Wednesday, July 01, 2009

ತಾಜ ಮಹಲಿಗೆ ಕವಚವೆನಿಸುವ ತುಳಸಿ ಸಸಿ

ಇತ್ತೀಚೆಗೆ ಈ ವರ್ಷ ಮಳೆಗಾಲದಲ್ಲಿ ಯಾವ್ಯಾವ ಗಿಡ ನೆಡುವುದೆನ್ನುವ ಚಿಂತನೆಯಲ್ಲಿ ಮುಳುಗಿದ್ದೆ. ಮುಖ್ಯವಾಗಿ ಕೂಲಿಯಾಳುಗಳ ಹೊಂದಾಣಿಕೆ ಮಾಡುವಲ್ಲಿ ಸೋತು ಅಪಾರ ಹಣದ ಸಸಿ ಇತ್ತೀಚಿನ ವರ್ಷಗಳಲ್ಲಿ ಹಾಳು ಮಾಡಿದ್ದೇನೆ. ಮನಸ್ಥಿತಿ ಹಾಗಿರುವಾಗ ಮತ್ತು ಏನನ್ನೋ ಹುಡುಕುವಾಗ ಕಂಡ ಪತ್ರಿಕಾ ಪ್ರಕಟಣೆ ನನಗೆ ಅದ್ಬುತ ಎನಿಸಿತು. ಪುಣ್ಯಕ್ಕೆ ಯುರೆಕಾ ಎಂದು ಬತ್ತಲೆ ಓಡಲಿಲ್ಲ.

ತಾಜ್ ಮಹಲ್ ಸುತ್ತಲೂ ಹತ್ತು ಲಕ್ಷ ತುಳಸಿ ಸಸಿ ನೆಡುವ ಕಾರ್ಯ ಪ್ರಾರಂಬವಾಗಿದೆ ಎನ್ನುವುದು ಪ್ರಕಟಣೆಯ ಸಾರಾಂಶ. ತುಳಸಿಗೆ ಗಾಳಿಯನ್ನು ಶುದ್ದಿಕರಿಸುವ ಹೆಚ್ಚು ಅಮ್ಲಜನಕ ಬಿಡುಗಡೆ ಮಾಡುವ ಗುಣವಿದೆಯಂತೆ. ಅದುದರಿಂದ ಸುತ್ತಲೂ ತುಳಸಿ ನೆಡಿಸಿದರೆ ತಾಜ್ ಮಹಲ್ ಕವಚ ತೊಟ್ಟಂತೆ ಅನ್ನುವುದು ಸ(ತ)ರಕಾರಿ  ವಿ(ಅ)ಜ್ನಾನಿಗಳ  (ಕು)ತರ್ಕ.

ಸುಮಾರು ಮೂವತ್ತು ವರ್ಷ ಹಿಂದೆ ಕೊ.ಲ.ಕಾರಂತರು [ಶಿವರಾಮ ಕಾರಂತರ ಅಣ್ಣ ಕೋಟ ಲಕ್ಷ್ಮಿನಾರಾಯಣ ಕಾರಂತರು ] ಉದಯವಾಣಿಯಲ್ಲೊಂದು ಇದಕ್ಕೆ ಹೋಲುವಂತೆ ಲೇಖನ ಬರೆದಿದ್ದರು. ಇರುವ ಮರಗಳನ್ನೆಲ್ಲ ಕಡಿದು ಪಾಪ ಪರಿಹಾರಾರ್ಥ ಮನೆ ಮುಂದೆ ತುಳಸಿ ನೆಟ್ಟರೆ ಆ ತುಳಸಿ ಸಸಿ ಶುದ್ದಿಕರಿಸಿದ ಗಾಳಿ ನೇರವಾಗಿ ನಮ್ಮ ಮೂಗಿಗೆ ಹೋಗುವುದಿಲ್ಲ. ಎನ್ನುವ ಸಂದೇಶ ಆ ಲೇಖನದ ಸಾರಾಂಶ.

