ನಾನು ಸಂಬಂದಿಕರಿಂದ ಪರಿಚಿತರಿಂದ ಪುಟಗಟ್ಟಲೆ ಬರೆಯುವಷ್ಟು ವಿಶ್ವಾಸ ದ್ರೋಹ ಅನುಭವಿಸಿದ್ದೇನೆ. ಸಮಾನ ಅಂಶವೆಂದರೆ ಅವರೆಲ್ಲ ಧೈವ ಭಕ್ತರು. He is is so holy that he uses holy water in toilet ಅನ್ನುವ ವರ್ಗಕ್ಕೆ ಸೇರಿದವರು. ವಿಶ್ವಾಸದ ಇನ್ನೊಂದು ಮುಖ ನೋಡುವುದಾದರೆ ಸಂಪೂರ್ಣ ಅಸಹಾಯಕರಾದರೂ ಒಂಟಿಯಾಗಿ ವಾಸಿಸುವ ಕುರುಡ ವೃದ್ದರನ್ನು ಅಮೇರಿಕದಲ್ಲಿ ಕಂಡಿದ್ದೇನೆ. ಇದು ನಮ್ಮಲ್ಲೇಕೆ ಸಾದ್ಯವಾಗುವುದಿಲ್ಲ ಎನ್ನುವುದು ಬಹು ದಿನಗಳಿಂದ ಮನಸ್ಸು ಕೊರೆಯುತಿತ್ತು.
ನಮ್ಮ ಜನರೆಲ್ಲ ಶುದ್ದ ಸಮಯಸಾದಕರು ಎನ್ನುವ ವಿಚಾರ ರಸ್ತೆಗಳಲ್ಲಿ ನಿಯಮಪಾಲಿಸುವುದರ ನೋಡುವಾಗಲೇ ತಿಳಿಯುತ್ತದೆ. ಮನಬಂದಂತೆ ಅನಾಗರಿಕರಂತೆ ನುಗ್ಗುವುದೇ ನಮ್ಮ ಅಬ್ಯಾಸ. ಮದುವೆ ಮನೆಗಳಲ್ಲಿ ಊಟಕ್ಕೆ ಕೂರುವುದು ಕೈತೊಳೆಯಲು ಓಡುವ ಗಡಿಬಿಡಿ ನೂಕುನುಗ್ಗಲು ನೋಡುವಾಗ ಬೇಸರವಾಗುತ್ತದೆ. ಸಮಾರಂಬಗಳಿಂದಲೇ ದೂರವಿರೋಣ ಅನ್ನಿಸುತ್ತದೆ.
ನಾವೀಗ ದೇವರನ್ನೇ ಕಮಿಶನ್ ಎಜಂಟರನ್ನಾಗಿ ಮಾಡಿದ್ದೇವೆ. ಇಷ್ಟು ಸಿಕ್ಕರೆ ನಿನಗಿಷ್ಟು ಎನ್ನುವ ಸೀದಾ ವ್ಯವಹಾರ. ಬೇಕಾದರೆ ಯಡ್ಡಿಯನ್ನೋ ರೆಡ್ಡಿಯನ್ನೋ ಕೇಳಬಹುದು. ನಾವು ಅನ್ಯಾಯಕ್ಕೆ ಪರಿಹಾರ ಸೂಚಿಸಲು ಅಪೇಕ್ಷಿಸುವ ದೈವಿಶಕ್ತಿಗಳೇ ಅನ್ಯಾಯಕ್ಕೆ ಮೂಲ ಅನಿಸುತ್ತದೆ. ಪಟ್ಟಣಗಳ ಗಲ್ಲಿ ಗಲ್ಲಿಯಲ್ಲಿ ಉದ್ಬವಿಸುವ ಸ್ವಯಂ ಘೋಷಿತ ಸ್ವಾಮಿಗಳು ಅಮ್ಮಾಗಳು ಸಾಕಷ್ಟು ಕಪ್ಪ ಸಂಗ್ರಹಿಸುತ್ತಾರೆ. ಅಪರಂಜಿ ಜನವರಿ ೨೦೦೯ರಲ್ಲಿ ಲೀಲಾ ಮಿರ್ಲೆಯವರು ಕಂಡ ಸ್ವಾಮಿಯೊಬ್ಬರು ಅದ್ಬುತ ಚಿಂತನೆ ತೋರ್ಪಡಿಸಿದ್ದಾರೆ. ನೆರೆದ ಸಬಿಕರೊಂದು ಪ್ರಶ್ನೆ ಎಸೆದರಂತೆ.
