ಬೇರೆ ದೇಶಗಳಲ್ಲಿ ಖಾಸಗಿ ಮನೆಗಳಿಗೆ ಬೇಟಿ ಇತ್ತರೆ ಕೆಲವೊಂದು ಅವರು ಆಚರಿಸುವ ಕಟ್ಟುಪಾಡುಗಳ ಅನುಸರಿಸಬೇಕಾಗುತ್ತದೆ. ಜಪಾನಿನ ಸ್ನಾನದ ಕ್ರಮದಲ್ಲಿ ನಮಗೆ ಮುಜುಗರವೆನಿಸುವ ಸಂಪದ್ರಾಯವನ್ನು ಕಂಡ ವಿಚಾರ ಹಂಚಿಕೊಳ್ಳುವೆ. ಈ ಇಪ್ಪತೈದು ವರ್ಷ ಹಿಂದಿನ ಅಸ್ಪಷ್ಟ ಅನುಭವ ನೆನಪಾಗಲು ಕಾರಣ ಚಳಿ ಜ್ವರದಿಂದ ಚೇತರಿಸಿಕೊಳ್ಳುತ್ತಿರುವ ನನಗೆ ಬಿಸಿನೀರಲ್ಲಿ ಕೂರಲು ಕುಶಿಯಾಗುತ್ತದೆ. ದೈಹಿಕ ಸಮಸ್ಯೆಯಿಂದಾಗಿ ನನಗೆ ಚಳಿ ಎಂದರೆ ಎಲುಬು ಸೆಳಿತಕ್ಕೆ ಕಾರಣವಾಗುವ ಬೀಕರ ಶಿಕ್ಷೆ.
ನಮಗೆ ಸ್ನಾನದ ತೊಟ್ಟಿ ಎಂದರೆ ಮನಸಿನಲ್ಲಿ ಮೂಡುವುದು ಪಾಶ್ಚಾತ್ಯ ಮಾದರಿ. ಜಪಾನಿನದು ಅದಕ್ಕಿಂತ ಕಡಿಮೆ ಉದ್ದ ಮತ್ತು ಹೆಚ್ಚು ಎತ್ತರ. ಬಿಸಿ ನೀರನ್ನು ಕಾಪಾಡಲು ಅದಕ್ಕೊಂದು ಮುಚ್ಚಳ. ಉಪಯೋಗಿಸುವ ಕ್ರಮವೂ ತೀರಾ ಬಿನ್ನ.
ಮೈಗೆ ಸಾಬೂನು ಹಚ್ಚಿಕೊಂಡು ಈ ತೊಟ್ಟಿಗೆ ಇಳಿಯುವಂತಿಲ್ಲ. ಹೊರಗೆ ನಮ್ಮಲ್ಲಿ ಇರುವಂತಹ ಮೈತೊಳೆಯುವ ಜಾಗದಲ್ಲಿ ಸಾಬೂನು ಸ್ನಾನ ಮುಗಿಸಿದ ನಂತರವೇ ಇದಕ್ಕೆ ಇಳಿಯುವುದು. ನಾವು ಉಪಯೋಗಿಸಿದ ನಂತರ ನೀರನ್ನು ಹೊರಬಿಡುವಂತಿಲ್ಲ. ಮನೆಯಲ್ಲಿ ಎಂಟು ಜನರಿದ್ದರೆ ಎಂಟು ಜನ ಬೆಚ್ಚಗೆ ಕೂತ ನಂತರವೇ ನೀರು ಖಾಲಿ ಮಾಡುವುದು. ಬೇರೆಯವರು ಕೂತೆದ್ದ ನೀರಿನಲ್ಲಿ ನಮಗೆ ಕೂರುವುದೆಂದರೂ ಹಾಗೂ ನಮ್ಮ ದೇಹದ ಕೊಳೆ ಇರಬಹುದಾದ ನೀರಿನಲ್ಲಿ ಉಳಿದವರು ಕೂರುವುದೆಂದರೆ ಮುಜುಗರವೆನಿಸುತ್ತದೆ.
ಕುತ್ತಿಗೆ ವರೆಗೆ ಬಿಸಿನೀರು ಅನುಭವಿಸುವ ಈ ಸ್ನಾನ ಹಿಂದಿನ ಕಾಲದ ಚಳಿಗಾಲದಲ್ಲಿ ಹೆಚ್ಚು ಅನಿವಾರ್ಯವಾಗಿರಬಹುದು. ಮನೆಗಳಲ್ಲಿ ಇತರ ಜಾಗಗಳಲ್ಲಿ ವಿಪರೀತ ಚಳಿಯಿರುವ ಕಾರಣ ಸ್ವಲ್ಪ ಹೊತ್ತು ಈ ತೊಟ್ಟಿಯಲ್ಲಿ ಕುಳಿತು ಬೆಚ್ಚಗಾಗುವ ಸನ್ನಿವೇಶ. ಅನಂತರ ಸುಖ ನಿದ್ರೆ.
ಅಲ್ಲಿಗೆ ಹೋದಾಗ ಪಾಯಿಖಾನೆಗೂ ಹೋಗಬೇಕಲ್ಲಾ, ಸಂಬಂದ ಪಟ್ಟ ಒಂದು ಕಿವಿ ಮಾತು. ಅಲ್ಲಿನ ಪಾಯಿಖಾನೆಗಳ ಹೊರಗೆ ಹವಾಯಿ ಚಪ್ಪಲಿಗಳಿಟ್ಟಿರುತ್ತಾರೆ. ಅದನ್ನು ಹಾಕಿಕೊಂಡು ಒಳಹೋಗಬೇಕು. ಹೆಚ್ಚಿನ ಪಾಯಿಖಾನೆಗಳು ನಮ್ಮಲ್ಲಿರುವಂತೆ ಕುಕ್ಕರಗಾಲಿನಲ್ಲಿ ಕೂರುವಂತದ್ದು. ಪಾಶ್ಚಾತ್ಯ ಸಿಂಹಾಸನ ಮಾದರಿ ಅಲ್ಲ.
Thursday, July 09, 2009
Subscribe to:
Post Comments (Atom)
No comments:
Post a Comment