ಸರಕಾರಿ ಇಲಾಖೆ ಮತ್ತು ಖಾಸಗಿ ಸಂಸ್ಥೆ ಜತೆಗೂಡಿ ಕೈಗೊಳ್ಳುವ ಈ ಕಾರ್ಯದಿಂದ ತುಳಸಿ ಗಿಡಗಳು ಶುದ್ದ ಆಮ್ಲಜನಕ ಬಿಡುಗಡೆ ಮಾಡುವುದೆಂದು ಅವರು ಹೇಳಿಕೊಂಡಿದ್ದಾರೆ. ಇದರಿಂದಾಗಿ ತಾಜಮಹಲ್ ಮೇಲಾಗುವ ಕೈಗಾರಿಕಾ ಮಾಲಿನ್ಯದ ದುಷ್ಪರಿಮಾಣವನ್ನು ತಡೆಗಟ್ಟುವುದೆಂದು ಅವರ ಆಲೋಚನೆ. ಉಳಿದ ಪರಿಣಾಮ ಅಸ್ಪಷ್ಟವಾದರೂ ಅದಿಕಾರಿಗಳು ಮತ್ತು ಖಾಸಗಿ ಸಂಸ್ಥೆ ಉದ್ದಾರವಾಗುವುದು ಖಂಡಿತ.

ಆ ದಾಟಿಯಲ್ಲಿಯೇ ಚಿಂತನೆ ಮುಂದುವರಿಸುವಾಗ ಪ್ರಪಂಚದಲ್ಲಿ ಈಗ ಬಾದಿಸುತ್ತಿರುವ ಬೂಮಿ ಬಿಸಿಯಾಗುವಿಕೆ, ಪರಿಸರ ಮಾಲಿನ್ಯ ಎಲ್ಲ ಸಮಸ್ಯೆಗಳಿಗೂ ನಮ್ಮ ತುಳಸಿ ಪರಿಹಾರ ಒದಗಿಸಬಲ್ಲದು. ಎಲ್ಲರೂ ಸೇರಿ ಕೋಟ್ಯಾಂತರ ಬಿಲಿಯಾಂತರ ತುಳಿಸಿ ನೆಟ್ಟರಾಯಿತು. ನಮ್ಮ ಪ್ರಾಚೀನ ಪರಂಪರೆಯಲ್ಲಿ ಎಲ್ಲಕ್ಕೂ ಉತ್ತರವಿದೆ. ಬೇರೆ ಹುಡುಕಾಟ ಅನಗತ್ಯ. ಈ ಸಂಶೋಧನೆಗೆ ನೋಬಲ್ ಅಥವಾ ಇಗ್-ನೋಬಲ್ ಪ್ರಶಸ್ತಿ ಸಿಕ್ಕರೂ ಸಿಗಬಹುದು.

http://www.hindu.com/2009/02/05/stories/2009020561482000.htm

2 comments:

ಅಶೋಕವರ್ಧನ said...

ಬಿಲ್ವಿದ್ಯಾಪರಿಣತರ ತಲೆಗಳು ಕೆಲಸ ಮಾಡುವ ಕ್ರಮವೇ ಹೀಗೆ. ಪ್ರಜಾಪಭುತ್ವದ ಎಲ್ಲಾ ಸಲಕರಣೆಗಳನ್ನು ಬಳಸಿಕೊಂಡು ಸ್ವಂತದ ಕ್ಷುದ್ರಭಾವಗಳನ್ನು ಶೋಧಿಸುವುದರಲ್ಲಿ ಇವರು ಯಾವಾಗಲೂ ಭಾರೀ ಚುರುಕು. ಪಶ್ಚಿಮ ಘಟ್ಟದ ನೆಲದಲ್ಲಿ ಕಾಲೂರದವರ ನದಿತಿರುಗಿಸುವ ಯೋಜನೆ ಈಗಾಗಲೇ ಕೋಟ್ಯಾಂತರ ರೂಪಾಯಿ ಮುಗಿಸಿದ್ದು ಹೇಗೆ, ಜಲಾನಯನ ಪ್ರದೇಶಗಳನ್ನೇ ಹಾಳುಗೆಡವಿ ಕಿರುವಿದ್ಯುದಾಗಾರಗಳನ್ನು ರಚಿಸಿ ಮಳೆಗೆ ಇದ್ದ ದೇವರುಗಳಿಗೆಲ್ಲಾ ಪ್ರಾರ್ಥನೆ, ಮೋಡಬಿತ್ತನೆ ಎಂದೆಲ್ಲಾ ತೊಡಗುತ್ತಿರುವುದು ಏಕೆ ಎಂದಿತ್ಯಾದಿ ನೋಡಲು ಹೋದರೆ ತುಳಸಿ ನಡುವುದು ಅಷ್ಟೇನೂ ಕೆಟ್ಟ ಯೋಜನೆ ಅಲ್ಲ ಎಂದು ಕಾಣುತ್ತದೆ!!!!!!
-ಅಶೋಕವರ್ಧನ

Unknown said...

ha ha ha!!!! Tulasi insulate for taj! wah Taj boliye!! expecting more scandal from UP forest ministry?