ಮದ್ಯಪೂರ್ವದ ಮರಳುಕಾಡಿನಲ್ಲಿ ಹುಟ್ಟಿದ ಜನಾಂಗಗಳು ಮೂರು. ಅವರೊಳಗೆ ಹೆಚ್ಚಿನ ವಿಚಾರದಲ್ಲಿ ಸ್ಪರ್ಧಾತ್ಮಕ ಮನೋಭಾವ. ಇಸ್ರೇಲಿನಲ್ಲಿ ದರ್ಮಶಾಸ್ತ್ರ ಸಮ್ಮತಿಸುವಂತಹ ಅಂತರ್ಜಾಲ ಹುಡುಕಾಟಕ್ಕೆ ಕೂಗಲ್ ಎನ್ನುವ ಗೂಗ್ಲ್ ಪರ್ಯಾಯವನ್ನು ಯಹೂದಿಯರು ಹುಟ್ಟುಹಾಕಿದ್ದಾರೆ. ಈಗ ಯಹೂದಿಯರು ನಮ್ಮನ್ನು ಸೋಲಿಸಿಯೇ ಬಿಟ್ಟರಲ್ಲ ಎನ್ನುವ ಬಾವನೆ ಮೂಲಭೂತವಾದಿ ಮುಸ್ಲೀಮರಲ್ಲಿ ಆವರಿಸಿದೆ.
ಯಹೂದಿಯರ ದರ್ಮ ಒಪ್ಪುವ ಆಚರಣೆಗಳ ಆಹಾರಗಳ ಕೋಷರ್ ಎನ್ನುತ್ತಾರೆ. ಎಲ್ಲವೂ ಅಂತರ್ಜಾಲಮಯ ಎನ್ನುವ ಈ ದಿನಗಳಲ್ಲಿ ಅವರ ದಾರ್ಮಿಕ ಮುಖಂಡರು ಒಪ್ಪುವಂತಹ ತಾಣಗಳ ಮಾತ್ರ ಹುಡುಕಿ ಪ್ರದರ್ಶಿಸುವ ತಾಣ ಕೂಗಲ್ . ಕೊಶರ್ ಮತ್ತು ಗೂಗ್ಲ್ ಪದಗಳ ಜತೆ ಸೇರಿಸಿರುವ ಹಣೆಬರಹ ಹೊತ್ತಿರುವ ಈ ತಾಣದಲ್ಲಿ ದೇವರಿಗೆಂದು ಮೀಸಲಾದ ಶುಕ್ರವಾರ ಸೂರ್ಯಾಸ್ಥದಿಂದ ಶನಿವಾರ ಸೂರ್ಯೋದಯ ವರೆಗೆ ವ್ಯವಹಾರ ನಡೆಯುವುದಿಲ್ಲ
ಯಹೂದಿಯರಿಗೆ ಜಾತಿ ವಿರೋದಿ ನಡುವಳಿಕೆಯ ಅಂದರೆ ಅರೆ ಬತ್ತಲೆ ಹೆಂಗಸರ ಚಿತ್ರಗಳಂತಹ ವಸ್ತುಗಳು ಮತ್ತು ಸಂಪರ್ಕ ಕೊಂಡಿಗಳ ನೀವು ಆ ತಾಣದಲ್ಲಿ ಕಾಣಲು ಸಾದ್ಯವಿಲ್ಲ. ಟೆಲಿವಿಶನ್ ತರಹ ನಿರ್ಬಂದಿತ ವಸ್ತುಗಳಿಂದ ದೂರವಿರಲು ಪ್ರಯತ್ನಿಸಲಾಗುತ್ತದೆ. ಈಗಾಗಲೇ ತಿಂಗಳಿಗೆ ಲಕ್ಷ ಜನ ಬೇಟಿ ನೀಡುವರೆನ್ನುವುದು ಕಳೆದ ತಿಂಗಳ ವರದಿ.
ಕೋಶರ್ ಎಂದರೆ ನಮಗೆ ಪರಿಚಿತ ಮುಸ್ಲಿಮರ ಹಲಾಲ್ ಪದದ ಯಹೂದಿ ರೂಪ. ಹಲವು ಸಮಾನ ಆಚರಣೆಗಳು. ಮುಸ್ಲೀಮರು ಬಹು ಮಟ್ಟಿಗೆ ಕೋಷರ್ ಆಹಾರ ಹಲಾಲಿಗೆ ಸಮಾನವೆಂದು ಸಮ್ಮತಿಸುವುದಾದರೂ ಯಹೂದಿಯರಿಗೆ ಹಲಾಲ್ ಆಹಾರ ಅವರ ರಾಬ್ಬಿಗಳು ಅಂದರೆ ದರ್ಮ ಪಂಡಿತರು ಸಮ್ಮತಿಸುವುದಿಲ್ಲ. ಅವರ ಮಾನದಂಡಗಳು ಇನ್ನೂ ಕ್ಲಿಷ್ಟ.