ಯದಾ ಯದಾ ಹಿ ದರ್ಮಸ್ಯ ಗ್ಲಾನಿರ್ಭವತಿ ಭಾರತ ಎನ್ನುವ ಶ್ಲೋಕದಲ್ಲಿ ಶ್ರಿಕೃಷ್ಣನು ಅಧರ್ಮ ಹೆಚ್ಚಾದಾಗ ದರ್ಮ ಸಂಸ್ಥಾಪನೆ ಮಾಡಲು ನಾನು ಅವತರಿಸುತ್ತೇನೆ ಎಂದಿದ್ದಾನೆ. ಈ ನಮ್ಮ ಕಲಿಯುಗದಲ್ಲಿ ಅನೇಕ ಸ್ವಾಮಿಗಳು ಅಧರ್ಮವನ್ನು ತಡೆಗಟ್ಟಲು ಹವಣಿಸುತ್ತಿರುವಾಗ ಯಾರು ಶ್ರೀಕೃಷ್ಣನ ಅವತಾರವೆಂದು ಹೇಗೆ ತಿಳಿಯುತ್ತದೆ .
ಸಹಜವಾದ ಪ್ರಶ್ನೆ ಇದು. ಈ ಪ್ರಶ್ನೆಗೆ ಉತ್ತರ ತೀರಾ ಸರಳ. ದ್ವಾಪರ ಯುಗದಲ್ಲಿ ಅನ್ಯಾಯವನ್ನು ಹದ್ದುಬಸ್ತಿಗೆ ತರಲು ಒಬ್ಬ ಕೃಷ್ಣ ಸಾಕಾಗಿದ್ದ. ಈಗ ಜಗತ್ತಿನಲ್ಲಿ ತುಂಬಿರುವ ದುಷ್ಕೃತ್ಯಗಳನ್ನು ತಡೆಗಟ್ಟಲು ಒಬ್ಬ ಕೃಷ್ಣ ಸಾಕೇ ? ಖಂಡಿತ ಸಾಲದು. ಹಾಗಾಗಿ ಜಗತ್ತಿನಲ್ಲಿ ನನ್ನಂತಹ ಹಲವರು ದೇವದೂತರ ಅವಶ್ಯಕಥೆ ಉಂಟಾಗಿ ನಾವಿಲ್ಲಿ ನಮ್ಮ ಸೇವೆಯಲ್ಲಿ ತೊಡಗಿದ್ದೇವೆ.
ಸುಧಾದ ಆನಂದರು ಮೂರು ವಾರ ಯುರೋಪಿನಲ್ಲಿ ಪ್ರವಾಸ ಮಾಡಿದ ಕಥೆ ಕಳೆದ ವಾರ ಸುಧಾ ಪ್ರಕಟಿಸಿತ್ತು. ಅಲ್ಲಿ ಅವರು ಕಂಡ ಶಿಸ್ತು ಅಚ್ಚುಕಟ್ಟು ಕೆಲಸದಲ್ಲಿ ಪ್ರಾಮಾಣಿಕತೆ ರಸ್ತೆ ಪ್ರಜ್ನೆ ನಮ್ಮಲ್ಲಿ ಜಾರಿಗೆ ಬರಲು ಎಷ್ಟು ವರ್ಷ ಕಾಯಬೇಕೋ ಎಂದಿದ್ದಾರೆ. ಲೇಖನದ ನಂತರದ ಪುಟದ ಕೊಂಡಿಯೂ ಇಲ್ಲಿದೆ.
