗುರು ಪೋಪರ ಮರಣ.
೧೯೯೫ರಲ್ಲಿ
ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ವಿವಾಹ
ಯುರೋಪಿನ ಕಾಲ್ಚೆಂಡು ಆಟದಲ್ಲಿ ಇಂಗ್ಲೇಂಡ್ ವಿಜಯ
ಆಶಸ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲು
ದರ್ಮಗುರು ಪೋಪರಿಗೆ ಗಂಡೇಟು
ಹಾಗೆ ಇನ್ನು ಇಂಗ್ಲೇಂಡಿನ ಯುವರಾಜ ಚಾರ್ಲ್ಸ್ ಮದುವೆಯಾಗುವ ಆಲೋಚನೆ ಮಾಡಿದರೆ ಪೋಪರಿಗೆ ತಿಳಿಸಬೇಕೆನ್ನುವ ಮಾತು ಚಾಲ್ತಿಯಲ್ಲಿದೆ. ಹಾಗೆ ನಮ್ಮ ಸಿಂಧ್ಯ ರು ಪುನಹ ಲೋಕಸಭೆಗೆ ಸ್ಪರ್ದಿಸುವುದಾದರೆ ಸೊನಿಯಾ ರಾಹುಲರಿಗೆ ತಿಳಿಸಬೇಕು ಎನ್ನೋಣವೇ |
Monday, June 29, 2009
Subscribe to:
Post Comments (Atom)
1 comment:
ಕಾಗೆ ಸತ್ತು ಹೇನು ಬಡವಾಯ್ತು ಪಂಜೆಯವರ ಕತೆಯ ಆಧುನಿಕ ರೂಪ ಗಾಂಧಿ ಸತ್ತು ಸಿಂಧ್ಯಾ ಸೋತ. ಇಂದು ಆತ್ಮಶೋಧವಿದ್ದರೆ ಆತ/ ಆಕೆ ರಾಜಕಾರಣಕ್ಕೆ ನಾಲಾಯಕ್ಕು.
ಅಶೋಕವರ್ಧನ
Post a Comment