ಈಗ ಯೋಜಿತ ಹಂತದಲ್ಲಿರುವ ಹಲಾಗಲ್ ಹಲಾಲ್ + ಗೂಗಲ್ ಬಗೆಗೆ ಗಮನ ಹರಿಸೋಣ. ಹಲಾಲ್ ತಂತ್ರಜ್ನರ ಸಮಸ್ಯೆ ಅಷ್ಟು ಸರಳವಲ್ಲ. ಮುಸ್ಲಿಂ ಜನ ಹಲವಾರು ಪಂಗಡಗಳು ಹಾಗೂ ಆಚರಣೆಯೊಂದಿಗೆ ಪ್ರಪಂಚದಲ್ಲಿ ಹಂಚಿಹೋಗಿದ್ದಾರೆ. ಹೋಲಿಸಿದರೆ ಯುಹೂದಿಯರ ಸಂಖ್ಯೆ ಮತ್ತು ಪಂಗಡಗಳು ಎರಡೂ ಕಡಿಮೆ. ಅದುದರಿಂದ ನಿರ್ಬಂದಗಳು ಸಿಮಿತ. ಹೀಗೆ ಕೋಶರ್ ತಂತ್ರಜ್ನರು ಸುಲಭವಾಗಿ ಗೆದ್ದರು.
ಹೊಸ ಜಾಲದಲ್ಲಿ ಕಾಣುವ ಮಾಲುಗಳು ಸೇವೆಗಳು ಎಷ್ಟರ ಮಟ್ಟಿಗೆ ಹಲಾಲ್ ಎನ್ನುವ ಸುಳಿವು ತೋರಿಸುವ ಪ್ರಯತ್ನ ಇದೆಯಂತೆ. ಹಸಿರು ಸೂಚನೆ ಪಕ್ಕಾ ಹಲಾಲ್, ಕೇಸರಿ ಪರವಾಗಿಲ್ಲ ಕೆಂಪು ಮಾರ್ಕಿದ್ದರೆ ಹೆಚ್ಚು ಕಮ್ಮಿ ಹರಾಮ್ ಮಾಲು. ದೂರವಿಡಿ ಎನ್ನುವ ಎಚ್ಚರಿಕೆ. ಮತ್ತೆ ನಿಮ್ಮಿಷ್ಟ ಎನ್ನುವ ಕೊನೆಯ ಮಾತು. ಹಲಾಲ್ ಮಾಂಸ, ಹಲಾಲ್ ತಿಂಡಿಗಳು, ಹಲಾಲ್ ಬಾಂಕು ಉಮ್ರಾ ಪ್ರವಾಸ ಇವುಗಳ ಜಾಹಿರಾತುಗಳು ಮಾತ್ರ ಪುಟಿದೇಳುವುದಂತೆ. ಮೆಕ್ಕಾಗೆ ಮುಖ ಮಾಡಿ ಪ್ರಾರ್ಥನೆ ಮಾಡುವ ಸಮಯದಲ್ಲಿ ಇದು ಸ್ಥಬ್ದ.
ಇನ್ನು ನಮ್ಮ ಬಜರಂಗಿಗಳು ಸುಮ್ಮನಿರುವುದಾದರು ಹೇಗೆ ? ಹಿಂದೂ ರಾಷ್ಟ್ರಕ್ಕೆ ಅನುಗುಣವಾಗಿ ಒಂದು ಜಾಲ ಸ್ಥಾಪಿಸುತ್ತಿದ್ದರು. ನಸೀಬು ಚೆನ್ನಾಗಿಲ್ಲದೆ ಇದನ್ನು ಬೆಂಬಲಿಸಬಹುದಾದ ಪಕ್ಷದವರು ಸೋತಿದ್ದಾರೆ.
Friday, July 10, 2009
Subscribe to:
Post Comments (Atom)
3 comments:
:-)
ಹಿಂಗಲ್ (ಹಿಂದು ಗೂಗಲ್) ಸ್ಥಾಪನೆಯಾಗುವ ಸಾಧ್ಯತೆ ಕೇಳಿ ಬೆವತರೂ ಜಪಾನೀ ಸ್ನಾನ ಓದಿ ಸಕಲ ಪುಕಳೀ ತೀರ್ಥದಲ್ಲಿ ಮುಳುಗೇಳುವ ಹೆದರಿಕೆಯಿಂದ ಹಾಗೇ ಮೈ ಒರೆಸಿಕೊಂಡೆ. ಆದರೆ ನಮ್ಮಲ್ಲಿ ದಿನಕ್ಕೊಂದು ಭಾರೀ ಜಲಯೋಜನೆಯಿಂದ ಹಿಡಿದು ನೂರಾರು ‘ಅಭಿವೃದ್ದಿ ಕಾರ್ಯಕ್ರಮ’ ರೂಪಿಸಿ ಬಲವಂತದಿಂದ ಹೇರುವ ಜನನಾಯಕರಿರುವಾಗ ಕೊಳಕು ಕಡಾಯದ ನೀರಿರಲಿ, ಉದ್ಧರಣೆಯ ಹನಿಯಾದರೂ ನಿಜದಲ್ಲಿ ದಕ್ಕೀತೇ ಎಂದು ವಿಷಾದವೂ ಮೂಡುತ್ತದೆ. ಅನುಗಾಲವೂ ಚಿಂತೆ........
ಅಶೋಕವರ್ಧನ
Post a Comment