ನಮ್ಮವರೇಕೆ ವಿಶ್ವಾಸ ದ್ರೋಹಿಗಳು ? ಸಮಾಜಕ್ಕಂಟಿದ ಹೆರಿಡಿಟರಿ ಡಿಫೆಕ್ಟಾ ? ನಂಬಿಕೆಗಳು ಸಂಸ್ಕೃತಿ ರೂಪಿಸುವುದೋ ಅಥವಾ ಸಂಸ್ಕೃತಿ ನಂಬಿಕೆಗಳನ್ನೋ ? ನಮ್ಮಲ್ಲಿ ಬ್ರಹ್ಮ ನನ್ನೇಕೆ ಪೂಜಿಸುವುದಿಲ್ಲ ಎಂದು ಪ್ರಶ್ನಿಸುವ ಆಂಗ್ಲ ಬಾಷೆಯ ಬರಹ ನನ್ನ ಹಲವು ಮನದಾಳದ ನಂಬಿಕೆಗಳಿಗೆ ಉತ್ತರ ತೋರುತ್ತದೆ. ನಮ್ಮ ವರ್ತನೆಗೆ ಅರ್ಥ ತೋರಿಸುತ್ತದೆ.
ಪರೀಸ್ತಿತಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಮಯಸಾದಕತನದ ಇನ್ನೊಂದು ಮುಖ. ಹಾಗಾಗಿ ನಮ್ಮವರು ಉಳಿದ ದೇಶಗಳಲ್ಲಿ ಮಿಂಚುತ್ತಿದ್ದಾರೆ. Spelling bee ತರಹದ ಸ್ಪರ್ದೆಗಳಲ್ಲಿ ಯಾಕೆ ಗೆಲ್ಲುತ್ತಾರೆಂದರೆ ನಾವು ಬಾಯಿ ಪಾಠ ಕಲಿಯುವುದು ಜ್ನಾನವೆಂದು ತಪ್ಪು ತಿಳಿದಿದ್ದೇವೆ. ಹೊಸತಾಗಿ ಸೃಷ್ಟಿಸುವುದರಲ್ಲಿ ನಮ್ಮ ಸಾಮರ್ಥ್ಯ ಕಡಿಮೆ ಎನ್ನುವ ಸುಳಿವು ಈ ಬರಹದಲ್ಲಿ ಕಂಡೆ.
೩ ಆಗಸ್ತ್ ೨೦೦೯ ರಂದು ಸೇರಿಸಿದ್ದು.
ಪ್ರಜಾವಾಣಿ ಆಗಸ್ತ್ ೨ರ ಸಂಚಿಕೆಯಲ್ಲಿ ರಘುನಾಥರು ಬಿಲ್ ಗೇಟ್ಸ್ ಬಗೆಗೆ ಬರೆದ ಲೇಖನದಲ್ಲಿ ಮೇಲೆ ಉಲ್ಲೇಖಿಸಿದ ಲೇಖನದ ಹೋಲಿಕೆ ಇರುವ ಕಾರಣ ಈಗ ಅನಂತರ ಸೇರಿಸುತ್ತಿದ್ದೇನೆ. ಪಶ್ಚಿಮದ ಉದ್ಯಮಿಗಳು ಸಮಾಜಕ್ಕೆ ಋಣ ಸಲ್ಲಿಸುವುದಾದರೆ ನಮ್ಮಲ್ಲಿ ದೇವರಿಗೆ ಸಾಲ ತೀರಿಸುತ್ತಾರೆ
Friday, July 24, 2009
Subscribe to:
Post Comments (Atom)
No comments:
Post a Comment