Saturday, July 04, 2009

ಕ್ಷಮಿಸಿ, ಎತ್ತಿನ ಗಾಡಿಗೆ ಪ್ರವೇಶವಿಲ್ಲ



ಎತ್ತಿನ ಗಾಡಿಗೆ ಪ್ರವೇಶವಿಲ್ಲ ಎಂದು ಘೋಷಿಸುವ ಪ್ರಪಂಚದ ಏಕಮಾತ್ರ ಸಮುದ್ರ ಸೇತುವೆ ನಮ್ಮ ಮುಂಬಯಿಯಲ್ಲಿದೆ ಎನ್ನುವುದು ನಮಗೆಲ್ಲ ಬಹಳ ಹೆಮ್ಮೆಯ ವಿಚಾರ. ಪ್ರಜೆಗಳ ತೇರಿಗೆ ಹಣದಿಂದ ಕಟ್ಟಲ್ಪಟ್ಟ ಇದು ಮೊನ್ನೆ ಸೋನಿಯಾ ಗಾಂಧಿ ಎಂಬವರಿಂದ ದೇಶಕ್ಕೆ ಸಮರ್ಪಿಸಲ್ಪಟ್ಟಿತು.

ಸಮುದ್ರ ಸೇತುವೆ ಮೇಲಿರುವ digital signboard ಉದ್ಗಾಟನೆಯಾಗಿ ದಿನ ಕಳೆದರೂ ಸೋನಿಯಾಜಿ ನಿನಗೆ ಸ್ವಾಗತ ಎನ್ನುತ್ತಿವೆಯಂತೆ. ಕ್ಷಣಮಾತ್ರದಲ್ಲಿ ಸಂದೇಶ ಬದಲಿಸಲು ಸಾದ್ಯವಾಗುವಂತಹ ಈ ಸೂಚನಾ   ಫಲಕಗಳು
ಇನ್ನೂ ಮಹಾರಾಣಿಯ ಗುಂಗಿನಲ್ಲಿದ್ದು   ಇದರ ಸಂದೇಶ ಬದಲಿಸಲು ಇನ್ನೂ ಹುಕುಂ ಆಗಲಿಲ್ಲ.   ಮೇಲು ನೋಟಕ್ಕೆ ಕಾಣುವ ಮಟ್ಟಿಗೆ ಈ ಸೇತುವೆ ನಿಷ್ಪ್ರಯೊಜಕ.

ಅತಿ ದಟ್ಟಣೆ ಇರುವ Worli-Nariman Point ಸಂಪರ್ಕ ಸಮುದ್ರ ಸೇತುವೆ ಇದ್ದರೆ ಮಾತ್ರ ಈ ಸಮುದ್ರ ಸೇತುವೆ ಉಪಯುಕ್ತ ಎಂದು ಮಾಜಿ ಮುನ್ಸಿಪಲ್ ಕಮಿಷನರ್ Jamsheed Kanga ಹೇಳುತ್ತಾರೆ. ಇಲ್ಲವಾದರೆ ಪಾಂಟಿನ ಒಂದು ಕಾಲಿಗೆ ಮಾತ್ರ ಹೊಲಿಗೆ ಹಾಕಿದಂತೆ. ಎರಡನೇಯ ಕಾಲಿಗೆ ಹೊಲಿಗೆ ಇಲ್ಲವಾದರೆ ……………….[ ನಿರುಪಯುಕ್ತ ತಿಡಿಗೇಡಿ ವ್ಯವಹಾರ.]

ಮುಂಬಯಿಯ ಅಧಿಕಾರಿಗಳು ಹೇಳುವಂತೆ ಇನ್ನೊಂದು ಸೇತುವೆ ಅನಿವಾರ್ಯ. ಇದಕ್ಕೆ ರಾಜೀವನ ಹೆಸರಿಟ್ಟರೆ ಅದಕ್ಕೆ ಸೋನಿಯಾಳ ಹೆಸರೇ ಇಡಬಹುದು.

ಸಮೀಪಿಸುವ ದಾರಿಗಳ ಅವ್ಯವಸ್ಥೆಯಿಂದಾಗಿ ಈ ರಸ್ತೆ ಉಪಯೋಗಿಸಿದವರು ಹತ್ತು ನಿಮಿಷ ಉಳಿದರೆ ವಿಶೇಷ. ನಿನ್ನೆ ರಾತ್ರಿ ಹನ್ನೊಂದು ಘಂಟೆಗೆ ಸಹಾ ಕಾರಿನಲ್ಲಿ ಈ ಸೇತುವೆಯ ಮೇಲಿರುವ 4.7 ಕಿಮಿ ದೂರದ ರಸ್ತೆ ದಾಟಲು  ಯೋಜನೆ  ಪ್ರಕಾರದ  ಏಳು   ನಿಮಿಷಕ್ಕೆ  ಬದಲಾಗಿ  ಇಪ್ಪತ್ತೈದು ನಿಮಿಷ ಬೇಕಾದರೆ ಇದರೆ ಉಪಯುಕ್ತತೆ ಸಂಶಯಾಸ್ಪದವಾಗುತ್ತಲಿದೆ.


ಎಂಟು ಪಥಗಳು ಎನ್ನಲಾದ    ಈ ಸೇತುವೆಯಲ್ಲಿ ನಮಗೆ ಕಾಣುವುದು ನಾಲ್ಕೇ  ದಾರಿಗಳು.   ದ್ವಿಚಕ್ರ ವಾಹನ ಮತ್ತು ಬಸ್ಸುಗಳಿಗೂ ಪ್ರವೇಶವಿಲ್ಲ. ಶೇಕಡ ಎಂಬತ್ತ ಎಂಟು ಮುಂಬಯಿ ನಾಗರಿಕರು  ಬಸ್    ಮತ್ತು  ರೈಲು ಉಪಯೋಗಿಸುವರಂತೆ.     ಸ್ವಂತ  ವಾಹನ  ಉಪಯೋಗಿಸುವ  ಶೇಕಡಾ ಹನ್ನೆರಡು  ನಾಗರಿಕರಲ್ಲಿ   ದ್ವಿ ಚಕ್ರಿಗಳೂ  ಸೇರಿದ್ದಾರೆ.  ಅದುದರಿಂದ  ಬಹು  ಸಣ್ಣ  ಸಂಖ್ಯೆ ಕಾರು  ಉಪಯೋಗಿಸುವವರಿಗಾಗಿ  ಇದೊಂದು  ದುಬಾರಿ  ಯೋಜನೆ.

 ನಮ್ಮವರೂ   ಸಾಮಾನ್ಯರಲ್ಲ.  ಮೇಲು ಸೇತುವೆ ವಿನ್ಯಾಸದಲ್ಲಿ ಎಡವಟ್ಟಾಗಿ ಅದರ ಮೇಲೆ ಪೋಲಿಸಪ್ಪನನ್ನು ನಿಲ್ಲಿಸುವ ಹೆಗ್ಗಳಿಕೆ ನಮ್ಮ ಬೆಂಗಳೂರಿನದಂತೆ.  

No comments: